ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Sep 3, 2010

'ವಿಳಂಬ' ನ್ಯಾಯ


ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ - ಇವು ಸರಕಾರದ ಮೂರು ಅಂಗಗಳು. ಶಾಸಕಾಂಗವು ದೇಶಕ್ಕೆ ಅನುಕೂಲವಾಗುವಂತಹ ಕಾನೂನುಗಳನ್ನು ರೂಪಿಸಿದರೆ, ಕಾರ್ಯಾಂಗವು ಅದರ ಅನುಷ್ಠಾನವನ್ನು ಮಾಡುತ್ತದೆ. ಶಾಸಕಾಂಗ ಹಾಗೂ ಕಾರ್ಯಾಂಗಗಳು ಅಡ್ಡ ಹಾದಿ ಹಿಡಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ನ್ಯಾಯಾಂಗದ್ದು. ಅಷ್ಟೇ ಅಲ್ಲ, ಶಾಸಕಾಂಗದಿಂದಾಗಲೀ, ಕಾರ್ಯಾಂಗದಿಂದಾಗಲೀ ಅಥವಾ ಇನ್ನಾವುದೋ ಸಂಘ-ಸಂಸ್ಥೆಗಳಿಂದಾಗಲೀ ತನ್ನ  ದೇಶದ ಪ್ರಜೆಗಳಿಗೆ ಅನ್ಯಾಯವಾದಾಗ ಅದನ್ನು ಸರಿಪಡಿಸುವುದು ನ್ಯಾಯಾಂಗ. ತನಗೆ ಅನ್ಯಾಯವಾದಾಗ ನ್ಯಾಯ ಕೋರಿ ನ್ಯಾಯಾಲಯದ ಮೊರೆ ಹೋಗುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು.

ನಮ್ಮ ದೇಶದಲ್ಲಿ ಒಂದು ಸರ್ವೋಚ್ಚ ನ್ಯಾಯಾಲಯ, 21 ಉಚ್ಚ ನ್ಯಾಯಾಲಯಗಳು, ಹಾಗೂ ಅನೇಕ ಕೆಳ ನ್ಯಾಯಾಲಯಗಳಿವೆ. ನ್ಯಾಯಕೋರಿ ನ್ಯಾಯಾಲಗಳ ಮೊರೆ ಹೋದವರ ಸಂಖ್ಯೆ 3.14 ಕೋಟಿಗೂ ಅಧಿಕ. ಇಷ್ಟು ಅಪಾರ  ಸಂಖ್ಯೆಯಲ್ಲಿ ಮೊಕದ್ದಮೆಗಳು ನ್ಯಾಯಾಲಯಗಳ ಮುಂದಿರುವುದರಿಂದ ನ್ಯಾಯದಾನದಲ್ಲಿ ವಿಳಂಬವಾಗುತ್ತಿದೆ. ನ್ಯಾಯಾಲಯದಲ್ಲಿನ ನಿಧಾನಗತಿಯು ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ದೆಹಲಿ ಹೈಕೊರ್ಟನ ಮಾಜಿ  ನ್ಯಾಯಾಧೀಶ ಎ.ಪಿ.ಶಾಹ್ ಈ ರೀತಿ ಹೇಳುತ್ತಾರೆ- "ನ್ಯಾಯದಾನದಲ್ಲಿನ ಈಗಿರುವ ಮಂದಗತಿಯನ್ನು ಅನುಸರಿಸಿದರೆ, ದೆಹಲಿ ಹೈಕೊರ್ಟನ ಮುಂದೆ ಈಗ ಇರುವ ಎಲ್ಲಾ ಕ್ರಿಮಿನಲ್ ಕೇಸುಗಳು ಮುಕ್ತಾಯವಾಗಲು 466 ವರ್ಷಗಳು ಹಿಡಿಯತ್ತವೆ".


ನ್ಯಾಯದಾನದಲ್ಲಿನ ನಿಧಾನಗತಿಗೆ ಕಾರಣಗಳು ಹಲವಾರು. ಮುಖ್ಯವಾದ ಕಾರಣ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು. ಅಪೆಕ್ಸ ಕೋರ್ಟನ ದಾಖಲೆಗಳ ( ರೆಜಿಸ್ಟರಿ )  ಪ್ರಕಾರ, ಸರ್ವೋಚ್ಚ ನ್ಯಾಯಾಲಯದ 31 ನ್ಯಾಯಾಧೀಶರ ಹುದ್ದೆಗಳ ಪೈಕಿ 2 ಹುದ್ದೆಗಳು ಖಾಲಿ ಇವೆ; ಉಚ್ಚ ನ್ಯಾಯಾಲಯಗಳಲ್ಲಿ 895 ಹುದ್ದೆಗಳ ಪೈಕಿ 267 ಹುದ್ದೆಗಳು ಖಾಲಿ ಇವೆ; ಕೆಳನ್ಯಾಯಾಲಗಳಲ್ಲಂತೂ 1/4 ನಷ್ಟು ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.

ನಮ್ಮ ದೇಶದಲ್ಲಿ ಸರಿಯಾದ ರೀತಿಯಲ್ಲಿನ "ನ್ಯಾಯಾಧೀಶ-ಜನಸಂಖ್ಯೆ" ಅನುಪಾತ ಇಲ್ಲದಿರುವುದು ನ್ಯಾಯದಾನದಲ್ಲಿನ ನಿಧಾನಗತಿಗೆ ಮತ್ತೊಂದು ಪ್ರಮುಖ ಕಾರಣ. ಭಾರತದ ಕಾನೂನು ಆಯೋಗವು " Manpower Planning in Judiciary" ಎಂಬ ವರದಿಯಲ್ಲಿ ಭಾರತದ "ನ್ಯಾಯಾಧೀಶ-ಜನಸಂಖ್ಯೆ"ಯ ಅನುಪಾತವನ್ನು ಇತರೆ ದೇಶಗಳೊಂದಿಗೆ ಹೋಲಿಸಿದೆ. ಭಾರತದಲ್ಲಿನ ಈ ಅನುಪಾತ 10.5 ಜಡ್ಜುಗಳು ಪ್ರತಿ 1 ಮಿಲಿಯನ್ ಜನರಿಗೆ ಇದ್ದರೆ (ಜಗತ್ತಿನಲ್ಲಿ ಅತೀ ಕಡಿಮೆ). ಆಸ್ಟ್ರೆಲಿಯದಲ್ಲಿ 41.6 ಜಡ್ಜುಗಳು/ಮಿಲಿಯನ್ ಜನರಿಗೆ, ಕೆನಡದಲ್ಲಿ 75.2 ನ್ಯಾಯಾಧೀಶರು/ಮಿಲಿಯನ್ ಜನರಿಗೆ ಇಂಗ್ಲೆಂಡಿನಲ್ಲಿ 50.9ನ್ಯಾಯಾಧೀಶರು/ಮಿಲಿಯನ್ ಜನರಿಗೆ, ಅಮೇರಿಕದಲ್ಲಿ 107 ನ್ಯಾಯಾಧೀಶರು/ಮಿಲಿಯನ್ ಜನರಿಗೆ ಇದೆ. ಹೀಗಾಗಿ ಪ್ರತಿ ಒಂದು ಮಿಲಿಯನ್ ಜನರಿಗೆ 107 ನ್ಯಾಯಾಧೀಶರನ್ನು ನೇಮಕ ಮಾಡಬೆಕು ಎಂದು ಕಾನೂನು ಆಯೋಗವು ಶಿಫಾರಸು ಮಾಡಿದೆ. ಅದರಂತೆ 5000 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ ತಿಳಿಸಿದ್ದರೆ. ಖಾಲಿಯಿರುವ ಹುದ್ದೆಗಳನ್ನು ಸಚಿವರು ಯಾವಾಗ ಭರ್ತಿ ಮಾಡುತ್ತಾರೊ ! ಭರ್ತಿಯಾದ ನ್ಯಾಯಾಧೀಶರು ಅದು ಯಾವಾಗ ಕೇಸುಗಳನ್ನು ಕೈಗೆತ್ತಿಕೊಂಡು ತೀರ್ಪು ನೀಡುತ್ತಾರೋ !! ಇದೆಲ್ಲ  ಕಾದುನೋಡಬೇಕು.



: ಪವನ್


ಲೇಖಕರ ಸಂಪರ್ಕ ವಿಳಾಸ : mahanpavan@gmail.com
.

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ