ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 16, 2010

ಭರತವರ್ಷದೊಳಗೊಂದು ಭ್ರಷ್ಟ ಭಾರತ

ಚುಟುಕು ಸುದ್ದಿ : ತರಂಗರಾಜನ ದುರಾಸೆ ; ಆದರ್ಶ ಅಕ್ರಮ ; ಭೂಗಳ್ಳ ದೊರೆಗಳುಸುದ್ದಿಯ ಒಳನೋಟ :

 • ಭಾರತದಲ್ಲಿ ಮೊದಲಬಾರಿಗೆ ಭ್ರಷ್ಟಾಚಾರದ ವಾಸನೆ ಸುಳಿದಿದ್ದು ೧೯೪೮ರಲ್ಲಿ "ಜೀಪ್ ಸ್ಕ್ಯಾಂಡಲ್" ಮುಖಾಂತರ. ವಿ.ಕೆ. ಮೆನನ್ (ನೆಹರೂರವರಿಗೆ ನಿಷ್ಠರಾಗಿದ್ದರು), ಲಂಡನ್ನಿನಲ್ಲಿ ಭಾರತದ ಹೈಕಮೀಶನರ್, ನಿಯಮಗಳನ್ನು ಗಾಳಿಗೆ ತೂರಿ ರಕ್ಷಣಾ ವಲಯಕ್ಕೆ ಜೀಪುಗಳನ್ನು ಖರೀದಿ ಮಾಡಿದ್ದರು. ಅನಂತಶಯನ ಅಯ್ಯಂಗಾರರ ನೇತೃತ್ವದ ತನಿಖಾ ಸಮಿತಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದರೂ ಅಂದಿನ ಸರ್ಕಾರ ಸಪ್ಟೆಂಬರ್ ೩೦, ೧೯೫೫ ರಂದು ಕೇಸು ಮುಚ್ಚಲ್ಪಟ್ಟಿದೆ ಎಂದು ಘೋಷಿಸಿತು.
 •  ಜವಾಹರಲಾಲ್ ನೆಹರು ನೇತೃತ್ವದ ಸರಕಾರದಲ್ಲಿ ಅನೇಕ ಭ್ರಷ್ಟಾಚಾರದ ಪ್ರಕರಣಗಳು ಬೆಳಕಿಗೆ ಬಂದಿವೆ.
      * ಮುದ್ಗಲ್ ಹಗರಣ(೧೯೫೧)
      * ಮುಂಡ್ರಾ ಹಗರಣ (೧೯೫೭-೧೯೫೮)
      *ಮಾಳವಿಯ-ಸಿರಾಜುದ್ದಿನ ಹಗರಣ (೧೯೬೩)     *ಪ್ರತಾಪ ಸಿಂಗ್ ಕೈರೊನ್ ಕೇಸ್ (೧೯೬೩) ...
 • ೧೯೭೧ ರಲ್ಲಿ ಚುನಾವಣೆಯಲ್ಲಿ ಸರಕಾರಿ ನೌಕರನನ್ನು ಚುನಾವಣಾ ಪ್ರಚಾರ ಕಾರ್ಯದಲ್ಲಿ ಬಳಸಿಕೊಂಡಿದ್ದ ಇಂದಿರಾ ಗಾಂಧಿಯವರಿಗೆ ಅಲಹಾಬಾದ್ ಹೈಕೋರ್ಟ್ ೧೯೭೫ ರಲ್ಲಿ ಲೋಕಸಭಾ ಸದಸ್ಯತ್ವದಿದಿಂದ ವಜಾಗೊಳಿಸಿ ಆರು ವಷಗಳ ಕಾಲ ಆಡಳಿತ ನಡೆಸದಂತೆ ಅವರ ಮೇಲೆ ನಿಷೇಧ ಹೇರಿತ್ತು. ಆದರೆ, ಅವರು ತಮ್ಮ ಸ್ಥಾನದಿಂದ ಕೆಳಕ್ಕಿಳಿಯದೇ ವಿಪಕ್ಷಗಳ ಪ್ರತಿಭಟನೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ emergency ಯನ್ನು ಹೊರಡಿಸಿದರು. 
 • ರಾಜೀವ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ೧೯೮೭ ರಲ್ಲಿ ಅವರು ಸ್ವೀಡೀಷ್ ಬೋಫೋರ್ಸ್ ಫಿರಂಗಿಗಳನ್ನು ಖರೀದಿಸಿದ್ದರು. ಕೋಟಿಗಟ್ಟಲೆ ಅವ್ಯವಹಾರ ನಡೆದಿತ್ತು. ಗಾಂಧಿ ಕುಟುಂಬದ ಸ್ನೇಹಿತ ಒಟ್ಟೋವಿಯೋ ಕ್ವಟ್ರೋಚಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ. ದುರಾದೃಷ್ಟವೆಂದರೆ ಕ್ವಟ್ರೋಚಿಯನ್ನು ಕಳೆದ ವರ್ಶ ಸಿ.ಬಿ.ಐ. ಈತನನ್ನು ಆರೋಪ ಮುಕ್ತಗೊಳಿಸಿದೆ.
 • ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್  ಲೋಕಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಸದಸ್ಯರಿಗೆ ಲಂಚ ನೀಡಿದ್ದರು ಎಂದು ೧೯೯೭ರಲ್ಲಿ ಬೆಳಕಿಗೆ ಬಂತು.
 • ೨೦೦೨-೦೩ ರಲ್ಲಿ ಭಾರತಾದ್ಯಂತ ಚರ್ಚಿತವಾದ ಮತ್ತೊಂದು ಹಗರಣ - ತಾಜ್ ಕಾರಿಡಾರ್ ಹಗರಣ. ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಸರಕಾರ ಕೆಂದ್ರದಲ್ಲಿದ್ದಾಗ ಉತ್ತರ ಪ್ರದೇಶದ ಮುಖ್ಯ ಮಂತ್ರಿಯಾಗಿದ್ದವರು ಮಾಯಾವತಿ. ಕೇಂದ್ರ ಪರಿಸರ ಸಚಿವಾಲಯದ ಅನುಮತಿ ಪಡೆಯದೆ ಪ್ರವಾಸಿಗರ ಅನಕೂಲಕ್ಕಾಗಿ ವಸತಿ ಇನ್ನಿತರ ಸೌಕರ್ಯಕ್ಕಾಗ್ಗಿ ಕೇಂದ್ರ ಸರಕಾರ ಮೀಸಲಿಟ್ಟಿದ್ದ ೧೭೫ ಕೋಟಿ ರೂ.ಗಳನ್ನು ಉತ್ತರ ಪ್ರದೇಶದ ಸರಕಾರ ಉಪಯೋಗಿಸಿತ್ತು.
 • ಕಾಂಗ್ರೆಸ್ ಸರ್ಕಾರವನ್ನ ನಾಚಿಸುವಂತೆ ಬಿ.ಜೆ.ಪಿ. & ಎನ್.ಡಿ.ಎ. ಸರ್ಕಾರಗಳು ಸಾಕಷ್ಟು ಭ್ರಷ್ಟಾಚಾರದ ಹಣ ಸಂಪಾದಿಸಿದ್ದಾರೆ. ಸಂಪಾದಿಸಿದ್ದಾರೆ. ಸಂಪಾದಿಸುತ್ತಿರುತ್ತಾರೆ. 
ಏಕೆಂದರೆ ಎಲ್ಲರೂ ಮೂಲತಃ ಭಾರತೀಯರು. ನಮ್ಮಲ್ಲಿ ನೀಡುವ & ಪಡೆಯುವ ಅಲ್ಲಗಳೆಯಲಾಗದ ಅವಶ್ಯಕತೆ ಇದೆ. 
 • ರಾಜಕೀಯ ಪುಢಾರಿಗೆ ಮುಂದಿನ ಚುನಾವಣೆ ಗೆಲ್ಲಬೇಕು. ಒಳ್ಳೆಯ ಕೆಲಸ ಮಾಡಿ ಮುಂದಿನ ಚುನಾವಣೆ ಗೆಲ್ಲಲು ಅವರಪ್ಪ - ಅಮ್ಮಂದಿರು ಹೇಳಿ ಕೊಟ್ಟಿಲ್ಲವಲ್ಲ !!
 • ದೇಶದ ಅತ್ಯುನ್ನತ ಅಧಿಕಾರಿಗಳಿಗೂ ಹಣ ಮಾಡುವ ದುರಾಸೆ. ಅಧಿಕಾರಮತ್ತರಾಗಿದ್ದಾಗ ಅವರ ದಿನಿತ್ಯದ ಪ್ರತಿ ಕ್ಷಣವೂ ಲಕ್ಸುರಿ ಯಾಗೇ ಇರಬೇಕು ಎನ್ನುವ ಅತ್ಯಾಸೆ. ತಾವಷ್ಟೇ ಅಲ್ಲ. ಹೆಂಡತಿ ಮಕ್ಕಳು ಕೂಡ.( ಇದು ಭ್ರಷ್ಟಾಚಾರವಲ್ಲ. ಆದರೆ ಕೆಲವೊಮ್ಮೆ ಅವರು ತೋರಿಸುವ ಸಣ್ಣತನ ನೋಡಿ : ಸಿ ಗುಂಪಿನ ನೌಕರರಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಯಲ್ಲಿ ಕೆಲವು ಚಿಕಿತ್ಸೆಗಳಿಗೆ ಮಾತ್ರ ಮರುಪಾವತಿ ಮಾಡಲಾಗುತ್ತದೆ. ಆದರೆ ಮೇಲಿನ ಅಧಿಕಾರಿಗಳಿಗೆ  ಒಂದು ಸಣ್ಣ 3 ರೂಪಾಯಿಯ ಮಾತ್ರೆಗೂ ಮರುಪಾವತಿ ಇರುತ್ತದೆ. ಆದರೆ ವಿಪರ್ಯಾಸವೆಂದರೆ : ನೂರಿನ್ನೂರು ರೂಪಾಯಿ ಮಾತ್ರ ಇದ್ದರೆ ಸಾಮಾನ್ಯ ನೌಕರರು ಮರುಪಾವತಿಗೆ ಅರ್ಜಿಯೇ ಸಲ್ಲಿಸೋದಿಲ್ಲ. ಅದೇ ಮೇಲಿನವರು ಆ ಮೂರು ರೂಪಾಯಿಯ ಮಾತ್ರಯನ್ನೂ ಬಿಡೋದಿಲ್ಲ. ಇದು Joke ಅಂತ ಸೃಷ್ಟಿಸಿ ಹೇಳಿದ್ದಲ್ಲ. ನೈಜ ಉದಾಹರಣೆಗಳಿದಾವೆ. ಇಂಥ ಸಣ್ಣತನ ತೋರಿಸಿ ತಮ್ಮ ಹಣಕ್ಕೆ ಆಣೆಕಟ್ಟು ಕಟ್ಟುವ ಬುದ್ಧಿ ಇರಬೇಕಾದರೆ, ಸರಕಾರದ ಹಣವನ್ನ ತಮ್ಮ ತಿಜೋರಿಗೆ ತಿರುಗಿಸುವ ಕಾಲುವೆ ತೋಡಲು ಹಿಂಜರಿಯುವರೇ ಅನ್ನುವುದು ಉದಾಹರಣೆಯ ಔಚಿತ್ಯ. )
 • ಸಾಮಾನ್ಯ ಕಚೇರಿ ನೌಕರರಿಗೂ ಹಣದ ಅವಶ್ಯಕತೆಯಿದೆ. ಕಾರಣ ಹಾಸಿಗೆಗೆ ತಕ್ಕಷ್ಟು ಕಾಲು ಚಾಚುವ ಹವ್ಯಾಸ ಇಲ್ಲದೇ ಇರುವುದು. ಸಂಬಳ ಸಾಲಲ್ಲ. ಭ್ರಷ್ಟಾಚಾರ ಸುಲಭ ದಾರಿ.
 • ಇತರೆ ವರ್ಗಕ್ಕೆ ಸೇರುವವನಿಗೆ ಸಕಾಲದಲ್ಲಿ ಕೆಲಸ ಆಗುತ್ತದೋ ಇಲ್ಲವೋ ಎನ್ನುವ ಆತಂಕವೇ ಭ್ರಷ್ಟಾಚಾರಕ್ಕೆ ಹೆದ್ದಾರಿ.
( ಇದು ಸಾಮಾನ್ಯವಾದ ಚಿತ್ರಣ. ಎಲ್ಲರೂ ಹಾಗೇ ಅಂತ ಆರೋಪ ಮಾಡಲಾಗಿದೆ ಅಂತ ತಿಳಿಯುವುದು ಬಾಲಿಶ )
 • ಕರ್ನಾಟಕದ ಪ್ರಸ್ತುತ ಬಿ.ಜೆ.ಪಿ. ಚುನಾವಣೆಗೆ ಹೋಗುವಾಗ : " ನೀವು 50 ವರ್ಷಗಳಲ್ಲಿ ಮಾಡದೇ ಇರುವುದನ್ನ ನಾವು ಮಾಡಿ ತೋರಿಸುತ್ತೇವೆ " ಎಂದು ಕಾಂಗ್ರೆಸ್ ಗೆ ಹಾಕಿದ ಸವಾಲಿನ ಅರ್ಥ ಇಡೀ ಕರ್ನಾಟಕದ ಜನತೆ ಮನಗಂಡಿದ್ದಾರೆ. 
ವ್ಹಾ !! ಕೇವಲ 30 ತಿಂಗಳ ಭ್ರಷ್ಟಾಚಾರದ ಪ್ರಖರತೆ ಎಷ್ಟಿದೆ ಅಂದ್ರೆ  ಹಿಂದಿನ 60 ವರ್ಷಗಳ ಭ್ರಷ್ಟಾಚಾರ ಇತಿಹಾಸವೇ ಕಾಣದಾಗಿದೆ. ಅಷ್ಟೊಂದು ಕಾಂತಿಯುತ ನಾವು ಇಷ್ಟಪಟ್ಟು ಆರಿಸಿದ ಸರ್ಕಾರದ ಸಾಧನೆ. ಒಬಾಮಾ ಹೇಳಿದ್ದರು : Yes We Can ! ಅದನ್ನ ಶ್ರೀ ಯಡಿಯೂರಪ್ಪನವರು ಕೃತಿಗಿಳಿಸಿ ಕೃತಾರ್ಥರಾಗಿದ್ದಾರೆ. ಮತದಾರ ಬಂಧುಗಳನ್ನೂ ಕೃತಾರ್ಥರನ್ನಾಗಿಸಿದ್ದಾರೆ. ದೊರೆಯೇ ಈ ದಾರಿ ಹಿಡಿದಿರಬೇಕಾದರೆ ಇನ್ನು ಮಂತ್ರಿಗಳ, ಅಧಿಕಾರಿಗಳ ದಾರಿ ಸುಗಮಾತಿ ಸುಗಮ.

ಇಂತಹ ನೂರಾರು ಹಗರಣಗಳು (ಬೆಳಕಿಗೆ ಬಂದವುಗಳು) ಕಾಣಸಿಗುತ್ತವೆ. ಕಳೆದ ಐದಾರು ತಿಂಗಳಲ್ಲಿ ಎಷ್ಟೋ ಹಗರಣಗಳು ಬೆಳಕಿಗೆ ಬಂದವು. ಐ.ಪಿ.ಎಲ್. ಹಗರಣ, ಕಾಮನ್ ವೆಲ್ತ್ ನಲ್ಲಿ ಅವ್ಯವಹಾರ, ಆದರ್ಶ ಹೌಸಿಂಗ್ ಸೊಸೈಟಿ ಹಗರಣ, ಟೆಲಿಕಾಂ ತರಂಗಾತರಗಳ ಹಂಚಿಕೆಯಲ್ಲಿ ಹಗರಣ... ಇಷ್ಟೇ ಅಲ್ಲ  ನ್ಯಾಯಾಂಗ ವ್ಯವಸ್ಥೆಯಲ್ಲೂ ಇವೇ ತುಂಬಿಕೊಂಡಿವೆ. ಕರ್ನಾಟಕದ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯ ನ್ಯಾಯಾಧೀಶರು ಸಾವಿರಾರು ಕೋಟಿ ರೂ.ಗಳ ಅವ್ಯವಹಾರದಲ್ಲಿ ಸಿಲುಕಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆ ಮಾಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 88 ನೇ ಸ್ಥಾನ. ಇದು ನಿಜವಾಗಿಯೂ ನಾಚಿಕೆಗೇಡಿನ ಸಂಗತಿ. ಹಗರಣಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಮಾತ್ರ ಸೀಮಿತವಾಗಿಲ್ಲ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿಗಳಲ್ಲೂ ಭ್ರಷ್ಟಾಚಾರದ ಪ್ರಕರಣಗಳು ಕಾಣಸಿಗುತ್ತವೆ. ಅಭಿವೃದ್ಧಿಯ ಹಾದಿಯಲ್ಲಿ ಇವುಗಳು ಅಡೆತಡೆಗಳಾಗಿವೆ.ಜಗತ್ತಿನ ಅತ್ಯುತ್ತಮ ಹಣಕಾಸು ತಜ್ಞರು, ರಾಜಕೀಯ ಚಿಂತಕರು ... ಇತ್ಯಾದಿಯವರು ನಮ್ಮ ದೇಶದಲ್ಲೂ ಇದ್ದರೂ ಅವರು ಪಡುವ ಪ್ರಯತ್ನಕ್ಕೆ ಸಹಕಾರ ನೀಡಬೇಕಿರುವುದು ಸರಕಾರವೇ ತಾನೇ ? ಅಂಥ ತಜ್ಞರು ಅನೇಕ ಸಲಹೆಗಳನ್ನೂ ನೀಡಿದ್ದಾರೆ. ಅದರಲ್ಲಿ ZERO CURRENCY ಕೂಡ ಒಂದು. ಈ ಝೀರೋ ಕರೆನ್ಸಿ ಬಗ್ಗೆ ನಿಮಗೇನಾದ್ರೂ ಗೊತ್ತಾ ? 
 : ಪವನ್

1 comment:

Blogger said...

eToro is the most recommended forex trading platform for new and full-time traders.

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ