ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 16, 2009

ಹಾಗೇ ಸುಮ್ಮನೆ ... ನಗೆಹನಿಗಳು

.

 
.

*

ಹುಡುಗಿ : ನಾವು ಮದುವೆ ಆಗೋದಕ್ಕೆ ಇದು ಒಳ್ಳೆ ಸಮಯ ಅನ್ಸುತ್ತೆ ನಂಗೆ..
ಅವಳ Boyfriend : ಅದು ಸರಿ. ಆದ್ರೆ ನಮ್ಮನ್ಯಾರು ಮದ್ವೆ ಆಗ್ತಾರೆ ಹೇಳು ?
*ಶಿಕ್ಷಕಿ (ವಿದ್ಯಾರ್ಥಿಗೆ) : ಅಲ್ಲಾ .. ನಾಯಿ ಬಗ್ಗೆ ಪ್ರಬಂಧ ಬರ್ಕೊಂಬನ್ರೀ , ಯಾರೂ ನಕಲು ಮಾಡಬಾರ್ದು ಅಂತ ಹೇಳಿದ್ದೆ ತಾನೆ ನಾನು ? ನಿಮ್ಮಣ್ಣ ಮತ್ತೆ ನಿನ್ನ ಪ್ರಬಂಧ ಒಂದೇ ಆಗಿದೆಯಲ್ಲಾ ?

ವಿದ್ಯಾರ್ಥಿ : ನಮ್ಮಿಬ್ಬರ ಪ್ರಬಂಧನೂ ಒಂದೇ ನಾಯಿ ಬಗ್ಗೆ ಇದೆ ಟೀಚರ್ !!

*
" ಆಲಸ್ಯತನ ನಮ್ಮ ಅತಿ ದೊಡ್ಡ ಶತ್ರು " - ಸ್ವಾಮಿ ವಿವೇಕಾನಂದ
" ನಿಮ್ಮ ಶತ್ರುವನ್ನ ಪ್ರೀತಿಸಿ " - ಮಹಾತ್ಮಾ ಗಾಂಧೀಜಿ.
ಎರಡೂ ಮಹಾತ್ಮರ ನುಡಿಗಳೇ. ಆದರೆ .....!! ??


 *
ಪರೀಕ್ಷೆಗಳಲ್ಲಿ IPL ಪದ್ಧತಿ ಜಾರಿಗೆ ತರಲು ವಿಧ್ಯಾರ್ಥಿಗಳ ಒತ್ತಾಯ :


> ಪರೀಕ್ಷೆ ಸಮಯ 2 ಗಂಟೆಗೆ ಮತ್ತು ಅಂಕಗಳನ್ನ 50ಕ್ಕೆ ಇಳಿಸಿ.
> ಪ್ರತಿ 15 ನಿಮಿಷದ ನಂತರ ವಿರಾಮವಿರಲಿ
> ಆಕಸ್ಮಿಕವಾಗಿ ಎದುರಾಗುವ ಪ್ರಶ್ನೆಗಳಿಗೆ FREE HIT ಪದ್ಧತಿ ಬೇಕು.
> ಮೊದಲ 30 ನಿಮಿಷ POWER PLAY ಬೇಕು. ( ಕೊಠಡಿಯಲ್ಲಿ INVIGILATOR ಇರಕೂಡದು )
> ಪ್ರತಿ ಪರೀಕ್ಷಾ ಕೊಠಡಿಯಲ್ಲಿ CHEER GIRLS ಬೇಕು. ಯಾವುದೇ ವಿಧ್ಯಾರ್ಥಿ SUPPLEMENT ತೆಗೆದುಕೊಂಡಲ್ಲಿ ಅವರು ಕುಣಿದು ಹುರಿದುಂಬಿಸಬೇಕು.
*
*
" ಒಂದು ಹುಡುಗಿ ಒಂದು ಹುಡುಗನನ್ನ ಪ್ರಾಮಾಣಿಕವಾಗಿ , ತನ್ನ ಪ್ರಾಣಕ್ಕಿಂತ ಹೆಚ್ಚಾಗಿ  ಪ್ರೀತಿಸಿದಳು...."

ಇನ್ನೂ ಹೆಚ್ಚಿನ ನಗೆಹನಿಗಳಿಗಾಗಿ  ( ಪ್ರತಿ ತಿಂಗಳಿಗೆ ) ರೂ. 30 RECHARGE  ಮಾಡಿಸಿ. *

*ಷರತ್ತುಗಳು ಅನ್ವಯಿಸುತ್ತವೆ.
*
ಮಲ್ಲಿಕಾ ಷೇರಾವತ್ ದ್ರೌಪದಿಯಾಗಿ ನಟಿಸಿದರೆ ದುರ್ಯೋಧನನ  ಡೈಲಾಗ್ ಹೇಗಿರಬಹುದು : " दुश्यासन ! पहनादो इसको साडी . जरा हम भी तो देखे साडी में कैसी लगाती है ये नारी ...!!! "

*ಬನ್ನೇರುಘಟ್ಟದಲ್ಲಿ ಸಫಾರಿಗೆ ಜೀಪ್ನಲ್ಲಿ ಜನರನ್ನ ಕರಕೊಂಡು ಹೋಗ್ತಿದ್ರು ನಮ್ಮ ಸರ್ದಾರ್ಜಿ. ಆಗ ಜೀಪಲ್ಲಿರೋರೊಬ್ರು ಕೇಳಿದ್ರು " ಈಗ ಹುಲಿ-ಗಿಲಿ ಬಂದ್ರೆ ಏನು ಮಾಡೋದು ? "

ಆಗ ಸರ್ದಾರ್ಜಿ COOL ಆಗಿ ಹೇಳಿದ್ರು " ಏನಿಲ್ಲಾ ಬಾಸ್ ! LEFT INDICATOR ಹಾಕಿ RIGHT ಗೆ ತಿರುಗಿಸ್ಕೊಂಡು ಹೋಗ್ತಾ ಇರೋದಷ್ಟೆ !!!!! "

*


*


No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ