.
PANKH : ಈ ಹಿಂದೆ दस कहानियां ಅಂತ ಹತ್ತಿಪ್ಪತ್ತು ಪ್ರಸಿದ್ಧ ನಟನಟಿಯರನ್ನು ಕಲೆಹಾಕಿ ಚಿತ್ರ ನಿರ್ದೇಶಿಸಿದ್ದ ಇವರು ಈಗ ಮತ್ತೆ ಪಂಖ್ ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಬಿಪಾಶಾ ಬಸು ಜೊತೆಗೆ ಮರಡೋನಾ ರೆಬೆಲ್ಲೋ ಎಂಬ ಹೊಸ ಹುಡುಗ ನಟಿಸ್ತಿದಾನೆ. ಸಾಕಷ್ಟು ಹಿಂದಿ ಚಿತ್ರಗಳಿಗೆ ಸಂಗೀತ ನೀಡಿ ಅನುಭವ ಇರುವ ರಾಜು ಸಿಂಗ್ ಸಂಗೀತ ಈ ಚಿತ್ರಕ್ಕಿದೆ.
सदियाँ : ಒಂದೆರಡು ದಶಕಗಳ ಹಿಂದೆ ಬಾಲಿವುಡ್ ಆಳಿದ ಕೆಲವು ಹಳಬರು ಈ ಚಿತ್ರದಲ್ಲಿರುವುದು ವಿಶೇಷ. ರಿಷಿ ಕಪೂರ್, ಹೇಮಾ ಮಾಲಿನಿ, ರೇಖಾ, ಶಬಾನಾ ಅಜ್ಮಿ ... ಹೀಗೆ ಇವರ ತಾರಾ ಬಲದ ಮೇಲೆ ರಾಜ್ ಕನ್ವರ್ ನಿರ್ದೇಶನ ಮಾಡೋ ಹೊಣೆ ಹೊತ್ತಿದಾರೆ. ಅದ್ನಾನ್ ಸಮಿ ಸಂಗೀತ ಈ ಚಿತ್ರಕ್ಕಿದೆ.
तुम मिलो तो सही : ಕಬೀರ್ ಸದಾನಂದ್ ಅನ್ನುವ ಹೆಚ್ಚು ಕಮ್ಮಿ ಹೊಸ ನಿರ್ದೇಶಕರು ನಾನಾ ಪಾಟೇಕರ್, ಡಿಂಪಲ್ ಕಪಾಡಿಯಾ, ಸುನೀಲ್ ಶೆಟ್ಟಿ, ವಿದ್ಯಾ ಮಾಳವಾಡೆ ( ಚಕ್ ದೆ ) ... ಇಂಥ ತಾರಾಗಣದಲ್ಲಿ ಚಿತ್ರ ಮಾಡ್ತಿದಾರೆ. ಜಬ್ ವಿ ಮೆಟ್ ಚಿತ್ರಕ್ಕೆ ಪ್ರೀತಮ್ ಜೊತೆ ಸೇರಿ ಸಂಗೀತ ನೀಡಿದ ಸಂದೇಶ್ ಶಾಂಡಿಲ್ಯ ಇಲ್ಲಿ ಸಂಗೀತ ನೀಡ್ತಿದಾರೆ.
ಹೋದ ವಾರ ತೆರೆ ಕಾಣಬೇಕಿದ್ದ The Great Indian Butterfly ಈ ವಾರಕ್ಕೆ ಮುಂದೂಡಿ ತೆರೆ ಕಾಣ್ತಿದೆ.
.
ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು
No comments:
Post a Comment