ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Oct 26, 2010

ಬ್ಲ್ಯಾಕ್ ಬೆರ್ರಿಯ ಸಾಮ್ರಾಜ್ಯದೊಳಗೊಂದಷ್ಟು ಹೊತ್ತು ... 2

(( ... ಮುಂದುವರೆದ ಭಾಗ ))

ಜನಮನ ಗೆದ್ದಿರುವ ಈ ಬ್ಲ್ಯಾಕ್ ಬೆರ್ರಿ ಮೊಬೈಲ್ ನ ಒಳ ಹೂರಣವನ್ನ ಅರಿಯೋಣ ಈಗ :

ಆಪರೇಟಿಂಗ್ ಸಿಸ್ಟಮ್ (operating system) : ಪ್ರತಿ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ನಂತೆ ಇದೂ ಕೂಡ C++ ಭಾಷೆ ಬಳಸಿ ಬರೆಯಲ್ಪಟ್ಟಿದೆ. ಇದೇ ಸಮಯದಲ್ಲಿ ಇನ್ನಿತರ ಕಂಪೆನಿಗಳು ತಯಾರಿಸಿರುವ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಗಳ ಹೆಸರುಗಳನ್ನ ಒಂದು ಸಾರಿ ಮೆಲುಕು ಹಾಕಿ ಬಿಡೋಣ :



OS ಹೆಸರು
ತಯಾರಿಸಿದ ಕಂಪೆನಿ
ಇತ್ತೀಚಿನ ಮೊಬೈಲ್
ಸದ್ಯದ OS Version
iOS
Apple Inc.
iPhone 4
4.1
BADA
Samsung Electronics
Samsung Wave S8500
1.0.2
Android
Google Inc.

2.2.1
Blackberry
Research In Motion
Blackberry Torch 9800
6.0
Symbian
Symbian Foundation
Nokia N8
Symbian^3
MeeGo
Intel &
Linux Foundation &
Nokia &
MeeGo Community
Day 1
1.0.4
Windows Phone 7
Microsoft Corporation
Samsung Focus
Windows Phone 7
Maemo
Nokia
Nokia N900
5.0
WebOS
Palm Inc. &
HP
--
1.4.5


ಇನ್ನೊಂದು ಅಂಶವನ್ನ ನೀವು ಗಮನಿಸಬೇಕು. ಮೊಬೈಲ್ ನ ಹೊರ ರೂಪಗಳು ಅಂದ್ರೆ ಟಚ್ ಸ್ಕ್ರೀನ್ ಅಥವಾ ಟ್ರ್ಯಾಕ್ ಬಾಲ್ ಅಥವಾ ಟ್ರ್ಯಾಕ್ ಪ್ಯಾಡ್ ಇವುಗಳ ಇರುವಿಕೆ ಆಪರೇಟಿಂಗ್ ಸಿಸ್ಟಮ್ ಅನ್ನು ಖಂಡಿತವಾಗಿ ಅವಲಂಬಿಸಿವೆ. ಅಂದ್ರೆ ಆ Device ನಲ್ಲಿ ಟ್ರ್ಯಾಕ್ ಬಾಲ್ ಅಳವಡಿಸಬೇಕಾದಲ್ಲಿ ಅದಕ್ಕೆ ತಕ್ಕ ತಂತ್ರಾಂಶವನ್ನ Operating System ನಲ್ಲಿ ಬರೆದಿರಬೇಕು. ಸದರಿ ಬ್ಲ್ಯಾಕ್ ಬೆರ್ರಿಯ OS , TouchScreen & TrackBall & TrackPad ಗಳ ಇರುವಿಕೆಯನ್ನ ಬೆಂಬಲಿಸುತ್ತದೆ ( Support ).

ಈಗ ಹೊಸತಾಗಿ ಬಿಡುಗಡೆ ಮಾಡಿರುವ BlackBerry 6 OS ನಲ್ಲಿ ಹೊಸ ಹೊಸ ಅಂಶಗಳನ್ನ ಸೇರಿಸಿದೀವಿ ಅಂತ RIM ಹೇಳಿಕೊಳ್ತಿದೆ. ಅವನ್ನ ಚುಟುಕಾಗಿ ತಿಳಿಯೋಣ :
  • Social Networking ಗೆ ಪ್ರಾಮುಖ್ಯತೆ ನೀಡಿ, Update ಪಡೆಯುವ ಮತ್ತು ನೀಡುವ ವಿಧಾನಗಳನ್ನ ಸರಳಗೊಳಿಸಲಾಗಿದೆ.
  • ಅತಿ ಜನಪ್ರಿಯ Opera Mini Browser ಅನ್ನ ಬಳಸದೇ ತಮ್ಮದೇ Proprietary Browser ನೀಡುವ ಇವರು ಅದನ್ನ ಅಭಿವೃದ್ಧಿಪಡಿಸಿ, Multi Tabbed Browsing ಗೆ ಅವಕಾಶ ನೀಡಿ ಬೀಗುತ್ತಿದ್ದಾರೆ !!
  • ಒಂದು ಸರ್ಚ್ ಇಂಜಿನ್ ನೀಡಿ ಅದನ್ನ ಅಂತರಜಾಲಕ್ಕೆ ಸಂಪರ್ಕಿಸಿರುವುದರಿಂದ ನಿಮಗೆ ಬೇಕಾಗಿರುವ ಮಾಹಿತಿ ಯನ್ನ ತಕ್ಷಣಕ್ಕೆ ಜಗತ್ತನ್ನೇ ಹುಡುಕಿ ಪಡೆಯುವ ಅವಕಾಶವಿದೆ.
  • Multimedia ವಿಭಾಗವನ್ನ ಸ್ವಲ್ಪ ಮಟ್ಟಿಗೆ ಸುಧಾರಿಸಲಾಗಿದೆ.
  • ಜೊತೆಗೆ Cute GUI ಅಂತ ಹೇಳಿಕೊಳ್ತಿದಾರೆ.
ಆದರೆ,
ಇತರ ಮೊಬೈಲ್ ಕಂಪೆನಿಗಳು ಮೇಲಿನ ಎಲ್ಲ ಅಂಶಗಳ ಜೊತೆಗೆ ಇನ್ನೂ ಅನೇಕ ಆಸಕ್ತಿದಾಯಕ ಅಂಶಗಳನ್ನ ತಮ್ಮ ಮೊಬೈಲ್ ಗಳಲ್ಲಿ ಈಗಾಗಲೇ ಸೇರಿಸಿ ಸದರಿ ಬ್ಲ್ಯಾಕ್ ಬೆರ್ರಿಯ ಸೇರ್ಪಡೆಗಳನ್ನ ಎಂದೋ ಹಳತಾಗಿಸಿರುವುದು RIM ಗಮನಕ್ಕೆ ಬಂದಿದೆಯೋ ಇಲ್ಲವೋ ?!!

ಒಂದ್ಸಾರಿ ಇಲ್ಲಿ ಭೇಟಿ ನೀಡಿ :  http://www.htc.com/www/product/touchdiamond2/product-tour.html


Push Mail : ಇನ್ನು ಬ್ಲ್ಯಾಕ್ ಬೆರ್ರಿಯ USP( Unique Selling Point / Proposition )ಯಾಗಿರುವ ಕಾರ್ಪೊರೇಟ್ ಈಮೇಲ್ ವ್ಯವಸ್ಥೆ ಬಗ್ಗೆ ತಿಳಿಯೋಣ. ಅದುವೇ ಪುಷ್ ಮೇಲ್. ಪುಷ್ ಮೇಲ್  ಅಂದ್ರೆ ನಿಮ್ಮ ಈ ಮೇಲ್ ವಿಳಾಸಕ್ಕೆ ತಲುಪಿದ ಹೊಸ ಸಂದೇಶವನ್ನ ಅದೇ ಕ್ಷಣಕ್ಕೆ ವಿಳಂಬವಿಲ್ಲದೇ ನೇರವಾಗಿ ನಿಮಗೆ ತಲುಪಿಸುವ ವ್ಯವಸ್ಥೆ. ಈ ವಾಕ್ಯದಲ್ಲಿ ನೇರವಾಗಿ ನಿಮಗೆ ಅನ್ನುವ ಪದ ಬಹಳ ಮುಖ್ಯವಾಗಿದ್ದು Push Mail ಸೇವೆಗಾಗಿ ನಾವು ಬಳಸುವ Device ಸದಾ ನಮ್ಮ ಮಡಿಲಲ್ಲೇ ಇರುತ್ತದೆ ಎನ್ನುವ ಊಹೆ ಇಲ್ಲಿ ಅತಿಮುಖ್ಯ ಕೆಲಸ ಮಾಡಿದೆ. ಹೀಗೆ ಸದಾ ನಮ್ಮ ಬಳಿಯೇ ಇರುವ Device ಒಂದಕ್ಕೆ , ನಮ್ಮ ವಿಳಾಸವಿಟ್ಟುಕೊಂಡು ಬರುವ ಸಮಸ್ತ email ಗಳನ್ನ Service Provider Server ನಿಂದ ' ನೇರವಾಗಿ ನಮಗೇ ' ಕಳಿಸಲ್ಪಡುವ ವ್ಯವಸ್ಥೆಯೇ Push Mail.



ಸದರಿ ಪುಷ್ ಮೇಲ್ ಸೇವೆ ನೀಡಲು MIDP ( Mobile Information Device Profile ) ಎಂಬ ಜಾವಾ ಆಧಾರಿತ ಪುಟ್ಟ ತಂತ್ರಾಂಶ ಬಳಕೆಯಾಗುತ್ತದೆ. ಈ MIDP ಬಳಸಿ BES ( Blackberry Enterprise Server) { ಈ ಸರ್ವರ್ ಸಲುವಾಗಿಯೇ ಇತ್ತೀಚೆಗೆ ಬ್ಲ್ಯಾಕ್ ಬೆರ್ರಿಯನ್ನ ಜಗತ್ತಿನಾದ್ಯಂತ ಅನೇಕ ದೇಶಗಳು ತರಾಟೆಗೆ ತೆಗೆದುಕೊಂಡಿದ್ದು } ನಲ್ಲಿ ನೀವು ಮುಂಚೆಯೇ SetUp ಮಾಡಿರುವ ನಿಮ್ಮ Account ಗೆ ಬರುವ ಸಂದೇಶಗಳನ್ನ ನಿಮಗೆ ನೇರವಾಗಿ ತಡವಿಲ್ಲದೇ ಕಳಿಸಲಾಗುತ್ತದೆ.


(( ... ಮುಂದುವರೆಯುವುದು ))



: e - ಶ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ