ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Oct 6, 2010

ನಿದ್ರೆ

" ನಿದ್ರೆ  "




ಸಸ್ಯಗಳನ್ನೂ ಒಳಗೊಂಡಂತೆ ಎಲ್ಲಾ ಜೀವಿಗಳಿಗೂ ನಿದ್ರೆ ಅತ್ಯಾವಶ್ಯಕ.  ಶಾರೀರಿಕ ಹಾಗೂ ಮಾನಸಿಕ ಬಳಲಿಕೆಯಿಂದ ಬಿಡುಗಡೆ ಹೊಂದುವುದು ನಿದ್ರೆಯಾಗಿದೆ.  ನಿದ್ರೆಯಲ್ಲಿದ್ದಾಗ ಉಸಿರಾಟ ನಿಧಾನವಾಗಿ ಹೃದಯದ ಬಡಿತ ಮಂದವಾಗುತ್ತದೆ.  ಆಗ ನಮ್ಮ ಶಾರೀರಿಕ ಚಟುವಟಿಕೆಗಳು ಬದಲಾಗುತ್ತದೆ.  ನಿದ್ರೆಯಲ್ಲಿದ್ದಾಗ ನಮ್ಮ ಚಟುವಟಿಕೆಗಳನ್ನು ನಿಯಂತ್ರಿಸುವುದು ಹೈಪೋಥಲಾಮಸ್ ಎಂಬ ಮೆದುಳಿನ ಅಂಗ.


:: ನಿದ್ರಾ ವಿಧಾನಗಳು ::


1. ತೂಕಡಿಸುವಿಕೆ
2. ಗಾಢವಲ್ಲದ ನಿಧಾನಗತಿಯ ನಿದ್ರೆ
3. ಗಾಢವಾದ ನಿಧಾನಗತಿಯ ನಿದ್ರೆ
4. ಕಣ್ಣು ಗುಡ್ಡೆಗಳನ್ನು ನಿಧಾನವಾಗಿ ಚಲಿಸುತ್ತಾ ಮಾಡುವ ನಿದ್ರೆ
ಗಮನಿಸಿ : ನಿದ್ರೆಯನ್ನು ಕಣ್ಣು ಮುಚ್ಚಿಕೊಂಡೇ ಮಾಡಬೇಕೆಂದೇನೂ ಇಲ್ಲ, ಕಣ್ಣು ತೆರೆದು ನಿದ್ರೆ ಮಾಡುವ ಮಹಾ ಪುರುಷರೂ ಉಂಟು !!


:: ಸೃಷ್ಟಿಯ ವೈಚಿತ್ರ್ಯಗಳು ::


  • ಪುರಾಣದ ಕುಂಭಕರ್ಣ ನಿದ್ರೆಗೆ ಹೆಸರುವಾಸಿ.
  • ಹಸುಗೂಸುಗಳು 24 ಗಂಟೆಯೂ ನಿದ್ರಿಸುತ್ತಿರುತ್ತವೆ.
  • ಧೃವ ಪ್ರದೇಶದ ಬಿಳಿ ಹಿಮಕರಡಿಗಳು 6 ತಿಂಗಳು ಮಲಗಿರುತ್ತವೆ.
  • ಉತ್ತರ ಅಮೇರಿಕಾದ ಕೆಲವು ಅಳಿಲುಗಳು 9 ತಿಂಗಳು ನಿದ್ರಿಸುತ್ತವೆ.
  • ಡಾಲ್ಫಿನ್ ಗಳ ಬಲ ಮೆದುಳು ನಿದ್ರಿಸುತ್ತಿದ್ದಾಗ ಎಡ ಮೆದುಳು ಕಾರ್ಯನಿರ್ವಹಿಸುತ್ತಿರುತ್ತದೆ.
ಇವಿಷ್ಟು ನಿದ್ರೆಯ ಬಗೆಗಿನ ವಿಶೇಷ ಸಂಗತಿಗಳಾದರೆ ನಿದ್ರೆಯ ಭಂಗಿಯನ್ನು ಅಭ್ಯಸಿಸಿ ಮನಶಾಸ್ತ್ರಜ್ಞರು ಈ ಕೆಳಕಂಡಂತೆ ವ್ಯಾಖ್ಯಾನಿಸಿದ್ದಾರೆ. 

*****
1. ಗರ್ಭಸ್ಥ ಮಗುವಿನಂತೆ ಕೈಕಾಲುಗಳನ್ನು ಮುದುರಿಕೊಂಡು ಕೆಲವೊಮ್ಮೆ ದಿಂಬನ್ನೋ / ಬಟ್ಟೆಯನ್ನೋ ಎದೆಗೆ ಒತ್ತಿ ಹಿಡಿದು ಮಲಗಿದರೆ
 - - -  ಅಂತಹವರಿಗೆ ತಮ್ಮ ರಕ್ಷಣೆಯ ಬಗ್ಗೆ ಗಾಬರಿ ಇರುತ್ತದೆ.
2. ಒಂದೇ ಮಗ್ಗುಲಲ್ಲಿ ಮಲಗುವವರು
 - - -  ಅಂತಹವರು ವ್ಯವಹಾರ ಚತುರರಾಗಿರುತ್ತಾರೆ.
3. ಮೊಣಕಾಲುಗಳನ್ನು ಮಡಿಚಿಕೊಂಡು ಬೋರಲಾಗಿ ಬೆನ್ನು ಮೇಲೆ ಮಾಡಿಕೊಂಡು ಮಲಗುವವರು
 - - - ಸಾಕಷ್ಟು ಕ್ಷಿಪ್ರರಾಗಿ ಜಾಗ್ರತೆಯಿಂದ ಕಾರ್ಯಶೀಲರಾಗಲು ತವಕಿಸುವವರಾಗಿರುತ್ತಾರೆ.
4.  ಎರಡೂ ಕೈಕಾಲುಗಳನ್ನು ಚಾಚಿಕೊಂಡು ಬೆನ್ನನ್ನು ನೆಲಕ್ಕೆ ಹಾಕಿ ಅಂಗಾಂತವಾಗಿ ಮಲಗುವವರು
 - - - ತಮ್ಮ ಬಗ್ಗೆ ತೀವ್ರ ಆತ್ಮವಿಶ್ವಾಸ ಹಾಗೂ ಸುಭದ್ರತೆಯನ್ನು ಹೊಂದಿರುವವರಾಗಿರುತ್ತಾರೆ.
5. ಬಿಲ್ಲಿನಂತೆ ಬಾಕಿ ಕೈಗಳನ್ನು ಕಾಲುಗಳ ಮಧ್ಯೆ ಇಟ್ಟುಕೊಂಡು ಮಲಗುವವರು
 - - - ಭವಿಷ್ಯದ ಬಗ್ಗೆ ಸಾಕಷ್ಟು ಭಯಭೀತರಾಗಿರುವವರು ಹಾಗೂ ಚಿಂತಾಕ್ರಾಂತರಾಗಿರುತ್ತಾರೆ.
6. ಮೈ ತುಂಬಾ ಹೊದ್ದುಕೊಂಡು ಮುದುರಿ ಮಲಗುವವರು
 - - -  ಬಾಹ್ಯ ಜಗತ್ತಿನೊಡನೆ ಹೋರಾಡಲು ಹೆದರುವ ಪುಕ್ಕಲು ಸ್ವಭಾವದವರಾಗಿರುತ್ತಾರೆ.
7. ಒಂದು ಕಾಲ ಮೇಲೆ ಮತ್ತೊಂದು ಕಾಲನ್ನಿಟ್ಟು ಕೈ ಮೇಲೆ   ಕೈಇಟ್ಟು ಮಲಗುವವರು
 - - - ಇಂತಹವರು ದೃಢ ಮನಸ್ಸಿನವರಾಗಿದ್ದು ಇತರರ ಅಪೇಕ್ಷೆಗೆ ತಮ್ಮ ನಿರ್ಧಾರಗಳನ್ನು ಬದಲಿಸುವುದಿಲ್ಲ.
8. ಬೆನ್ನು ಮೇಲೆ ಮಾಡಿಕೊಂಡು ಮಲಗುವವರು
 - - - ಯಜಮಾನಿಕೆಯನ್ನು ಅಪೇಕ್ಷಿಸುವ, ಹಠದ ಸ್ವಭಾವದ ಹಾಗೂ ಎಲ್ಲವನ್ನೂ ತನ್ನದನ್ನಾಗಿ ಮಾಡಿಕೊಳ್ಳಬೇಕೆನ್ನುವ ಬಯಕೆಯನ್ನು ಹೊಂದಿರುತ್ತಾರೆ.


***** 

 ಹಾಗಾದರೆ ಈಗ ಹೇಳಿ ನೀವು ಯಾವ ರೀತಿಯ ಸ್ವಭಾವದವರು ಅಂತಾ ?





: ಎಂ.ಬಿ.ಲಾವಣ್ಯ



.

4 comments:

ಪರಶು.., said...

ಲಾವಣ್ಯ ಮೇಡಂ ನಿದ್ರೆ ಬಗ್ಗೆ ಸ್ವಲ್ಪ ತನಿಖೆ ಮಾಡಿ ಚೆನ್ನಾಗಿ ಬರೆದಿದೀರಾ... ಆದರೆ ಇನ್ನೊಂದು ವಿಧದ ನಿದ್ರೆ ಬಗ್ಗೆನೂ ಸ್ವಲ್ಪ ಬರಿಬೇಕಿತ್ತು. ಅದೇ ಓದಲು ಪುಸ್ತಕ ಹಿಡಿದ ತಕ್ಷಣ ಬಂದು ಆವರಿಸುತ್ತಲ್ಲ ಆ ನಿದ್ರೆ ಬಗ್ಗೆ... ಪುಸ್ತಕ ಹಿಡಿದ ತಕ್ಷಣ ನಿದ್ರೆ ಮಾಡೋರು ಯಾವ ಕೆಟಗರಿಗೆ ಸೆರ್ತಾರೆ ಅಂತ ತಿಳ್ಕೋಬೇಕು ಅಂತ ಕುತೂಹಲ ಇದೆ...

Anamika said...
This comment has been removed by the author.
Anamika said...

ನಿದ್ರೆಯ ಬಗೆಗಿನ ನಿಮ್ಮ ಮಾಹಿತಿ ಆಸಕ್ತಿದಾಯಕವಾಗಿವೆ ..

ಇದೇ ರೀತಿ, ಏನು ಬರೆದರೆ ಚೆನ್ನ ಅಂಥ ದೀರ್ಘ ಆಲೋಚನೆಯಲ್ಲಿ ತೊಡಗಿರುವ ಸ್ಪರ್ಧಾರ್ಥಿಯ ಎಲ್ಲ ಓದುಗರೂ ಪಾಲ್ಗೊಂಡರೆ ಬಹಳ ಖುಷಿ. ಬರೆದರೆ ತಾನೆ ನಿಮ್ಮ Assessment ಆಗೋದು. ಬರೆಯದೇ ಅಂಕ ಬೇಕು ಅಂದ್ರೆ ಹೇಗೆ ?

ಲಾವಣ್ಯ ಅವರ ಮಾಹಿತಿಗೆ ಪೂರ್ತಿ ಅಂಕಗಳು.(ನನ್ನ ಕಡೆಯಿಂದ)

- ಅನಾಮಿಕ

Ram creation said...

super

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ