.
PANKH : ಈ ಹಿಂದೆ दस कहानियां ಅಂತ ಹತ್ತಿಪ್ಪತ್ತು ಪ್ರಸಿದ್ಧ ನಟನಟಿಯರನ್ನು ಕಲೆಹಾಕಿ ಚಿತ್ರ ನಿರ್ದೇಶಿಸಿದ್ದ ಇವರು ಈಗ ಮತ್ತೆ ಪಂಖ್ ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಬಿಪಾಶಾ ಬಸು ಜೊತೆಗೆ ಮರಡೋನಾ ರೆಬೆಲ್ಲೋ ಎಂಬ ಹೊಸ ಹುಡುಗ ನಟಿಸ್ತಿದಾನೆ. ಸಾಕಷ್ಟು ಹಿಂದಿ ಚಿತ್ರಗಳಿಗೆ ಸಂಗೀತ ನೀಡಿ ಅನುಭವ ಇರುವ ರಾಜು ಸಿಂಗ್ ಸಂಗೀತ ಈ ಚಿತ್ರಕ್ಕಿದೆ.
सदियाँ : ಒಂದೆರಡು ದಶಕಗಳ ಹಿಂದೆ ಬಾಲಿವುಡ್ ಆಳಿದ ಕೆಲವು ಹಳಬರು ಈ ಚಿತ್ರದಲ್ಲಿರುವುದು ವಿಶೇಷ. ರಿಷಿ ಕಪೂರ್, ಹೇಮಾ ಮಾಲಿನಿ, ರೇಖಾ, ಶಬಾನಾ ಅಜ್ಮಿ ... ಹೀಗೆ ಇವರ ತಾರಾ ಬಲದ ಮೇಲೆ ರಾಜ್ ಕನ್ವರ್ ನಿರ್ದೇಶನ ಮಾಡೋ ಹೊಣೆ ಹೊತ್ತಿದಾರೆ. ಅದ್ನಾನ್ ಸಮಿ ಸಂಗೀತ ಈ ಚಿತ್ರಕ್ಕಿದೆ.
तुम मिलो तो सही : ಕಬೀರ್ ಸದಾನಂದ್ ಅನ್ನುವ ಹೆಚ್ಚು ಕಮ್ಮಿ ಹೊಸ ನಿರ್ದೇಶಕರು ನಾನಾ ಪಾಟೇಕರ್, ಡಿಂಪಲ್ ಕಪಾಡಿಯಾ, ಸುನೀಲ್ ಶೆಟ್ಟಿ, ವಿದ್ಯಾ ಮಾಳವಾಡೆ ( ಚಕ್ ದೆ ) ... ಇಂಥ ತಾರಾಗಣದಲ್ಲಿ ಚಿತ್ರ ಮಾಡ್ತಿದಾರೆ. ಜಬ್ ವಿ ಮೆಟ್ ಚಿತ್ರಕ್ಕೆ ಪ್ರೀತಮ್ ಜೊತೆ ಸೇರಿ ಸಂಗೀತ ನೀಡಿದ ಸಂದೇಶ್ ಶಾಂಡಿಲ್ಯ ಇಲ್ಲಿ ಸಂಗೀತ ನೀಡ್ತಿದಾರೆ.
ಹೋದ ವಾರ ತೆರೆ ಕಾಣಬೇಕಿದ್ದ The Great Indian Butterfly ಈ ವಾರಕ್ಕೆ ಮುಂದೂಡಿ ತೆರೆ ಕಾಣ್ತಿದೆ.
.
.
हम , तुम और GHOST : ಈ ಹಿಂದೆ सेहर , चम्कू ಮತ್ತೆ कौन बोला ? ಅಂತ ಮೂರು ಚಿತ್ರಗಳನ್ನ ನಿರ್ದೇಶಿಸಿದ್ದ ಕಬೀರ್ ಕೌಶಿಕ್ ಈ ಚಿತ್ರದ ನಿರ್ಧೇಶಕರು. ಬಹಳ ದಿನಗಳ ನಂತರ ದಿಯಾ ಮಿರ್ಜಾ ಇಲ್ಲಿ ಅಭಿನಯಿಸ್ತಾ ಇದ್ದಾಳೆ. ಜೊತೆಗೆ ಅರ್ಶದ್ ವಾರ್ಸಿ ಮತ್ತೆ ಬೋಮನ್ ಇರಾನಿ ಎಂಬೆರಡು ಅನುಭವಿ ಕಲಾವಿದರೂ ಈ ಚಿತ್ರದಲ್ಲಿದಾರೆ. ಜಾವೇದ್ ಅಖ್ತರ್ ಸಾಹಿತ್ಯ ಶಂಕರ್ - ಎಹಸಾನ್ - ಲಾಯ್ ಸಂಗೀತ ಇದೆ. ಇದೊಂದು ಹಾಸ್ಯ ಚಿತ್ರ ಅನ್ನೋದರ ಜೊತೆಗೆ ಅರ್ಶದ್ ವಾರ್ಸಿ ಈ ಚಿತ್ರಕ್ಕೆ ಇನ್ನೊಬ್ಬರ ಜೊತೆಗೂಡಿ ಹಣ ಸುರಿದಿದಾರೆ.
IT'S A MAN'S WORLD : ಸೌರಭ್ ಸೇನ್ ಗುಪ್ತಾ ಎಂಬ ಹೊಸ ನಿರ್ದೇಶಕರ ಪ್ರಥಮ ಪ್ರಯತ್ನ. ಚಿತ್ರದ ಬಹುತೇಕರು ಹೊಸಬರು. ಸೌರಭ್ ಸೇನ್ ಗುಪ್ತಾ ನಿರ್ದೇಶನದ ಜೊತೆಗೆ ಸಾಹಿತ್ಯ ಮತ್ತು ಸಂಗೀತದ ಹೊಣೆಯೂ ಹೊತ್ತುಕೊಂಡಿದಾರೆ.
MITTAL v/s MITTAL : ಕರಣ್ ರಝ್ಡಾನ್ ಎಂಬ 'ಅನುಭವಿ' ನಿರ್ದೇಶಕರ ಚಿತ್ರ. ಚಿತ್ರದಲ್ಲಿ ಕೆಲವು ಅನುಭವಿ ನಟರೂ ಇದಾರೆ LIKE ಸುಚಿತ್ರಾ ಕೃಷ್ಣಮೂರ್ತಿ , ಗುಲ್ಶನ್ ಗ್ರೋವರ್ . ಮಧುರ್ ಭಂಡಾರಕರ್ ಚಿತ್ರಗಳಿಗೆ ಸಂಗೀತ ನೀಡುತ್ತಿದ್ದ ಶಮೀರ್ ಟಂಡನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
MY FRIEND GANESHA 3 : ರಾಜೀವ್ ರುಯ್ಯಾ ನಿರ್ದೇಶನದ MY FRIEND GANESHA ಸರಣಿಯ ಮೂರನೇ ಚಿತ್ರ.
PREM KA GAME : ಅಶೋಕ್ ಖೇಣಿ ಅನ್ನೋವರೊಬ್ಬರು ತಾವೇ ದುಡ್ಡು ಸುರಿದು ತಾವೇ ನಿರ್ದೇಶನ ಮಾಡಿರೋ ಚಿತ್ರ ಇದು. ಅರ್ಬಾಝ್ ಖಾನ್ ಮತ್ತೆ ತಾರಾ ಶರ್ಮಾ ಎಂಬ ಹಳಬರು ಈ ಚಿತ್ರದಲ್ಲಿದಾರೆ.
THE GREAT INDIAN BUTTERFLY : ಸಾರ್ಥಕ್ ದಾಸಗುಪ್ತಾ ಈ ಚಿತ್ರದ ನಿರ್ದೇಶಕರು. ಈಗಾಗಲೇ ಸಾಕಷ್ಟು ಚಲನಚಿತ್ರ ಪ್ರಶಸ್ತಿ ಸಮಾರಂಭಗಳಿಗೆ ಹೋಗಿ ಬಂದಿರುವುದು ಈ ಚಿತ್ರದ ಹೆಗ್ಗಳಿಕೆ.
WELL DONE ABBA : Welcome To Sajjanpur ನಂತರ ಮತ್ತೆ ಶ್ಯಾಮ್ ಬೆನೆಗಲ್ ನಿರ್ದೇಶನ ಮಾಡ್ತಿದಾರೆ. ಬೋಮನ್ ಇರಾನಿ, ಮಿನಿಷಾ ಲಾಂಬಾ ಜೊತೆಗೆ ನಮ್ಮ ಧ್ಯಾನ್ ( ನನ್ನ ಪ್ರೀತಿಯ ಹುಡುಗಿ ) , ಸೋನಾಲಿ ಕುಲಕರ್ಣಿ ( TAXI NO. 9 2 11 ) ತಾರಾಗಣದಲ್ಲಿದಾರೆ. ಶಂತನು ಮೊಯಿತ್ರಾ ಸಂಗೀತ ನಿರ್ದೇಶಕರು ( 3 ಈಡಿಯಟ್ಸ್ ಕೂಡ ಇವರ ಸಂಗೀತ ನಿರ್ದೇಶನದಲ್ಲಿರುವ ಇತ್ತೀಚಿನ ಚಲನಚಿತ್ರ ).
.
-
- Idiot Box : ಸುನಂದಾ ಮಿತ್ರಾ ನಿರ್ದೇಶನದ ಹೊಸಬರ ಚಿತ್ರ.
- लाहोर : ಅನುಪಮ್ ಖೇರ್ ನಟನೆಯ मैंने गाँधी को नहीं मारा ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಸಂಜಯ್ ಪೂರಣ್ ಸಿಂಗ್ ಚೌಹಾನ್ ನಿರ್ದೇಶನದ ಚೊಚ್ಚಲ ಚಿತ್ರ. ಸೌರಭ್ ಶುಕ್ಲಾ, ಕೆಲ್ಲಿ ದೋರ್ಜೀ ( ಲಾರಾ ದತ್ತಾ ಹಳೆ BoyFriend ) , ಆಶೀಷ್ ವಿದ್ಯಾರ್ಥಿ.. ಹೀಗೆ ಕೆಲವು ಹಳಬರ ಜೊತೆ ಹೊಸಬರೂ ಇದ್ದಾರೆ. ಈಗಾಗಲೇ ಅನೇಕ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ನಮ್ಮ ಮುಂದೆ ನಾಳೆ ಬಿಡುಗಡೆಗೆ ಕಾದಿದೆ.
- Love , Sex Aur Dhoka : Oye ! Lucky , Lucky Oye !! ಮತ್ತು खोस्ला का घोस्ला ಗಳಂಥ ಯಶಸ್ವಿ ಚಿತ್ರಗಳ ನಿರ್ದೇಶಕ ದಿವಾಕರ್ ಬ್ಯಾನರ್ಜಿ ಈಚಿತ್ರದ ನಿರ್ದೇಶಕ. ಹಿಂದಿ ಚಿತ್ರರಂಗ ಕಂಡ ಕೇವಲ ಮೂರೇ ಮೂರು ಮಹಿಳಾ ಸಂಗೀತ ನಿರ್ದೇಶಕರಲ್ಲಿ
ಮೂರನೆಯವರಾದ ಸ್ನೇಹಾ ಖಾನವಾಲ್ಕರ್ ( ಜಗ್ಗತ್ ಬಾಯಿ & ಉಷಾ ಖನ್ನಾ ಮೊದಲಿಬ್ಬರು ) ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಮೊದಲು Oye ! Lucky , Lucky Oye !! ಗೂ ಇವರೇ ಸಂಗೀತ ನೀಡಿದ್ದರು. ಏಕ್ತಾ ಕಪೂರ್ ಮತ್ತಿಬ್ಬರು ಈ ಚಿತ್ರಕ್ಕೆ ಹಣ ಸುರಿದಿದ್ದಾರೆ.
- शापित : ಈ ಹಿಂದೆ ಸಾಕಷ್ಟು ಬಾರಿ ಇಂಥ ಚಿತ್ರಗಳನ್ನ ನಿರ್ದೇಶನ ಮಾಡಿ ಹೆದರಿಸಿ ಹೋಗಿರುವ ವಿಕ್ರಮ್ ಭಟ್ ( ಅಮಿಷಾ ಪಟೇಲ್ ಹಳೆ BoyFriend ) ಮತ್ತೆ ಹೆದರಿಸಲು ಬರ್ತಿದಾರೆ. ರಾಹುಲ್ ದೇವ್ ಬಿಟ್ರೆ ಬಾಕಿ ಎಲ್ಲ ಹೊಸ ಮುಖಗಳು.
-
- दो दिलों के खेल में : ಆಕಾಶ್ ಪಾಂಡೆ ಎಂಬ ಹೊಸ ನಿರ್ದೇಶಕನ ಚೊಚ್ಚಲ ಚಿತ್ರ. ರಾಜೇಶ್ ಖನ್ನಾ ಈ ಚಿತ್ರದಲ್ಲಿರೋದನ್ನ ಬಿಟ್ರೆ ಅಂತ ಯಾವ ವಿಶೇಷವೀ ಇದರಲ್ಲಿಲ್ಲ.
- Hide & Seek : Thriller ಚಿತ್ರ. ಹೊಸ ನಿರ್ದೇಶಕ. ಅಪೂರ್ವ ಲಾಖಿಯಾ ಈ ಚಿತ್ರದ ನಿರ್ಮಾಪಕ ಅನ್ನೋ ಕಾರಣಕ್ಕೆ ಈ ಚಿತ್ರಕ್ಕೆ ಅಷ್ಟೊಂದು ಪ್ರಚಾರ ಸಿಕ್ಕಿದೆ. Mission Istambul, Shootout @ Lokhandwala, Dus Kahaniyaan, Ek Ajnabi, ...ಇತ್ಯಾದಿ ಚಿತ್ರಗಳ ನಿರ್ದೇಶಕ ಅಪೂರ್ವ ಲಾಖಿಯಾ. Rock On !! ಖ್ಯಾತಿಯ ಪೂರಬ್ ಕೊಹ್ಲಿ ತಾರಾಗಣದಲ್ಲಿ.
- ना घर के ना घाट के : ರಾಹುಲ್ ಅಗರವಾಲ್ ನಿರ್ದೇಶನದ ಹಾಸ್ಯ ಚಿತ್ರ. ಸೋನು ನಿಗಮ್ ಅಭಿನಯದ Love In Nepal ಇವರ ಹಿಂದಿನ ಚಿತ್ರ. ಪರೇಶ್ ರಾವಲ್ ಮತ್ತು ಓಂ ಪುರಿ ಈ ಚಿತ್ರದ ಮುಖ್ಯ ಆಕರ್ಷಣೆ.
ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು