ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 1, 2009

ನಿಮಗ್ಗೊತ್ತಾ ? ಈ ಭೂಮಿ ನಮಗೂ ಸೇರಿದೆ..

.








ಕಾಡು : ಕಾಡುಪ್ರಾಣಿ : : ನಾಗರಿಕ ಲೋಕ : ಮಾನವ ಪ್ರಾಣಿ ....ಇವು ಜಗದ ನಿತ್ಯಸತ್ಯಗಳು. 


ಸೃಷ್ಟಿಯ ನಿಗೂಢತೆಗಳ Sample ಎಂಬಂತೆ ಮನುಷ್ಯ ಪ್ರಾಣಿಗೆ ಮಾತ್ರ ಬುದ್ಧಿ ಎಂಬ ಅನವಶ್ಯಕ Advantage ನೀಡಿದ್ದೇ ತಪ್ಪಾಯ್ತು ಎಂಬಂತೆ ಮನುಷ್ಯರಾದ ನಾವಿಂದು Behave ಮಾಡ್ತಿದೀವಿ..ಅಲ್ವಾ ? ಅವರೂ ನಮ್ಮಂತೆ ಪ್ರಾಣಿಗಳು. ಈ ಭೂಮಿ ನಮ್ಮಷ್ಟೇ ಅವರಿಗೂ ಸೇರಿದ್ದು. ನಮ್ಮ ಪಾಲು ನಮಗಿರಲಿ..ಅವರದ್ದಾದ್ರು ಅವರಿಗಿರಲಿ Pleaaaase.


ಒಂದು ಮಾತನ್ನ ನಾವು ಮನುಷ್ಯರು ಗಮನದಲ್ಲಿಡಬೇಕು. ನಾವು ಮನುಷ್ಯರು ಏನೇ ಅಭಿವೃದ್ಧಿ ಹೊಂದಿದರೂ ಪೃಕೃತಿಯ ಶಕ್ತಿ, ತಂತ್ರಗಾರಿಕೆಯ ಮುಂದೆ ನಮ್ಮದು ಶೂನ್ಯ. ನಮ್ಮೀ ಕುತಂತ್ರದ ಕಾರಣದಿಂದಾಗಿ ಈ ಪ್ರಕೃತಿ ಮಾತೆಯ ದುಷ್ಟ ಮಕ್ಕಳಾಗಿ ರೂಪುಗೊಂಡು , ಆ ಕಾಡುಪ್ರಾಣಿಗಳು ಮೊದಲಿನಂತೆ ಆ ತಾಯಿಯ ಮುದ್ದಿನ ಮಕ್ಕಳಾಗಿ ಮುಂದುವರೆದಿವೆ.


ಈ ಭೂ ತಾಯಿ ಕರುಣಾಮಯಿ ಎಂತೋ ಅಷ್ಟೇ ಸಿಡುಕಿನವಳು. ಅವಳು ನಮ್ಮೆಲ್ಲ ಅನ್ಯಾಯವನ್ನ ಸಹಿಸಿಕೊಂಡವಳಂತೆ ಕಂಡರೂ , ತನ್ನ ಮುದ್ದಿನ ಮಕ್ಕಳ ಮೇಲೆ ನಾವು ನಡೆಸೋ ಅವ್ಯಾಹತ ಕೊಲೆ, ಸುಲಿಗೆ ಗೆ ತಕ್ಕ ಶಾಸ್ತಿ ಮಾಡ್ತಾ ಹೋಗ್ತಾಳೆ. ಗೊತ್ತಲ್ಲ 2004ರ ಸುನಾಮಿ. ಮತ್ತೆ 2002ರ ಭೂಕಂಪ ಮರೆತೋಯ್ತಾ ?


ಪ್ರಕೃತಿ ಮಾತೆಗೆ ಅತಿಯಾಯ್ತು ಈ ಮಾನವನ ಉಪಟಳ  ಅಂತನ್ನಿಸಿದಾಗೆಲ್ಲಾ ತನ್ನ ಸಿಟ್ಟು ಶಮನವಾಗುವವರೆಗೆ ಸಿಡುಕುತ್ತಾಳೆ. ಆ ಸಿಡುಕಾದರೂ ಎಷ್ಟು ದೊಡ್ಡದು ಅಂತೀರಾ. ಕೆಲವೇ ಸೆಕೆಂಡುಗಳ ಸಿಡುಕಿಗೆ ನಮ್ಮಂಥ ಲಕ್ಷ ಮಾನವರು ಮಿಡತೆಗಳಂತೆ ಒದ್ದಾಡಿ ಸಾಯಬೇಕು ....ಅಂಥ, ಪುಟ್ಟ ಸಿಟ್ಟು. 


ನೆನಪಿರಲಿ. ಅವಳ ಸುದೀರ್ಘ ಸಿಟ್ಟು ದೂರದಲ್ಲೇನಿಲ್ಲಾ ... 


ಭೂತಾಯಿ ಹುಟ್ಟಿದ ದಿನ ಬೆಂಕಿಯ ಉಂಡೆಯಂತೆ ಸುಡ್ತಾ ಇದ್ಲು. ತನ್ನ ಒಡಲಲ್ಲಿ ಜನ್ಮ ತಾಳಲಿರುವ ನಮ್ಮಂಥ ಪುಟ್ಟ ಪುಟ್ಟ ಮಕ್ಕಳನ್ನು ನೆನೆದು ನಿಧಾನವಾಗಿ ತಣ್ಣಗಾದ ವಿಜ್ಞಾನ ನಿಮಗೆ ಗೊತ್ತೇ ಇದೆ. ಜೊತೆಗೆ ನಾವಿಂದು ಹಸಿರು ಮನೆ ಪರಿಣಾಮ ಕ್ಕೆ ಕಾರಣೀಕರ್ತರಾಗ್ತಿರೋ ಸತ್ಯದ ಹಿಂದಿರೋ ವಿಜ್ಞಾನವೂ ಗೊತ್ತು. 


ಅವಳು ಆಶ್ರಯ ನೀಡಿರೋ ಮನೆಯ ಸೂರಿಗೇ ತೂತು ಮಾಡಿ ಅವಳ ಒಡಲಿಗೆ ಆ ಸೂರ್ಯನ ಸುಡು ಕಿರಣಗಳನ್ನ ತಲುಪುವ ಹಾಗೆ ಮಾಡಿ... ಆ ತಂಪಾದ ಒಡಲಿಗೆ ಕಿಚ್ಚಿಡುವ ಕೆಲಸ ಮಾಡ್ತಿದೀವಲ್ಲಾ , ಪಾಪಿಗಳಲ್ವಾ ನಾವು ? ಅದೇ ನಮ್ಮ ಮನೆಯ ಗೋಡೆಯ ಮೇಲೆ ಬಾಡಿಗೆದಾರರು ಒಂದು ಮೊಳೆ ಹೊಡೆದು ಗಡಿಯಾರು ಹಾಕಿಕೊಂಡರೆ ಸಿಡುಕ್ತೀವಲ್ಲಾ ನಾವು. ನಾವೀಗ ಮಾಡ್ತಿರೋ ಕೆಲಸಕ್ಕೆ ಆ ಅಮ್ಮ ನೀಡ್ತಿರೋ ಶಿಕ್ಷೆ ಏನೂ ಅಲ್ಲ. 


ಹೀಗಾಗಿ ಅವಳು ಸುಮ್ಮನಿದಾಳೆ ಅನ್ಕೊಳೊದು ತಪ್ಪು. ತಣ್ಣಗಿರೋ ಅವಳ ಒಡಲನ್ನ ಮತ್ತೆ ಮೊದಲಿನಂತೆ ಬಿಸಿ ಮಾಡ್ತಾ ಹೋದಾಗ ಆ ಬಿಸಿ,  ಬೆಂಕಿಯಾಗಿ ಮಾರ್ಪಟ್ಟು ಅವಳು ಮತ್ತೆ ಬೆಂಕಿಯ ಉಂಡೆಯಾಗಿ ತನ್ನ ಮೊದಲಿನ ರೂಪ ಪಡೆದು ಮುಂದಿನ ಪರ್ವದಲ್ಲಿ ಹುಟ್ಟಿ ಬರಲಿರುವ ತನ್ನ ಮಕ್ಕಳಿಗೋಸ್ಕರ ತನ್ನ ಒಡಲನ್ನ ಬರಿದು ಮಾಡ್ಕೊತಾಳೆ ಅಷ್ಟೇ !!!


ಅದಕ್ಕೇ ಹೇಳ್ತಿದೀನಿ... ನಾವೂ ಆ ತಾಯಿಯ ಮುದ್ದಿನ ಮಕ್ಕಳಾಗೋಣ. ಕ್ಷಮಯಾ ಧರಿತ್ರಿ ಅಂತ ಹೆಸರು ಪಡೆದಿರೋ ಅವಳ ಸಿಟ್ಟು ಕ್ಷಣಿಕ ಅಂತ ಗೊತ್ತಲ್ಲ ನಿಮಗೆ.





ನಾವಿಷ್ಟು ದಿನ ನಮ್ಮ ಮಂಕು ಕವಿದ ಬುದ್ಧಿಯಿಂದ ಮಾಡಿದ ತಪ್ಪಿಗೆ ಕ್ಷಮೆ ಇರಲಿ ತಾಯಿ. ತಿದ್ದಿಕೊಳ್ಳಲು ಸ್ವಲ್ಪ ಕಾಲಾವಕಾಶ ಕೊಟ್ಟರೆ , ನಾವೂ ನಿನ್ನ ಮುದ್ದಿನ ಮಕ್ಕಳಾಗ್ತೀವಿ.



.

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ