ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 15, 2010

ಹೇ ಪುಸ್ತಕ ಹಬ್ಬ

ಚುಟುಕು ಸುದ್ದಿ : ಕೇರಳದಲ್ಲಿ ನಿನ್ನೆ ಮುಕ್ತಾಯಗೊಂಡ Hay Festival 
ಸುದ್ದಿಯ ಒಳನೋಟ :
 
  • ಯುನೈಟೆಡ್ ಕಿಂಗಡಮ್ ನ ಭಾಗವಾದ ವೇಲ್ಸ್ ( ಇಂಗ್ಲೆಂಡ್ & ಸ್ಕಾಂಟ್ಲೆಂಡ್ ಉಳಿದೆರಡು ಭಾಗಗಳು ) ನ ಪಟ್ಟಣ Hay-on-Wye ಯನ್ನು "ಪುಸ್ತಕಗಳ ಊರು" ಎಂದು ಕರೆಯುತ್ತಾರೆ.
  • Wye ಹೆಸರಿನ ನದಿಯ ಪೂರ್ವ ದಂಡೆಯ ಮೇಲಿರುವ ಈ ಊರಿಗೆ Hay ಅಂತನೇ ಹೆಸರು. ಆದರೆ ನದಿ ತೀರವನ್ನ ಸೇರಿಕೊಂಡು ಇಂಗ್ಲೀಷರು ಹಾಗೆ ಕರೀತಾರೆ.
  • ಹಿನ್ನೆಲೆ :
    ಹಿಂದೆ ಇಂಗ್ಲೀಷರು ಈ ಊರನ್ನು  Hay-on-Wye ಎಂದು ಕರೆದರೆ ವೇಲ್ಸ್ ದವರು Y Gelli ಎಂದು ಕರೆಯುತ್ತಿದ್ದರಂತೆ. ಇಂಗ್ಲೀಷ ಹಾಗೂ ವೇಲ್ಸ್ ರಾಜರುಗಳಿಗೆ ಈ ಪ್ರದೇಶ ಕಲಹ ಕೇಂದ್ರವಾಗಿತ್ತು. ವೇಲ್ಸ್ ನ ದಾಳಿಕೋರರನ್ನು ತಡೆಗಟ್ಟಲು ಇಂಗ್ಲೆಂಡಿನ ರಾಜ(King Offa) ದೊಡ್ಡ ಕಂದಕವನ್ನು ನಿರ್ಮಾಣ ಮಾಡಿದನು. ಮೇಲಿಂದ ಮೇಲೆ ಈ ಎರಡೂ ದೇಶಗಳ ನಡುವೆ ನಡೆದ ಯುದ್ಧಗಳಿಂದಾಗಿ ೧೨೧೬ ರಲ್ಲಿ ಅದರ ಕೋಟೆಯು ಒಡೆಯಿತು.  ನಂತರ ಉಳಿದ ಅವಶೇಷಗಳನ್ನು ವೇಲ್ಸ್ ನ ರಾಜಕುಮಾರ ಸುಡುತ್ತಾನೆ.

    ಇಂಗ್ಲೆಂಡ್ ಹಾಗೂ ವೇಲ್ಸ್ ನಡುವಣ ಕಲಹ ಮುಕ್ತಾಯವಾಯಿತು. ಆ ಊರಿನ ಮಹತ್ವ ಕಡಿಮೆಯಾಯಿತು; ಕ್ರಮೇಣ ಮರೆತೂ ಹೋಯಿತು. ಮುಂದೆ, ಅಲ್ಲಿ ಬಿದ್ದಂತಹ ಅವಶೇಷಗಳ ಸಹಾಯದಿಂದ  ೧೯೬೦ ರಲ್ಲಿ ಒಂದು ದೊಡ್ಡ ಭವನ  ನಿರ್ಮಾಣವಾಯಿತು. ಅದೇ ಸಮಯದಲ್ಲಿ ಆಕ್ಸಫರ್ಡ್ ನ ಪದವೀಧರ 'ರಿಚರ್ಡ ಬೂಥ್' ಎಂಬುವನು ಒಂದು ಪುಸ್ತಕ ಮಳಿಗೆಯನ್ನು ತೆರೆಯುತ್ತಾನೆ. ಗ್ಯಾರೇಜ್ ಕೆಲಸಗಾರನ ಮಗನಾದ ಈತನು ಕ್ರಮೇಣವಾಗಿ ತನ್ನ ಊರು ನಶಿಸುತ್ತಿರುವುದನ್ನು ಗಮನಿಸುತ್ತಾನೆ. ಪುಸ್ತಕ ಅಂಗಡಿಯನ್ನು ಬೆಳೆಸುವುದಕ್ಕಾಗಿ ಶ್ರಮಪಟ್ಟು ಕೆಲಸ ಮಾಡುತ್ತಾನೆ. ಹೊಸ ಅಂಗಡಿಗಳನ್ನು ತೆರೆಯಲು ಸಾರ್ವಜನಿಕರಿಗೆ ಆಹ್ವಾನವೀಯುತ್ತಾನೆ. 30 ಪುಸ್ತಕ ಅಂಗಡಿಗಳು ಎದ್ದು ನಿಲ್ಲುತ್ತವೆ. ಈ ಊರಿನ ಜನಸಂಖ್ಯೆ ೧೫೦೦ ಮಾತ್ರ.
ಕನಕಕುನ್ನು ಅರಮನೆ
  • ಮುಂದೆ 1988 ರಲ್ಲಿ ಮೊದಲಬಾರಿಗೆ ಪೀಟರ್ ಫ್ಲಾರೆನ್ಸ್ ಎಂಬ ವ್ಯಕ್ತಿ ಆ ಊರಿನಲ್ಲಿ ಪುಸ್ತಕ ಹಬ್ಬ( Hay Festival )ವನ್ನ ಆಯೋಜಿಸುತ್ತಾನೆ.
  • ಪುಸ್ತಕ ಮೇಳವಾಗಿ ಪ್ರಾರಂಭಗೊಂಡದ್ದು ನಂತರದ ದಿನಗಳಲ್ಲಿ ಸಾಹಿತ್ಯಿಕ ಚರ್ಚಾ ಗೋಷ್ಠಿಯ ರೂಪ ಪಡೆಯುತ್ತದೆ. ಹೀಗಾಗಿ ಒಂದು ರೀತಿಯ ಸಾಹಿತ್ಯ ಸಮ್ಮೇಳನ ಎನಿಸಿಕೊಂಡಿದೆ.
ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನಗಳು ಒಂದು ಭಾಷೆಗೆ ಸೀಮಿತವಾಗಿರುತ್ತವೆ. ಆದರೆ ಇಂಥ ವಿವಿಧ ಭಾಷೆಗಳ ಸಾಹಿತ್ಯಗಳನ್ನ ಮಿಳಿತಗೊಳಿಸುವ ಸಮ್ಮೇಳನಗಳು ನಮ್ಮಲ್ಲಿ, ಕರ್ನಾಟಕದಲ್ಲಿ ಕೂಡ ನಡೆದರೆ ಹೇಗೆ ? ವಿಚಾರ ಮಾಡಬೇಕಾದ ವಿಷಯ. ಅಲ್ಲವೇ ? ಆಂಗ್ಲ ಭಾಷೆಯ ಲಾಲಿತ್ಯಕ್ಕೆ ಮರುಳಾಗಿರುವ ನಾವುಗಳು ಸದರಿ ಭಾಷೆಯ Coverage Area ಹೆಚ್ಚಿರುವುದನ್ನ ಮನಗಂಡು ನಮ್ಮ ಭಾಷೆಯ ಸಮಾನಾರ್ಥಕ ಪದಗಳನ್ನ ದಿನಕ್ಕೆ ಹತ್ತರಂತೆ ಪಕ್ಕಕ್ಕಿಟ್ಟು ಅದೇ ವೇಗದಲ್ಲಿ ದಿನಕ್ಕೆ ಹತ್ತರಷ್ಟು ಹೊಸ ಆಂಗ್ಲ ಪದಗಳನ್ನ ಎತ್ತಿಕೊಂಡು ನಮ್ಮ ಜನ - ಪದ - ಕೋಶ ( ಆಡುಭಾಷೆಯ ಪದಕೋಶ )ಕ್ಕೆ ಸೇರಿಸಿಕೊಳ್ತಾ ಇದೀವಿ. ಮುಂಬರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷರಾಗಿರುವ ಜಿ.ವೆಂಕಟಸುಬ್ಬಯ್ಯನವರು ನಿಘಂಟು ತಜ್ಞರು. ಇವರು ಸಿದ್ಧಪಡಿಸಿರುವ ನಿಘಂಟುಗಳು ಕನ್ನಡ ಭಾಷೆಯ ಅಮೂಲ್ಯ ರತ್ನಗಳು. ಆದರೆ ಕರ್ನಾಟಕದ ಜನಸಾಮಾನ್ಯನಿಗೆ ಈ ರತ್ನಗಳು ದುಬಾರಿಯಾಗಿ ಪರಿಣಮಿಸಿವೆ. ಅವನಿಗೆ ಬಳಸಲು ಅಗ್ಗದ ಪದಗಳೇ ಕೈಗಟುಕೋದು. ಹೀಗಾಗಿ ವೆಂಕಟಸುಬ್ಬಯ್ಯನವರು ಕನ್ನಡದ ನಿಘಂಟುಗಳಲ್ಲಿ ದಿನಿತ್ಯದ ಬಳಕೆಯ ಆಂಗ್ಲಪದಗಳಿಗೆ ಸಮನಾಗುವ ಹಾಗೆ ಎಷ್ಟೇ ಸುಂದರ ಪದಗಳನ್ನ ಜೋಡಿಸಿ ಕೊಟ್ಟಿದ್ದರೂ ಕೂಡ ನಾವು ( ಜನಸಾಮಾನ್ಯರು ) ಮಾಡುವುದು ಆಂಗ್ಲ ಪದಗಳ ಬಳಕೆಯನ್ನೇ. ಕಾರಣ ಸರಳವಾಗಿದೆ : ಜಾಗತೀಕರಣದ ಈ ದಿನಗಳಲ್ಲಿ ನಮ್ಮ ಭಾಷೆಯೂ ನಮ್ಮನ್ನ ಮೇಲೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ಹೀಗಿರುವಾಗ ಈ Global Village ನಲ್ಲಿ ಅತಿ ಹೆಚ್ಚು ಜನರಿಗೆ ಅರ್ಥವಾಗುವ ಭಾಷೆಯ ಕಡೆ ಒಲವು ಮೂಡುವುದು ತಲೆ ನೆಟ್ಟಗಿರುವ ಎಲ್ಲ ಮನುಷ್ಯರ ಸಹಜ ಗುಣ. ಆದರೆ ಇದೆಲ್ಲವನ್ನೂ ಮೀರಿ Global Village ನಲ್ಲಿ ಕರ್ನಾಟಕವೆಂಬ ನಮ್ಮದೇ ಕೇರಿಯಿದೆ. ಅಲ್ಲಿ ಕನ್ನಡವೇ ಸಾರ್ವಭೌಮ. ಅಲ್ಲಿಯಾದರೂ ನಾವು ಕನ್ನಡ ಬಳಸದೇ ಇದ್ದರೆ, ಮುಂದೊಂದು ದಿನ ನಮ್ಮ ಕೇರಿಯ ಭಾಷೆಗೆ ಕನ್ನಡ(US)  ಅಂತಲೋ , ಕನ್ನಡ(UK) ಅಂತಲೋ .. ನಾಮಕರಣವಾಗುವ ದಿನ ದೂರವಿಲ್ಲ. ಅಲ್ಲವೇ ?!!
  • ತದನಂತರ ಸದರಿ ಪುಸ್ತಕ ಹಬ್ಬ ಕೇವಲ  ಹೇ ನಗರಕ್ಕೆ ಸೀಮಿತವಾಗಿರದೇ ಜಗತ್ತಿನ ವಿವಿಧ ನಗರಗಳಲ್ಲಿಯೂ ನಡೆಯುತ್ತಾ ಬಂದಿದೆ & ಆ ನಗರಗಳಲ್ಲಿಯೂ ನಿರಂತರವಾಗಿ ಸಾಗುತ್ತಾ ಇದೆ.
  • ಪ್ರತಿ ವರ್ಷ ನಡೆಯುವ ಈ ಹಬ್ಬಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಬರುತ್ತಾರೆ. ಇದರಿಂದಾಗಿ ಈ ನಗರವು "Town of Books"  ಎಂದು ಕರೆಸಿಕೊಂಡಿದೆ. 
  • ಗಾರ್ಡಿಯನ್, ಟೆಲೆಗ್ರಾಫ್,  ದಿ ಸಂಡೇ ಟೈಮ್ಸ್ .. ನಂತಹ ಸುಪ್ರಸಿದ್ಧ ಪತ್ರಿಕೆಗಳು ಸದರಿ ಪುಸ್ತಕ ಹಬ್ಬದ Sponsor ಗಳಾಗಲು ನಾಮುಂದು ತಾಮುಂದು ಎಂದಿವೆ. 
  • ಇದೀಗ ಪ್ರಪ್ರಥಮ ಬಾರಿಗೆ 'Hay Festival' ಭಾರತಕ್ಕೆ ಕಾಲಿಟ್ಟಿದ್ದು, ಕೇರಳದ ಕನಕಕುನ್ನು(kanakakunnu) ಅರಮನೆಯಲ್ಲಿ  ನವೆಂಬರ್ ೧೨ ರಿಂದ ೧೪ ರ ವರೆಗೆ ಜರುಗಿತು.
  • ಭಾರತದ ಅವತರಣಿಕೆಯನ್ನ The Week ನಿಯತಕಾಲಿಕ Sponsor ಮಾಡಿತ್ತು.
  • ಈ ಹಬ್ಬದಲ್ಲಿ 15 ಅಂತರರಾಷ್ತ್ರೀಯ,10 ಭಾರತೀಯ ಹಾಗೂ 15 ಸ್ಥಳೀಯ ಲೇಖಕರು ಪಾಲ್ಗೊಂಡಿದ್ದರು. ಚಿತ್ರ ನಿರ್ಮಾಪಕ ಹಾಗೂ ಲೇಖಕ ಆಡೂರ ಗೋಪಾಲಕೃಷ್ಣನ್, ಸಾಹಿತ್ಯ ಅಕ್ಯಾಡೆಮಿ ಪುರಸ್ಕೃತ ಒ.ಎನ್.ವಿ. ಕುರುಪ್, ಐರ್ಲ್ಯಾಂಡಿನ ಪ್ರಸಿದ್ಧ ಸಂಗೀತಗಾರ-ಲೇಖಕ ಬಾಬ್ ಗೆಲ್ಡಾಫ್, ವಿಕ್ರಂ ಸೇಠ್, ಶಶಿ ಥರೂರ್ .. ಇವರುಗಳು ಹಾಜರಿದ್ದ ಪ್ರಮುಖರು.  
  • ಏಶಿಯನ್ನರ ಹಾಗೂ ಪಾಶ್ಚಿಮಾತ್ಯರ ನಡುವೆ ಹೊಸ ವಿಚಾರಗಳ ಚರ್ಚೆಗೆ ವೇದಿಕೆ ನಿರ್ಮಾಣ ಮಾಡುವುದೇ ಭಾರತದಲ್ಲಿ ಆಯೋಜಿಸಲಾಗಿದ್ದ ಈ ಹಬ್ಬದ ಮುಖ್ಯ ಉದ್ದೇಶ.
  • ಕೇರಳ ಹೇ ಪುಸ್ತಕ ಮೇಳ ದ ಅಧಿಕೃತ ವೆಬ್ ವಿಳಾಸವನ್ನ ಒಮ್ಮೆ ಪರೀಕ್ಷಿಸಿ : ಇಲ್ಲಿ ಕ್ಲಿಕ್ಕಿಸಿ
  • ಕೇರಳದ ಜೊತೆಗೆ ನಡೆದ ಇತರೆ ಹೇ ಹಬ್ಬಗಳ ಪಟ್ಟಿ ಇಂತಿದೆ :
  1. Hay Festival Wales
  2. Hay Festival Zacatecas
  3. Brecon Jazz
  4. Hay Festival Segovia
  5. Storymoja Hay Festival Nairobi
  6. Hay Festival Maldives
  7. Hay Festival Cartagena
  8. Hay Festival Alhambra
  9. Hay Festival Belfast
  10. Hay Festival Winter Weekend
  • ಆದರೆ ಇದೇ ಸಮಯದಲ್ಲಿ ಆಯೋಜಿಸಲಾಗಿರುವ ಬೆಂಗಳೂರು ಪುಸ್ತಕ ಹಬ್ಬದಲ್ಲಿ ಇಂಥ ಚಟುವಟಿಕೆಗಳಿಗೆ ಆಸ್ಪದ ಇಲ್ಲದಿರುವುದನ್ನ ಸಂಘಟಕರು ಗಮನಿಸಿ ಅದಕ್ಕೂ ಅವಕಾಶ ಮಾಡಿಕೊಟ್ಟರೆ ಒಳಿತಲ್ಲವೇ ?!!  

 
 : ಪವನ್

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ