ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 1, 2010

ಅರುಂಧತಿ ರಾಯ್

ಚುಟುಕು ಸುದ್ದಿ : ಅರುಂಧತಿ ರಾಯ್ ಅವರ ಕಾಶ್ಮೀರ ಬಗೆಗಿನ ಹೇಳಿಕೆಗೆ ವಿರೋಧ


ಸುದ್ದಿಯ ಒಳನೋಟ

 • 24 ನವೆಂಬರ್ 1961ರಲ್ಲಿ ಬೆಂಗಾಲಿ ತಂದೆ ರಣಜಿತ್ ರಾಯ್ & ಕೇರಳ ಮೂಲದ ತಾಯಿ ಮೇರಿ ರಾಯ್ ಅವರಲ್ಲಿ , ಮೇಘಾಲಯದ ಶಿಲ್ಲೋಂಗ್ ನಲ್ಲಿ ಜನಿಸಿದರು.
 • ಬಾಲ್ಯ ಕೇರಳದ ಅಯ್ ಮಾನಂನಲ್ಲಿ. 
 • ಮುಂದೆ ದೆಹಲಿಯ School of Planning and Architecture ಯಲ್ಲಿ ಆರ್ಕಿಟೆಕ್ಚರ್ ಓದಿದರು.
 • ಅವರ ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಸಿಕ್ಕು ಆರ್ಥಿಕವಾಗಿ ಸಬಲರಾಗುವವರೆಗೆ ವಿವಿಧ ಕೆಲಸಗಳನ್ನ ಮಾಡಿದರು. ಪಂಚತಾರಾ ಹೋಟೆಲ್ ನಲ್ಲಿ ಏರೋಬಿಕ್ಸ್ ತರಗತಿಗಳನ್ನ ಹೇಳಿಕೊಟ್ಟಿದ್ದೂ ಉಂಟು !
 • ಇವರಿಗೆ ಇಬ್ಬರು ಮಾಜಿ ಪತಿಯಂದಿರು(!) : ಗೆರಾರ್ಡ್ ಡಾ ಕುನ್ಹಾ & ಪ್ರದೀಪ್ ಕ್ರಿಶನ್
 • ಹಾಲಿ ಪತಿ : ಇಲೆಕ್ಟ್ರಿಕ್ ಮೂನ್
 • ಚಿತ್ರಗಳಿಗೆ ಚಿತ್ರಕಥೆ ಬರೆಯುತ್ತಿದ್ದ ರಾಯ್ ಸುದ್ದಿಗೆ ಬಂದದ್ದು 1994ರಲ್ಲಿ. ಶೇಖರ್ ಕಪೂರ್ ನಿರ್ದೇಶನದ , ಸೀಮಾ ಬಿಸ್ವಾಸ್ ಅಭಿನಯದ ಬ್ಯಾಂಡಿಟ್ ಕ್ವೀನ್ ಚಿತ್ರದ ವಿಮರ್ಶೆಯ ಮೂಲಕ.
 • 1992ರಲ್ಲಿ ಶುರುಮಾಡಿ 1996ರಲ್ಲಿ ಬರೆದು ಮುಗಿಸಿದ್ದು ಅವರ ಪ್ರಶಸ್ತಿ ವಿಜೇತ ಕಾದಂಬರಿ : ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್. ಇದು ಬಹುತೇಕ ಆತ್ಮಕಥನವಾಗಿದ್ದು ಅವರ ಬಾಲ್ಯದ ಘಟನೆಗಳನ್ನ ಆಧರಿಸಿದೆ.
 • 1997ರ ಮೇನಲ್ಲಿ ಪ್ರಕಟವಾದ ಈ ಪುಸ್ತಕಕ್ಕೆ ಅಗಾಧ ಮೆಚ್ಚುಗೆ ವ್ಯಕ್ತವಾಗಿ, ವರ್ಷದ ಕೊನೆಯಲ್ಲಿ  ಟೈಮ್ ಮ್ಯಾಗಜೀನ್ ಪ್ರಕಟಿಸಿದ '1997ರ ಜಗತ್ತಿನ 5  ಅತ್ಯುತ್ತಮ ಪುಸ್ತಕಗಳ ಪಟ್ಟಿ'ಗೆ ಸೇರಿತು.
 • ನಂತರದ ದಿನಗಳಲ್ಲಿ ಮತ್ತೆ ಚಿತ್ರಕಥೆಯ ಕೆಲಸಕ್ಕೆ ಮರಳಿದರು.
 • 2007ರಲ್ಲಿ ತಮ್ಮ ಎರಡನೇ ಕಾದಂಬರಿ ಬರೆಯಲು ಶುರುವಿಟ್ಟುಕೊಂಡಿರುವ ಘೋಷಣೆ ಮಾಡಿದರು.
 • 2008ರಲ್ಲಿ ಪತ್ರಿಕೆಯೊಂದರ ಸಂದರ್ಶನದಲ್ಲಿ ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಟ್ಟು ಕಳಿಸುವುದು ಒಳಿತು ಎನ್ನುವ ಧಾಟಿಯಲ್ಲಿ ಮಾತನಾಡಿ ವಿವಾದಕ್ಕೆ ಒಳಗಾದರು.
 • ಇತ್ತೀಚೆಗೆ ಸುದ್ದಿಯಲ್ಲಿರೋದು ಇನ್ನೊಂದು ಅಂತಹುದೇ ಹೇಳಿಕೆಯ ಮೂಲಕ. ಅವರು ಹೇಳಿದ್ದೇನು ಗೊತ್ತಾ ? : "Kashmir should get azadi from bhookhe-nange Hindustan"
 • ಈ ಹೇಳಿಕೆ ನೀಡಿದ್ದು ಹುರಿಯತ್ ಕಾನ್ಫರೆನ್ಸ್ ಆಯೋಜಿಸಿದ್ದ " ಆಜಾದಿ - ಒಂದೇ ಮಾರ್ಗ " ಎಂಬ ವಿಷಯದ ಮೇಲಿನ ಸೆಮಿನಾರ್ ಸಮಾರಂಭದಲ್ಲಿ. ಅಂಥ ದೇಶ ವಿದ್ರೋಹಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವುದೇ ಪಾಪವೆಂದಿರುವಾಗ ಅವರ ಪರವಾಗಿ ಮಾತನಾಡುವುದು ??


: ರವಿ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ