ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Showing posts with label ಹಾಗೇ ಸುಮ್ಮನೆ.... ಮಾತು-ಕತೆ. Show all posts
Showing posts with label ಹಾಗೇ ಸುಮ್ಮನೆ.... ಮಾತು-ಕತೆ. Show all posts

Jan 7, 2011

ಕ್ಷಮೆ ಮತ್ತು ಕಾರಣ ಮತ್ತು ಮತ್ತೊಂದು ....

2 ಪ್ರತಿಕ್ರಿಯೆಗಳು
ಸ್ಪರ್ಧಾರ್ಥಿಯ ಓದುಗರಿಗೆ ಕ್ಷಮೆ ಕೇಳಿ ; ಕ್ಷೇಮ ಸಮಾಚಾರ ಕೇಳುತ್ತಾ ...

ಕೆಲವು ದಿನಗಳಿಂದ ನಿಮ್ಮೊಂದಿಗೆ ಜ್ಞಾನವನ್ನ ಹಂಚಿಕೊಳ್ಳದೇ ಇರಲು ಕಾರಣವನ್ನರಹುತ್ತಿದ್ದೇನೆ.

ಕಾರಣ : ಪ್ರತಿ ದಿನ ಸಂಜೆ ಮನೆ ತಲುಪಿದ ನಂತರ ನನ್ನ ಸಂಗಾತಿಯಾಗಿದ್ದ ಕಂಪ್ಯೂಟರ್ ನನ್ನ ಮೇಲೆ ಮುನಿಸಿಕೊಂಡಿದ್ದು ON ಆಗಲು ನಿರಾಕರಿಸುತ್ತಿದೆ. ಕಂಪ್ಯೂಟರ್ ON ಆದ ಕೂಡಲೇ ನಿಮಗೆ ಜ್ಞಾನ ಹಂಚುವ ಕೆಲಸ ಪ್ರಾರಂಭ ಮಾಡುವ ಹುಮ್ಮಸ್ಸಿನಲ್ಲಿದ್ದೇನೆ.

ಈಗ ಮತ್ತೊಂದು ಸಮಾಚಾರ ಹೇಳುತ್ತೇನೆ. 

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಸ್ಪರ್ಧಾರ್ಥಿಯ ಹುಡುಗ ಆಯ್ಕೆಯಾಗಿದ್ದು, ಜನವರಿ 15ರಿಂದ ಹಳ್ಳಿವಾಸ ಆರಂಭವಾಗಲಿದೆ. Always Connected ಸ್ಥಿತಿಯಿಂದ Never Connected ಸ್ಥಿತಿಗೆ ತೆರಳುತ್ತಿದ್ದಾನೆ. ಹೀಗಾಗಿ ಸ್ವಲ್ಪ ದಿನ ಅಲ್ಲಿನ ಪರಿಸರಕ್ಕೆ ಹೊಂದಾಣಿಕೆ ಆಗುವ ತನಕ ಸ್ಪರ್ಧಾರ್ಥಿ ತಾಣದಲ್ಲಿ ಹೊಸ ಬರಹಗಳು ಬರದೇ ಇರಬಹುದು. ಆ ಸ್ವಲ್ಪ ದಿನ ಸ್ಪರ್ಧಾರ್ಥಿಗಳು ಸಹಕರಿಸಬೇಕೆಂದು ಮನವಿ ಕೂಡ ಮಾಡಿದ್ದಾನೆ.

ಪಂಚಾಯತ್ ಅಭಿವೃದ್ಧಿ ಅದಿಕಾರಿ ಹುದ್ದೆಯಲ್ಲಿ ನೂರಾ ಎಂಟು ತಲೆನೋವುಗಳಿದ್ದರೂ ಧೈರ್ಯ ಮಾಡಿ ಹೋಗ್ತಿದಾನೆ, ಸ್ಪರ್ಧಾರ್ಥಿ ಓದುಗರೆಲ್ಲರ ಶುಭೇಚ್ಛೆ ಇರಲಿ.

ಮತ್ತೆ ಶೀಘ್ರದಲ್ಲೇ ನಿಮ್ಮ ಜೊತೆ ಜ್ಞಾನ ಹಂಚಿಕೊಳ್ಳುವ ಉತ್ಸುಕತೆಯಲ್ಲಿ,

 
:   ಸ್ಪರ್ಧಾರ್ಥಿ

Jan 1, 2011

ಈ ದಿನ ಹೊಸ ದಿನ

0 ಪ್ರತಿಕ್ರಿಯೆಗಳು



ಹೌದು. " ಭಾರತೀಯ ಸಂಸ್ಕೃತಿಯಲ್ಲಿ ಈ ದಿನಕ್ಕೆ ಅಂಥ ವಿಶೇಷ ಪ್ರಾಮುಖ್ಯತೆ ಇಲ್ಲ. ಕಾರಣವೂ ಇಲ್ಲದೇ ಇಲ್ಲ. ಎಲ್ಲ ಪ್ರಾಚೀನ ಸಂಸ್ಕೃತಿಗಳಂತೆ ನಮ್ಮ ಸಂಸ್ಕೃತಿಯೂ ಪ್ರಕೃತಿಯೊಂದಿಗೆ ಒಡನಾಡುತ್ತಾ ಬೆಳೆದ ಸಂಸ್ಕೃತಿ. ಪ್ರಕೃತಿಯ ಪ್ರತಿ ನಲಿವು-ನೋವು-ಸಿಟ್ಟು-ಸೆಡವು ಎಲ್ಲವನ್ನೂ ನೋಡಿ-ಅನುಭವಿಸಿ ಅದರ ಆಜ್ಞೆಗಳಿಗೆ ಪಕ್ಕಾಗುತ್ತಾ ನಮ್ಮ ಸಂಸ್ಕೃತಿಯೂ ಪಕ್ಕಾಯಿತು. "  ಹೌದು ತಾನೇ ? ಸುಮ್ನೆ ನಾನು ಹೇಳ್ತೀನಿ ಅಂತ " ಹೂಂ " ಅನ್ಬೇಡಿ. ಈಗ ನೋಡಿ ನಿನ್ನೆ ನಮ್ಮ ಸ್ನೇಹಿತರು ಮೂರಂಶದ ಮಾಹಿತಿಯೊಂದನ್ನ ಕಳುಹಿಸಿದಾರೆ. ಅದು ಮೇಲಿನ ಉದ್ಘೋಷಕ್ಕೆ ಪೂರಕವಾಗಿದೆ. ಅದನ್ನ ಓದಿ ಆದ ಮೇಲೆ ನಿಮ್ಮದೇ ಆದ ನಿರ್ಧಾರಕ್ಕೆ ಬನ್ನಿ.



ಹಾಗೆ
ಹೀಗೆ
ದಿನ ಬದಲಾವಣೆ
ರಾತ್ರಿ 12 ಗಂಟೆಗೆ ದಿನ ಹೇಗೆ ಬದಲಾಗುತ್ತೆ ಸ್ವಾಮಿ ? ಪ್ರಕೃತಿಯಲ್ಲಿ ಏನಾದರೂ ಬದಲಾವಣೆಯಾಗುತ್ತಾ ? ಇಲ್ಲ ತಾನೇ ? 11.59PM ಕ್ಕೂ ಕತ್ತಲೆ. 12.01AM ಕ್ಕೂ ಕತ್ತಲೆ !!!
ದಿನದ ಬದಲಾವಣೆ ಆಗುವುದು ಕತ್ತಲು ಕಳೆದು ಬೆಳಕು ಮೂಡಿದಾಗ. ಸೂರ್ಯ 6 ಗಂಟೆಯ ಹೊತ್ತಿಗೆ ಮೂಡಿದರೆ ರಾತ್ರಿ 12 ಗಂಟೆಗೆ ಹೇಗೆ ದಿನ ಹೊಸತಾಯಿತು ?!
ವರ್ಷ ಬದಲಾವಣೆ
ಡಿಸೆಂಬರ್ 31 ಮತ್ತು ಜನವರಿ 1 : ಈ ಎರಡು ದಿನಗಳ ನಡುವೆ ಪ್ರಕೃತಿಗೆ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಬರೀ ಈ ಎರಡು ದಿನ ಬೇಡ. ಸುತ್ತಲಿನ ಈ ಕಡೆ ಒಂದು ವಾರ ಆ ಕಡೆ ಒಂದು ವಾರ ಗಮನಿಸಿದರೂ ಯಾವ ವ್ಯತ್ಯಾಸವೂ ಇಲ್ಲ. ಮತ್ತೇಕೆ  ಡಿಸೆಂಬರ್ 31ರ ರಾತ್ರಿ ಕಳೆದರೆ ನಮಗೆ ಹೊಸ ವರ್ಷ ಧುತ್ತೆಂದು ಎದುರಾಗಬೇಕು ???
ಆದರೆ ನಮ್ಮ ಯುಗಾದಿಯ ದಿನದ ಸುತ್ತಲಿನ ಪ್ರಕೃತಿಯ ಬದಲಾವಣೆಗಳನ್ನ ಗಮನಿಸಿ. ಎಲ್ಲೆಡೆ ಹೊಸ ಚಿಗುರು. ಜೊತೆಗೆ ಆಕಾಶಕಾಯಗಳ ಚಲನೆಯ ದಿಕ್ಕೂ ಬದಲಾಗುವ ಸಂಕ್ರಮಣ ಕಾಲವದು. ಹೊಸ ವರುಷವೆಂದರೆ ಹೊಸ ಕ್ಯಾಲೆಂಡರ್ ಎನ್ನುವ ಬದಲು ನಮ್ಮನ್ನ ಪೊರೆಯುತ್ತಿರುವ ಪ್ರಕೃತಿಯ ನಿತ್ಯವ್ಯಾಪಾರಗಳ ಹೊಸಲೆಕ್ಕ ಎಂದು ಬಗೆದರೆ ನನ್ನ ವಾದ ನಿಮಗೆ ಮನದಟ್ಟಾದಿತು.. ಆ ಸಂಕ್ರಮಣ ಕಾಲವೇ ನಮಗೆ ಹೊಸ ವರುಷ ತಾನೇ ?!!
ಕ್ಯಾಲೆಂಡರ್
ನೀವೀಗ ಹೇಳಬಹುದು ನಾವು ಬಳಸುತ್ತಿರುವ ಕ್ಯಾಲೆಂಡರ್ ನ ದಿನಗಳು ಇಂದಿಗೆ 365 ದಿನ ಮುಗಿಸಿ ಮತ್ತೆ 1ನೇ ದಿನಕ್ಕೆ ಕಾಲಿಡುತ್ತಿವೆ ಅಂತ. ಇದು ಒಪ್ಪಿಕೊಳ್ಳತಕ್ಕ ವಾದವೇ ಆದರೂ, ಸದರಿ ಇಂಗ್ಲೀಷ್ ಕ್ಯಾಲೆಂಡರ್ ನಲ್ಲಿ ಕೇವಲ ದಿನ, ವಾರ, ತಿಂಗಳಿನ ಹೆಸರುಗಳು ಮಾತ್ರ ಕಾಣಸಿಗುತ್ತವೆ. ಆ ದಿನದ ಸೂರ್ಯ & ಚಂದ್ರರ ಚಲನೆಯ ಯಾವ ವಿವರಣೆಗಳೂ ಅಲ್ಲಿ ದೊರೆಯುವುದಿಲ್ಲ. ದಿನ ಅಂತ ಕರೆಯಬೇಕಾದರೆ ಸೂರ್ಯ ಮೇಲೇಳಲೇಬೇಕು ; ಚಂದ್ರನ ಬೆಳಕು ಮರೆಯಾಗಲೇಬೇಕು ತಾನೇ ?
ಭಾರತೀಯ ಕ್ಯಾಲೆಂಡರ್ ನಲ್ಲಿ ನಮೂದಾಗಿರುವ ತಿಥಿ ನಕ್ಷತ್ರಗಳು ಸೂರ್ಯ ಚಂದ್ರರ ಚಲನೆ-ಸ್ಥಾನ ವನ್ನಾಧರಿಸಿವೆ. ಅವರಿಂದ ತಾನೇ ನಮಗೆ ಹಗಲು ರಾತ್ರಿ !!
ಹೀಗಾಗಿ ವೈಜ್ಞಾನಿಕವಾಗಿ ಮತ್ತು ಪ್ರಾಕೃತಿಕವಾಗಿ 
ಮನುಷ್ಯನ ದೈನಂದಿನ ಬೆಳವಣಿಗೆಯನ್ನೂ ಸೇರಿಸಿಕೊಂಡು 
ಇಡೀ ಮನುಕುಲಕ್ಕೆ ಯುಗಾದಿಯ ದಿನವೇ 
ಹಳತು ಕಳೆದು ಹೊಸತು ಬರುವ ಸಂಕ್ರಮಣ ಕಾಲ. 
ಹೊಸ ಸಂಭ್ರಮದ ಕಾಲ !!



ಈ ಮಾಹಿತಿ ಕಳಿಸಿದ ಸ್ನೇಹಿತ ಮಾಧವ ಹೆಬ್ಬಾರ್ ಅವರಿಗೆ ಧನ್ಯವಾದಗಳು.

2010ರ ಕ್ಯಾಲೆಂಡರ್ ಹಳತಾಯಿತು. ಆದರೆ ಆ ಕ್ಯಾಲೆಂಡರ್ ವರ್ಷದಲ್ಲಿ ನಡೆದ ಘಟನೆಗಳು ಮರೆತರೂ ಮರೆಯಲಾರದಂಥವು.

  • ದೇಶದ ಬೊಕ್ಕಸಕ್ಕಿಂತ ತಮ್ಮ ಮನೆಯ ತಿಜೋರಿಯೇ ಸಂಪತ್ತಿನ ಶೇಖರಣೆಗೆ ಸೂಕ್ತವೆಂದೆನಿಸಿದ ಮುಖ್ಯಮಂತ್ರಿ-ಚಿಕ್ಕಮಂತ್ರಿಗಳು...
  • ಬಡವರ ಕಣ್ಣೀರೊರೆಸುವ ಧ್ಯೇಯದೊಂದಿಗೆ ಅಖಾಡಕ್ಕಿಳಿದು - ಸಮಾಜಘಾತುಕ ಶಕ್ತಿಯಾಗಿ ಪರಿಣಮಿಸಿರುವ ಮಾವೋವಾದಿಗಳು & ಅವರನ್ನ ಬೆಂಬಲಿಸಿದ ಬುದ್ಧಿ ಬಲಿತ ಜುಬ್ಬಾಧಾರಿಗಳು..
  • ತರಂಗಗಳನ್ನ ಬಾಚಿಕೊಳ್ಳಲು ಮಾಧ್ಯಮ ಮಿತ್ರರ ಸಹಾಯ ಹಸ್ತ ಪಡೆದ ನಿಷ್ಕಳಂಕ ಉದ್ಯಮಿಗಳು...
  • ಮಾಧ್ಯಮದಲ್ಲಿ ದಿನವೂ ಜನರಿಗೆ ಜಾತ್ಯಾತೀತತೆ ಶಂಖ ಊದಿ, ಒಳಗೊಳಗೇ ರಾಜಕೀಯ ಪಕ್ಷಗಳಿಗೆ ನಿಷ್ಠರಾಗಿ ಪದ್ಮಪತ್ರಗಳನ್ನ ಇನಾಮಾಗಿ ಪಡೆದ ಮಹಿಳೆಯರು & ಮಹನೀಯರು...
  • ರಾಜ್ಯದ ಪತ್ರಿಕೋದ್ಯಮಕ್ಕೇ ಕಪ್ಪು ಪುಟ ಎಂಬಂತೆ ಕಿರಿ ಪತ್ರಿಕೋದ್ಯಮಿಯೊಬ್ಬರ ಬಗ್ಗೆ ಸ್ವಘೋಷಿತ ಸಾಧುಸಂಪನ್ನ - ಸಮಾಜಮುಖಿ & ಅಚ್ಚರಿ ವ್ಯಕ್ತಿತ್ವದ ಹಿರಿ ಪತ್ರಿಕೋದ್ಯಮಯೊಬ್ಬರು ಕೀಳು ಭಾಷೆ ಎಂಬ ಶಬ್ದದ Superlative ರೂಪ ತಾಳಿ ಬರೆದದ್ದು....
  • ಜನರನ್ನ ಅನಕ್ಷರತೆಯ ಕೂಪದಲ್ಲಿ ತಳ್ಳಿ, ಅವರಿಂದು ಓಟು ಕದಿಯುವ ರಾಜಕಾರಣಿಗಳ ಮಧ್ಯೆಯೂ ; ಇಂದಿಗೂ ಅದೇ ಅನಕ್ಷರತೆ - ಹಿಂದುಳಿದಿರುವಿಕೆ ಇದ್ದರೂ ಜನಪರ & ಅಭಿವೃದ್ಧಿಪರ ಕಾರ್ಯಗಳಿಂದ ಬಿಹಾರ್ ರಾಜ್ಯದಲ್ಲಿ ನಿತೀಶ್ ಕುಮಾರ್ ದಿಗ್ವಿಜಯ ಸಾಧಿಸಿದ್ದು...
  • ನರೇಂದ್ರ ಮೋದಿ, ದೇಶದ ಆಡಳಿತ ಯಂತ್ರದಲ್ಲಿ ನಭೂತೋ ನಭವಿಷ್ಯತಿ ಎಂಬಂತೆ ಬದಲಾವಣೆ ತಂದದ್ದು...
  • ಕ್ರಿಕೆಟ್ ದಿಗ್ಗಜ ಸಚಿನ್ ದಿನಗಳೆದಂತೆ ಹಳೆ ಚಿನ್ನಕ್ಕಿರುವ ಬೆಲೆಯಷ್ಟೇ ಮಾಗುತ್ತಿರುವುದು ...
  • ಆಪದ್ಭಾಂಧವ ಲಕ್ಷ್ಮಣ ನಿಜಕ್ಕೂ Very Very Special ಅನಿಸಿಕೊಂಡದ್ದು...
  • ಭಾರತದಲ್ಲಿ ಕ್ರಿಕೆಟ್ ಮಾತ್ರ ಕ್ರೀಡೆ ಎಂಬ ಭಾವನೆ ಅಳಿಸಲು ನಿಜ ಪ್ರಯತ್ನ ಮಾಡಿದ ಸೈನಾ ನೆಹವಾಲ್..
  • ಎ.ಆರ್.ರೆಹಮಾನ್ ಯುಗದ ನಂತರ EkDum Fressshhh Music ನೀಡಲು ಸಜ್ಜಾಗುತ್ತಿರುವ ಅಮಿತ್ ತ್ರಿವೇದಿ...

ಹೀಗೆ ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಸ್ವಾರಸ್ಯಕರ ಸಂಗತಿಗಳನ್ನ ಹೆಕ್ಕಬಹುದು.





ಸಂದು ಹೋದ ಘಟನೆ ಎಷ್ಟೇ ಕೆಟ್ಟದಾಗಿರಲಿ- ಎಷ್ಟೇ ಒಳ್ಳೆಯದಾಗಿರಲಿ ಅದರಿಂದ ಪಾಠ ಕಲಿಯದ ಹೊರತು ಆ ಘಟನೆಗೆ ನ್ಯಾಯ ದೊರೆತಂತಾಗುವುದಿಲ್ಲ... ಎಂಬ ಆಶಯದೊಂದಿಗೆ

&

ಹೊಸ ದಿನಕ್ಕೆ ಹಾಕಿಕೊಂಡ Resolution ಗಳು ದಿನಗಳದಂತೆ ಹೊಳಪು ಕಳೆದುಕೊಳ್ಳುವುದು ಸಾಮಾನ್ಯ. ಅದನ್ನ ಹೋಗಲಾಡಿಸಲು ಇಂದಿನಿಂದ ಪ್ರತಿದಿನ : " ಈ ದಿನವೇ ಹೊಸ ದಿನ  " ಎನ್ನೋಣ.  






 
 : ಸ್ಪರ್ಧಾರ್ಥಿ

Nov 2, 2010

ದೀಪಾವಳಿ ಶುಭಾಶಯ

1 ಪ್ರತಿಕ್ರಿಯೆಗಳು
ನಾಳೆಯಿಂದ 4 ದಿವಸ ಕಂಪ್ಯೂಟರ್ ನೊಂದಿಗೆ 'ಟೂ' ಬಿಡೋ ಪ್ರಮೇಯ ಬಂದಿದೆ. ನಾಲ್ಕು ದಿನ ಊರಿಗೆ ಹೋಗ್ತಿದೀನಿ..ಸೋಮವಾರ ವಾಪಸ್ ಬರ್ತೀನಿ. ಅಲ್ಲಿಯವರೆಗೆ ಹೊಸ ಲೇಖನವಿಲ್ಲ. ಪತ್ರಿಕೆಗೆ ನಾನೊಬ್ಬನೇ ಬರೆಯಬೇಕಲ್ಲಾ !? ಓದುಗರಿಗೆ ಓದುವುದು ಮಾತ್ರ ಗೊತ್ತಿರುವ ಹಾಗಿದೆ.. '' ನೀವೂ ಬರೆಯಿರಿ. ಖರ್ಚಿಲ್ಲದೇ ಪ್ರಕಟಿಸ್ತೀನಿ " ಅಂತ ಹೇಳಿದ್ರೂ ಕೇಳ್ತಿಲ್ಲ ನೀವು. ಹೋಗ್ಲಿ ಬಿಡಿ. ಅದೆಲ್ಲಾ ಯಾಕೀಗ ? ಒಟ್ಟಿನಲ್ಲಿ

ನಿಮಗೆ ತುಂಬು ಹೃದಯದ ದೀಪಾವಳಿ ಶುಭಾಶಯ ಕೋರುತ್ತೇನೆ. 


ಈ ಬೆಳಕಿನ ಹಬ್ಬ ನಿಮ್ಮ ಬಾಳಲ್ಲಿ ಬೆಳಕು ತರಲಿ ಎಂದು ಪತ್ರಿಕೆ ಹಾರೈಸುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಪ್ರತಿ ಹಬ್ಬಕ್ಕೂ ವಿಶೇಷತೆ ಇರುವ ಹಾಗೆ ದೀಪಾವಳಿಗೂ ಇದೆ. ಅದು ನಿಮಗೆಲ್ಲ ಗೊತ್ತೂ ಇದೆ. ಗೊತ್ತಿರುವವರು ಹಂಚಿಕೊಂಡರೆ ಗೊತ್ತಿಲ್ಲದವರಿಗೆ ತಿಳಿಯುತ್ತದೆ. Comment ಮೂಲಕ ಬರೆಯಿರಿ / Facebook ನಲ್ಲಿ WallPost ಮಾಡಿ .. ನಿಮಗೆ ಕಲ್ಪಿಸಿಕೊಟ್ಟಿರುವ ದಾರಿಗಳು ಒಂದೇ ಎರಡೇ ?! ಟ್ವಿಟರ್ ಕೂಡ ಇದೆ. ವೇದಿಕೆ ಎದುರಿಗೇ ಇದ್ದಾಗಲೂ ಭಾಗವಹಿಸುವಿಕೆಯಿಂದ ಹಿಂಜರಿದರೆ ಯಾರೇನು ಮಾಡಲಾದೀತು ?!!

 
:   ಸ್ಪರ್ಧಾರ್ಥಿ

Nov 1, 2010

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು

0 ಪ್ರತಿಕ್ರಿಯೆಗಳು


ಕನ್ನಡ 
( ಹಿಂದಿ ) : कन्नडा 
( ಮಲಯಾಳಿ ) : കന്നഡ 
( ತಮಿಳು ) : கன்னட 
( ತೆಲುಗು ) : కన్నడ 
( ಬೆಂಗಾಲಿ ) : কান্নাডা 
( ಗುಜರಾತಿ ) : કન્નડા 
( ಮರಾಠಿ ) : कन्नड 
( ಒರಿಯಾ ) : କନ୍ନଡ 
( ನೇಪಾಳಿ ) : कन्नड
( ಪಂಜಾಬಿ ) : ਕੰਨਾਦਾ
( ಸಂಸ್ಕೃತ ) : कन्नड 
 ( ಉರ್ದು ) : کنندہ
( ಸಿಂಹಳೀಸ್ ) : කන්නද
-----
( ಇಂಗ್ಲೀಷ್ ) : Kannada
( ರಷಿಯನ್ ) : каннада
( ಪರ್ಷಿಯನ್ ) : کننده 
 ( ಹೀಬ್ರೂ ) : קננדה
-----
ವಿಜಯನಗರದ ಕೀರ್ತಿ ಎಂತೋ ಅಂತೆಯೇ ಕನ್ನಡದ ಕಂಪು ಜಗದೆಲ್ಲೆಡೆ ಪಸರಿಸಲಿ..
ಜಗದ ಎಲ್ಲ ಜನರೂ ಕನ್ನಡ ಭಾಷೆಯ / ಸಾಹಿತ್ಯದ ಅಪರಿಮಿತ ಸಾಧ್ಯತೆಗಳನ್ನ ಅರಿಯುವಂತಾಗಲಿ ...
ಕನ್ನಡ ಬಾಳಲಿ, ಬೆಳೆಯಲಿ...
ನಿತ್ಯೋತ್ಸವವಾಗಲಿ.

ಶುಭ ಹಾರೈಕೆಗಳೊಂದಿಗೆ,
 
:   ಸ್ಪರ್ಧಾರ್ಥಿ

Oct 4, 2010

ಹನಿ ಹನಿ ಸೇರಿದರೆ ಹಳ್ಳ

0 ಪ್ರತಿಕ್ರಿಯೆಗಳು


ನೀವೂ ಬರೆದರೆ ಸ್ಪರ್ಧಾರ್ಥಿ  ಪತ್ರಿಕೆ ಸಮೃದ್ಧವಾಗುತ್ತದೆ  ... 

ಇಲ್ಲವಾದಲ್ಲಿ ಏಕತಾನತೆ ಮೂಡುವ ಸಾಧ್ಯತೆ ಇರುತ್ತದೆ .. 

ಅದನ್ನ ತಪ್ಪಿಸಿ ನೀವೂ ಭಾಗವಹಿಸಿ ..


: ಸ್ಪರ್ಧಾರ್ಥಿ

Sep 30, 2010

ದೇಶ ಮೊದಲು !!

1 ಪ್ರತಿಕ್ರಿಯೆಗಳು

ಗಾಂಧೀಜಿ ಯವರ ಅಂಹಿಸೆ ಅಂದು ಇಂದು ಎಂದಿಗೂ ಪ್ರಸಕ್ತ. ಹಿಂಸೆ ಯಿಂದ ಸಾಧನೆ ಶೂನ್ಯ. 


  ನಮ್ಮ ದೇಶದಲ್ಲಿ ಇನ್ನೂ ಸಾಧಿಸುವುದು ಬಹಳವಿದೆ. 

ಅವನ್ನೆಲ್ಲ ಪಕ್ಕಕ್ಕಿಟ್ಟು ನಮ್ಮ ಹಿಂದಣ ಸಾಧನೆಗಳನ್ನ / ಸಂಸ್ಕೃತಿ ಗಳನ್ನ ಹೇಳುತ್ತಾ ಹೋದರೆ ಕೇಳುವವರು ಇಲ್ಲ.
 ಇಂದಿನ ಸಾಧನೆ / ಸಂಸ್ಕೃತಿ ಮುಖ್ಯ.
ಹಿಂದೆ ಹೇಗೆ ಹಳ್ಳಿಯ ಪ್ರತಿಯೊಬ್ಬರ ನಡವಳಿಕೆಯೂ ಎಲ್ಲರಿಂದ ಗಮನಿಸಲ್ಪಟ್ಟು  ಟೀಕೆ / ಪ್ರಶಂಸೆ ಗಳಿಸುತ್ತಿತ್ತೋ ಹಾಗೆಯೇ  ಇಂದಿನ Global Village ನಲ್ಲೂ ಕೂಡ. ಇಡೀ ಜಗತ್ತು ನಮ್ಮನ್ನು ನೋಡುತ್ತಿದೆ. ಜಾಗತಿಕ ಮಟ್ಟದಲ್ಲಿ ನಮ್ಮ ವರ್ತನೆ ಅನುಕರಣೀಯವಾಗಿರಲಿ. ನಮ್ಮ ಮೊದಲ ಆದ್ಯತೆ ದೇಶವಾಗಲಿ.
  ದೇಶ ಮೊದಲು. ಇನ್ನುಳಿದೆಲ್ಲವೂ ಆಮೇಲೆ !!


ನಮ್ಮದು ಸುಂದರ ದೇಶ. ಶಾಂತಿ ಪ್ರಿಯ ದೇಶ.
ಆದರೆ ,



ಶಾಂತಿ ಪ್ರಿಯ ದೇಶವಾಗುವುದಕ್ಕೂ ಶಾಂತಿಯುತ ದೇಶವಾಗುವುದಕ್ಕೂ ವ್ಯತ್ಯಾಸವಿದೆ !!

ಎಲ್ಲೆಡೆ ಶಾಂತಿ ನೆಲೆಸಲಿ ..



: ಸ್ಪರ್ಧಾರ್ಥಿ



.

Sep 21, 2010

ನೀವೂ ಗುಟುಕು ನೀಡಬಹುದು !!

1 ಪ್ರತಿಕ್ರಿಯೆಗಳು


ನಮಸ್ತೆ ... ಇವತ್ತು ಪತ್ರಿಕೆಯ ಧ್ಯೇಯವೇನೆಂಬುದನ್ನ ಇನ್ನೊಮ್ಮೆ ತಿಳಿದುಕೊಳ್ಳೋಣ.


***

ಸ್ಪರ್ಧಾರ್ಥಿ ಪತ್ರಿಕೆ ಯಾರೊಬ್ಬರ ಒಡೆತನದ ಪತ್ರಿಕೆಯಲ್ಲ. 

ಬದಲಿಗೆ ಇದು  ಸಮಸ್ತ ಕನ್ನಡಿಗರ ಪಾಲ್ಗೊಳ್ಳುವಿಕೆಗೆ ಮುಕ್ತವಾಗಿರುವ ಪತ್ರಿಕೆ

ಇನ್ನೂ ಸರಳವಾಗಿ ಹೇಳಬೇಕೆಂದರೆ : ಇದೊಂದು ಸ್ವಾರ್ಥಮಯ ಪತ್ರಿಕೆ

***

" ಸ್ಪರ್ಧಾರ್ಥಿ ... ಸ್ವಾರ್ಥಮಯ ಪತ್ರಿಕೆಯಾ ? ಹೇಗೆ ? " ಅನ್ನುತ್ತೀರಾ ?

ಅದು ಹೀಗೆ... 

ನೀವು ನಿಮ್ಮ ಜ್ಞಾನ ಹೆಚ್ಚಿಸಿಕೊಳ್ಳಲು ಜ್ಞಾನವನ್ನ ಸಂಗ್ರಹಿಸಿ ಒಂದೆಡೆ ಬರೆದಿಟ್ಟುಕೊಳ್ಳುತ್ತೀರಲ್ಲಾ ?! ಹಾಗೆ ಬರೆದಿಡುವ ಸ್ಥಳ ಈ ಸ್ಪರ್ಧಾರ್ಥಿ ಯಾದರೆ ನಿಮ್ಮ ಸ್ವಾರ್ಥವೂ ಈಡೇರುತ್ತದೆ. ಜೊತೆಗೆ ಸಾಕಷ್ಟು ಜನರಿಗೆ ನೀವು ಪಡೆದ ಜ್ಞಾನವನ್ನ ಹೆಚ್ಚಿನ ಪರಿಶ್ರಮವಿಲ್ಲದೆ ಹಂಚಿದ ಪುಣ್ಯವೂ ಬರುತ್ತದೆ. ಸ್ವಾರ್ಥ ಸಾಧನೆಯೇ ಮೇಲಾಗಿರುವ ಇಂದಿನ ಜಗತ್ತಿನಲ್ಲಿ ಹೇಗೆ ಬದುಕುವುದು ಅಂತ ಚಿಂತಿಸುವ ಬದಲು ಸ್ವಾರ್ಥಕ್ಕೆ ತಿಳಿಯದ ಹಾಗೆ ಅದನ್ನ ನಿಸ್ವಾರ್ಥಿಯನ್ನಾಗಿ ಪರಿವರ್ತಿಸುವ ವಿಧಾನಗಳನ್ನ ಶೋಧಿಸೋಣ. 

ಈ ನಿಟ್ಟಿನಲ್ಲಿ ಸ್ಪರ್ಧಾರ್ಥಿ ಪತ್ರಿಕೆ ಅಂಥ ಸ್ವಾರ್ಥಿಗಳಿಗೆ ತಕರಾರು ತೆಗೆಯಲು ಆಸ್ಪದ ನೀಡದ ಹಾಗೆ ಸಾಧ್ಯವಾದಷ್ಟು ಸರಳ ವಿಧಾನಗಳ ಮೂಲಕ ಜ್ಞಾನ ಹಂಚುವ ದಾರಿ ಹುಡುಕುತ್ತಿದೆ, ಅನುದಿನ.

ಅಂಥ ಶೋಧನೆಯ ಫಲವೇ : spardharthi on tweetboard

ಅಂದ್ರೆ ಸ್ಪರ್ಧಾರ್ಥಿ ಪತ್ರಿಕೆಯ ಅಧಿಕೃತ Twitter Account ಒಂದಿದೆ : http://twitter.com/spardharthi

ಅದಕ್ಕೆ ' ಗುಟುಕು ಜ್ಞಾನ ' ಅಂತ ಹೆಸರಿಡಲಾಗಿದೆ.

ಇಂತಿಪ್ಪ ಗುಟುಕು ಜ್ಞಾನದ twitter account ಅನ್ನ twitetrboard ಎನ್ನುವ ವಿನೂತನ gadget ನೊಂದಿಗೆ ಬೆರೆಸಿ ಒಂದು gadget ಅನ್ನ ಸ್ಪರ್ಧಾರ್ಥಿ ತಾಣದಲ್ಲಿ ಬಲಭಾಗದಲ್ಲಿ ( ಕಂಪ್ಯೂಟರ್ ಎದುರಿಗೆ ಕುಳಿತಿರುವ ನಮ್ಮ ಎಡಭಾಗದಲ್ಲಿ ) ಇರಿಸಲಾಗಿದೆ. ಹಾಂ ..

tweets

ಎನ್ನುವ Button ಕಾಣುತ್ತದಲ್ಲಾ... ಅದೇ. ಅದರ ಮೇಲೆ ಕ್ಲಿಕ್ಕಿಸಿದರೆ ಗುಟುಕು ಜ್ಞಾನದ tweetboard ಜಾರಿಕೊಂಡು ನಿಮ್ಮೆದುರಿಗೆ ಹಾಜರಾಗುತ್ತದೆ. ಆ tweetboard ನಲ್ಲಿ ನಿಮ್ಮ twitter account ಬಳಸಿ ನಿಮ್ಮ ಪಾಲಿನ ಜ್ಞಾನದ ಗುಟುಕನ್ನ ಸಮಯ ಸಿಕ್ಕಾಗ , ಜ್ಞಾನದ Deposit ಇದ್ದಾಗ ನೀಡುತ್ತಾ ಹೋಗಿ. ಹಾಗೆ ನೀವು ಬರೆಯುವ ಗುಟುಕು ಜ್ಞಾನದ ಜೊತೆ ಇನ್ನೊಬ್ಬ ಸ್ನೇಹಿತ ಬರೆಯುವ ಗುಟುಕೂ ಸೇರಿ ದಿನಕ್ಕೆ 10 ಜನ ಸ್ನೇಹಿತರು ಬರೆದರೂ ಸಾಕು ಬೇಕಾದಷ್ಟಾಯಿತಲ್ಲಾ ?!! ಹನಿ ಹನಿ ಸೇರಿ ಸಾಗರವಾಗೋದು ಹೀಗೇನೇ ?!! ಇದೊಂದು ಪ್ರಾತ್ಯಕ್ಷಿಕೆಯಷ್ಟೇ !!!

ಅಂದ ಹಾಗೆ : ನೀವು ನೀಡುವ ಗುಟುಕು ಜ್ಞಾನ ಎಲ್ಲೂ ಕಳೆದು ಹೋಗುವುದಿಲ್ಲ. ಅದು ನಿಮ್ಮ twitter account ನ Home page ನಲ್ಲಿ ನೀವು ಈ ಮುಂಚೆ / ತದನಂತರ ಟ್ವೀಟಿಸಿದ ಇತರೆ ಸಾಲುಗಳ ಸಂಗಡ ಬೆಚ್ಚಗೆ ಕೂತಿರುತ್ತದೆ. ಮೊದಲೇ ಹೇಳಿದ್ನಲ್ಲಾ ನಾನು , ಸ್ಪರ್ಧಾರ್ಥಿ ಸ್ವಾರ್ಥಮಯ ಪತ್ರಿಕೆ ಅಂತ !!

ಸ್ವಾರ್ಥ ಸಾಧನೆಗೆ ನೀವು ತಯಾರಾ ?!!!



: ಸ್ಪರ್ಧಾರ್ಥಿ




.

Sep 15, 2010

ಕಾಶ್ಮೀರದಲ್ಲಿ ಹಿಂಸೆ : ಸ್ಪರ್ಧಾರ್ಥಿಗಳ ಸಲಹೆ

1 ಪ್ರತಿಕ್ರಿಯೆಗಳು
ಇವತ್ತು ಸ್ವಲ್ಪ ಬೇರೆ ರೀತಿಯಲ್ಲಿ ಜ್ಞಾನಾರ್ಜನೆ ಮಾಡೋಣ ... ನಮ್ಮದೇ ನೆಲದ ಭಾಗವಾಗಿರುವ ಕಾಶ್ಮೀರದಲ್ಲಿ ಇಂದು ಹಿಂಸೆ ಭುಗಿಲೆದ್ದಿದೆ. ಅವರಿಗೆ ಭಾರತದ ಅಧೀನದಲ್ಲಿರುವುದು ಬೇಡವಂತೆ ... !! ನಾವು ಅಲ್ಲಿಂದ ಕಾಲ್ತೆಗೆಯಬೇಕಂತೆ ... !!! ಇಷ್ಟೆಲ್ಲಾ ನಮ್ಮದೇ ನೆಲದ ಮೇಲೆ ನಡೆಯುತ್ತಿರಬೇಕಾದರೆ ನಾವು ನಮಗದು ಸಂಬಂಧವಿಲ್ಲ ಎಂಬಂತೆ ಇರುವುದು ದೇಶದೆಡೆಗಿನ ದ್ರೋಹವಾಗುತ್ತದೆ. ಅಂತ ದ್ರೋಹಕ್ಕೆ ಅವಕಾಶ ಮಾಡಿಕೊಡದೆ ನಾವು ನಮ್ಮ ಪಾಲಿನ ಸಲಹೆ ಏನಿದೆ ಅನ್ನೋದನಾದ್ರೂ ತಿಳಿಯೋಣ .. ನಮ್ಮೊಬ್ಬರ ಅಭಿಪ್ರಾಯಗಳಿಂದ ಏನಾಗಲು ಸಾಧ್ಯ ಎಂಬುದು ನಿಮ್ಮ ಅಭಿಪ್ರಾಯವಾದರೆ ...


" ನಾಳೆ ದಿವಸ ನೀವು ( ನಾವು ) ನಿರ್ಧಾರ ತೆಗೆದುಕೊಳ್ಳುವ ಸ್ಥಾನ ತಲುಪಿದರೆ ನಮ್ಮೊಬ್ಬರ ನಿರ್ಧಾರವೇ ಪ್ರಮುಖವಾಗುತ್ತದಲ್ಲವೇ ? " ಎನ್ನುವುದು ನನ್ನ ವಾದ.

ಈ ಸಮಸ್ಯೆಗೆ ನಿಮ್ಮ ಪರಿಹಾರ ಏನು ಅಂತ Comment ಗಳ ಮೂಲಕ ತಿಳಿಸಿ ...


ನಾಳೆ ಸ್ಪರ್ಧಾರ್ಥಿಯ ಅಭಿಪ್ರಾಯ ಬರೆಯಲಾಗುವುದು ...

 : ಸ್ಪರ್ಧಾರ್ಥಿ



.

Sep 14, 2010

ಹೊಸತು :: ಪ್ರಚಲಿತ ವಿದ್ಯಮಾನಗಳ ಒಳನೋಟ

1 ಪ್ರತಿಕ್ರಿಯೆಗಳು
::  ಪ್ರಚಲಿತ ವಿದ್ಯಮಾನಗಳ ಒಳನೋಟ ::

ಪ್ರಚಲಿತ ವಿದ್ಯಮಾನಗಳನ್ನ ಚುಟುಕಾಗಿ ತಿಳಿಯುವುದು ಬಹುಆಯ್ಕೆ ಉತ್ತರಗಳಿರುವ ಪ್ರಶ್ನೆಪತ್ರಿಕೆಗಳನ್ನ ಬಿಡಿಸಲು ಅನುವಾದರೆ ಆ ವಿದ್ಯಮಾನಗಳ ಒಳನೋಟ ವಿಸ್ತೃತ ಉತ್ತರ ಬಯಸುವ ಪ್ರಶ್ನೆಪತ್ರಿಕೆಗಳನ್ನ ಬಿಡಿಸಲು ಸಹಾಯ ಮಾಡುತ್ತವೆ. ಈ ಹೂರಣವನ್ನ ತನ್ನಲ್ಲಿಟ್ಟುಕೊಂಡ ಸ್ಥಿರ ಅಂಕಣವೊಂದು ನಿಮ್ಮ ಮುಂದೆ ಇಂದಿನಿಂದ.

ಆದರೆ 2009ರ ಜನವರಿ 1 ರಿಂದ ಇಲ್ಲಿಯವರೆಗಿನ ಪ್ರಮುಖ ಘಟನೆಗಳ ಒಳನೋಟಗಳನ್ನ ಶೀಘ್ರದಲ್ಲೇ ತಯಾರಿಸಿ ನಿಮ್ಮ ಮುಂದೆ ಇಡಲಾಗುವುದು. ಆದರೆ ಸದರಿ ಒಳನೋಟದ ಪೂರ್ತಿ ಪಾಠಕ್ಕಾಗಿ ನೀವು ತಾಣವನ್ನೇ ಖುದ್ದಾಗಿ ಭೇಟಿ ನೀಡಬೇಕು ... ಅಂದ್ರೆ ಈ ಮೇಲ್ ಗಳಲ್ಲಿ ಇದರ ರುಚಿ ಇರುವಂತೆಯೇ ಬಡಿಸಲಾಗುವುದಿಲ್ಲ !!


ತಾಣದಲ್ಲಿ ಬಲಭಾಗದಲ್ಲಿ ಇರುವ ಮೇಲ್ಕಂಡ ಚಿತ್ರದ ಮೇಲೆ ಕ್ಲಿಕ್ಕಿಸಿದರೆ 
ಅಥವಾ
ನಿಮಗೆ ಪ್ರತಿದಿನದ ಆಗುಹೋಗುಗಳ ಒಳನೋಟ ಲಭ್ಯ !!!

{ ಸದರಿ ಒಳನೋಟ ಬಹುಶಃ ನವೆಂಬರ್ 1 ನೇ ತಾರೀಖಿನ ಹೊತ್ತಿಗೆ ಸತ್ಯಾಪನಗೊಳ್ಳುವ ನಿರೀಕ್ಷೆಯಿದೆ... 
ಅಲ್ಲಿಯವರೆಗೆ ತಾಳ್ಮೆಯಿರಲಿ .. }




: ಸ್ಪರ್ಧಾರ್ಥಿ




.

Sep 11, 2010

ಶುಭಾಶಯ

0 ಪ್ರತಿಕ್ರಿಯೆಗಳು
ಸ್ಪರ್ಧಾರ್ಥಿ  ಓದುಗರಿಗೆಲ್ಲಾ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು

Aug 25, 2010

ನೀವೂ ಬರೀರಪ್ಪಾ !!

0 ಪ್ರತಿಕ್ರಿಯೆಗಳು



: ಹಾಗೇ ಸುಮ್ಮನೆ ...  ಮಾತುಕತೆ :



ಎಷ್ಟು ದಿವಸ ರವಿ ಅನ್ನೋನೊಬ್ಬ ಬರೀತಾ ಹೋಗ್ತಾನೆ ಹೇಳಿ ? ಹಾಗೊಂದು ಪಕ್ಷ ಅವನು ಬರೆಯೋದೇ ಆದ್ರೂ, ದಿನ ಅವನೆಷ್ಟೇ ತರಹೇವಾರಿ ಅಡುಗೆ ಮಾಡಿ ಹಾಕಿದ್ರೂ ಅದು ಬರೋದು ಒಂದೇ ಅಡುಗೆ ಮನೆಯಿಂದ. ಅಂಥ ಅಡುಗೆ ವರ್ಷ ಕಳೆದರೂ ಬೇಸರ ಆಗೋದಿಲ್ಲ ಅನ್ನೋದಕ್ಕೆ ಪೂರ್ವ ನಿದರ್ಶನಗಳು ಕಡಿಮೆ.

ವಿಷಯ ಹೀಗಿರಬೇಕಾದ್ರೆ, ನಿಮಗೆ ಗೊತ್ತಿರೋ ವಿಷಯವನ್ನ ಹಂಚಿಕೊಳ್ಳೋ ಸಾರ್ಥಕತೆಯನ್ನ ಪಡೆದುಕೊಳ್ಳಿ. ಅಂಥದೊಂದು ಮುಕ್ತ ವೇದಿಕೆ ಇಲ್ಲಿ, ಸ್ಪರ್ಧಾರ್ಥಿ ತಾಣದಲ್ಲಿ ಉಚಿತವಾಗಿ ಲಭ್ಯವಿದೆ ಅನ್ನೋದನ್ನ ಮರೀಬೇಡಿ.

ನಿಮ್ಮಲ್ಲಿರಬಹುದಾದ ಹಿಂಜರಿಕೆಗಳನ್ನ ಪಟ್ಟಿ ಮಾಡ್ತೀನಿ ಕೇಳಿ :
  • ನಾನು ಬರೆದ ವಿಷಯ ಈಗಾಗ್ಲೇ ಎಲ್ರೀಗೂ ಗೊತ್ತಿದ್ರೆ ? ::: ಗೊತ್ತಿದ್ರೆ ಅವನಿಗೆ ಗೊತ್ತಿರುತ್ರೀ ... ಬರೀತಿರೋ ನಿಮಗಲ್ವಲ್ಲಾ ? ಇಲ್ಲಿ ಬರೆಯೋ ವಿಷಯಗಳೆಲ್ಲಾ ಒಬ್ಬರಿಗಲ್ಲಾ ಒಬ್ಬರಿಗೆ ಗೊತ್ತಿರುವಂಥವೇ. ಯಾರಿಗೂ ಗೊತ್ತಿಲ್ದೇ ಇರೋ ವಿಷಯ ಬರೆದ್ರೆ ಅದೊಂದು Research Paper ಆಗುತ್ತೆ. ನೀವಿಲ್ಲಿ ಬರೆದು, ಪ್ರಕಟವಾಗಬೇಕಾಗಿರೋ ಲೇಖನಗಳ ಹಿಂದಿರಬೇಕಾಗಿರುವ ಧ್ಯೇಯ ಇಷ್ಟೇ : ಲೇಖಕ ಆ ಲೇಖನದ ವಿಷಯವನ್ನ ಕುತೂಹಲದ ನೀರಿಗೆ ಇಳಿದು ಹುಡುಕಾಡಿ 'ಶೋಧಿ'ಸಿರಬೇಕು. ಆ ವಿಷಯ ಸಾಮಾನ್ಯರು ತಿಳಿದಿರುವ ಸಾಮಾನ್ಯ ವಿಷಯವಾಗಿದ್ದರೂ ಪ್ರತಿ ವ್ಯಕ್ತಿ / ವಿದ್ಯಾರ್ಥಿ / ಲೇಖಕ ಅದನ್ನ ಬಿತ್ತರಿಸುವ ಸಾಮರ್ಥ್ಯ ಪ್ರತಿ ವ್ಯಕ್ತಿಯ Finger Print ನಷ್ಟೇ Unique. ನಿಮ್ಮ ಪದಗಳಲ್ಲಿ ಆ ಶಕ್ತಿ ತುಂಬಿಸಿ, ಅತಿ ಸಾಮಾನ್ಯ ವಿಷಯವನ್ನೂ ಕುತೂಹಲಕಾರಿಯಾಗಿ Present ಮಾಡುವ ಶಕ್ತಿಯನ್ನ ಬೆಳೆಸಿಕೊಳ್ಳಿ. ವಿಷಯ ಸಂಗ್ರಹ ನಿಮ್ಮ Prelims ಗೆ ಸಹಾಯ ಆದ್ರೆ, ವಿಷಯವನ್ನ Present ಮಾಡುವ ನಿಮ್ಮ Uniqueness ಮುಖ್ಯ ಪರೀಕ್ಷೆಗೆ ಸಹಾಯ ಮಾಡತ್ತೆ. Got My Point ? Thats Like A Good Boy !!
  • ಲೇಖನಕ್ಕೆ ಕಚ್ಚಾ ಸಾಮಗ್ರಿ ಎಲ್ಲಿಂದ ಹುಡುಕ್ಲಿ ನಾನು ? ::: ಇದನ್ನ ನಾನು ಹೇಳಕ್ಕಾಗಲ್ಲ. ನಿಮ್ಮ ಲೇಖನದ ಹರವು ಆಧರಿಸಿ ಹುಡುಕಿ. ನಿಮ್ಮ ಮನೆ ಕಪಾಟಿನಲ್ಲಿರುವ ಪುಸ್ತಕಗಳು, ಊರ ಗ್ರಂಥಾಲಯ, ಕಾಲೇಜ್ / ಯುನಿವರ್ಸಿಟಿ ಲೈಬ್ರರಿ, ಗೂಗಲ್, ವಿಕಿಪೀಡಿಯಾ ... ಇವೆಲ್ಲಾ ನಿಮಗೆ ಸಹಾಯವಾಗಬಲ್ಲವು.
  • ಬರೀಬೇಕು ಅಂತ ವಿಷಯ ಇಟ್ಕೊಂಡಿದೀನಿ.. ಮುಂದೇನು ? ::: ಮುಂದೇನು ತಕ್ಷಣ ಆ ಜ್ಞಾನ ಪುಟವನ್ನ ಕನ್ನಡ Unicode ನಲ್ಲಿ / Google Transliterator / gmail mailbox ನಲ್ಲಿರೋ ಪ್ರಾದೇಶಿಕ ಭಾಷೆಯನ್ನ ಟೈಪಿಸುವ ಟೂಲ್ ಬಳಸಿ ಬರೆದು ತುರ್ತಾಗಿ ಮಿಂಚಂಚೆ ಕಳಿಸಿ : ವಿಳಾಸ - spardharthi@gmail.com
ಈ ಮಾತುಕತೆಯ ಮುಂದಿನ ಲೇಖನ ರವಿ ಬಿಟ್ಟು ಮತ್ತೊಬ್ಬ ಆಸಕ್ತ " ಸ್ಪರ್ಧಾರ್ಥಿ " ಯದೇ ಇರಬೇಕು ಅಂತ ನಿರ್ಧಾರ ಮಾಡಿ ಆಗಿದೆ. ನೋಡೋಣ ಪ್ರತಿ ದಿನ ಸ್ಪರ್ಧಾರ್ಥಿ ತಾಣದ ಜ್ಞಾನಪುಟ ಓದುವ ನಿಮ್ಮಲ್ಲೆಷ್ಟು ಜನ ನಿಮ್ಮ ಪಾಲಿನ ಜ್ಞಾನಬುತ್ತಿಯನ್ನ ನಮ್ಮೊಂದಿಗೆ ಹಂಚಿ ತಿನ್ನುವ ಔದಾರ್ಯ ತೋರಿಸ್ತೀರಿ ಅಂತ !!



ಇಂತಿ ನಿಮ್ಮ,
ಸ್ಪರ್ಧಾರ್ಥಿ







.

Aug 8, 2010

ಒಂದು ವಾರದ ವಿರಹ

0 ಪ್ರತಿಕ್ರಿಯೆಗಳು


6 ತಿಂಗಳ ನಂತರ ನಮ್ಮೂರಿಗೆ ಹೋಗ್ತಾ ಇದೀನಿ. ಅಲ್ಲಿ ಅಂತರ್ಜಾಲದ ಸಂಪರ್ಕದ ಕೊರತೆ ಇದೆ. ಹೀಗಾಗಿ ಈ ಒಂದು ವಾರ ನಿಮಗೆ ದೈನಂದಿನ ಜ್ಞಾನ ಪುಟವನ್ನ ನೀಡೋದು ಸಾಧ್ಯವಾಗೋದಿಲ್ಲ. ಅದಕ್ಕೆ ನಿಮಗೆ Sorry ಕೇಳ್ತೀನಿ...

ಮತ್ತೆ ಮುಂದಿನ ಮಂಗಳವಾರದಿಂದ ದೈನಂದಿನ ಜ್ಞಾನ ಪುಟ ನಿಮ್ಮೆದುರಿಗೆ - ನಿಮ್ಮ mailಮನೆಗೆ.

ಅಲ್ಲಿ ತನಕ ನೀವು ಖಾಲಿ ಏನಕ್ಕೆ ಕೂತುಕೊಳ್ತೀರಿ ? 


ನಾನು ಒಂದು ವಾರ ನಿಮಗೆ ಜ್ಞಾನವನ್ನ ಹಂಚುವ ಕೆಲಸ ಮಾಡಿದೀನಿ. ಅದರಲ್ಲಿ ಸಿನೆಮಾ, ಅಧ್ಯಯನ, ಸಂದರ್ಶನ ... ಹೀಗೆ ನಾನಾ ವಿಚಾರಗಳಿದ್ವು. ಅವೆಲ್ಲವನ್ನೂ ಯಾರಿಗೂ ತಿಳಿದೇ ಇರಲಿಲ್ಲ ಅನ್ನೋ ಅಹಂ ಇಂದ ಬರೀಲಿಲ್ಲ. ಬದಲಿಗೆ ನನಗೆ ತಿಳಿಯದ ವಿಷಯಗಳ ಬಗ್ಗೆ ಮಾಹಿತಿ ಕಲೆ ಹಾಕಿ ನಿಮಗೂ ಹಂಚಿದೀನಿ. ಹಾಗೆ ಹಂಚಿದಾಗ ನಿಮಗೆ ಆ ಮಾಹಿತಿ ಕಲೆ ಹಾಕಲು ನಾನು ತೆಗೆದುಕೊಂಡಷ್ಟು ಸಮಯದ ಉಳಿತಾಯ ಆದ ಹಾಗಾಯ್ತು ತಾನೆ ?

ಎಲ್ರಿಗೂ ಅಲ್ದೇ ಹೋದ್ರೂ ಕೆಲವು ಜನ ಸ್ಪರ್ಧಾರ್ಥಿಗಳಿಗಾದ್ರೂ ನಾನು ಹಂಚಿದ ವಿಷಯಗಳು ಹೊಸತಾದವು ಅನಿಸಿರಲಿಕ್ಕೆ ಸಾಕು. ಅಲ್ಲಿಗೆ ನನ್ನ ಶ್ರಮ ಸಾರ್ಥಕ. 

ಅದೇ ರೀತಿ ನೀವೂ ಕೂಡ ಪ್ರತಿ ದಿನ ಒಂದು ವಿಚಾರವನ್ನ ಹೊಸತಾಗಿ ತಿಳಿಯುವ ಹಟ ಮಾಡಿ. ಹಾಗೆ ಒಂದು ವಾರದಲ್ಲಿ  ನೀವು ತಿಳಿದುಕೊಳ್ಳುವ 7 ಹೊಸ ವಿಚಾರಗಳಲ್ಲಿ ಕನಿಷ್ಠ 2 ನ್ನಾದ್ರೂ ಹಂಚಿಕೊಂಡರೆ ಇನ್ನೊಬ್ಬರಿಗೆ ಆ ಮಾಹಿತಿ ಕಲೆಹಾಕಲು ಪಡುವ ಶ್ರಮದ ಉಳಿತಾಯವಾಗಬಹುದಲ್ವೇ ?

ಇನ್ನು ಹೇಗೆ ಹಂಚಿಕೋಬೇಕು ನಿಮ್ಮ ಲೇಖನವನ್ನ ಅನ್ನೋದು ಗೊತ್ತು ತಾನೆ ? ಬಹಳ ಸರಳವಾಗಿದೆ : ನಿಮ್ಮ ಲೇಖನವನ್ನ ನನ್ನ mail ID : spardharthi@gmail.com ಗೆ email ಮಾಡಿ. ಉರಿನಿಂದ ಬಂದ ಮರುದಿನದಿಂದ ನಿಮ್ಮ ಲೇಖನಗಳನ್ನೇ ಪ್ರಕಟಿಸ್ತೀನಿ. ಸರಿನಾ ?

ಇಲ್ಲಿ ಖಂಡಿತ ಸ್ವಾರ್ಥ ಪೂರಿತ ದುಷ್ಟಬುದ್ಧಿಯನ್ನ ಇಣುಕಲು ಬಿಡಬೇಡಿ. ಬದಲಿಗೆ " ನೀ ನನಗಾದರೆ ನಾ ನಿನಗೆ " ಅನ್ನುವ ನಾಣ್ಣುಡಿ ನೆನಪಿರಲಿ. ಈ ನಾಣ್ಣುಡಿಯಲ್ಲಿ ನಿಮಗೆ ನಂಬಿಕೆ ಇದ್ರೂ ಬಂತು ಬಿಟ್ರೂ ಬಂತು , ಆದರೆ : ನಿಮಗೆ ಸಹಾಯ ದೊರೆತು ಅದರಿಂದ ಒಳ್ಳೆಯದಾಗುವುದು, ನೀವು ಇತರರಿಗೆ ಸಹಾಯ ಮಾಡಿದಾಗ ಮಾತ್ರ !!

- ಸ್ಪರ್ಧಾರ್ಥಿ


.

Jul 31, 2010

" ಸ್ಪರ್ಧಾರ್ಥಿ " : ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಸಿದ್ಧತೆಗೆ ಕನ್ನಡದ ಮೊದಲ e-ಪತ್ರಿಕೆ, ಶುಭಾರಂಭ

0 ಪ್ರತಿಕ್ರಿಯೆಗಳು

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ |
ನಿರ್ವಿಘ್ನಂ ಕುರುಮೇ ದೇವ ಸರ್ವ ಕಾರ್ಯೇಷು ಸರ್ವದಾ ||






ನಮಸ್ತೆ ... ಎಲ್ಲರಿಗೂ ಶುಭಮುಂಜಾವು. 


ಸ್ಪರ್ಧಾರ್ಥಿ - ಸ್ಪರ್ಧಾತ್ಮಕ ಪರೀಕ್ಷೆಗಳ ಸಮಗ್ರ ಸಿದ್ಧತೆಗೆ ಕನ್ನಡದ ಮೊದಲ e-ಪತ್ರಿಕೆ
ಇಂದಿನಿಂದ ದೈನಂದಿನ ಜ್ಞಾನ ಪತ್ರಿಕೆಯಾಗಿ ಪ್ರಾರಂಭವಾಗುತ್ತಿದೆ.

ಇವತ್ತಿನಿಂದ ನಮ್ಮ - ನನ್ನ - ನಿಮ್ಮ - ನಮ್ಮೆಲ್ಲರ ಸ್ಪರ್ಧಾರ್ಥಿ e-ಪತ್ರಿಕೆ ಶುಭಾರಂಭ. ಅಂದ್ರೆ ಪ್ರತಿ ದಿನ ಜ್ಞಾನ ಹೊತ್ತು ತರುವ ದಿನಪತ್ರಿಕೆಯ ರೂಪದಲ್ಲಿ ನಿಮ್ಮ ಮುಂದೆ. ಪ್ರತಿ ದಿನ ಬೆಳಿಗ್ಗೆ ಒಂದು ಪ್ರಚಲಿತ / ಉಪಯುಕ್ತ / ಸ್ವಾರಸ್ಯಕರ ಮಾಹಿತಿ ಹೊತ್ತ ಪತ್ರಿಕೆಯ ಪ್ರತಿಯೊಂದು ನಿಮ್ಮ mailಮನೆಗೆ ತಲುಪಿಸುವ ಜವಾಬ್ದಾರಿ ನನಗೆ ಬಿಡಿ. ಆದರೆ 

ಹಾಗೆ ತಲುಪುವ ಎಲ್ಲ ಲೇಖನಗಳಿಗೂ ನಾನೇ ಲೇಖಕ / ಕರ್ತೃ ಆಗಬೇಕೆಂಬ ಯಾವ ಸ್ವಾರ್ಥದ ನಿಯಮವನ್ನೂ ನಾನು ಇಟ್ಟುಕೊಂಡಿಲ್ಲ. ಪತ್ರಿಕೆಯನ್ನ ಖುದ್ದಾಗಿ ಸಂದರ್ಶಿಸಿ / ಪತ್ರಿಕೆಯ ಬಗ್ಗೆ ಸ್ನೇಹಿತರಿಂದ ಕೇಳಿ ತಿಳಿದುಕೊಂಡ ಪ್ರತಿಯೊಬ್ಬ ಆಸಕ್ತ : ಕನ್ನಡ ಬಲ್ಲ ವ್ಯಕ್ತಿ ಇಲ್ಲಿ ತಮ್ಮ ಜ್ಞಾನವನ್ನ ಹಂಚಿಕೊಳ್ಳಬಹುದು. ದೇಶ - ಕಾಲದ ಪರಿಮಿತಿ ಇಲ್ಲ. ಇರುವುದೊಂದೇ ಪರಿಮಿತಿ , ಅದು ಕನ್ನಡ.

ಅಂದ್ರೆ ನಿಮ್ಮೆಲ್ಲ ಜ್ಞಾನ ಹಂಚುವ ಹಂಚಿಕೆಗಳು ಕನ್ನಡದಲ್ಲಿರಲಿ & ನುಡಿ 4.0 Unicode ನಲ್ಲಿ ಬೆರಳಚ್ಚಿಸಿದುದಾಗಿರಬೇಕು. ಇಲ್ಲದಿದ್ದಲ್ಲಿ Google Transliterator ಬಳಸಿ ಬರೆಯಬಹುದು. ಮತ್ತು ಹಾಗೆ ಬರೆದ ಲೇಖನವನ್ನ ನನ್ನ email ID spardharthi@gmail.com ಗೆ ಬರೆದು ಕಳುಹಿಸಿ. ವಿಶೇಷ ಸಂದರ್ಭಕ್ಕೆ ತಕ್ಕ ಲೇಖನ ಬರೆಯಬೇಕು ಎನ್ನುವವರು , ಆ ವಿಶೇಷ ದಿನ / ಸಂದರ್ಭದ ಕನಿಷ್ಠ 30 ಗಂಟೆ ಮುಂಚೆ ಲೇಖನವನ್ನ ಕಳಿಸಿಕೊಟ್ಟರೆ ಅನುಕೂಲ. 

ಪ್ರಸ್ತುತ ತಾಣದ ಕರ್ತೃವಿನ ಬಗ್ಗೆ ಹಾಗೂ e-ತಾಣ ಶುರುವಾದ ಬಗ್ಗೆ ಹೆಚ್ಚಿಗೆ ತಿಳಿಯಲು ಮನಸಾದ್ರೆ ಇಲ್ಲಿ ಕ್ಲಿಕ್ಕಿಸಿ

ಆಂಗ್ಲಭಾಷೆಯಲ್ಲಿ ಕಂಡ http://allexamguru.blogspot.com/ ಎಂಬ ತಾಣವೇ ನನಗೆ ಸ್ಫೂರ್ತಿ.

ಆದರೆ ಆಂಗ್ಲಭಾಷೆಯಲ್ಲಿ ಮಾಹಿತಿ / ಜ್ಞಾನ ನೀಡಲು ಅವರಿಗೆ ಗೊತ್ತಿರುವಷ್ಟೇ ತಂತ್ರಾಂಶಗಳ ಜ್ಞಾನ ನಮಗೂ ಗೊತ್ತಿರಬೇಕಾದರೆ ನಾವೇಕೆ ಸುಮ್ಮನಿರೋಣ. ನಾವೂ ಅವರಿಗಿಂತ ಮಿಗಿಲಾಗಿ ಜ್ಞಾನ ಹಂಚೋಣ. ಅವರಿಗಿನ್ನ ಎತ್ತರವನ್ನ ಮುಟ್ಟೋಣ. ನಾನೊಬ್ಬನೇ ಆ ಕೆಲಸ ಮಾಡಿ ನಿಮ್ಮೆದುರಿಗೆ ಬೀಗುವ ಹಮ್ಮಿಲ್ಲ ನನಗೆ. ಬದಲಿಗೆ ನಿಮ್ಮನ್ನೂ ಜೊತೆ ಸೇರಿಸಿಕೊಂಡು ಎತ್ತರಕ್ಕೇರುವ ಹಂಬಲ ನಂದು. ನಿಮ್ಮ ಜೊತೆ ನನಗಿದೆ ಅನ್ಕೊಂಡು ಹೆಜ್ಜೆ ಹಾಕ್ತಿದೀನಿ. ಕನ್ನಡಿಗರ ಮನಸ್ಸು ಎಂದಿಗೂ ಸಹೃದಯತೆ - ಸಹಕಾರ ದ ಮಡಿಲು ಎಂದು ನಂಗೊತ್ತು.

ಇಂತಿ,
ಸ್ಪರ್ಧಾರ್ಥಿ

[ ನಿಮ್ಮ ಸ್ನೇಹಿತರನ್ನ e-ತಾಣಕ್ಕೆ ಪರಿಚಯಿಸಲು ಮರೆಯಬೇಡಿ. ಪ್ರತಿದಿನ ಬರುವ ಈ ತರಹದ ಲೇಖನಗಳನ್ನ Forward ಮಾಡಿ ಅವರಿಗೂ e-ಜ್ಞಾನದ ರುಚಿ ತೋರಿಸಿ. ಸ್ಪರ್ಧಾರ್ಥಿ ತಾಣವನ್ನ ಖುದ್ದಾಗಿ ಸಂದರ್ಶಿಸಲು ಇಲ್ಲಿ ಕ್ಲಿಕ್ಕಿಸಿ http://spardharthi.blogspot.com/ ]

ಅಂತರ್ಜಾಲ ಲೋಕದಲ್ಲಿ " ಸ್ಪರ್ಧಾರ್ಥಿ e-ಪತ್ರಿಕೆ " ಎಲ್ಲ ಪ್ರಮುಖ ಅವಕಾಶಗಳನ್ನೂ ಆಕ್ರಮಿಸಿಕೊಂಡಿದೆ ಅನ್ನೋದು ನಿಮಗೆ ಗೊತ್ತಾ ?

ನೀವು Facebook ನಲ್ಲಿ ಇದೀರಾ ? ಹಾಗಾದರೆ : ಇಲ್ಲಿ ಕ್ಲಿಕ್ಕಿಸಿ 

[ ಈಗಾಗಲೇ ಸುಮಾರು 500 ಜನ Fan ಗಳಿದಾರೆ ]

Facebook ನಲ್ಲಿ ಇನ್ನೊಂದು Account ಇದೆ ಅದನ್ನ Follow ಮಾಡಲು ಇಲ್ಲಿ ಕ್ಲಿಕ್ಕಿಸಿ

 [ ಈಗಾಗಲೇ 1000+ ಜನ ಸ್ನೇಹಿತರಿದಾರೆ !! ]

ನೀವು Twitter ನಲ್ಲಿ ಇದೀರಾ ? ಹಾಗಾದರೆ : ಇಲ್ಲಿ ಕ್ಲಿಕ್ಕಿಸಿ

Twitter ನಲ್ಲಿ ಇನ್ನೊಂದು Account ಇದೆ ಅದನ್ನ Follow ಮಾಡಲು ಇಲ್ಲಿ ಕ್ಲಿಕ್ಕಿಸಿ

ಸ್ಪರ್ಧಾರ್ಥಿ Orkut ಸ್ನೇಹಿತನ ರೂಪದಲ್ಲಿಯೂ ಲಭ್ಯ !! ಹಾಗೂ Orkut Community ರೂಪದಲ್ಲಿಯೂ ಲಭ್ಯ !!!



Mar 16, 2010

ಪ್ರಾರಂಭೋತ್ಸವಕ್ಕೆ ಒಂದೆರಡು ಮಾತು

0 ಪ್ರತಿಕ್ರಿಯೆಗಳು

ಸರ್ವರಿಗೂ ಹೊಸ ವರುಷದ ಹಾರ್ದಿಕ ಶುಭಾಷಯಗಳು.




" What's There In A Name "  ಅಂತ ಷೇಕ್ಸಪಿಯರ್ ಹೇಳಿದಾನಂತೆ. ( ಹಾಗೆ ಬರೆದ ವಾಕ್ಯದ ಕೆಳಗೆ ಅವನ ಹೆಸರೂ ಹಾಕ್ಕೊಂಡಿದ್ದನಂತೆ ..... )  ವಿಕೃತಿ ನಾಮ ಸಂವತ್ಸರ ಅಂತ ಹೆಸರಿಟ್ಟುಕೊಂಡು ಬರುತ್ತಿರುವ ಈ ಹೊಸ ಸಂವತ್ಸರವನ್ನ ,  ಸುಕೃತಿ ನಾಮ ಸಂವತ್ಸರ ಅಂತ ಹೆಸರಿದ್ರೆ ಹೇಗೆ ನಗುಮೊಗದಿಂದ ಸ್ವಾಗತಿಸ್ತಾ ಇದ್ವೋ ಹಾಗೇ ಸ್ವಾಗತಿಸೋಣ. ಯಾಕಂದ್ರೆ ಹೆಸರು ಸರಿ ಇಲ್ಲ ಅಂತ ಕೋಗಿಲೆಯ ಕೂಗಿನಲ್ಲಿ ವಿಕೃತಿ ಇರೋದಿಲ್ಲ. ಮಾವಿನ ಚಿಗುರಿನಲ್ಲಿ ಎಂದಿನಂತೆ ಅದೇ ಹಸಿರು ನಳನಳಿಸುತ್ತೆ. ಬೇವು ಪ್ರತಿ ಸಾರಿಯಂತೆ ಅಷ್ಟೇ ಪುಟ್ಟ ಪುಟ್ಟ ಸುಂದರ ಹೂಗಳನ್ನ ಬಿಡುತ್ತೆ. ಅಂತೆಯೇ ನಮ್ಮ ಮನವೂ ಎಂದಿನಂತೆ ಈ ವರ್ಷವೂ ಪ್ರಸನ್ನವಾಗಿರಲಿ.

ಈ ಹೊಸ ಸಂವತ್ಸರ ನಮ್ಮೆಲ್ಲರ ಬಾಳಲ್ಲಿ " ಒಂದು ಸುಂದರ , ಮರೆಯಲಾಗದ ವರ್ಷ ಕಟ್ಟಿಕೊಡಲಿ " ಅಂತ ಹಾರೈಸ್ತೀನಿ. " ಯಶಸ್ಸು, ಸುಖ, ಸಮೃದ್ಧಿ  ತರಲಿ " ಅಂತ ನಾನು ಹರಸಿದರೆ ರಾಜಕಾರಣಿಗಳು ನೀಡೋ ಸುಳ್ಳು ಆಶ್ವಾಸನೆಯ ಸಾಲಿಗೆ ಇಳಿದೇನು. 

ಬದುಕು ಸಾಗರದಲೆಗಳ ಮೇಲಿನ ಪಯಣದ ಹಾಗೆ ಅಂತ ತಿಳಿದವರು ಹೇಳ್ತಾರೆ. ಉಬ್ಬರವಿಳಿತಗಳಿದ್ದರೇನೆ ಆ ಪಯಣ ಸುಂದರ. ಆ ಪಯಣವನ್ನ ಸುಂದರ , ಸುಮಧುರ ಪಯಣ ಅಂತ ಕರೆದಾಗ ಅಲ್ಲಿ ಬರೀ ಸುಖಗಳೇ ತುಂಬಿರೋದಿಲ್ಲ.
ನಾವೆಯ ತುಯ್ದಾಟಗಳಿರ್ತಾವೆ. ಭಯಾನಕ ಕಡಲ ಜೀವಿಗಳು ಬಂದು ಹೆದರಿಸಿ ಹೋಗ್ತಾವೆ. ಸುಂದರ ಡಾಲ್ಫಿನ್ ನಂತಹ ಸ್ನೇಹಿತರು ನಮ್ಮ ಸುತ್ತ ನಲಿದಾಡಿ ಮನವನ್ನ ಹರ್ಷಿಸಿ ಹೋಗ್ತಾರೆ. ಥಳುಕು ಬಳುಕಿನ ಬಣ್ಣದ 'ಮೀನು' ಗಳು ನಮ್ಮ ಪಕ್ಕದಲ್ಲೇ ಹಾಗೇ ಸಾಗಿ ಹೋಗ್ತಾವೆ. ನಮಗೂ ಒಂದಿರಲಿ ಅಂತ ಬಲೆ ಬೀಸಿದರೆ ನಿಮಗೂ ಒಂದು ಸಿಕ್ಕೀತು.

ಇಂತಿಪ್ಪ ನಮ್ಮೀ ಜೀವನದ ಕಡಲ ಪಯಣದಲ್ಲಿ ನಮ್ಮ ಸ್ವಂತ  ಕುಟುಂಬದ ಜೊತೆಗೆ ಅಕ್ಕ ಪಕ್ಕ ಕೋಟಿ ಕೋಟಿ ಕುಟುಂಬಗಳು ಪಯಣ ಸಾಗಿವೆ. ಅವರಿಲ್ಲದಿದ್ದರೆ ಆ ಸಾವಿರ ಮೈಲಿ ವಿಸ್ತಾರದ ಕಡಲ ಮೇಲೆ ನಾವು ಒಂಟಿ ಪಯಣಿಗರು ಅನ್ನೋ ಸತ್ಯ ಮರೀಬಾರ್ದು ನಾವು ಯಾವತ್ತಿಗೂ. ಒಂದು ಭಾವಗೀತೆಯ ಸಾಲು ನೆನಪಿಗೆ ಬರ್ತಿದೆ ಈಗ " ಕಡಲ ಮೇಲೆ ಸಾವಿರಾರು ಮೈಲಿ ದೂರ  ಸಾಗಿಯೂ...ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ " ಅಂತ.

ನಮ್ಮೀ ಪಯಣದೊಳಗೆ ಜೀವನದ ಅರ್ಥ ಮರೆಯೋದು ಬೇಡ. ಮಾನವೀಯತೆ, ಪರೋಪಕಾರ... ಎಂಬ ಸುಕೃತಗಳು ನಮ್ಮವಾಗಲಿ ಎಂದು ಹರಸುತ್ತಾ...

ಮತ್ತೆ ಸಿಗ್ತೀನಿ,
ರವಿ

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ