*ಹಣದುಬ್ಬರ
> ಸರಕು ಮತ್ತು ಸೇವೆಗಳ ದರದಲ್ಲಿನ ಸರಾಸರಿ ಏರಿಕೆಯ ಮಟ್ಟವೇ ಹಣದುಬ್ಬರ. ಇದು, ಸರಕು ಮತ್ತು ಸೇವೆಗಳ ಸೂಚಿಕೆಯಾಗಿದೆ (index)
> ಸರಕು ಮತ್ತು ಸೇವೆಗಳ ದರದಲ್ಲಿನ ಸರಾಸರಿ ಏರಿಕೆಯ ಮಟ್ಟವೇ ಹಣದುಬ್ಬರ. ಇದು, ಸರಕು ಮತ್ತು ಸೇವೆಗಳ ಸೂಚಿಕೆಯಾಗಿದೆ (index)
*ಹಣದುಬ್ಬರಕ್ಕೆ ಕೆಲವು ಪ್ರಮುಖ ಕಾರಣಗಳು
> ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಹೆಚ್ಚಳ;
>ಆಹಾರ ಮತ್ತು ಅವಶ್ಯಕ ಪದಾರ್ಥಗಳ ಹೆಚ್ಚಳ ( "ಭಾರತೀಯರು ಹೊಟ್ಟೆಬಾಕರು; ಇದರಿಂದ ಆಹಾರದ ಕೊರತೆಯುಂಟಾಗುತ್ತಿದೆ" ಎಂದು ನೋಬಲ್ ಪುರಸ್ಕೃತ ಅಮೇರಿಕಾದ ಅಧ್ಯಕ್ಷರು ಹಿಂದೊಮ್ಮೆ ನುಡಿದಿದ್ದರು ).
*ಭಾರತದಲ್ಲಿ ಹಣದುಬ್ಬರ
> ಭಾರತದಲ್ಲಿ ಹಣದುಬ್ಬರವನ್ನು ಲೆಕ್ಕಮಾಡಲು Wholesale Price Index (WPI) ನ್ನು ಉಪಯೋಗಿಸಲಾಗುತ್ತದೆ.
(Consumer Price Index (CPI) ನ್ನು ಉಪಯೋಗಿಸುವುದಿಲ್ಲ).
>ಅಮೇರಿಕಾ, ಚೀನಾ, ಕೆನಡಾ, ಜಪಾನ್, ಇಂಗ್ಲೆಂಡ್ ಸೇರಿದಂತೆ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು Consumer Price Index ನ್ನು ಉಪಯೋಗಿಸುತ್ತವೆ.
*ಭಾರತ Wholesale Price Index (WPI) ನ್ನು ಉಪಯೋಗಿಸಲು ಕಾರಣಗಳು
> ಅತಿ ಹೆಚ್ಚಿನ ಸಾಮಗ್ರಿಗಳು ಇದರಲ್ಲಿ ಅಡಕವಾಗುತ್ತವೆ.
> ವಾರಕ್ಕೊಮ್ಮೆ ಲೆಕ್ಕಹಾಕಲು ಅನುಕೂಲವಾಗುತ್ತವೆ.
* ಆರ್ಥಿಕ ಸೂಚಿಕೆಗಳಲ್ಲಿ WPI ಕೂಡ ಒಂದು; ಇದು 1902 ರಲ್ಲಿ ಮೊದಲಬಾರಿಗೆ ಪ್ರಕಟವಾಯಿತು; 1970 ರಿಂದ ಬಹುತೇಕ ಎಲ್ಲ ಮುಂದುವರೆದ ರಾಷ್ಟ್ರಗಳು WPIನ್ನು ಕೈಬಿಟ್ಟು CPI ನ್ನು ಉಪಯೋಗಿಸುತ್ತವೆ.
* ಭಾರತದಲ್ಲಿ ಒಟ್ಟು 435 ಸರಕುಗಳು WPIನಲ್ಲಿ ಒಳಪಡುತ್ತವೆ.
*WPI ನ ನ್ಯೂನತೆಗಳು
> ಇದು ಒಂದು ವಸ್ತುವಿನ ಬೆಲೆಯ ಏರಿಳಿತವನ್ನು ನಿಖರವಾಗಿ ತೋರಿಸುವುದಿಲ್ಲ.
> 435 ವಸ್ತುಗಳ ಪೈಕಿ 100 ಕ್ಕೂ ಹೆಚ್ಚು ಸರಕುಗಳು ಉಪಯೋಗದ ದೃಷ್ಟಿಯಿಂದ ಮಹತ್ವವಿಲ್ಲದವುಗಳು. ಆದರೂ, ಅವುಗಳು ಹಣದುಬ್ಬರದ ಏರಿಳಿತದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
> ಭಾರತವು 1993-94 ರಲ್ಲಿನ WPI ನ್ನು ಆಧಾರವಾಗಿಟ್ಟುಕೊಂಡು ಹಣದುಬ್ಬರವನ್ನು ಕಂಡುಹಿಡಿಯುತ್ತಿವೆ.
* ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರವನ್ನು ಲೆಕ್ಕಮಾಡುತ್ತದೆ.
*ಎಪ್ರಿಲ್ 10 ರಂದು ಆಹಾರದ ಹಣದುಬ್ಬರ ಶೇ. 17.65 ಕ್ಕೆ ಏರಿತ್ತು. ಇದು ಗರಿಷ್ಠಮಟ್ಟದ್ದಾಗಿದೆ.
*ಹಣದುಬ್ಬರವನ್ನು ಶೇ. 5 ಕ್ಕೆ ಇಳಿಸುವ ಗುರಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೊಂದಿದೆ.
: ಪವನ್
No comments:
Post a Comment