ಭರತವರ್ಷ : ಇದು ಭರತಖಂಡದ ಮೊದಲ ಹೆಸರು.
ಹಿಂದೂ ಮಹಾಸಾಗರವನ್ನ ತನ್ನ ಪದತಲದಲ್ಲಿ ಹರಡಿಕೊಂಡು ಹಿಂದುಕುಶ್ ಒಳಗೊಂಡ ಹಿಮಾಲಯದ ಛಾವಣಿಯ ನಡುವೆ ತನ್ನ ವಿಶಾಲ ಭೂಭಾಗವನ್ನ ಹರವಿಕೊಂಡು ನಿಂತಿದ್ದ ಆ ಅಖಂಡ ಭರತಖಂಡ ಕ್ಕೆ ಈ ಪುಟ ಸಮರ್ಪಿತ.
.
ಇಂದು ಆ ಭರತವರ್ಷದ ಭೂಭಾಗ ಹಂಚಿ ಹೋಗಿರಬಹುದು. ಆದರೆ ಆ ಭೂಭಾಗದಲ್ಲಿ ಅರಳಿ ನಿಂತ ಭಾರತೀಯ ಸಂಸ್ಕೃತಿಯನ್ನ ಬೆಳೆಸಿ ಆ ಸಂಸ್ಕೃತಿಯ ಅಡಿಪಾಯದ ಮೇಲೆ ಮತ್ತೆ ಭರತವರ್ಷವನ್ನ ಒಂದುಗೂಡಿಸುವಂತೆ ಹಗಲೂ ಕೂಡ ಕನಸು ಕಾಣ್ತೀನಿ.
ಆ ಕನಸನ್ನ ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಪುಟದ ಮೂಲಕ ಪುಟ್ಟ ಪ್ರಯತ್ನಕ್ಕೆ ಅಣಿಯಾಗ್ತಾ ಇದ್ದೀನಿ.
- ನಮ್ಮ ಆಚರಣೆಗಳು, ಹಬ್ಬಗಳು, ಅವುಗಳ ಮಹತ್ವಗಳು.
- ನಮ್ಮ ಪೌರಾಣಿಕ ಕಥೆಗಳಲ್ಲಿ ಬರುವ ಪಾತ್ರಗಳು ಸಾರುವ ಜೀವನ ಮೌಲ್ಯಗಳು.
- ನಮ್ಮ ರಾಜವಂಶಗಳು
- ನಮ್ಮ ಇತಿಹಾಸ
....ಹೀಗೆ ಆ ಸಂಸ್ಕೃತಿಯ ಅಡಿಪಾಯವನ್ನ ಭದ್ರಗೊಳಿಸುವ ಕಾರ್ಯ ನಾ ಮಾಡಿದರಾಯ್ತು. ಮುಂಬರುವ ಇನ್ನೊಬ್ಬ ರವಿ ಆ ಭವ್ಯ ಸೌಧ ಕಟ್ಟುವ ಕೆಲಸ ಮಾಡಿಯಾನು ಎಂಬ ಆಶಯದೊಂದಿಗೆ...
ನಿಮ್ಮ,
ರವಿ
.
No comments:
Post a Comment