ಆ್ಯಪಲ್ ಇನ್ ಕಾರ್ಪೋರೇಷನ್ ಬ್ಲ್ಯಾಕ್ ಬೆರ್ರಿ ಮೊಬೈಲ್ ಸಾಮ್ರಾಜ್ಯವನ್ನ ಸೋಲಿಸಿದ್ದೇವೆ ಅಂತ ಘೋಷಿಸುವುದರ ಜೊತೆಗೆ ತಾನು ಸಾಧಿಸಿರುವ ಅಧಿಪತ್ಯವನ್ನ ಮತ್ತೊಮ್ಮೆ ನಮ್ಮಗಳಿಗೆ ಮನದಟ್ಟು ಮಾಡಿಕೊಟ್ಟ ಹಾಗಾಗಿದೆ. { ಕಳೆದ ತ್ರೈಮಾಸಿಕದಲ್ಲಿ 1,41,00,000 ಐಫೋನ್ ಗಳನ್ನ ಮಾರಾಟ ಮಾಡಿರುವ ಆ್ಯಪಲ್ 1,21,00,000 ಬ್ಲ್ಯಾಕ್ ಬೆರ್ರಿ ಮೊಬೈಲ್ ಗಳನ್ನ ಮಾರಾಟ ಮಾಡಿರುವ ರಿಮ್ ( RIM = Research In Motion ) ಅನ್ನ ಹಿಂದಿಕ್ಕಿದೆ. ಈ ಅಂಕಿ ಸಂಖ್ಯೆಯೂ ಸಾಲದೆಂಬಂತೆ ತನ್ನ 70% ಆದಾಯ ವೃದ್ಧಿಯ ಬಗ್ಗೆಯೂ ಹೇಳಿಕೊಂಡಿದೆ. ( ಕಳೆದ ವರ್ಷ 4ನೇ ತ್ರೈಮಾಸಿಕದಲ್ಲಿ $ 2.53 ಬಿಲಿಯನ್ ಆದಾಯ ಗಳಿಸಿದ್ದ ಆ್ಯಪಲ್ ಈ ವರ್ಷ ಅದೇ ತ್ರೈಮಾಸಿಕದಲ್ಲಿ $ 4.31 ಬಿಲಿಯನ್ ಆದಾಯ ಗಳಿಸಿದೆ. ) } ವ್ಯಾಪಾರದಲ್ಲಿ ಅದು ಸಾಧಿಸಿರುವ 70 ಪ್ರತಿಶತ ಲಾಭಾಂಶ ವೃದ್ಧಿಯೊಂದಿಗೆ ಇಲ್ಲಿಯವರೆಗೆ ಉತ್ತರ ಅಮೆರಿಕದ ಮಾರುಕಟ್ಟೆಯನ್ನ ಆಳುತ್ತಿದ್ದ ಬ್ಲ್ಯಾಕ್ ಬೆರ್ರಿ ಮೊಬೈಲ್ ನಿಂದ ಆ್ಯಪಲ್ ಐ ಫೋನ್ ಸಿಂಹಾಸನವನ್ನ ಕಸಿದುಕೊಂಡಿದೆ. ಇಂದು ಇಷ್ಟೊಂದು ಹೆಸರು ಮಾಡಿರುವ ಆ್ಯಪಲ್ ಬಗ್ಗೆ ಅಲ್ಲಲ್ಲ ಹೆಸರು ಮಾಡಿದ್ದ ಬ್ಲ್ಯಾಕ್ ಬೆರ್ರಿ ಮೊಬೈಲ್ ಬಗ್ಗೆ ಸ್ವಲ್ಪ ತಿಳಿದುಕೊಳ್ಳಲು ಪ್ರಯತ್ನ ಮಾಡೋಣ :
- ಬ್ಲ್ಯಾಕ್ ಬೆರ್ರಿ ಮೊಬೈಲ್ : ಇದು 1995ರಿಂದ ರಿಸರ್ಚ್ ಇನ್ ಮೋಶನ್ ಸಂಸ್ಥೆಯಿಂದ ತಯಾರಾಗುತ್ತಿರುವ ಮೊಬೈಲ್ ಬ್ರ್ಯಾಂಡ್.
- ಕೆನಡಾದ ವಾಟರ್ ಲೂ, ಒಂಟಾರಿಯೋ ದಲ್ಲಿ RIM ತನ್ನ ಮುಖ್ಯ ಕಚೇರಿಯನ್ನ ಹೊಂದಿದೆ.
- ಮೈಕ್ ಲ್ಯಾಝಾರಿಡಿಸ್ ಈ ಸಂಸ್ಥೆಯ ಸಂಸ್ಥಾಪಕ.
ಈಗ ಬ್ಲ್ಯಾಕ್ ಬೆರ್ರಿಯ ಮೊಬೈಲ್ ಗಳ ಸಾಮ್ರಾಜ್ಯಕ್ಕೆ ಕಾಲಿಡೋಣ :
|
ತೀರ ಇತ್ತೀಚಿನ Torch 9800 |
|
ಈ ಹಿಂದಿನ Flip ಮಾದರಿಯ, ಮಹಿಳೆಯರ ಮನಸೂರೆಗೊಂಡ Style |
|
ಜನಪ್ರಿಯತೆಯನ್ನ ತಣಿಸಲು Bold ವಿನ್ಯಾಸದಲ್ಲಿ Tour |
|
ಮೊದಲ TouchScreen : Storm |
|
Curve ಜನಪ್ರಿಯಯತೆಯನ್ನ ಉಳಿಸಿ ಬೆಳೆಸಿದ Bold |
|
ಜನಮನ ಗೆದ್ದ Curve |
|
ಗಾತ್ರ ತಗ್ಗಿಸಲು Pearl |
|
ಇಂದಿನ Torch ನ ಅಜ್ಜಂದಿರು |
ಸಂಸ್ಥೆಯ ವೆಬ್ ವಿಳಾಸದಲ್ಲಿ ತಾವು ತಯಾರಿಸಿರುವ SmartPhone ಗಳ ಪಟ್ಟಿಯಲ್ಲಿ ಅವರೀಗ ಹೆಸರಿಸುತ್ತಿರುವುದು ಇವಿಷ್ಟನ್ನ ಮಾತ್ರ
( ಅಜ್ಜಂದಿರನ್ನ ಹೊರತುಪಡಿಸಿ ). ಇಲ್ಲಿ ನಾವು ಗಮನಿಸಬೇಕಾದ ಅಂಶವೇನೆಂದ್ರೆ ಇದೊಂದು High End / High Society / Corporate ಜಗತ್ತಿಗಾಗಿ ಮೊಬೈಲ್ ತಯಾರಿಸುತ್ತಿರುವ ಸಂಸ್ಥೆ. ಇವರು ನೂರಾ ಎಂಟು ಮಾಡೆಲ್ ಗಳನ್ನ ಜೀವಂತವಾಗಿರಿಸಿ ಎಲ್ಲಕ್ಕೂ ಬೇಡಿಕೆ - ಪೂರೈಕೆ ಸಾಧಿಸುವ ಬದಲು, ಕೆಲವೇ ಕೆಲವು ಅತ್ಯುತ್ತಮ ಗುಣಮಟ್ಟದ ಮಾಡೆಲ್ ಗಳಿಗೆ ಜೀವ ಇಟ್ಟು , ಕಾಲದಿಂದ ಕಾಲಕ್ಕೆ ಜನರ ಅಭಿರುಚಿಗನುಗುಣವಾದ ಹೊಸ ಹೊಸ ಮಾಡೆಲ್ ಗಳನ್ನ ಮಾರುಕಟ್ಟೆಗೆ ಪರಿಚಯಿಸಿ ಹಳತೆನಿಸಿದ ಮೊಬೈಲ್ ಗಳನ್ನ ನೇಪಥ್ಯಕ್ಕೆ ಸೇರಿಸುವ ಜಾಣತನ ರೂಢಿಸಿಕೊಂಡಿದ್ದಾರೆ.
(( ...ಮುಂದುವರೆಯುವುದು ))
: e - ಶ
ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು
No comments:
Post a Comment