ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 18, 2010

ಆರೆಸ್ಸೆಸ್ - 2

( ಆರ್.ಎಸ್.ಎಸ್  ಬಗ್ಗೆ ಸ್ಪರ್ಧಾರ್ಥಿ ತಾಣದಲ್ಲಿ ರವಿ ಬರೆದ ಅಂಶಗಳು ಮಾಹಿತಿ ಪ್ರದವಾಗಿದ್ದವು.  ) 


ಈ ಕುರಿತು ಇನ್ನಷ್ಟು ಹೇಳಬೇಕೆಂದರೆ   

  • ಆರ್ ಎಸ್ ಎಸ್  ಭಾರತದ  ಒಂದು  ಅತ್ಯಂತ ದೊಡ್ಡ ಸ್ವಯಂ ಸೇವಾ ಸಂಸ್ಥೆ ಎನ್ನಬಹುದು .
  • ಇದರ ಮುಖ್ಯಸ್ಥನನ್ನು  (ಪರಮೋಚ್ಚನಾಯಕ) ಸರಸಂಘಚಾಲಕ ಎನ್ನಲಾಗುತ್ತದೆ.
  • ಮೊದಲ ಸ.ಸ.ಚಾಲಕರು  ಕೇಶವ ಬಲಿರಾಮ ಹೆಡಗೆವಾರ್ .
  • ಆ ಬಳಿಕ  ಗುರೂಜಿ ಎಂದೇ ಖ್ಯಾತರಾದ ಗೊಳವಲ್ಕರ್ ಸ.ಸ.ಚಾಲಕರಾದರು. ಇವರ ಅವಧಿಯಲ್ಲಿಯೇ  ಸಂಘ ಹೆಚ್ಚು ಜನಪ್ರಿಯವಾಯಿತು. ಹಿಂದುತ್ವ , ಸ್ವದೇಶೀವಾದ ಮುಂತಾದವುಗಳಂತೆ ಈ ಸಂಸ್ಥೆಯ ಬಹುಪಾಲು ತತ್ವ ಸಿದ್ದಾಂತಗಳು ಇವರಿಂದ ರೂಪಿತವಾದವು.
  • ಆ ಬಳಿಕ  ಬಾಲಾಸಾಹೇಬ್, ರಜ್ಜು ಭಯ್ಯಾ, ಸುದರ್ಶನ್ & ಪ್ರಸ್ತುತ ಮೋಹನ್ ಭಾಗವತ್ ಇದನ್ನು ಮುನ್ನಡೆಸುತ್ತಿದ್ದಾರೆ.
  • ಕು.ಸೀ. ಸುದರ್ಶನ್ ( ಕುಪ್ಪಹಳ್ಳಿ ಸೀತಾರಾಮಯ್ಯ ಸುದರ್ಶನ್ ) ಕನ್ನಡಿಗರು. ಇವರೇ ಈಗ ವಿವಾದದಲ್ಲಿರುವವರು. 
  • ಆರ್.ಎಸ್.ಎಸ್  ಬಹಳ ವಿಸ್ತಾರವಾದ ಪರಿವಾರ ಹೊಂದಿದೆ.  ಅವು ವಿಶ್ವ ಹಿಂದೂ ಪರಿಷತ್ , ದುರ್ಗಾವಹಿನಿ , ವನವಾಸಿ ಕಲ್ಯಾಣ ಪರಿಷತ್  ಮುಂತಾದವು. ಇವಲ್ಲದೆ ಸಂಘದಿಂದ ತರಬೇತಿ ಹೊಂದಿ, ಪ್ರೇರಿತರಾಗಿ  ಅನೇಕರು   ಸೇವಾ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಉದಾ ಸು.ರಾಮಣ್ಣನವರ ಸಂಸ್ಕಾರ ಭಾರತಿ, ಅಜಿತ್ ಕುಮಾರರ ಅಜಿತ ಮನೋಚೇತನ ...ಇತ್ಯಾದಿ. 
  • ಈ ಸಂಸ್ಥೆಯ ಬಗ್ಗೆ  ಹೇಳುವಾಗ ಹೇಳಲೇ ಬೇಕಾದ ಇನ್ನೊಂದು ಮುಖ್ಯ ಸಂಗತಿ ಪ್ರಚಾರಕರ ಬಗ್ಗೆ. ಪ್ರಚಾರಕರೆಂದರೆ  ನಿಸ್ವಾರ್ಥ ಸೇವೆಗೆ ಇನ್ನೊಂದು ಹೆಸರು ಎನ್ನಬಹುದು. ಅಥವಾ ಅವರದು ರಾಷ್ಟ್ರ  ಸನ್ಯಾಸ ಎನ್ನಬಹುದು. ಅವರಿಗೆ ಯಾವುದೇ ವೇತನ ಇಲ್ಲ. ಇಡೀ ಜೀವನವನ್ನು ಸಂಸ್ಥೆಗಾಗಿ, ಸೇವೆಗಾಗಿ ಮೀಸಲಿಟ್ಟವರು. ಕವಿವಾಣಿಯಲ್ಲಿ ಹೇಳಿದಂತೆ '' ಹಣವಿಲ್ಲ. ಹಣ ಹಂಬಲವಿಲ್ಲ. ಅಧಿಕಾರದ ಬಂಧನವಿಲ್ಲ. ರಾಷ್ಟ್ರ ಭಕ್ತಿ ಸದ್ಗುಣಗಳನುಳಿದರೆ ಬಡತನವೇ ಮೈ ಮನವೆಲ್ಲ'' ಎನ್ನಬಹುದು. 
  • ಪಾಂಚಜನ್ಯ ಎನ್ನುವುದು ಸಂಘದ ಹಿಂದಿ ಭಾಷೆಯ ಮುಖವಾಣಿ. ಆಂಗ್ಲ ಭಾಷೆಯಲ್ಲಿ ಆರ್ಗನೈಸರ್ ( Organiser ) ಹೊರಡಿಸಲಾಗುತ್ತದೆ.
  • ಹಿಂದುಸ್ತಾನದಲ್ಲಿ  ಬದುಕುತ್ತಿರುವ ಎಲ್ಲರೂ ಹಿಂದುಗಳೇ ಎಂಬ ಸಂಘದ ಏಕತಾ ಮಂತ್ರ  ಭಾರತಿಯರೆಲ್ಲರಿಗೂ  ಅನುಕರಣೀಯವಾಗಿದೆ ಎನ್ನಬಹುದು. ಏಕೆಂದರೆ ಮೂಲತಃ ಹಿಂದೂ ಎನ್ನುವುದು  ಕೇವಲ ಧರ್ಮವಲ್ಲ. ಮಿಗಿಲಾಗಿ ಅದೊಂದು ಸಂಸ್ಕೃತಿ. ಅದೊಂದು Way of Living. ಅದನ್ನ ಪಾಲಿಸಿದರೆ ಧರ್ಮದ ಕಟ್ಟಳೆಗಳನ್ನ ಮೀರಿ ನಿಲ್ಲುವ ತತ್ವಗಳು ಅಲ್ಲಿವೆ. ಪ್ರಸ್ತುತ ನಮ್ಮ ದೇಶದ ಹಲವು ಸಮಸ್ಯೆಗಳಿಗೆ ಇದು ಪರಿಹಾರವು ಹೌದು.
  
 
: ರಾಮ ಭಟ್

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ