ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Sep 8, 2010

ಭಾರತ-ಮ್ಯಾನ್ಮಾರ್ ದ್ವಿಪಕ್ಷೀಯ ಸಂಬಂಧಗಳು


            



ದೇಶದ ಅಭಿವೃದ್ಧಿ ದೃಷ್ಟಿಯಿಂದ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದುವುದು ಅನಿವಾರ್ಯ. ಆದರೆ, ಭಾರತಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಪಾಕಿಸ್ತಾನದ ವಿಷಯಗಳಲ್ಲಿ ವಿರೋಧಾಭಾಸಗಳನ್ನು ಕಾಣುತ್ತೇವೆ. ಪ್ರಜಾತಂತ್ರ ವ್ಯವಸ್ಥೆಯನ್ನು ಬಲವಾಗಿ ನಂಬಿರುವ ಭಾರತ ತನ್ನ ನೆರೆಹೊರೆಯ ದೇಶಗಳಲ್ಲೂ ಅಂತಹ ವ್ಯವಸ್ಥೆಯಿರಬೇಕೆಂದು ಬಯಸುತ್ತದೆ. ತಾನು ನಂಬಿರುವ ಸಿದ್ಧಾಂತವನ್ನು ಬದಿಗಿಟ್ಟು ಪ್ರಜಾತಂತ್ರ ವ್ಯವಸ್ಥೆಗೆ ಕೊಳ್ಳೆಯಿಟ್ಟಿರುವ, ಮಿಲಿಟರಿ ಆಡಳಿತವಿರುವ ಮ್ಯಾನ್ಮಾರದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಹವಣಿಸುತ್ತಿದೆ. ಏಕೆ?

:: ಭಾರತ-ಮ್ಯಾನ್ಮಾರ ಒಪ್ಪಂದಗಳು ::

ಜುಲೈ ಕೊನೆಯ ವಾರದಂದು ಮ್ಯಾನ್ಮಾರಿನ ಆಡಳಿತವನ್ನು ತನ್ನ ಹತೋಟೆಗೆ ತೆಗೆದುಕೊಂಡಿರುವ (ಕಳೆದ 18 ವರ್ಷಗಳಿಂದ) ಜನರಲ್ ಥಾನ್ ಶ್ವೇಯವರು ಭಾರತಕ್ಕೆ ಭೇಟಿಕೊಟ್ಟಿದ್ದರು. ಆ ಸಂದರ್ಭದಲ್ಲಿ ಎರೆಡೂ ದೇಶಗಳು ಮಾನವ ಹಕ್ಕು ಕಾರ್ಯಕರ್ತರ ವಿರೋಧದ ನಡುವೆ ಅನೇಕ ಒಪ್ಪಂದಗಳಿಗೆ ಸಹಿ ಹಾಕಿವೆ. ಆರ್ಥಿಕ, ಸಾಂಸ್ಕೄತಿಕ, ಶಕ್ತಿ ಹಾಗೂ ಭದ್ರತೆ ಈ ವಿಷಯಗಳಲ್ಲಿ ಒಪ್ಪಂದಗಳು ಏರ್ಪಟ್ಟಿವೆ. ಭಾರತದ ಪುರಾತತ್ವ ಇಲಾಖೆ ಮ್ಯನ್ಮಾರಿನ ಬಾಗನ್ (Bagan) ಎಂಬಲ್ಲಿನ ಆನಂದಾ(Ananda) ಎಂಬ ಐತಿಹಾಸಿಕ

  ಆನಂದಾ ದೇವಸ್ಥಾನ
ದೇವಸ್ಥಾನವನ್ನು ನವೀಕರಿಸುವಲ್ಲಿ ಸಹಾಯಮಾಡಲಿದೆ. ರಸ್ತೆ, ರೈಲು, ( Telecom ) ದೂರಸಂಪರ್ಕ, ಬ್ಯಾಂಕಿಂಗ್ ಹಾಗೂ ಅರ್ಥಿಕಾಭಿವೃದ್ಧಿ ಈ ಎಲ್ಲ ರಂಗಗಳಲ್ಲಿ ಸಹಾಯ ಮಾಡಲು ಒಪ್ಪಂದಗಳಿಗೆ ಸಹಿ ಹಾಕಿದೆ. ಕೃಷಿ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು $10 ಮಿಲಿಯನ್ ನಷ್ಟು ಆರ್ಥಿಕ ಸಹಾಯ ಮಾಡಲು ನವದೆಹಲಿ ಮಾತು ಕೊಟ್ಟಿದೆ. ಸಂಸದೀಯ ಸಂಸ್ಥೆಯನ್ನು ಸ್ಥಾಪಿಸಲು ಮ್ಯಾನ್ಮಾರನ ಅಧಿಕಾರಿಗಳಿಗೆ ತರಬೇತಿ ನೀಡುವುದಾಗಿ ಭಾರತ ಹೇಳಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಮ್ಯಾನ್ಮಾರ್ ಪ್ರವಾಸಕ್ಕೆ ಹೋದಾಗ (ಮಾರ್ಚ್ ತಿಂಗಳಿನಲ್ಲಿ) ಮೂಲಭೂತ ಸೌಕರ್ಯ, ತೈಲ ಮತ್ತು ನೈಸರ್ಗಿಕ ಅನಿಲ ಶೋಧಿಸುವಿಕೆಯಲ್ಲಿ ಬಂಡವಾಳ ಹೂಡುವುದಾಗಿ ತಿಳಿಸಿದ್ದಾರೆ.

ಮ್ಯಾನ್ಮಾರದೊಂದಿಗೆ ಸಂಬಂಧ ಬೆಸೆಯಲು ಕಾರಣಗಳು :

ಮ್ಯಾನ್ಮಾರದೊಂದಿಗೆ ಉತ್ತಮ ಸಂಬಂಧ ಹೊಂದಲು ಪ್ರಮುಖ ಕಾರಣ, ಅಲ್ಲಿ ಹೆಚ್ಚಿಗೆಯಾಗುತ್ತಿರುವ ಚೀನಾದ ಪ್ರಭಾವ. ಇದು ಭಾರತವನ್ನು ಚಿಂತೆಗೀಡುಮಾಡಿದೆ. ಅಲ್ಲಿ ಚೀನಾದ ಪ್ರಭಾವವನ್ನು ಮೆಟ್ಟಿ ನಿಲ್ಲಬೇಕಾಗಿದೆ. ಭಾರತದ 'ಪೂರ್ವದತ್ತ ನೋಡು ನೀತಿ' (India's Look East Policy) ಹಾಗೂ ನಮ್ಮ ದೇಶದ ಈಶಾನ್ಯ ಗಡಿಯಲ್ಲಿ ಸಂಭವಿಸುವಂತಹ ದಂಗೆಗಳನ್ನು ಹತ್ತಿಕ್ಕುವಲ್ಲಿ ಮ್ಯಾನ್ಮಾರನ ಜುಂಟಾ ( JUNTA ) ಆಡಳಿತ ಸಹಕರಿಸುತ್ತಿದೆ. ಅಷ್ಟೇ ಅಲ್ಲ, ಅಲ್ಲಿನ ದೊಡ್ಡ ಪ್ರಮಾಣದ ನೈಸರ್ಗಿಕ ಅನಿಲದ ಮೇಲೆ ಭಾರತ ಕಣ್ಣಿಟ್ಟಿದೆ. ಇದು ಆರ್ಥಿಕಾಭಿವೃದ್ಧಿಯಲ್ಲಿ ನೆರವಾಗಲಿದೆ. ಈ ಎಲ್ಲ ಕಾರಣಗಳಿಂದ ಭಾರತ ಮ್ಯಾನ್ಮಾರದೊಂದಿಗಿನ ದ್ವಿಪಕ್ಷೀಯ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡಿದೆ.

: ಪವನ್


ಲೇಖಕರ ಸಂಪರ್ಕ ವಿಳಾಸ : mahapavan@gmail.com
.

2 comments:

MANJUDADA said...

ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ.ಧನ್ಯವಾದಗಳು.

Anamika said...

ನಮ್ಮ ಪತ್ರಿಕೆಗೆ ಪವನ್ ರನ್ನ ಪ್ರಚಲಿತ ವಿದ್ಯಮಾನಗಳ ರಿಪೋರ್ಟರ್ ಮಾಡಿದರೆ ಸರಿ ಅನ್ಸುತ್ತೆ .. ಅಲ್ವಾ ? ಇದೇ ರೀತಿ ಪ್ರತಿ ದಿನದ ವಿದ್ಯಮಾನಗಳನ್ನ ವಿಮರ್ಶಿಸಿ ಬರೀತಾ ಇರಿ ...

ಪವನ್ ಬರಹದ ಜೊತೆಗೆ ವಿಕಿಯ ಈ ಲಿಂಕ್ ಅನ್ನೊಮ್ಮೆ ಪರಿಶೀಲಿಸಿ :

http://en.wikipedia.org/wiki/Burma%E2%80%93India_relations

- ಅನಾಮಿಕ

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ