ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Oct 27, 2010

ಬ್ಲ್ಯಾಕ್ ಬೆರ್ರಿಯ ಸಾಮ್ರಾಜ್ಯದೊಳಗೊಂದಷ್ಟು ಹೊತ್ತು ... 3

.
(( ... ಮುಂದುವರೆದಿದೆ ))ಬ್ಲ್ಯಾಕ್ ಬೆರ್ರಿ ಮೆಸೆಂಜರ್ & ಬ್ಲ್ಯಾಕ್ ಬೆರ್ರಿ ಪಿನ್ : ಬ್ಲ್ಯಾಕ್ ಬೆರ್ರಿ ಮೆಸೆಂಜರ್ ಇದು ಕೇವಲ ಬ್ಲ್ಯಾಕ್ ಬೆರ್ರಿಗಳಿಗಾಗಿ ಮಾತ್ರ ತಯಾರಾಗಿರುವ ಇನ್ ಸ್ಟಂಟ್ ಮೆಸೆಂಜರ್ ಸೇವೆ. ನಮ್ಮ ಭಾರತೀಯ ಅಂಚೆ Snail Mail ಆದ್ರೆ ಈಮೇಲ್ ಗಳು Fast Mail ಗಳಾದವು. ಈಗ ಈ ಮೆಸೆಂಜರ್ ಗಳು ( Instant Messaging ) Snap Mail ಗಳಾಗ್ತಿದಾವೆ. ಗೂಗಲ್ ಚಾಟ್ ನಿಮಗೆಲ್ಲ ಗೊತ್ತಿರಬಹುದು. ಅದು ಗೊತ್ತಿದ್ದರೆ ವಿವರಣೆ ಅಗತ್ಯವಿಲ್ಲ. ಗೊತ್ತಿಲ್ಲದಿರುವವರಿಗೆ ಈ ಪುಟ್ಟ ವಿವರಣೆ.

{ ಈ Instant Messaging ( IM ) ಅಂದ್ರೆ, ನಾವು ಅಂತರಜಾಲದಲ್ಲಿನ ನಮ್ಮ mail ಮನೆಯ ವಿಳಾಸದಲ್ಲಿ ವಿರಾಜಮಾನರಾಗಿರುವ ಸಮಯದಲ್ಲಿ ಮಾತ್ರ, ಸಮ ಸಮಯದಲ್ಲಿ ತಂತಮ್ಮ ವಿಳಾಸದಲ್ಲಿ ಇರುವ  - ನಮ್ಮ ವಿಳಾಸಪಟ್ಟಿಯಲ್ಲಿರುವ - ವ್ಯಕ್ತಿಯ ಜೊತೆ ದೂರವಾಣಿ ಸಂಭಾಷಣೆಯಷ್ಟೇ ವೇಗದಲ್ಲಿ ಬರಹದ ಮೂಲಕ ವ್ಯವಹರಿಸಲನುಕೂಲವಾಗುವ ಸಾಧನ.  ಅಲ್ಲಿ ಮಾತು - ಇಲ್ಲಿ ಬರಹ. ನಾವು ಬರೆಯುವ ಸಾಲು ಕ್ಷಣವಿಳಂಬವಿಲ್ಲದೇ ನಮ್ಮ ಸ್ನೇಹಿತನ ಕಂಪ್ಯೂಟರ್ ಪರದೆಯ ಮೇಲೆ ಮೂಡುತ್ತದೆ. ಅದಕ್ಕವನು ಬರೆಯುವ ಮರುಸಂದೇಶ ನಮ್ಮ ಕಂಪ್ಯೂಟರ್ ಪರದೆಯ ಮೇಲೂ ಕಾಲವಿಳಂಬವಿಲ್ಲದೇ ಮೂಡುತ್ತದೆ. ಇದುವೇ INSTANT MESSAGING. }

ಇಂತಿಪ್ಪ IM ಸೇವೆಯನ್ನ ಪುಟ್ಟ ಕಂಪ್ಯೂಟರ್ ಎಂದೇ ಜನಮಾನಸದಲ್ಲಿ ಪಡೆಮೂಡಿರುವ ಮೊಬೈಲ್ ನಲ್ಲೂ ನೀಡಬೇಕೆಂದು ತಂತ್ರಜ್ಞರು ಶ್ರಮಿಸಿದ್ದಾರೆ, ಯಶಸ್ಸೂ ಪಡೆದಿದ್ದಾರೆ. ಅದೇ ರೀತಿ RIM ನಲ್ಲಿರುವ ತಂತ್ರಜ್ಞರೂ ಕೂಡ. ಅವರು ಬ್ಲ್ಯಾಕ್ ಬೆರ್ರಿ ಮೊಬೈಲ್ ಗೆ ಒಂದು ವಿಶಿಷ್ಟ ಪಿನ್ ಸಂಖ್ಯೆಯನ್ನ ನೀಡ್ತಾ ಬಂದಿದಾರೆ. ಅದೇ BlackBerry PIN(Personal Identification Number). ನಾವು ನಮ್ಮ ಸ್ನೇಹಿತನ ಜೊತೆ ಬ್ಲ್ಯಾಕ್ ಬೆರ್ರಿ ಮೆಸೆಂಜರ್ ಮೂಲಕ ಸಂಪರ್ಕ ಸಾಧಿಸಲು ಈ ಪಿನ್ ಅತ್ಯವಶ್ಯ. ಹೀಗೆ ಸಂಪರ್ಕ ಸಾಧಿಸಿ ಬ್ಲ್ಯಾಕ್ ಬೆರ್ರಿ ಮೆಸೆಂಜರ್ ಮೂಲಕ IM ಸೇವೆ ಪಡೆಯಲು ಅವನ ಬಳಿಯೂ  ಬ್ಲ್ಯಾಕ್ ಬೆರ್ರಿ ಮೆಸೆಂಜರ್ ಇರುವ ಬ್ಲ್ಯಾಕ್ ಬೆರ್ರಿ ಮೊಬೈಲೇ ಇರಬೇಕು. ಯೂನಿಕ್ ಪಿನ್ ಮೂಲಕ Login ಆಗಬೇಕು. ಸದರಿ ಸಂಖ್ಯೆಯಿಂದಲೇ ನಮ್ಮ ಮೊಬೈಲ್ ನ ಗುರುತು ಪತ್ತೆ. ಯಾಕಂದ್ರೆ ಇದು ಪ್ರತಿ ಮೊಬೈಲ್ ನ ಯೂನಿಕ್ ಸಂಖ್ಯೆ.

ಆದರೆ ಈ ಬ್ಲ್ಯಾಕ್ ಬೆರ್ರಿ ಮೆಸೆಂಜರ್ ಸೇವೆ ಕೇವಲ ಎರಡು ಬ್ಲ್ಯಾಕ್ ಬೆರ್ರಿ ಮೊಬೈಲ್ ಗಳ ನಡುವೆ ಮಾತ್ರ ಸಾಧ್ಯವಿದ್ದು ಇನ್ನಿತರ ಮೊಬೈಲ್ ಹೊಂದಿದ್ದು, ಅದರಲ್ಲಿ ಎಷ್ಟೇ ಸುಧಾರಿತ IM App ಇದ್ದರೂ ಪ್ರಯೋಜನವಾಗುವುದಿಲ್ಲ. ಇದು ಪಾರಮ್ಯದ ಹೆಸರಿನಲ್ಲಿ ತಮ್ಮನ್ನು ತಾವು ಪ್ರತ್ಯೇಕಿಸಿಕೊಳ್ಳುವ ಕೆಲವು High Profile ಸಾಧನಗಳ ಹಿನ್ನಡೆ.


ಇಂಥದೇ ಹಿನ್ನಡೆಯನ್ನು ಆಪಲ್ ನ ಐಫೋನ್ / ಐಪಾಡ್ ಕೂಡ ಅನುಭವಿಸಿವೆ. ಥಳುಕು ಬಳುಕು & ಅಪರಿಮಿತ ಅವಕಾಶಗಳನ್ನ ಒತ್ತಟ್ಟಿಗಿಟ್ಟು ನೋಡಿದರೆ, ಇಂಥ ಪಾರಮ್ಯದ ಫಲವಾಗಿ ಬರುವ ಪ್ರತ್ಯೇಕತೆಗಳಿಂದ ಬಳಕೆದಾರ ಅನೇಕ ಸಾರಿ ಪೇಚಿಗೆ ಸಿಲುಕುತ್ತಾನೆ ಮತ್ತು ಎಲ್ಲರೂ ಇದ್ದೂ ಯಾರೂ ಇಲ್ಲದ ಭಾವ ಅವನಲ್ಲಿ ಮೂಡುತ್ತದೆ. Apple iPOD ಗೆ ಹಾಡು ತುಂಬಿಸಲು iTUNES ನಿಂದ ಮಾತ್ರ ಸಾಧ್ಯ !! ಎನ್ನುವುದು ಒಂದು ಉದಾಹರಣೆ. Apple iPOD ಖರೀದಿದಾರನ ಹತ್ತಿರ ಕಂಪ್ಯೂಟರ್ ಇರಬೇಕು. ಮತ್ತದರಲ್ಲಿ ಐಟ್ಯೂನ್ ಕೂಡ ಇರಬೇಕು ಎಂದರೆ ಎಂಥ ನ್ಯಾಯ ?
ಇವಿಷ್ಟು ನನಗೆ ಗೊತ್ತಿರುವ ಬ್ಲ್ಯಾಕ್ ಬೆರ್ರಿ ಸಾಮ್ರಾಜ್ಯದ ಹೆದ್ದಾರಿಗಳು. ನಂಜೊತೆ ಇಷ್ಟು ಹೊತ್ತು ಅಲ್ಲಿ ಸುತ್ತಾಡಿದ್ದಾಯ್ತು. ಏನನ್ನಿಸಿತು ನಿಮಗೆ ಅಂತ ಹೇಳಲೇ ಇಲ್ಲ ?!! ಪ್ರವಾಸ ಪ್ರಯಾಸವಾಯಿತೇ ? ಅಥವಾ ಹೊಸ ಲೋಕದ ಪರಿಚಯದ ಸಂಕೇತವಾಯಿತೇ ? ತಿಳಿಸಲು ಮರೆಯಬೇಡಿ.: e - ಶ

.

1 comment:

ಪರಶು.., said...

hi ರೇವಪ್ಪಾ ಬ್ಲ್ಯಾಕ್ ಬೆರ್ರಿ ಸಾಮ್ರಾಜ್ಯದಲ್ಲಿ ಸುತ್ತಾಡಿಸಿದ್ದಕ್ಕೆ ಪ್ರಾಯಾಸವೂ ಆಗಲಿಲ್ಲ, ಆಯಾಸವೂ ಆಗಲಿಲ್ಲ. ತುಂಬಾ ಖುಷಿ ಆಯ್ತು. ತುಂಬಾ ವಿಷಯ ತಿಳಿದಂತಾಯ್ತು.
ಮೊಬೈಲ್ ನ ಹೊರ ಸಾಮ್ರಾಜ್ಯವನ್ನು ಕಂಡು ಒಳಗಡೆ ಹೇಗೆ ಕೆಲಸ ನಡೆಯುತ್ತೆ ಎಂದು ತಿಳಕೊಳ್ಳೋ ಆಸಕ್ತಿ ಇರೋರಿಗೆಲ್ಲಾ ನಿನ್ನ ಲೇಖನಗಳು ಅತ್ಯಪಯುಕ್ತ...

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ