.
: ಪರಶು ಪ್ರತಿಕ್ರಿಯೆ :
ರೇವಪ್ಪನ ಕನಸಿನ ಕೂಸು 'ಸ್ಪರ್ಧಾರ್ಥಿ' ಬಗೆಗೆ ಬರೆಯುವ ಮೊದಲು ಸ್ಪರ್ಧಾರ್ಥಿಯ ಮುನ್ನುಡಿಯಲ್ಲಿ ರೇವಪ್ಪ ಅರ್ಪಿಸಿದ 'ಕೃತಜ್ಞತೆ' ಗೆ ನಾನು ಭಾಜನನಾ ಎಂಬ ಯೋಚನೆಯಲ್ಲಿ ಮುಳುಗಿದ್ದೇನೆ. ನಿಜವಾಗಿಯೂ ಇಂತಹ ಕೃತಜ್ಞತೆಗೆ ನಾನು ಅರ್ಹನಲ್ಲ. ಇಲ್ಲಿ ಕೃತಜ್ಞತೆ ಸಲ್ಲಿಸಬೇಕಾದವನು ನಾನು. ಈ ಹಿಂದೆಯೇ ಸಂದರ್ಭೋಚಿತವಾಗಿ ನಾನು ತಿಳಿಸಿರುವಂತೆ ಅಂತರ್ಜಾಲ ಲೋಕದಲ್ಲಿ ನನಗೆ ಈ ಬ್ಲಾಗ್ ಗಳ ವಲಯವನ್ನು ತೋರಿಸಿದವರೇ ರೇವಪ್ಪ. ನಮ್ಮ 'ಸಚಿವಾಲಯ ಕಿರಿಯ ಸಹಾಯಕರ ಬ್ಲಾಗ್ ' ಹುಟ್ಟುವ ಮೊದಲು ನನಗೆ ಈ ಬ್ಲಾಗ್ ಗಳ ಬಗೆಗಿನ ಪರಿಚಯವೇ ಇರಲಿಲ್ಲ. ಅನಂತರವೇ ನನ್ನಲ್ಲಿ ಹುಟ್ಟಿ ಬೆಳೆದದ್ದು ಈ ಬ್ಲಾಗ್ ಬಗೆಗಿನ ಆಸಕ್ತಿ, ನನ್ನ ಈ ಆಸಕ್ತಿಗೆ ಸಾರಯುಕ್ತ ನೀರೆರೆದವರು ರೇವಪ್ಪ. ದಿನ ದಿನವೂ ಅವರ ಹೊಸ ಅನ್ವೇಷಣೆಗಳನ್ನು, ಹೊಸ ಆಲೋಚನೆಗಳನ್ನು ನೋಡುವ ಕಣ್ಣಾಗಿದ್ದೇನೆ, ಕೇಳುವ ಕಿವಿಯಾಗಿದ್ದೇನೆ ಅಷ್ಟೇ. ತನ್ಮೂಲಕ ನಾನೂ ಹೊಸ ಹೊಳವುಗಳನ್ನೂ ಕಂಡುಕೊಂಡಿದ್ದೇನೆ. ಆದ್ದರಿಂದ ನಾನೇ ಅವರಿಗೆ ಕೃತಜ್ಞತೆ ಸಲ್ಲಿಸುವುದು ಇಲ್ಲಿ ಸಮಂಜಸವಾದುದಾಗಿದೆ ಎಂಬುದು ನನ್ನ ಅಭಿಪ್ರಾಯ.
ನಿಜವಾಗಿಯೂ ಹೇಳಬೇಕೆಂದರೆ ಈ ಸ್ಪರ್ಧಾರ್ಥಿಗೆ ನನ್ನ ಕಾಣಿಕೆ ಕಿಂಚಿತ್ತೂ ಇಲ್ಲ. ಈ ಬ್ಲಾಗಿನ ಸಕಲ ಬೆಳವಣಿಗೆಗಳನ್ನೂ ರೇವಪ್ಪನಿಂದಲೇ ಕೇಳಿ ತಿಳಿಯುತ್ತಿದ್ದ ನಾನು ಮುನ್ನುಡಿಯಲ್ಲಿ ರೇವಪ್ಪ ಬರೆದಿದ್ದ ಒಂದೇ ಒಂದು ಪದವನ್ನು ತೆಗೆಯುವಂತೆ ಮಾತ್ರ ಒತ್ತಾಯಿಸಿದ್ದೇನೆ. ಅದು 'ವ್ಯರ್ಥ ಪ್ರಯತ್ನ' ಎಂಬ ಪದ. "ನಾನು ಮಾಡುತ್ತಿರುವ ಕೆಲಸ ವ್ಯರ್ಥ ಪ್ರಯತ್ನ" ಎಂದು ಅವರೇ ಹೇಳಿಕೊಂಡಿದ್ದರು. ಅದ್ಯಾಕೋ ನನಗೆ ಹಿಡಿಸಲಿಲ್ಲ. ನನಗಷ್ಟೇ ಅಲ್ಲ ಈ ಬ್ಲಾಗನ್ನು ನೋಡಿದ ಯಾರಿಗೂ ಸಹ ಇದೊಂದು ವ್ಯರ್ಥ ಪ್ರಯತ್ನ ಅನಿಸುವುದಿಲ್ಲ. ಅಂತಹೇಳಿ ಅದನ್ನು ತೆಗೆಯುವಂತೆ ಒತ್ತಾಯಿಸಿ ಸಫಲನಾದೆ.
ತುಂಬಾ ದಿನಗಳ ಹಿಂದೆ ರೇವಪ್ಪ ಹೇಳಿದ್ರು "ಏನಾದ್ರೂ ಒಂದು ಹೊಸದನ್ನು ಮಾಡ್ಬೇಕು, ಹೊಸದನ್ನು ಮಾಡ್ಬೇಕು" ಅಂತ . ಒಂದು ಕ್ರಿಯಾಶೀಲ ಮನಸ್ಸು ಯಾವಾಗಲೂ ಹೀಗೆ ಹೊಸತೊಂದರ ಉಗಮಕ್ಕಾಗಿ, ಅನ್ವೇಷಣೆಗಾಗಿ ಸದಾಕಾಲ ತುಡಿಯುತ್ತಿರುತ್ತದೆ, ಯೋಚಿಸುತ್ತಿರುತ್ತದೆ. ಕಳೆದ ಆರೇಳು ತಿಂಗಳಿನಿಂದ ಇಂತಹ ಯೋಚನೆಗಳಲ್ಲಿಯೇ ಮುಳುಗಿ, ಪಳಗಿದ ರೇವಪ್ಪ ಮೊದಲು 'e-ನಾಡು ಕನ್ನಡ' ಎಂಬ ಕನ್ನಡ ನಾಡು-ನುಡಿಯನ್ನು ಕುರಿತ ಬ್ಲಾಗ್ ತೆರೆದರು, 'ಪ್ರಶ್ನೋತ್ತರ' ಎಂಬ ಇನ್ನೊಂದು ಬ್ಲಾಗನ್ನ ತೆರೆದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಉತ್ತರ ಸಹಿತ ಪ್ರಕಟಿಸುವ ಯೋಜನೆ ಮಾಡಿದ್ದರು, ಅಂತೆಯೇ 'ನಾನು ನನ್ನಿಷ್ಟ' 'e-ದಿನವಹಿ' ಬ್ಲಾಗುಗಳನ್ನೂ ತೆರೆದರು. ಅಂತಿಮವಾಗಿ ಇವೆಲ್ಲ ಬ್ಲಾಗುಗಳ ತಳಹದಿಯ ಮೇಲೆ ತಮ್ಮ ಯೋಚನೆಗಳಿಗೇ ಒಂದು ಸ್ಪಷ್ಟ ಮತ್ತು ನಿರ್ದಿಷ್ಟ ರೂಪವನ್ನು ಕೊಟ್ಟು 'ಸ್ಪರ್ಧಾರ್ಥಿ'ಯನ್ನು ರೂಪಿಸಿ, ಇಂದು ಲೋಕಾರ್ಪಣೆಗೊಳಿಸಿದ್ದಾರೆ. ನಿಜಕ್ಕೂ ಇದೊಂದು ಕನ್ನಡದಲ್ಲೇ ಪ್ರಪ್ರಥಮವಾದ, ವಿಭಿನ್ನ ಪ್ರಯತ್ನ.
ನಮ್ಮ ಜೀವನವೇ ಒಂದು ಹೋರಾಟ. ಹುಟ್ಟಿನಿಂದ ಸಾವಿನ ವರೆಗೆ ಪ್ರತಿಯೊಬ್ಬರೂ ಹೋರಾಡುತ್ತಲೇ ಬದುಕಬೇಕು. ಜನಸಂಖ್ಯೆ ಹೆಚ್ಚಿದಂತೆ ವಿವಿಧ ಸ್ಥರಗಳಲ್ಲಿ ವಿವಿಧ ರೀತಿಯ ಪೈಪೋಟಿಗಳನ್ನೆದುರಿಸಿ ಮುನ್ನಡೆಯಬೇಕಾದ ಕಾಲಘಟ್ಟ ಬಂದೊದಗಿದೆ. 'ಪ್ರಬಲ ಜೀವಿಯ ಉಳಿವು, ದುರ್ಬಲ ಜೀವಿಯ ಅಳಿವು' ಎಂಬುದನ್ನು ಸಾರಿದ ಡಾರ್ವಿನ್ನನ ವಿಕಾಸವಾದ ಸಿದ್ದಾಂತವೂ ಸ್ವಲ್ಪ ವಿಕಾಸವನ್ನು ಹೊಂದಿ ಪ್ರಬಲ-ದುರ್ಬಲ ಎಂಬುದು 'ದೈಹಿಕ' ದಿಂದ 'ಬೌದ್ಧಿಕ' ಮಟ್ಟಕ್ಕೆ ಬಂದು ಕುಳಿತಿದೆ. ಇಂದು ಎಲ್ಲಾ ವಲಯದಲ್ಲೂ ಬೌದ್ಧಿಕ ಪ್ರಾಶಸ್ತ್ಯ ಹೆಚ್ಚಾಗಿರುವುದನ್ನು ಕಾಣುತ್ತೇವೆ. ಇಂತಹ ವಲಯಗಳಲ್ಲಿ ನಾವೂ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದರೆ ಆ ಮಟ್ಟದ ಪೈಪೋಟಿಯನ್ನು ಎದುರಿಸಲು ನಾವು ಅಣಿಯಾಗಲೇಬೇಕು. ನಮ್ಮ ಬುದ್ದಿಮಟ್ಟದ ವಿಕಾಸಕ್ಕೆ ನಾವು ಪಡೆಯುವ ಜ್ಞಾನ ಅತಿ ಮುಖ್ಯವಾದುದಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಜ್ಞಾನದ ಒಂದು ಅಗಾಧವಾದ ಸೆಲೆ ಎಂದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ. ನಮಗೆ ಬೇಕಾದ ಮಾಹಿತಿಯನ್ನು ನಾಲ್ಕಕ್ಷರದಲ್ಲಿ ಟೈಪಿಸಿ ಎಂಟರ್ ಒತ್ತಿದರೆ ಸಾಕು ಮಾಹಿತಿಯ ಮಹಾಪೂರವೇ ಕಣ್ಣೆದುರಿಗೆ ಹಾಜರಿರುತ್ತದೆ. ಇಂತಹ ಮಾಹಿತಿಯನ್ನು ಒದಗಿಸಲು ಅಂತರ್ಜಾಲದಲ್ಲಿ ನೆಲೆ ನಿಂತಿರುವಂತಹವು ವೆಬ್ ಸೈಟ್, ಬ್ಲಾಗ್, ಪೋರ್ಟಲ್ ಮೊದಲಾದವುಗಳು. ಆದರೂ ಇಲ್ಲೂ ಸಹ ಕೇವಲ ಸ್ಪರ್ಧಾರ್ಥಿಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು, ಎಲ್ಲಾ ವಿಧದ ಮಾಹಿತಿಯೂ ಒಂದೆಡೆ ದೊರಕುವಂತೆ ಅಣಿಗೊಳಿಸಿ ತೆರೆದಿರುವಂತಹ ವೆಬ್ ಸೈಟ್ ಗಳಾಗಲೀ, ಬ್ಲಾಗ್ ಗಳಾಗಲೀ ತುಂಬಾ ಕಡಿಮೆಯೇ, ಕನ್ನಡದ ಮಟ್ಟಿಗಂತೂ ಇಲ್ಲವೇ ಇಲ್ಲ ಎನ್ನಬಹುದು. ಇಂತಹ ಕೊರತೆಯನ್ನು ನೀಗಿಸಲೆಂದೇ ಸಿದ್ದವಾಗಿದೆ ನಮ್ಮ ರೇವಪ್ಪನ 'ಸ್ಪರ್ಧಾರ್ಥಿ'.
'ಸ್ಪರ್ಧಾರ್ಥಿ' ಹೆಸರಿಗೆ ತಕ್ಕಂತೆ ಇದು ವಿವಿಧ ರೀತಿಯ ಸ್ಪರ್ಧಾಕಾಂಕ್ಷಿಗಳನ್ನೇ ಮುಖ್ಯವಾಗಿ ದೃಷ್ಠಿಯಲ್ಲಿಟ್ಟುಕೊಂಡು ರಚಿಸಿರುವಂತಹ ಬ್ಲಾಗ್. ಈ ಬ್ಲಾಗ್ ನ ಟೆಂಪ್ಲೇಟನ್ನು ನೋಡಿಯೇ ನನಗೆ ಮೊದಲ ಬಾರಿಗೆ ಖುಷಿಯಾಯಿತು. 'ಒಳ್ಳೆ ವೆಬ್ ಸೈಟ್ ಇದ್ದಾಂಗೆ ಇದೆಯಲ್ರೀ' ಎಂದು ಆಶ್ಚರ್ಯ ಪಟ್ಟಿದ್ದೆ. ಅಷ್ಟೊಂದು ಉತ್ತಮವಾದ ಟೆಂಪ್ಲೇಟೊಂದನ್ನು ಹುಡುಕಿಟ್ಟುಕೊಂಡು ಅದಕ್ಕೆ ತಕ್ಕುದಾದ ವಿಷಯ ವಸ್ತುಗಳನ್ನು ಸೇರಿಸುತ್ತಾ ಹೋಗಿದ್ದಾರೆ. ವೆಬ್ ಸೈಟ್ ಗಳ ಹೈಟೆಕ್ ಟಚ್ ನ್ನು ಈ ಬ್ಲಾಗಿಗೆ ಕೊಟ್ಟಿದ್ದಾರೆ. ಗೃಹ ಬಳಕೆಯ ಸೂಜಿಯಿಂದ ,ಟಿ.ವಿ, ಫ್ರಿಜ್ ಗಳವರೆಗೆ ಎಲ್ಲವೂ ಒಂದೆಡೆ ಸಿಗುವ 'ಮಾಲ್' ನಂತೆ ಈ ಸ್ಪರ್ಧಾರ್ಥಿ ಯನ್ನು ರೂಪಿಸಲು ಹೊರಟಿದ್ದಾರೆ. ಮಿಗಿಲಾಗಿ ಕನ್ನಡಕ್ಕೇ ಹೆಚ್ಚಿನ ಆದ್ಯತೆಯನ್ನು ಕೊಟ್ಟಿರುವುದು ಗಮನಾರ್ಹವಾದ ಸಂಗತಿ. ಈ ಬ್ಲಾಗನ್ನು ಬಳಸುವ ಬಗೆಯನ್ನು ತುಂಬಾ ನಾಜೂಕಾಗಿ, ಸ್ಪಷ್ಟವಾಗಿ ಪ್ರತಿಯೊಂದು ಆಯ್ಕೆಗಳ ಪ್ರಿಂಟ್ ಸ್ಕ್ರೀನ್ ತೆಗೆದು ಅದಕ್ಕೆ ಬಾಣದ ಗುರುತುಗಳಿಂದ ಸೂಚಿಸಿ ವಿವರಿಸುತ್ತಾ ಹೋಗಿದ್ದಾರೆ. ತುಂಬಾ ಸೊಗಸಾದ ಪ್ರಯತ್ನವಿದು. ಒಂದೇ ಒಂದು ಚಿಕ್ಕ ನ್ಯೂನತೆಯನ್ನೂ ಸರಿಪಡಿಸಲು ಗಂಟೆಗಟ್ಟಲೆ ತಾಳ್ಮೆಯಿಂದ ಕುಳಿತುಕೊಳ್ಳುವ ರೇವಪ್ಪನಿಂದ ಮಾತ್ರ ಇಂತಹ ನಾಜೂಕುತನ ಸಾಧ್ಯವೇನೋ. ಇವರ ಕಾರ್ಯಕ್ಕೆ ಯಶ ಸಿಗಲಿ, ಸ್ಪರ್ಧಾರ್ಥಿಗಳಿಗೆಲ್ಲ 'ಸ್ಪರ್ಧಾರ್ಥಿ' ದಾರಿದೀಪವಾಗಲಿ. ತನ್ಮೂಲಕ ಇವರ ಶ್ರಮ ಸಾರ್ಥಕವಾಗಲಿ...
ಎಂಬ ಶುಭ ಹಾರೈಕೆಗಳೊಂದಿಗೆ...
ಪರಶು..,
DPAR, KGS

No comments:
Post a Comment