ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Showing posts with label ವಾರದ ಗ್ಯಾಡ್ಜೆಟ್. Show all posts
Showing posts with label ವಾರದ ಗ್ಯಾಡ್ಜೆಟ್. Show all posts

Nov 20, 2010

ಡೆಲ್ ಸ್ಟ್ರೀಕ್

0 ಪ್ರತಿಕ್ರಿಯೆಗಳು
ಈ ವಾರವಿಡೀ ಎಲ್ಲ ದಿನಪತ್ರಿಕೆಗಳಲ್ಲಿ ಕಂಡುಬಂದ ವಿಜ್ಞಾಪನೆ ಎಂದರೆ ಡೆಲ್ ಕಂಪೆನಿಯ ಸ್ಟ್ರೀಕ್ ದು. ಇದೊಂದು ಸ್ಮಾರ್ಟ್ ಫೋನ್ ಮೀರಿದ ಟ್ಯಾಬ್ಲೆಟ್ ಪಿಸಿ ಅಲ್ಲಲ್ಲ ಕಂಪೆನಿ ಹೇಳುವ ಹಾಗೆ ಪಾಕೆಟ್ ಟ್ಯಾಬ್ಲೆಟ್. ಇದಕ್ಕೂ ಮುಂಚೆ ಸಂಚಲನ ಸೃಷ್ಟಿಸಿದ್ದು ಆ್ಯಪಲ್ ಕಂಪೆನಿಯ ಐಪ್ಯಾಡ್. ನಂತರ ಅನೇಕ ಚಿಕ್ಕಪುಟ್ಟ ಕಂಪೆನಿಗಳು ತಮ್ಮ ಉತ್ಪನ್ನವನ್ನ ಮಾರುಕಟ್ಟೆಗೆ ಪರಿಚಯಿಸಿದವು. ಅದು ಆ್ಯಪಲ್ ಕಂಪೆನಿಯ ಚರಿಷ್ಮಾದ ಪ್ರಭಾವ. ನಂತರ 6 ತಿಂಗಳ ಸಮಯ ತೆಗೆದುಕೊಂಡು ಇದೀಗ ದೊಡ್ಡ ದೊಡ್ಡ ಕಂಪೆನಿಗಳು ಸ್ಪರ್ಧೆಗಿಳಿದಿವೆ. ಕಳೆದ ತಿಂಗಳು ಸ್ಯಾಮಸಂಗ್ ಗ್ಯಾಲಾಕ್ಸಿ ಟ್ಯಾಬ್ ಹೆಸರಲ್ಲಿ ಟ್ಯಾಬ್ಲೆಟ್ ಪಿಸಿ ಬಿಡುಗಡೆ ಮಾಡಿತು. ನಂತರ ಬ್ಲ್ಯಾಕ್ ಬೆರ್ರಿ ಪ್ಲೇಬುಕ್ ಬಂತು. ಇದೀಗ ಡೆಲ್ ಕಂಪೆನಿ ಸ್ಟ್ರೀಕ್ ( Streak ) ಹೆಸರಿನಲ್ಲಿ ಪಾಕೆಟ್ ಟ್ಯಾಬ್ಲೆಟ್ (ಪಿಸಿ) ಬಿಡುಗಡೆ ಮಾಡಿತು. ಇದು ಸ್ಮಾರ್ಟ್ ಫೋನ್ ಕೂಡ ಹೌದು. 

ಈ ಮೊದಲು ಕಂಪ್ಯೂಟರ್ ಮಾತ್ರ ಮಾರುತ್ತಿದ್ದಾಗ Your's Is Here ಅನ್ನುತ್ತಿದ್ದ ಡೆಲ್, ಇದೀಗ ಫೋನ್ ತಯಾರಿಕಾ ಲೋಕಕ್ಕೆ ಇಳಿದು ತನ್ನ Tag Line ಕೂಡ ಹೊಸದಾಗಿ ಸೃಷ್ಟಿಸಿಕೊಂಡಿದೆ. Dell - The Power To Do More ಇದು ಹೊಸದು.  ಸ್ಪರ್ಧೆ ತೀಕ್ಷ್ಣವಾದಾಗ ಬೃಹತ್ ಕಂಪೆನಿಗಳೂ ತಮ್ಮ ಹಳೆಯ ವೇಷವನ್ನ ಕಳಚಿ ಹೊಸ ಹುರುಪಿನೊಂದಿಗೆ ಸ್ಪರ್ಧೆಗಿಳಿಯುತ್ತವೆ ಅನ್ನೋದಕ್ಕೆ ಡೆಲ್ ಜ್ವಲಂತ ಉದಾಹರಣೆ.

ಈಗ ಡೆಲ್ ಸ್ಟ್ರೀಕ್ ( Dell Streak ) ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ :


  • ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಸದರಿ ಸ್ಟ್ರೀಕ್ ನ ಜೀವಾಳ.
  • 5 inch Capacitive TouchScreen & 5MP Camera - ಇವು ಮೇಲ್ನೋಟದ ಮುದ್ದುಗಳು.
  • ಸ್ಮಾರ್ಟ್ ಫೋನ್ ಗಳಿಗೆಂದೇ Qualcomm ಕಂಪೆನಿ ತಯಾರಿಸುವ ಸ್ನ್ಯಾಪ್ ಡ್ರಾಗನ್ ( Snapdragon ) ಹೆಸರುಳ್ಳ  CPU ಇದೆ. ಅಂದ್ರೆ 512MB ROM , 512 MB RAM ಮತ್ತು 1GHz ವೇಗದ ಪ್ರೊಸೆಸರ್ ಒಳಗೊಂಡಿದೆ.
  • 800*480 pixel ಸ್ಪಷ್ಟತೆ ಇರುವ ಟಚ್ ಸ್ಕ್ರೀನ್.
  • ಹೊರಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು wi-fi , 3G , Bluetooth , GPS , A-GPS , GSM , EDGE , HSDPA ಹೊಂದಿದೆ.
  • ಹೊಸ ಹೊಸ ಆ್ಯಪ್ ( App )ಗಳಿಗಾಗಿ Android Market ಇದೆ.
ಒಳನೋಟ : 

Streak ಅಂದ್ರೆ ಪದಕೋಶದ ಅರ್ಥ :
ಇದನ್ನ Light Streak Effect ಅಂತಾರೆ.
  1. A line, mark, smear, or band differentiated by color or texture from its surroundings.
  2. An inherent, often contrasting quality: "There was a streak of wildness in him" .
  3. A ray or flash of light: the first streaks of dawn; a streak of lightning.
  4. Informal.
    1. A brief run or stretch, as of luck.
    2. An unbroken series, as of wins or losses.
  5. Mineralogy. The color of the fine powder produced when a mineral is rubbed against a hard surface. Used as a distinguishing characteristic.
  6. Botany. Any of various viral diseases of plants characterized by the appearance of discolored stripes on the leaves or stems.
  7. Microbiology. A bacterial culture inoculated by drawing a bacteria-laden needle across the surface of a solid culture medium.
ಹಾಗಾಗಿ ತನ್ನ ಸುತ್ತಲಿನ ವಾತಾವರಣವನ್ನ ಭೇದಿಸಿ ತನ್ನನ್ನ ತಾನು ಗುರುತಿಕೊಳ್ಳುವ ಹಾಗೊಂದು ವಿಶಿಷ್ಟತೆ ಹೊಂದಿರುವ Device ಎಂದು ಕಂಪೆನಿ ಬೀಗುತ್ತದೆ ಎನ್ನಬಹುದು.

ಆ್ಯಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ (Android OperatingSystem) : ಇದು ಗೂಗಲ್ ಕಂಪೆನಿ ಮೊಬೈಲ್ / Pocket PC ಗಳಿಗೆಂದೇ ಸೃಷ್ಟಿಸಿರುವ ಆಪರೇಟಿಂಗ್ ಸಿಸ್ಟಂ ಗಿರುವ ಹೆಸರು. Android ಪದದ ಶಬ್ದಕೋಶದ ಅರ್ಥ Possessing human features ಅಂತ ಇದೆ. Humanoid ಎನ್ನುವ ಹಾಗೆ An automation that is created from biological materials and resembles a human ಅಂತ.

ಓದುಗರು ಒಂದು ಮಾತನ್ನ ನೆನಪಿನಲ್ಲಿಟ್ಟುಕೊಳ್ಳಬೇಕು. ಈ ಹಿಂದೆ ಬರುತ್ತಿದ್ದ Call - SMS - Music - FM - Java Games ಇಷ್ಟು Application ಗಳನ್ನ Run ಮಾಡಲು ಬೇಕಾಗುತ್ತಿದ್ದಿದ್ದುದು Proprietary OS ( = propietary operating systems is one where an company designs, develops and markets it as their own system & for their own device. ) ಇದೀಗ ಜನಪ್ರಿಯವಾಗಿರುವ Smart Phone ಗಳಿಗೆ  Proprietary OS ಸಾಲುವುದಿಲ್ಲ. ಕಾರಣ ಅವೀಗ ಕೇವಲ Call - SMS - Music - FM... ಇತ್ಯಾದಿ ಚಿಕ್ಕಪುಟ್ಟ Function ಗಳಿಗಷ್ಟೇ ಸೀಮಿತವಾಗಿಲ್ಲ. ಬದಲಿಗೆ
  • Web Browsing 
  • One Click/Touch Social Network Connection 
  • Word / Excel / PPT Create & Edit 
  • Wi-Fi 
  • 3G 
  • GPS
  • Touch Screen + Hardware KeyPad Input
  • ChipSet Processor
  • RAM
  • ROM
  • Big Storage Capacity Memory Card Compatibility
  • HD Camera
  • Video Editing
  • Photo Editing
  • Geo Tagging of Images
  • TV out
  • Multi Format Video Player
  • eBook Reader
ಹೀಗೆ ಹತ್ತು ಹಲವು ಅಭಿಲಾಷೆಗಳು ಪೂರ್ತಿಯಾಗಬೆಕಂದ್ರೆ ಸರಳ code ಬಳಸಿ ಬರೆದ Proprietary OS ಸಹಾಯಕ್ಕೆ ಬರುವುದಿಲ್ಲ. ನೀವೇ ನೋಡಿ ಮೇಜಿನ ಮೇಲಿನ ಕಂಪ್ಯೂಟರ್ ಮಾಡುವ ಕೆಲಸಕ್ಕಿಂತ ಹೆಚ್ಚಿನ ಕರ್ತವ್ಯಗಳು smartphoneಗೆ ಆರೋಪಿತವಾಗಿವೆ. ಹೀಗಿರುವಾಗ ಅದಕ್ಕೆ ಕಂಪ್ಯೂಟರ್ ಗಿಂತ ಸಮರ್ಥವಾದ, ಯಾಕಂದ್ರೆ ಚಿಕ್ಕ Device - ಚಿಕ್ಕ Space ನಲ್ಲಿ ಅಷ್ಟೊಂದು ಅಗಾಧ ಕೆಲಸಕ್ಕೆ ಅಣಿಯಾಗಬೇಕಲ್ಲ ಅದಕ್ಕೆ, Operating System ಬೇಕೇ ಬೇಕು. ಈ ತುರ್ತಿನ ಬೇಡಿಕೆ ಪೂರೈಸಲು ಅನೇಕ mobile OS ಬರೆಯುವ ಕಂಪೆನಿಗಳು ತಲೆ ಎತ್ತಿದವು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ
  • Symbian OS by SYMBIAN
  • iOS by APPLE
  • Android OS by GOOGLE
  • Windows Mobile OS by MICROSOFT
  • BADA OS by SAMSUNG
  • Blackberry OS by RIM
  • Maemo OS by NOKIA
  • MeeGo OS by LINUX
ಒಂದು ಸಮೀಕ್ಷೆಯ ಪ್ರಕಾರ ಸದ್ಯ ಮುಂಚೂಣಿಯಲ್ಲಿರುವುದು Symbian OS. ನಂತರದ ಸ್ಥಾನ iOS. ನಂತರ Blackberry OS. ನಂತರ Windows Mobile OS. ತದನಂತರದ ಅಂದರೆ ನಾಲ್ಕನೇ ಸ್ಥಾನ Android OSಗೆ. ಆದರೆ ಅದೇ ಸಮೀಕ್ಷೆ ಹೇಳುವುದೇನೆಂದ್ರೆ ಈಗಿನ ವೇಗದಲ್ಲಿಯೇ ಜನಪ್ರಿಯತೆ ಕಾಯ್ದುಕೊಂಡರೆ 2013ರವೇಳೆಗೆ Android OS ಪ್ರಥಮ ಸ್ಥಾನಕ್ಕೆ ಏರಲಿದೆ ಅಂತ. ಹೀಗಿರುವ Android OSನ ಜನಪ್ರಿಯತೆಯ ಗುಟ್ಟುಗಳನ್ನ ಕೆಳಕಂಡ ಕೋಷ್ಟಕ ರಟ್ಟು ಮಾಡಬಹುದು. ಓದಿ ನೋಡಿ :


Android OS
Windows MOS
iOS
GSM + CDMA
GSM+CDMA
GSM
Sim Unlocked
Sim Unlocked
Sim Locked
No Music Store (to be Launched)
ZUNE
iTUNES
Google Search Engine
Bing Search Engine
Spotlight Search Engine
Google Market
Microsoft Market Place
App Store ( Mobile Me )

ಕೆಲವು ಪ್ರಮುಖ ವ್ಯತ್ಯಾಸಗಳು

Is An OpenSource OS

Not An OpenSource OS
As Google Is The King In The InternetWorld – Net Users Will Have An Advantage Always

Rely On Third Party Applications
Can Run Mutiple Apps @ A Time

Limited to mail-music&phone
Customisable Homescreen


Multiple Notifications

Limited Notifications
You Can Use Your Hardware

Use Only Apple Supplied
Sim Unlocked, So That U Can Choose Ur Carrier

Sim Locked, So U Cant Choose The Carrier of Ur Wish
Faster Settings Change

Bit Slower
Google & Other Social Networking is Superb here

But With Third Party Apps
Price Is Reachable

Price Is Not Reachable

ಖಾಲಿ ಬಿಟ್ಟ ಸ್ಥಳವನ್ನ(Windows MOS ಹೊರತುಪಡಿಸಿ), ಅದೇ ಕೆಲಸ ಮಾಡಿದರೂ Android ನಷ್ಟು ಸಮರ್ಥವಾಗಿ ಮಾಡುವುದಿಲ್ಲ ಅಂತ ಅರ್ಥೈಸಬೇಕು.

ಈ ಪಟ್ಟಿ ಓದಿದ ನಂತರವೂ ನಾನು Android ಬಗ್ಗೆ ಭಾಷಣ ಮಾಡುವುದು ತಪ್ಪು ಅಂತ ನಂಗೆ ಗೊತ್ತು.

Wide Screen : ವಿಶಾಲ ಪರದೆ ಇರುವುದರಿಂದ ಇಲೆಕ್ಟ್ರಾನಿಕ್  ರೂಪದ ಪುಸ್ತಕ ಓದಲು , ಅಂತರಜಾಲ ತಡಕಾಡುವಾಗ ಮಾಹಿತಿಯನ್ನ ಸ್ಪಷ್ಟವಾಗಿ ಗ್ರಹಿಸಲು , ಚಲನಚಿತ್ರಗಳ ವೀಕ್ಷಣೆ ಆನಂದದಾಯಕವಾಗಿಸಲು .. ಸಹಕಾರಿ.

1GHz Processor : ನಾವು ಬಳಸುವ ಕಂಪ್ಯೂಟರ್ ಗಳು ಸಾಮಾನ್ಯವಾಗಿ 2.0GHz ನಿಂದ 3.6GHz ವರೆಗಿನ ವೇಗವನ್ನ ಹೊಂದಿರುತ್ತವೆ. ಈಗ ಈ ಪಾಕೆಟ್ ಕಂಪ್ಯೂಟರ್ 1.0GHz ಹೊಂದಿರುವುದು ಅಲಕ್ಷ್ಯ ಮಾಡುವ ವೇಗವೇನಲ್ಲ.

Android Market : ಇದು ನಿಮ್ಮ ಸ್ಮಾರ್ಟ್ ಫೋನನ್ನ ಇನ್ನಷ್ಟು ಸ್ಪರ್ಧಾತ್ಮಕವಾಗಿಸಲು ಅವಶ್ಯವಿರುವ Applications ( Apps ಎನ್ನುವುದು Application Programmes ಎಂಬ ಪದದ ಮುದ್ದು ರೂಪ )  ಗಳು ದೊರೆಯುವ ಸ್ಥಳ. ಕೆಲವು App ಗಳು ಉಚಿತವಾಗಿದ್ದರೆ ಇನ್ನು ಕೆಲವನ್ನ ಖರೀದಿಸಬೇಕು. 2008ರಲ್ಲಿ ಪ್ರಾರಂಭವಾದ ಈ ಮಾರುಕಟ್ಟೆಗೆ ನಿಮ್ಮ Brain Child ಗಳಾದ ನೀವೇ ತಯಾರಿಸಿದ Android Compatible App ಗಳನ್ನ ಸೇರಿಸಬಹುದು. ಕಾರಣ - Android ಒಂದು OpenSource Operating System.

*****

ಇದಿಷ್ಟು ಡೆಲ್ ಸ್ಟ್ರೀಕ್ ಬಗ್ಗೆ ನಾನು ನಿಮಗೆ ಸದ್ಯಕ್ಕೆ ತಿಳಿಸಬೇಕೆಂದಿದ್ದು. ನಿಮಗೆ ಇದಕ್ಕೆ ಇನ್ನೂ ಸ್ವಲ್ಪ ಸೇರಿಸುವ ಮನಸಾಗಿದ್ರೆ ಖಂಡಿತ ಸೇರಿಸಿ. ಒಂದೆರಡು ಸಾಲಲ್ಲ. ನೀವು ಸಾವಿರ ಸಾಲು ಬರೆದರೂ ಬೇಡ ಅನ್ನುವುದಿಲ್ಲ ನಾನು !!

ಸದ್ಯ ಸ್ಪರ್ಧೆಯಲ್ಲಿರುವ ಪ್ರಮುಖ Pocket PC ಗಳೆಂದ್ರೆ

Apple iPad



Samsung Galaxy TAB



Dell Streak

 

Blackberry PlayBook



Cisco Cius



HP Slate



Toshiba Libretto


Asus eepad



Lenovo ideapad

 
NEC LifeTouch




ಸ್ಟ್ರೀಕ್ ಬಗ್ಗೆ ಗೊತ್ತಾಯ್ತು. ಸ್ಪರ್ಧೆಯಲ್ಲಿರುವ ಇತರ ಸ್ಪರ್ಧಾರ್ಥಿಗಳ ಹೆಸರೂ ತಿಳಿದುಕೊಂಡಾಯ್ತು. ಆದರೆ ಸದರಿ ಸ್ಪರ್ಧೆಗೆ ಕಿಚ್ಚು ಹಚ್ಚಿದ್ದು ಯಾರು ಗೊತ್ತಾ ?!


ಹಾಂ. ಅಮೇಜಾನ್ ಕಿಂಡಲ್. ಇ ಬುಕ್ ರೀಡರ್ ಆಗಿ ಕ್ರಾಂತಿಯನ್ನೇ ಸೃಷ್ಟಿಸಿದ ಇದು ಹೊಸ ಸ್ಪರ್ಧೆಗೆ ದಾರಿ ಮಾಡಿ ಕೊಟ್ಟಿದೆ. ನಿಮಗೆ ಕಿಂಡಲ್ ಬಗ್ಗೆ ಏನೇನು ಗೊತ್ತು ?



: e - ಶ

Oct 15, 2010

ಏನುಂಟು ಏನಿಲ್ಲ N8 ನಲ್ಲಿ ...??!!

2 ಪ್ರತಿಕ್ರಿಯೆಗಳು


ಮೊನ್ನೆ ದಿವಸ ನೋಕಿಯಾ ಇಂಡಿಯಾ ಬಿಡುಗಡೆ ಮಾಡಿರುವ ಹೊಚ್ಚ ಹೊಸ Smart Phone Nokia N8 ಬಗ್ಗೆ ತಿಳಿದುಕೊಳ್ಳೋಣ್ವಾ ಇವತ್ತು ? ಸದರಿ ಸ್ಮಾರ್ಟ್ ಫೋನಿನ ವಿಶೇಷತೆಗಳನ್ನ ಒಂದು ಸಾಲಿನ ಟಿಪ್ಪಣಿಗಳ ಮೂಲಕ ಹೇಳ್ತೀನಿ, ಯಾಕಂದ್ರೆ ಈ ಮೊಬೈಲ್ ನಲ್ಲಿ ಇರುವ ಅಬ್ಬಾ ಎನ್ನುವ ಗುಣವಿಶೇಷಗಳನ್ನ ಹಾಗೆ ಓದಿಕೊಂಡರೇನೇ ಖುಷಿ !! ಜೊತೆಗೆ ಸದರಿ ಸ್ಮಾರ್ಟ್ ಫೋನ್ ನಲ್ಲಿ ಬಳಸಲಾಗಿರುವ ಅಚ್ಚ ವಿಶೇಷ ಹೊಸ Technology ಗಳ ವಿವರಣೆಯೇ ಈ ಲೇಖನದ High Light !!!!!!!!!!

  • ಪಂಡಿತರ ಟೀಕೆಗೊಳಗಾದ N97 ನಂತರ ಬಂದಿರುವ ನೋಕಿಯಾದ ಮಹತ್ವಾಕಾಂಕ್ಷೆಯ SmartPhone, N8.
  • Symbian^3 Operating System ಒಳಗೊಂಡು ಬಿಡುಗಡೆಗೊಂಡ ಜಗತ್ತಿನ ಮೊದಲ SmartPhone.
  • ಮೊದಲ ನೋಟದ ಆಕರ್ಷಣೆ : 12MP ಕ್ಯಾಮೆರಾ ಮತ್ತು ಕ್ಸೆನಾನ್ ಫ್ಲ್ಯಾಷ್.
  • HDMI out & Dolby Digital Plus : ಇನ್ನೆರಡು ಆಕರ್ಷಣೆಗಳು
  • Anodized Aluminium Unibody Shell : ಬಣ್ಣ ಮಾಸದ : ಗಟ್ಟಿ : ಒಂದೇ ಅಚ್ಚು ಎಂಬಂತೆ ತಯಾರಾದ Solid ಮೈಕಟ್ಟು.
  • Capacitive TouchScreen
  • Handwriting Recognition ( for chinese )
  • 16:9 nHD Resolution Screen ( 640x360 )
  • CPU ಜೊತೆಗೆ GPU ಕೂಡ ಇದೆ.
  • Li-Ion Battery
  • Short Range FM Transmitter 
  • ಇನ್ನುಳಿದಂತೆ ಎಲ್ಲ SmartPhone ನಲ್ಲಿರುವ ....

ದೊಡ್ಡ TouchhScreen
ಬ್ಲೂ ಟೂತ್ (BlueTooth)
ವೈ-ಫೈ (Wi-Fi)
 Emails & Instant Messaging
ವೆಬ್ ಬ್ರೌಸಿಂಗ್
ಜಿ.ಪಿ.ಎಸ್. (GPS Positioning)
Magnetic Compass & Accelerometer
Photo Editor
Video Editor
16GB ಇಂಟರ್ನಲ್ ಮೆಮೊರಿ
ಇಷ್ಟೆಲ್ಲಾ ಹೊಚ್ಚ ಹೊಸ ಗುಣಗಳೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿರುವ ಸದರಿ SmartPhone ಬೆಲೆ ಗಮನಿಸಿದರೆ ಇದು ಆ್ಯಪಲ್ ಕಂಪೆನಿಯ iPhone ಗೆ ಸವಾಲೊಡ್ಡುವ ಇರಾದೆಯಿಂದ ಬಿಡುಗಡೆಯಾಗಿದೆ ಎಂದು ಹೇಳಬಹುದು. iPhone ಬೆಲೆ ಹತ್ತಿರ ಹತ್ತಿರ 30000/- ಇದ್ದರೆ ಸದರಿ ನೋಕಿಯಾ ಎನ್8 ಬೆಲೆ 26,259/- ಇರುವುದನ್ನ ಗಮನಿಸಬೇಕು.

ಈಗ ಕೆಲವು ಅಚ್ಚ ಹೊಸ ತಂತ್ರಜ್ಞಾನಗಳ ಬಗ್ಗೆ ಚುಟುಕಾಗಿ ಸಾಧ್ಯವಾದಷ್ಟು ಕನ್ನಡ ಭಾಷೆಯಲ್ಲಿ ತಿಳಿದುಕೊಳ್ಳೋಣ.


:: ಅಚ್ಚ ವಿಶೇಷ ಹೊಸ Technology ಗಳು ::



  • Gesture Control = ಟಚ್ ಸ್ಕ್ರೀನ್ ಮೇಲೆ ನಾವು ಮೂಡಿಸುವ ಒಂದು ಸಂಜ್ಞೆಗೆ ಒಂದು ಕಾರ್ಯವನ್ನ ಆರೋಪಿಸಲಾಗಿರುತ್ತದೆ. ಅಂದ್ರೆ message ಬರೆಯುವಾಗ ಒಂದು ಸಾಲನ್ನ Delete ಮಾಡಬೇಕಾಗಿದ್ದಲ್ಲಿ ಸುಮ್ಮನೆ pig-tail ಆಕಾರದಲ್ಲಿ ನಮ್ಮ ಬೆರಳನ್ನ / Stylus ಅನ್ನ ಮೂಡಿಸಿದರೆ ಆ ಸಾಲು ಅಳಿಸಿ ಹೋಗುತ್ತದೆ. ಹಾಗೆ ಸಂಜ್ಞೆಗಳ ಮೂಲಕ ನಮ್ಮ ಕೆಲಸ ಮಾಡಿಸಿಕೊಳ್ಳುವ ತಂತ್ರಜ್ಞಾನವೇ ಗೆಶ್ಚರ್ ಕಂಟ್ರೋಲ್.
  • MultiTouch = ಒಂದು ಟಚ್ ಸ್ಕ್ರೀನ್ ಮೇಲೆ ಒಂದೇ ಸಮಯದಲ್ಲಿ ಮೂರು ಅಥವಾ ಜಾಸ್ತಿ ಸ್ಥಳಗಳ ಮೇಲೆ ಸಂಜ್ಞೆ ನೀಡಿಕೆ ಎಂದರ್ಥ. ಹೀಗೆ ಒಂದಕ್ಕಿಂತ ಹೆಚ್ಚು ಸಂಜ್ಞೆಗಳನ್ನ ನೀಡಿದಾಗ ( ಈ ಹಂತದಲ್ಲಿ ಟಚ್ ಸ್ಕ್ರೀನ್ ಹೇಗೆ ಕೆಲಸ ಮಾಡುತ್ತದೆ ಅಂತ ತಿಳಿಯೋಣ : ಈ ಟಚ್ ಸ್ಕ್ರೀನ್ ಅಂದ್ರೆ ಗಾಜಿನ ಮೇಲೆ ಚಿತ್ರವನ್ನ ಮೂಡಿಸಿ ಅದರ ಮೇಲೆ ಹಿಂದಿನಿಂದ LED ದೀಪಗಳ ಬೆಳಕನ್ನ ಮೂಡಿಸುತ್ತಾರೆ. ನಾವು ಆ ಪರದೆಯನ್ನ ಸೋಕಿದಾಗ ಸದರಿ ಚಿತ್ರದ ಮೇಲಿನ  ಆ ಭಾಗದಲ್ಲಿ ಬೆಳಕು  ಚದುರುತ್ತದೆ. ಹಾಗೆ ಚದುರಿದ ಬೆಳಕನ್ನ ಸಂಗ್ರಹಿಸಲು ಗ್ರಾಹಕ (Sensor) / ಕ್ಯಾಮೆರಾಗಳಿರ್ತಾವೆ. ಆಗ ಗ್ರಾಹಕಗಳು ತಾವು ಸಂಗ್ರಹಿಸಿದ ಮಾಹಿತಿಯನ್ನ Device ನಲ್ಲಿರುವ ತಂತ್ರಾಂಶ (Software) ಕ್ಕೆ ಸಾಗಿಸುತ್ತವೆ. ಸದರಿ ತಂತ್ರಾಂಶ ತನ್ನ ಪ್ರತಿಕ್ರಿಯೆ ನೀಡುವುದರೊಂದಿಗೆ ನಮ್ಮ ಸಂಜ್ಞೆಗೆ ಉತ್ತರ ದೊರೆಯುತ್ತದೆ !! ) , ನಾವು ನೀಡಿದ ಒಂದಕ್ಕಿಂತ ಹೆಚ್ಚಿನ ಸಂಜ್ಞೆಗಳಲ್ಲಿ ಹೆಚ್ಚು ಒತ್ತಡದಲ್ಲಿ ಅದುಮಲ್ಪಟ್ಟ ಸಂಜ್ಞೆ ಮಾತ್ರ ತಂತ್ರಾಂಶ ತಲುಪುವ ಹಾಗೆ ಸದರಿ Device ಗಳನ್ನ ತಯಾರು ಮಾಡಿರುತ್ತಾರೆ, ಅಂದ್ರೆ ಟಚ್ ಸ್ಕ್ರೀನ್ ಗಳನ್ನ Pressure Sensitive ಮಾಡಿರ್ತಾರೆ.
  • Symbian^3 Operating System = Symbian ನಿಂದ SmartPhone ಗಳಿಗೆಂದೇ ತಯಾರಾಗಿರುವ OpenSource Mobile Operating System. Series 60 ಎಂಬ ಹೆಸರಿನಲ್ಲಿ ಬಂದ ವಿವಿಧ ಆವೃತ್ತಿಗಳ ಪೈಕಿ 1,2 & 3 ನೇ ಆವೃತ್ತಿಗಳು Touchscreen ಅಲ್ಲದ ಈ ಮುಂಚಿನ Mobile ಗಳಿಗೆ ಆವೃತ್ತಿಯ ಏರಿಕೆ ಕ್ರಮದಲ್ಲಿ ಹೊಸ ಹೊಸ ಸುಧಾರಿತ Feature ಗಳನ್ನ ಸೇರಿಸುತ್ತಾ ಬರಲಾಗಿದೆ. 4 ನೇ ಆವೃತ್ತಿ ಬರದೇ ಒಮ್ಮೆಲೇ 5ನೇ ಆವೃತ್ತಿಗೆ ಜಿಗಿದು TouchScreen ಗಳಿಗೆಂದೇ Mobile OperatingSystem ಅಭಿವೃದ್ಧಿಪಡಿಸಲಾಯಿತು. ಹೀಗೆ ತಯಾರಿಸಲಾದ Symbian S60 5th Edition ಗೆ Symbian^1 ಎಂದು ನಾಮಕರಣ ಮಾಡಲಾಯಿತು. ಲೇಖನದ ಮೊದಲಲ್ಲಿ ಹೆಸರಿಸಲಾದ Nokia N97 ಸದರಿ Symbian^1 ಬಳಸಿಕೊಂಡು ತಯಾರಾದ SmartPhone.  Symbian^2 ಬಳಸಿಕೊಂಡು ಯಾವುದೇ Nokia Phone ಬಂದಿಲ್ಲ. ಈಗ Symbian^3 ಬಳಸಿಕೊಂಡು N8 ಜೊತೆಗೆ C6-00 , C7-00 & E7-00 ಎಂಬ SmartPhone ಗಳು Pipeline ಅಲ್ಲಿ ಇದಾವೆ.  Symbian^4 ಕೂಡ ತಯಾರಾಗಿದ್ದು 2011ರ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
  • Capacitive TouchScreen = ಈ ಗುಣದ ಬಗ್ಗೆ ಜಾಸ್ತಿ ವಿವರಿಸುವ ಬದಲು ಉದಾಹರಣೆ ಒಂದನ್ನ ನೀಡಿದರೆ ತುಂಬ ಸರಳವಾಗಿ ಅರ್ಥವಾಗುತ್ತೆ. ನೀವೆಲ್ಲ Laptop ನೋಡಿಯೇ ಇರುತ್ತೀರಿ. ಅದನ್ನ ಬಳಸಿಯೂ ಇರುತ್ತೀರಿ. ಅದರಲ್ಲಿ Mouse ಬದಲಿಗೆ ಬಳಸಿರುವ TrackPad ಇದೆಯಲ್ಲಾ, ಅದು Capacitive TouchScreen ಗೆ ಒಂದು ಸರಳ ಉದಾಹರಣೆ. ಇಲ್ಲಿ ಒಂದಂಶವನ್ನ ಹೇಳಬೇಕು : TouchScreen ಅಂದ್ರೆ ಅಲ್ಲಿ Sensors ಗಳ ಬಳಕೆಯಾಗಿರುತ್ತದೆ. ಹೇಗೆ ಈ ಹಿಂದಿನ ಪೀಳಿಗೆಯ ಮೊಬೈಲ್ ಗಳಲ್ಲಿ ಕೀಲಿಮಣೆ ( KeyPad ) ಒತ್ತಿ Software ಗೆ ನಮ್ಮ ಸೂಚನೆ ರವಾನಿಸುತ್ತಿದ್ದೆವೋ ಹಾಗೆ ಇಂದಿನ ಪೀಳಿಗೆಯ TouchScreen ಮೋಬೈಲ್ ಗಳಲ್ಲಿ Screen ಅನ್ನ ಒತ್ತುವ ಮೂಲಕ / ಸವರುವ ಮೂಲಕ ಸೂಚನೆ ರವಾನಿಸಲಾಗುತ್ತದೆ. KeyPad ಹಿಂದಿನ ಪೀಳಿಗೆಯಾದರೆ - TouchScreen ನಲ್ಲಿ ಇವತ್ತಿಗೂ ಎರಡು ಹೆಚ್ಚುಕಮ್ಮಿ ಸಮ ವಯಸ್ಕ ಪೀಳಿಗೆಗಳು ಚಾಲ್ತಿಯಲ್ಲಿವೆ. ಒಂದು Resisitive TouchScreen ( ವಯಸ್ಸಿನಲ್ಲಿ ಸ್ವಲ್ಪ ಹಿರಿಯದು ) Capacitive TouchScreen ( ವಯಸ್ಸಿನಲ್ಲಿ ಸ್ವಲ್ಪ ಕಿರಿಯದು ). ಈ resistive & capacitive ಮಾದರಿಗಳಲ್ಲಿರುವ ವ್ಯತ್ಯಾಸವೆಂದರೆ ಅವುಗಳ ರಚನಾ ಕ್ರಮ. ಎರಡೂ ವಿಧಗಳಲ್ಲಿ ಎರಡು ಪದರುಗಳಿದ್ದರೂ resistiveನಲ್ಲಿ ಎರಡು ಪದರುಗಳ ನಡುವಿನ ಅಂತರ ಜಾಸ್ತಿಯಿದ್ದು ನಮ್ಮ ಸೂಚನೆ ನೀಡಲು ಪರದೆ (Screen) ಅನ್ನ ಒತ್ತಬೇಕಾಗುತ್ತದೆ (Tap). ಆದರೆ ಅದೇ capacitive ನಲ್ಲಿ ಎರಡು ಪದರುಗಳ ನಡುವಿನ ಅಂತರ ತೀರ ಇಲ್ಲವೇ ಇಲ್ಲ ಎನಿಸುವಷ್ಟು ಕಡಿಮೆ ಇರುವುದರಿಂದ ಬೆರಳನ್ನ ಸವರಿದರೆ ಸಾಕು ( TrackPad ನೆನಪಿಸಿಕೊಳ್ಳಿ). ಇಲ್ಲಿ ಇನ್ನೊಂದು ಅಂಶವನ್ನ ನೀವು ಗಮನಿಸಬೇಕು : Resistive ನಲ್ಲಿ Tap ಮಾಡಬೇಕಿರುವುದರಿಂದ ಬೆರಳಿನ ಜೊತೆಗೆ Stylus ಕೂಡ ಬಳಸಬಹುದು. ಆದರೆ Capacitive ನಲ್ಲಿ ಪರದೆಯನ್ನ ಸವರಬೇಕಿರುವುದರಿಂದ ಬೆರಳಿನಂಥ ಅಗಲ ತುದಿಯುಳ್ಳ ವಾಹಕಗಳು ಮಾತ್ರ ಸಮರ್ಥವಾಗಿ ಕೆಲಸ ಮಾಡಬಲ್ಲವು. ಇನ್ನು ಶ್ರಮಬೆಲೆ ನಿಯಮ : ಬಳಕೆದಾರ ಜಾಸ್ತಿ ಶ್ರಮ ಪಡಬೇಕಾದಲ್ಲಿ ( Tapping ) ಬಳಕೆಯ ವಸ್ತುವಿನ ಉತ್ಪಾದನಾ ವೆಚ್ಚ ಕಡಿಮೆ ಇರುತ್ತದೆ & ಬಳಕೆದಾರ ಕಡಿಮೆ ಶ್ರಮ ಪಡಬೇಕಾದಲ್ಲಿ  ( TrackPad ) ಬಳಕೆಯ ವಸ್ತುವಿನ ಉತ್ಪಾದನಾ ವೆಚ್ಚ ಜಾಸ್ತಿ ಇರುತ್ತದೆ. ಈ ನಿಯಮ ಇಲ್ಲೂ ಸಮರ್ಪಕವಾಗಿ ಕೆಲಸ ಮಾಡಿದೆ. ಅಂತೆಯೇ capacitive TouchScreen ದುಬಾರಿ.
  • Handwriting Recognition = Optical Character Recognition(OCR) ಅಂತ ಈ ಹಿಂದೆ ಇದ್ದ ತಂತ್ರಜ್ಞಾನವನ್ನ ಹಿಂದಿಕ್ಕಿ ಇವತ್ತು Intelligent Word Recognition(IWR) ಎನ್ನುವ ತಂತ್ರಜ್ಞಾನ ಬಂದಿದೆ. OCR ನಲ್ಲಿ ಅಕ್ಷರ ಬರೆಯುವಾಗ ಮೂಡುವ ವಿವಿಧ ವಕ್ರಗಳನ್ನ (Curve) ಗುರುತಿಸಿ ಒಂದೊಂದು ಬಿಡಿ ಅಕ್ಷರಗಳನ್ನ ಗುರುತಿಸಿ ಅನಂತರ ಪದವನ್ನ ಗುರುತಿಸುವ ಹಾಗೆ Software ತಯಾರಿಸಲಾಗಿತ್ತು. ಆದರೆ ಹೊಸ IWR ನಲ್ಲಿ ಬಿಡಿ ಬಿಡಿಯಾಗಿ ಅಕ್ಷರ ಗುರುತಿಸುವ ಬದಲಿಗೆ ಇಡಿಯಾಗಿ ಪದವನ್ನೇ ಗುರುತಿಸುವ ಹಾಗೆ Software ಬರೆಯಲಾಗಿದೆ. OCR ನಲ್ಲಿ ನಮ್ಮ ಕೈಬರಹ ದೋಷದಿಂದಾಗಿ  ಡಿಜಿಟಲ್ ರೂಪಕ್ಕೆ ಅನುವಾದಗೊಳ್ಳುವಾಗ ತಪ್ಪುಗಳಾಗುವ ಸಾಧ್ಯತೆಯಿತ್ತು. ಆದರೆ IWR,  ಪೂರ್ವದಲ್ಲಿಯೇ ಶೇಖರಣೆಗೊಂಡಿರುವ (Pre Installed DataBase Dictionary ) ಸಾಮಾನ್ಯ ಬಳಕೆಯ ಪದಗಳ ಸಂಗ್ರಹದಿಂದ ಸದರಿ ಕೈಬರವಣಿಗೆಗೆ ಹೋಲಿಸಿ ಕೈಬರಹದೋಷದಿಂದ ಆಗಬಹುದಾದ ತಪ್ಪುಗಳನ್ನ ಮನ್ನಿಸುವ ಜಾಣತನ (Intelligence) ತೋರುತ್ತದೆ. ಅಂತೆಯೇ ಆ ಹೆಸರು !!
  • Mobile Screen Resolutions = ಒಂದು ದೃಶ್ಯ ಪರದೆಯ(Screen) ಮೇಲೆ ಚಿತ್ರವೊಂದು ಮೂಡಬೇಕಾದರೆ ಸದರಿ ಚಿತ್ರ ಅನೇಕ ಚಿಕ್ಕ ತುಣುಕುಗಳ ಜೋಡಣೆಯೊಂದಿಗೆ ಪೂರ್ತಿ ದೃಶ್ಯವಾಗಿರುತ್ತದೆ. ಈ ಚಿಕ್ಕ ತುಣುಕಿಗೆ Pixel ಅನ್ನೋಣ. ಇಂತಿಪ್ಪ ದೃಶ್ಯಪರದೆಯ ಸಾಮರ್ಥ್ಯವನ್ನ ಆ ಪರದೆ ಹೊಂದಿರುವ Pixel ಗಳ ಆಧಾರದ ಮೇಲೆ ವಿಂಗಡಿಸಬಹುದು.
    ಐ ಫೋನ್ 4
    ಜಾಸ್ತಿ ಸಂಖ್ಯೆಯಲ್ಲಿ Pixel ಹೊಂದಿದ್ದರೆ ಜಾಸ್ತಿ ಸಾಮರ್ಥ್ಯ & ಚಿತ್ರದ ಸ್ಪಷ್ಟತೆಯನ್ನ ಆ Screen ಹೊಂದಿರುತ್ತದೆ ಎಂದು ಹೇಳಬಹುದು. ನಮ್ಮ ಮೊಬೈಲ್ Screen ಗಳ ಬಗ್ಗೆ ಮಾತ್ರ ಹೇಳುವುದಾದಲ್ಲಿ QVGA, WQVGA , WVGA .. ( VGA = Video Graphics Array )ಇತ್ಯಾದಿ ಸಂಕ್ಷೇಪ್ತಾಕ್ಷರಗಳನ್ನ ನೀವು ಓದಿರುತ್ತೀರಿ. Quarter VGA ದಲ್ಲಿ 360x240 ಅಳತೆಯಿದ್ದು 76800 ಪಿಕ್ಸೆಲ್ ಗಳಿರುತ್ತವೆ. (ಉದಾ : E63) Wide QVGA ದಲ್ಲಿ 400x240 ಅಳತೆಯಿದ್ದು 96000 ಪಿಕ್ಸೆಲ್ ಗಳಿರುತ್ತವೆ. (ಉದಾ : windows 6 mobiles ) WVGA ದಲ್ಲಿ 800x480 ಅಳತೆಯಿದ್ದು 384000 ಪಿಕ್ಸೆಲ್ ಗಳಿರುತ್ತವೆ. (ಉದಾ : HTC Touch HD / Diamond 2 ) ಈಗ ನಮ್ಮ ಮುಂದಿರುವ N8 ನಲ್ಲಿನ nHD (neo High Definition)  Screen ಬಳಸಲಾಗಿದ್ದು ಅದರಲ್ಲಿ 640x360 ಅಳತೆ ಹೊಂದಿದ್ದು, 230400 ಪಿಕ್ಸೆಲ್ ಗಳಿರುತ್ತವೆ. ಹೀಗಾಗಿ nHD ಬಳಸಿರುವ Nokia N8 ಮೊಬೈಲ್ HTC Touch HD ಗಿಂತ ಹಿಂದೆಯೇ ಇದೆ ಅಂತಾಯ್ತಲ್ವೇ ? ಇವುಗಳಿಗಿಂತ ಮುಂದಿರುವುದು ಯಾವುದು ಗೊತ್ತೇ ?  ಹೌದು. Absolutely Apple iPhone 4. ಐ ಫೋನ್ 4 ನಲ್ಲಿ DVGA (Digital Variable Gain Amplifier) Screen ಬಳಸಲಾಗಿದ್ದು 960x640 ಅಳತೆಯಿದ್ದು 614400 ಪಿಕ್ಸೆಲ್ ಗಳನ್ನ ಹೊಂದಿದೆ.
  • GPU = Graphics Processing Unit. CPU ನ ಹಾಗೆ ಇದೂ ಕೂಡ ಒಂದು microprocessor ಆಗಿದ್ದು 3D & 2D ಗ್ರಾಫಿಕ್ ಗಳ ಸುಲಲಿತ ವೀಕ್ಷಣೆಗೆ ಸಹಾಯ ಮಾಡುತ್ತದೆ. ಗಣಕ ಗೇಮಿಗರಿಗೆ (Computer Gamers) ಅತ್ಯಂತ ಪರಿಚಿತ nVIDIA Card ಅಂದ್ರೆ ಇಂಥದೇ ಒಂದು GPU ಹೊಂದಿರುವ MotherBoard ಮೇಲೆ ಕುಳಿತುಕೊಳ್ಳುವ ಹೆಚ್ಚುವರಿ microprocessor.
  • Li-ion Battery = Lithium Ion Battery ( LIB ) ಅಂತ ಕರೆಯಲ್ಪಡುವ ಇದು ಒಂದು ಮರುಪೂರಣಗೊಳ್ಳುವ (ReChargeable) ಬ್ಯಾಟರಿ. ಸದರಿ ಬ್ಯಾಟರಿಯ ಮರುಪೂರಣ(Recharge)ದ ತತ್ವ ಬಹಳ ಸರಳವಾಗಿದ್ದು : ಬ್ಯಾಟರಿ ಬಳಕೆಯಾಗುವಾಗ ಲೀಥಿಯಂ ಆಯಾನುಗಳು ಋಣಾತ್ಮಕ ಇಲೆಕ್ಟ್ರೋಡ್ ನಿಂದ ಧನಾತ್ಮಕ ಇಲೆಕ್ಟ್ರೋಡ್ ಕಡೆಗೆ ಚಲಿಸುತ್ತವೆ. ಮತ್ತು ಬ್ಯಾಟರಿ ಪೂರಣಗೊಳ್ಳುವಾಗ ( while charging ) ಲೀಥಿಯಂ ಆಯಾನುಗಳು ಧನಾತ್ಮಕ ಇಲೆಕ್ಟ್ರೋಡ್ ನಿಂದ  ಋಣಾತ್ಮಕ ಇಲೆಕ್ಟ್ರೋಡ್ ಕಡೆಗೆ ಚಲಿಸುತ್ತವೆ
  • Belkin Tunecast Transmitter
  • Short Range FM Transmitter = ಇದು ಒಂದು ರೀತಿಯ BlueTooth ರೀತಿಯಲ್ಲಿ ಕೆಲಸ ಮಾಡುವ Technology ಎನ್ನಬಹುದು. ಈ ತಂತ್ರಜ್ಞಾನವನ್ನ ಬಳಸಿಕೊಂಡು ನಮ್ಮ ಮೊಬೈಲ್ ನಲ್ಲಿರುವ ಹಾಡುಗಳನ್ನ ಸಣ್ಣ ದೂರದವರೆಗೆ FM ತರಂಗಗಳ ರೂಪದಲ್ಲಿ ಪ್ರಸಾರ ಮಾಡಬಹುದು. ಹಾಗೆ ಪ್ರಸಾರ ಮಾಡಿದ ತರಂಗಗಳನ್ನ  ದೈನಂದಿನ ಬಳಕೆಯ FM Radio Player ಗಳು ಗುರುತಿಸುತ್ತವೆ & ನಮ್ಮ ಮೊಬೈಲ್ ನಲ್ಲಿರುವ ಹಾಡನ್ನ ಹೆಚ್ಚಿನ ಧ್ವನಿಯೊಂದಿಗೆ ಹಾಡುತ್ತದೆ. ಒಂದು ರೀತಿಯ Amplifier ಬಳಸಿದ ಹಾಗಾಯ್ತಲ್ಲವೇ ? ನಿಮ್ಮ Car Stereo ದಲ್ಲಿರುವ FM Tuner ಗೆ ಇದು ಉತ್ತಮ ಸಂಗಾತಿಯಾಬಗಲ್ಲುದು. ಈ Transmitter ಮೊಬೈಲ್ ಒಳಗಡೆ ಇರುವಂಥ Technology ಯಾಗಿದ್ದು ಇದನ್ನ ಹೊರಗೆಳೆಯುವ ಕೆಲಸವನ್ನ ಮಾಡುವ Device ಅನ್ನ ಪಕ್ಕದ ಚಿತ್ರದಲ್ಲಿ ನೋಡಬಹುದು.

ಇದಿಷ್ಟು ನಾನು ತಿಳಿದುಕೊಂಡಿರುವ N8 ಪುರಾಣ. ನಿಮ್ಮ ಅನಿಸಿಕೆ - ಅಭಿಪ್ರಾಯ - ಟೀಕೆ - ಮಾಹಿತಿ ಸೇರ್ಪಡೆ .. ಯಾವುದಕ್ಕೂ ಹಿಂಜರಿಯದಿರಿ...


ಇಂತಿ,



: e - ಶ

Jul 18, 2010

ಮೈಕ್ರೋಮ್ಯಾಕ್ಸ್ ಬ್ಲಿಂಗ್ ನ Swarovski ಎಲೆಮೆಂಟ್ಸ್

0 ಪ್ರತಿಕ್ರಿಯೆಗಳು

ನಮ್ಮ ಅಕ್ಕಿ aka ಅಕ್ಷಯ್ ಕುಮಾರ್ ತನ್ನ ಹೆಂಡತಿ ಟ್ವಿಂಕಲ್ ಖನ್ನಾಳ ಮೈಕ್ರೋಮ್ಯಾಕ್ಸ್ ಬ್ಲಿಂಗ್ ನ ಜಾಹೀರಾತಿಗಾಗಿ ತನ್ನ Trademark ನಗುವಿನ ಶೈಲಿಯಲ್ಲಿ " ಹಾ ... ಹಾ .. ಹಾ ... It Twinkles !! " ಅಂತ ಧ್ವನಿ ನೀಡಿದ್ದನ್ನ ನೀವು ಗಮನಿಸಿರಬಹುದು. ಆ ಜಾಹೀರಾತಿನಲ್ಲಿ ಕೇಳಿ ಬರುವ ಒಂದು ಶಬ್ದ " It's Decorated With Swarovski ಎಲೆಮೆಂಟ್ಸ್ "  ದ ಅರ್ಥ ಏನ್ ಗೊತ್ತಾ ? ಇಲ್ಲಿದೆ ಓದಿ ತಿಳ್ಕೊಳಿ ...



ಸ್ವಾರೋಸ್ಕೀ - ಇದು ನಿಖರವಾಗಿ ಕತ್ತರಿಸಲ್ಪಟ್ಟ ಗಾಜುಗಳಿಂದ ಮಾಡಿದ ಆಭರಣ / ಐಷಾರಾಮಿ  ಉತ್ಪನ್ನಗಳನ್ನು ತಯಾರು ಮಾಡುವ ಕಂಪೆನಿಯ ಹೆಸರು. ಇವೇನೂ ವಿರಳ ರತ್ನದಂಥ ಕಚ್ಚಾ ವಸ್ತುವಿನಿಂದ ಮಾಡಿದ ವಸ್ತುಗಳಲ್ಲ. ಬದಲಿಗೆ ಹೇರಳವಾಗಿರುವ ಗಾಜನ್ನೇ ಬಳಸಿಕೊಂಡು ಕ್ರಿಯಾಶೀಲತೆಗೆ ಕೆಲಸ ನೀಡಿ ಆ ಗಾಜನ್ನ ವಿವಿಧ ಕೋನಗಳ್ಲಲಿ ಸಾಣೆ ಹಿಡಿದು ಸಾಮಾನ್ಯ ಗಾಜನ್ನ ನಯನ ಮನೋಹರವಾಗಿಸುವುದು ಇವರ ಕೆಲಸ.


ಅಂತೆಯೇ ಮೈಕ್ರೋಮ್ಯಾಕ್ಸ್ ಕಂಪೆನಿಯವರು ರೂ.5000/- ದಲ್ಲಿನೇ ಈ ಬ್ಲಿಂಗ್ ಅನ್ನ ನೀಡುತ್ತಿರುವುದು.


ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ


: e - ಶ

Jun 24, 2010

ಐ ಫೋನ್ 4 ಎಂಬ ಮಾಯಾವಿ ಮೊಬೈಲ್

0 ಪ್ರತಿಕ್ರಿಯೆಗಳು


ಇಂದು ಬಿಡುಗಡೆಯಾಗುತ್ತಲಿರುವ ಈ ಫೋನ್ ಆ್ಯಪಲ್ ಕಂಪೆನಿಯ ಕ್ರಿಯಾಶೀಲತೆ ( Creativity ) ಯ ಇನ್ನೊಂದು ಸರಕು. ನೋಡಿದ ಕೂಡಲೇ ಮರುಳಾಗಿಸುವ ಮೈಮಾಟ ( Design ) ಹೊಂದಿರುವ ಈ ಮಾಯಾವಿ ಮೊಬೈಲ್ ಬಗ್ಗೆ ಒಂದು ಸಂಕ್ಷಿಪ್ತ ಪರಿಚಯ ಇಲ್ಲಿದೆ. : ಓದಿಕೊಳ್ಳಿ



 apple

 ವಿಸ್ತೃತ ವಿಶ್ಲೇಷಣೆಗಾಗಿ ಇಲ್ಲಿ ಕ್ಲಿಕ್ಕಿಸಿ


: e - ಶ 

Mar 19, 2010

Global Mobile Brand INQ Mobile ಜೊತೆ Aircel ಒಪ್ಪಂದ

1 ಪ್ರತಿಕ್ರಿಯೆಗಳು





ಈಗ ನಾನು ಆ ಒಪ್ಪಂದದ ಒಳಹೊರಗುಗಳ ಬಗ್ಗೆ ಹೇಳ್ತಾ ಇಲ್ಲ. ಬದಲಿಗೆ ಏನೀ INQ Mobile ? ಅದೆಷ್ಟು ಸಂಚಲನ ಮೂಡಿಸುವ ಶಕ್ತಿ ಹೊಂದಿದೆ  ? ಅಂತ ಹೇಳೋಕೆ ಹೊರಟಿದೀನಿ. ಓದಿ.


ಈ INQ Mobile ಏನಿದೆಯಲ್ಲ ಇದು, Fortune 500 ಕಂಪೆನಿಗಳಲ್ಲಿ ಒಂದಾ ಗಿರುವ Hutchison Whampoa ಎಂಬ ಹಾಂಕಾಂಗ್ ಮೂಲದ ಕಂಪೆನಿಯ Subsidiary ಕಂಪೆನಿ. Hutchison Whampoa ಕಂಪೆನಿ ಒಂದು ಬೃಹತ್ ಉದ್ಯಮ . ಬಂದರು, ಹೊಟೇಲ್, ಇಂಧನ, ಸಂಪರ್ಕ ಮಾಧ್ಯಮ ಹೀಗೆ ವಿವಿಧ ವಿಭಾಗಗಳಲ್ಲಿ ತನ್ನ ಜಾಲ ಹೊಂದಿದೆ.

2008ರಲ್ಲಿ ಪ್ರಾರಂಭವಾದ INQ Mobile ಕಂಪೆನಿ London, UK ನಲ್ಲಿ ತನ್ನ Base ಹೊಂದಿದೆ. ಮೊಬೈಲ್ ಫೋನ್ ತಯಾರು ಮಾಡೋದಷ್ಟೇ ಇದರ ಕೆಲಸ. Affordable MidRange SmartPhone ತಯಾರು ಮಾಡೋದು ಈ ಕಂಪೆನಿಯ Business Strategy. ಮುಖ್ಯವಾಗಿ Social Networkingಮೇಲೆ Concentrate ಮಾಡೋದು ಈ ಕಂಪೆನಿ ಬಳಸ್ತಿರೋ ತಂತ್ರಗಾರಿಕೆ. ಸದ್ಯಕ್ಕೆ,

Facebook : Orkut ನಂತಹ ಗೆಳೆಯರ ಅಡ್ಡಾ

Twitter : ಶೀಘ್ರ ಚಿಕ್ಕಾತಿಚಿಕ್ಕ ಸಂದೇಶ ವಾಹಕ

Windows Live Messenger : ಇದು ಒಂದು IM ( Instant Messaging ) ಸೇವೆ. ಕಂಪ್ಯೂಟರ್ ನಲ್ಲಿ ಚಾಟ್ ಮಾಡುವ ಒಂದು Tool. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗಳಿಗೂ ಕಾಲಿಟ್ಟಿದೆ.

Skype : Video Chat ಗಾಗಿ

Last.FM : 2002ರಲ್ಲಿ ಪ್ರಾರಂಭವಾದ ಇದು ಬ್ರಿಟನ್ ದೇಶದ ಪ್ರಖ್ಯಾತ Internet Radio Service.

ನಂತಹ HOT Feature ಗಳನ್ನ ನಮ್ಮ INQ Mobile ನಲ್ಲಿ ಅಳವಡಿಸಲಾಗಿದೆ.

INQ 3G
INQ CHAT 3G

ಈಮೂರು Handset ಗಳನ್ನ ಮಾತ್ರ ತಯಾರಿಸಿದ್ರೂ ಈ ಕಂಪೆನಿ 2009 & 2010ರ ಸಾಲಿನಲ್ಲಿ ತನ್ನ ಉತ್ಪನ್ನಗಳಿಗೆ ಬಾರ್ಸಿಲೋನಾದಲ್ಲಿ ನಡೆದ ಸಮ್ಮೇಳನದಲ್ಲಿ  BEST MOBILE OF THE YEAR ಪ್ರಶಸ್ತಿ ಗಳಿಸಿಕೊಂಡಿದೆ.

ಇದೀಗ ಭಾರತದಲ್ಲಿ AIRCEL ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಂಡು ಭಾರತೀಯರಿಗೆ ತನ್ನ ಅಗ್ಗದ ಬೆಲೆಯಲ್ಲಿ ಅಗಾಧ feature ನೀಡುವ ಕೈಂಕರ್ಯಕ್ಕೆ ಕೈ ಹಾಕಿದೆ.

ಶುಭವಾಗಲಿ ಅಂತ ಹರಸೋಣ.





: e - ಶ
.

Mar 8, 2010

1st Cross Tech presents MIDHybrid e-Book Reader

0 ಪ್ರತಿಕ್ರಿಯೆಗಳು



  • ಕಾಗದದ ಪುಸ್ತಕದ ಓದಿಗೆ Good Bye ಹೇಳಿ, Electronic Reading ಗೆ WelCome ಮಾಡಿಸಿದ್ದ Kindle ಎಂಬ e-ಪುಸ್ತಕಕ್ಕೆ ಇನ್ನೊಬ್ಬ ಎದುರಾಳಿ ಬಂರುತ್ತಿದ್ದಾನೆ. ಅದುವೇ MID Hybrid e-Book Reader.
  • ಇದು ನೀವು ಚಿತ್ರದಲ್ಲಿ ಕಾಣುತ್ತಿರುವಂತೆ ಪುಸ್ತಕದಂತೆ ಮಡಚಲು ಬರುವಂತೆ ಮಾಡಿರೋದು ಮೊದಲ ಆಸಕ್ತಿ ಕೆರಳಿಸೋ ವಿಚಾರ.

  • ಇನ್ನು ಎರಡನೇದು ಇಲ್ಲಿ ಎದುರು ಬದುರಾಗಿ ಎರಡು ಪುಟಗಳು ನಿಮಗೆ ಕಾಣುತ್ವೆ.ಒಂದು ಪುಟದಲ್ಲಿ E-INK SCREEN ಇದ್ರೆ, ಇನ್ನೊಂದು ಪುಟದಲ್ಲಿ Key Pad ಮತ್ತು ಪುಟ್ಟದೊಂದು LCD ಪರದೆಯಿದೆ.


  • ಇದರಲ್ಲಿ 3G ಇದೆ, BlueTooth ಇದೆ.

  • LCD Screen ನಲ್ಲಿ Browse ಮಾಡಿ ( ಅಂದರೆ PDF File ಗಳು , SpreadSheet ಗಳು , ..ಇತ್ಯಾದಿಗಳನ್ನ ಈ ಕಡೆ E-INK SCREEN ನಲ್ಲಿ ನೋಡಬಹುದು / ಓದಬಹುದು.

  • ಜೊತೆಗೆ ಇದರಲ್ಲಿ Web Cam ಕೂಡ ಇದೆ. 3G ಇದ್ದು Web Cam ಸೇರಿದ್ರೆ ಏನೇನೆಲ್ಲಾ ಸಾಧ್ಯತೆಗಳಿದಾವೆ ಅಂತ , ಬೆಂಗಳೂರಿಗೆ 3G ಕಾಲಿಟ್ಟು 20 ದಿನ ಕೂಡ ಆಗಿಲ್ಲದಿರೋ ಈ ಹೊತ್ತಲ್ಲಿ , ನಿಮಗೆ ನಾನು ಹೇಳ್ಬೇಕಿಲ್ಲ ತಾನೆ ?

: e - ಶ 

Jan 28, 2010

New Marvel : Apple iPAD

0 ಪ್ರತಿಕ್ರಿಯೆಗಳು
I Love Apple. Here Apple Is Not The Fruit But The Company Which Produces Exciting Electronic Stuffs. Their Creations Are Always Mindblowing. You Fall In Love With Them @ First Sight, Guaranteed. Their Design, Aestheticity, WOW features, Cutest interface....Evvverything....Evverything That Comes Out Of Apples Stable is A Masterpiece.

I Just Indulge.




Yesterday The Boss of Apple, Steve Jobs, Unvieled The New iPad. It's News was Leaked In The Market Months Before It's Release & Rumoured to Be Named As iSlate, iPad,...etc. But Company Decided To Go With The Name iPad ( Remember iPod - It's WorldFamous MusicPlayer ). Have A Look @ This Picture..


These R Not The Company's Creations. These R Just The Digital Manufactures Of Die Hard Fans of Apple Who PainStakingly Designed These Tablets & Tried To Farsee Their Dream Device Through Their Eyes.


This Is Apple Fan Club. They Stand In Ques To Buy Its First Copy of All Their Goods.

-------------------------------------

ಈಗ ವಿಷಯಕ್ಕೆ ಬರೋಣ. ನಿನ್ನೆಯ ದಿವಸ ಆ್ಯಪಲ್ ಕಂಪನಿಯ ಮಾಸ್ಟರ್ ಸ್ಟೀವ್ ಜಾಬ್ಸ್ ಹೊಸ ಉತ್ಪನ್ನವೊಂದನ್ನ ಸಾದರಪಡಿಸಿದರು. ಅದುವೇ iPad.










ಇದನ್ನ ನಿಮ್ಮೆದುರಿಗೆ ಈ ಥರ ಪರಿಚಯಿಸ್ತೀನಿ ನೋಡಿ....ಅಂದ್ರೆ ಅದರಲ್ಲಿ ಬಳಸಿರೋ ಒಂದೊಂದು technical Spec ಅನ್ನ Explain ಮಾಡ್ತಾ ಹೋಗ್ತೀನಿ ::


  • ಇದನ್ನ Tablet ಗಳ ಗುಂಪಿಗೆ ಸೇರಿಸಿರುವ ಕಂಪೆನಿ ಅದನ್ನ iPhone ಗಿನ್ನ Large Screen Device ಮತ್ತೆ Laptop ಗಳಿಗಿಂತ Handy ಅಂತ ಹೇಳಿಕೊಂಡಿದೆ. So, ಇದೊಂದು Full Touch Screen - Multitouch Enabled Tablet. A Bit Less In Size of A Magazine. That's why it Boasts To Be Handy & Ofcourse It's.
  • ಇತ್ತೀಚೆಗೆ ಭಾರತಕ್ಕೂ ಕಾಲಿಡಲು ಹವಣಿಸುತ್ತಿರುವ Kindle ನಂತಹ e -Book Reader ಗಳಿಗೆ iPad ನಿಂದ ಸ್ಪರ್ಧೆ ಯಂತೂ guarantee. Dont You Love This InterFace ? Oops !! Damn Cute. Books Mounted on a Wooden Cupboard. Just Pick The Book U Want To Read. That's it .
  • ಈ Tablet, A4 ಶ್ರೇಣಿಯ 1GHz Apple Chip ಒಳಗೊಂಡಿದೆ. Actually It's Not A Boasting Kind of Speed Still Manageabale.
  • Has A Optional Hard Disk Space of 16Gb, 32GB & 64GB.
  • Multitouch Diagonal 9.7 inch LED Display with IPS ( Inches Per Second ) Technology. 1024*768 pixels & 132 pixels per inch (ppi) Brightness ಇದೆ. ಜೊತೆಗೆ Finger Print Smudge ತಪ್ಪಿಸೋದಕ್ಕೆ oleophobic coating ಇದೆ. ಬೇರೆ ಬೇರೆ ಭಾಷೆಗಳನ್ನ At A Time Support ಮಾಡುವ technology ಒಳಗೊಂಡಿದೆ. 9.7 ಇಂಚಿನ Screen ಚಲನಚಿತ್ರ ನೋಡೋದಕ್ಕೆ / ಫೋಟೋ Browse ಮಾಡೋದಕ್ಕೆ Dream device.
  • Connectivity : ಇದರಲ್ಲಿ SIM Card Tray ಕೂಡ ಇದೆ. ಮುಂಚೆನೇ ಹೇಳಿದ ಹಾಗೆ ಇದು ಐ ಫೋನ್ ಗಿಂತ ದೊಡ್ಡದು ಮತ್ತೆ ಲ್ಯಾಪ್ ಟಾಪ್ ಗಿಂತ ಚಿಕ್ಕದು ಅಂತ. ಆದ್ರೆ ಇಲ್ಲಿ SIM Card ಹಾಕೋಕೆ ಬರುತ್ತೆ ಅಂತ ನೋಡಿ ಫೋನ್ ಮಾಡೋಕೆ ಪ್ರಯತ್ನ ಮಾಡ್ಬೇಡಿ. ಆ SIM Card ಇರೋದು 3G Connectivity ಗಾಗಿ. ಜೊತೆಗೆ Wi-Fi ಇದೆ. & Ofcourse BlueTooth ಇದೆ. ಈ Blutooth ನ ನೀವು Wirelees Apple Keypad Connect ಮಾಡ್ಕೊಳ್ಳಿಕ್ಕೂ ಬಳಸಿಕೋಬಹುದು.
    ಈ ಮೇಲಿನ ಚಿತ್ರಗಳಲ್ಲಿ wireless key Board ಗೆ Connect ಮಾಡಿರೋದನ್ನ ನೋಡಬಹುದು. ಎರಡನೇ ಚಿತ್ರದಲ್ಲಿ it's Been Connected To Charger Dock. Third & Fourth Show The Carry Case Which Dons MultiRoles As Photo * Movie Viewing Stand & Even As Type Friendly Posotionning Stand. UnderStood ?
     
  • It's Got Safari Web Browser To Surf The Net.









  • When There Is A Web Browser You R Equipped To Do All Mailing & Surfing & Connecting To Your Friend. & Truly It Gives You All in Full. Take It !
  • & It Has All It's iPod Features Intact.
  • & Now Contacts & Calendar. It's Like U R In Harry Potter's World.ಹೇಗಿದೆ ? ಈ ಪಕ್ಕದ ಪುಟದಲ್ಲಿ ವ್ಯಕ್ತಿಯ ಹೆಸರು ಬರೆದಿದ್ರೆ ಆ ಪಕ್ಕದಲ್ಲಿ ಅವರ ಬಗ್ಗೆ ಫುಲ್ ಡೀಟೇಲ್. & this One Below Here. Check It.Damn Cute Calendar :: To Do List :: Evvverything. It's Like Your Personal Diary Pesonal Assistant. All In One.
  • & They Have Added One More Option Here Called : SpotLight Search . Which Helps U Search Across The iPad. This feature Enables You To Find Any data Of Any Form, In A Flash.
& It Has Got Maps & Notes.ಹೀಗೆ ನಿಮ್ಮ ಕಲ್ಪನೆಗೆ ಸಾಣೆ ಹಿಡಿಯುವ device ನಿನ್ನೆ ದಿವಸ ಜನ್ಮ ತಾಳಿದೆ. ನಮ್ಮೂರಿಗೆ ಬರೋದಕ್ಕೆ ಇನ್ನೊಂದು ವರ್ಷ ತಗೊಳ್ಳುತ್ತೋ ಏನೋ...ಯಾವ್ದಕ್ಕೂ ಹಣ ಕೂಡಿಡೋಣ.

Take Out Your PIGGY BANK Name it ::

iSave 4 iPad.


: e - ಶ 

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ