ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Aug 21, 2010

National Cadet Corps ( NCC ) ಎನ್.ಸಿ.ಸಿ. ಪರಿಚಯ & ಉಪಯೋಗಗಳು

[ ಈ ಲೇಖನ ಬರೆಯೋದಕ್ಕೆ ಸರಿಯಾಗಿ ಎರಡು ಗಂಟೆ ತಗೊಂಡಿದೀನಿ. ಪ್ರತಿ ದಿನ ನಿಮಗೆ ಬರುವ email ಗಳನ್ನ ಓದಿ ಪಟ್ಟಾಗಿ ಕೂತ್ಕೊಂಡ್ರೆ ಆಗಲ್ಲ ಕಣ್ರೀ !! ಪ್ರತಿಕ್ರಿಯೆ ನೀಡೋದನ್ನ ಮರೆತಿದೀರಾ ನೀವೇಲ್ಲಾ. ಬರುವ ಆ email ಗೇನೇ Reply ಮಾಡುವ ಸೌಜನ್ಯತೆ ಬೆಳೆಸಿಕೊಳ್ಳಿ. ಇಲ್ಲವಾದಲ್ಲಿ ಇಷ್ಟೆಲ್ಲ ಕಷ್ಟಪಟ್ಟು ಲೇಖನ ಬರೆದು ಅದಕ್ಕೆ ಟೀಕೆ- ಟಿಪ್ಪಣಿ ಪಡೆಯದೇ ಇರೋದು ನಂಗೂ ಒಳ್ಳೇದಲ್ಲ ನೀಡದೇ ಇರೋದು ನಿಮಗೂ ಒಳ್ಳೇದಲ್ಲ !! ಏನಂತೀರಾ ? ನೋಡೋಣ ಇವತ್ತಿಂದ ಎಷ್ಟು ಪ್ರತಿಕ್ರಿಯೆ ಬರುತ್ತೆ ಅಂತ. ಹೊಗಳೋದಷ್ಟೇ ಪ್ರತಿಕ್ರಿಯೆಯಲ್ಲಾ ? ತಪ್ಪುಗಳನ್ನ ಎತ್ತಿ ತೋರಿಸೋದು  ಕೂಡ. ನೀವು 150+ ಜನ ಲೇಖನ ಓದ್ತಿರೋದು ನಂಗೆ ಗೊತ್ತಾಗೋದು ಹೇಗೆ ಹೇಳಿ. ನಾನು ಮಹಾಭಾರತದ ಸಂಜಯ ಅಲ್ವಲ್ಲಾ ?!! ]






National Cadet Corps ( NCC ) ಇದು ಎಲ್ಲ ವಿಧ್ಯಾರ್ಥಿಗಳಿಗೆ ಚಿರಪರಿಚಿತ ಹೆಸರು. ಪ್ರೌಢಶಾಲೆಯ ಮಟ್ಟದಿಂದ ಪ್ರಾರಂಭವಾಗಿ ಒಟ್ಟು 5 ವರ್ಷದ ತರಬೇತಿಯಾದ ಇದು ಹೊಂದಿರುವ Benefits ಅನೇಕ. ಇದೊಂದು ರೀತಿಯ Scholarship ಅಂತಲೇ ಹೇಳಬೇಕು ಅಥವಾ ಹೀಗೆ ಹೇಳೋಣ " Scholarship ಗಳ बाप ". ಸದರಿ ಸಂಸ್ಥೆಯ ನಿಯೋಜಿತ ಅಧಿಕಾರಿಗಳೇ ನಮಗೆ ನೀವೂ NCC ಸೇರಿಕೊಳ್ಳಿ ಅಂತ ಉಚಿತ Offer ಕೊಟ್ಟು ನಾವಲ್ಲಿಗೆ ಸೇರಿಕೊಂಡಾಗ ನಮ್ಮ ವ್ಯಕ್ತಿತ್ವ ಸುಧಾರಣೆಗೆ ಬೇಕಾದ ಎಲ್ಲವನ್ನೂ ಅಲ್ಲಿ ನೀಡಿ ನಮ್ಮನ್ನ Gentleman Cadet ಮಾಡಿ ಕಳಿಸ್ತಾರೆ. ಬನ್ನಿ ಈ NCC ಬಗ್ಗೆ ಸ್ವಲ್ಪ ಹೆಚ್ಚಿಗೆ ತಿಳಿದುಕೊಳ್ಳೋಣ.

:: ಸಂಸ್ಥೆಯ ಇತಿಹಾಸ ::

ಭಾರತ ಸರ್ಕಾರದ ರಕ್ಷಣಾ ಇಲಾಖೆಯಡಿಯಲ್ಲಿ ಕರ್ತವ್ಯ ನಿರ್ವಹಿಸುವ ಈ ಸಂಸ್ಥೆ National Cadet Corps Act XXXI ಮೂಲಕ 16ನೇ ಏಪ್ರಿಲ್ 1948ರಂದು ಸ್ಥಾಪನೆಯಾಗಿ 15ನೇ ಜುಲೈ 1948ರಿಂದ ಇವತ್ತಿನವರೆಗೂ ಕಾರ್ಯನಿರತವಾಗಿದೆ. ಜುಲೈ 1949ರಲ್ಲಿ ಮಹಿಳಾ NCC Wing ಕೂಡ ಪ್ರಾರಂಭವಾಯ್ತು. ಸಂಸ್ಥೆ ಪ್ರಾರಂಭವಾದಾಗ ಭೂಸೇನೆ ಮಾತ್ರ  ಭಾಗವಾಗಿದ್ದು, ತದನಂತರ 01ನೇ ಏಪ್ರಿಲ್ 1950ರಲ್ಲಿ ವಾಯುಪಡೆ ಮತ್ತು ಜುಲೈ 1952ರಲ್ಲಿ ನೌಕಾಸೇನೆಯೂ ಸೇರಿಕೊಂಡು ಸಂಪೂರ್ಣ ತರಬೇತಿಗೆ ಸನ್ನದ್ಧವಾಯಿತು. ಇವತ್ತು 13 ಲಕ್ಷಕ್ಕೂ ಅಧಿಕ Cadets ಈ ಸಂಸ್ಥೆಯ ಲಾಭ ಪಡೆದುಕೊಳ್ತಿದಾರೆ. 


:: ಧ್ಯೇಯ ::

1. To Develop Character, Comradeship, Discipline, Leadership, Secular Outlook, Spirit of Adventure, and Ideals of Selfless Service amongst the Youth of the Country.  

2. To Create a Human Resource of Organized, Trained and Motivated Youth, To Provide Leadership in all Walks of life and be Always Available for the Service of the Nation.

3. To Provide a Suitable Environment to Motivate the Youth to Take Up a Career in the Armed Forces.

" Unity & Discipline " / " ಏಕತೆ & ಶಿಸ್ತು " / " एकता और अनुशासन "
ಇದು ಸಂಸ್ಥೆಯ MOTTO


:: ಸಂಸ್ಥೆಯ ' Organisation Chart ' ::





:: ಹಂತಗಳು ::

ಇಲ್ಲಿ Junior Division ( 2 ವರ್ಷ ) ಮತ್ತು Senior Division ( 3 ವರ್ಷ ) ಅಂತ ಎರಡು ಭಾಗಗಳಿದ್ದು
  • ಪ್ರೌಢಶಾಲಾ ಮಟ್ಟದಲ್ಲಿ 2 ವರ್ಷದ ಈ ತರಬೇತಿ ಪಾಸು ಮಾಡಿದರೆ A Certificate ದೊರೆಯುತ್ತದೆ. 
  • ನಂತರ ಕಾಲೇಜಿನಲ್ಲಿ 2 ವರ್ಷದ ತರಬೇತಿಗೆ B Certificate ದೊರೆಯುತ್ತದೆ. 
  • ಇನ್ನೂ ಒಂದು ವರ್ಷ ಮುಂದುವರೆಸಿದರೆ C Certificate ದೊರೆಯುತ್ತದೆ. 

ಯಾವ ಶಾಲೆಯಲ್ಲಿ / ಕಾಲೇಜಿನಲ್ಲಿ NCC ಇದೆಯೋ ಆ ಶಿಕ್ಷಣ ಸಂಸ್ಥೆಯ ಎದುರಿಗೆ ಮೇಲ್ಕಾಣಿಸಿದ ಚಿತ್ರದಲ್ಲಿರುವ ಹಾಗೆ ಕಡ್ಡಾಯವಾಗಿ ಫಲಕವೊಂದನ್ನ ಹಾಕಿರುತ್ತಾರೆ. ನೀವು ಸೇರುವ ಶಾಲೆ / ಕಾಲೇಜಿನಲ್ಲಿ ಆ ಫಲಕ ಇದ್ದರೆ ಮಾತ್ರ ಪ್ರವೇಶ ತೆಗೆದುಕೊಳ್ಳಿ ಅನ್ನೋದು ನನ್ನ ಸಲಹೆ. ಈ ಹಂತಗಳಲ್ಲಿ ನಮಗೆ ಪಾಠ ಹೇಳಲು ನಮ್ಮ ಅಧ್ಯಾಪಕ ವೃಂದದವರಲ್ಲೇ ಒಬ್ಬರು NCC Instructor ಆಗಿರ್ತಾರೆ. ಅವರನ್ನ ವಿಚಾರಿಸಿದರೆ ಸಂಸ್ಥೆಗೆ ಸೇರುವ ಬಗೆಯನ್ನ ತಿಳಿಸಿ ಕೊಡ್ತಾರೆ. ಈ ಅಧ್ಯಾಪಕರು NCC Instructor ಆಗಲು ಅವರಿಗೂ ಕೂಡ ತರಬೇತಿ ಕೇಂದ್ರಗಳಿದಾವೆ. ಪುರುಷ ಅಧಿಕಾರಿಗಳಿಗೆ Officer Training Institute ( OTA )  ಕಾಂಪ್ಟೀ , ಕಾನ್ಪುರ್( ಮಹಾರಾಷ್ಟ್ರ ) ನಲ್ಲಿ ಮತ್ತು ಮಹಿಳಾ ಅಧಿಕಾರಿಗಳಿಗೆ Officer Training Institute ( OTA ) ಗ್ವಾಲಿಯರ್ ( ಮಧ್ಯಪ್ರದೇಶ್ ) ನಲ್ಲಿ ತರಬೇತಿ ಸಂಸ್ಥೆಗಳಿದಾವೆ.

:: ಆಯ್ಕೆ ::

ಪ್ರತಿ ವರ್ಷ ಶಾಲೆ / ಕಾಲೇಜು ಶುರುವಾದ ಸ್ವಲ್ಪ ದಿನದಲ್ಲೇ NCCಗೆ ಆಯ್ಕೆ ನಡೀತದೆ. ಹೆಸರು ನೀಡಿರುವ ಎಲ್ಲ  ವಿದ್ಯಾರ್ಥಿಗಳೂ ಅದೊಂದು ದಿನ ಬೆಳಿಗ್ಗೆ 6 ಗಂಟೆಗೆಲ್ಲ ಹಾಜರಾಗಿರಬೇಕು. ಮೊದಲ Minus Point ನಿಮ್ಮ ಎತ್ತರ. ನಿಮ್ಮ ಎತ್ತರ ಕಡಿಮೆ ಇದ್ದರೆ ನೀವು OUT !!. ನಂತರ ಓಟ. ಬಹುತೇಕ ಕಡೆ ಇಷ್ಟನ್ನೇ ಮಾನದಂಡವಾಗಿ ಮಾಡಿಕೊಂಡಿರುತ್ತಾರೆ. ಇನ್ನು ಏನಾದರೂ ವಿಪರೀತ ಆರೋಗ್ಯ ಸಮಸ್ಯೆಯಿದ್ದವರ ಬಗ್ಗೆ ಮುಂಚೆಯೇ ವಿಚಾರಿಸಿ, ಎಚ್ಚರಿಸಿ ಅವರನ್ನ ಕೈಬಿಡಲಾಗುತ್ತದೆ. So,  ಸದೃಢ, ಆರೋಗ್ಯವಂತ  ವಿಧ್ಯಾರ್ಥಿಗಳು ಎನ್.ಸಿ.ಸಿ.ಯ ಭಾಗವಾಗಲು ಅರ್ಹರು. ಕೆಲವು ನ್ಯೂನ್ಯತೆಗಳಿದ್ದರೂ ( ಅಂದರೆ ಎತ್ತರ .. ) ನಿಮಗೆ ಎನ್.ಸಿ.ಸಿ. ಸೇರುವ ಬಯಕೆ ಅತ್ಯುತ್ಕಟವಾಗಿದ್ದಲ್ಲಿ ಶಿಕ್ಷಕರಲ್ಲಿ ವಿನಂತಿಸಿಕೊಂಡರೆ ಅಂಥವರನ್ನೂ ಸೇರಿಸಿಕೊಂಡ ಉದಾಹರಣೆಗಳು ಹೇರಳವಾಗಿವೆ.

ಎನ್.ಸಿ.ಸಿ.ಯಲ್ಲಿ ಮೇಲೆ ಹೇಳಿದಂತೆ ಭೂಸೇನೆ / ವಾಯುಸೇನೆ / ನೌಕಾಸೇನೆ ಯ Wing ಗಳಿದಾವೆ. ನೀವು ಆಯ್ಕೆಮಾಡುವ Wing ನಲ್ಲೇ ನಿಮಗೆ ಮುಂದೆ ಭವಿಷ್ಯ.
 
:: ಉಪಯೋಗ ::

ಎನ್.ಸಿ.ಸಿ.ಯ ಧ್ಯೇಯವೇನು ಹೇಳುತ್ತದೋ ಅಷ್ಟನ್ನೂ ನಾವು ರೂಢಿಸಿಕೊಂಡರೆ ಜಗತ್ತಿನಲ್ಲಿರುವ ಎಲ್ಲ ಅವಕಾಶಗಳನ್ನೂ ನಮ್ಮದಾಗಿಸಿಕೊಳ್ಳುವ ಸ್ಥೈರ್ಯ ನಮ್ಮಲ್ಲಿ ಬಂದಿರುತ್ತದೆ. ಇದಕ್ಕಿಂತ ಉಚ್ಛ ಮಟ್ಟದ  ಉಪಯೋಗ ನಾವು ಪಡೆಯಲಿಕ್ಕೆ ಸಾಧ್ಯವಾ ಹೇಳಿ ? ಆದರೆ, ಲೌಕಿಕ ವ್ಯವಹಾರಗಳು ನಮ್ಮ ತಲೆಯಲ್ಲಿ ತುಂಬಿರುವುದರಿಂದ ಇದಕ್ಕಿಂತ 'ಲಾಭದಾಯಕ' ಉಪಯೋಗಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ.


 A Certificate ಅಡಿಪಾಯ ತರಬೇತಿಯಾಗಿದ್ದು ನಿಮಗೆ ಸಂಸ್ಥೆಯ ಕಾರ್ಯನಿರ್ವಹಣೆ ಬಗ್ಗೆ ಒಂದು ಚಿತ್ರ ಗೊತ್ತಾಗುತ್ತದೆ. ಈ ಹಂತದಲ್ಲಿ ನಿಮಗೆ ಮಿಲಿಟರಿ ಜೀವನದ ಶಿಸ್ತಿನ ಪ್ರಥಮ ಪರಿಚಯವಾಗುವುದಂತೂ ಪಕ್ಕಾ. ಒಂದೆರಡು ಕ್ಯಾಂಪ್ ಮಾಡಿದರೆ ಅಳ್ಳೆದೆಯವರಿಗೆ ಸಾಕಪ್ಪಾ ಇವರ ಸಹವಾಸ ಅನ್ನಿಸುವುದೂ ನಿಜ. ಆದರೆ ಅಲ್ಲಿ ದೊರೆಯುವ ಪಾಠಗಳು ಎಲ್ಲರಿಗೂ ಬೇಕೇ ಬೇಕು. ಈ A Certificate ಇದ್ದವರಿಗೆ ಮುಂದಿನ ಹಂತವಾದ B Certificateಗೆ ಪ್ರವೇಶ ಸುಲಭ. ಈ ಹಂತದಲ್ಲಿ CAT Camp ಸಾಮಾನ್ಯ. ಆ ಕ್ಯಾಂಪ್ ನಮಗೆ ಜೀವನದಲ್ಲಿ ಮೊದಲ ಬಾರಿಗೆ ಶಿಸ್ತು ಮತ್ತೆ ಕಷ್ಟಸಹಿಷ್ಣುತೆ ಕಲಿಸುವ ಪ್ರಪ್ರಥಮ ಶಾಲೆ. ಅದನ್ನ ಮಿಸ್ ಮಾಡ್ಕೋಬೇಡಿ !!




B Certificate ಅನ್ನ ನಾವು PU ಅಥವಾ Degree ಹಂತದಲ್ಲಿ ಈ ಎರಡರಲ್ಲಿ ಯಾವಾಗ ಬೇಕಾದರೂ Opt ಮಾಡಬಹುದಾಗಿದ್ದರೂ, ನಾವು PU ಹಂತದಲ್ಲಿ ತೆಗೆದುಕೊಂಡರೆ ಇರುವ ಉಪಯೋಗಗಳು ಬೆಲೆ ಕಟ್ಟಲಾಗದಂಥವು. ನಿಮಗೆ ಜೀವನೋಪಾಯಕ್ಕೆ ಗ್ಯಾರಂಟಿ ನೀಡುವ Medical & Engineering ಗಳಂಥ ವೃತ್ತಿ ಶಿಕ್ಷಣಕೋರ್ಸುಗಳಿಗೆ ಸೇರಲು NCC Cadet ಗಳಿಗೆ Reservation ಇದೆ !!! ನಮ್ಮ ನಿಜ ಅರ್ಹತೆಯ ಭಾಗವಲ್ಲದ ಜಾತಿ ಹೆಸರಲ್ಲಿ ಮೀಸಲಾತಿ ಪಡೆಯೋದಕ್ಕಿಂತ ಬಾಕಿ ವಿಧ್ಯಾರ್ಥಿಗಳಿಗಿಂತ ಶಿಸ್ತಿನಲ್ಲಿ, ಏಕತೆಯಲ್ಲಿ ಪಾಠ ಪಡೆದು ಮುಂದಿರುವ ನಾವು NCC Cadet ಗಳು  ಪಡೆಯೋದು ಸಾರ್ಥಕ ಮೀಸಲಾತಿಯಲ್ಲವೇ ?!! ಈ ಹಂತದಲ್ಲಿ ಇರುವ ಕ್ಯಾಂಪ್ ಗಳು ಬಹಳ ಪ್ರಮುಖ. ಅವು ನಮ್ಮ Reservation ಗೆ Weightage ನೀಡುವಲ್ಲಿ ವಹಿಸುವ ಪಾತ್ರ ಇನ್ನೂ ಪ್ರಮುಖ. ಅತ್ಯುಚ್ಛ ಕ್ಯಾಂಪ್ ಆದ RD ( Republic Day ) Camp ಮುಗಿಸಿದ್ದರಂತೂ ನಿಮಗೆ ಪ್ರಪ್ರಥಮ ಮಣೆ, ಎಲ್ಲೆಡೆ. ಇನ್ನುಳಿದ ಕ್ಯಾಂಪ್ ಗಳಾದ Basic Leadership Camp (BLC), National Integration Camp ( NIC ), All India Trekking Expeditions ... ಇವುಗಳಿಗೆ ನಂತರದ ಪ್ರಾಶಸ್ತ್ಯ. 




C Certificate ಇದೆಯಲ್ಲಾ ಇದಕ್ಕಿರುವ Weightage ಅಷ್ಟಿಷ್ಟಲ್ಲ. ನಿಮಗೆ C Certificate ನಲ್ಲಿ A Grade ಅಥವಾ B Grade ಸಿಕ್ಕಿದ್ದರಂತೂ ಚಿನ್ನದ ಗಣಿ ಸಿಕ್ಕಂತೇ ಲೆಕ್ಕ. ಅದರ ಮುಂದೆ ರೆಡ್ಡಿಗಳ ಗಣಿ ಏನೂ ಅಲ್ಲ !! ಭೂಸೇನೆ / ವಾಯುಸೇನೆ / ನೌಕಾಸೇನೆ ಇಲ್ಲಿಗೆ ಅಧಿಕಾರಿ ಹುದ್ದೆಗೆ ಭರ್ತಿಯಾಗಲು ಬರುವ ಅರ್ಜಿಗಳಿಗೆಲ್ಲ ಈ ಪ್ರಮಾಣಪತ್ರ ಹೊಂದಿರುವವರಿಗೇನೇ ಪ್ರಥಮ ಆದ್ಯತೆ. ನಿಮಗೆ Wriiten Exam ಕೂಡ ಮಾಫಿ. ಬರೀ Personality Test ಪಾಸಾದ್ರೆ ಸಾಕು ( ಅದೇನು ಮಾತಾಡಿದಷ್ಟು ಸುಲಭ ಇರೋದಿಲ್ಲ ಅನ್ನೋದು ನೆನಪಿರಲಿ ). ಇದರ ಜೊತೆಗೆ ಸ್ನಾತಕೋತ್ತರ ಕೋರ್ಸುಗಳಿಗೂ ( MSc, MA ... ) NCC ಮೀಸಲಾತಿಯಿದೆ.


ಇಂಥ ಪ್ರಮುಖ ಲಾಭಗಳನ್ನ ಹೊರತುಪಡಿಸಿದರೆ ನಮಗೆ ಎನ್.ಸಿ.ಸಿ. ಪ್ರಾರಂಭದ ದಿನ ನೀಡುವ ಸಮವಸ್ತ್ರಗಳನ್ನ ವರ್ಷವಿಡೀ ಒಗೆದು, ಇಸ್ತ್ರಿ ಮಾಡಿ ಅಚ್ಚುಕಟ್ಟಾಗಿಟ್ಟುಕೊಂಡಿದ್ದಕ್ಕೆ ವರ್ಷದ ಕೊನೆಗೆ ಸಮವಸ್ತ್ರ ವಾಪಸ್ ಪಡೆಯುವ ಸಂದರ್ಭದಲ್ಲಿ Washing Allowance ಕೊಡ್ತಾರೆ. ಆಮೇಲೆ ಎನ್.ಸಿ.ಸಿ. ಪರೇಡ್ ಇರುವ ವಾರದ ಎರಡು ದಿನ ನಮಗೆ ಪೌಷ್ಠಿಕ ಉಪಹಾರ ಲಭ್ಯ. ಇನ್ನು ಕ್ಯಾಂಪ್ ಗಳಲ್ಲಿ ಮ್ಯಾಪ್ ರೀಡಿಂಗ್, ವಿವಿಧ ರೈಫಲ್ ಗಳ ಬಳಕೆ ಮತ್ತು ರಚನೆಯ ಬಗ್ಗೆ ಮಾಹಿತಿ, ಯುದ್ಧ ನೀತಿಗಳ ಬಗ್ಗೆ ಪರಿಚಯ, ವಾಯು ವಿಭಾಗಲದಲ್ಲಿ ಫೈಟರ್.. ಇತ್ಯಾದಿಗಳ ರಚನೆ, ಕಾರ್ಯದ ಬಗ್ಗೆ ಪರಿಚಯ, ನೌಕಾ ವಿಭಾಗದಲ್ಲಿ ಯುದ್ಧ ಹಡಗುಗಳ ಬಗ್ಗೆ ಪರಿಚಯ ... ಇತ್ಯಾದಿ Indispensable ಜ್ಞಾನವನ್ನ ನಮಗೆ ಈ ಎನ್.ಸಿ.ಸಿ. ನೀಡುತ್ತದೆ.


ಇಷ್ಟೆಲ್ಲ ಲಾಭವಿರುವ ಈ ಎನ್.ಸಿ.ಸಿ. ಯನ್ನ ಆಯ್ದುಕೊಳ್ಳುವಲ್ಲಿ ವಿಧ್ಯಾರ್ಥಿಗಳು ತೋರುವ ಉದಾಸೀನತೆಯಂತೂ ಅಕ್ಷಮ್ಯ. ಟ್ಯೂಷನ್ ಹೆಸರೇಳಿ ಸಮಯವಿಲ್ಲ ಅನ್ನೋದು ತಪ್ಪು ತಾನೇ. ಇನ್ನು ಹಿಂದೊಮ್ಮೆ ಸ್ವಯಂ ಶಿಕ್ಷಕರಾಗಿದ್ದು ಇಂದು ಟ್ಯೂಷನ್ ಕಾರ್ಖಾನೆಗಳನ್ನು ತೆರೆದುಕೊಂಡು ಕೂತಿರುವವರು ಎಂಥ ನಿರ್ದಯಿಗಳೆಂದರೆ ತಾವು ಹಿಂದೆ ಕಾಲೇಜಿನಲ್ಲಿದ್ದಾಗ ಅಷ್ಟೇನೂ Strict ಅಲ್ಲದೇ ಹೋದ್ರೂ ಇಂದು ತಮ್ಮ ಕಾರ್ಖಾನೆಗೆ ಎಲ್ಲರೂ ಸಮಯಕ್ಕೆ ಸರಿಯಾಗಿ ಬರಬೇಕು, ಒಂದು ದಿನವೂ ತಪ್ಪಿಸಕೂಡದು ಅಂತೆಲ್ಲ ನಿಯಮ. ಜೊತೆಗೆ ಕಾಲೇಜಿಗೆ ರಜೆ ಇದ್ರೆ ಅವತ್ತು ಆರು ಗಂಟೆ ಪಾಠ ಹೇಳುವ ಹೆಡ್ಡತನ ಬೇರೆ !! ಆ ಆರು ಗಂಟೆಯಲ್ಲಿ ಗಂಟೆಗೊಬ್ಬರಂತೆ ತಾವು ಶಿಕ್ಷಕರು ಬದಲಾಗಿ ಆದರೆ ಆರೂ ಗಂಟೆಯೂ ವಿಧ್ಯಾರ್ಥಿ ಮಹಾಶಯ ಅಲ್ಲೇ ಕೂತಿರಬೇಕು. ಆ ಬೆಳೆಯುವ ವಯಸ್ಸಿಲ್ಲಿ ಅಂಥ ಶಿಕ್ಷೆ ಕ್ರಿಮಿನಲ್ ಅಪರಾಧವಲ್ವೇನ್ರೀ ? ಅಂಥ ಶಿಕ್ಷೆಗೆ ಗುರಿಯಾದ ನಾನೂ ನನ್ನ PU ನಲ್ಲಿ ಎನ್.ಸಿ.ಸಿ. ತಪ್ಪಿಸಿಕೊಂಡಿದೀನಿ. ಅದಕ್ಕೆಲ್ಲ ಅವರೇ ಜವಾಬ್ದಾರಿ. ನೀವ್ಯಾರೂ ಅಂಥ ಶಿಕ್ಷೆಗೆ ಗುರಿಯಾಗಬೇಡಿ ಅನ್ನೋದು ನನ್ನ ಕಿವಿಮಾತು. ಬದಲಿಗೆ ಇಂಥ ಉಪಯುಕ್ತ ಚಟುವಟಿಕೆಗಳಿಗೂ ನಿಮ್ಮ ಜೀವನದ ಸುವರ್ಣ ಭಾಗವಾದ ಕಾಲೇಜು ಲೈಫ್ ನಲ್ಲಿ ಸ್ಥಾನ ಕೊಡಿ ಅನ್ನೋದು ನನ್ನ ಸುವರ್ಣ ಸಲಹೆ.

ಇಷ್ಟೆಲ್ಲ ಹೇಳಿದ ನಾನೂ ಒಬ್ಬ ಎನ್.ಸಿ.ಸಿ. ಕೆಡೆಟ್. ಎಲ್ಲ ಐದೂ  ವರ್ಷಗಳನ್ನ ಪೂರೈಸಿದೀನಿ. A, B & C ಮೂರೂ Certificate ಪಡೆದಿದೀನಿ. 3 CAT Camp, ಒಂದು BL Camp ಮಾಡಿದೀನಿ. C Certificate ಅನ್ನ B Grade ಇಟ್ಕೊಂಡು ಪಡೆದಿದೀನಿ.





  
: ರವಿ

29 comments:

Unknown said...

ಎನ.ಸಿ.ಸಿ. ಬಗ್ಗೆ ನಮಗೆ ನೀಡಿರುವ ಮಾಹಿತಿ ನಿಜವಾಗಲೂ ಭವಿಷ್ಯದಲ್ಲಿ ತುಂಬ ಪ್ರಯೋಜನಕಾರಿಯಾಗಲಿದೆ. ಇಷ್ಟೊಂದು ಉಪಯೋಗಕರವಾದಂತ ಮಾಹಿತಿಯನ್ನು ನೀಡಿರುವುದಕ್ಕೆ ನಿಮಗೆ ಆಭಾರಿ. ಧನ್ಯವಾದಗಳು.

Unknown said...

ತುಂಬಾ ಧನ್ಯವಾದಗಳು ರೇವಪ್ಪ.ನಮಗೋಸ್ಕರ 2 ಗಂಟೆ ವ್ಯಯ ಮಾಡಿ ಈ ಲೇಖನ ಪ್ರಕಟಿಸಿದ್ದಕ್ಕೆ.ತುಂಬಾ ಉಪಯುಕ್ತ ಮಾಹಿತಿ.ನೀವೂ ಕೂಡ ಎನ್.ಸಿ.ಸಿ.ಕೆಡೆಟ್ ಎಂದು ತಿಳಿಯಿತು.ವಿದ್ಯಾರ್ಥಿಗಳಲ್ಲಿ ಎನ್.ಸಿ.ಸಿ.ಬಗ್ಗೆ ಇರುವ ಉದಾಸೀನತೆ ಹೋಗಲಾಡಿಸಿ ಅವರಿಗೆ ಅದರ ಮಹತ್ವ ತಿಳಿಸುವುದು ಆಯಾ ಶಾಲೆಯ ಶಿಕ್ಷಕರ ಕರ್ತವ್ಯವಾಗಿದೆ.ವಿದ್ಯಾರ್ಥಿಗಳಲ್ಲಿ ಶಿಸ್ತು ಸಂಯಮ ಮೂಡಿಸುವಲ್ಲಿ ಈ ಎನ್.ಸಿ.ಸಿ.ಯ ಪಾತ್ರ ಮಹತ್ವವಾದದ್ದು.ರೇವಪ್ಪನ ಪ್ರಯತ್ನಗಳಿಗೆ ನಮ್ಮೆಲ್ಲರ ಸಹಕಾರ ಬೇಕು.ಆದ್ದರಿಂದ ದಯಮಾಡಿ ನಿಮ್ಮೆಲ್ಲರ ಟೀಕೆ ಟಿಪ್ಪಣಿಗಳನ್ನು ನೀಡಿ.ರೇವಪ್ಪನಿಗೆ ಬೆಂಬಲ ನೀಡಿ.

Unknown said...

Super

Anonymous said...

Tnx bro your salvation abhari ninage naavu

RRIAB said...

ನಾನು ಕೂಡ ಒಬ್ಬ ಬ್ಲಾಗರ್ ಆದರೆ ನನ್ನನ್ನು ಸಂಪರ್ಕ ಮಾಡಿ ಪ್ಲೀಸ್

RRIAB said...

Anonymous said...

ಎನ್ ಸಿ ಸಿ ಹುಟ್ಟು ಬೆಳವಣಿಗೆ ಮತ್ತು ಅದರ ಕಾರ್ಯಗಳನ್ನು ತಿಳಿಸಿ

Anonymous said...

Tq sir

Anonymous said...

ಸರ್ ನಾನು ಕೂಡಾ ಎನ್.ಸಿ.ಸಿ ಗೆ ಸೇರಿ ಕೊಂಡಿರುವ ವಿದ್ಯಾರ್ಥಿ ನಿಮ್ಮ ಸಲಹೆ ನನಗೆ ತುಂಬಾ ಸಹಾಯಕವಾಗಿದೆ ಧನ್ಯವಾದಗಳು

Anonymous said...

Nss daiya vakyagalu heli

Anonymous said...

Sir 5 varsha erutta 3 varsha alva

Anonymous said...

Sir ಈ ncc police department ಗೆ use ಇದಿಯ ಅಥವಾ ಇಲ್ವಾ,ಇದು ಕೇವಲ army ಆಗುವ ವಿದ್ಯಾರ್ಥಿ ಗಳಿಗೆ ಮಾತ್ರಾನಾ please ಹೇಳಿ sir,ನನಗೇ ತಿಳಿದ್ ಪ್ರಕಾರ ಇದು ಕೇವಲ ಮಿಲಿಟರಿ ಗೆ ಮಾತ್ರ ಸೀಮಿತಾ ಅಂತಾ ಕೇಳಿದಿನಿ

Anonymous said...

To stomach bro ❤️🇮🇳

Anonymous said...

Tq sir from information in NCC 🙂

Anonymous said...

Matte hele sir e nu information galu

Anonymous said...

College nalli NCC mada bahuda

Anonymous said...

ಸರ್ ನನ್ನು ಕೋಡು ಎನ್ ಸಿಸಿ ಮಾಡಬೇಕು ಅಂತ ಇದಿನಿ ನಿಮ್ಮ ಮಾಹಿತಿಗಾಗಿ ಹೃದಯ ಪೂರ್ವಕ ಧನ್ಯವಾದಗಳು ಸರ್

Anonymous said...

👍👍

Anonymous said...

NCC ಗೆ ಸೇರೋಕೆ ವಯಸ್ಸಿನ ಮಿತಿ ಏನಾದ್ರೂ ಇದೆಯಾ ನನ್ ಮಗ ಇವಾಗ 7th ಓದುತ್ತಿದ್ದಾನೆ ಅವನ ಶಾಲೆಯಲ್ಲಿ NCC ಇಲ್ಲ ನಾವು ಅವನಿಗೆ NCC ಗೆ ಸೇರಿಸಬೇಕು ಅನ್ನೋದು ಆಸೆ ಇನ್ನೊಂದು ವಿಷಯ ಏನು ಅಂದ್ರೆ NCC ge ಹಾಗೂ ಸ್ಕೌಟ್ ಗೆ ಇರೋ ವ್ಯತ್ಯಾಸ ತಿಳಿಸಿ

Anonymous said...

Thanks sir ನಾಳೆ NCC ಸೆಲೆಕ್ಷನ್ ಇದೆ ನನ್ನ ಮಗ ಅದರಲ್ಲಿ ಪಾಸ್ ಆಗಲೆಂದು ಹಾರೈಸಿ ಸರ್ 🙏🏻. Good information 🤝

Anonymous said...

Super macha ❤️

Anonymous said...

Super macha ❤️
🤞🤞

Anonymous said...

Sir nau kudda ncc comp ke hotta idi vi sir nam ge nim aashir Vada Maddi sir

Anonymous said...

ಹರ್ಷ

Anonymous said...

ಹರ್ಷ

Anonymous said...

Harsha ಎನ್

Anonymous said...

Ok

Anonymous said...

❤️🇨🇮🙏💐

Anonymous said...

🙌🇨🇮

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ