ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Jun 24, 2010

ಐ ಫೋನ್ 4 ಎಂಬ ಮಾಯಾವಿ ಮೊಬೈಲ್

0 ಪ್ರತಿಕ್ರಿಯೆಗಳು


ಇಂದು ಬಿಡುಗಡೆಯಾಗುತ್ತಲಿರುವ ಈ ಫೋನ್ ಆ್ಯಪಲ್ ಕಂಪೆನಿಯ ಕ್ರಿಯಾಶೀಲತೆ ( Creativity ) ಯ ಇನ್ನೊಂದು ಸರಕು. ನೋಡಿದ ಕೂಡಲೇ ಮರುಳಾಗಿಸುವ ಮೈಮಾಟ ( Design ) ಹೊಂದಿರುವ ಈ ಮಾಯಾವಿ ಮೊಬೈಲ್ ಬಗ್ಗೆ ಒಂದು ಸಂಕ್ಷಿಪ್ತ ಪರಿಚಯ ಇಲ್ಲಿದೆ. : ಓದಿಕೊಳ್ಳಿ



 apple

 ವಿಸ್ತೃತ ವಿಶ್ಲೇಷಣೆಗಾಗಿ ಇಲ್ಲಿ ಕ್ಲಿಕ್ಕಿಸಿ


: e - ಶ 

Jun 15, 2010

ಸಿಂಡಿಕೇಟ್ ಬ್ಯಾಂಕ್ ನಲ್ಲಿ ಪ್ರೊಬೇಷನರಿ ಆಫೀಸರ್ ಹುದ್ದೆಗಳು

0 ಪ್ರತಿಕ್ರಿಯೆಗಳು



ಸಿಂಡಿಕೇಟ್ ಬ್ಯಾಂಕ್ ನಲ್ಲಿ ಪ್ರೊಬೇಷನರಿ ಆಫೀಸರ್ ಹುದ್ದೆಗಳು


ಕೊನೆ ದಿನಾಂಕ : 07 ಜುಲೈ 2010
ಪರೀಕ್ಷಾ ದಿನಾಂಕ : 28 ಆಗಸ್ಟ್ 2010
ಒಟ್ಟು Vacancy :
1000
ವಿದ್ಯಾರ್ಹತೆ : ಅಂಗೀಕೃತ ವಿ.ವಿ.ಯಿಂದ ಪದವಿ

ವಯೋಮಿತಿ : 35 ವರ್ಷ ( ಸಾ.ಅ.)
ಆಯ್ಕೆ ಪದ್ಧತಿ : Objective Type Prelims + ( Mains if Necessary ) + ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ : http://www.syndicatebank.in/scripts/Recruitment.aspx



.

May 20, 2010

ಸಂವತ್ಸರಗಳು : ಮಾಸಗಳು : ತಿಥಿಗಳು : ನಕ್ಷತ್ರಗಳು

0 ಪ್ರತಿಕ್ರಿಯೆಗಳು

ನಮ್ಮ ಪೂರ್ವಿಕರು ನಾವಿಂದು ವರ್ಷದ ಕ್ಯಾಲೆಂಡರ್ ಮಾಡಿಕೊಂಡಿರುವಂತೆ ಅಂದು ಸಂವತ್ಸರಗಳನ್ನ ಮಾಡಿಕೊಂಡಿದ್ದರು. ಆದರೆ ಅವರ ವಿಂಗಡನೆಯಷ್ಟು ಶಿಸ್ತುಬದ್ಧ ನಮ್ಮದಾಗುವುದಿಲ್ಲ ಬಿಡಿ. ಅವರು ಕೊಟ್ಟಿರುವ ಹೆಸರುಗಳು ಮತ್ತವುಗಳ ಒಳಗೆಯೇ ವಿಂಗಡಿಸಿರುವ ಮಾಸ / ತಿಥಿ / ನಕ್ಷತ್ರಗಳ ಕಲ್ಪನೆ ಅವರ ಅಸೀಮ ಬುದ್ಧಿ ಶಕ್ತಿಯನ್ನ ತೋರಿಸುತ್ತದೆ. ಅವರ ಬುದ್ಧಿ ಶಕ್ತಿಯ ಕೂಸಾಗಿರುವ ಈ ಕಲ್ಪನೆಗಳ ಪಟ್ಟಿ ನಿಮ್ಮ ಮುಂದೆ , ಓದಿಕೊಳ್ಳಿ :


60 ಸಂವತ್ಸರಗಳು

ಸಂವತ್ಸರಗಳನ್ನ ಗುರು ಗ್ರಹ ಸೂರ್ಯನನ್ನ ಪ್ರದಕ್ಷಿಣೆ ಹಾಗಕಲು ತೆಗೆಕೊಳ್ಳುವ ಸಮಯವಾದ 12 ವರ್ಷಗಳಿಗೆ ಹೊಂದಿಸಿ ಲೆಕ್ಕ ಹಾಕಲಾಗುತ್ತದೆ. ಅಂಥ 5 ... ಸೇರಿ 60 ವರ್ಷಗಳಾಗುತ್ತದೆ. 
ಜೊತೆಗೆ ಮೊದಲ 20 ಸಂವತ್ಸರಗಳನ್ನ  ಬ್ರಹ್ಮನಿಗೂ ತದನಂತರದ 20ನ್ನ ವಿಷ್ಣುವಿಗೂ ಮತ್ತು ಕೊನೆಯ 20ನ್ನ ಶಿವನಿಗೂ ಆದ್ಯರ್ಪಿಸಲಾಗಿದೆ.
" 60 ಸಂವತ್ಸರಗಳು, ಶಾಪಗ್ರಸ್ತ ನಾರದನ ಮಕ್ಕಳು " - ಎಂದೂ ಹೇಳ್ತಾರೆ.

प्र्भवो विभव शुक्लः प्रमोदूत प्रजपतिः
आन्गिरः शीमुखो भावो युवो धातुस्तथेश्वरः
बहुधान्यः प्रमाथीचविक्रमो विशुवत्सरः
चित्रभनुः स्‍वाभानुस्चा तारणः पार्थिवो व्ययः
सर्वजित्सर्वधरीच विरोधी विक्रुतिः खरः
नन्दनो विजयश्चैवा जयो मन्मथ दूर्मुखौ
हे विलम्बी विलम्बिश्च विकारी शार्वरी प्लवः
शुभाकऋतु शोभक्रुतु क्रोधी विश्वावसु पराभवौ
प्मवन्गः कीलकः सौम्यः साधारण विरोधिक्रुतु
परीधावी प्रमादीचः आनन्दो राक्शसो नलः
पिन्गलः काल्युकिश्च सिद्धार्थि रौद्र दुर्मति
दुन्दुभिः रुधिरोद्गारी रक्ताक्शी क्रोधनोक्षयः
[ 60 ಸಂವತ್ಸರಗಳನ್ನ ತಿಳಿಸುವ ಸಂಸ್ಕೃತ ಶ್ಲೋಕ ]


  1. ಪ್ರಭವ
  2. ವಿಭವ
  3. ಶುಕ್ಲ
  4. ಪ್ರಮೋದ
  5. ಪ್ರಜೋತ್ಪತ್ತಿ
  6. ಆಂಗೀರಸ
  7. ಶ್ರೀಮುಖ
  8. ಭಾವ
  9. ಯುವ
10. ಧಾತ್ರಿ
11. ಈಶ್ವರ
12. ಬಹುಧಾನ್ಯ
13. ಪ್ರಮಾಧಿ
14. ವಿಕ್ರಮ
15. ವರುಷ/ವೃಷ
16. ಚಿತ್ರಭಾನು
17. ಸ್ವಭಾನು
18. ತಾರಣ
19. ಪಾರ್ಥಿವ
20. ವ್ಯಯ
21. ಸರ್ವಜಿತ್
22. ಸರ್ವಧಾರಿ
23. ವಿರೋಧಿ
24. ವಿಕೃತ
25. ಖರ
26. ನಂದನ
27. ವಿಜಯ
28. ಜಯ
29. ಮನ್ಮಥ
30. ದುರ್ಮುಖ
31. ಹೇವಿಳಂಬಿ
32. ವಿಳಂಬಿ
33. ವಿಕಾರಿ
34. ಶಾರ್ವರಿ
35. ಪ್ಲವ
36. ಶುಭಕೃತ
37. ಶೋಭಾಕೃತ
38. ಕ್ರೋಧಿ
39. ವಿಶ್ವಾವಸು
40. ಪರಾಭವ
41. ಪ್ಲವಂಗ
42. ಕೀಲಕ
43. ಸೌಮ್ಯ
44. ಸಾಧಾರಣ
45. ವಿರೋಧಿಕೃತ
46. ಪರಿಧಾವಿ
47. ಪ್ರಮಾಧಿ
48. ಆನಂದ
49. ರಾಕ್ಷಸ
50. ನಳ
51. ಪಿಂಗಳ
52. ಕಾಳಯುಕ್ತಿ
53. ಸಿದ್ಧಾರ್ಥಿ
54. ರುದ್ರ
55. ದುರ್ಮತಿ
56. ದುಂದುಭಿ
57. ರುದಿರೋದ್ಗಾರಿ
58. ರಕ್ತಾಕ್ಷಿ
59. ಕ್ರೋಧನ
60. ಅಕ್ಷಯ


ಮಾಸಗಳು







ನಕ್ಷತ್ರಗಳು






ತಿಥಿಗಳು







Apr 3, 2010

ರಾಷ್ಟ್ರ ( ಪರೀಕ್ಷಾ ದೃಷ್ಟಿಯುಳ್ಳ Current Affairs )

0 ಪ್ರತಿಕ್ರಿಯೆಗಳು
: ರಾಷ್ಟ್ರ ಮಟ್ಟದ ಕಳೆದ ಎರಡು ವರ್ಷಗಳ ಪ್ರಮುಖ ಘಟನಾವಳಿಗಳ ದಿನಚರಿ :

2010

ಅಕ್ಟೋಬರ್

21 : ಭಾರತೀಯ ಶೇರು ಮಾರುಕಟ್ಟೆಯಲ್ಲಿ ಎರಡು ಲಕ್ಷ ಮೂವತ್ತಾರು ಸಾವಿರ ಕೋಟಿ ರೂಪಾಯಿ ( $53 ಬಿಲಿಯನ್ ) ಆಕರ್ಷಿಸಿ ಇತಿಹಾಸ ನಿರ್ಮಿಸಿದ COAL INDIA ಶೇರು.

14 : ರಾಜ್ಯಪಾಲರ ನಿರ್ದೇಶನದ ಅನುಸಾರ ನಾಲ್ಕೇ ದಿನದಲ್ಲಿ ಎರಡನೇ ಬಾರಿಗೆ ವಿಶ್ವಾಸಮತ ಯಾಚಿಸಿ 106-100 ಮತಗಳ ಅಂತರದಲ್ಲಿ ಗೆದ್ದ ಕರ್ನಾಟಕದ ಬಿಜೆಪಿ ಸರ್ಕಾರ.

11 : ವಿಶ್ವಾಸಮತ ಯಾಚಿಸಿ, ಧ್ವನಿಮತದ ಮೂಲಕ ಗೆದ್ದ ಕರ್ನಾಟಕದ ಬಿಜೆಪಿ ಸರ್ಕಾರ.


2009


ಡಿಸೆಂಬರ್

ನವೆಂಬರ್

ಅಕ್ಟೋಬರ್

ಸಪ್ಟೆಂಬರ್

ಆಗಸ್ಟ್

ಜುಲೈ

ಜೂನ್

ಮೇ

ಏಪ್ರಿಲ್

ಮಾರ್ಚ್

ಫೆಬ್ರುವರಿ

ಜನವರಿ

07 : ಸುಮಾರು ರೂ.7000 ಕೋಟಿ ಅವ್ಯವಹಾರವನ್ನ ಒಪ್ಪಿಕೊಂಡು ಸತ್ಯಂ ಕಂಪ್ಯೂಟರ್ಸ್ ಅಧ್ಯಕ್ಷ ಹುದ್ದೆ ತ್ಯಜಿಸಿದ ರಾಮಲಿಂಗರಾಜು.

05 : ನ್ಯಾಷನಲ್ ಕಾನ್ಫರೆನ್ಸ ಪಕ್ಷದ ಓಮರ್ ಅಬ್ದಲ್ಲಾ ಜಮ್ಮು & ಕಾಶ್ಮೀರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ( 11ನೇ ಮುಖ್ಯಮಂತ್ರಿ )

02 : ಎರಡನೇ ಆರ್ಥಿಕ ಉತ್ತೇಜನಾ ಪ್ಯಾಕೇಜ್ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ




: ಸ್ಪರ್ಧಾರ್ಥಿ

Apr 2, 2010

ರಾಜ್ಯ ( ಪರೀಕ್ಷಾ ದೃಷ್ಟಿಯುಳ್ಳ Current Affairs )

0 ಪ್ರತಿಕ್ರಿಯೆಗಳು
: ಕರ್ನಾಟಕ ರಾಜ್ಯದ ಕಳೆದ ಎರಡು ವರ್ಷಗಳ ಪ್ರಮುಖ ಘಟನಾವಳಿಗಳ ದಿನಚರಿ :

2010

ಅಕ್ಟೋಬರ್

14 : ನಾಲ್ಕೇ ದಿನದಲ್ಲಿ ಎರಡನೇ ಬಾರಿಗೆ ವಿಶ್ವಾಸಮತ ಯಾಚಿಸಿದ ಬಿಜೆಪಿ ಸರ್ಕಾರ

11 : ವಿಶ್ವಾಸಮತ ಯಾಚಿಸಿ, ಧ್ವನಿಮತದ ಮೂಲಕ ಗೆದ್ದ ಬಿಜೆಪಿ ಸರ್ಕಾರ


2009


ಡಿಸೆಂಬರ್

ನವೆಂಬರ್

ಅಕ್ಟೋಬರ್

ಸಪ್ಟೆಂಬರ್

ಆಗಸ್ಟ್

ಜುಲೈ

ಜೂನ್

ಮೇ

ಏಪ್ರಿಲ್

ಮಾರ್ಚ್

ಫೆಬ್ರುವರಿ

ಜನವರಿ




: ಸ್ಪರ್ಧಾರ್ಥಿ

Apr 1, 2010

ಈ ವಾರದ Bollywood ಬಿಡುಗಡೆಗಳು - Week 14 - ಏಪ್ರಿಲ್ 02, 2010

0 ಪ್ರತಿಕ್ರಿಯೆಗಳು

.





PANKH : ಈ ಹಿಂದೆ दस कहानियां ಅಂತ ಹತ್ತಿಪ್ಪತ್ತು ಪ್ರಸಿದ್ಧ ನಟನಟಿಯರನ್ನು ಕಲೆಹಾಕಿ ಚಿತ್ರ ನಿರ್ದೇಶಿಸಿದ್ದ ಇವರು ಈಗ ಮತ್ತೆ ಪಂಖ್ ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳಿದ್ದಾರೆ. ಬಿಪಾಶಾ ಬಸು ಜೊತೆಗೆ ಮರಡೋನಾ ರೆಬೆಲ್ಲೋ ಎಂಬ ಹೊಸ ಹುಡುಗ ನಟಿಸ್ತಿದಾನೆ. ಸಾಕಷ್ಟು ಹಿಂದಿ ಚಿತ್ರಗಳಿಗೆ ಸಂಗೀತ ನೀಡಿ ಅನುಭವ ಇರುವ ರಾಜು ಸಿಂಗ್ ಸಂಗೀತ ಈ ಚಿತ್ರಕ್ಕಿದೆ.


सदियाँ : ಒಂದೆರಡು ದಶಕಗಳ ಹಿಂದೆ ಬಾಲಿವುಡ್ ಆಳಿದ ಕೆಲವು ಹಳಬರು ಈ ಚಿತ್ರದಲ್ಲಿರುವುದು ವಿಶೇಷ. ರಿಷಿ ಕಪೂರ್, ಹೇಮಾ ಮಾಲಿನಿ, ರೇಖಾ, ಶಬಾನಾ ಅಜ್ಮಿ ... ಹೀಗೆ ಇವರ ತಾರಾ ಬಲದ ಮೇಲೆ ರಾಜ್ ಕನ್ವರ್ ನಿರ್ದೇಶನ ಮಾಡೋ ಹೊಣೆ ಹೊತ್ತಿದಾರೆ. ಅದ್ನಾನ್ ಸಮಿ ಸಂಗೀತ ಈ ಚಿತ್ರಕ್ಕಿದೆ.









तुम मिलो तो सही : ಕಬೀರ್ ಸದಾನಂದ್ ಅನ್ನುವ ಹೆಚ್ಚು ಕಮ್ಮಿ ಹೊಸ ನಿರ್ದೇಶಕರು ನಾನಾ ಪಾಟೇಕರ್, ಡಿಂಪಲ್ ಕಪಾಡಿಯಾ, ಸುನೀಲ್ ಶೆಟ್ಟಿ, ವಿದ್ಯಾ ಮಾಳವಾಡೆ ( ಚಕ್ ದೆ ) ... ಇಂಥ ತಾರಾಗಣದಲ್ಲಿ ಚಿತ್ರ ಮಾಡ್ತಿದಾರೆ. ಜಬ್ ವಿ ಮೆಟ್ ಚಿತ್ರಕ್ಕೆ ಪ್ರೀತಮ್ ಜೊತೆ ಸೇರಿ ಸಂಗೀತ ನೀಡಿದ ಸಂದೇಶ್ ಶಾಂಡಿಲ್ಯ ಇಲ್ಲಿ ಸಂಗೀತ ನೀಡ್ತಿದಾರೆ.

ಹೋದ ವಾರ ತೆರೆ ಕಾಣಬೇಕಿದ್ದ The Great Indian Butterfly ಈ ವಾರಕ್ಕೆ ಮುಂದೂಡಿ ತೆರೆ ಕಾಣ್ತಿದೆ.





.

Mar 25, 2010

ಈ ವಾರದ Bollywood ಬಿಡುಗಡೆಗಳು - Week 13 - ಮಾರ್ಚ್ 26, 2010

0 ಪ್ರತಿಕ್ರಿಯೆಗಳು
.













हम , तुम और GHOST : ಈ ಹಿಂದೆ सेहर , चम्कू ಮತ್ತೆ कौन बोला ? ಅಂತ ಮೂರು ಚಿತ್ರಗಳನ್ನ ನಿರ್ದೇಶಿಸಿದ್ದ ಕಬೀರ್ ಕೌಶಿಕ್ ಈ ಚಿತ್ರದ ನಿರ್ಧೇಶಕರು. ಬಹಳ ದಿನಗಳ ನಂತರ ದಿಯಾ ಮಿರ್ಜಾ ಇಲ್ಲಿ  ಅಭಿನಯಿಸ್ತಾ ಇದ್ದಾಳೆ. ಜೊತೆಗೆ ಅರ್ಶದ್ ವಾರ್ಸಿ ಮತ್ತೆ ಬೋಮನ್ ಇರಾನಿ ಎಂಬೆರಡು ಅನುಭವಿ ಕಲಾವಿದರೂ ಈ ಚಿತ್ರದಲ್ಲಿದಾರೆ. ಜಾವೇದ್ ಅಖ್ತರ್ ಸಾಹಿತ್ಯ ಶಂಕರ್ - ಎಹಸಾನ್ - ಲಾಯ್ ಸಂಗೀತ ಇದೆ. ಇದೊಂದು ಹಾಸ್ಯ ಚಿತ್ರ ಅನ್ನೋದರ ಜೊತೆಗೆ ಅರ್ಶದ್ ವಾರ್ಸಿ ಈ ಚಿತ್ರಕ್ಕೆ ಇನ್ನೊಬ್ಬರ ಜೊತೆಗೂಡಿ ಹಣ ಸುರಿದಿದಾರೆ.



IT'S A MAN'S WORLD : ಸೌರಭ್ ಸೇನ್ ಗುಪ್ತಾ ಎಂಬ ಹೊಸ ನಿರ್ದೇಶಕರ ಪ್ರಥಮ ಪ್ರಯತ್ನ. ಚಿತ್ರದ ಬಹುತೇಕರು ಹೊಸಬರು.  ಸೌರಭ್ ಸೇನ್ ಗುಪ್ತಾ ನಿರ್ದೇಶನದ ಜೊತೆಗೆ ಸಾಹಿತ್ಯ ಮತ್ತು ಸಂಗೀತದ ಹೊಣೆಯೂ ಹೊತ್ತುಕೊಂಡಿದಾರೆ.




MITTAL v/s MITTAL : ಕರಣ್ ರಝ್ಡಾನ್ ಎಂಬ 'ಅನುಭವಿ' ನಿರ್ದೇಶಕರ ಚಿತ್ರ. ಚಿತ್ರದಲ್ಲಿ ಕೆಲವು ಅನುಭವಿ ನಟರೂ ಇದಾರೆ LIKE ಸುಚಿತ್ರಾ ಕೃಷ್ಣಮೂರ್ತಿ , ಗುಲ್ಶನ್ ಗ್ರೋವರ್ . ಮಧುರ್ ಭಂಡಾರಕರ್ ಚಿತ್ರಗಳಿಗೆ ಸಂಗೀತ ನೀಡುತ್ತಿದ್ದ ಶಮೀರ್ ಟಂಡನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.



MY FRIEND GANESHA 3 : ರಾಜೀವ್ ರುಯ್ಯಾ ನಿರ್ದೇಶನದ MY FRIEND GANESHA ಸರಣಿಯ ಮೂರನೇ ಚಿತ್ರ.




PREM KA GAME : ಅಶೋಕ್ ಖೇಣಿ ಅನ್ನೋವರೊಬ್ಬರು ತಾವೇ ದುಡ್ಡು ಸುರಿದು ತಾವೇ ನಿರ್ದೇಶನ ಮಾಡಿರೋ ಚಿತ್ರ ಇದು. ಅರ್ಬಾಝ್ ಖಾನ್ ಮತ್ತೆ ತಾರಾ ಶರ್ಮಾ ಎಂಬ ಹಳಬರು ಈ ಚಿತ್ರದಲ್ಲಿದಾರೆ.




THE GREAT INDIAN BUTTERFLY : ಸಾರ್ಥಕ್ ದಾಸಗುಪ್ತಾ ಈ ಚಿತ್ರದ ನಿರ್ದೇಶಕರು. ಈಗಾಗಲೇ ಸಾಕಷ್ಟು ಚಲನಚಿತ್ರ ಪ್ರಶಸ್ತಿ ಸಮಾರಂಭಗಳಿಗೆ ಹೋಗಿ ಬಂದಿರುವುದು ಈ ಚಿತ್ರದ ಹೆಗ್ಗಳಿಕೆ.




WELL DONE ABBA : Welcome To Sajjanpur ನಂತರ ಮತ್ತೆ ಶ್ಯಾಮ್ ಬೆನೆಗಲ್ ನಿರ್ದೇಶನ ಮಾಡ್ತಿದಾರೆ. ಬೋಮನ್ ಇರಾನಿ, ಮಿನಿಷಾ ಲಾಂಬಾ ಜೊತೆಗೆ ನಮ್ಮ ಧ್ಯಾನ್ ( ನನ್ನ ಪ್ರೀತಿಯ ಹುಡುಗಿ ) , ಸೋನಾಲಿ ಕುಲಕರ್ಣಿ ( TAXI NO. 9 2 11 ) ತಾರಾಗಣದಲ್ಲಿದಾರೆ. ಶಂತನು ಮೊಯಿತ್ರಾ ಸಂಗೀತ ನಿರ್ದೇಶಕರು ( 3 ಈಡಿಯಟ್ಸ್ ಕೂಡ ಇವರ ಸಂಗೀತ ನಿರ್ದೇಶನದಲ್ಲಿರುವ ಇತ್ತೀಚಿನ ಚಲನಚಿತ್ರ ). 



























.

Mar 21, 2010

ಕ್ರಿಕೆಟ್ : ಸಾಮಾನ್ಯ ಜ್ಞಾನ

0 ಪ್ರತಿಕ್ರಿಯೆಗಳು
ಫುಟ್ ಬಾಲ್ ಜೊತೆ ಜೊತೆಗೆ ಜಗತ್ತಿನ ಜನಪ್ರಿಯ ಕ್ರೀಡೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕ್ರಿಕೆಟ್ ಆಟದ ಅಂಕಿ-ಅಂಶಗಳು ಎಂದಿಗೂ ಗಮನ ಸೆಳೆಯುತ್ತವೆ. ಅಂತೆಯೇ ಕೆಲವು ಆಸಕ್ತಿದಾಯಕ ಹಾಗೂ ಸಾಮಾನ್ಯ ಜ್ಞಾನ ವೃದ್ಧಿಗೆ ಸಹಾಯವಾಗುವ ಮಾಹಿತಿಗಳಿಗಾಗಿ ಈ ಪುಟ ಮುಡಿಪು.








: ಸ್ಪರ್ಧಾರ್ಥಿ


.

Mar 20, 2010

ಕ್ರೀಡಾವಾರು ಸಾಮಾನ್ಯ ಜ್ಞಾನ

0 ಪ್ರತಿಕ್ರಿಯೆಗಳು



ವಾಲಿಬಾಲ್
ಅಥ್ಲೆಟಿಕ್ಸ್

ಬ್ಯಾಡ್ಮಿಂಟನ್

ಹಾಕಿ

ಕುಸ್ತಿ

ಈಜು

Mar 19, 2010

Global Mobile Brand INQ Mobile ಜೊತೆ Aircel ಒಪ್ಪಂದ

1 ಪ್ರತಿಕ್ರಿಯೆಗಳು





ಈಗ ನಾನು ಆ ಒಪ್ಪಂದದ ಒಳಹೊರಗುಗಳ ಬಗ್ಗೆ ಹೇಳ್ತಾ ಇಲ್ಲ. ಬದಲಿಗೆ ಏನೀ INQ Mobile ? ಅದೆಷ್ಟು ಸಂಚಲನ ಮೂಡಿಸುವ ಶಕ್ತಿ ಹೊಂದಿದೆ  ? ಅಂತ ಹೇಳೋಕೆ ಹೊರಟಿದೀನಿ. ಓದಿ.


INQ Mobile ಏನಿದೆಯಲ್ಲ ಇದು, Fortune 500 ಕಂಪೆನಿಗಳಲ್ಲಿ ಒಂದಾ ಗಿರುವ Hutchison Whampoa ಎಂಬ ಹಾಂಕಾಂಗ್ ಮೂಲದ ಕಂಪೆನಿಯ Subsidiary ಕಂಪೆನಿ. Hutchison Whampoa ಕಂಪೆನಿ ಒಂದು ಬೃಹತ್ ಉದ್ಯಮ . ಬಂದರು, ಹೊಟೇಲ್, ಇಂಧನ, ಸಂಪರ್ಕ ಮಾಧ್ಯಮ ಹೀಗೆ ವಿವಿಧ ವಿಭಾಗಗಳಲ್ಲಿ ತನ್ನ ಜಾಲ ಹೊಂದಿದೆ.

2008ರಲ್ಲಿ ಪ್ರಾರಂಭವಾದ INQ Mobile ಕಂಪೆನಿ London, UK ನಲ್ಲಿ ತನ್ನ Base ಹೊಂದಿದೆ. ಮೊಬೈಲ್ ಫೋನ್ ತಯಾರು ಮಾಡೋದಷ್ಟೇ ಇದರ ಕೆಲಸ. Affordable MidRange SmartPhone ತಯಾರು ಮಾಡೋದು ಈ ಕಂಪೆನಿಯ Business Strategy. ಮುಖ್ಯವಾಗಿ Social Networkingಮೇಲೆ Concentrate ಮಾಡೋದು ಈ ಕಂಪೆನಿ ಬಳಸ್ತಿರೋ ತಂತ್ರಗಾರಿಕೆ. ಸದ್ಯಕ್ಕೆ,

Facebook : Orkut ನಂತಹ ಗೆಳೆಯರ ಅಡ್ಡಾ

Twitter : ಶೀಘ್ರ ಚಿಕ್ಕಾತಿಚಿಕ್ಕ ಸಂದೇಶ ವಾಹಕ

Windows Live Messenger : ಇದು ಒಂದು IM ( Instant Messaging ) ಸೇವೆ. ಕಂಪ್ಯೂಟರ್ ನಲ್ಲಿ ಚಾಟ್ ಮಾಡುವ ಒಂದು Tool. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗಳಿಗೂ ಕಾಲಿಟ್ಟಿದೆ.

Skype : Video Chat ಗಾಗಿ

Last.FM : 2002ರಲ್ಲಿ ಪ್ರಾರಂಭವಾದ ಇದು ಬ್ರಿಟನ್ ದೇಶದ ಪ್ರಖ್ಯಾತ Internet Radio Service.

ನಂತಹ HOT Feature ಗಳನ್ನ ನಮ್ಮ INQ Mobile ನಲ್ಲಿ ಅಳವಡಿಸಲಾಗಿದೆ.

INQ 3G
INQ CHAT 3G

ಈಮೂರು Handset ಗಳನ್ನ ಮಾತ್ರ ತಯಾರಿಸಿದ್ರೂ ಈ ಕಂಪೆನಿ 2009 & 2010ರ ಸಾಲಿನಲ್ಲಿ ತನ್ನ ಉತ್ಪನ್ನಗಳಿಗೆ ಬಾರ್ಸಿಲೋನಾದಲ್ಲಿ ನಡೆದ ಸಮ್ಮೇಳನದಲ್ಲಿ  BEST MOBILE OF THE YEAR ಪ್ರಶಸ್ತಿ ಗಳಿಸಿಕೊಂಡಿದೆ.

ಇದೀಗ ಭಾರತದಲ್ಲಿ AIRCEL ಕಂಪೆನಿಯ ಜೊತೆ ಒಪ್ಪಂದ ಮಾಡಿಕೊಂಡು ಭಾರತೀಯರಿಗೆ ತನ್ನ ಅಗ್ಗದ ಬೆಲೆಯಲ್ಲಿ ಅಗಾಧ feature ನೀಡುವ ಕೈಂಕರ್ಯಕ್ಕೆ ಕೈ ಹಾಕಿದೆ.

ಶುಭವಾಗಲಿ ಅಂತ ಹರಸೋಣ.





: e - ಶ
.

Mar 18, 2010

ಮೋಜು ಆದರೂ ಜ್ಞಾನ

0 ಪ್ರತಿಕ್ರಿಯೆಗಳು


 
 
ಪಾಠದ ಜೊತೆಗೆ ಆಟವೂ ಬೇಕು ಅಂತಾರೆ. " Change of Work Is Rest " ಅಂತಲೂ ಹೇಳ್ತಾರೆ. ಇವೆರಡನ್ನೂ ತನ್ನಲ್ಲಿ ಮೇಳೈಸಿಕೊಂಡಿರುವ ಪುಟವೇ ಮೋಜು ಆದರೂ ಜ್ಞಾನ. ಇಲ್ಲಿ ರಂಜನೆಯ ಜೊತೆ ಜೊತೆಗೆ ಜ್ಞಾನ ವೃದ್ಧಿಸುವ ಮಾಹಿತಿಯೂ ಲಭ್ಯ.







: ಸ್ಪರ್ಧಾರ್ಥಿ

Mar 17, 2010

ಮಾರ್ದನಿ : ನಿಮ್ಮ ಪ್ರತಿಕ್ರಿಯೆಗಳಿಗೊಂದು ಪುಟ

0 ಪ್ರತಿಕ್ರಿಯೆಗಳು

.



: ಪರಶು ಪ್ರತಿಕ್ರಿಯೆ :
 


ರೇವಪ್ಪನ ಕನಸಿನ ಕೂಸು 'ಸ್ಪರ್ಧಾರ್ಥಿ'   ಬಗೆಗೆ ಬರೆಯುವ ಮೊದಲು ಸ್ಪರ್ಧಾರ್ಥಿಯ ಮುನ್ನುಡಿಯಲ್ಲಿ  ರೇವಪ್ಪ ಅರ್ಪಿಸಿದ 'ಕೃತಜ್ಞತೆ' ಗೆ ನಾನು ಭಾಜನನಾ ಎಂಬ ಯೋಚನೆಯಲ್ಲಿ ಮುಳುಗಿದ್ದೇನೆ.  ನಿಜವಾಗಿಯೂ ಇಂತಹ  ಕೃತಜ್ಞತೆಗೆ ನಾನು ಅರ್ಹನಲ್ಲ.  ಇಲ್ಲಿ ಕೃತಜ್ಞತೆ ಸಲ್ಲಿಸಬೇಕಾದವನು ನಾನು.  ಈ ಹಿಂದೆಯೇ ಸಂದರ್ಭೋಚಿತವಾಗಿ ನಾನು ತಿಳಿಸಿರುವಂತೆ ಅಂತರ್ಜಾಲ ಲೋಕದಲ್ಲಿ ನನಗೆ ಈ ಬ್ಲಾಗ್ ಗಳ ವಲಯವನ್ನು ತೋರಿಸಿದವರೇ ರೇವಪ್ಪ. ನಮ್ಮ 'ಸಚಿವಾಲಯ ಕಿರಿಯ ಸಹಾಯಕರ ಬ್ಲಾಗ್ '   ಹುಟ್ಟುವ ಮೊದಲು ನನಗೆ ಈ ಬ್ಲಾಗ್ ಗಳ ಬಗೆಗಿನ ಪರಿಚಯವೇ ಇರಲಿಲ್ಲ. ಅನಂತರವೇ ನನ್ನಲ್ಲಿ ಹುಟ್ಟಿ ಬೆಳೆದದ್ದು ಈ ಬ್ಲಾಗ್ ಬಗೆಗಿನ ಆಸಕ್ತಿ, ನನ್ನ ಈ ಆಸಕ್ತಿಗೆ ಸಾರಯುಕ್ತ ನೀರೆರೆದವರು ರೇವಪ್ಪ. ದಿನ ದಿನವೂ ಅವರ ಹೊಸ ಅನ್ವೇಷಣೆಗಳನ್ನು, ಹೊಸ ಆಲೋಚನೆಗಳನ್ನು ನೋಡುವ ಕಣ್ಣಾಗಿದ್ದೇನೆ, ಕೇಳುವ ಕಿವಿಯಾಗಿದ್ದೇನೆ ಅಷ್ಟೇ. ತನ್ಮೂಲಕ ನಾನೂ ಹೊಸ ಹೊಳವುಗಳನ್ನೂ ಕಂಡುಕೊಂಡಿದ್ದೇನೆ. ಆದ್ದರಿಂದ ನಾನೇ ಅವರಿಗೆ ಕೃತಜ್ಞತೆ ಸಲ್ಲಿಸುವುದು ಇಲ್ಲಿ ಸಮಂಜಸವಾದುದಾಗಿದೆ ಎಂಬುದು ನನ್ನ ಅಭಿಪ್ರಾಯ.

ನಿಜವಾಗಿಯೂ ಹೇಳಬೇಕೆಂದರೆ ಈ ಸ್ಪರ್ಧಾರ್ಥಿಗೆ ನನ್ನ ಕಾಣಿಕೆ ಕಿಂಚಿತ್ತೂ ಇಲ್ಲ. ಈ ಬ್ಲಾಗಿನ ಸಕಲ ಬೆಳವಣಿಗೆಗಳನ್ನೂ ರೇವಪ್ಪನಿಂದಲೇ ಕೇಳಿ ತಿಳಿಯುತ್ತಿದ್ದ ನಾನು  ಮುನ್ನುಡಿಯಲ್ಲಿ ರೇವಪ್ಪ ಬರೆದಿದ್ದ ಒಂದೇ ಒಂದು ಪದವನ್ನು ತೆಗೆಯುವಂತೆ ಮಾತ್ರ ಒತ್ತಾಯಿಸಿದ್ದೇನೆ. ಅದು 'ವ್ಯರ್ಥ ಪ್ರಯತ್ನ' ಎಂಬ ಪದ. "ನಾನು ಮಾಡುತ್ತಿರುವ ಕೆಲಸ ವ್ಯರ್ಥ ಪ್ರಯತ್ನ" ಎಂದು ಅವರೇ ಹೇಳಿಕೊಂಡಿದ್ದರು. ಅದ್ಯಾಕೋ ನನಗೆ ಹಿಡಿಸಲಿಲ್ಲ. ನನಗಷ್ಟೇ ಅಲ್ಲ ಈ ಬ್ಲಾಗನ್ನು ನೋಡಿದ ಯಾರಿ
ಗೂ ಸಹ ಇದೊಂದು ವ್ಯರ್ಥ ಪ್ರಯತ್ನ ಅನಿಸುವುದಿಲ್ಲ. ಅಂತಹೇಳಿ ಅದನ್ನು ತೆಗೆಯುವಂತೆ ಒತ್ತಾಯಿಸಿ ಸಫಲನಾದೆ.

ತುಂಬಾ ದಿನಗಳ ಹಿಂದೆ ರೇವಪ್ಪ ಹೇಳಿದ್ರು "ಏನಾದ್ರೂ ಒಂದು ಹೊಸದನ್ನು ಮಾಡ್ಬೇಕು, ಹೊಸದನ್ನು ಮಾಡ್ಬೇಕು" ಅಂತ . ಒಂದು ಕ್ರಿಯಾಶೀಲ ಮನಸ್ಸು ಯಾವಾಗಲೂ ಹೀಗೆ ಹೊಸತೊಂದರ ಉಗಮಕ್ಕಾಗಿ, ಅನ್ವೇಷಣೆಗಾಗಿ ಸದಾಕಾಲ ತುಡಿಯುತ್ತಿರುತ್ತದೆ, ಯೋಚಿಸುತ್ತಿರುತ್ತದೆ.  ಕಳೆದ ಆರೇಳು ತಿಂಗಳಿನಿಂದ ಇಂತಹ ಯೋಚನೆಗಳಲ್ಲಿಯೇ ಮುಳುಗಿ, ಪಳಗಿದ ರೇವಪ್ಪ ಮೊದಲು 'e-ನಾಡು ಕನ್ನಡ' ಎಂಬ ಕನ್ನಡ ನಾಡು-ನುಡಿಯನ್ನು ಕುರಿತ ಬ್ಲಾಗ್ ತೆರೆದರು,  'ಪ್ರಶ್ನೋತ್ತರ' ಎಂಬ ಇನ್ನೊಂದು ಬ್ಲಾಗನ್ನ 
ತೆರೆದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ಉತ್ತರ ಸಹಿತ ಪ್ರಕಟಿಸುವ ಯೋಜನೆ ಮಾಡಿದ್ದರು, ಅಂತೆಯೇ 'ನಾನು ನನ್ನಿಷ್ಟ' 'e-ದಿನವಹಿ' ಬ್ಲಾಗುಗಳನ್ನೂ ತೆರೆದರು. ಅಂತಿಮವಾಗಿ ಇವೆಲ್ಲ ಬ್ಲಾಗುಗಳ ತಳಹದಿಯ ಮೇಲೆ  ತಮ್ಮ ಯೋಚನೆಗಳಿಗೇ ಒಂದು ಸ್ಪಷ್ಟ ಮತ್ತು ನಿರ್ದಿಷ್ಟ ರೂಪವನ್ನು ಕೊಟ್ಟು 'ಸ್ಪರ್ಧಾರ್ಥಿ'ಯನ್ನು  ರೂಪಿಸಿ,  ಇಂದು ಲೋಕಾರ್ಪಣೆಗೊಳಿಸಿದ್ದಾರೆ. ನಿಜಕ್ಕೂ ಇದೊಂದು  ಕನ್ನಡದಲ್ಲೇ ಪ್ರಪ್ರಥಮವಾದ, ವಿಭಿನ್ನ ಪ್ರಯತ್ನ.

ನಮ್ಮ ಜೀವನವೇ ಒಂದು ಹೋರಾಟ. ಹುಟ್ಟಿನಿಂದ ಸಾವಿನ ವರೆಗೆ ಪ್ರತಿಯೊಬ್ಬರೂ  ಹೋರಾಡುತ್ತಲೇ ಬದುಕಬೇಕು. ಜನಸಂಖ್ಯೆ ಹೆಚ್ಚಿದಂತೆ ವಿವಿಧ ಸ್ಥರಗಳಲ್ಲಿ ವಿವಿಧ ರೀತಿಯ ಪೈಪೋಟಿಗಳನ್ನೆದುರಿಸಿ ಮುನ್ನಡೆಯಬೇಕಾದ ಕಾಲಘಟ್ಟ ಬಂದೊದಗಿದೆ.  'ಪ್ರಬಲ ಜೀವಿಯ ಉಳಿವು, ದುರ್ಬಲ ಜೀವಿಯ ಅಳಿವು' ಎಂಬುದನ್ನು ಸಾರಿದ ಡಾರ್ವಿನ್ನನ ವಿಕಾಸವಾದ ಸಿದ್ದಾಂತವೂ ಸ್ವಲ್ಪ ವಿಕಾಸವನ್ನು ಹೊಂದಿ ಪ್ರಬಲ-ದುರ್ಬಲ ಎಂಬುದು 'ದೈಹಿಕ' ದಿಂದ  'ಬೌದ್ಧಿಕ' ಮಟ್ಟಕ್ಕೆ ಬಂದು ಕುಳಿತಿದೆ. ಇಂದು
ಎಲ್ಲಾ ವಲಯದಲ್ಲೂ ಬೌದ್ಧಿಕ ಪ್ರಾಶಸ್ತ್ಯ ಹೆಚ್ಚಾಗಿರುವುದನ್ನು ಕಾಣುತ್ತೇವೆ.  ಇಂತಹ ವಲಯಗಳಲ್ಲಿ ನಾವೂ ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕೆಂದರೆ ಆ ಮಟ್ಟದ ಪೈಪೋಟಿಯನ್ನು ಎದುರಿಸಲು ನಾವು ಅಣಿಯಾಗಲೇಬೇಕು. ನಮ್ಮ ಬುದ್ದಿಮಟ್ಟದ ವಿಕಾಸಕ್ಕೆ ನಾವು ಪಡೆಯುವ ಜ್ಞಾನ ಅತಿ ಮುಖ್ಯವಾದುದಾಗಿದೆ.  ಇತ್ತೀಚಿನ ದಿನಗಳಲ್ಲಿ  ಇಂತಹ ಜ್ಞಾನದ ಒಂದು ಅಗಾಧವಾದ  ಸೆಲೆ ಎಂದರೆ ಮಾಹಿತಿ ತಂತ್ರಜ್ಞಾನ ಕ್ಷೇತ್ರ. ನಮಗೆ ಬೇಕಾದ ಮಾಹಿತಿಯನ್ನು ನಾಲ್ಕಕ್ಷರದಲ್ಲಿ ಟೈಪಿಸಿ  ಎಂಟರ್ ಒತ್ತಿದರೆ ಸಾಕು ಮಾಹಿತಿಯ ಮಹಾಪೂರವೇ ಕಣ್ಣೆದುರಿಗೆ ಹಾಜರಿರುತ್ತದೆ. ಇಂತಹ ಮಾಹಿತಿಯನ್ನು ಒದಗಿಸಲು ಅಂತರ್ಜಾಲದಲ್ಲಿ ನೆಲೆ ನಿಂತಿರುವಂತಹವು ವೆಬ್ ಸೈಟ್, ಬ್ಲಾಗ್, ಪೋರ್ಟಲ್ ಮೊದಲಾದವುಗಳು. ಆದರೂ ಇಲ್ಲೂ ಸಹ ಕೇವಲ ಸ್ಪರ್ಧಾರ್ಥಿಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು, ಎಲ್ಲಾ ವಿಧದ ಮಾಹಿತಿಯೂ ಒಂದೆಡೆ ದೊರಕುವಂತೆ ಅಣಿಗೊಳಿಸಿ ತೆರೆದಿರುವಂತಹ ವೆಬ್ ಸೈಟ್ ಗಳಾಗಲೀ, ಬ್ಲಾಗ್ ಗಳಾಗಲೀ ತುಂಬಾ ಕಡಿಮೆಯೇ, ಕನ್ನಡದ ಮಟ್ಟಿಗಂತೂ ಇಲ್ಲವೇ ಇಲ್ಲ ಎನ್ನಬಹುದು.  ಇಂತಹ ಕೊರತೆಯನ್ನು ನೀಗಿಸಲೆಂದೇ ಸಿದ್ದವಾಗಿದೆ ನಮ್ಮ ರೇವಪ್ಪನ 'ಸ್ಪರ್ಧಾರ್ಥಿ'.


'ಸ್ಪರ್ಧಾರ್ಥಿ' ಹೆಸರಿಗೆ ತಕ್ಕಂತೆ ಇದು ವಿವಿಧ ರೀತಿಯ ಸ್ಪರ್ಧಾಕಾಂಕ್ಷಿಗಳನ್ನೇ ಮುಖ್ಯವಾಗಿ ದೃಷ್ಠಿಯಲ್ಲಿಟ್ಟುಕೊಂಡು ರಚಿಸಿರುವಂತಹ ಬ್ಲಾಗ್.   ಈ ಬ್ಲಾಗ್ ನ ಟೆಂಪ್ಲೇಟನ್ನು ನೋಡಿಯೇ ನನಗೆ ಮೊದಲ ಬಾರಿಗೆ ಖುಷಿಯಾಯಿತು. 'ಒಳ್ಳೆ ವೆಬ್ ಸೈಟ್ ಇದ್ದಾಂಗೆ ಇದೆಯಲ್ರೀ' ಎಂದು ಆಶ್ಚರ್ಯ ಪಟ್ಟಿದ್ದೆ. ಅಷ್ಟೊಂದು ಉತ್ತಮವಾದ ಟೆಂಪ್ಲೇಟೊಂದನ್ನು ಹುಡುಕಿಟ್ಟುಕೊಂಡು ಅದಕ್ಕೆ ತಕ್ಕುದಾದ ವಿಷಯ ವಸ್ತುಗಳನ್ನು ಸೇರಿಸುತ್ತಾ ಹೋಗಿದ್ದಾರೆ. ವೆಬ್ ಸೈಟ್ ಗಳ ಹೈಟೆಕ್
ಟಚ್ ನ್ನು ಈ ಬ್ಲಾಗಿಗೆ ಕೊಟ್ಟಿದ್ದಾರೆ. ಗೃಹ ಬಳಕೆಯ ಸೂಜಿಯಿಂದ ,ಟಿ.ವಿ,  ಫ್ರಿಜ್ ಗಳವರೆಗೆ ಎಲ್ಲವೂ ಒಂದೆಡೆ ಸಿಗುವ 'ಮಾಲ್' ನಂತೆ ಈ ಸ್ಪರ್ಧಾರ್ಥಿ ಯನ್ನು ರೂಪಿಸಲು ಹೊರಟಿದ್ದಾರೆ.  ಮಿಗಿಲಾಗಿ ಕನ್ನಡಕ್ಕೇ ಹೆಚ್ಚಿನ ಆದ್ಯತೆಯನ್ನು ಕೊಟ್ಟಿರುವುದು ಗಮನಾರ್ಹವಾದ ಸಂಗತಿ. ಈ ಬ್ಲಾಗನ್ನು ಬಳಸುವ ಬಗೆಯನ್ನು ತುಂಬಾ ನಾಜೂಕಾಗಿ, ಸ್ಪಷ್ಟವಾಗಿ ಪ್ರತಿಯೊಂದು ಆಯ್ಕೆಗಳ ಪ್ರಿಂಟ್ ಸ್ಕ್ರೀನ್ ತೆಗೆದು ಅದಕ್ಕೆ ಬಾಣದ ಗುರುತುಗಳಿಂದ ಸೂಚಿಸಿ ವಿವರಿಸುತ್ತಾ ಹೋಗಿದ್ದಾರೆ. ತುಂಬಾ ಸೊಗಸಾದ ಪ್ರಯತ್ನವಿದು. ಒಂದೇ ಒಂದು ಚಿಕ್ಕ ನ್ಯೂನತೆಯನ್ನೂ ಸರಿಪಡಿಸಲು ಗಂಟೆಗಟ್ಟಲೆ ತಾಳ್ಮೆಯಿಂದ ಕುಳಿತುಕೊಳ್ಳುವ ರೇವಪ್ಪನಿಂದ ಮಾತ್ರ ಇಂತಹ ನಾಜೂಕುತನ ಸಾಧ್ಯವೇನೋ.  ಇವರ ಕಾರ್ಯಕ್ಕೆ ಯಶ ಸಿಗಲಿ, ಸ್ಪರ್ಧಾರ್ಥಿಗಳಿಗೆಲ್ಲ  'ಸ್ಪರ್ಧಾರ್ಥಿ'  ದಾರಿದೀಪವಾಗಲಿ. ತನ್ಮೂಲಕ ಇವರ ಶ್ರಮ ಸಾರ್ಥಕವಾಗಲಿ...

ಎಂಬ ಶುಭ ಹಾರೈಕೆಗಳೊಂದಿಗೆ...



ಪರಶು..,

DPAR, KGS




.

ಈ ವಾರದ Bollywood ಬಿಡುಗಡೆಗಳು - Week 12 - ಮಾರ್ಚ್ 19, 2010

0 ಪ್ರತಿಕ್ರಿಯೆಗಳು


  •  
  • Idiot Box : ಸುನಂದಾ ಮಿತ್ರಾ ನಿರ್ದೇಶನದ ಹೊಸಬರ ಚಿತ್ರ.
  • लाहोर : ಅನುಪಮ್ ಖೇರ್ ನಟನೆಯ मैंने गाँधी को नहीं मारा ಚಿತ್ರಕ್ಕೆ ಸಂಭಾಷಣೆ ಬರೆದಿದ್ದ ಸಂಜಯ್ ಪೂರಣ್ ಸಿಂಗ್ ಚೌಹಾನ್ ನಿರ್ದೇಶನದ ಚೊಚ್ಚಲ ಚಿತ್ರ. ಸೌರಭ್ ಶುಕ್ಲಾ, ಕೆಲ್ಲಿ ದೋರ್ಜೀ ( ಲಾರಾ ದತ್ತಾ ಹಳೆ BoyFriend ) , ಆಶೀಷ್ ವಿದ್ಯಾರ್ಥಿ.. ಹೀಗೆ ಕೆಲವು ಹಳಬರ ಜೊತೆ ಹೊಸಬರೂ ಇದ್ದಾರೆ. ಈಗಾಗಲೇ ಅನೇಕ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ನಮ್ಮ ಮುಂದೆ ನಾಳೆ ಬಿಡುಗಡೆಗೆ ಕಾದಿದೆ.
  • Love , Sex Aur Dhoka : Oye ! Lucky , Lucky Oye !! ಮತ್ತು खोस्ला  का घोस्ला ಗಳಂಥ ಯಶಸ್ವಿ ಚಿತ್ರಗಳ ನಿರ್ದೇಶಕ ದಿವಾಕರ್ ಬ್ಯಾನರ್ಜಿ  ಈಚಿತ್ರದ ನಿರ್ದೇಶಕ. ಹಿಂದಿ ಚಿತ್ರರಂಗ ಕಂಡ ಕೇವಲ ಮೂರೇ ಮೂರು ಮಹಿಳಾ ಸಂಗೀತ ನಿರ್ದೇಶಕರಲ್ಲಿ ಮೂರನೆಯವರಾದ ಸ್ನೇಹಾ ಖಾನವಾಲ್ಕರ್ ( ಜಗ್ಗತ್ ಬಾಯಿ & ಉಷಾ ಖನ್ನಾ ಮೊದಲಿಬ್ಬರು ) ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಮೊದಲು Oye ! Lucky , Lucky Oye !! ಗೂ ಇವರೇ ಸಂಗೀತ ನೀಡಿದ್ದರು. ಏಕ್ತಾ ಕಪೂರ್ ಮತ್ತಿಬ್ಬರು ಈ ಚಿತ್ರಕ್ಕೆ ಹಣ ಸುರಿದಿದ್ದಾರೆ.
  • शापित : ಈ ಹಿಂದೆ ಸಾಕಷ್ಟು ಬಾರಿ ಇಂಥ ಚಿತ್ರಗಳನ್ನ ನಿರ್ದೇಶನ ಮಾಡಿ ಹೆದರಿಸಿ ಹೋಗಿರುವ ವಿಕ್ರಮ್ ಭಟ್ ( ಅಮಿಷಾ ಪಟೇಲ್ ಹಳೆ BoyFriend ) ಮತ್ತೆ ಹೆದರಿಸಲು ಬರ್ತಿದಾರೆ. ರಾಹುಲ್ ದೇವ್ ಬಿಟ್ರೆ ಬಾಕಿ ಎಲ್ಲ ಹೊಸ ಮುಖಗಳು. 
  •  

Mar 16, 2010

ಪ್ರಾರಂಭೋತ್ಸವಕ್ಕೆ ಒಂದೆರಡು ಮಾತು

0 ಪ್ರತಿಕ್ರಿಯೆಗಳು

ಸರ್ವರಿಗೂ ಹೊಸ ವರುಷದ ಹಾರ್ದಿಕ ಶುಭಾಷಯಗಳು.




" What's There In A Name "  ಅಂತ ಷೇಕ್ಸಪಿಯರ್ ಹೇಳಿದಾನಂತೆ. ( ಹಾಗೆ ಬರೆದ ವಾಕ್ಯದ ಕೆಳಗೆ ಅವನ ಹೆಸರೂ ಹಾಕ್ಕೊಂಡಿದ್ದನಂತೆ ..... )  ವಿಕೃತಿ ನಾಮ ಸಂವತ್ಸರ ಅಂತ ಹೆಸರಿಟ್ಟುಕೊಂಡು ಬರುತ್ತಿರುವ ಈ ಹೊಸ ಸಂವತ್ಸರವನ್ನ ,  ಸುಕೃತಿ ನಾಮ ಸಂವತ್ಸರ ಅಂತ ಹೆಸರಿದ್ರೆ ಹೇಗೆ ನಗುಮೊಗದಿಂದ ಸ್ವಾಗತಿಸ್ತಾ ಇದ್ವೋ ಹಾಗೇ ಸ್ವಾಗತಿಸೋಣ. ಯಾಕಂದ್ರೆ ಹೆಸರು ಸರಿ ಇಲ್ಲ ಅಂತ ಕೋಗಿಲೆಯ ಕೂಗಿನಲ್ಲಿ ವಿಕೃತಿ ಇರೋದಿಲ್ಲ. ಮಾವಿನ ಚಿಗುರಿನಲ್ಲಿ ಎಂದಿನಂತೆ ಅದೇ ಹಸಿರು ನಳನಳಿಸುತ್ತೆ. ಬೇವು ಪ್ರತಿ ಸಾರಿಯಂತೆ ಅಷ್ಟೇ ಪುಟ್ಟ ಪುಟ್ಟ ಸುಂದರ ಹೂಗಳನ್ನ ಬಿಡುತ್ತೆ. ಅಂತೆಯೇ ನಮ್ಮ ಮನವೂ ಎಂದಿನಂತೆ ಈ ವರ್ಷವೂ ಪ್ರಸನ್ನವಾಗಿರಲಿ.

ಈ ಹೊಸ ಸಂವತ್ಸರ ನಮ್ಮೆಲ್ಲರ ಬಾಳಲ್ಲಿ " ಒಂದು ಸುಂದರ , ಮರೆಯಲಾಗದ ವರ್ಷ ಕಟ್ಟಿಕೊಡಲಿ " ಅಂತ ಹಾರೈಸ್ತೀನಿ. " ಯಶಸ್ಸು, ಸುಖ, ಸಮೃದ್ಧಿ  ತರಲಿ " ಅಂತ ನಾನು ಹರಸಿದರೆ ರಾಜಕಾರಣಿಗಳು ನೀಡೋ ಸುಳ್ಳು ಆಶ್ವಾಸನೆಯ ಸಾಲಿಗೆ ಇಳಿದೇನು. 

ಬದುಕು ಸಾಗರದಲೆಗಳ ಮೇಲಿನ ಪಯಣದ ಹಾಗೆ ಅಂತ ತಿಳಿದವರು ಹೇಳ್ತಾರೆ. ಉಬ್ಬರವಿಳಿತಗಳಿದ್ದರೇನೆ ಆ ಪಯಣ ಸುಂದರ. ಆ ಪಯಣವನ್ನ ಸುಂದರ , ಸುಮಧುರ ಪಯಣ ಅಂತ ಕರೆದಾಗ ಅಲ್ಲಿ ಬರೀ ಸುಖಗಳೇ ತುಂಬಿರೋದಿಲ್ಲ.
ನಾವೆಯ ತುಯ್ದಾಟಗಳಿರ್ತಾವೆ. ಭಯಾನಕ ಕಡಲ ಜೀವಿಗಳು ಬಂದು ಹೆದರಿಸಿ ಹೋಗ್ತಾವೆ. ಸುಂದರ ಡಾಲ್ಫಿನ್ ನಂತಹ ಸ್ನೇಹಿತರು ನಮ್ಮ ಸುತ್ತ ನಲಿದಾಡಿ ಮನವನ್ನ ಹರ್ಷಿಸಿ ಹೋಗ್ತಾರೆ. ಥಳುಕು ಬಳುಕಿನ ಬಣ್ಣದ 'ಮೀನು' ಗಳು ನಮ್ಮ ಪಕ್ಕದಲ್ಲೇ ಹಾಗೇ ಸಾಗಿ ಹೋಗ್ತಾವೆ. ನಮಗೂ ಒಂದಿರಲಿ ಅಂತ ಬಲೆ ಬೀಸಿದರೆ ನಿಮಗೂ ಒಂದು ಸಿಕ್ಕೀತು.

ಇಂತಿಪ್ಪ ನಮ್ಮೀ ಜೀವನದ ಕಡಲ ಪಯಣದಲ್ಲಿ ನಮ್ಮ ಸ್ವಂತ  ಕುಟುಂಬದ ಜೊತೆಗೆ ಅಕ್ಕ ಪಕ್ಕ ಕೋಟಿ ಕೋಟಿ ಕುಟುಂಬಗಳು ಪಯಣ ಸಾಗಿವೆ. ಅವರಿಲ್ಲದಿದ್ದರೆ ಆ ಸಾವಿರ ಮೈಲಿ ವಿಸ್ತಾರದ ಕಡಲ ಮೇಲೆ ನಾವು ಒಂಟಿ ಪಯಣಿಗರು ಅನ್ನೋ ಸತ್ಯ ಮರೀಬಾರ್ದು ನಾವು ಯಾವತ್ತಿಗೂ. ಒಂದು ಭಾವಗೀತೆಯ ಸಾಲು ನೆನಪಿಗೆ ಬರ್ತಿದೆ ಈಗ " ಕಡಲ ಮೇಲೆ ಸಾವಿರಾರು ಮೈಲಿ ದೂರ  ಸಾಗಿಯೂ...ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ " ಅಂತ.

ನಮ್ಮೀ ಪಯಣದೊಳಗೆ ಜೀವನದ ಅರ್ಥ ಮರೆಯೋದು ಬೇಡ. ಮಾನವೀಯತೆ, ಪರೋಪಕಾರ... ಎಂಬ ಸುಕೃತಗಳು ನಮ್ಮವಾಗಲಿ ಎಂದು ಹರಸುತ್ತಾ...

ಮತ್ತೆ ಸಿಗ್ತೀನಿ,
ರವಿ

Mar 15, 2010

ಕ್ರೀಡಾ ಜಗತ್ತು

0 ಪ್ರತಿಕ್ರಿಯೆಗಳು

ಕ್ರೀಡೆ ಮಾನವನ ಹವ್ಯಾಸಗಳಲ್ಲೊಂದು. ಸಾಮಾನ್ಯರಿಗೆ ಬೇಸರ ಕಳೆಯಲು ಕ್ರೀಡೆಯಾದರೆ, ಕೆಲವರಿಗೆ ಜೀವನಕ್ಕೆ ' ಅರ್ಥ ' ನೀಡುವ ದಾರಿ, ಇನ್ನೂ ಕೆಲವರಿಗೆ ದೂರದಿಂದ ನೋಡಿ ಖುಷಿ ಪಟ್ರೆ ಸಾಕು....

ಹೀಗಿರುವ ಕ್ರೀಡೆಯ ಬಗ್ಗೆ

wiki ತನ್ನ ನೆಟ್ ತಾಣದಲ್ಲಿ : " A sport is commonly defined as an organized, competitive and skillful physical activity requiring commitment and fair play. " ಅಂತ ಹೇಳುತ್ತೆ. ಅಂದ್ರೆ " ನ್ಯಾಯಪರ ಹಾಗೂ ಶ್ರದ್ದ್ಧಾಪೂರ್ವಕ : ಸಂಘಟಿತ, ಆರೋಗ್ಯಕರ ಸ್ಪರ್ಧೆ ಯುಳ್ಳ ಮತ್ತು ಕೌಶಲ್ಯಗಳನ್ನೊಳಗೊಂಡ ದೈಹಿಕ ಚಟುವಟಿಕೆಯೇ ಕ್ರೀಡೆ " ಅಂತ್ಹೇಳಿ ಶಬ್ದಶಃ ಕನ್ನಡೀಕರಿಸಬಹುದು.

ಇಂತಿಪ್ಪ ಕ್ರೀಡಾ ಲೋಕದ ಬಗ್ಗೆ ನಾವೆಲ್ಲಾ ತಿಳಿದುಕೊಳ್ಳೊದೇನೇನಿದೆ ಅಂತೀರಾ ? ಇವಿಷ್ಟು ಸಾಕಾಗಬಹುದಾ ನೋಡಿ..

  • ಕ್ರೀಡಾವಾರು ಸಾಮಾನ್ಯ ಜ್ಞಾನ
  • ವಿವಿಧ ಕ್ರೀಡೆಗಳು ( ಅವುಗಳ ಹಿಂದಿರುವ ಪುಟ್ಟ ಇತಿಹಾಸ )
  • ಕ್ರೀಡಾ ಲೋಕದ ಪ್ರಶಸ್ತಿಗಳು - ಕ್ರೀಡೆವಾರು
  • ಕ್ರೀಡಾ ಲೋಕದ ಸಾಧಕರು - ಕ್ರೀಡೆವಾರು
  • ಸಂಬಂಧಿಸಿದ ಕ್ರೀಡೆಗಳ ಸುಪ್ರಸಿದ್ಧ ಪಂದ್ಯಾವಳಿಗಳು




: ಸ್ಪರ್ಧಾರ್ಥಿ
.

Mar 11, 2010

ಈ ವಾರದ Bollywood ಬಿಡುಗಡೆಗಳು - Week 11 - ಮಾರ್ಚ್ 12, 2010

0 ಪ್ರತಿಕ್ರಿಯೆಗಳು
  • दो दिलों के खेल में : ಆಕಾಶ್ ಪಾಂಡೆ ಎಂಬ ಹೊಸ ನಿರ್ದೇಶಕನ ಚೊಚ್ಚಲ ಚಿತ್ರ. ರಾಜೇಶ್ ಖನ್ನಾ ಈ ಚಿತ್ರದಲ್ಲಿರೋದನ್ನ ಬಿಟ್ರೆ ಅಂತ ಯಾವ ವಿಶೇಷವೀ ಇದರಲ್ಲಿಲ್ಲ.

  • Hide & Seek : Thriller ಚಿತ್ರ. ಹೊಸ ನಿರ್ದೇಶಕ. ಅಪೂರ್ವ ಲಾಖಿಯಾ ಈ ಚಿತ್ರದ ನಿರ್ಮಾಪಕ ಅನ್ನೋ ಕಾರಣಕ್ಕೆ ಈ ಚಿತ್ರಕ್ಕೆ ಅಷ್ಟೊಂದು ಪ್ರಚಾರ ಸಿಕ್ಕಿದೆ. Mission Istambul, Shootout @ Lokhandwala, Dus Kahaniyaan, Ek Ajnabi, ...ಇತ್ಯಾದಿ ಚಿತ್ರಗಳ ನಿರ್ದೇಶಕ ಅಪೂರ್ವ ಲಾಖಿಯಾ. Rock On !! ಖ್ಯಾತಿಯ ಪೂರಬ್ ಕೊಹ್ಲಿ ತಾರಾಗಣದಲ್ಲಿ.

  • ना घर के ना घाट के : ರಾಹುಲ್ ಅಗರವಾಲ್ ನಿರ್ದೇಶನದ ಹಾಸ್ಯ ಚಿತ್ರ. ಸೋನು ನಿಗಮ್ ಅಭಿನಯದ Love In Nepal ಇವರ ಹಿಂದಿನ ಚಿತ್ರ. ಪರೇಶ್ ರಾವಲ್ ಮತ್ತು ಓಂ ಪುರಿ ಈ ಚಿತ್ರದ ಮುಖ್ಯ ಆಕರ್ಷಣೆ.

Mar 8, 2010

1st Cross Tech presents MIDHybrid e-Book Reader

0 ಪ್ರತಿಕ್ರಿಯೆಗಳು



  • ಕಾಗದದ ಪುಸ್ತಕದ ಓದಿಗೆ Good Bye ಹೇಳಿ, Electronic Reading ಗೆ WelCome ಮಾಡಿಸಿದ್ದ Kindle ಎಂಬ e-ಪುಸ್ತಕಕ್ಕೆ ಇನ್ನೊಬ್ಬ ಎದುರಾಳಿ ಬಂರುತ್ತಿದ್ದಾನೆ. ಅದುವೇ MID Hybrid e-Book Reader.
  • ಇದು ನೀವು ಚಿತ್ರದಲ್ಲಿ ಕಾಣುತ್ತಿರುವಂತೆ ಪುಸ್ತಕದಂತೆ ಮಡಚಲು ಬರುವಂತೆ ಮಾಡಿರೋದು ಮೊದಲ ಆಸಕ್ತಿ ಕೆರಳಿಸೋ ವಿಚಾರ.

  • ಇನ್ನು ಎರಡನೇದು ಇಲ್ಲಿ ಎದುರು ಬದುರಾಗಿ ಎರಡು ಪುಟಗಳು ನಿಮಗೆ ಕಾಣುತ್ವೆ.ಒಂದು ಪುಟದಲ್ಲಿ E-INK SCREEN ಇದ್ರೆ, ಇನ್ನೊಂದು ಪುಟದಲ್ಲಿ Key Pad ಮತ್ತು ಪುಟ್ಟದೊಂದು LCD ಪರದೆಯಿದೆ.


  • ಇದರಲ್ಲಿ 3G ಇದೆ, BlueTooth ಇದೆ.

  • LCD Screen ನಲ್ಲಿ Browse ಮಾಡಿ ( ಅಂದರೆ PDF File ಗಳು , SpreadSheet ಗಳು , ..ಇತ್ಯಾದಿಗಳನ್ನ ಈ ಕಡೆ E-INK SCREEN ನಲ್ಲಿ ನೋಡಬಹುದು / ಓದಬಹುದು.

  • ಜೊತೆಗೆ ಇದರಲ್ಲಿ Web Cam ಕೂಡ ಇದೆ. 3G ಇದ್ದು Web Cam ಸೇರಿದ್ರೆ ಏನೇನೆಲ್ಲಾ ಸಾಧ್ಯತೆಗಳಿದಾವೆ ಅಂತ , ಬೆಂಗಳೂರಿಗೆ 3G ಕಾಲಿಟ್ಟು 20 ದಿನ ಕೂಡ ಆಗಿಲ್ಲದಿರೋ ಈ ಹೊತ್ತಲ್ಲಿ , ನಿಮಗೆ ನಾನು ಹೇಳ್ಬೇಕಿಲ್ಲ ತಾನೆ ?

: e - ಶ 

Mar 5, 2010

ಎಲೆಕ್ಟ್ರಿಕಲ್ ಎಂಜಿನಿಯರಿಂಗ್ [ Electrical Engineering ]

0 ಪ್ರತಿಕ್ರಿಯೆಗಳು


:: ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪರಾಮರ್ಶನ ಗ್ರಂಥಗಳು ::


  • Modern Central Engineering - { Ogata }




  • Electrical Technology - { Thereja }




  • Electrical Power - { Star }




  • Physics of Semiconductor Devices - { Sze }




  • Automatic Control System - { Kuo }




  • Elements of Engineering Electromagnetics - { ರಾವ್ }




  • Electromagnetic Waves and Radiating System - { Jordan & Balmain }




  • Electromagnetic Waives and Field - { ಆರ್.ಎನ್.ಸಿಂಗ್ }




  • Integrated Circuits - { ಡಿ. ರಾಯ್ ಚೌಧರಿ }




  • Radio Engineering - { ಜಿ.ಕೆ.ಮಿಥಾಲ್ }




  • Network Analysis - { Valkenbury }




  • Circuit Analysis - { ಗುಪ್ತಾ }




  • Basic Current Analysis - { Murthy }




  • Control Systems Engineering - { Nagrath Gopal }




  • Semi Conductor - { ನಾಗಚೌಧರಿ }




  • Principals of Electronics - { ವಿ.ಕೆ.ಮೆಹ್ತಾ }





  • .


    Mar 4, 2010

    ವಾಣಿಜ್ಯ ಶಾಸ್ತ್ರ [ Commerce ]

    0 ಪ್ರತಿಕ್ರಿಯೆಗಳು

    : ಸಾಮಾನ್ಯ ಪರಾಮರ್ಶನೆಗೆ :

    Company Law: { N.D. ಕಪೂರ್ }
    Management: { ಕುಂಜ್ }
    Auditing: { ದಿನಕರ್ ಪಗಾರೆ }
    Management Concepts: { C.V. ಗುಪ್ತಾ }

    : ಪಾಠವಾರು ಸಲಹೆಗಳು :

    Financial Accounting: { Grewal, Monga }
    Cost Accounting: { ಮಹೇಶ್ವರಿ & ಮಿತ್ತಲ್ }
    Taxation: { ಸಿಂಘಾನಿಯಾ & ಗಿರೀಶ್ ಅಹುಜಾ }
    Auditing: { ಕಮಲ್ ಗುಪ್ತಾ }
    Financial Institution: { ಆನಂದ್ ಜೈನ್ }
    Financial Management: { I.M. ಪಾಂಡೆ }
    Organisation Theory: { L.M.ಪ್ರಸಾದ್ / ರಾವ್ ನಾರಾಯಣನ್ / R.S.ಶರ್ಮಾ }
    Industrial Relation: { ಮಾಮೋರಿಯಾ / ಸಿಂಗ್ & ಛಾಬ್ರಾ / ಮೋನಪ್ಪ }



    Mar 3, 2010

    ಭೂಗರ್ಭ ಶಾಸ್ತ್ರ [ Geology ]

    0 ಪ್ರತಿಕ್ರಿಯೆಗಳು

    :: ಪರಾಮರ್ಶನ ಗ್ರಂಥಗಳು ::


    • Geology: An Introduction - Kronaris and Krambine
    • Text Book of Geology - P.K. ಮುಖರ್ಜೀ
    • Text Book of Physical Geology - ಮಹಾಪಾತ್ರಾ
    • Geomorphology - Woolridge or Tharnbury
    • Principles of Petrology - G.W. Turrel
    • Petrography - Williams
    • Mineral and Crystal Science - V.C. Jesh
    • Sedimentary Rocks - Petti John
    • Underground Hydrology - David Keith Toad
    • Igneous Rocks and Metromorphic Petrology - Turner
    • Ocean - Squaredrop, Johnson and Bliming
    • Simple Geological Structure - Plate and Charlincr
    • Soil Minerology - I. E. Grim
    • A Dictionary of Geology - Morrison

    ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

    ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ