ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Mar 25, 2010

ಈ ವಾರದ Bollywood ಬಿಡುಗಡೆಗಳು - Week 13 - ಮಾರ್ಚ್ 26, 2010

.













हम , तुम और GHOST : ಈ ಹಿಂದೆ सेहर , चम्कू ಮತ್ತೆ कौन बोला ? ಅಂತ ಮೂರು ಚಿತ್ರಗಳನ್ನ ನಿರ್ದೇಶಿಸಿದ್ದ ಕಬೀರ್ ಕೌಶಿಕ್ ಈ ಚಿತ್ರದ ನಿರ್ಧೇಶಕರು. ಬಹಳ ದಿನಗಳ ನಂತರ ದಿಯಾ ಮಿರ್ಜಾ ಇಲ್ಲಿ  ಅಭಿನಯಿಸ್ತಾ ಇದ್ದಾಳೆ. ಜೊತೆಗೆ ಅರ್ಶದ್ ವಾರ್ಸಿ ಮತ್ತೆ ಬೋಮನ್ ಇರಾನಿ ಎಂಬೆರಡು ಅನುಭವಿ ಕಲಾವಿದರೂ ಈ ಚಿತ್ರದಲ್ಲಿದಾರೆ. ಜಾವೇದ್ ಅಖ್ತರ್ ಸಾಹಿತ್ಯ ಶಂಕರ್ - ಎಹಸಾನ್ - ಲಾಯ್ ಸಂಗೀತ ಇದೆ. ಇದೊಂದು ಹಾಸ್ಯ ಚಿತ್ರ ಅನ್ನೋದರ ಜೊತೆಗೆ ಅರ್ಶದ್ ವಾರ್ಸಿ ಈ ಚಿತ್ರಕ್ಕೆ ಇನ್ನೊಬ್ಬರ ಜೊತೆಗೂಡಿ ಹಣ ಸುರಿದಿದಾರೆ.



IT'S A MAN'S WORLD : ಸೌರಭ್ ಸೇನ್ ಗುಪ್ತಾ ಎಂಬ ಹೊಸ ನಿರ್ದೇಶಕರ ಪ್ರಥಮ ಪ್ರಯತ್ನ. ಚಿತ್ರದ ಬಹುತೇಕರು ಹೊಸಬರು.  ಸೌರಭ್ ಸೇನ್ ಗುಪ್ತಾ ನಿರ್ದೇಶನದ ಜೊತೆಗೆ ಸಾಹಿತ್ಯ ಮತ್ತು ಸಂಗೀತದ ಹೊಣೆಯೂ ಹೊತ್ತುಕೊಂಡಿದಾರೆ.




MITTAL v/s MITTAL : ಕರಣ್ ರಝ್ಡಾನ್ ಎಂಬ 'ಅನುಭವಿ' ನಿರ್ದೇಶಕರ ಚಿತ್ರ. ಚಿತ್ರದಲ್ಲಿ ಕೆಲವು ಅನುಭವಿ ನಟರೂ ಇದಾರೆ LIKE ಸುಚಿತ್ರಾ ಕೃಷ್ಣಮೂರ್ತಿ , ಗುಲ್ಶನ್ ಗ್ರೋವರ್ . ಮಧುರ್ ಭಂಡಾರಕರ್ ಚಿತ್ರಗಳಿಗೆ ಸಂಗೀತ ನೀಡುತ್ತಿದ್ದ ಶಮೀರ್ ಟಂಡನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.



MY FRIEND GANESHA 3 : ರಾಜೀವ್ ರುಯ್ಯಾ ನಿರ್ದೇಶನದ MY FRIEND GANESHA ಸರಣಿಯ ಮೂರನೇ ಚಿತ್ರ.




PREM KA GAME : ಅಶೋಕ್ ಖೇಣಿ ಅನ್ನೋವರೊಬ್ಬರು ತಾವೇ ದುಡ್ಡು ಸುರಿದು ತಾವೇ ನಿರ್ದೇಶನ ಮಾಡಿರೋ ಚಿತ್ರ ಇದು. ಅರ್ಬಾಝ್ ಖಾನ್ ಮತ್ತೆ ತಾರಾ ಶರ್ಮಾ ಎಂಬ ಹಳಬರು ಈ ಚಿತ್ರದಲ್ಲಿದಾರೆ.




THE GREAT INDIAN BUTTERFLY : ಸಾರ್ಥಕ್ ದಾಸಗುಪ್ತಾ ಈ ಚಿತ್ರದ ನಿರ್ದೇಶಕರು. ಈಗಾಗಲೇ ಸಾಕಷ್ಟು ಚಲನಚಿತ್ರ ಪ್ರಶಸ್ತಿ ಸಮಾರಂಭಗಳಿಗೆ ಹೋಗಿ ಬಂದಿರುವುದು ಈ ಚಿತ್ರದ ಹೆಗ್ಗಳಿಕೆ.




WELL DONE ABBA : Welcome To Sajjanpur ನಂತರ ಮತ್ತೆ ಶ್ಯಾಮ್ ಬೆನೆಗಲ್ ನಿರ್ದೇಶನ ಮಾಡ್ತಿದಾರೆ. ಬೋಮನ್ ಇರಾನಿ, ಮಿನಿಷಾ ಲಾಂಬಾ ಜೊತೆಗೆ ನಮ್ಮ ಧ್ಯಾನ್ ( ನನ್ನ ಪ್ರೀತಿಯ ಹುಡುಗಿ ) , ಸೋನಾಲಿ ಕುಲಕರ್ಣಿ ( TAXI NO. 9 2 11 ) ತಾರಾಗಣದಲ್ಲಿದಾರೆ. ಶಂತನು ಮೊಯಿತ್ರಾ ಸಂಗೀತ ನಿರ್ದೇಶಕರು ( 3 ಈಡಿಯಟ್ಸ್ ಕೂಡ ಇವರ ಸಂಗೀತ ನಿರ್ದೇಶನದಲ್ಲಿರುವ ಇತ್ತೀಚಿನ ಚಲನಚಿತ್ರ ). 



























.

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ