ಮೊನ್ನೆ ದಿವಸ ನೋಕಿಯಾ ಇಂಡಿಯಾ ಬಿಡುಗಡೆ ಮಾಡಿರುವ ಹೊಚ್ಚ ಹೊಸ Smart Phone Nokia N8 ಬಗ್ಗೆ ತಿಳಿದುಕೊಳ್ಳೋಣ್ವಾ ಇವತ್ತು ? ಸದರಿ ಸ್ಮಾರ್ಟ್ ಫೋನಿನ ವಿಶೇಷತೆಗಳನ್ನ ಒಂದು ಸಾಲಿನ ಟಿಪ್ಪಣಿಗಳ ಮೂಲಕ ಹೇಳ್ತೀನಿ, ಯಾಕಂದ್ರೆ ಈ ಮೊಬೈಲ್ ನಲ್ಲಿ ಇರುವ ಅಬ್ಬಾ ಎನ್ನುವ ಗುಣವಿಶೇಷಗಳನ್ನ ಹಾಗೆ ಓದಿಕೊಂಡರೇನೇ ಖುಷಿ !! ಜೊತೆಗೆ ಸದರಿ ಸ್ಮಾರ್ಟ್ ಫೋನ್ ನಲ್ಲಿ ಬಳಸಲಾಗಿರುವ ಅಚ್ಚ ವಿಶೇಷ ಹೊಸ Technology ಗಳ ವಿವರಣೆಯೇ ಈ ಲೇಖನದ High Light !!!!!!!!!!
- ಪಂಡಿತರ ಟೀಕೆಗೊಳಗಾದ N97 ನಂತರ ಬಂದಿರುವ ನೋಕಿಯಾದ ಮಹತ್ವಾಕಾಂಕ್ಷೆಯ SmartPhone, N8.
- Symbian^3 Operating System ಒಳಗೊಂಡು ಬಿಡುಗಡೆಗೊಂಡ ಜಗತ್ತಿನ ಮೊದಲ SmartPhone.
- ಮೊದಲ ನೋಟದ ಆಕರ್ಷಣೆ : 12MP ಕ್ಯಾಮೆರಾ ಮತ್ತು ಕ್ಸೆನಾನ್ ಫ್ಲ್ಯಾಷ್.
- HDMI out & Dolby Digital Plus : ಇನ್ನೆರಡು ಆಕರ್ಷಣೆಗಳು
- Anodized Aluminium Unibody Shell : ಬಣ್ಣ ಮಾಸದ : ಗಟ್ಟಿ : ಒಂದೇ ಅಚ್ಚು ಎಂಬಂತೆ ತಯಾರಾದ Solid ಮೈಕಟ್ಟು.
- Capacitive TouchScreen
- Handwriting Recognition ( for chinese )
- 16:9 nHD Resolution Screen ( 640x360 )
- CPU ಜೊತೆಗೆ GPU ಕೂಡ ಇದೆ.
- Li-Ion Battery
- Short Range FM Transmitter
- ಇನ್ನುಳಿದಂತೆ ಎಲ್ಲ SmartPhone ನಲ್ಲಿರುವ ....
ದೊಡ್ಡ TouchhScreen
ಬ್ಲೂ ಟೂತ್ (BlueTooth)
ವೈ-ಫೈ (Wi-Fi)
Emails & Instant Messaging
ವೆಬ್ ಬ್ರೌಸಿಂಗ್
ಜಿ.ಪಿ.ಎಸ್. (GPS Positioning)
Magnetic Compass & Accelerometer
Photo Editor
Video Editor
16GB ಇಂಟರ್ನಲ್ ಮೆಮೊರಿ
ಇಷ್ಟೆಲ್ಲಾ ಹೊಚ್ಚ ಹೊಸ ಗುಣಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿರುವ ಸದರಿ SmartPhone ಬೆಲೆ ಗಮನಿಸಿದರೆ ಇದು ಆ್ಯಪಲ್ ಕಂಪೆನಿಯ iPhone ಗೆ ಸವಾಲೊಡ್ಡುವ ಇರಾದೆಯಿಂದ ಬಿಡುಗಡೆಯಾಗಿದೆ ಎಂದು ಹೇಳಬಹುದು. iPhone ಬೆಲೆ ಹತ್ತಿರ ಹತ್ತಿರ 30000/- ಇದ್ದರೆ ಸದರಿ ನೋಕಿಯಾ ಎನ್8 ಬೆಲೆ 26,259/- ಇರುವುದನ್ನ ಗಮನಿಸಬೇಕು.
ಈಗ ಕೆಲವು ಅಚ್ಚ ಹೊಸ ತಂತ್ರಜ್ಞಾನಗಳ ಬಗ್ಗೆ ಚುಟುಕಾಗಿ ಸಾಧ್ಯವಾದಷ್ಟು ಕನ್ನಡ ಭಾಷೆಯಲ್ಲಿ ತಿಳಿದುಕೊಳ್ಳೋಣ.
:: ಅಚ್ಚ ವಿಶೇಷ ಹೊಸ Technology ಗಳು ::
- Gesture Control = ಟಚ್ ಸ್ಕ್ರೀನ್ ಮೇಲೆ ನಾವು ಮೂಡಿಸುವ ಒಂದು ಸಂಜ್ಞೆಗೆ ಒಂದು ಕಾರ್ಯವನ್ನ ಆರೋಪಿಸಲಾಗಿರುತ್ತದೆ. ಅಂದ್ರೆ message ಬರೆಯುವಾಗ ಒಂದು ಸಾಲನ್ನ Delete ಮಾಡಬೇಕಾಗಿದ್ದಲ್ಲಿ ಸುಮ್ಮನೆ pig-tail ಆಕಾರದಲ್ಲಿ ನಮ್ಮ ಬೆರಳನ್ನ / Stylus ಅನ್ನ ಮೂಡಿಸಿದರೆ ಆ ಸಾಲು ಅಳಿಸಿ ಹೋಗುತ್ತದೆ. ಹಾಗೆ ಸಂಜ್ಞೆಗಳ ಮೂಲಕ ನಮ್ಮ ಕೆಲಸ ಮಾಡಿಸಿಕೊಳ್ಳುವ ತಂತ್ರಜ್ಞಾನವೇ ಗೆಶ್ಚರ್ ಕಂಟ್ರೋಲ್.
- MultiTouch = ಒಂದು ಟಚ್ ಸ್ಕ್ರೀನ್ ಮೇಲೆ ಒಂದೇ ಸಮಯದಲ್ಲಿ ಮೂರು ಅಥವಾ ಜಾಸ್ತಿ ಸ್ಥಳಗಳ ಮೇಲೆ ಸಂಜ್ಞೆ ನೀಡಿಕೆ ಎಂದರ್ಥ. ಹೀಗೆ ಒಂದಕ್ಕಿಂತ ಹೆಚ್ಚು ಸಂಜ್ಞೆಗಳನ್ನ ನೀಡಿದಾಗ ( ಈ ಹಂತದಲ್ಲಿ ಟಚ್ ಸ್ಕ್ರೀನ್ ಹೇಗೆ ಕೆಲಸ ಮಾಡುತ್ತದೆ ಅಂತ ತಿಳಿಯೋಣ : ಈ ಟಚ್ ಸ್ಕ್ರೀನ್ ಅಂದ್ರೆ ಗಾಜಿನ ಮೇಲೆ ಚಿತ್ರವನ್ನ ಮೂಡಿಸಿ ಅದರ ಮೇಲೆ ಹಿಂದಿನಿಂದ LED ದೀಪಗಳ ಬೆಳಕನ್ನ ಮೂಡಿಸುತ್ತಾರೆ. ನಾವು ಆ ಪರದೆಯನ್ನ ಸೋಕಿದಾಗ ಸದರಿ ಚಿತ್ರದ ಮೇಲಿನ ಆ ಭಾಗದಲ್ಲಿ ಬೆಳಕು ಚದುರುತ್ತದೆ. ಹಾಗೆ ಚದುರಿದ ಬೆಳಕನ್ನ ಸಂಗ್ರಹಿಸಲು ಗ್ರಾಹಕ (Sensor) / ಕ್ಯಾಮೆರಾಗಳಿರ್ತಾವೆ. ಆಗ ಗ್ರಾಹಕಗಳು ತಾವು ಸಂಗ್ರಹಿಸಿದ ಮಾಹಿತಿಯನ್ನ Device ನಲ್ಲಿರುವ ತಂತ್ರಾಂಶ (Software) ಕ್ಕೆ ಸಾಗಿಸುತ್ತವೆ. ಸದರಿ ತಂತ್ರಾಂಶ ತನ್ನ ಪ್ರತಿಕ್ರಿಯೆ ನೀಡುವುದರೊಂದಿಗೆ ನಮ್ಮ ಸಂಜ್ಞೆಗೆ ಉತ್ತರ ದೊರೆಯುತ್ತದೆ !! ) , ನಾವು ನೀಡಿದ ಒಂದಕ್ಕಿಂತ ಹೆಚ್ಚಿನ ಸಂಜ್ಞೆಗಳಲ್ಲಿ ಹೆಚ್ಚು ಒತ್ತಡದಲ್ಲಿ ಅದುಮಲ್ಪಟ್ಟ ಸಂಜ್ಞೆ ಮಾತ್ರ ತಂತ್ರಾಂಶ ತಲುಪುವ ಹಾಗೆ ಸದರಿ Device ಗಳನ್ನ ತಯಾರು ಮಾಡಿರುತ್ತಾರೆ, ಅಂದ್ರೆ ಟಚ್ ಸ್ಕ್ರೀನ್ ಗಳನ್ನ Pressure Sensitive ಮಾಡಿರ್ತಾರೆ.
- Symbian^3 Operating System = Symbian ನಿಂದ SmartPhone ಗಳಿಗೆಂದೇ ತಯಾರಾಗಿರುವ OpenSource Mobile Operating System. Series 60 ಎಂಬ ಹೆಸರಿನಲ್ಲಿ ಬಂದ ವಿವಿಧ ಆವೃತ್ತಿಗಳ ಪೈಕಿ 1,2 & 3 ನೇ ಆವೃತ್ತಿಗಳು Touchscreen ಅಲ್ಲದ ಈ ಮುಂಚಿನ Mobile ಗಳಿಗೆ ಆವೃತ್ತಿಯ ಏರಿಕೆ ಕ್ರಮದಲ್ಲಿ ಹೊಸ ಹೊಸ ಸುಧಾರಿತ Feature ಗಳನ್ನ ಸೇರಿಸುತ್ತಾ ಬರಲಾಗಿದೆ. 4 ನೇ ಆವೃತ್ತಿ ಬರದೇ ಒಮ್ಮೆಲೇ 5ನೇ ಆವೃತ್ತಿಗೆ ಜಿಗಿದು TouchScreen ಗಳಿಗೆಂದೇ Mobile OperatingSystem ಅಭಿವೃದ್ಧಿಪಡಿಸಲಾಯಿತು. ಹೀಗೆ ತಯಾರಿಸಲಾದ Symbian S60 5th Edition ಗೆ Symbian^1 ಎಂದು ನಾಮಕರಣ ಮಾಡಲಾಯಿತು. ಲೇಖನದ ಮೊದಲಲ್ಲಿ ಹೆಸರಿಸಲಾದ Nokia N97 ಸದರಿ Symbian^1 ಬಳಸಿಕೊಂಡು ತಯಾರಾದ SmartPhone. Symbian^2 ಬಳಸಿಕೊಂಡು ಯಾವುದೇ Nokia Phone ಬಂದಿಲ್ಲ. ಈಗ Symbian^3 ಬಳಸಿಕೊಂಡು N8 ಜೊತೆಗೆ C6-00 , C7-00 & E7-00 ಎಂಬ SmartPhone ಗಳು Pipeline ಅಲ್ಲಿ ಇದಾವೆ. Symbian^4 ಕೂಡ ತಯಾರಾಗಿದ್ದು 2011ರ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
- Capacitive TouchScreen = ಈ ಗುಣದ ಬಗ್ಗೆ ಜಾಸ್ತಿ ವಿವರಿಸುವ ಬದಲು ಉದಾಹರಣೆ ಒಂದನ್ನ ನೀಡಿದರೆ ತುಂಬ ಸರಳವಾಗಿ ಅರ್ಥವಾಗುತ್ತೆ. ನೀವೆಲ್ಲ Laptop ನೋಡಿಯೇ ಇರುತ್ತೀರಿ. ಅದನ್ನ ಬಳಸಿಯೂ ಇರುತ್ತೀರಿ. ಅದರಲ್ಲಿ Mouse ಬದಲಿಗೆ ಬಳಸಿರುವ TrackPad ಇದೆಯಲ್ಲಾ, ಅದು Capacitive TouchScreen ಗೆ ಒಂದು ಸರಳ ಉದಾಹರಣೆ. ಇಲ್ಲಿ ಒಂದಂಶವನ್ನ ಹೇಳಬೇಕು : TouchScreen ಅಂದ್ರೆ ಅಲ್ಲಿ Sensors ಗಳ ಬಳಕೆಯಾಗಿರುತ್ತದೆ. ಹೇಗೆ ಈ ಹಿಂದಿನ ಪೀಳಿಗೆಯ ಮೊಬೈಲ್ ಗಳಲ್ಲಿ ಕೀಲಿಮಣೆ ( KeyPad ) ಒತ್ತಿ Software ಗೆ ನಮ್ಮ ಸೂಚನೆ ರವಾನಿಸುತ್ತಿದ್ದೆವೋ ಹಾಗೆ ಇಂದಿನ ಪೀಳಿಗೆಯ TouchScreen ಮೋಬೈಲ್ ಗಳಲ್ಲಿ Screen ಅನ್ನ ಒತ್ತುವ ಮೂಲಕ / ಸವರುವ ಮೂಲಕ ಸೂಚನೆ ರವಾನಿಸಲಾಗುತ್ತದೆ. KeyPad ಹಿಂದಿನ ಪೀಳಿಗೆಯಾದರೆ - TouchScreen ನಲ್ಲಿ ಇವತ್ತಿಗೂ ಎರಡು ಹೆಚ್ಚುಕಮ್ಮಿ ಸಮ ವಯಸ್ಕ ಪೀಳಿಗೆಗಳು ಚಾಲ್ತಿಯಲ್ಲಿವೆ. ಒಂದು Resisitive TouchScreen ( ವಯಸ್ಸಿನಲ್ಲಿ ಸ್ವಲ್ಪ ಹಿರಿಯದು ) Capacitive TouchScreen ( ವಯಸ್ಸಿನಲ್ಲಿ ಸ್ವಲ್ಪ ಕಿರಿಯದು ). ಈ resistive & capacitive ಮಾದರಿಗಳಲ್ಲಿರುವ ವ್ಯತ್ಯಾಸವೆಂದರೆ ಅವುಗಳ ರಚನಾ ಕ್ರಮ. ಎರಡೂ ವಿಧಗಳಲ್ಲಿ ಎರಡು ಪದರುಗಳಿದ್ದರೂ resistiveನಲ್ಲಿ ಎರಡು ಪದರುಗಳ ನಡುವಿನ ಅಂತರ ಜಾಸ್ತಿಯಿದ್ದು ನಮ್ಮ ಸೂಚನೆ ನೀಡಲು ಪರದೆ (Screen) ಅನ್ನ ಒತ್ತಬೇಕಾಗುತ್ತದೆ (Tap). ಆದರೆ ಅದೇ capacitive ನಲ್ಲಿ ಎರಡು ಪದರುಗಳ ನಡುವಿನ ಅಂತರ ತೀರ ಇಲ್ಲವೇ ಇಲ್ಲ ಎನಿಸುವಷ್ಟು ಕಡಿಮೆ ಇರುವುದರಿಂದ ಬೆರಳನ್ನ ಸವರಿದರೆ ಸಾಕು ( TrackPad ನೆನಪಿಸಿಕೊಳ್ಳಿ). ಇಲ್ಲಿ ಇನ್ನೊಂದು ಅಂಶವನ್ನ ನೀವು ಗಮನಿಸಬೇಕು : Resistive ನಲ್ಲಿ Tap ಮಾಡಬೇಕಿರುವುದರಿಂದ ಬೆರಳಿನ ಜೊತೆಗೆ Stylus ಕೂಡ ಬಳಸಬಹುದು. ಆದರೆ Capacitive ನಲ್ಲಿ ಪರದೆಯನ್ನ ಸವರಬೇಕಿರುವುದರಿಂದ ಬೆರಳಿನಂಥ ಅಗಲ ತುದಿಯುಳ್ಳ ವಾಹಕಗಳು ಮಾತ್ರ ಸಮರ್ಥವಾಗಿ ಕೆಲಸ ಮಾಡಬಲ್ಲವು. ಇನ್ನು ಶ್ರಮಬೆಲೆ ನಿಯಮ : ಬಳಕೆದಾರ ಜಾಸ್ತಿ ಶ್ರಮ ಪಡಬೇಕಾದಲ್ಲಿ ( Tapping ) ಬಳಕೆಯ ವಸ್ತುವಿನ ಉತ್ಪಾದನಾ ವೆಚ್ಚ ಕಡಿಮೆ ಇರುತ್ತದೆ & ಬಳಕೆದಾರ ಕಡಿಮೆ ಶ್ರಮ ಪಡಬೇಕಾದಲ್ಲಿ ( TrackPad ) ಬಳಕೆಯ ವಸ್ತುವಿನ ಉತ್ಪಾದನಾ ವೆಚ್ಚ ಜಾಸ್ತಿ ಇರುತ್ತದೆ. ಈ ನಿಯಮ ಇಲ್ಲೂ ಸಮರ್ಪಕವಾಗಿ ಕೆಲಸ ಮಾಡಿದೆ. ಅಂತೆಯೇ capacitive TouchScreen ದುಬಾರಿ.
- Handwriting Recognition = Optical Character Recognition(OCR) ಅಂತ ಈ ಹಿಂದೆ ಇದ್ದ ತಂತ್ರಜ್ಞಾನವನ್ನ ಹಿಂದಿಕ್ಕಿ ಇವತ್ತು Intelligent Word Recognition(IWR) ಎನ್ನುವ ತಂತ್ರಜ್ಞಾನ ಬಂದಿದೆ. OCR ನಲ್ಲಿ ಅಕ್ಷರ ಬರೆಯುವಾಗ ಮೂಡುವ ವಿವಿಧ ವಕ್ರಗಳನ್ನ (Curve) ಗುರುತಿಸಿ ಒಂದೊಂದು ಬಿಡಿ ಅಕ್ಷರಗಳನ್ನ ಗುರುತಿಸಿ ಅನಂತರ ಪದವನ್ನ ಗುರುತಿಸುವ ಹಾಗೆ Software ತಯಾರಿಸಲಾಗಿತ್ತು. ಆದರೆ ಹೊಸ IWR ನಲ್ಲಿ ಬಿಡಿ ಬಿಡಿಯಾಗಿ ಅಕ್ಷರ ಗುರುತಿಸುವ ಬದಲಿಗೆ ಇಡಿಯಾಗಿ ಪದವನ್ನೇ ಗುರುತಿಸುವ ಹಾಗೆ Software ಬರೆಯಲಾಗಿದೆ. OCR ನಲ್ಲಿ ನಮ್ಮ ಕೈಬರಹ ದೋಷದಿಂದಾಗಿ ಡಿಜಿಟಲ್ ರೂಪಕ್ಕೆ ಅನುವಾದಗೊಳ್ಳುವಾಗ ತಪ್ಪುಗಳಾಗುವ ಸಾಧ್ಯತೆಯಿತ್ತು. ಆದರೆ IWR, ಪೂರ್ವದಲ್ಲಿಯೇ ಶೇಖರಣೆಗೊಂಡಿರುವ (Pre Installed DataBase Dictionary ) ಸಾಮಾನ್ಯ ಬಳಕೆಯ ಪದಗಳ ಸಂಗ್ರಹದಿಂದ ಸದರಿ ಕೈಬರವಣಿಗೆಗೆ ಹೋಲಿಸಿ ಕೈಬರಹದೋಷದಿಂದ ಆಗಬಹುದಾದ ತಪ್ಪುಗಳನ್ನ ಮನ್ನಿಸುವ ಜಾಣತನ (Intelligence) ತೋರುತ್ತದೆ. ಅಂತೆಯೇ ಆ ಹೆಸರು !!
- Mobile Screen Resolutions = ಒಂದು ದೃಶ್ಯ ಪರದೆಯ(Screen) ಮೇಲೆ ಚಿತ್ರವೊಂದು ಮೂಡಬೇಕಾದರೆ ಸದರಿ ಚಿತ್ರ ಅನೇಕ ಚಿಕ್ಕ ತುಣುಕುಗಳ ಜೋಡಣೆಯೊಂದಿಗೆ ಪೂರ್ತಿ ದೃಶ್ಯವಾಗಿರುತ್ತದೆ. ಈ ಚಿಕ್ಕ ತುಣುಕಿಗೆ Pixel ಅನ್ನೋಣ. ಇಂತಿಪ್ಪ ದೃಶ್ಯಪರದೆಯ ಸಾಮರ್ಥ್ಯವನ್ನ ಆ ಪರದೆ ಹೊಂದಿರುವ Pixel ಗಳ ಆಧಾರದ ಮೇಲೆ ವಿಂಗಡಿಸಬಹುದು.
ಐ ಫೋನ್ 4 - GPU = Graphics Processing Unit. CPU ನ ಹಾಗೆ ಇದೂ ಕೂಡ ಒಂದು microprocessor ಆಗಿದ್ದು 3D & 2D ಗ್ರಾಫಿಕ್ ಗಳ ಸುಲಲಿತ ವೀಕ್ಷಣೆಗೆ ಸಹಾಯ ಮಾಡುತ್ತದೆ. ಗಣಕ ಗೇಮಿಗರಿಗೆ (Computer Gamers) ಅತ್ಯಂತ ಪರಿಚಿತ nVIDIA Card ಅಂದ್ರೆ ಇಂಥದೇ ಒಂದು GPU ಹೊಂದಿರುವ MotherBoard ಮೇಲೆ ಕುಳಿತುಕೊಳ್ಳುವ ಹೆಚ್ಚುವರಿ microprocessor.
- Li-ion Battery = Lithium Ion Battery ( LIB ) ಅಂತ ಕರೆಯಲ್ಪಡುವ ಇದು ಒಂದು ಮರುಪೂರಣಗೊಳ್ಳುವ (ReChargeable) ಬ್ಯಾಟರಿ. ಸದರಿ ಬ್ಯಾಟರಿಯ ಮರುಪೂರಣ(Recharge)ದ ತತ್ವ ಬಹಳ ಸರಳವಾಗಿದ್ದು : ಬ್ಯಾಟರಿ ಬಳಕೆಯಾಗುವಾಗ ಲೀಥಿಯಂ ಆಯಾನುಗಳು ಋಣಾತ್ಮಕ ಇಲೆಕ್ಟ್ರೋಡ್ ನಿಂದ ಧನಾತ್ಮಕ ಇಲೆಕ್ಟ್ರೋಡ್ ಕಡೆಗೆ ಚಲಿಸುತ್ತವೆ. ಮತ್ತು ಬ್ಯಾಟರಿ ಪೂರಣಗೊಳ್ಳುವಾಗ ( while charging ) ಲೀಥಿಯಂ ಆಯಾನುಗಳು ಧನಾತ್ಮಕ ಇಲೆಕ್ಟ್ರೋಡ್ ನಿಂದ ಋಣಾತ್ಮಕ ಇಲೆಕ್ಟ್ರೋಡ್ ಕಡೆಗೆ ಚಲಿಸುತ್ತವೆ
- Short Range FM Transmitter = ಇದು ಒಂದು ರೀತಿಯ BlueTooth ರೀತಿಯಲ್ಲಿ ಕೆಲಸ ಮಾಡುವ Technology ಎನ್ನಬಹುದು. ಈ ತಂತ್ರಜ್ಞಾನವನ್ನ ಬಳಸಿಕೊಂಡು ನಮ್ಮ ಮೊಬೈಲ್ ನಲ್ಲಿರುವ ಹಾಡುಗಳನ್ನ ಸಣ್ಣ ದೂರದವರೆಗೆ FM ತರಂಗಗಳ ರೂಪದಲ್ಲಿ ಪ್ರಸಾರ ಮಾಡಬಹುದು. ಹಾಗೆ ಪ್ರಸಾರ ಮಾಡಿದ ತರಂಗಗಳನ್ನ ದೈನಂದಿನ ಬಳಕೆಯ FM Radio Player ಗಳು ಗುರುತಿಸುತ್ತವೆ & ನಮ್ಮ ಮೊಬೈಲ್ ನಲ್ಲಿರುವ ಹಾಡನ್ನ ಹೆಚ್ಚಿನ ಧ್ವನಿಯೊಂದಿಗೆ ಹಾಡುತ್ತದೆ. ಒಂದು ರೀತಿಯ Amplifier ಬಳಸಿದ ಹಾಗಾಯ್ತಲ್ಲವೇ ? ನಿಮ್ಮ Car Stereo ದಲ್ಲಿರುವ FM Tuner ಗೆ ಇದು ಉತ್ತಮ ಸಂಗಾತಿಯಾಬಗಲ್ಲುದು. ಈ Transmitter ಮೊಬೈಲ್ ಒಳಗಡೆ ಇರುವಂಥ Technology ಯಾಗಿದ್ದು ಇದನ್ನ ಹೊರಗೆಳೆಯುವ ಕೆಲಸವನ್ನ ಮಾಡುವ Device ಅನ್ನ ಪಕ್ಕದ ಚಿತ್ರದಲ್ಲಿ ನೋಡಬಹುದು.
Belkin Tunecast Transmitter |
2 comments:
beautiful ರೇವಪ್ಪಾ... ಎನ್ 8 ಮೊಬೈಲ್ ತಂತ್ರಜ್ಞಾನದ ಒಳ ಹೂರಣವನ್ನು ತುಂಬಾ ಸೊಗಸಾಗಿ ವಿವರಿಸಿದ್ದೀರ... ಇಂತಹ ಉತ್ತಮ ಉತ್ತಮ ಲೇಖನಗಳು ನಿಮ್ಮಿಂದ ಹೆಚ್ಚೆಚ್ಚು ಮೂಡಿಬರಲಿ, ಸ್ಪರ್ಧಾರ್ಥಿಗಳ ಜ್ಞಾನ ದೀವಿಗೆಯನ್ನು ಪ್ರಜ್ವಲಗೊಳಿಸಲಿ....
very informative about gadgets,specially touchscreen technology.
Post a Comment