ಸರ್ವರಿಗೂ ಹೊಸ ವರುಷದ ಹಾರ್ದಿಕ ಶುಭಾಷಯಗಳು.
" What's There In A Name " ಅಂತ ಷೇಕ್ಸಪಿಯರ್ ಹೇಳಿದಾನಂತೆ. ( ಹಾಗೆ ಬರೆದ ವಾಕ್ಯದ ಕೆಳಗೆ ಅವನ ಹೆಸರೂ ಹಾಕ್ಕೊಂಡಿದ್ದನಂತೆ ..... ) ವಿಕೃತಿ ನಾಮ ಸಂವತ್ಸರ ಅಂತ ಹೆಸರಿಟ್ಟುಕೊಂಡು ಬರುತ್ತಿರುವ ಈ ಹೊಸ ಸಂವತ್ಸರವನ್ನ , ಸುಕೃತಿ ನಾಮ ಸಂವತ್ಸರ ಅಂತ ಹೆಸರಿದ್ರೆ ಹೇಗೆ ನಗುಮೊಗದಿಂದ ಸ್ವಾಗತಿಸ್ತಾ ಇದ್ವೋ ಹಾಗೇ ಸ್ವಾಗತಿಸೋಣ. ಯಾಕಂದ್ರೆ ಹೆಸರು ಸರಿ ಇಲ್ಲ ಅಂತ ಕೋಗಿಲೆಯ ಕೂಗಿನಲ್ಲಿ ವಿಕೃತಿ ಇರೋದಿಲ್ಲ. ಮಾವಿನ ಚಿಗುರಿನಲ್ಲಿ ಎಂದಿನಂತೆ ಅದೇ ಹಸಿರು ನಳನಳಿಸುತ್ತೆ. ಬೇವು ಪ್ರತಿ ಸಾರಿಯಂತೆ ಅಷ್ಟೇ ಪುಟ್ಟ ಪುಟ್ಟ ಸುಂದರ ಹೂಗಳನ್ನ ಬಿಡುತ್ತೆ. ಅಂತೆಯೇ ನಮ್ಮ ಮನವೂ ಎಂದಿನಂತೆ ಈ ವರ್ಷವೂ ಪ್ರಸನ್ನವಾಗಿರಲಿ.
ಈ ಹೊಸ ಸಂವತ್ಸರ ನಮ್ಮೆಲ್ಲರ ಬಾಳಲ್ಲಿ " ಒಂದು ಸುಂದರ , ಮರೆಯಲಾಗದ ವರ್ಷ ಕಟ್ಟಿಕೊಡಲಿ " ಅಂತ ಹಾರೈಸ್ತೀನಿ. " ಯಶಸ್ಸು, ಸುಖ, ಸಮೃದ್ಧಿ ತರಲಿ " ಅಂತ ನಾನು ಹರಸಿದರೆ ರಾಜಕಾರಣಿಗಳು ನೀಡೋ ಸುಳ್ಳು ಆಶ್ವಾಸನೆಯ ಸಾಲಿಗೆ ಇಳಿದೇನು.
ಬದುಕು ಸಾಗರದಲೆಗಳ ಮೇಲಿನ ಪಯಣದ ಹಾಗೆ ಅಂತ ತಿಳಿದವರು ಹೇಳ್ತಾರೆ. ಉಬ್ಬರವಿಳಿತಗಳಿದ್ದರೇನೆ ಆ ಪಯಣ ಸುಂದರ. ಆ ಪಯಣವನ್ನ ಸುಂದರ , ಸುಮಧುರ ಪಯಣ ಅಂತ ಕರೆದಾಗ ಅಲ್ಲಿ ಬರೀ ಸುಖಗಳೇ ತುಂಬಿರೋದಿಲ್ಲ.
ನಾವೆಯ ತುಯ್ದಾಟಗಳಿರ್ತಾವೆ. ಭಯಾನಕ ಕಡಲ ಜೀವಿಗಳು ಬಂದು ಹೆದರಿಸಿ ಹೋಗ್ತಾವೆ. ಸುಂದರ ಡಾಲ್ಫಿನ್ ನಂತಹ ಸ್ನೇಹಿತರು ನಮ್ಮ ಸುತ್ತ ನಲಿದಾಡಿ ಮನವನ್ನ ಹರ್ಷಿಸಿ ಹೋಗ್ತಾರೆ. ಥಳುಕು ಬಳುಕಿನ ಬಣ್ಣದ 'ಮೀನು' ಗಳು ನಮ್ಮ ಪಕ್ಕದಲ್ಲೇ ಹಾಗೇ ಸಾಗಿ ಹೋಗ್ತಾವೆ. ನಮಗೂ ಒಂದಿರಲಿ ಅಂತ ಬಲೆ ಬೀಸಿದರೆ ನಿಮಗೂ ಒಂದು ಸಿಕ್ಕೀತು.

ಇಂತಿಪ್ಪ ನಮ್ಮೀ ಜೀವನದ ಕಡಲ ಪಯಣದಲ್ಲಿ ನಮ್ಮ ಸ್ವಂತ ಕುಟುಂಬದ ಜೊತೆಗೆ ಅಕ್ಕ ಪಕ್ಕ ಕೋಟಿ ಕೋಟಿ ಕುಟುಂಬಗಳು ಪಯಣ ಸಾಗಿವೆ. ಅವರಿಲ್ಲದಿದ್ದರೆ ಆ ಸಾವಿರ ಮೈಲಿ ವಿಸ್ತಾರದ ಕಡಲ ಮೇಲೆ ನಾವು ಒಂಟಿ ಪಯಣಿಗರು ಅನ್ನೋ ಸತ್ಯ ಮರೀಬಾರ್ದು ನಾವು ಯಾವತ್ತಿಗೂ. ಒಂದು ಭಾವಗೀತೆಯ ಸಾಲು ನೆನಪಿಗೆ ಬರ್ತಿದೆ ಈಗ " ಕಡಲ ಮೇಲೆ ಸಾವಿರಾರು ಮೈಲಿ ದೂರ ಸಾಗಿಯೂ...ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ " ಅಂತ.
ನಮ್ಮೀ ಪಯಣದೊಳಗೆ ಜೀವನದ ಅರ್ಥ ಮರೆಯೋದು ಬೇಡ. ಮಾನವೀಯತೆ, ಪರೋಪಕಾರ... ಎಂಬ ಸುಕೃತಗಳು ನಮ್ಮವಾಗಲಿ ಎಂದು ಹರಸುತ್ತಾ...
ಮತ್ತೆ ಸಿಗ್ತೀನಿ,
ರವಿ
No comments:
Post a Comment