ಅಭಿವೃದ್ಧಿ ಹಕ್ಕುಗಳ ಹಸ್ತಾಂತರ (ಟಿಡಿಆರ್)
TRANSFERRABLE DEVELOPMENT RIGHTS ( TDR)
TRANSFERRABLE DEVELOPMENT RIGHTS ( TDR)
ಟಿಡಿಆರ್ ಎಂದರೇನು?
ರಸ್ತೆ ವಿಸ್ತರಣೆಗಾಗಿ ಹಾಗೂ ಬೆಂಗಳೂರು ನಗರದ ಅಭಿವೃದ್ಧಿಗಾಗಿ ಸರ್ಕಾರ ಸಾರ್ವಜನಿಕರಿಂದ ಪಡೆಯುವ ಭೂಮಿಗೆ ಹಣ ರೂಪದ ಪರಿಹಾರವನ್ನು ನೀಡುತ್ತಿಲ್ಲ. ಬದಲಿಗೆ ಟಿಡಿಆರ್ ಎಂಬ ಕಾಗದ ಪತ್ರವನ್ನು ನೀಡುತ್ತದೆ. ಹಾಗಾದರೆ ಟಿಡಿಆರ್ ಅಂದರೆ ಏನು ಸ್ವಲ್ಪ ತಿಳಿದುಕೊಳ್ಳೋಣ :
ಸರ್ಕಾರ ರಸ್ತೆ ವಿಸ್ತರಣೆಗೆಂದು ವಶಪಡಿಸಿಕೊಳ್ಳುವ ಖಾಸಗಿ ಭೂಮಿಗೆ ಪರ್ಯಾಯವಾಗಿ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವ ಪರಿಹಾರ ವಿತರಣಾ ಕ್ರಮವನ್ನು ‘ಅಭಿವೃದ್ಧಿ ಹಕ್ಕುಗಳ ಹಸ್ತಾಂತರ’ (ಟಿಡಿಆರ್) ಎನ್ನಲಾಗುತ್ತದೆ. ಈ ಪದ್ಧತಿಯಲ್ಲಿ ಭೂಮಾಲೀಕರು ವಿಸ್ತರಣೆಗೆಂದು ಬಿಟ್ಟುಕೊಟ್ಟ ಸ್ಥಳಕ್ಕೆ ಬದಲಾಗಿ ಕಟ್ಟಡದಲ್ಲಿ ಇಲ್ಲವೇ ನಿವೇಶನದಲ್ಲಿ ಹೆಚ್ಚುವರಿ ವಿಸ್ತೀರ್ಣದಲ್ಲಿ ಕಟ್ಟಡ (ಮಹಡಿ) ನಿರ್ಮಾಣಕ್ಕೆ ಅವಕಾಶ ನೀಡಲಾಗುತ್ತದೆ.
‘ಅಭಿವೃದ್ಧಿ ಹಕ್ಕುಗಳ ಹಸ್ತಾಂತರ’ (ಟಿಡಿಆರ್) ವ್ಯವಸ್ಥೆಯಡಿ ಭೂಮಾಲೀಕರಿಗೆ ‘ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರ’ ನೀಡಲಾಗುತ್ತದೆ. ಇದು ಹಣ ರೂಪದ ಪರಿಹಾರದಷ್ಟೇ ಅಮೂಲ್ಯ ದಾಖಲೆ. ಇದರ ಅನ್ವಯ ಭೂಮಾಲೀಕರು ಬಿಟ್ಟುಕೊಟ್ಟ ಸ್ಥಳಾವಕಾಶದ ಒಂದೂವರೆ ಪಟ್ಟು ಸ್ಥಳದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಿಸಬಹುದು. ಭೂಮಾಲಿಕರು FSI (Floor Space Index) ಅಥವಾ FAR (Floor Area Ratio) ರ ಅನ್ವಯ ಮನೆಯನ್ನು ಅದೇ ಜಾಗದಲ್ಲಿ ಅಥವಾ ಇನ್ನೊಂದೆಡೆ ಕಟ್ಟಿಕೊಳ್ಳಲು ಅಥವಾ ಇನೊಬ್ಬರಿಗೆ ಮಾರುವ ಹಕ್ಕನ್ನು ಕಲ್ಪಿಸಲಾಗಿದೆ.
‘ಅಭಿವೃದ್ಧಿ ಹಕ್ಕುಗಳ ಹಸ್ತಾಂತರ’ (ಟಿಡಿಆರ್) ವ್ಯವಸ್ಥೆಯಡಿ ಭೂಮಾಲೀಕರಿಗೆ ‘ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರ’ ನೀಡಲಾಗುತ್ತದೆ. ಇದು ಹಣ ರೂಪದ ಪರಿಹಾರದಷ್ಟೇ ಅಮೂಲ್ಯ ದಾಖಲೆ. ಇದರ ಅನ್ವಯ ಭೂಮಾಲೀಕರು ಬಿಟ್ಟುಕೊಟ್ಟ ಸ್ಥಳಾವಕಾಶದ ಒಂದೂವರೆ ಪಟ್ಟು ಸ್ಥಳದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಿಸಬಹುದು. ಭೂಮಾಲಿಕರು FSI (Floor Space Index) ಅಥವಾ FAR (Floor Area Ratio) ರ ಅನ್ವಯ ಮನೆಯನ್ನು ಅದೇ ಜಾಗದಲ್ಲಿ ಅಥವಾ ಇನ್ನೊಂದೆಡೆ ಕಟ್ಟಿಕೊಳ್ಳಲು ಅಥವಾ ಇನೊಬ್ಬರಿಗೆ ಮಾರುವ ಹಕ್ಕನ್ನು ಕಲ್ಪಿಸಲಾಗಿದೆ.
ಒಂದು ನಿವೇಶನದಲ್ಲಿರುವ ಕಟ್ಟಡದ ನೆಲ ಮತ್ತು ಗೋಡೆಗಳ ಒಟ್ಟು ವಿಸ್ತೀರ್ಣವನ್ನು ಫ್ಲೋರ್ ಏರಿಯಾ ಎಂದೂ, ಎಲ್ಲ ಮಹಡಿಗಳ ಪ್ಲೋರ್ ಏರಿಯಾದ ಒಟ್ಟು ವಿಸ್ತೀರ್ಣಕ್ಕೂ ಮತ್ತು ನಿವೇಶನದ ವಿಸ್ತೀರ್ಣಕ್ಕೂ ನಡುವಿನ ಅನುಪಾತವನ್ನು Floor Area Ratio ( FAR) ಅಥವಾ Floor Space Index(FSI) ಎಂದೂ ಕರೆಯಲಾಗುತ್ತಿದೆ. ಕಟ್ಟಡದ ಫ್ಲೋರ್ ಏರಿಯಾ ಮತ್ತು ಮೇಲಿನ ಅಂತಸ್ತುಗಳ ವಿಸ್ತೀರ್ಣದ ಒಟ್ಟು ಮೊತ್ತವನ್ನು ಬಿಲ್ಟ್ ಅಪ್ ಏರಿಯಾ ಎನ್ನಲಾಗುತ್ತದೆ.
ಸಮಗ್ರ ಅಭಿವೃದ್ಧಿ ಯೋಜನೆ (ಸಿಡಿಪಿ)
Comprehensive Development Plan
Comprehensive Development Plan
ನಗರದ ರಸ್ತೆ. ಸಾರಿಗೆ, ನೀರು, ವಸತಿ ಮುಂತಾದ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವ , ನೈಸರ್ಗಿಕ ವಾತಾವರಣ ಮತ್ತು ಸಾಂಸ್ಕೃತಿಕ ತಾಣಗಳನ್ನು ರಕ್ಷಿಸುವ, ಹೊಸ ನಗರಪ್ರದೇಶಗಳನ್ನು ರೂಪಿಸುವ, ಆರ್ಥಿಕ ಪ್ರಗತಿಯನ್ನು ಮತ್ತು ಸಾಮಾಜಿಕ ಸಮಾನತೆಯನ್ನು ಸಾಧಿಸಲು 1984ರಲ್ಲಿ ಕೆಟಿಸಿಪಿ (Karnataka Town and Country Planning Act, 1961) ಕಾಯ್ದೆಯ ಅಡಿಯಲ್ಲಿ ಸಿಡಿಪಿ-1995 ನ್ನು ಬಿಡಿಎ ಜಾರಿಗೊಳಿತು. ಈ ಕಾಯ್ದೆಯ ಅನ್ವಯ ಪ್ರತಿ 10 ವರ್ಷಕ್ಕೆ ಸಿಡಿಪಿಯನ್ನು ಪರಿಷ್ಕರಿಸಬೇಕಿದೆ, ಹಾಗಾಗಿ , 1995 ರಲ್ಲಿ ಈ ಯೋಜನೆಯನ್ನು ಪರಿಷ್ಕೃತಗೊಳಿಸಿ , ಸಿಡಿಪಿ-2005ನ್ನು ಬಿಡಿಎ ಜಾರಿಗೊಳಿಸಿತು. "ನಗರದ ವಾಸ್ತವಗಳನ್ನು ಗಮನದಲ್ಲಿಟ್ಟುಕೊಂಡಿದ್ದೇವೆ" ಎನ್ನುತ್ತಾ ಬಿಡಿಎ ಈ ಯೋಜನೆಗೆ ಮತ್ತೊಮ್ಮೆ ತಿದ್ದುಪಡಿ ಮಾಡಿ. 2005ರಿಂದ ಸಿಡಿಪಿ-2015ನ್ನು ಅನುಪ್ಠಾನಕ್ಕೆ ತಂದಿದೆ. 2007ರಲ್ಲಿ ಸರ್ಕಾರ ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡಿ , Floor Area Ratioದ ಗರಿಷ್ಟ ಮಟ್ಟ ( Ceiling Limit ) ವನ್ನು ಮುಂಚೆ ಇದ್ದ 1.17 ನಿಂದ 3.25 ಕ್ಕೆ ಏರಿಸಿತು. ಇದರಿಂದಾಗಿ ನಗರದ ಬಹುತೇಕ ಪ್ರದೇಶಗಳಲ್ಲಿ ಮುಂಚೆ ಎರಡು ಅಂತಸ್ತು ಕಟ್ಟುವ ಕಡೆ ಈಗ ಮೂರು ಅಂತಸ್ತು ಕಟ್ಟಲು ಸಾಧ್ಯ.
ಟಿಡಿಆರ್ ನೀತಿಯಿಂದ ಬಾಡಿಗೆಗೆ, ಭೋಗ್ಯಕ್ಕೆ ವಾಸಿಸುತ್ತಿರುವವರು ಯಾವುದೇ ಪರಿಹಾರವಿಲ್ಲದೆ, ಬರಿ ಕೈಯಲ್ಲಿ ಗಂಟು-ಮೂಟೆ ಕಟ್ಟಬೇಕಾಗುತ್ತದೆ. ಹಾಗೂ ಇದು ಕೇವಲ ಸಾರ್ವಜನಿಕರಿಗಲ್ಲದೆ. ಪರಿಸರದ ಮೇಲು ಕೆಟ್ಟ ಪರಿಣಾಮ ಬೀರುವುದರಲ್ಲಿ ಎರಡೂ ಮಾತಿಲ್ಲ.
ಬೆಂಗಳೂರಿನ ಸಂಚಾರ ಸಮಸ್ಯೆಯನ್ನು ಹೋಗಲಾಡಿಸಲು ಈಗಾಗಲೇ ಮೊಟ್ರೂ ರೈಲು , ಹಾಗೂ ವೋನೊ ರೈಲುಗಳ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಮೊಟ್ರೂ ರೈಲು ದಿನಕ್ಕೆ 10 ಲಕ್ಷ ಪ್ರಯಾಣಿಕರನ್ನು ಹೊತ್ತೊಯುವ ಭರವಸೆಯನ್ನು ನೀಡಿದೆ, ಈ ಕೆಲಸವನ್ನು ಮೊದಲು ಮಾಡಿಮುಗಿಸಿ ಸಾರ್ವಜನಿಕರ ಸಂಚಾರಕ್ಕೆ ನೀಡಿದರೆ, ಜನರು ತಮ್ಮ ವಾಹನಗಳನ್ನು ಬಿಟ್ಟು ರೈಲು ಹತ್ತಬಹುದು ಇದರಿಂದ ವಾಹನ ಸಾಂದ್ರತೆ ಕಡೆಮೆಯಾಗುವ ಸಾಧ್ಯತೆ ಹೆಚ್ಚಿದೆ.
ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಟಿಡಿಆರ್ ನೀತಿಯನ್ನು ಅಳವಡಿಸಿಕೊಂಡ ಮುಂಬಯಿ ರಾಜ್ಯದಲ್ಲಿ ಆದ ದುರಂತಗಳು ನಮ್ಮ ಮುಂದಿದೆ. ಸರ್ಕಾರಿ ಸಂಸ್ಥೆಯಿಂದ ಖಾಸಗಿ ಡೆವಲಪರ್ ಗಳು ಖರೀದಿಸಿ, ಆ ಪ್ರದೇಶಗಳಲ್ಲಿ ಮೋದಲೆ ಹದಗೆಟ್ಟ ಮೂಲಸೌಕರ್ಯ ವ್ಯವಸ್ಥೆ ಯನ್ನು ಮತ್ತಷ್ಡು ಹದಗೆಡಿಸಿದ್ದಾರೆ. ಹಾಗೂ ಆನೇಕ ಮುಂದುವರೆದ ದೇಶಗಳಲ್ಲಿ ಈ ನೀತಿಯನ್ನು ಕೈಬಿಡಲಾಗಿದೆ, ಇದು ಆಧೀಕ ವೆಚ್ಚದಿಂದ ಕೂಡಿದ್ದು ಟ್ರಾಫಿಕ್ ಸಮಸ್ಯೆಯನ್ನು ನೀಗಿಸುವಲ್ಲಿ ನಿಷ್ಟ್ರಯೋಜಕವೆಂದು ನಿರ್ಧರಿಸಲಾಗಿದೆ.
ಬೆಂಗಳೂರಿನಲ್ಲಿ ರಸ್ತೆ ಸಂಚಾರ ವ್ಯವಸ್ಥೆ, ವಾಹನ ದಟ್ಟಣೆ ಒಂದು ಗಂಭೀರ ಸಮಸ್ಯೆಯಾಗಿದೆ. ಆದರೆ ಇದಕ್ಕೆ ಪರಿಹಾರ ಬರಿ ರಸ್ತೆ ಅಗಲೀಕರಣದಿಂದ ಸಾಧ್ಯವಿಲ್ಲ. ಇದಕ್ಕೆ ಬದಲಾಗಿ ಉತ್ತಮರೀತಿಯ ಪ್ಲೈ ಓವರ್ ಗಳು , ಅಂಡರ್ ಪಾಸ್ ಗಳು , ಸಹಯೋಜಿತ ಸಿಗ್ನಲ್ ವ್ಯವಸ್ಥೆಗಳ ಜೋತೆಗೆ, ಉತ್ತಮ ರೀತಿಯ ಸಾರಿಗೆ ವ್ಯವಸ್ಥೆ ಬೇಕಾಗಿದೆ.
: ಗೌರಿ
ಲೇಖಕರನ್ನ ಸಂಪರ್ಕಿಸಲು : gowri.mss@gmail.com ಬಳಸಿ
.
No comments:
Post a Comment