ಹೌದು. " ಭಾರತೀಯ ಸಂಸ್ಕೃತಿಯಲ್ಲಿ ಈ ದಿನಕ್ಕೆ ಅಂಥ ವಿಶೇಷ ಪ್ರಾಮುಖ್ಯತೆ ಇಲ್ಲ. ಕಾರಣವೂ ಇಲ್ಲದೇ ಇಲ್ಲ. ಎಲ್ಲ ಪ್ರಾಚೀನ ಸಂಸ್ಕೃತಿಗಳಂತೆ ನಮ್ಮ ಸಂಸ್ಕೃತಿಯೂ ಪ್ರಕೃತಿಯೊಂದಿಗೆ ಒಡನಾಡುತ್ತಾ ಬೆಳೆದ ಸಂಸ್ಕೃತಿ. ಪ್ರಕೃತಿಯ ಪ್ರತಿ ನಲಿವು-ನೋವು-ಸಿಟ್ಟು-ಸೆಡವು ಎಲ್ಲವನ್ನೂ ನೋಡಿ-ಅನುಭವಿಸಿ ಅದರ ಆಜ್ಞೆಗಳಿಗೆ ಪಕ್ಕಾಗುತ್ತಾ ನಮ್ಮ ಸಂಸ್ಕೃತಿಯೂ ಪಕ್ಕಾಯಿತು. " ಹೌದು ತಾನೇ ? ಸುಮ್ನೆ ನಾನು ಹೇಳ್ತೀನಿ ಅಂತ " ಹೂಂ " ಅನ್ಬೇಡಿ. ಈಗ ನೋಡಿ ನಿನ್ನೆ ನಮ್ಮ ಸ್ನೇಹಿತರು ಮೂರಂಶದ ಮಾಹಿತಿಯೊಂದನ್ನ ಕಳುಹಿಸಿದಾರೆ. ಅದು ಮೇಲಿನ ಉದ್ಘೋಷಕ್ಕೆ ಪೂರಕವಾಗಿದೆ. ಅದನ್ನ ಓದಿ ಆದ ಮೇಲೆ ನಿಮ್ಮದೇ ಆದ ನಿರ್ಧಾರಕ್ಕೆ ಬನ್ನಿ.
ಹಾಗೆ | ಹೀಗೆ | |
ದಿನ ಬದಲಾವಣೆ | ರಾತ್ರಿ 12 ಗಂಟೆಗೆ ದಿನ ಹೇಗೆ ಬದಲಾಗುತ್ತೆ ಸ್ವಾಮಿ ? ಪ್ರಕೃತಿಯಲ್ಲಿ ಏನಾದರೂ ಬದಲಾವಣೆಯಾಗುತ್ತಾ ? ಇಲ್ಲ ತಾನೇ ? 11.59PM ಕ್ಕೂ ಕತ್ತಲೆ. 12.01AM ಕ್ಕೂ ಕತ್ತಲೆ !!! | ದಿನದ ಬದಲಾವಣೆ ಆಗುವುದು ಕತ್ತಲು ಕಳೆದು ಬೆಳಕು ಮೂಡಿದಾಗ. ಸೂರ್ಯ 6 ಗಂಟೆಯ ಹೊತ್ತಿಗೆ ಮೂಡಿದರೆ ರಾತ್ರಿ 12 ಗಂಟೆಗೆ ಹೇಗೆ ದಿನ ಹೊಸತಾಯಿತು ?! |
ವರ್ಷ ಬದಲಾವಣೆ | ಡಿಸೆಂಬರ್ 31 ಮತ್ತು ಜನವರಿ 1 : ಈ ಎರಡು ದಿನಗಳ ನಡುವೆ ಪ್ರಕೃತಿಗೆ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಬರೀ ಈ ಎರಡು ದಿನ ಬೇಡ. ಸುತ್ತಲಿನ ಈ ಕಡೆ ಒಂದು ವಾರ ಆ ಕಡೆ ಒಂದು ವಾರ ಗಮನಿಸಿದರೂ ಯಾವ ವ್ಯತ್ಯಾಸವೂ ಇಲ್ಲ. ಮತ್ತೇಕೆ ಡಿಸೆಂಬರ್ 31ರ ರಾತ್ರಿ ಕಳೆದರೆ ನಮಗೆ ಹೊಸ ವರ್ಷ ಧುತ್ತೆಂದು ಎದುರಾಗಬೇಕು ??? | ಆದರೆ ನಮ್ಮ ಯುಗಾದಿಯ ದಿನದ ಸುತ್ತಲಿನ ಪ್ರಕೃತಿಯ ಬದಲಾವಣೆಗಳನ್ನ ಗಮನಿಸಿ. ಎಲ್ಲೆಡೆ ಹೊಸ ಚಿಗುರು. ಜೊತೆಗೆ ಆಕಾಶಕಾಯಗಳ ಚಲನೆಯ ದಿಕ್ಕೂ ಬದಲಾಗುವ ಸಂಕ್ರಮಣ ಕಾಲವದು. ಹೊಸ ವರುಷವೆಂದರೆ ಹೊಸ ಕ್ಯಾಲೆಂಡರ್ ಎನ್ನುವ ಬದಲು ನಮ್ಮನ್ನ ಪೊರೆಯುತ್ತಿರುವ ಪ್ರಕೃತಿಯ ನಿತ್ಯವ್ಯಾಪಾರಗಳ ಹೊಸಲೆಕ್ಕ ಎಂದು ಬಗೆದರೆ ನನ್ನ ವಾದ ನಿಮಗೆ ಮನದಟ್ಟಾದಿತು.. ಆ ಸಂಕ್ರಮಣ ಕಾಲವೇ ನಮಗೆ ಹೊಸ ವರುಷ ತಾನೇ ?!! |
ಕ್ಯಾಲೆಂಡರ್ | ನೀವೀಗ ಹೇಳಬಹುದು ನಾವು ಬಳಸುತ್ತಿರುವ ಕ್ಯಾಲೆಂಡರ್ ನ ದಿನಗಳು ಇಂದಿಗೆ 365 ದಿನ ಮುಗಿಸಿ ಮತ್ತೆ 1ನೇ ದಿನಕ್ಕೆ ಕಾಲಿಡುತ್ತಿವೆ ಅಂತ. ಇದು ಒಪ್ಪಿಕೊಳ್ಳತಕ್ಕ ವಾದವೇ ಆದರೂ, ಸದರಿ ಇಂಗ್ಲೀಷ್ ಕ್ಯಾಲೆಂಡರ್ ನಲ್ಲಿ ಕೇವಲ ದಿನ, ವಾರ, ತಿಂಗಳಿನ ಹೆಸರುಗಳು ಮಾತ್ರ ಕಾಣಸಿಗುತ್ತವೆ. ಆ ದಿನದ ಸೂರ್ಯ & ಚಂದ್ರರ ಚಲನೆಯ ಯಾವ ವಿವರಣೆಗಳೂ ಅಲ್ಲಿ ದೊರೆಯುವುದಿಲ್ಲ. ದಿನ ಅಂತ ಕರೆಯಬೇಕಾದರೆ ಸೂರ್ಯ ಮೇಲೇಳಲೇಬೇಕು ; ಚಂದ್ರನ ಬೆಳಕು ಮರೆಯಾಗಲೇಬೇಕು ತಾನೇ ? | ಭಾರತೀಯ ಕ್ಯಾಲೆಂಡರ್ ನಲ್ಲಿ ನಮೂದಾಗಿರುವ ತಿಥಿ ನಕ್ಷತ್ರಗಳು ಸೂರ್ಯ ಚಂದ್ರರ ಚಲನೆ-ಸ್ಥಾನ ವನ್ನಾಧರಿಸಿವೆ. ಅವರಿಂದ ತಾನೇ ನಮಗೆ ಹಗಲು ರಾತ್ರಿ !! |
ಹೀಗಾಗಿ ವೈಜ್ಞಾನಿಕವಾಗಿ ಮತ್ತು ಪ್ರಾಕೃತಿಕವಾಗಿ ಮನುಷ್ಯನ ದೈನಂದಿನ ಬೆಳವಣಿಗೆಯನ್ನೂ ಸೇರಿಸಿಕೊಂಡು ಇಡೀ ಮನುಕುಲಕ್ಕೆ ಯುಗಾದಿಯ ದಿನವೇ ಹಳತು ಕಳೆದು ಹೊಸತು ಬರುವ ಸಂಕ್ರಮಣ ಕಾಲ. ಹೊಸ ಸಂಭ್ರಮದ ಕಾಲ !! |
ಈ ಮಾಹಿತಿ ಕಳಿಸಿದ ಸ್ನೇಹಿತ ಮಾಧವ ಹೆಬ್ಬಾರ್ ಅವರಿಗೆ ಧನ್ಯವಾದಗಳು.
2010ರ ಕ್ಯಾಲೆಂಡರ್ ಹಳತಾಯಿತು. ಆದರೆ ಆ ಕ್ಯಾಲೆಂಡರ್ ವರ್ಷದಲ್ಲಿ ನಡೆದ ಘಟನೆಗಳು ಮರೆತರೂ ಮರೆಯಲಾರದಂಥವು.
ಹೀಗೆ ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಸ್ವಾರಸ್ಯಕರ ಸಂಗತಿಗಳನ್ನ ಹೆಕ್ಕಬಹುದು.
- ದೇಶದ ಬೊಕ್ಕಸಕ್ಕಿಂತ ತಮ್ಮ ಮನೆಯ ತಿಜೋರಿಯೇ ಸಂಪತ್ತಿನ ಶೇಖರಣೆಗೆ ಸೂಕ್ತವೆಂದೆನಿಸಿದ ಮುಖ್ಯಮಂತ್ರಿ-ಚಿಕ್ಕಮಂತ್ರಿಗಳು...
- ಬಡವರ ಕಣ್ಣೀರೊರೆಸುವ ಧ್ಯೇಯದೊಂದಿಗೆ ಅಖಾಡಕ್ಕಿಳಿದು - ಸಮಾಜಘಾತುಕ ಶಕ್ತಿಯಾಗಿ ಪರಿಣಮಿಸಿರುವ ಮಾವೋವಾದಿಗಳು & ಅವರನ್ನ ಬೆಂಬಲಿಸಿದ ಬುದ್ಧಿ ಬಲಿತ ಜುಬ್ಬಾಧಾರಿಗಳು..
- ತರಂಗಗಳನ್ನ ಬಾಚಿಕೊಳ್ಳಲು ಮಾಧ್ಯಮ ಮಿತ್ರರ ಸಹಾಯ ಹಸ್ತ ಪಡೆದ ನಿಷ್ಕಳಂಕ ಉದ್ಯಮಿಗಳು...
- ಮಾಧ್ಯಮದಲ್ಲಿ ದಿನವೂ ಜನರಿಗೆ ಜಾತ್ಯಾತೀತತೆ ಶಂಖ ಊದಿ, ಒಳಗೊಳಗೇ ರಾಜಕೀಯ ಪಕ್ಷಗಳಿಗೆ ನಿಷ್ಠರಾಗಿ ಪದ್ಮಪತ್ರಗಳನ್ನ ಇನಾಮಾಗಿ ಪಡೆದ ಮಹಿಳೆಯರು & ಮಹನೀಯರು...
- ರಾಜ್ಯದ ಪತ್ರಿಕೋದ್ಯಮಕ್ಕೇ ಕಪ್ಪು ಪುಟ ಎಂಬಂತೆ ಕಿರಿ ಪತ್ರಿಕೋದ್ಯಮಿಯೊಬ್ಬರ ಬಗ್ಗೆ ಸ್ವಘೋಷಿತ ಸಾಧುಸಂಪನ್ನ - ಸಮಾಜಮುಖಿ & ಅಚ್ಚರಿ ವ್ಯಕ್ತಿತ್ವದ ಹಿರಿ ಪತ್ರಿಕೋದ್ಯಮಯೊಬ್ಬರು ಕೀಳು ಭಾಷೆ ಎಂಬ ಶಬ್ದದ Superlative ರೂಪ ತಾಳಿ ಬರೆದದ್ದು....
- ಜನರನ್ನ ಅನಕ್ಷರತೆಯ ಕೂಪದಲ್ಲಿ ತಳ್ಳಿ, ಅವರಿಂದು ಓಟು ಕದಿಯುವ ರಾಜಕಾರಣಿಗಳ ಮಧ್ಯೆಯೂ ; ಇಂದಿಗೂ ಅದೇ ಅನಕ್ಷರತೆ - ಹಿಂದುಳಿದಿರುವಿಕೆ ಇದ್ದರೂ ಜನಪರ & ಅಭಿವೃದ್ಧಿಪರ ಕಾರ್ಯಗಳಿಂದ ಬಿಹಾರ್ ರಾಜ್ಯದಲ್ಲಿ ನಿತೀಶ್ ಕುಮಾರ್ ದಿಗ್ವಿಜಯ ಸಾಧಿಸಿದ್ದು...
- ನರೇಂದ್ರ ಮೋದಿ, ದೇಶದ ಆಡಳಿತ ಯಂತ್ರದಲ್ಲಿ ನಭೂತೋ ನಭವಿಷ್ಯತಿ ಎಂಬಂತೆ ಬದಲಾವಣೆ ತಂದದ್ದು...
- ಕ್ರಿಕೆಟ್ ದಿಗ್ಗಜ ಸಚಿನ್ ದಿನಗಳೆದಂತೆ ಹಳೆ ಚಿನ್ನಕ್ಕಿರುವ ಬೆಲೆಯಷ್ಟೇ ಮಾಗುತ್ತಿರುವುದು ...
- ಆಪದ್ಭಾಂಧವ ಲಕ್ಷ್ಮಣ ನಿಜಕ್ಕೂ Very Very Special ಅನಿಸಿಕೊಂಡದ್ದು...
- ಭಾರತದಲ್ಲಿ ಕ್ರಿಕೆಟ್ ಮಾತ್ರ ಕ್ರೀಡೆ ಎಂಬ ಭಾವನೆ ಅಳಿಸಲು ನಿಜ ಪ್ರಯತ್ನ ಮಾಡಿದ ಸೈನಾ ನೆಹವಾಲ್..
- ಎ.ಆರ್.ರೆಹಮಾನ್ ಯುಗದ ನಂತರ EkDum Fressshhh Music ನೀಡಲು ಸಜ್ಜಾಗುತ್ತಿರುವ ಅಮಿತ್ ತ್ರಿವೇದಿ...
ಹೀಗೆ ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಸ್ವಾರಸ್ಯಕರ ಸಂಗತಿಗಳನ್ನ ಹೆಕ್ಕಬಹುದು.
ಸಂದು ಹೋದ ಘಟನೆ ಎಷ್ಟೇ ಕೆಟ್ಟದಾಗಿರಲಿ- ಎಷ್ಟೇ ಒಳ್ಳೆಯದಾಗಿರಲಿ ಅದರಿಂದ ಪಾಠ ಕಲಿಯದ ಹೊರತು ಆ ಘಟನೆಗೆ ನ್ಯಾಯ ದೊರೆತಂತಾಗುವುದಿಲ್ಲ... ಎಂಬ ಆಶಯದೊಂದಿಗೆ
&
ಹೊಸ ದಿನಕ್ಕೆ ಹಾಕಿಕೊಂಡ Resolution ಗಳು ದಿನಗಳದಂತೆ ಹೊಳಪು ಕಳೆದುಕೊಳ್ಳುವುದು ಸಾಮಾನ್ಯ. ಅದನ್ನ ಹೋಗಲಾಡಿಸಲು ಇಂದಿನಿಂದ ಪ್ರತಿದಿನ : " ಈ ದಿನವೇ ಹೊಸ ದಿನ " ಎನ್ನೋಣ.
No comments:
Post a Comment