ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Nov 1, 2010

ಬ್ರೆಜಿಲ್ ನ ರಾಷ್ಟ್ರಪತಿಗಳು

ಚುಟುಕು ಸುದ್ದಿ : ಬ್ರೆಜಿಲ್ ನ ಪ್ರಥಮ ಮಹಿಳಾ ರಾಷ್ಟ್ರಪತಿಯಾಗಿ ದಿಲ್ಮಾ ವಾನಾ ರೌಸೆಫ್ ಆಯ್ಕೆ





 











ಸುದ್ದಿಯ ಒಳನೋಟ :
  • ಅಧಿಕೃತ ಕಚೇರಿ ಭಾಷೆಯಲ್ಲಿ ಭಾರತದ ಹೆಸರು : Republic of India ಎಂದು ಇರುವ ಹಾಗೆ, ಬ್ರೆಜಿಲ್ ನದ್ದು : Federative Republic of Brazil ಎಂದಿದೆ.
  • Order And Progress : ಎಂಬುದು ಆ ದೇಶದ ಧ್ಯೇಯ ವಾಕ್ಯವಾಗಿದೆ.
  • 1889ರಲ್ಲಿ ಗಣತಂತ್ರ ದೇಶ ಎಂದು ಘೋಷಿತವಾದ ನಂತರದಲ್ಲಿ 6 ಸಂವಿಧಾನ ಮಾರ್ಪಾಡುಗಳಾಗಿದಾವೆ, ಎರಡು ಬಾರಿ ಸರ್ವಾಧಿಕಾರಿ ಆಡಳಿತವಾಗಿದೆ & 3 ವಿವಿಧ ಅವಧಿಗಳಲ್ಲಿ  ಪ್ರಜಾಪ್ರಭುತ್ವ ಆಳ್ವಿಕೆ ನಡೆದಿದೆ.
  • ಒಂದು ಮೆಚ್ಚಿಕೊಳ್ಳುವ ಅಂಶವೆಂದರೆ ಎಲ್ಲ ಪ್ರಜಾಪ್ರಭುತ್ವ ಪೂರಿತ ಅವಧಿಗಳಲ್ಲಿ ಮತದಾನ ಕಡ್ಡಾಯವಾಗಿತ್ತು.
  • 2010 ಡಿಸೆಂಬರ್ 31ರವರೆಗೆ ಲೂಯಿಸ್ ಇನಾಸಿಯೋ ಲೂಲಾ ಡ ಸಿಲ್ವಾ ಅಧ್ಯಕ್ಷರಾಗಿರುತ್ತಾರೆ. ಇವರು ಬ್ರೆಜಿಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಮತಗಳಿಂದ ಆರಿಸಲ್ಪಟ್ಟ ರಾಷ್ಟ್ರಪತಿ.
  • ಇಲ್ಲಿಯವರೆಗೆ ಬ್ರೆಜಿಲ್ ನ ರಾಜಕೀಯ ವಿವಿಧ ಹಂತಗಳನ್ನ ದಾಟಿದ್ದು ಅವನ್ನ ಹೀಗೆ ಗುರುತಿಸಬಹುದು :
  1. The Old Republic ( 1889-1930 )
  2. Vargas Era ( 1930-1946 )
  3. The Second Republic ( 1946-1964)
  4. The Military Dictatorship ( 1964-1985 )
  5. The New Republic ( 1985-present )
  • ಇಂತಿಪ್ಪ ಬ್ರೆಜಿಲ್ ನಲ್ಲಿ 4 ಪ್ರಮುಖ ಪಕ್ಷಗಳಿವೆ :
  1. Worker's Party
  2. Brazilian Democratic Movement Party
  3. Brazilian Social Democracy Party 
  4. Democrats
  • ಈಗ ಕಾರ್ಯ ನಿರ್ವಹಿಸುತ್ತಿರುವ ಲುಲಾ ಡ ಸಿಲ್ವಾ Worker's Party ಗೆ ಸೇರಿದವರು.
  • ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಬ್ರೆಜಿಲ್ ನ 35ನೇ ಅಧ್ಯಕ್ಷರಾಗಿ ವರ್ಕರ್ಸ್ ಪಾರ್ಟಿಯ  ದಿಲ್ಮಾ ವಾನಾ ರೌಸೆಫ್ ಆಯ್ಕೆಯಾಗಿದ್ದಾರೆ. ರೌಸೆಫ್ ಕೂಡ Worker's Party ಗೇ ಸೇರಿದ್ದು ಹಾಲಿ ಅಧ್ಯಕ್ಷರೇ ಅವರ ಹೆಸರನ್ನ ತಮ್ಮ ಪಕ್ಷದಿಂದ ಅನುಮೋದಿಸಿದ್ದರು.





 
: ರವಿ

No comments:

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ