ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Sep 9, 2010

ಆನ್ಸರ್ಸ.ಕಾಮ್ {Answers.com}

ಏನಿದು Answers.Com ? ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವ ತಾಣವಾ ? ಹೌದು. ಆದರೆ ಇದೊಂದು ರೀತಿಯ ವಿಶ್ವಕೋಶದಂತೆ ಕೆಲಸ ಮಾಡುತ್ತಿದೆ.

ಜನವರಿ 2005ರಲ್ಲಿ ಆರಂಭಗೊಂಡು ಇವತ್ತಿಗೂ ಸೇವೆ ನೀಡುತ್ತಿರುವ ಈ ತಾಣ ಒಂದು ಜನಪ್ರಿಯ ತಂತ್ರಾಂಶವೊಂದರ ಒಡೆಯನೂ ಹೌದು. One Click Answers Software ( ಇತ್ತಿಚೆಗೆ ಆ ತಂತ್ರಾಂಶದ wikipedia edition ಕೂಡ ಬಂದಿದೆ ) ಎಂಬುದೇ ಆ ತಂತ್ರಾಂಶ. ಅಮೆರಿಕದ ಜನಪ್ರಿಯ ತಾಣಗಳಲ್ಲಿ ಇದು ಕೂಡ ಒಂದು. ವಿಕಿಪೀಡಿಯಾದಷ್ಟೇ ಈ ತಾಣವೂ ಜಗದ್ವಿಖ್ಯಾತ. ಈ ಕಾರಣಕ್ಕಾಗಿಯೇ ನಿಮಗೂ ಪರಿಚಯಿಸುವ ಮನಸ್ಸಾಯಿತು. 

ಇದರಲ್ಲಿನ ಕೆಲವು ಸಲಕರಣೆಗಳು ( Tools ) ಗಳು ಅಮೆರಿಕಕ್ಕಾಗಿ ಮಾತ್ರ ಸೀಮಿತಗೊಂಡು ತಯಾರಾದಂತಿದಾವೆ. ಅವನ್ನು ನೋಡಿ ನನಗೆ ಹೊಳೆದ ಯೋಜನೆ ಏನಂದ್ರೆ ಅಂಥವೇ Tool ಗಳನ್ನ ನಮ್ಮಲ್ಲಿನ ತಂತ್ರಜ್ಞರು ನಮ್ಮ ನಾಡ ಬಗ್ಗೆ ಏಕೆ ತಯಾರು ಮಾಡಬಾರದು ಅಂತ ?!! ಅವರ ಆ ತಂತ್ರಾಂಶದ ಪ್ರಕಾರ ಪ್ರತಿ ದಿನ ನಮ್ಮ ಕಂಪ್ಯೂಟರ್ ಶುರು ಮಾಡಿದ ತಕ್ಷಣ ಒಂದು ಪುಟ ತೆರೆಯುವ ಹಾಗೆ ಮಾಡಿದಾರೆ. ಅದರಲ್ಲಿ ಆ ದಿನದ ದಿನ ವಿಶೇಷ ಮೂಡುತ್ತೆ. 100 ಪ್ರತಿಶತ ಅಮೆರಿಕಕ್ಕೆ ಸಂಬಂಧಿಸಿದ ದಿನವಿಶೇಷ ಅಲ್ಲಿರುತ್ತೆ. ನೀವು ಭಾರತದಲ್ಲಿದ್ದುಕೊಂಡು ಆ ತಂತ್ರಾಂಶ ಬಳಸಿದರೂ ಅದೇ ಮಾಹಿತಿ ನೀಡುತ್ತದೆ. ಅಂತೆಯೇ ನಮ್ಮ ನಾಡಿಗೆ ಸಂಬಂಧಪಟ್ಟ ಹಾಗೆ ಅಂಥದೊಂದು ತಂತ್ರಾಂಶ ತಯಾರಿಸಿ, ನಮ್ಮ ನಾಡಿನ ಹಿರಿಮೆ - ಹೆಮ್ಮೆಗಳನ್ನ ಅದರಲ್ಲಿ 'ಬಿತ್ತಿ' ದಿನವೂ ಹೊಸ ಹೊಸ ಮಾಹಿತಿಯನ್ನ ಉಣಬಡಿಸಿದರೆ ಜ್ಞಾನವೃದ್ಧಿಗೆ ಮಾರ್ಗವೊಂದು ದೊರೆತಂತಲ್ಲವೆ ?!!

ಸಂಸ್ಥೆಯ ತಾಣದಲ್ಲಿ ಆ Tool ಗಳನ್ನ ಉಚಿತವಾಗಿ Download ಮಾಡಿಕೊಳ್ಳಬಹುದು ...






ತಾಣದ ವಿಕಿ ಪುಟ : http://en.wikipedia.org/wiki/Answers.com


ಈ ತಾಣದಲ್ಲಿ ನಿಮ್ಮ ಅನೇಕ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ ಅನ್ನುವ ಆಶಯದ 

ಜೊತೆಗೆ 

ಅಮೆರಿಕಕ್ಕೆ ಕೆಲಸ ಮಾಡಿಕೊಡುವ ನಮ್ಮ ತಂತ್ರಜ್ಞರು ತಮ್ಮ ತಾಯ್ನಾಡಿಗೆ ಇಂಥದೊಂದು ಕೆಲಸ ಮಾಡಿಕೊಟ್ಟರೆ ಆಗೊಲ್ಲವೆ ? 

ಅಂತ ಪ್ರಶ್ನಿಸುತ್ತಾ ....


ಇಂತಿ,


: ರವಿ



.

2 comments:

solvent said...

adannu maadlikke yaaru rokka kodtaara?

ವಿ.ರಾ.ಹೆ. said...

ಅಮೆರಿಕಾದಲ್ಲಿರುವವರೇ ಮಾಡಿಕೊಡಬೇಕೆನ್ನುವುದ್ಯಾಕೆ, ಇಲ್ಲಿರುವವರು ಮಾಡಿದರೂ ಆಗುತ್ತದೆ .

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ