ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Feb 9, 2010

gmail BUZZ


Twitter ಹೆಸರು ಕೇಳಿಯೇ ಕೇಳಿರ್ತೀರಾ ನೀವೆಲ್ರೂ ... ಏನ್ ಹೇಳಿ Twitter ಅಂದ್ರೆ ?


 Twitter ಅಂದ್ರೆ Social Networking Cum Micro-Blogging Site. ಅಲ್ಲಿ ಒಬ್ಬ ವ್ಯಕ್ತಿ ತನ್ನದೊಂದು ವಿಳಾಸ ಸೃಷ್ಟಿಸಿಕೊಂಡು ಅದರ ಮುಖೇನ 140 ಶಬ್ದಗಳ, ಒಂದು SMS ಗಿನ್ನ ಇಪ್ಪತ್ತು ಅಕ್ಷರಕ್ಕೆ ಚಿಕ್ಕದಾದ ( ಹೀಗಾಗಿ ಇದನ್ನ Still Short Message Service [SSMS] ಅಂತ ಕರೀಬೇಕು ಅನ್ಸುತ್ತಪ್ಪ ನಂಗಂತೂ ) ಸಂದೇಶ, ಸುದ್ದಿ, ಅಭಿಪ್ರಾಯ, ಗುಸು-ಗುಸು ಸುದ್ದಿ, ... ಹೀಗೆ ಮನಸಿಗನ್ನಿಸಿದ ಮನದ ಮಾತು ( Tweet ) ಯಾವ್ದಾದ್ರೂ ಬರೆದ್ರಾಯ್ತು. ಆ ಮನಸಿನ ಮಾತು ನಿಮ್ಮ ವಿಳಾಸನ ತಮ್ಮ ಸ್ನೇಹಿತನ ವಿಳಾಸ ಅನ್ನೋ ಥರ ಪಟ್ಟಿ ಮಾಡ್ಕೊಂಡೋರ ಎಲ್ಲರ ವಿಳಾಸಕ್ಕೂ ತಲುಪುತ್ತೆ...ಯಾವ ಅಂಚೆ ವೆಚ್ಚ ಕೂಡ ಇಲ್ದೆ. ನೀವು ಒಂದು ಸಾರಿ ಬರೆದ ಒಂದು Tweet ಎಲ್ಲರ ವಿಳಾಸಕ್ಕೂ ಒಂದೇ ಸಮಯಕ್ಕೆ ತಲುಪುತ್ತೆ. ಅಂದ್ರೆ ಅರ್ಥ : ನೀವು ಕೊಟ್ಟ ಹೊಸ ಸುದ್ದಿ ಜಗತ್ತಿನ ಯಾವ್ಯಾವ್ದೋ ಮೂಲೇಲಿರೋ ಯಾವ್ಯಾವ್ದೋ ಸ್ನೇಹಿತನಿಗೆ ಒಂದೇ ಸಮಯಕ್ಕೆ ಪ್ರಸಾರ ಆದ ಹಾಗಾಯ್ತು. Actually ನಮ್ಮ Mobile ಗಳಲ್ಲಿರೋ Group Message Service Option ಇದೆಯಲ್ಲ , ಆ Concept ಬಳಸಿಕೊಂಡು 2006ರಲ್ಲಿ ಜನ್ಮತಾಳಿದ ಈ Twitter ಇವತ್ತು ಲೋಕಪ್ರಿಯವಾಗಿದೆ ಅಂದ್ರೆ ನಮ್ಮ ವಿಳಾಸ ಪುಸ್ತಕದಲ್ಲಿರೋ ಸಮಸ್ತರಿಗೂ ಒಂದೇ ಏಟಿಗೆ ಸಂದೇಶ ತಲುಪಿಸೋ ಅದರ ಸರಳತೆ ಯಿಂದಾಗಿ ಅಷ್ಟೆ. ಇಲ್ಲಿ ನೀವು Tweet ಮಾಡುವ ವಾಕ್ಯದ ಮೇಲೆ ಗಮನ ಇಟ್ಕೋಬೇಕು. ಅಂದ್ರೆ ನಿಮ್ಮ Tweet ಯಾವುದೇ ಒಬ್ಬ ವ್ಯಕ್ತಿಯನ್ನ ನಿರ್ದೇಶಿಸಿ ಬರೆದ್ರೆ ಅದು Stupid ಅನ್ಸುತ್ತೆ. So, ನಿಮ್ಮ Tweet ನ ವಾಕ್ಯ ಒಂದು ಗುಂಪನ್ನ ಉದ್ದೇಶಿಸಿ ಹೇಳೋವಂಥದ್ದಿರಬೇಕು, ಸಾಮಾನ್ಯವಾಗಿ.
ಇಷ್ಟು Twitter ಬಗ್ಗೆ ಪುರಾಣ ಕೇಳಿದ್ರಲ್ಲಾ ... Ditto ಇದೆ ನಮ್ಮ ಈ gmail BUZZ.

Tweet ಅಂದ್ರೆ ಹಕ್ಕಿಯ ಕೂಜನ ಅನ್ನೋ ಭಾವ ಬಿಂಬಿಸಿದ್ರೆ BUZZ ಅನ್ನೋದು ದುಂಬಿಯ ಝೇಂಕಾರ ಅಂತ ಹೇಳುತ್ತೆ.

ಒಟ್ನಲ್ಲಿ ನಮ್ಮಿಂದ ಹೊರಟ ಧ್ವನಿ ದಶದಿಕ್ಕುಗಳಲ್ಲೂ ಪ್ರತಿಧ್ವನಿಸೋದೇ ಈ ತಂತ್ರಾಂಶದ ಮರ್ಮ.ಈ gmail BUZZ ನಲ್ಲಿ ನಮ್ಮ gmail Contacts List ಅಲ್ಲಿ ಇರೋರೆಲ್ಲರೂ ಈ ಅನುರಣನ ದ ವ್ಯಾಪ್ತಿಗೆ ಬರ್ತಾರೆ. ನಾವು ಅವರ ಕೂಜನದ ವ್ಯಾಪ್ತಿಗೆ ಬರ್ತೀವಿ ಅವರು ನಮ್ಮ ಕೂಜನದ ವ್ಯಾಪ್ತಿಗೆ ಬರ್ತಾರೆ. ನಂತರದ್ದೆಲ್ಲ Twitter ದ್ದೇ ನಕಲು. Almost. ನಮ್ಮ SSMS ಜೊತೆಗೆ ಫೋಟೋ - ವಿಡಿಯೋ ಗಳನ್ನೂ ಹಂಚಿಕೊಳ್ಳೋ Super ಅವಕಾಶ ಕೊಡ್ತಿದೀವಿ ಅಂತ ಗೂಗ್ಲಿಗರು ಹೇಳ್ತಿದಾರೆ. ಇಲ್ಲಿ Public ಮತ್ತು Pivate ಅಂತ Option ಬೇರೆ ಇಟ್ಟಿದೀವಿ. ಇದರ ಜೊತೆಗೆ ನೀವು Web ದುನಿಯಾದಲ್ಲಿ ಬೇರೆ ಬೇರೆ ಎಲ್ಲೆಲ್ಲಿ Account ಇಟ್ಟಿದೀರಲ್ಲ ಅವೆಲ್ಲದರ ವಿಳಾಸವನ್ನ ಲಿಂಕಿಸಿದಾರೆ. ಉದಾ : picasa, flickr, googlereader, twitter...ಹೀಗೆ. ಮತ್ತು ನಿಮ್ಮ ದುಂದುಭಿಗೆ ಬಂದ ಪ್ರತಿ ಪ್ರತಿಕ್ರಿಯೆನ ನಿಮ್ಮ inbox ಗೆ mail ಮಾಡಲಾಗುತ್ತೆ. ಜೊತೆಗೆ ಇದು mobile ನಲ್ಲೂ ಸಿಗುತ್ತೆ. ಒಂದು ಮಾತನ್ನ ಇಲ್ಲಿ ಎಲ್ರೂ ಒಪ್ಲೇಬೇಕು :: ಈ BUZZ ಏನಿದೆಯಲ್ಲ ..ಇಲ್ಲಿ ಈ Social Network ದುನಿಯಾ ದ ವೈರಿಗಳ ಲಿಸ್ಟ್ ಅಲ್ಲಿರೋ facebook, twitter ಗಳೆರಡರ ವಿರುದ್ಧದ ಸಮರ ಇಲ್ಲಿ ಕಾಣಬಹುದು. ಒಂದು ಬೇಸರದ ಸಂಗತಿ ಅಂದ್ರೆ ಈ ಗೂಗ್ಲಿಗರು ಇಲ್ಲಿ ಸ್ವಂತ ಶ್ರಮ ಹಾಕಿರೋ ಯಾವ ಲಕ್ಷಣಗಳು ಕಾಣ್ತಾ ಇಲ್ಲ. ಎಲ್ಲ ಅಗ್ಗದ ನಕಲುಗಳ ಥರ ಕಾಣ್ತಾವೆ. ಸರಿ ಒಟ್ನಲ್ಲಿ ...ಎಲ್ಲೇ ಇರು ಹೇಗೇ ಇರು .. ಎಂದೆಂದೂ..


|| Buzz ಪುರಾಣ ಸಮಾಪ್ತಿ : ||

: e - ಶ

1 comment:

Blogger said...

Ever wanted to get free Google+ Circles?
Did you know you can get them ON AUTO-PILOT & ABSOLUTELY FOR FREE by registering on Like 4 Like?

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ