ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Sep 4, 2010

e ರೂಪದಲ್ಲಿರುವ ಬಿ.ಎಂ.ಶ್ರೀ. ಸಾಹಿತ್ಯ ನಿಮಗೆ ಗೊತ್ತಾ ?ಕನ್ನಡ ಸಾಹಿತ್ಯ ಗೊತ್ತಿರುವವರಿಗೆಲ್ಲಾ  ಬಿ.ಎಂ.ಶ್ರೀ.ಯವರ ಪರಿಚಯ ಇದ್ದೇ ಇರುತ್ತದೆ. ಅವರ ಪರಿಚಯ ಇಲ್ಲವೆಂದರೆ ಅಂಥವರಿಗೆ ಕನ್ನಡ ಸಾಹಿತ್ಯ ಗೊತ್ತಿಲ್ಲವೆಂದರ್ಥ. ( ಇದು ಕೇವಲ 'ಶ್ರೀ'ಯವರ ಬಗೆಗೆ ಹೇಳಿದ ಮಾತಲ್ಲ... ಎಲ್ಲ ಮೇರು ಸಾಹಿತಿಗಳ ಪರಿಚಯವೂ ಕನ್ನಡ ಸಾಹಿತ್ಯಾರ್ಥಿಗೆ ಅತ್ಯವಶ್ಯ ) ಇಂತಿಪ್ಪ 'ಶ್ರೀ'ಯವರ ಬರವಣಿಗೆಗಳು ಕನ್ನಡ ಸಾಹಿತ್ಯವೆಂಬ ಬೃಹತ್ ಹೊತ್ತಿಗೆಯಲ್ಲಿ ಸಾಕಷ್ಟು ಪುಟಗಳ ಸ್ಥಾನ ಪಡೆದಿವೆ. ಅಂಥ ಮಹಾನುಭಾವರ ಸಾಹಿತ್ಯವನ್ನ ಓದುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕೆಲವೊಮ್ಮೆ ಗ್ರಂಥಗಳ ಅಲಭ್ಯತೆಯ ಕಾರಣದಿಂದ ನಮ್ಮ ಆಸೆಯನ್ನ ಈಡೇರಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಇದನ್ನ ಮನಗಂಡಿರುವ ಬಿ.ಎಂ.ಶ್ರೀ. ಪ್ರತಿಷ್ಠಾನ ಈ ಮೇರು ಸಾಹಿತಿಯ ಹೆಸರಿನಲ್ಲಿ ಒಂದು ಅಂತರ್ಜಾಲ ತಾಣವನ್ನ ಸಿದ್ಧಪಡಿಸಿ.. ಅದರಲ್ಲಿ ಅವರ ಸಮಗ್ರ ಸಾಹಿತ್ಯದ ಜೊತೆಗೆ ಇತರೆ ಉಪಯುಕ್ತ ಮಾಹಿತಿಯನ್ನ ಕೊಡಮಾಡಿದೆ. ಅಂಥ ಒಂದು ಅತ್ಯುಪಯುಕ್ತ ತಾಣವನ್ನ ನಿಮ್ಮಗಳಿಗೆ ಪರಿಚಯಿಸಲಿಕ್ಕೆ ನನಗೆ ಇವತ್ತು ಬಹಳ ಖುಷಿ ಅನ್ನಿಸ್ತಿದೆ :ಇನ್ನು ಜಾಸ್ತಿ ಹೇಳುವುದು ಬೇಕಿಲ್ಲ. ಎಲ್ಲ ಆ ತಾಣದಲ್ಲಿದೆ. ನೋಡಿ. 

ಆ ಸಾಹಿತ್ಯವನ್ನ ಬಳಸಿಕೊಳ್ಳಿ.. ಅಂದ್ರೆ ಓದಿ ಅದರ ಸಾರವನ್ನ ಜೀವನದಲ್ಲಿ ಬಳಸಿಕೊಳ್ಳಿ ಅಂದೆ !! : ರವಿ


.


No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ