ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Jul 31, 2010

" ಸ್ಪರ್ಧಾರ್ಥಿ " : ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಸಿದ್ಧತೆಗೆ ಕನ್ನಡದ ಮೊದಲ e-ಪತ್ರಿಕೆ, ಶುಭಾರಂಭ

0 ಪ್ರತಿಕ್ರಿಯೆಗಳು

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ |
ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ ||






ನಮಸ್ತೆ ... ಎಲ್ಲರಿಗೂ ಶುಭಮುಂಜಾವು. 


ಸ್ಪರ್ಧಾರ್ಥಿ - ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಸಿದ್ಧತೆಗೆ ಕನ್ನಡದ ಮೊದಲ e-ಪತ್ರಿಕೆ
ಇಂದಿನಿಂದ ದೈನಂದಿನ ಜ್ಞಾನ ಪತ್ರಿಕೆಯಾಗಿ ಪ್ರಾರಂಭವಾಗುತ್ತಿದೆ.

ಇವತ್ತಿನಿಂದ ನಮ್ಮ - ನನ್ನ - ನಿಮ್ಮ - ನಮ್ಮೆಲ್ಲರ ಸ್ಪರ್ಧಾರ್ಥಿ e-ಪತ್ರಿಕೆ ಶುಭಾರಂಭ. ಅಂದ್ರೆ ಪ್ರತಿ ದಿನ ಜ್ಞಾನ ಹೊತ್ತು ತರುವ ದಿನಪತ್ರಿಕೆಯ ರೂಪದಲ್ಲಿ ನಿಮ್ಮ ಮುಂದೆ. ಪ್ರತಿ ದಿನ ಬೆಳಿಗ್ಗೆ ಒಂದು ಪ್ರಚಲಿತ / ಉಪಯುಕ್ತ / ಸ್ವಾರಸ್ಯಕರ ಮಾಹಿತಿ ಹೊತ್ತ ಪತ್ರಿಕೆಯ ಪ್ರತಿಯೊಂದು ನಿಮ್ಮ mailಮನೆಗೆ ತಲುಪಿಸುವ ಜವಾಬ್ದಾರಿ ನನಗೆ ಬಿಡಿ. ಆದರೆ 

ಹಾಗೆ ತಲುಪುವ ಎಲ್ಲ ಲೇಖನಗಳಿಗೂ ನಾನೇ ಲೇಖಕ / ಕರ್ತೃ ಆಗಬೇಕೆಂಬ ಯಾವ ಸ್ವಾರ್ಥದ ನಿಯಮವನ್ನೂ ನಾನು ಇಟ್ಟುಕೊಂಡಿಲ್ಲ. ಪತ್ರಿಕೆಯನ್ನ ಖುದ್ದಾಗಿ ಸಂದರ್ಶಿಸಿ / ಪತ್ರಿಕೆಯ ಬಗ್ಗೆ ಸ್ನೇಹಿತರಿಂದ ಕೇಳಿ ತಿಳಿದುಕೊಂಡ ಪ್ರತಿಯೊಬ್ಬ ಆಸಕ್ತ : ಕನ್ನಡ ಬಲ್ಲ ವ್ಯಕ್ತಿ ಇಲ್ಲಿ ತಮ್ಮ ಜ್ಞಾನವನ್ನ ಹಂಚಿಕೊಳ್ಳಬಹುದು. ದೇಶ - ಕಾಲದ ಪರಿಮಿತಿ ಇಲ್ಲ. ಇರುವುದೊಂದೇ ಪರಿಮಿತಿ , ಅದು ಕನ್ನಡ.

ಅಂದ್ರೆ ನಿಮ್ಮೆಲ್ಲ ಜ್ಞಾನ ಹಂಚುವ ಹಂಚಿಕೆಗಳು ಕನ್ನಡದಲ್ಲಿರಲಿ & ನುಡಿ 4.0 Unicode ನಲ್ಲಿ ಬೆರಳಚ್ಚಿಸಿದುದಾಗಿರಬೇಕು. ಇಲ್ಲದಿದ್ದಲ್ಲಿ Google Transliterator ಬಳಸಿ ಬರೆಯಬಹುದು. ಮತ್ತು ಹಾಗೆ ಬರೆದ ಲೇಖನವನ್ನ ನನ್ನ email ID spardharthi@gmail.com ಗೆ ಬರೆದು ಕಳುಹಿಸಿ. ವಿಶೇಷ ಸಂದರ್ಭಕ್ಕೆ ತಕ್ಕ ಲೇಖನ ಬರೆಯಬೇಕು ಎನ್ನುವವರು , ಆ ವಿಶೇಷ ದಿನ / ಸಂದರ್ಭದ ಕನಿಷ್ಠ 30 ಗಂಟೆ ಮುಂಚೆ ಲೇಖನವನ್ನ ಕಳಿಸಿಕೊಟ್ಟರೆ ಅನುಕೂಲ. 

ಪ್ರಸ್ತುತ ತಾಣದ ಕರ್ತೃವಿನ ಬಗ್ಗೆ ಹಾಗೂ e-ತಾಣ ಶುರುವಾದ ಬಗ್ಗೆ ಹೆಚ್ಚಿಗೆ ತಿಳಿಯಲು ಮನಸಾದ್ರೆ ಇಲ್ಲಿ ಕ್ಲಿಕ್ಕಿಸಿ

ಆಂಗ್ಲಭಾಷೆಯಲ್ಲಿ ಕಂಡ http://allexamguru.blogspot.com/ ಎಂಬ ತಾಣವೇ ನನಗೆ ಸ್ಫೂರ್ತಿ.

ಆದರೆ ಆಂಗ್ಲಭಾಷೆಯಲ್ಲಿ ಮಾಹಿತಿ / ಜ್ಞಾನ ನೀಡಲು ಅವರಿಗೆ ಗೊತ್ತಿರುವಷ್ಟೇ ತಂತ್ರಾಂಶಗಳ ಜ್ಞಾನ ನಮಗೂ ಗೊತ್ತಿರಬೇಕಾದರೆ ನಾವೇಕೆ ಸುಮ್ಮನಿರೋಣ. ನಾವೂ ಅವರಿಗಿಂತ ಮಿಗಿಲಾಗಿ ಜ್ಞಾನ ಹಂಚೋಣ. ಅವರಿಗಿನ್ನ ಎತ್ತರವನ್ನ ಮುಟ್ಟೋಣ. ನಾನೊಬ್ಬನೇ ಆ ಕೆಲಸ ಮಾಡಿ ನಿಮ್ಮೆದುರಿಗೆ ಬೀಗುವ ಹಮ್ಮಿಲ್ಲ ನನಗೆ. ಬದಲಿಗೆ ನಿಮ್ಮನ್ನೂ ಜೊತೆ ಸೇರಿಸಿಕೊಂಡು ಎತ್ತರಕ್ಕೇರುವ ಹಂಬಲ ನಂದು. ನಿಮ್ಮ ಜೊತೆ ನನಗಿದೆ ಅನ್ಕೊಂಡು ಹೆಜ್ಜೆ ಹಾಕ್ತಿದೀನಿ. ಕನ್ನಡಿಗರ ಮನಸ್ಸು ಎಂದಿಗೂ ಸಹೃದಯತೆ - ಸಹಕಾರ ದ ಮಡಿಲು ಎಂದು ನಂಗೊತ್ತು.

ಇಂತಿ,
ಸ್ಪರ್ಧಾರ್ಥಿ

[ ನಿಮ್ಮ ಸ್ನೇಹಿತರನ್ನ e-ತಾಣಕ್ಕೆ ಪರಿಚಯಿಸಲು ಮರೆಯಬೇಡಿ. ಪ್ರತಿದಿನ ಬರುವ ಈ ತರಹದ ಲೇಖನಗಳನ್ನ Forward ಮಾಡಿ ಅವರಿಗೂ e-ಜ್ಞಾನದ ರುಚಿ ತೋರಿಸಿ. ಸ್ಪರ್ಧಾರ್ಥಿ ತಾಣವನ್ನ ಖುದ್ದಾಗಿ ಸಂದರ್ಶಿಸಲು ಇಲ್ಲಿ ಕ್ಲಿಕ್ಕಿಸಿ http://spardharthi.blogspot.com/ ]

ಅಂತರ್ಜಾಲ ಲೋಕದಲ್ಲಿ " ಸ್ಪರ್ಧಾರ್ಥಿ e-ಪತ್ರಿಕೆ " ಎಲ್ಲ ಪ್ರಮುಖ ಅವಕಾಶಗಳನ್ನೂ ಆಕ್ರಮಿಸಿಕೊಂಡಿದೆ ಅನ್ನೋದು ನಿಮಗೆ ಗೊತ್ತಾ ?

ನೀವು Facebook ನಲ್ಲಿ ಇದೀರಾ ? ಹಾಗಾದರೆ : ಇಲ್ಲಿ ಕ್ಲಿಕ್ಕಿಸಿ 

[ ಈಗಾಗಲೇ ಸುಮಾರು 500 ಜನ Fan ಗಳಿದಾರೆ ]

Facebook ನಲ್ಲಿ ಇನ್ನೊಂದು Account ಇದೆ ಅದನ್ನ Follow ಮಾಡಲು ಇಲ್ಲಿ ಕ್ಲಿಕ್ಕಿಸಿ

 [ ಈಗಾಗಲೇ 1000+ ಜನ ಸ್ನೇಹಿತರಿದಾರೆ !! ]

ನೀವು Twitter ನಲ್ಲಿ ಇದೀರಾ ? ಹಾಗಾದರೆ : ಇಲ್ಲಿ ಕ್ಲಿಕ್ಕಿಸಿ

Twitter ನಲ್ಲಿ ಇನ್ನೊಂದು Account ಇದೆ ಅದನ್ನ Follow ಮಾಡಲು ಇಲ್ಲಿ ಕ್ಲಿಕ್ಕಿಸಿ

ಸ್ಪರ್ಧಾರ್ಥಿ Orkut ಸ್ನೇಹಿತನ ರೂಪದಲ್ಲಿಯೂ ಲಭ್ಯ !! ಹಾಗೂ Orkut Community ರೂಪದಲ್ಲಿಯೂ ಲಭ್ಯ !!!



Jul 24, 2010

ಸ್ಪರ್ಧಾರ್ಥಿ Twitter Account ನ ಕಾರ್ಯವೈಖರಿ

1 ಪ್ರತಿಕ್ರಿಯೆಗಳು


ಇಂದು ಇನ್ನೊಂದು ಹೊಸ ಸಾಹಸಕ್ಕೆ ಕೈ ಹಾಕಿದೀನಿ. 

ಅದು ಏನಂದ್ರೆ ಒಂದು ಹೊಸ Twitter Account ಶುರು ಮಾಡಿದೀನಿ. 

ಅಲ್ಲಿ ಒಂದು ಸಾಲಿನ ಜ್ಞಾನ ಹಂಚಲು ಹಂಚಿಕೆ ಹಾಕಿದೀನಿ.

ಜ್ಞಾನವನ್ನ 140 ಅಕ್ಷರಗಳಲ್ಲಿ ಹಿಡಿದಿಟ್ಟು ಸ್ಪರ್ಧಾರ್ಥಿ Twitter Account ನಲ್ಲಿ ನಾನು ಬರೀತೀನಿ.

ಅದನ್ನ Follow ಮಾಡಿದರೆ ಆ 140 ಅಕ್ಷರಗಳ ಜ್ಞಾನ ನಿಮ್ಮ ಮುಂದೆ.

ನಿಮಗೂ ಇದೇ ರೀತಿಯಲ್ಲಿ ಜ್ಞಾನ ಹಂಚುವ ಮನಸ್ಸಾದ್ರೆ,

ನೀವೂ ಇದೇ ಉದ್ದೇಶಕ್ಕೆಂದು ಒಂದು ಹೊಸ Twitter Account ಶುರು ಮಾಡಿ.

ಆದ್ರೆ, ಒಂದೇ ಒಂದು ಷರತ್ತು ಏನಂದ್ರೆ ....

" ಅಲ್ಲಿ ನೀವು ಜ್ಞಾನ ಪ್ರಸಾರದ ಹೊರತು ಬೇರೇನೂ ಬರೆಯಕೂಡದು "

" ಅಂಥದ್ದೇನಾದ್ರೂ ಬರೆದಲ್ಲಿ ಅದನ್ನ ತೆಗೆದುಹಾಕಲಾಗುವುದು "

ಮೇಲ್ಕಂಡ ನಿಯಮ ಪಾಲಿಸಿ ಅಂಥದೊಂದು Twitter Account ಅನ್ನ ನೀವು ಶುರು ಮಾಡಿದ್ದೇ ಆದಲ್ಲಿ, ನಿಮ್ಮ ಆ Twitter Account ಅನ್ನ ನಾನು ( @spardharthi ) Follow ಮಾಡ್ತೀನಿ.

ಆಗ ನನ್ನ & ನಿಮ್ಮ ಪಾಲಿನ ಜ್ಞಾನ ನಮ್ಮೆಲ್ಲರ ಪಾಲಾಗುತ್ತೆ.

ಇದೇ ತಾನೆ ಸ್ಪರ್ಧಾರ್ಥಿಯ ಧ್ಯೇಯ !!

ಇಷ್ಟು ನಿಯಮ / ಕಾರ್ಯವೈಖರಿ ಪಾಲಿಸಿ ಜ್ಞಾನ ಹಂಚುವ ಕೆಲಸ ಮಾಡೋಣ.

1000 ಗಟ್ಟಲೇ ಅಕ್ಷರ ಬಳಸಿ ಲೇಖನ ಬರೆಯಲು ಆಲಸಿ ಎನ್ನಿಸುವವರು ,

ಒಂದು ಸಾಲಿನ ಆದರೆ 140 ಅಕ್ಷರ ಮೀರದ ವಾಕ್ಯಗಳಲ್ಲಿ ಜ್ಞಾನ ಹಂಚಿ.

Let's Tweet Knowledge in 140 Letters.


Cheers!!!

ಸರಿನಾ ? 

ಸರಿ ಹಾಗಿದ್ರೆ. Over 2 U.

Jul 18, 2010

ಮೈಕ್ರೋಮ್ಯಾಕ್ಸ್ ಬ್ಲಿಂಗ್ ನ Swarovski ಎಲೆಮೆಂಟ್ಸ್

0 ಪ್ರತಿಕ್ರಿಯೆಗಳು

ನಮ್ಮ ಅಕ್ಕಿ aka ಅಕ್ಷಯ್ ಕುಮಾರ್ ತನ್ನ ಹೆಂಡತಿ ಟ್ವಿಂಕಲ್ ಖನ್ನಾಳ ಮೈಕ್ರೋಮ್ಯಾಕ್ಸ್ ಬ್ಲಿಂಗ್ ನ ಜಾಹೀರಾತಿಗಾಗಿ ತನ್ನ Trademark ನಗುವಿನ ಶೈಲಿಯಲ್ಲಿ " ಹಾ ... ಹಾ .. ಹಾ ... It Twinkles !! " ಅಂತ ಧ್ವನಿ ನೀಡಿದ್ದನ್ನ ನೀವು ಗಮನಿಸಿರಬಹುದು. ಆ ಜಾಹೀರಾತಿನಲ್ಲಿ ಕೇಳಿ ಬರುವ ಒಂದು ಶಬ್ದ " It's Decorated With Swarovski ಎಲೆಮೆಂಟ್ಸ್ "  ದ ಅರ್ಥ ಏನ್ ಗೊತ್ತಾ ? ಇಲ್ಲಿದೆ ಓದಿ ತಿಳ್ಕೊಳಿ ...



ಸ್ವಾರೋಸ್ಕೀ - ಇದು ನಿಖರವಾಗಿ ಕತ್ತರಿಸಲ್ಪಟ್ಟ ಗಾಜುಗಳಿಂದ ಮಾಡಿದ ಆಭರಣ / ಐಷಾರಾಮಿ  ಉತ್ಪನ್ನಗಳನ್ನು ತಯಾರು ಮಾಡುವ ಕಂಪೆನಿಯ ಹೆಸರು. ಇವೇನೂ ವಿರಳ ರತ್ನದಂಥ ಕಚ್ಚಾ ವಸ್ತುವಿನಿಂದ ಮಾಡಿದ ವಸ್ತುಗಳಲ್ಲ. ಬದಲಿಗೆ ಹೇರಳವಾಗಿರುವ ಗಾಜನ್ನೇ ಬಳಸಿಕೊಂಡು ಕ್ರಿಯಾಶೀಲತೆಗೆ ಕೆಲಸ ನೀಡಿ ಆ ಗಾಜನ್ನ ವಿವಿಧ ಕೋನಗಳ್ಲಲಿ ಸಾಣೆ ಹಿಡಿದು ಸಾಮಾನ್ಯ ಗಾಜನ್ನ ನಯನ ಮನೋಹರವಾಗಿಸುವುದು ಇವರ ಕೆಲಸ.


ಅಂತೆಯೇ ಮೈಕ್ರೋಮ್ಯಾಕ್ಸ್ ಕಂಪೆನಿಯವರು ರೂ.5000/- ದಲ್ಲಿನೇ ಈ ಬ್ಲಿಂಗ್ ಅನ್ನ ನೀಡುತ್ತಿರುವುದು.


ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ


: e - ಶ

Jul 3, 2010

Mobile Operating System

0 ಪ್ರತಿಕ್ರಿಯೆಗಳು
Android : Symbian : Windows Phone : iOS : BADA : Maemo

ಈ ಶಬ್ದಗಳನ್ನ ಇತ್ತೀಚೆಗೆ ಪತ್ರಿಕೆಗಳಲ್ಲಿ ಓದಿದ ನೆನಪಿದೆಯಾ ? ಇಲ್ವಾ ?!! ಹಾಗಿದ್ರೆ ಕೇಳಿ ನಾನು ಹೇಳ್ತೀನಿ ಏನಿವು ಅಂತ.

ಇವು , ನಮ್ಮ ದಿನನಿತ್ಯದ ಭಾಗವಾಗಿ ಹೋಗಿರುವ ಮೊಬೈಲ್ ಗಳ Operating Sysyem ಗಳ ಹೆಸರುಗಳು. ಮೊದಲಿಗೆ ಮೊಬೈಲ್ ನಮ್ಮ ಕೈಗೆ ಬಂದಾಗ ಅವು ಬಳಸ್ತಾ ಇದ್ದದ್ದು Operating System ( OS )ನ ಗುಣಾಂಶಗಳನ್ನ ಹೊಂದಿದ್ದರೂ OS ಅಲ್ಲದ ಒಂದು ಸರಳ Software. ಆ ದಿನಗಳಲ್ಲಿ ಆ ಮೊಬೈಲ್ ಗಳು ನಮಗೆ ನೀಡುತ್ತಿದ್ದ ಸೌಲಭ್ಯಗಳು ಅಷ್ಟೇ ನಿಯಮಿತವಾದವುಗಳು ತಾನೇ ?

ಆದರೆ ದಿನಕಳೆದಂತೆ ಮೊಬೈಲ್ ಗಳು PDA(Personal Digital Assistant) ಗಳಾಗಿ ಬದಲಾದುವು. ಆವಾಗ ಅವು ಒಂದು ಪುಟ್ಟ ಕಂಪ್ಯೂಟರ್ ಮಾಡಬೇಕಾದ ಕೆಲಸಗಳನ್ನ ಮಾಡಬೇಕಾದ ಒತ್ತಡಕ್ಕೆ ಒಳಗಾದುವು. ಆ ಒತ್ತಡವನ್ನ ಹಿಂದಿದ್ದ ಸರಳ Software ನಿಂದ ನಿಭಾಯಿಸುವುದು ಅಸಾಧ್ಯವೆಂದರಿತು ಹೆಚ್ಚು ಹೆಚ್ಚು ಸಾಧ್ಯತೆಗಳನ್ನ ಹೊಂದಿದ : ಸಣ್ಣ ಪ್ರಮಾಣದ ಕಂಪ್ಯೂಟರ್ ಲೆಕ್ಕದಲ್ಲಿ ಕೆಲಸ ನಿರ್ವಹಿಸಬಲ್ಲ Software ತಯಾರಿಸಿದರು. ಕಂಪ್ಯೂಟರ್ ಗಳಲ್ಲಿ ಬಳಸುವ OS ತರಹ ಕೆಲಸ ನಿರ್ವಹಿಸುತ್ತಿದ್ದರಿಂದ ಇದಕ್ಕೆ Mobile OS ಎಂದು ನಾಮಕರಣ ಮಾಡಿದರು. 

ವ್ಯಾಪಾರಿ ಜಗತ್ತಿನ ಸಾಮಾನ್ಯ ನಿಯಮದಂತೆ  ಒಂದು ನಿರ್ದಿಷ್ಟ ಉತ್ಪನ್ನವನ್ನ ಹತ್ತೆಂಟು ಕಂಪೆನಿಗಳು ತಯಾರಿಸಿ ಮಾರುಕಟ್ಟೆಗೆ ಹರಿಯಬಿಡುವ ಆರೋಗ್ಯಕರ ಪ್ರವೃತ್ತಿ ಇಲ್ಲೂ ಕಂಡು ಬಂದು ವಿವಿಧ ಕಂಪೆನಿಗಳು ವಿವಿಧ ಸಾಧ್ಯತೆಯಿರುವ Mobile OSಗಳನ್ನ ತಯಾರಿಸಿ ನಮ್ಮೆದುರಿಗಿರಿಸಿದಾರೆ : ಅವುಗಳ ಉದಾಹರಣೆಗಳೇ ಮೇಲಿನ ಹೆಸರುಗಳು

: ಕೆಲವು ಜನಪ್ರಿಯ Mobile OS ಗಳ ಪುಟ್ಟ ಪರಿಚಯ ಇಲ್ಲಿದೆ :


SYMBIAN : Symbian Foundation ಕಂಪೆನಿಯ ಈ ಉತ್ಪನ್ನ ಪ್ರಮುಖವಾಗಿ ನೋಕಿಯಾ ಕಂಪೆನಿಯಿಂದ ಬಳಸಲ್ಪಟ್ಟು  ಆ ಕಂಪೆನಿಯ ಮುಂಚೂಣಿ ಮೊಬೈಲ್ ಗಳಾದ NSeries / ESries ಮೊಬೈಲ್ ಗಳ 'ಜೀವಾಳ'.  S40, S60 ... ಹೀಗೆ ವಿವಿಧ ಹಂತಗಳಲ್ಲಿ ಇದು ಪರಿಚಯಿಸಲಾಗಿದ್ದು S60 5th Edition ಇದು ಈ ದಿನಗಳಲ್ಲಿ ನಮ್ಮ ಮನಸೂರೆಗೊಂಡಿರುವ Touch Screen ಮೊಬೈಲ್ ಗಳ 'ಜೀವಾಳ'. ಕೆಲವು ಸೋನಿ ಎರಿಕ್ಸನ್ , ಮೊಟೊರೋಲಾ ... ಕಂಪೆನಿಯ ಮೊಬೈಲ್ ಗಳಲ್ಲೂ ಇದನ್ನ ಬಳಸಲಾಗಿದೆ.


ANDROID : ಇದು ಗೂಗಲ್ ಕಂಪೆನಿ ತಯಾರಿಸಿದ Mobile OS. ಈ ದಿನಗಳಲ್ಲಿ ಅತ್ಯಂತ ಜನಪ್ರಿಯ OS. ಅನೇಕ ಮೊಬೈಲ್ ಹ್ಯಾಂಡ್ ಸೆಟ್ ತಯಾರಿಕಾ ಕಂಪೆನಿಗಳು ಇದನ್ನ ಬಳಸಿಕೊಂಡು ಹೊಸ ಹೊಸ ಉತ್ಪನ್ನಗಳನ್ನ ಹೊರತರುತ್ತಿವೆ. HTC, Samsung, T-Mobile ... ಇತ್ಯಾದಿ Mobile Handset ತಯಾರಕರು ಈ ಉತ್ಪನ್ನದ ಬಳಕೆದಾರರು.


iOS : ತನ್ನೆಲ್ಲ ಉತ್ಪನ್ನಗಳ ಹೆಸರಿನ ಹಿಂದೆ ( i ) ಅನ್ನುವ ಅಕ್ಷರ ಸೇರಿಸಿ ( ಉದಾಹರಣೆಗೆ : iPHONE, iPAD, iPOD, iMAC.... ) ಮಾರುಕಟ್ಟೆಗೆ ಪರಿಚಯಿಸುವ ಆ್ಯಪಲ್ ಕಂಪೆನಿಯ ಈ Mobile OS ತಾನು ಉತ್ಪಾದಿಸುವ iPHONE ಗಾಗಿ ತಯಾರು ಮಾಡಿರುವ ಉತ್ಪನ್ನ. ತಾನೇ ಉತ್ಪಾದಕ ತಾನೇ ಬಳಕೆದಾರ ಅನ್ನುವ ಪಾರಮ್ಯದ ಸಂಕೇತವೋ ಏನೋ ( i ) ಎನ್ನುವ ಅಕ್ಷರದ ಸೂಚ್ಯರ್ಥ.


WINDOWS MOBILE : ಕಂಪ್ಯೂಟರ್ ಜಗತ್ತಿನಲ್ಲಿ ಚಕ್ರಾಧಿಪತ್ಯ ಸಾಧಿಸಿರುವ ಮೈಕ್ರೋಸಾಫ್ಟ್ ಕಂಪೆನಿಯ ಈ ಉತ್ಪನ್ನ ಮೊಬೈಲ್ ಗಳಿಗೆಂದು ತಯಾರಿಸಿರುವ OS. Microsoft ಕಂಪೆನಿ ಕಂಪ್ಯೂಟರ್ ಕ್ಷೇತ್ರದಲ್ಲಿ ಪರಿಚಯಿಸಿರುವ ಎಲ್ಲ ತರಹದ Application ಗಳ ಸಾಮ್ಯತೆ ಈ Mobile OS ನಲ್ಲೂ ದೊರೆಯುವುದರಿಂದ Almost ಎಲ್ಲ ಮೊಬೈಲ್ ತಯಾರಕ ಕಂಪೆನಿಗಳು ತಮ್ಮ ಉತ್ಪನ್ನಗಳಲ್ಲಿ Atleast ಒಂದು ಉತ್ಪನ್ನಕ್ಕಾದರೂ ಈ OS ಬಳಸಿಕೊಂಡು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿವೆ.


RIM BLACKBERRY : Research In Motion ( RIM ) ಕಂಪೆನಿಯ ಜನಪ್ರಿಯ ಉತ್ಪನ್ನವಾದ BlackBery ಮೊಬೈಲ್ ಗಾಗಿ ಈ OS ಬಳಕೆಯಾಗುತ್ತಿದೆ.


BADA : ಇದು ಈ ವರ್ಷದ ಮೊಬೈಲ್ ಜಾಗತಿಕ ಸಮ್ಮೇಳನ ( Mobile World Congress 2010 ) ನಲ್ಲಿ  Samsung Electronics ಕಂಪೆನಿಯಿಂದ ಪರಿಚಯಿಸಲಾದ Mobile OS. 


MEEGO : ಇದು ಈ ವರ್ಷದ ಮೊಬೈಲ್ ಜಾಗತಿಕ ಸಮ್ಮೇಳನ ( Mobile World Congress 2010 ) ನಲ್ಲಿ  Nokia Corporation & Intel ನಿಂದ ಜಂಟಿಯಾಗಿ ಉತ್ಪಾದಿಸಿ, ಪರಿಚಯಿಸಲಾದ Mobile OS. 


MAEMO : ಇದು Nokia Corporation ಕಂಪೆನಿಯಿಂದ ಪರಿಚಯಿಸಲಾಗಿರುವ Mobile OS.



ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

 ಸಂಬಂಧಿಸಿದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ


- ರೇವಪ್ಪ


Jul 2, 2010

ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಕ್ಲರಿಕಲ್ ಹುದ್ದೆಗಳು

0 ಪ್ರತಿಕ್ರಿಯೆಗಳು

ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಕ್ಲರಿಕಲ್ ಹುದ್ದೆಗಳು



ಕೊನೆ ದಿನಾಂಕ : 08 ಆಗಸ್ಟ್ 2010
ಪರೀಕ್ಷಾ ದಿನಾಂಕ : 12 ಸಪ್ಟೆಂಬರ್ 2010
ಒಟ್ಟು Vacancy :
200 ( ಕರ್ನಾಟಕ ಕೋಟಾ ) 1210 ( ಭಾರತ )
ವಿದ್ಯಾರ್ಹತೆ : ಅಂಗೀಕೃತ ವಿ.ವಿ.ಯಿಂದ ಪದವಿ

ವಯೋಮಿತಿ : 35 ವರ್ಷ ( ಸಾ.ಅ.)
ಆಯ್ಕೆ ಪದ್ಧತಿ : Objective Type exam + ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ :  http://www.corpbank.com/asp/0100text.asp?presentID=1712&headID=805



.

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ