ಸುದ್ದಿ : ಗಿನಿಯಾ ದೇಶದಲ್ಲಿ ಚುನಾವಣಾ ನಂತರ ಭುಗಿಲೆದ್ದ ಹಿಸಾಂಚಾರ
ಸ್ಥಳ ನಕ್ಷೆ :
- ಗಿನಿಯಾ ಎನ್ನುವ ಹೆಸರೇ ಗೊಂದಲಮಯವಾಗಿದೆ. ಕಾರಣ ನಮ್ಮ ಭೂಮಿಯಲ್ಲಿ
- ಆಫ್ರಿಕಾ ಖಂಡದ ಪಶ್ಚಿಮಕ್ಕೆ ಕಾಣಸಿಗುವ ಗಿನಿಯಾ ಭೂಪ್ರದೇಶವನ್ನ : ಗಿನಿಯಾ - Bissau & ಗಿನಿಯಾ - Conakry ಎಂದು ಆಯಾ ದೇಶಗಳ ರಾಜಧಾನಿಯ ಹೆಸರಿನ ಮೇಲೆ ವ್ಯತ್ಯಾಸ ಮಾಡಲಾಗುತ್ತದೆ.
- ನ್ಯೂ ಗಿನಿಯಾ ಎಂಬ ದ್ವೀಪವೊಂದಿದೆ. ಅದು ಆಸ್ಟ್ರೇಲಿಯಾ ಖಂಡದ ಮೇಲ್ಭಾಗದಲ್ಲಿ ಕಾಣಸಿಗುತ್ತದೆ.
- ಪಪುವಾ ನ್ಯೂ ಗಿನಿಯಾ ಇದು ನ್ಯೂ ಗಿನಿಯಾದ ಪೂರ್ವದ ಕಡೆಗಿನ ಭೂಪ್ರದೇಶ.
- ಈಗ ಸುದ್ದಿಯ ವಸ್ತುವಾಗಿರೋದು ಗಿನಿಯಾ - ಕೊನಾಕ್ರಿ. ಇಲ್ಲಿ ಮಿಲಿಟರಿ ಜುಂತಾ ಆಡಳಿತವಿದ್ದು, ಇದೀಗ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಪ್ರಯತ್ನವಾಗಿ ಚುನಾವಣೆಗಳು ಮುಕ್ತಾಯಗೊಂಡಿವೆ.
- ಚುನಾವಣೆಯಲ್ಲಿ Rally of The Guinean People ಪಕ್ಷದ Alpha Conde ವಿಜಯಿಯಾಗಿದ್ದಾರೆ.
- ಸದರಿ ದೇಶ ಗಿನಿಯಾ - ಬಿಸ್ಸಾಉ, ಸೆನೆಗಲ್, ಮಾಲಿ, ಕೋಟ್ ಡೆ ಐವರಿ, ಲೈಬೀರಿಯಾ & ಸಿಯೆರಾ ಲಿಯೋನ್ ದೇಶಗಳಿಂದ ಸುತ್ತುವರೆದಿದೆ.
- ವಿಸ್ತೀರ್ಣದಲ್ಲಿ ಹತ್ತಿರತ್ತಿರ ಯುನೈಟೆಡ್ ಕಿಂಗಡಮ್ ನಷ್ಟು ವಿಸ್ತಾರವಾಗಿದೆ.
: ರವಿ
No comments:
Post a Comment