ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 8, 2010

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ

ಚುಟುಕು ಸುದ್ದಿ : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವವನ್ನ ಬೆಂಬಲಿಸಿದ ಒಬಾಮಾ


ಸುದ್ದಿಯ ಒಳನೋಟ

  • ಜಗತ್ತಿನೆಲ್ಲೆಡೆ ಶಾಂತಿ & ಭದ್ರತೆ ಕಾಪಾಡಲು ರಚಿತವಾದ ಸಂಸ್ಥಯೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ.
  • ಶಾಂತಿಸ್ಥಾಪನಾ (Peacekeeping) ಕಾರ್ಯಾಚರಣೆಗಳನ್ನ ಸಂಘಟಿಸುವುದು, ಅಂತರರಾಷ್ಟ್ರೀಯ ನಿಷೇಧಗಳನ್ನ ಅಧಿಕೃತಗೊಳಿಸುವುದು & ಸೇನಾ ಕಾರ್ಯಾಚರಣೆಗಳನ್ನ ಪ್ರಮಾಣೀಕರಿಸುವುದು - ಭದ್ರತಾ ಮಂಡಳಿಯ ಪ್ರಮುಖ ಕರ್ತವ್ಯಗಳಾಗಿವೆ.
  • ಸದರಿ ಸಮಸ್ಥೆಯ ಮೊದಲ ಸಭೆ ಜನವರಿ 17, 1946ರಲ್ಲಿ ಲಂಡನ್ ನಲ್ಲಿ ಜರುಗಿತು.
  • ಭದ್ರತಾ ಮಂಡಳಿ ಜಗತ್ತಿನ ವಿವಿಧ ಭೂಪ್ರದೇಶಗಳ ಪ್ರತಿನಿಧಿಗಳೆಂಬಂತೆ 10 ತಾತ್ಕಾಲಿಕ ಪ್ರತಿನಿಧಿಗಳು & 5 ಖಾಯಂ ಪ್ರತಿನಿಧಿ ದೇಶಗಳನ್ನೊಳಗೊಂಡಿದೆ.
  • ಅಮೆರಿಕಾ, ಇಂಗ್ಲೆಂಡ್ ( ಯು.ಕೆ. ಅಲ್ಲ ), ಫ್ರಾನ್ಸ್, ಚೀನಾ & ರಷಿಯಾ : ಇವು ಐದು ಖಾಯಂ ಪ್ರತಿನಿಧಿ ದೇಶಗಳು.
  • ಇನ್ನುಳಿದ ಹತ್ತು ತಾತ್ಕಾಲಿಕ ಸ್ಥಾನಗಳಿಗಾಗಿ ಜಗತ್ತಿನ ವಿವಿಧ ಪ್ರದೇಶಗಳಿಂದ ಸದಸ್ಯ ರಾಷ್ಟ್ರಗಳನ್ನ ಚುನಾಯಿಸಲಾಗುತ್ತದೆ. ಪ್ರದೇಶವಾರು ಮೀಸಲಾತಿ ಹೀಗಿದೆ :
  1. ಆಫ್ರಿಕಾ ಬ್ಲಾಕ್ : 03
  2. ಏಷ್ಯಾ ಬ್ಲಾಕ್ : 02
  3. ಲ್ಯಾಟಿನ್ ಅಮೆರಿಕಾ & ಕೆರಿಬಿಯನ್ ಬ್ಲಾಕ್ : 02
  4. ಪಶ್ಚಿಮ ಯುರೋಪಿಯನ್ ಬ್ಲಾಕ್ : 02
  5. ಪೂರ್ವ ಯುರೋಪಿಯನ್ ಬ್ಲಾಕ್ : 01
  6. ಇವುಗಳಲ್ಲಿ ಒಂದು ಅರಬ್ ದೇಶ, ಆಫ್ರಿಕಾ ಬ್ಲಾಕ್ & ಏಷ್ಯಾ ಬ್ಲಾಕ್ ಪರವಾಗಿ ಸರದಿಯಲ್ಲಿ ( Alternative ಆಗಿ ) ಪ್ರತಿನಿಧಿಸುತ್ತದೆ.
  • ಮುಂಬರುವ 1ನೇ ಜನವರಿ 2011 ರಿಂದ 31ನೇ ಡಿಸೆಂಬರ್ 2012ರ ಅವಧಿಗಾಗಿ
  1. ಪಶ್ಚಿಮ ಯುರೋಪಿಯನ್ ಬ್ಲಾಕ್ : ಜರ್ಮನಿ ( Prev. - ಆಸ್ಟ್ರಿಯಾ )
  2. ಪಶ್ಚಿಮ ಯುರೋಪಿಯನ್ ಬ್ಲಾಕ್ : ಪೋರ್ತುಗಲ್ ( Prev. - ಟರ್ಕಿ )
  3. ಏಷ್ಯಾ : ಭಾರತ ( Prev. - ಜಪಾನ್ )
  4. ಆಫ್ರಿಕಾ : ದಕ್ಷಿಣ ಅಮೆರಿಕಾ ( Prev. - ಉಗಾಂಡಾ )
  5. ಲ್ಯಾಟಿನ್ ಅಮೆರಿಕಾ & ಕೆರಿಬಿಯನ್ : ಕೊಲಂಬಿಯಾ ( Prev. - ಮೆಕ್ಸಿಕೋ )
ಆಯ್ಕೆಯಾಗಿವೆ.
  • 1ನೇ ಜನವರಿ 2010 ರಿಂದ 31ನೇ ಡಿಸೆಂಬರ್ 2011ರ ಅವಧಿಗಾಗಿ
  1. ಪೂರ್ವ ಯುರೋಪಿಯನ್ ಬ್ಲಾಕ್ : ಬೋಸ್ನಿಯಾ & ಹರ್ಝೆಗೋವಿನಾ
  2. ಅರಬ್ ಸರದಿ ( ಏಷ್ಯಾ ಬ್ಲಾಕ್ ) : ಲೆಬನಾನ್
  3. ಆಫ್ರಿಕಾ : ಗೆಬಾನ್
  4. ಆಫ್ರಿಕಾ : ನೈಜೀರಿಯಾ
  5. ಲ್ಯಾಟಿನ್ ಅಮೆರಿಕಾ & ಕೆರಿಬಿಯನ್ : ಬ್ರಾಝಿಲ್
ಆಯ್ಕೆಯಾಗಿವೆ.
  • ಹೀಗಿರುವಾಗ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಭಾರತ ಏಷ್ಯಾ ಬ್ಲಾಕ್ ಪ್ರತಿನಿಧಿಸುವ ಸಲುವಾಗಿ ಮುಂದಿನ ಎರಡು ವರ್ಷಗಳಿಗೆಂದು ಆಯ್ಕೆಗೊಂಡಂತಾಗಿದೆ.
  • ಈಗ ಒಬಾಮಾ ಆಶಯ, ಭಾರತ ವಿಶ್ವಸಂಸ್ಥೆಯ 6ನೇ ಖಾಯಂ ಸದಸ್ಯ ರಾಷ್ಟ್ರವಾಗಲಿ ಎಂಬುದಾಗಿದೆ. 
  • ಸದರಿ ಆಶಯ ಈಡೇರಲು ಭಾರತ ಸರ್ಕಾರದ ಪ್ರಯತ್ನಗಳೇನಿರಬೇಕು ಅಂತ ನಿಮಗಾರಿಗಾದರೂ ತಿಳಿದಿದೆಯೇ ?




: ರವಿ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ