ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Oct 25, 2010

ಬ್ಲ್ಯಾಕ್ ಬೆರ್ರಿಯ ಸಾಮ್ರಾಜ್ಯದೊಳಗೊಂದಷ್ಟು ಹೊತ್ತು ... 1ಆ್ಯಪಲ್ ಇನ್ ಕಾರ್ಪೋರೇಷನ್ ಬ್ಲ್ಯಾಕ್ ಬೆರ್ರಿ ಮೊಬೈಲ್ ಸಾಮ್ರಾಜ್ಯವನ್ನ ಸೋಲಿಸಿದ್ದೇವೆ ಅಂತ ಘೋಷಿಸುವುದರ ಜೊತೆಗೆ ತಾನು ಸಾಧಿಸಿರುವ ಅಧಿಪತ್ಯವನ್ನ ಮತ್ತೊಮ್ಮೆ ನಮ್ಮಗಳಿಗೆ ಮನದಟ್ಟು ಮಾಡಿಕೊಟ್ಟ ಹಾಗಾಗಿದೆ. { ಕಳೆದ ತ್ರೈಮಾಸಿಕದಲ್ಲಿ 1,41,00,000 ಐಫೋನ್ ಗಳನ್ನ ಮಾರಾಟ ಮಾಡಿರುವ ಆ್ಯಪಲ್ 1,21,00,000  ಬ್ಲ್ಯಾಕ್ ಬೆರ್ರಿ ಮೊಬೈಲ್ ಗಳನ್ನ ಮಾರಾಟ ಮಾಡಿರುವ ರಿಮ್ ( RIM = Research In Motion ) ಅನ್ನ ಹಿಂದಿಕ್ಕಿದೆ. ಈ ಅಂಕಿ ಸಂಖ್ಯೆಯೂ ಸಾಲದೆಂಬಂತೆ ತನ್ನ 70% ಆದಾಯ ವೃದ್ಧಿಯ ಬಗ್ಗೆಯೂ ಹೇಳಿಕೊಂಡಿದೆ. ( ಕಳೆದ ವರ್ಷ 4ನೇ ತ್ರೈಮಾಸಿಕದಲ್ಲಿ $ 2.53 ಬಿಲಿಯನ್ ಆದಾಯ ಗಳಿಸಿದ್ದ ಆ್ಯಪಲ್ ಈ ವರ್ಷ ಅದೇ ತ್ರೈಮಾಸಿಕದಲ್ಲಿ $ 4.31 ಬಿಲಿಯನ್ ಆದಾಯ ಗಳಿಸಿದೆ. ) } ವ್ಯಾಪಾರದಲ್ಲಿ ಅದು ಸಾಧಿಸಿರುವ 70 ಪ್ರತಿಶತ ಲಾಭಾಂಶ ವೃದ್ಧಿಯೊಂದಿಗೆ ಇಲ್ಲಿಯವರೆಗೆ ಉತ್ತರ ಅಮೆರಿಕದ ಮಾರುಕಟ್ಟೆಯನ್ನ ಆಳುತ್ತಿದ್ದ ಬ್ಲ್ಯಾಕ್ ಬೆರ್ರಿ ಮೊಬೈಲ್ ನಿಂದ ಆ್ಯಪಲ್ ಐ ಫೋನ್ ಸಿಂಹಾಸನವನ್ನ ಕಸಿದುಕೊಂಡಿದೆ. ಇಂದು ಇಷ್ಟೊಂದು ಹೆಸರು ಮಾಡಿರುವ ಆ್ಯಪಲ್ ಬಗ್ಗೆ ಅಲ್ಲಲ್ಲ ಹೆಸರು ಮಾಡಿದ್ದ ಬ್ಲ್ಯಾಕ್ ಬೆರ್ರಿ ಮೊಬೈಲ್ ಬಗ್ಗೆ ಸ್ವಲ್ಪ ತಿಳಿದುಕೊಳ್ಳಲು ಪ್ರಯತ್ನ ಮಾಡೋಣ :
  • ಬ್ಲ್ಯಾಕ್ ಬೆರ್ರಿ ಮೊಬೈಲ್ : ಇದು 1995ರಿಂದ ರಿಸರ್ಚ್ ಇನ್ ಮೋಶನ್ ಸಂಸ್ಥೆಯಿಂದ ತಯಾರಾಗುತ್ತಿರುವ ಮೊಬೈಲ್ ಬ್ರ್ಯಾಂಡ್.
  • ಕೆನಡಾದ ವಾಟರ್ ಲೂ, ಒಂಟಾರಿಯೋ ದಲ್ಲಿ RIM ತನ್ನ ಮುಖ್ಯ ಕಚೇರಿಯನ್ನ ಹೊಂದಿದೆ.
  • ಮೈಕ್ ಲ್ಯಾಝಾರಿಡಿಸ್ ಈ ಸಂಸ್ಥೆಯ ಸಂಸ್ಥಾಪಕ.

ಈಗ ಬ್ಲ್ಯಾಕ್ ಬೆರ್ರಿಯ ಮೊಬೈಲ್ ಗಳ ಸಾಮ್ರಾಜ್ಯಕ್ಕೆ ಕಾಲಿಡೋಣ :ತೀರ ಇತ್ತೀಚಿನ Torch 9800ಈ ಹಿಂದಿನ Flip ಮಾದರಿಯ, ಮಹಿಳೆಯರ ಮನಸೂರೆಗೊಂಡ Style


ಜನಪ್ರಿಯತೆಯನ್ನ ತಣಿಸಲು Bold ವಿನ್ಯಾಸದಲ್ಲಿ Tour
ಮೊದಲ TouchScreen : Storm


Curve ಜನಪ್ರಿಯಯತೆಯನ್ನ ಉಳಿಸಿ ಬೆಳೆಸಿದ Bold
ಜನಮನ ಗೆದ್ದ Curve

ಗಾತ್ರ ತಗ್ಗಿಸಲು Pearl
ಇಂದಿನ Torch ನ ಅಜ್ಜಂದಿರು
ಸಂಸ್ಥೆಯ ವೆಬ್ ವಿಳಾಸದಲ್ಲಿ ತಾವು ತಯಾರಿಸಿರುವ SmartPhone ಗಳ ಪಟ್ಟಿಯಲ್ಲಿ ಅವರೀಗ ಹೆಸರಿಸುತ್ತಿರುವುದು  ಇವಿಷ್ಟನ್ನ ಮಾತ್ರ( ಅಜ್ಜಂದಿರನ್ನ ಹೊರತುಪಡಿಸಿ ). ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದ್ರೆ ಇದೊಂದು High End / High Society / Corporate ಜಗತ್ತಿಗಾಗಿ ಮೊಬೈಲ್ ತಯಾರಿಸುತ್ತಿರುವ ಸಂಸ್ಥೆ. ಇವರು ನೂರಾ ಎಂಟು ಮಾಡೆಲ್ ಗಳನ್ನ ಜೀವಂತವಾಗಿರಿಸಿ ಎಲ್ಲಕ್ಕೂ ಬೇಡಿಕೆ - ಪೂರೈಕೆ ಸಾಧಿಸುವ ಬದಲು, ಕೆಲವೇ ಕೆಲವು ಅತ್ಯುತ್ತಮ ಗುಣಮಟ್ಟದ ಮಾಡೆಲ್ ಗಳಿಗೆ ಜೀವ ಇಟ್ಟು , ಕಾಲದಿಂದ ಕಾಲಕ್ಕೆ ಜನರ ಅಭಿರುಚಿಗನುಗುಣವಾದ ಹೊಸ ಹೊಸ ಮಾಡೆಲ್ ಗಳನ್ನ ಮಾರುಕಟ್ಟೆಗೆ ಪರಿಚಯಿಸಿ ಹಳತೆನಿಸಿದ ಮೊಬೈಲ್ ಗಳನ್ನ ನೇಪಥ್ಯಕ್ಕೆ ಸೇರಿಸುವ ಜಾಣತನ ರೂಢಿಸಿಕೊಂಡಿದ್ದಾರೆ.

(( ...ಮುಂದುವರೆಯುವುದು ))
: e - ಶ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ