.
ನಾವು ಮಾರುಕಟ್ಟೆಗೆ ಹೋದ್ರೆ ರಸ್ತೆ ಬದಿಯಲ್ಲಿ ಮಾರುವ ಬಟ್ಟೆ / ಷೂ ...ಇತ್ಯಾದಿ ವಸ್ತುಗಳ ಕಡೆ ಗಮನ ಹರಿಯದೇ ಇರೋದಿಲ್ಲ. ಆವಾಗ ಅಲ್ಲಿ ನೀವು ಎಷ್ಟೋ ಅಂತರಾಷ್ಟ್ರೀಯ Brand ಗಳ ಹೆಸರನ್ನ ಕಾಣಬಹುದು. ಕೆಲವೊಮ್ಮೆ ಆ ಹೆಸರು Local Brand ಆಗಿನೇ ಎಷ್ಟೋ ಪ್ರಸಿದ್ಧಿ ಗಳಿಸಿ. ನಮಗದು ಅಂತರಾಷ್ಟ್ರೀಯ Brand ಅನ್ನೋ ವಿಷಯವೇ ತಿಳಿದಿರೋದಿಲ್ಲ. ಅಂಥ ' Local ज्यादा Internationa कम ' Brand ಆಗಿರುವ ಕೆಲವು ಅಂತರಾಷ್ಟ್ರೀಯ Brand ಗಳ ಪುಟ್ಟ ಪರಿಚಯ ಇಲ್ಲಿದೆ. ಜೊತೆಗೆ ಹೆಚ್ಚಿಗೆ ತಿಳಿಯುವ ಮನಸಾದ್ರೆ Wiki Link ಅಂತೂ ಇದ್ದೇ ಇದೆ, ಅದನ್ನೂ ಕೊಟ್ಟಿದೀನಿ. ಓದಿ.
DIESEL ( ಡೀಸಲ್ ) : ಇದು ಇಟಲಿ ದೇಶದ Fashion Brand. ಯುವ ಜನಾಂಗದ ಅಚ್ಚುಮೆಚ್ಚಿನ Clothing ಇವರ ಪ್ರಾರಂಭಿಕ ಉದ್ಯಮವಾಗಿದ್ದು ಈಗ ಒಳಉಡುಪುಗಳ ಜೊತೆ ಜೊತೆಗೆ ಸುಗಂಧದ್ರವ್ಯ, ಚಪ್ಪಲಿ, ಬ್ಯಾಗ್...ಇತ್ಯಾದಿಗಳನ್ನ ಕೂಡ ತಯಾರು ಮಾಡ್ತಾರೆ.
ಹೆಚ್ಚಿನ ಮಾಹಿತಿಗಾಗಿ wiki link
PUMA ( ಪ್ಯೂಮಾ ) : ಜರ್ಮನಿ ದೇಶದಲ್ಲಿ ನೆಲೆಗೊಂಡಿರುವ ಈ Brand ಷೂ ತಯಾರಿಕೆಯ ಜೊತೆ ಇತರೆ ಕ್ರೀಡಾಸಾಮಗ್ರಿ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ.
ಹೆಚ್ಚಿನ ಮಾಹಿತಿಗಾಗಿ wiki link
REEBOK ( ರೀಬಾಕ್ ) : ಜರ್ಮನಿ ದೇಶದ ಕಂಪೆನಿಯಾದ ADIDAS ಕಂಪೆನಿಯ Subsidiary ಕಂಪೆನಿ ಈ Reebok. ಕ್ರೀಡಾ ಸಾಮಗ್ರಿ ಉತ್ಪಾದನೆಯಲ್ಲಿ ಇದರ ಹೆಸರಿದೆ.
ಹೆಚ್ಚಿನ ಮಾಹಿತಿಗಾಗಿ wiki link
ADIDAS ( ಅಡಿಡಾಸ್ ) : ಜರ್ಮನಿಯ ಅಡಾಲ್ಫ್ ಡ್ಯಾಸ್ಲರ್ ( Adolph Dassler ) 1924ರಲ್ಲಿ ಪ್ರಾರಂಭಿಸಿದ ಈ ಕಂಪೆನಿ ಇಂದು ಜವಳಿ ಉದ್ಯಮದಲ್ಲಿ ದೊಡ್ಡ ಹೆಸರು ಮಾಡಿದೆ. ಬ್ಯಾಗು, ಕನ್ನಡಕಗಳ ಜೊತೆಗೆ ಇತರೆ ಕ್ರೀಡಾ ಸಾಮಗ್ರಿ ತಯಾರು ಮಾಡುವ ಈ ಕಂಪೆನಿ Clothing ಗೆ ಹೆಸರುವಾಸಿ.
CASIO ( ಕ್ಯಾಸಿಯೋ ) : ಜಪಾನ್ ನಲ್ಲಿ ತನ್ನ ಮುಖ್ಯ ಕಚೇರಿ ಹೊಂದಿರುವ ಬಹುರಾಷ್ಟ್ರೀಯ ವಿದ್ಯುನ್ಮಾನ ಕಂಪೆನಿ, ಈ Casio Computer Co., Ltd.. ಭಾರತದಲ್ಲಿ Calculator ಗಳ ಮೂಲಕ ಸುಪರಿಚಿತವಾಗಿರುವ ಈ Brand ಕ್ಯಾಮೆರಾ, ಕೈಗಡಿಯಾರ, ಸಂಗೀತ ಸಲಕರಣೆಗಳನ್ನೂ ತಯಾರಿಸುವಲ್ಲಿ ಪರಿಣಿತಿ ಹೊಂದಿದೆ.
FILA ( ಫಿಲಾ ) : ಇಟಲಿ ದೇಶದ ಅತಿ ದೊಡ್ಡ ಕ್ರೀಡಾ ಸಾಮಗ್ರಿ ತಯಾರಿಕಾ ಸಂಸ್ಥೆ, ಫಿಲಾ. 1911ರಲ್ಲಿ ಪ್ರಾರಂಭವಾಯ್ತು ಈ ಫಿಲಾ.
Calvin Klein ( ಕೆಲ್ವಿನ್ ಕ್ಲೀನ್ ) : ಅಮೆರಿಕಾ ದೇಶದ ಕೆಲ್ವಿನ್ ಕ್ಲೀನ್ ಎಂಬ ವ್ಯಕ್ತಿ 1968ರಲ್ಲಿ ನ್ಯೂಯಾರ್ಕ್ ನಲ್ಲಿ ಈ Fashion Brand ಅನ್ನು ಸ್ಥಾಪಿಸಿದ. ಈಗ Phillips-Vanheusen ನ ಒಡೆತನದಲ್ಲಿರುವ ಈ ಕಂಪೆನಿ CK ಎಂಬ Logoದೊಂದಿಗೆ ತನ್ನನ್ನ ಗುರುತಿಸಿಕೊಳ್ಳುತ್ತದೆ.
ARMANI ( ಅರ್ಮಾನಿ ) : ಇನ್ನೊಂದು ಇಟಲಿ ದೇಶದ Fashion Brand ಈ ಅರ್ಮಾನಿ. ಚರ್ಮದ ಉತ್ಪಾದನೆಗಳು, ಷೂ, ಕೈಗಡಿಯಾರ, ಆಭರಣ, ಕನ್ನಡಕ...ಇತ್ಯಾದಿ ವಿಭಾಗದಲ್ಲಿ ಅರ್ಮಾನಿ ಹೆಸರು ಹೊಂದಿದೆ ಅನ್ನೋದಕ್ಕಿನ್ನ High Society ಯ ಹೆಮ್ಮೆಯ / ನೆಚ್ಚಿನ Brand ಆಗಿದೆ.
DOLCE & GABBANA ( ಡೋಲ್ಸ್ & ಗಬ್ಬಾನಾ ) : ಇಟಲಿ ದೇಶದ ಮತ್ತೊಂದು ಫ್ಯಾಶನ್ ಬ್ರ್ಯಾಂಡ್ ಈ D&G. ಡೊಮೇನಿಕೋ ಡೋಲ್ಸ್ ಮತ್ತು ಸ್ಟಿಫಾನೋ ಗಬ್ಬಾನಾ, ಇವರಿಬ್ಬರು ಸೇರಿ ಮಿಲಾನಾ, ಇಟಲಿಯಲ್ಲಿ ಪ್ರಾರಂಭಿಸಿದ ಕಂಪೆನಿ ಇಂದು ಜಗತ್ಪ್ರಸಿದ್ಧ.

No comments:
Post a Comment