ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 1, 2009

ಯು.ಪಿ.ಎಸ್.ಸಿ. ನಡೆಸುವ ಐ.ಎ.ಎಸ್. ಪರೀಕ್ಷೆ

.


CSE ( CIVIL SERVICE EXAM )




ಐಎಎಸ್ ಪರೀಕ್ಷೆ ಎಂದು ಜನಪ್ರಿಯವಾಗಿ ಕರೆಯಲ್ಪಡುವ , ಕೇಂದ್ರ ಲೋಕ ಸೇವಾ ಆಯೋಗ [ UPSC ] ನಡೆಸುವ ಈ ಪರೀಕ್ಷೆ ಭಾರತದಾದ್ಯಂತ ಅತ್ಯಂತ ಸುಪರಿಚಿತ. ಪ್ರತಿ ವರ್ಷ ಚಾಚೂ ತಪ್ಪದೇ ನಡೆಸಲ್ಪಡುವುದೇ ಈ ಪರೀಕ್ಷೆಯ ಅಗ್ಗಳಿಕೆ. Civil Service Exam ಅಂತ ನಾನು ಏನಕ್ಕೆ ಶೀರ್ಷಿಕೆ ಕೊಟ್ಟೆ ಅಂದ್ರೆ : ಪ್ರತಿ ವರ್ಷ ನಡೆಯೋ ಈ ಪರೀಕ್ಷೆಯಲ್ಲಿ ಒಟ್ಟು 60 ರಿಂದ 90 ಜನ ಮಾತ್ರ IAS ಅಧಿಕಾರಿಗಳನ್ನ ಆರಿಸಲಾಗ್ತದೆ. ಇನ್ನುಳಿದಂತೆ IPS ( Indian Police Service ), IFS ( Indian Foreign service ), IRS ( Indian Revenue Service )... ಹೀಗೆ ಇನ್ನುಳಿದ ಸೇವೆಗಳಿಗೆ ಅಧಿಕಾರಿಗಳನ್ನು ಈ ಪರೀಕ್ಷೆಯಿಂದಲೇ ಆರಿಸಲಾಗುತ್ತದೆ. ಇದರ ಜೊತೆಗೆ ಸದರಿ ಪರೀಕ್ಷೆ IAS ಪರೀಕ್ಷೆ ಅಂತ ಜನಪ್ರಿಯವಾಗಲು ಕಾರಣವೂ ಇಲ್ಲದೇ ಇಲ್ಲ. ಉದಾಹರಣೆಗೆ : 2005 ರಲ್ಲಿ ಪ್ರತಿ ವರ್ಷದಂತೆ ಪರೀಕ್ಷೆ ಬರೆದ ಸುಮಾರು 4,00,000 ಜನರಲ್ಲಿ ಆಯ್ಕೆಯಾದ 425 ಜನರಲ್ಲಿ ತಮಗೆ ನೀಡಬೇಕಾದ ಸೇವೆ ಯಾವುದಿರಲಿ ಅಂತ ಆಯ್ಕೆ ಕೇಳಿದಾಗ 398 ಜನ IAS ಅಂತ ಬರೆದು, 18 ಜನ IFS ಅಂತ ಮತ್ತು ಇನ್ನುಳಿದ 9 ಜನ IPS ಎಂದು ಬರೆದು ಕೊಟ್ಟಿದ್ದನ್ನ ಗಮನಿಸಿದರೆ ಈ ಪರೀಕ್ಷೆಗೆ ಆ ಹೆಸರು ಉಳಿದುಕೊಂಡಿರುವುದಕ್ಕೆ ನಿಮ್ಮಲ್ಲಿ ಸಂಶಯ ಉಳಿಯುವುದಿಲ್ಲ.

ಹಿನ್ನೆಲೆ : ' ಬ್ರಿಟಿಷ್ ರಾಜ್ ' ದಲ್ಲಿ ICS Exam ( Indian Civil Service ) ಆಗಿದ್ದ ಇದು Collector ಗಳೆಂದು ಕರೆಯಲ್ಪಡುತ್ತಿದ್ದ ICS ಅಧಿಕಾರಿಗಳನ್ನ ಆರಿಸುತ್ತಿತ್ತು. ಭ್ರಷ್ಟಾಚಾರ ಸಹಿಸದ ಕಠೋರ ಅಧಿಕಾರಿಗಳು ಆಗಿನ ಕಲೆಕ್ಟರುಗಳು ಎಂಬ ಒಂದು ನಂಬಿಕೆಯೂ ಇತ್ತು. ಇದರ ಜೊತೆಗೆ ಆಗಿನ ಬ್ರಿಟಿಷ್ ಪ್ರಧಾನಿ ಈ ಪರೀಕ್ಷೆಯಲ್ಲಿ ಆರಿಸೋ ಅಧಿಕಾರಿಗಳ ತಂಡವನ್ನ " ನಮ್ಮ Colony ಗಳಲ್ಲಿ ಬ್ರಿಟಿಷ್ Policy ಗಳನ್ನ ಜಾರಿಗೆ ತರಲು ಈ ಅಧಿಕಾರಿಗಳು ಉಕ್ಕಿನ ಚೌಕಟ್ಟಿದ್ದಂತೆ " ಅಂತ ಹೇಳಿದ್ದುಂಟು. ಆದರೆ ನಮ್ಮ ಪ್ರಥಮ ಪ್ರಧಾನಿ ನೆಹರೂಜಿ ಅವರು ಸದರಿ ಪದ್ಧತಿಯಬಗ್ಗೆ " It's Neither Indian Nor Civil Nor A
Service " ಅಂದಿದಾರೆ, ತಮ್ಮ Discovery of India ಪುಸ್ತಕದಲ್ಲಿ.

ಪೂರ್ವಭಾವಿ , ಮುಖ್ಯ & ವೈಯಕ್ತಿಕ ಸಂದರ್ಶನ ಅಂತ ಹೇಳಿ ಒಟ್ಟು ಮೂರು ಹಂತದಲ್ಲಿ ನಡೆಯುವ ಈ ಪರೀಕ್ಷೆ ಅತ್ಯಂತ ಪಾರದರ್ಶಕ.

ಹಂತ 1 :
ಸುಮಾರು ಡಿಸೆಂಬರ್ ತಿಂಗಳಲ್ಲಿ ಅರ್ಜಿ ಕರೆಯಲಾಗುತ್ತದೆ. ಎಲ್ಲ UPSC ಪರೀಕ್ಷೆಗಳಿಗೆ ಒಂದೇ Common Application Form ಇರುವುದರಿಂದ, ಹತ್ತಿರದ ಮುಖ್ಯ ಅಂಚೆ ಕಚೇರಿಯಲ್ಲಿ 20 ರೂಪಾಯಿ ಪಾವತಿಸಿ ಅದನ್ನ ಪಡೆಯಬಹುದು. ಅರ್ಜಿ ತುಂಬಿದ
ನಂತರ
ಮೀಸಾಲಾತಿಗೆ ಅನುಗುಣವಾಗಿ ಪರೀಕ್ಷಾ ಶುಲ್ಕವನ್ನ CRF ( Central Recruitment Fee ) Stamp ನ್ನ ಅರ್ಜಿಯ ಮೇಲೆ ಅಂಟಿಸುವುದರ ಮೂಲಕ ಪಾವತಿಸಬೇಕು. ಹೊಸ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸುಗಳನ್ವಯ ಎಲ್ಲ ಪರೀಕ್ಷೆಗಳಿಗೆ OnLine ಅರ್ಜಿ ತುಂಬಲು ಅವಕಾಶ ನೀಡುವುದರ ಜೊತೆಗೆ ಪರೀಕ್ಷಾ ಶುಲ್ಕವನ್ನ Credit / Debit Card ಅಥವಾ Online Banking ( eBanking ) ಮೂಲಕವೂ ಪಾವತಿಸುವ ಅವಕಾಶ ಕಲ್ಪಿಸಲಾಗುತ್ತಿದೆ.

ಹಂತ 2 :
ಸರಿಸುಮಾರು ಮೇ ಮಧ್ಯ ಭಾಗದಲ್ಲಿ ನಡೆಯುವ ಪೂರ್ವಭಾವಿ ಪರೀಕ್ಷೆ ಬಹು ಆಯ್ಕೆ ಮಾದರಿ ಪ್ರಶ್ನೆಪತ್ರಿಕೆಯನ್ನೊಳಗೊಂಡಿರುತ್ತದೆ. ಒಟ್ಟು 400 ಅಂಕಗಳಿಗೆ ನಡೆಯುವ ಈ ಪರೀಕ್ಷೆಯಲ್ಲಿ ಸಾಮಾನ್ಯ ಅಧ್ಯಯನ ( General Studies ) ( 200 ಅಂಕ ) ಮತ್ತು CIVIL SERVICE APTITUDE TEST (CSAT)( 200 ಅಂಕ ) ಒಳಗೊಂಡಿರುತ್ತದೆ.
ಹಂತ 3 :
ಸುಮಾರು ಅಕ್ಟೋಬರ್-ನವೆಂಬರ್ ಸಮಯದಲ್ಲಿ ನಡೆಯುವ ಮುಖ್ಯ ಪರೀಕ್ಷೆಗೆ ಆಯ್ಕೆಯಾದಾಗ ನಿಜವಾದ ಸವಾಲು ಎದುರಾಗುತ್ತೆ. ಒಟ್ಟು ಒಂಬತ್ತು Paper ( ವಿವಿಧ ಪರೀಕ್ಷೆ )ಗಳನ್ನ ಪಾಸು ಮಾಡಬೇಕಿರುವ ನೀವು ನಿಮ್ಮ ಸಾಮರ್ಥ್ಯವನ್ನ ಒರೆ ಹಚ್ಚುವ ಸಮಯವಿದು.

: Paper I :
ಪರೀಕ್ಷೆಗೆ ಅರ್ಹವಿರುವ ಸಂವಿಧಾನದ ಎಂಟನೇ ಅನುಚ್ಛೇದದಲ್ಲಿ ಉಲ್ಲೇಖಿಸಿರುವ ಒಟ್ಟು 22 ಭಾರತೀಯ ಭಾಷೆಗಳಲ್ಲಿ ನೀವು ಆಯ್ಕೆ ಮಾಡುವ ಒಂದು ಭಾಷೆಯ ಪರೀಕ್ಷೆ.[ 100 ಅಂಕಗಳು ] : Paper II : ಇಂಗ್ಲೀಷ್ ಭಾಷಾ ಪರೀಕ್ಷೆ. [ 100 ಅಂಕಗಳು ] Paper I & II ಎರಡೂ ಪರೀಕ್ಷೆಗಳು ಹತ್ತನೇ ತರಗತಿಯ ಮಟ್ಟದ ಪರೀಕ್ಷೆಗಳು. ಮತ್ತು ಎರಡೂ ಪರೀಕ್ಷೆಗಳು ಪಾಸಾದರೆ ಸಾಕು. Rank ನೀಡುವಲ್ಲಿ ಪರಿಗಣಿಸಲಾಗುವುದಿಲ್ಲ. : Paper III : ನಿಬಂಧ ಸ್ವರೂಪದ ಪರೀಕ್ಷೆ [ 200 ಅಂಕಗಳು ] : Paper IV & V : ಸಾಮಾನ್ಯ ಅಧ್ಯಯನ [ ತಲಾ 300 ಅಂಕಗಳು ] : Paper VI, VII, VIII & IX : ನೀವು ಆಯ್ಕೆ ಮಾಡುವ ಎರಡು Optional Paper ಗಳು [ ತಲಾ 300 ಅಂಕಗಳು ]
ಮುಖ್ಯ ಪರೀಕ್ಷೆಯಲ್ಲಿ ಒಟ್ಟು 2000 ಅಂಕಗಳು
ನೀವು ಸಂದರ್ಶನಕ್ಕೆ ಆಯ್ಕೆಯಾಗುವುದನ್ನ ನಿರ್ಧರಿಸ್ತಾವೆ.
ಹಂತ 4 :
ಏಪ್ರಿಲ್ - ಮೇ ತಿಂಗಳಲ್ಲಿ ನಡೆಯುವ ವೈಯಕ್ತಿಕ ಸಂದರ್ಶನಕ್ಕೆ 300 ಅಂಕಗಳನ್ನ ಇಡಲಾಗಿದೆ.

*ಈಗ ಈ 2300 ಅಂಕಗಳಲ್ಲಿ ನಿಮ್ಮ IAS ಆಗುವ ಕನಸಿನ ಸಂಖ್ಯೆ ಅಡಗಿರುತ್ತೆ*


^^^^^^^^^^^^^^^^^^^

ಈ ಪರೀಕ್ಷೆಗಳಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅವರ ಅಂಕಗಳಿಗನುಗುಣವಾಗಿ ಈ ಕೆಳಗಿನ Service ನೀಡಲಾಗುತ್ತೆ. [ Indian Forest Service & Indian Engineering Service ಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸಲಾಗುತ್ತದೆ ]. ಕೊನೆಗೆ ನೀಡಿರುವ State Service Cadre ಗಳಿಗೆ ಪ್ರತಿ ರಾಜ್ಯದಲ್ಲಿ ಪ್ರತ್ಯೇಕ ಪರೀಕ್ಷೆ ನಡೆಸಲಾಗುತ್ತೆ. [ ಅಸ್ಸಾಂ-ಮೇಘಾಲಯ : ಮಣಿಪುರ-ತ್ರಿಪುರಾ : ಅರುಣಾಚಲ ಪ್ರದೇಶ-ಗೋವಾ-ಮಿಝೋರಾಮ್-ಕೇಂದ್ರಾಡಳಿತ ಪ್ರದೇಶಗಳು ಗಳಿಗೆ ಮೂರು ಜಂಟಿ Cadre ಗಳಿಗಾಗಿ ಮೂರು ಪ್ರತ್ಯೇಕ ಪರೀಕ್ಷೆಗಳನ್ನ ನಡೆಸಲಾಗುತ್ತೆ ]

Insider-Outsider Ratio ಎಂಬ ಒಂದು ಅಂಶವನ್ನ ರಾಜ್ಯಗಳಿಗೆ ಅಧಿಕಾರಿಗಳನ್ನ ನೇಮಿಸುವಲ್ಲಿ ಪರಿಗಣಿಸಲಾಗುತ್ತೆ.

Central Civil Services - Group "A"
Central Civil Services - Group "B"
State Services


ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ