ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 9, 2010

ಬರ್ಮಾ ಭಾನಗಡಿ

ಚುಟುಕು ಸುದ್ದಿ : ಮಯನ್ಮಾರ್ ನಲ್ಲಿ ಮುಕ್ತಾಯಗೊಂಡ ಚುನಾವಣೆ ; ಶುರುವಾದ ಜಟಾಪಟಿ

ಬರ್ಮೀ ಲಿಪಿ
ಗೃಹ ಬಂಧನದಲ್ಲಿ ಸೂ ಕಿ




ಸುದ್ದಿಯ ಒಳನೋಟ :

 • ಬ್ರಿಟಿಷರ ವಸಾಹತಾಗಿದ್ದ ಈ ದೇಶ ಸ್ವತಂತ್ರವಾದದ್ದು, 04 ಜನವರಿ 1948ರಂದು.
 • ಬಾಂಗ್ಲಾದೇಶ, ಭಾರತ, ಚೀನಾ, ಲಾವೋಸ್ & ಥಾಯ್ ಲ್ಯಾಂಡ್ ದೇಶಗಳು ನೆರೆಯ ದೇಶಗಳಾಗಿವೆ.
 • ಜಗತ್ತಿನಲ್ಲಿ 40ನೇ & ಆಗ್ನೇಯ ಏಷ್ಯಾದಲ್ಲಿ ಎರಡನೇ ಅತಿ ದೊಡ್ಡ ದೇಶ.
 • ದೇಶದ ಒಟ್ಟು ಭೂಪ್ರದೇಶದ 49% ಅರಣ್ಯ ಭೂಮಿ ಹೊಂದಿರುವ ಹೆಗ್ಗಳಿಕೆ ಈ ದೇಶಕ್ಕಿದೆ.
 • ಬರ್ಮಾ ಕಾಡುಗಳಲ್ಲಿ ಸಿಗುವ ಟೀಕ್ ( ಬರ್ಮಾ ಟೀಕ್ ) ಜಗತ್ಪ್ರಸಿದ್ಧ.
 • ಭರತವರ್ಷದಿಂದ ಭಾರತವಾಗಿ, ಭಾರತದಿಂದ ಹಿಂದೂಸ್ತಾನವಾಗಿ, ಹಿಂದೂಸ್ತಾನದಿಂದ ಭಾರತವಾಗಿ ನಡೆದು ಬಂದಿರುವ ಭಾರತಕ್ಕೆ ಸ್ವತಂತ್ರ ಬಂದಂದಿನಿಂದ ಅಧಿಕೃತ ಹೆಸರು : ಭಾರತ ಗಣರಾಜ್ಯ ( Republic of India ). ಅಂತೆಯೇ ಸ್ಥಳೀಯ ಭಾಷೆಯಲ್ಲಿ ಬಾಮರ್ ( Bamar ) ಎಂದಿರುವ ಅಂದಿನ ಬರ್ಮಾ, ಇಂದಿನ ಮಯನ್ಮಾರ್ ಪದೇ ಪದೇ ಹೆಸರು ಬದಲಾಯಿಸಿಕೊಂಡಂತಿದೆ. 
 1. 1947ರಲ್ಲಿ ದೇಶದ ಮೊದಲ ಸಂವಿಧಾನ ಜಾರಿಗೊಂಡಾಗ Union of Burma ಇದ್ದದ್ದು 
 2. 1974ರ ಸಂವಿಧಾನ ಬಂದಾಗ Socialist Republic of The Union of Burma ಆಯಿತು. ನಂತರ
 3. 1989ರಿಂದ Union of Myanmar ಆಗಿ
 4. 2008ರಲ್ಲಿ ಸಂವಿಧಾನದಲ್ಲಿ ಒಪ್ಪಿಕೊಂಡಂತೆ & 2010ರಿಂದ ಅಧಿಕೃತವಾಗಿ ಜಾರಿ ಬಂದಂತೆ & ಇವತ್ತಿನ ಸ್ಥಿತಿಗತಿಯಂತೆ Republic of Union of Myanmar ಆಗಿದೆ.
 • 1824ರವರೆಗೆ ತನ್ನದೇ ಜನರ ಕೈಯಲ್ಲಿ ಆಳಿಸಿಕೊಂಡಿದ್ದ ದೇಶ, ಸುಮ್ಮನಿರದೇ ಭಾರತದ ಭೂಮಿಗೆ ಆಸೆಪಟ್ಟು ಬ್ರಿಟಿಷರೊಂದಿಗೆ ವೈರತ್ವ ಸಾಧಿಸಕೊಂಡಿದ್ದಲ್ಲದೇ ಮುಂದಿನ ಸುಮಾರು 60 ವರ್ಷ(1886-1948) ಸಂಪೂರ್ಣವಾಗಿ ಬ್ರಿಟಿಷರ ವಸಾಹತಾಯಿತು.
 • ಮುಂದೆ 1948ರಲ್ಲಿ ಸ್ವತಂತ್ರವಾಗಿ ಸಾವೋ ಶ್ವೇ ಥಾಯ್ಕ್ ( Sao Shwe Thaik ) ಅಧ್ಯಕ್ಷರಾಗಿ ಮತ್ತು ಯೂ ನೂ ( U Nu ) ಪ್ರಧಾನಮಂತ್ರಿಯಾಗಿ ಆಯ್ಕೆಯಾದರು.
 • ಭಾರತದಂಥ ಬೃಹತ್ ರಾಷ್ಟ್ರ ಕೂಡ ಬ್ರಿಟಿಷ್ ದಾಸ್ಯದ ಕುರುಹಾದ ಕಾಮನ್ ವೆಲ್ತ್ ಒಕ್ಕೂಟ ಸೇರಿತು. ಆದರೆ ಬರ್ಮಾ ಆ ಕೆಲಸ ಮಾಡಲಿಲ್ಲ.
 • ಮುಂದೆ ತನ್ನ ಸಂವಿಧಾನದನ್ವಯ Chamber of Deputies and Chamber of Nationalities ಎಂಬ ಹೆಸರುಳ್ಳ ದ್ವಿ-ಸದನ ಸಂಸತ್ತು ರಚನೆ ಮಾಡಿಕೊಂಡಿತು.
 • 1951, 1956 & 1960 ರಲ್ಲಿ ಚುನಾವಣೆ ನಡೆದು 'ಜನಪ್ರಿಯ' ಸರ್ಕಾರ ರಾಜ್ಯಭಾರ ಮಾಡಿತು.
 • ಆದರೆ 1962ರಲ್ಲಿ ಜನರಲ್ ನೇ ವಿನ್( Ne Win ) ಮಿಲಿಟರಿ ಕ್ರಾಂತಿಯ ( Coup d'état ) ಮೂಲಕ ಪ್ರಜಾಪ್ರಭುತ್ವ ಕೆಳಗಿಳಿಸಿ ಸಮಾಜವಾದಿ ತತ್ವ ಅನುಷ್ಟಾನಕ್ಕಾಗಿ ಮುಂದಿನ 26 ವರ್ಷ ಆಳಿದನು. ಅಂದಿನಿಂದ ಇಂದಿನವೆರೆಗೆ ಆ ದೇಶದಲ್ಲಿ ಮಿಲಿಟರಿ ಜಂತಾ(Junta) ಆಡಳಿತ ಜಾರಿಯಲ್ಲಿದೆ.
ಮೂಲದಲ್ಲಿ ಜಂತಾ ಪದ ಪೋರ್ತುಗೀಸ್ & ಸ್ಪ್ಯಾನಿಷ್ ಭಾಷೆಗಳಿಂದ ಬಂದುದಾಗಿದ್ದು, ಪದದ ಯಥಾವತ್ ಅರ್ಥ, ಸಮಿತಿ / ನಿರ್ದೇಶಕರುಗಳ ಮಂಡಳಿ ಅಂತ. ಆದರೆ ಜನಪ್ರಿಯ ಬಳಕೆಯಲ್ಲಿ , ಮಿಲಿಟರಿ ನಾಯಕರನ್ನೊಳಗೊಂಡ ಆಡಳಿತ ಸಮಿತಿ ಅಂತ ಅರ್ಥ. ಮಿಲಿಟರಿ ಜಂತಾ ಅಂದ್ರೆ ಕೇವಲ ಬರ್ಮಾ ದೇಶದಲ್ಲಿರೋದು ಮಾತ್ರ ಅಲ್ಲ.  ಪ್ರಸ್ತುತ ಬರ್ಮಾ( 1962ರಿಂದ ), ಫಿಜಿ( 2006ರಿಂದ ), ಗಿನಿಯಾ( 2008ರಿಂದ ) , ಲಿಬಿಯಾ ( 1969ರಿಂದ )& ನೈಗರ್ ( 2010ರಿಂದ )ದೇಶಗಳಲ್ಲಿ ಮಿಲಿಟರಿ ಜಂತಾ ಆಡಳಿತ ಜಾರಿಯಲ್ಲಿದೆ. ಒಟ್ಟು ಜಂತಾ ಆಡಳಿತಗಳ ಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ.
 • ದೇಶದಲ್ಲಿ ನಡೆಯುತ್ತಿದ್ದ ಭಯಂಕರ ಸಾಮಾಜಿಕ ದಮನ & ಆರ್ಥಿಕ ದುರ್ಬಳಕೆಯ ವಿರುದ್ಧ 1988ರಲ್ಲಿ ನಡೆದ 8888 Uprising ( 08-08-1988 ) ಮೂಲಕ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಯತ್ನಿಸಲಾಯಿತು.
 • ಆದರೆ ಮತ್ತೊಂದು Coup d'état ನಡೆದು ಈ ಬಾರಿ ಜನರಲ್ ಸಾ ಮಾಂಗ್ ( Saw Maung ) ಸರ್ಕಾರದ ನೇತೃತ್ವ ವಹಿಸಿದನು.
 • ನಂತರ 1990ರಲ್ಲಿ ಸುಮಾರು 30 ವರ್ಷಗಳ ನಂತರ "ನೋಡೋಣ, ಪ್ರಜಾಪ್ರಭುತ್ವ ಮರುಸ್ಥಾಪನೆ ಮಾಡೋಣ" ಅಂತ ನಡೆಸಿದ ಚುನಾವಣೆಯಲ್ಲಿ ಅಂಗ್ ಸಾನ್ ಸೂ ಕಿ ( Aung Saan Suu Kyi ) ನೇತೃತ್ವದ National League For Democracy ಪಕ್ಷ ಒಟ್ಟು 489 ಸ್ಥಾನಗಳ ಪೈಕಿ 392 ಸ್ಥಾನ ಗಳಿಸಿ ಪ್ರಚಂಡ ವಿಜಯ ಸಾಧಿಸಿತು.
ಅಂಗ್ ಸಾನ್ ಸೂ ಕಿ ಹಾಗೇ ಸುಮ್ಮನೆ ರಾಜಕೀಯಕ್ಕಿಳಿದವರಲ್ಲ. ಅವರ ತಾಯಿ ಹಿಂದೆ 1960ಕ್ಕಿಂತ ಮುಂಚಿನ ಸರ್ಕಾರದಲ್ಲಿ ನೇಪಾಳಕ್ಕೆ ರಾಜದೂತ (Ambassador)ರಾಗಿದ್ದವರು. ಅವರ ಜೊತೆ ಇದ್ದ ಸೂ ಕಿ ದೆಹಲಿಯ 'ಲೇಡಿ ಶ್ರೀರಾಮ್ ಕಾಲೇಜ್' ನಿಂದ ಪದವಿ ಪಡೆದು ನಂತರ ಲಂಡನ್ ನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದವರು. ಮುಂದೆ ನಂತರ ನ್ಯೂಯಾರ್ಕ್ ನಲ್ಲಿ ವಾಸವಾಗಿ ವಿಶ್ವಸಂಸ್ಥೆಯೊಂದಿಗೆ ಮೂರು ವರ್ಷ ಕೆಲಸ ಮಾಡಿದರು. ಮುಂದಿನ ದಿನಗಳಲ್ಲಿ ಬರ್ಮಾ ಸರ್ಕಾರದೊಂದಿಗೂ ಕೆಲಸ ಮಾಡಿದರು. ನಂತರ 1988ರಲ್ಲಿ ತಾಯಿಯ ಆರೈಕೆಗಾಗಿ ಬರ್ಮಾಕ್ಕೆ ಮರಳಿದ ಸೂ ಕಿ, ಅದೇ ಹೊತ್ತಿನಲ್ಲಿ ಆದ 8888 ದಂಗೆಯ ತರುವಾಯ (26/08ರಂದು) ಸುಮಾರು 5 ಲಕ್ಷ ಜನರನ್ನುದ್ದೇಶಿಸಿ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಕರೆನೀಡಿದರು. ಕೆಲವೇ ದಿನಗಳಲ್ಲಿ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಸ್ಥಾಪನೆಯಾಯಿತು & ಸೂ ಕಿ ಅದರ ಪ್ರಧಾನ ಕಾರ್ಯದರ್ಶಿಯಾದರು. .
 • ಆದರೆ ಮಿಲಿಟರಿ ಜಂತಾ( Military Junta ) ಆಡಳಿತ ಚುನಾವಣೆಯನ್ನೇ ಅಸಿಂಧುಗೊಳಿಸಿ ತನ್ನ ಆಳ್ವಿಕೆಯನ್ನ ಇವತ್ತಿನವೆರೆಗೂ ಮುಂದುವರೆಸಿದೆ.
 • ಆದರೆ ಜಾಗತಿಕ ಒತ್ತಡದ ಹಿನ್ನೆಲೆಯಲ್ಲಿ 2008ರ ಸಂವಿಧಾನದ ನಿರ್ದೆಶನದನ್ವಯ 2010ರ ಒಳಗೆ  ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಚುನಾವಣೆ ನಡೆಸುವ ವಚನ ನೀಡಿ, ಕಳೆದ 13ನೇ ಆಗಸ್ಟ 2010ರಲ್ಲಿ ಹೇಳಿಕೆ ನೀಡಿ 07 ನವೆಂಬರ್ 2010ಕ್ಕೆ ಚುನಾವಣೆ ಎಂದು ಜಂತಾ ಆಡಳಿತ ಘೋಷಿಸಿತು.
 • ಅಂತೆಯೇ ಮೊನ್ನೆ ರವಿವಾರ ಚುನಾವಣೆಯಾಯಿತು.
 • ಮೊನ್ನೆ ಚುನಾವಣೆ ಅದರ ಬೆನ್ನಲ್ಲೇ ಘರ್ಷಣೆ. Democratic Karen Buddhist Army ಮತ್ತು ಜಂತಾ ಆಡಳಿತದ ನಡುವೆ ಈ ಘರ್ಷಣೆ. ತನ್ನಿಮಿತ್ತ ಸುಮಾರು 10000 ನಿರಾಶ್ರಿತರು ನೆರೆಯ ಥಾಯ್ ಲ್ಯಾಂಡ್ ಪ್ರವೇಶಿದ್ದಾರೆ.
 • Democratic Karen Buddhist Army ಅಂದ್ರೆ ಏನು ? ಎಲ್ಲಿಂದ ಬಂತು ? ಅಂತ ನಿಮಗ್ಯಾರಿಗಾದ್ರೂ ಗೊತ್ತಾ ?!


: ರವಿ






No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ