ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 18, 2010

ಕೆಲ್ವಿನ್ ಮತ್ತು ಹಾಬ್ಸ್

ಚುಟುಕು ಸುದ್ದಿ : ಕೆಲ್ವಿನ್ ಮತ್ತು ಹಾಬ್ಸ್ ಗೀಗ 25 ವರ್ಷ



ಸುದ್ದಿಯ ಒಳನೋಟ :

ನನಗೆ ಮೊದಲಿಗೆ ನಮ್ಮ ಆರ್.ಕೆ.ನಾರಾಯಣ್ ರವರ ಸ್ವಾಮಿ & ಫ್ರೆಂಡ್ಸ್ ಕಾದಂಬರಿಯಲ್ಲಿನ  W.S.Swaminathan ಪಾತ್ರವೇ ಜಗತ್ತಿನ ಅತಿ ಮುಗ್ಧ ಮತ್ತು ನಿಷ್ಕಲ್ಮಶ ಕಲ್ಪನಾಲೋಕದ ವಿಲಾಸಿ ಎಂದಂದುಕೊಂಡಿದ್ದೆ. ನನ್ನ ಮನಸೂ ಅವನ ಮನಸಿನಂತೇಕೆ ಇಲ್ಲ ಎಂದು ಸದಾ ಹಂಬಲಿಸುತ್ತಿದ್ದೆ. ಆದರೆ ಯಾವಾಗ ಕೆಲ್ವಿನ್ ನ ಪರಿಚಯವಾಯಿತೋ ಅಂದಿನಿಂದ ನನ್ನ ಆ ಮುಗ್ಧ & ನಿಷ್ಕಲ್ಮಶ ಕಲ್ಪನಾ ಲೋಕದ ವಿಲಾಸಕ್ಕೆ ನಾನು ಏಕಲವ್ಯನಾದರೆ ಕೆಲ್ವಿನ್ ನೇ ದ್ರೋಣನಾಗಿದ್ದಾನೆ. W.S.Swaminathan, ನನ್ನನ್ನು ಕ್ಷಮಿಸು. ಆದರೆ ನಿನ್ನ ನೆನಪು ಸದಾ ನನ್ನೊಂದಿಗಿದೆ. ನಿನ್ನ ನೆನಪಿನ ದ್ಯೋತಕವಾಗಿ ನನ್ನ ವೈಯಕ್ತಿಕ ಗ್ರಂಥಾಲಯಕ್ಕೆ W.S.Swaminathan Library, Malgudi ಅಂತ ಹೆಸರಿಟ್ಟಿದ್ದೇನೆ.

ಕರ್ತೃ ಬಿಲ್
  • ಬಿಲ್ ವಾಟರಸನ್ ಸದರಿ ಕಾಮಿಕ್ ಸರಣಿಯ ಕರ್ತೃ.
  • ನವೆಂಬರ್ 18, 1985 ರಿಂದ ಡಿಸೆಂಬರ್ 31, 1995 ರವರೆಗೆ ಒಟ್ಟು 3160 ಕಂತುಗಳಲ್ಲಿ ಪ್ರಕಟವಾಗಿದೆ.
  • ಫ್ರೆಂಚ್ Reformation Theologian ಜಾನ್ ಕೆಲ್ವಿನ್ ಮತ್ತು ಆಂಗ್ಲ ರಾಜಕೀಯ ಚಿಂತಕ ಥಾಮಸ್ ಹಾಬ್ಸ್ ಹೆಸರಿನಿಂದ ಪ್ರೇರಿತಗೊಂಡು ಈ ಕಾಮಿಕ್ ಸರಣಿಯ ಪ್ರಮುಖ ಪಾತ್ರಧಾರಿಗಳಿಗೆ ಹೆಸರಿಡಲಾಗಿದೆ.
  • ಕೆಲ್ವಿನ್ ಒಬ್ಬ ಆರು ವರ್ಷದ ಜಾಣ & ಕಲ್ಪನಾಲೋಕದಲ್ಲಿ ಸದಾ ತನ್ಮಯನಾಗಿರುವ ತುಂಟ ಹುಡುಗ. 
  • ಹಾಬ್ಸ್ ಅವನ ಸಂಗಾತಿ. ಅದೊಂದು ಗೊಂಬೆ. ಅದೊಂದು ಹುಲಿ. ಅಂದ್ರೆ ಹುಲಿಯ ರೂಪದ ಗೊಂಬೆ. ಈ ಗೊಂಬೆಗೆ ಅವರಿಬ್ಬರು ಮಾತ್ರ ಇದ್ದಾಗ ಜೀವ ಬಂದಿರುತ್ತೆ. ದೃಶ್ಯದಲ್ಲಿ ಮೂರನೇ ವ್ಯಕ್ತಿ ಕಾಣಿಸಿಕೊಂಡಾಗ ಅದು ನಿರ್ಜೀವ ಗೊಂಬೆ. ಅವರಿಬ್ಬರು ಮಾತ್ರ ಇದ್ದಾಗ ಕೆಲ್ವಿನ್ ನ ಐತಿಹಾಸಿಕ ವಿಚಾರ ಸರಣಿ ಯ ಟೀಕಾಕಾರ ಮತ್ತು ಅವನ ಕಲ್ಪನಾ ಲೋಕದ ವಿಹಾರದಲ್ಲಿ ಸಂಗಾತಿ.
  • ಸದರಿ ಕಾಮಿಕ್ ಮೂಲಕ ಕಲೆ, ಧರ್ಮ, ಪರಿಸರವಾದ, ರಾಜಕೀಯ ವಿಶ್ಲೇಷಣೆ ... ಇತ್ಯಾದಿ ಆಸಕ್ತಿದಾಯಕ ವಿಷಯಗಳನ್ನ ಕೆಲ್ವಿನ್ ನ ಮುಗ್ಧ ವಿಚಾರಸರಣಿಯನ್ನ ಬಳಸಿ ಸಾಣೆ ಹಿಡಿಯಲಾಗಿದೆ.
  • ಇತರ ಪಾತ್ರಧಾರಿಗಳು : 
  • ತಂದೆ ತಾಯಿ - ಅಮೆರಿಕದ ಮಧ್ಯಮವರ್ಗದ ಕೆಲ್ವಿನ್ ಹೆತ್ತವರು. ಇವರ ಬುದ್ಧಿಮತ್ತೆಗೆ ಸವಾಲೆಸೆದು ಮೋಜು ನೋಡುವುದು ಮತ್ತವರನ್ನ ಗೋಳುಹೊಯ್ದುಕೊಳ್ಳುವುದು ಕೆಲ್ವಿನ್ ನ ದಿನಚರಿಯ ಭಾಗ.
  • Susie Derkins - ಕೆಲ್ವಿನ್ ನ ಸಹಪಾಠಿ ಹುಡುಗಿ. ಸದಾ ಇವಳ ಕಾಲೆಳೆಯುವುದು ಕೆಲ್ವಿನ್ ನ ಪ್ರಮುಖ ಆಸಕ್ತಿಗಳಲ್ಲೊಂದು.
  • Rosalyn - ಇವಳು ಕೆಲ್ವಿನ್ ನ ಪೋಷಕರು ಊರಲ್ಲಿ ಇಲ್ಲದಿರುವಾಗ ಅವನನ್ನ ನೋಡಿಕೊಳ್ಳುವ ಹೊಣೆ ಹೊತ್ತ babysitter.
  • Moe - ಕೆಲ್ವಿನ್ ಪಾಲಿಗೆ ದುಸ್ವಪ್ನನಾಗಿರುವ ಭಯಂಕರ ಪುಂಡ ಹುಡುಗ.
  • Miss Wormwood -  ಕೆಲ್ವಿನ್ ನ ಶಿಕ್ಷಕಿ.
  • Mr. Spittle - ಶಾಲೆಗೆ ಹೋದ ದಿನಗಳಷ್ಟೇ ದಿನ ಇವರನ್ನೂ ಕಾಣಲೇಬೇಕಾದಷ್ಟು ತುಂಟತನ ಕೆಲ್ವಿನ್ ನದು. ಇವರು ಶಾಲೆಯ ಪ್ರಿನ್ಸಿಪಾಲ್.
  • Mr. Lockjaw - ಕೆಲ್ವಿನ್ ಸದಾ ಬೈಸಿಕೊಳ್ಳುವ ಬೇಸ್ ಬಾಲ್ ಆಟಕ್ಕೆ ಶಾಲೆಯಲ್ಲಿ  ಬೇಸ್ ಬಾಲ್ ತರಬೇತುದಾರ.

  • ಕೆಲ್ವಿನ್ ನ ಕೆಲವು ಅಮರವಾಣಿಗಳು :
  1. Genius Is Never Understood In Its Own Time.
  2. Weekends Dont Count Unless You Spend Them Doing Something Completely Pointless.
  3. Big Bang = Horrendous Space Kablooie.
  • ಉದಾಹರಣೆಗಳು :
1
2 & 3
  • ಕೆಲ್ವಿನ್ ಮತ್ತು ಹಾಬ್ ರ ಬಾಂಧವ್ಯಕ್ಕೆ ಕನ್ನಡಿ.
ಇನ್ನಷ್ಟು ಸ್ಯಾಂಪಲ್ ಡೋಸ್ ಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
  • ಕೆಲ್ವಿನ್ ನ ವಿಚಾರಸರಣಿಯ ಬಗೆಗೆ ವಿಶ್ಲೇಷಿಸುವುದು ಮೂರ್ಖತನದ ಕೆಲಸವಾದೀತು. ಅದೊಂದು ವರ್ಣಿಸಲಸದಳ ಅನುಭವ. ಹಕ್ಕಿಗಳ ಕಲರವದೊಂದಿಗೆ ಮಿಳಿತವಾಗಿರುವ ಸುಂದರ ಮುಂಜಾವಿದ್ದಂತೆ. ಅದನ್ನ ಖುದ್ದು ಓದಿಯೇ ಗ್ರಹಿಸಬೇಕು.

 
: ರವಿ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ