ಆರ್ಥಿಕ ಹಿಂಜರಿತ ಅಮೇರಿಕಾವನ್ನು ಮತ್ತೆ ಕಾಡುತ್ತಿದೆ. ೨೦೦೮ ರಲ್ಲಿ ಆರ್ಥಿಕ ಹಿಂಜರಿತ ಸಂಭವಿಸಿದಾಗ ಆರ್ಥಿಕ ತಜ್ಞರು ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮೂರು ವರ್ಷಗಳು ಬೇಕಾಗುತ್ತವೆ ಎಂದು ತಿಳಿಸಿದ್ದರು. ಆದರೆ ಅಮೇರಿಕ recession ಗೆ ಮತ್ತೆ ಜಾರುತ್ತಿದೆ. ದೇಶದ ಆರ್ಥಿಕ ವೃದ್ಧಿ ದರವು ನಿರೀಕ್ಷಿತ ಮಟ್ಟಕ್ಕಿಂತಲೂ ಕಡಿಮೆಯಾಗಿರುವುದು ಹಾಗೂ ಉದ್ಯೋಗಾವಕಾಶ ಕುಂಠಿತಗೊಳ್ಳುತ್ತಿರುವುದು ಆತಂಕ ಸೃಷ್ಟಿಸಿದೆ. ಆಗಸ್ಟ ತಿಂಗಳಲ್ಲಿ ನಿರುದ್ಯೋಗಿಗಳ ಪ್ರಮಾಣ ಶೇ.9.5 ರಿಂದ ಶೇ.9.6 ಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳೊಂದರಲ್ಲೇ 54000 ಜನರು ನಿರುದ್ಯೋಗಿಗಳಾಗಿದ್ದರೆ. " ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಮತ್ತು ಅದಕ್ಕೆ ಬ್ಯಾಂಕ್ ಸೌಲಭ್ಯ ಹೆಚ್ಚಿಸಲು ಬೇಕಾದ ಕಾನೂನು ರೂಪಿಸಲು ಅನಗತ್ಯ ವಿಳಂಬ ಮಾಡಿದ್ದೇವೆ" ಎಂದು ಬರಾಕ್ ಒಬಾಮಾ ತಿಳಿಸಿದ್ದಾರೆ. ಸಣ್ಣ ಕೈಗಾರಿಕೆಗಳಿಗೆ ಸಾಲ ನೀಡಲು ಸಮುದಾಯ ಬ್ಯಾಂಕುಗಳ ಧನ ಸಹಾಯಕ್ಕಗಿ ೩೦ ಶತಕೋಟಿ ಡಾಲರ್ ನಿಧಿ ಸ್ಥಾಪಿಸಲು ಅಮೇರಿಕ ಸರ್ಕಾರ ಯೋಚಿಸುತ್ತಿದೆ.
ಆರ್ಥಿಕ ಹಿಂಜರಿತದಿಂದ ರಕ್ಷಣೆಯನ್ನು ನೀಡುವುದರ ನಿಟ್ಟಿನಲ್ಲಿ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಸೆಪ್ಟೆಂಬರ್ 6 ರಂದು ಆರ್ಥಿಕ ಉತ್ತೇಜನ ಪ್ಯಾಕೇಜನ್ನು ಪ್ರಕಟಿಸಿದರು.ರಸ್ತೆಗಳು, ರೈಲುಗಳು, ವಿಮಾನ ನಿಲ್ದಾಣ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ನವೀಕರಣಕ್ಕಾಗಿ $50 ಬಿಲಿಯನ್ ನಷ್ಟು ಮೀಸಲಿಡಲು ಅಮೇರಿಕ ಸರಕಾರ ನಿರ್ಧರಿಸಿದೆ. ಕಾರ್ಯಕ್ರಮದ ಯೋಜನೆಯನ್ನು ರೂಪಿಸಲು ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ನಿಧಿ ಹಂಚಿಕೆಯ ಸಮನ್ವಯ ಸಾಧಿಸಲು "Infrastructure Bank"ನ್ನು ಸ್ಥಾಪಿಸಲಿದೆ.
: ಪವನ್
ಲೇಖಕರ ಸಂಪರ್ಕ ವಿಳಾಸ : mahapavan@gmail.com
.
No comments:
Post a Comment