ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 8, 2010

State Sponsors of Terrorism

ಚುಟುಕು ಸುದ್ದಿ : ಭಯೋತ್ಪಾದನೆ ಹರಡುವ ದೇಶಗಳ ಪಟ್ಟಿಯಿಂದ ಸೂಡಾನ್ ಅನ್ನು ಕೈಬಿಡಲು  ಅಮೆರಿಕಾದ ಪ್ರಸ್ತಾಪ



ಸುದ್ದಿಯ ಒಳನೋಟ :
  • ಜಾಗತಿಕ ಮಟ್ಟದಲ್ಲಿ ಸರ್ಕಾರವೇ ಖುದ್ದು ಭಯೋತ್ಪಾದನೆ ಬೆಂಬಲಿಸುವ ಕೆಲವು ದೇಶಗಳಿವೆ. ಅಂಥವನ್ನ ಗುರುತಿಸಿ ಅಮೆರಿಕಾದ Dept. of State,  ತಾನು ತಯಾರಿಸುವ State Sponsors of Terrorism ಪಟ್ಟಿಗೆ ಸೇರಿಸುತ್ತದೆ.
  • ಭಾರತ ದೇಶದಲ್ಲಿ Home Dept. (ಗೃಹ ಇಲಾಖೆ) ಇರುವ ಹಾಗೆ ಅಮೆರಿಕಾದಲ್ಲಿ Dept. of State ಅಂತ ಇದೆ.
  • ಮೇಲಿನ ಚಿತ್ರದಲ್ಲಿ ಮೂಡಿರುವ ವಾಕ್ಯವಾದ :  E pluribus unum - ಇದು ಅಮೆರಿಕಾ ದೇಶದ ಅಧಿಕೃತ ಮುದ್ರೆಯ ಮೇಲೆ  ಕೆತ್ತಲಾಗಿರುವ  ಧ್ಯೇಯ ವಾಕ್ಯವಾಗಿದ್ದು, ಲ್ಯಾಟಿನ್ ಭಾಷೆಯ  ಈ ಪದದ ಅರ್ಥ : " Out of Many, One. "
  • ಡಿಸೆಂಬರ್ 29, 1979ರಿಂದ ಈ ಪಟ್ಟಿಯನ್ನ ತಯಾರಿಸಲಾಗುತ್ತಿದೆ.
  • ಹಾಗೆ ಪಟ್ಟಿಗೆ ಸೇರಿದ ದೇಶಗಳ ಮೇಲೆ ವಿಶ್ವದ ಅತ್ಯಂತ  ಪ್ರಭಾವಿ ರಾಷ್ಟ್ರವಾದ ಅಮೆರಿಕಾದಿಂದ ಭಯಂಕರ ನಿರ್ಬಂಧಗಳು ( Sanctions ) ಹೇರಲ್ಪಡುತ್ತವೆ.
  • ಸದ್ಯದ ಪಟ್ಟಿಯಲ್ಲಿ ಕ್ಯೂಬಾ, ಇರಾನ್, ಸಿರಿಯಾ & ಸೂಡಾನ್ ದೇಶಗಳಿದಾವೆ.
  • ಮೊದಲ ಪಟ್ಟಿಯಲ್ಲಿ ಲಿಬಿಯಾ, ಇರಾಕ್, ದಕ್ಷಿಣ ಯೆಮೆನ್ & ಸಿರಿಯಾ ದೇಶಗಳಿದ್ದವು.
  • ಮಾರ್ಚ್ 1, 1982ರಲ್ಲಿ ಪಟ್ಟಿ ಸೇರಿದ ಕ್ಯೂಬಾ ಮೇಲೆ ಲ್ಯಾಟಿನ್ ಅಮೆರಿಕಾ & ಆಫ್ರಿಕಾದಲ್ಲಿ ಕ್ರಾಂತಿಕಾರಕ ಚಳುವಳಿಗಳನ್ನ ಬೆಂಬಲಿಸಿದ ಆರೋಪ ಮಾಡಲಾಗಿದೆ. ಶಸ್ತ್ರಾಸ್ತ್ರಗಳಿಂದ ಮಾತ್ರ ತನ್ನ ಎಡಪಂಥೀಯ ತತ್ವಗಳ ಅನುಷ್ಠಾನ ಸಾಧ್ಯ ಅಂತ ಕ್ಯೂಬಾ ಸರ್ಕಾರದ ನಂಬಿಕೆ ಹಾಗೂ ಅಜೆಂಡಾ ಎಂದು ಆರೋಪವಿದೆ.
  • ಜನವರಿ 19, 1984 ರಲ್ಲಿ ಪಟ್ಟಿಗೆ ಸೇರ್ಪಡೆಯಾದ ಇರಾನ್, ಮಧ್ಯ ಏಷ್ಯಾದಲ್ಲಿ ಭಯೋತ್ಪಾದನೆ ಹರಡಲು ಆರ್ಥಿಕ ಸಹಾಯ, ಶಸ್ತ್ರಾಸ್ತ್ರ ಸರಬರಾಜು & ಸಾಗಾಣಿಕಾ ಸಹಕಾರ ನೀಡಿದ ಹೇರಳ ಉದಾಹರಣೆಗಳ ನಿಮಿತ್ತ ಈ ಪಾಡು.
  • ಪಟ್ಟಿಯ ಪ್ರಾರಂಭದಿಂದ ಇವತ್ತಿನ ತನಕ ತನ್ನ ಸ್ಥಾನ ಕಾಯ್ದುಕೊಂಡಿರುವ ಸಿರಿಯಾ. ಹೆಜಬುಲ್ಲಾ ಸಂಘಟನೆ ಹಾಗೂ   ಪ್ಯಾಲಿಸ್ತೇನ್ & ಇರಾಕ್ ದೇಶಗಳಲ್ಲಿನ ವಿಮೋಚನಾ ಚಳುವಳಿಗಳನ್ನ ( Liberation Armies / Parties ) ಬಹಿರಂಗವಾಗಿ ಬೆಂಬಲಿಸಿದ್ದಕ್ಕೆ ಈ ಶಿಕ್ಷೆ.
  • ಹಮಾಸ್ ನೊಂದಿಗೆ ಗುರುತಿಸಿಕೊಂಡಿರುವ ಅಪರಾಧಕ್ಕೆ ಈ ಶಾಪ. ಆದರೆ ಸೂಡಾನ್ ನಲ್ಲಿ ನೆಲೆಗೊಂಡಿರುವ ಅಮೆರಿಕಾ ಯೋಧರಿಗೆ ಭಯೋತ್ಪಾದನೆಯ ವಿರುದ್ಧ ಸಮರಕ್ಕೆ ಪ್ರಾಮಾಣಿಕವಾಗಿ ಕೈಜೋಡಿಸಿರುವ ನಿಮಿತ್ತ ಅಮೆರಿಕದಿಂದ ಇವತ್ತಿನ ಪ್ರಸ್ತಾಪ ಬಂದಿದೆ.
  • ಸದರಿ ವಿಷಯದ ಹೆಚ್ಚಿನ ಮಾಹಿತಿಗಾಗಿ : ಇಲ್ಲಿ ಕ್ಲಿಕ್ಕಿಸಿ


: ರವಿ




No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ