ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Showing posts with label ಪವನ್. Show all posts
Showing posts with label ಪವನ್. Show all posts

Dec 4, 2010

ಹಣದುಬ್ಬರ

0 ಪ್ರತಿಕ್ರಿಯೆಗಳು
*ಹಣದುಬ್ಬರ
> ಸರಕು ಮತ್ತು ಸೇವೆಗಳ ದರದಲ್ಲಿನ ಸರಾಸರಿ ಏರಿಕೆಯ ಮಟ್ಟವೇ ಹಣದುಬ್ಬರ. ಇದು, ಸರಕು ಮತ್ತು ಸೇವೆಗಳ ಸೂಚಿಕೆಯಾಗಿದೆ (index)

*ಹಣದುಬ್ಬರಕ್ಕೆ ಕೆಲವು ಪ್ರಮುಖ ಕಾರಣಗಳು
> ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಹೆಚ್ಚಳ;
> ದೇಶಾದ್ಯಂತ ಮಿತಿಮೀರಿದ ಸಂಬಳ (ಸಂಬಳ ಹೆಚ್ಚಿಗೆಯಾಗುವಿಕೆ ಕೊಳ್ಳುಬಾಕ ಸಂಸ್ಕೃತಿಗೆ ಪುಷ್ಟೀಕರಣ ನೀಡುತ್ತದೆ.ಇದು ಹಣದುಬ್ಬರದ ಮೇಲೆ ತೀವ್ರತರವಾದ ಪರಿಣಾಮ ಬೀರುತ್ತದೆ );
>ಆಹಾರ ಮತ್ತು ಅವಶ್ಯಕ ಪದಾರ್ಥಗಳ ಹೆಚ್ಚಳ ( "ಭಾರತೀಯರು ಹೊಟ್ಟೆಬಾಕರು; ಇದರಿಂದ ಆಹಾರದ ಕೊರತೆಯುಂಟಾಗುತ್ತಿದೆ" ಎಂದು ನೋಬಲ್ ಪುರಸ್ಕೃತ ಅಮೇರಿಕಾದ ಅಧ್ಯಕ್ಷರು ಹಿಂದೊಮ್ಮೆ ನುಡಿದಿದ್ದರು ).

*ಭಾರತದಲ್ಲಿ ಹಣದುಬ್ಬರ
> ಭಾರತದಲ್ಲಿ ಹಣದುಬ್ಬರವನ್ನು ಲೆಕ್ಕಮಾಡಲು Wholesale Price Index (WPI) ನ್ನು ಉಪಯೋಗಿಸಲಾಗುತ್ತದೆ.
(Consumer Price Index  (CPI)  ನ್ನು ಉಪಯೋಗಿಸುವುದಿಲ್ಲ).
>ಅಮೇರಿಕಾ, ಚೀನಾ, ಕೆನಡಾ, ಜಪಾನ್, ಇಂಗ್ಲೆಂಡ್ ಸೇರಿದಂತೆ ಅನೇಕ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು Consumer Price Index ನ್ನು ಉಪಯೋಗಿಸುತ್ತವೆ.

*ಭಾರತ Wholesale Price Index (WPI) ನ್ನು ಉಪಯೋಗಿಸಲು ಕಾರಣಗಳು
> ಅತಿ ಹೆಚ್ಚಿನ ಸಾಮಗ್ರಿಗಳು ಇದರಲ್ಲಿ ಅಡಕವಾಗುತ್ತವೆ.
> ವಾರಕ್ಕೊಮ್ಮೆ ಲೆಕ್ಕಹಾಕಲು ಅನುಕೂಲವಾಗುತ್ತವೆ.
* ಆರ್ಥಿಕ ಸೂಚಿಕೆಗಳಲ್ಲಿ WPI ಕೂಡ ಒಂದು; ಇದು 1902 ರಲ್ಲಿ ಮೊದಲಬಾರಿಗೆ ಪ್ರಕಟವಾಯಿತು; 1970 ರಿಂದ ಬಹುತೇಕ ಎಲ್ಲ ಮುಂದುವರೆದ ರಾಷ್ಟ್ರಗಳು WPIನ್ನು ಕೈಬಿಟ್ಟು CPI ನ್ನು ಉಪಯೋಗಿಸುತ್ತವೆ.
* ಭಾರತದಲ್ಲಿ ಒಟ್ಟು 435 ಸರಕುಗಳು WPIನಲ್ಲಿ ಒಳಪಡುತ್ತವೆ.

*WPI ನ ನ್ಯೂನತೆಗಳು
> ಇದು ಒಂದು ವಸ್ತುವಿನ ಬೆಲೆಯ ಏರಿಳಿತವನ್ನು ನಿಖರವಾಗಿ ತೋರಿಸುವುದಿಲ್ಲ.
>  435 ವಸ್ತುಗಳ ಪೈಕಿ 100 ಕ್ಕೂ ಹೆಚ್ಚು  ಸರಕುಗಳು ಉಪಯೋಗದ ದೃಷ್ಟಿಯಿಂದ ಮಹತ್ವವಿಲ್ಲದವುಗಳು. ಆದರೂ, ಅವುಗಳು ಹಣದುಬ್ಬರದ ಏರಿಳಿತದಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
> ಭಾರತವು 1993-94 ರಲ್ಲಿನ WPI ನ್ನು ಆಧಾರವಾಗಿಟ್ಟುಕೊಂಡು ಹಣದುಬ್ಬರವನ್ನು ಕಂಡುಹಿಡಿಯುತ್ತಿವೆ.
* ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರವನ್ನು ಲೆಕ್ಕಮಾಡುತ್ತದೆ.
*ಎಪ್ರಿಲ್ 10 ರಂದು ಆಹಾರದ ಹಣದುಬ್ಬರ ಶೇ. 17.65 ಕ್ಕೆ ಏರಿತ್ತು. ಇದು ಗರಿಷ್ಠಮಟ್ಟದ್ದಾಗಿದೆ.
*ಹಣದುಬ್ಬರವನ್ನು ಶೇ. 5 ಕ್ಕೆ ಇಳಿಸುವ ಗುರಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೊಂದಿದೆ.

 : ಪವನ್

Nov 16, 2010

ಭರತವರ್ಷದೊಳಗೊಂದು ಭ್ರಷ್ಟ ಭಾರತ

0 ಪ್ರತಿಕ್ರಿಯೆಗಳು
ಚುಟುಕು ಸುದ್ದಿ : ತರಂಗರಾಜನ ದುರಾಸೆ ; ಆದರ್ಶ ಅಕ್ರಮ ; ಭೂಗಳ್ಳ ದೊರೆಗಳು



ಸುದ್ದಿಯ ಒಳನೋಟ :

  • ಭಾರತದಲ್ಲಿ ಮೊದಲಬಾರಿಗೆ ಭ್ರಷ್ಟಾಚಾರದ ವಾಸನೆ ಸುಳಿದಿದ್ದು ೧೯೪೮ರಲ್ಲಿ "ಜೀಪ್ ಸ್ಕ್ಯಾಂಡಲ್" ಮುಖಾಂತರ. ವಿ.ಕೆ. ಮೆನನ್ (ನೆಹರೂರವರಿಗೆ ನಿಷ್ಠರಾಗಿದ್ದರು), ಲಂಡನ್ನಿನಲ್ಲಿ ಭಾರತದ ಹೈಕಮೀಶನರ್, ನಿಯಮಗಳನ್ನು ಗಾಳಿಗೆ ತೂರಿ ರಕ್ಷಣಾ ವಲಯಕ್ಕೆ ಜೀಪುಗಳನ್ನು ಖರೀದಿ ಮಾಡಿದ್ದರು. ಅನಂತಶಯನ ಅಯ್ಯಂಗಾರರ ನೇತೃತ್ವದ ತನಿಖಾ ಸಮಿತಿ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದರೂ ಅಂದಿನ ಸರ್ಕಾರ ಸಪ್ಟೆಂಬರ್ ೩೦, ೧೯೫೫ ರಂದು ಕೇಸು ಮುಚ್ಚಲ್ಪಟ್ಟಿದೆ ಎಂದು ಘೋಷಿಸಿತು.
  •  ಜವಾಹರಲಾಲ್ ನೆಹರು ನೇತೃತ್ವದ ಸರಕಾರದಲ್ಲಿ ಅನೇಕ ಭ್ರಷ್ಟಾಚಾರದ ಪ್ರಕರಣಗಳು ಬೆಳಕಿಗೆ ಬಂದಿವೆ.
        * ಮುದ್ಗಲ್ ಹಗರಣ(೧೯೫೧)
        * ಮುಂಡ್ರಾ ಹಗರಣ (೧೯೫೭-೧೯೫೮)
        *ಮಾಳವಿಯ-ಸಿರಾಜುದ್ದಿನ ಹಗರಣ (೧೯೬೩)     *ಪ್ರತಾಪ ಸಿಂಗ್ ಕೈರೊನ್ ಕೇಸ್ (೧೯೬೩) ...
  • ೧೯೭೧ ರಲ್ಲಿ ಚುನಾವಣೆಯಲ್ಲಿ ಸರಕಾರಿ ನೌಕರನನ್ನು ಚುನಾವಣಾ ಪ್ರಚಾರ ಕಾರ್ಯದಲ್ಲಿ ಬಳಸಿಕೊಂಡಿದ್ದ ಇಂದಿರಾ ಗಾಂಧಿಯವರಿಗೆ ಅಲಹಾಬಾದ್ ಹೈಕೋರ್ಟ್ ೧೯೭೫ ರಲ್ಲಿ ಲೋಕಸಭಾ ಸದಸ್ಯತ್ವದಿದಿಂದ ವಜಾಗೊಳಿಸಿ ಆರು ವಷಗಳ ಕಾಲ ಆಡಳಿತ ನಡೆಸದಂತೆ ಅವರ ಮೇಲೆ ನಿಷೇಧ ಹೇರಿತ್ತು. ಆದರೆ, ಅವರು ತಮ್ಮ ಸ್ಥಾನದಿಂದ ಕೆಳಕ್ಕಿಳಿಯದೇ ವಿಪಕ್ಷಗಳ ಪ್ರತಿಭಟನೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ emergency ಯನ್ನು ಹೊರಡಿಸಿದರು. 
  • ರಾಜೀವ ಗಾಂಧಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ೧೯೮೭ ರಲ್ಲಿ ಅವರು ಸ್ವೀಡೀಷ್ ಬೋಫೋರ್ಸ್ ಫಿರಂಗಿಗಳನ್ನು ಖರೀದಿಸಿದ್ದರು. ಕೋಟಿಗಟ್ಟಲೆ ಅವ್ಯವಹಾರ ನಡೆದಿತ್ತು. ಗಾಂಧಿ ಕುಟುಂಬದ ಸ್ನೇಹಿತ ಒಟ್ಟೋವಿಯೋ ಕ್ವಟ್ರೋಚಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ. ದುರಾದೃಷ್ಟವೆಂದರೆ ಕ್ವಟ್ರೋಚಿಯನ್ನು ಕಳೆದ ವರ್ಶ ಸಿ.ಬಿ.ಐ. ಈತನನ್ನು ಆರೋಪ ಮುಕ್ತಗೊಳಿಸಿದೆ.
  • ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್  ಲೋಕಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಸದಸ್ಯರಿಗೆ ಲಂಚ ನೀಡಿದ್ದರು ಎಂದು ೧೯೯೭ರಲ್ಲಿ ಬೆಳಕಿಗೆ ಬಂತು.
  • ೨೦೦೨-೦೩ ರಲ್ಲಿ ಭಾರತಾದ್ಯಂತ ಚರ್ಚಿತವಾದ ಮತ್ತೊಂದು ಹಗರಣ - ತಾಜ್ ಕಾರಿಡಾರ್ ಹಗರಣ. ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಸರಕಾರ ಕೆಂದ್ರದಲ್ಲಿದ್ದಾಗ ಉತ್ತರ ಪ್ರದೇಶದ ಮುಖ್ಯ ಮಂತ್ರಿಯಾಗಿದ್ದವರು ಮಾಯಾವತಿ. ಕೇಂದ್ರ ಪರಿಸರ ಸಚಿವಾಲಯದ ಅನುಮತಿ ಪಡೆಯದೆ ಪ್ರವಾಸಿಗರ ಅನಕೂಲಕ್ಕಾಗಿ ವಸತಿ ಇನ್ನಿತರ ಸೌಕರ್ಯಕ್ಕಾಗ್ಗಿ ಕೇಂದ್ರ ಸರಕಾರ ಮೀಸಲಿಟ್ಟಿದ್ದ ೧೭೫ ಕೋಟಿ ರೂ.ಗಳನ್ನು ಉತ್ತರ ಪ್ರದೇಶದ ಸರಕಾರ ಉಪಯೋಗಿಸಿತ್ತು.
  • ಕಾಂಗ್ರೆಸ್ ಸರ್ಕಾರವನ್ನ ನಾಚಿಸುವಂತೆ ಬಿ.ಜೆ.ಪಿ. & ಎನ್.ಡಿ.ಎ. ಸರ್ಕಾರಗಳು ಸಾಕಷ್ಟು ಭ್ರಷ್ಟಾಚಾರದ ಹಣ ಸಂಪಾದಿಸಿದ್ದಾರೆ. ಸಂಪಾದಿಸಿದ್ದಾರೆ. ಸಂಪಾದಿಸುತ್ತಿರುತ್ತಾರೆ. 
ಏಕೆಂದರೆ ಎಲ್ಲರೂ ಮೂಲತಃ ಭಾರತೀಯರು. ನಮ್ಮಲ್ಲಿ ನೀಡುವ & ಪಡೆಯುವ ಅಲ್ಲಗಳೆಯಲಾಗದ ಅವಶ್ಯಕತೆ ಇದೆ. 
  • ರಾಜಕೀಯ ಪುಢಾರಿಗೆ ಮುಂದಿನ ಚುನಾವಣೆ ಗೆಲ್ಲಬೇಕು. ಒಳ್ಳೆಯ ಕೆಲಸ ಮಾಡಿ ಮುಂದಿನ ಚುನಾವಣೆ ಗೆಲ್ಲಲು ಅವರಪ್ಪ - ಅಮ್ಮಂದಿರು ಹೇಳಿ ಕೊಟ್ಟಿಲ್ಲವಲ್ಲ !!
  • ದೇಶದ ಅತ್ಯುನ್ನತ ಅಧಿಕಾರಿಗಳಿಗೂ ಹಣ ಮಾಡುವ ದುರಾಸೆ. ಅಧಿಕಾರಮತ್ತರಾಗಿದ್ದಾಗ ಅವರ ದಿನಿತ್ಯದ ಪ್ರತಿ ಕ್ಷಣವೂ ಲಕ್ಸುರಿ ಯಾಗೇ ಇರಬೇಕು ಎನ್ನುವ ಅತ್ಯಾಸೆ. ತಾವಷ್ಟೇ ಅಲ್ಲ. ಹೆಂಡತಿ ಮಕ್ಕಳು ಕೂಡ.( ಇದು ಭ್ರಷ್ಟಾಚಾರವಲ್ಲ. ಆದರೆ ಕೆಲವೊಮ್ಮೆ ಅವರು ತೋರಿಸುವ ಸಣ್ಣತನ ನೋಡಿ : ಸಿ ಗುಂಪಿನ ನೌಕರರಿಗೆ ವೈದ್ಯಕೀಯ ವೆಚ್ಚ ಮರುಪಾವತಿ ಯಲ್ಲಿ ಕೆಲವು ಚಿಕಿತ್ಸೆಗಳಿಗೆ ಮಾತ್ರ ಮರುಪಾವತಿ ಮಾಡಲಾಗುತ್ತದೆ. ಆದರೆ ಮೇಲಿನ ಅಧಿಕಾರಿಗಳಿಗೆ  ಒಂದು ಸಣ್ಣ 3 ರೂಪಾಯಿಯ ಮಾತ್ರೆಗೂ ಮರುಪಾವತಿ ಇರುತ್ತದೆ. ಆದರೆ ವಿಪರ್ಯಾಸವೆಂದರೆ : ನೂರಿನ್ನೂರು ರೂಪಾಯಿ ಮಾತ್ರ ಇದ್ದರೆ ಸಾಮಾನ್ಯ ನೌಕರರು ಮರುಪಾವತಿಗೆ ಅರ್ಜಿಯೇ ಸಲ್ಲಿಸೋದಿಲ್ಲ. ಅದೇ ಮೇಲಿನವರು ಆ ಮೂರು ರೂಪಾಯಿಯ ಮಾತ್ರಯನ್ನೂ ಬಿಡೋದಿಲ್ಲ. ಇದು Joke ಅಂತ ಸೃಷ್ಟಿಸಿ ಹೇಳಿದ್ದಲ್ಲ. ನೈಜ ಉದಾಹರಣೆಗಳಿದಾವೆ. ಇಂಥ ಸಣ್ಣತನ ತೋರಿಸಿ ತಮ್ಮ ಹಣಕ್ಕೆ ಆಣೆಕಟ್ಟು ಕಟ್ಟುವ ಬುದ್ಧಿ ಇರಬೇಕಾದರೆ, ಸರಕಾರದ ಹಣವನ್ನ ತಮ್ಮ ತಿಜೋರಿಗೆ ತಿರುಗಿಸುವ ಕಾಲುವೆ ತೋಡಲು ಹಿಂಜರಿಯುವರೇ ಅನ್ನುವುದು ಉದಾಹರಣೆಯ ಔಚಿತ್ಯ. )
  • ಸಾಮಾನ್ಯ ಕಚೇರಿ ನೌಕರರಿಗೂ ಹಣದ ಅವಶ್ಯಕತೆಯಿದೆ. ಕಾರಣ ಹಾಸಿಗೆಗೆ ತಕ್ಕಷ್ಟು ಕಾಲು ಚಾಚುವ ಹವ್ಯಾಸ ಇಲ್ಲದೇ ಇರುವುದು. ಸಂಬಳ ಸಾಲಲ್ಲ. ಭ್ರಷ್ಟಾಚಾರ ಸುಲಭ ದಾರಿ.
  • ಇತರೆ ವರ್ಗಕ್ಕೆ ಸೇರುವವನಿಗೆ ಸಕಾಲದಲ್ಲಿ ಕೆಲಸ ಆಗುತ್ತದೋ ಇಲ್ಲವೋ ಎನ್ನುವ ಆತಂಕವೇ ಭ್ರಷ್ಟಾಚಾರಕ್ಕೆ ಹೆದ್ದಾರಿ.
( ಇದು ಸಾಮಾನ್ಯವಾದ ಚಿತ್ರಣ. ಎಲ್ಲರೂ ಹಾಗೇ ಅಂತ ಆರೋಪ ಮಾಡಲಾಗಿದೆ ಅಂತ ತಿಳಿಯುವುದು ಬಾಲಿಶ )
  • ಕರ್ನಾಟಕದ ಪ್ರಸ್ತುತ ಬಿ.ಜೆ.ಪಿ. ಚುನಾವಣೆಗೆ ಹೋಗುವಾಗ : " ನೀವು 50 ವರ್ಷಗಳಲ್ಲಿ ಮಾಡದೇ ಇರುವುದನ್ನ ನಾವು ಮಾಡಿ ತೋರಿಸುತ್ತೇವೆ " ಎಂದು ಕಾಂಗ್ರೆಸ್ ಗೆ ಹಾಕಿದ ಸವಾಲಿನ ಅರ್ಥ ಇಡೀ ಕರ್ನಾಟಕದ ಜನತೆ ಮನಗಂಡಿದ್ದಾರೆ. 
ವ್ಹಾ !! ಕೇವಲ 30 ತಿಂಗಳ ಭ್ರಷ್ಟಾಚಾರದ ಪ್ರಖರತೆ ಎಷ್ಟಿದೆ ಅಂದ್ರೆ  ಹಿಂದಿನ 60 ವರ್ಷಗಳ ಭ್ರಷ್ಟಾಚಾರ ಇತಿಹಾಸವೇ ಕಾಣದಾಗಿದೆ. ಅಷ್ಟೊಂದು ಕಾಂತಿಯುತ ನಾವು ಇಷ್ಟಪಟ್ಟು ಆರಿಸಿದ ಸರ್ಕಾರದ ಸಾಧನೆ. ಒಬಾಮಾ ಹೇಳಿದ್ದರು : Yes We Can ! ಅದನ್ನ ಶ್ರೀ ಯಡಿಯೂರಪ್ಪನವರು ಕೃತಿಗಿಳಿಸಿ ಕೃತಾರ್ಥರಾಗಿದ್ದಾರೆ. ಮತದಾರ ಬಂಧುಗಳನ್ನೂ ಕೃತಾರ್ಥರನ್ನಾಗಿಸಿದ್ದಾರೆ. ದೊರೆಯೇ ಈ ದಾರಿ ಹಿಡಿದಿರಬೇಕಾದರೆ ಇನ್ನು ಮಂತ್ರಿಗಳ, ಅಧಿಕಾರಿಗಳ ದಾರಿ ಸುಗಮಾತಿ ಸುಗಮ.

ಇಂತಹ ನೂರಾರು ಹಗರಣಗಳು (ಬೆಳಕಿಗೆ ಬಂದವುಗಳು) ಕಾಣಸಿಗುತ್ತವೆ. ಕಳೆದ ಐದಾರು ತಿಂಗಳಲ್ಲಿ ಎಷ್ಟೋ ಹಗರಣಗಳು ಬೆಳಕಿಗೆ ಬಂದವು. ಐ.ಪಿ.ಎಲ್. ಹಗರಣ, ಕಾಮನ್ ವೆಲ್ತ್ ನಲ್ಲಿ ಅವ್ಯವಹಾರ, ಆದರ್ಶ ಹೌಸಿಂಗ್ ಸೊಸೈಟಿ ಹಗರಣ, ಟೆಲಿಕಾಂ ತರಂಗಾತರಗಳ ಹಂಚಿಕೆಯಲ್ಲಿ ಹಗರಣ... ಇಷ್ಟೇ ಅಲ್ಲ  ನ್ಯಾಯಾಂಗ ವ್ಯವಸ್ಥೆಯಲ್ಲೂ ಇವೇ ತುಂಬಿಕೊಂಡಿವೆ. ಕರ್ನಾಟಕದ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯ ನ್ಯಾಯಾಧೀಶರು ಸಾವಿರಾರು ಕೋಟಿ ರೂ.ಗಳ ಅವ್ಯವಹಾರದಲ್ಲಿ ಸಿಲುಕಿದ್ದಾರೆ.

ಭ್ರಷ್ಟಾಚಾರ ನಿರ್ಮೂಲನೆ ಮಾಡಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕೆ 88 ನೇ ಸ್ಥಾನ. ಇದು ನಿಜವಾಗಿಯೂ ನಾಚಿಕೆಗೇಡಿನ ಸಂಗತಿ. ಹಗರಣಗಳು ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಮಾತ್ರ ಸೀಮಿತವಾಗಿಲ್ಲ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ, ಗ್ರಾಮ ಪಂಚಾಯತಿಗಳಲ್ಲೂ ಭ್ರಷ್ಟಾಚಾರದ ಪ್ರಕರಣಗಳು ಕಾಣಸಿಗುತ್ತವೆ. ಅಭಿವೃದ್ಧಿಯ ಹಾದಿಯಲ್ಲಿ ಇವುಗಳು ಅಡೆತಡೆಗಳಾಗಿವೆ.



ಜಗತ್ತಿನ ಅತ್ಯುತ್ತಮ ಹಣಕಾಸು ತಜ್ಞರು, ರಾಜಕೀಯ ಚಿಂತಕರು ... ಇತ್ಯಾದಿಯವರು ನಮ್ಮ ದೇಶದಲ್ಲೂ ಇದ್ದರೂ ಅವರು ಪಡುವ ಪ್ರಯತ್ನಕ್ಕೆ ಸಹಕಾರ ನೀಡಬೇಕಿರುವುದು ಸರಕಾರವೇ ತಾನೇ ? ಅಂಥ ತಜ್ಞರು ಅನೇಕ ಸಲಹೆಗಳನ್ನೂ ನೀಡಿದ್ದಾರೆ. ಅದರಲ್ಲಿ ZERO CURRENCY ಕೂಡ ಒಂದು. ಈ ಝೀರೋ ಕರೆನ್ಸಿ ಬಗ್ಗೆ ನಿಮಗೇನಾದ್ರೂ ಗೊತ್ತಾ ?



 
 : ಪವನ್

Nov 15, 2010

ಹೇ ಪುಸ್ತಕ ಹಬ್ಬ

0 ಪ್ರತಿಕ್ರಿಯೆಗಳು
ಚುಟುಕು ಸುದ್ದಿ : ಕೇರಳದಲ್ಲಿ ನಿನ್ನೆ ಮುಕ್ತಾಯಗೊಂಡ Hay Festival 
ಸುದ್ದಿಯ ಒಳನೋಟ :
 
  • ಯುನೈಟೆಡ್ ಕಿಂಗಡಮ್ ನ ಭಾಗವಾದ ವೇಲ್ಸ್ ( ಇಂಗ್ಲೆಂಡ್ & ಸ್ಕಾಂಟ್ಲೆಂಡ್ ಉಳಿದೆರಡು ಭಾಗಗಳು ) ನ ಪಟ್ಟಣ Hay-on-Wye ಯನ್ನು "ಪುಸ್ತಕಗಳ ಊರು" ಎಂದು ಕರೆಯುತ್ತಾರೆ.
  • Wye ಹೆಸರಿನ ನದಿಯ ಪೂರ್ವ ದಂಡೆಯ ಮೇಲಿರುವ ಈ ಊರಿಗೆ Hay ಅಂತನೇ ಹೆಸರು. ಆದರೆ ನದಿ ತೀರವನ್ನ ಸೇರಿಕೊಂಡು ಇಂಗ್ಲೀಷರು ಹಾಗೆ ಕರೀತಾರೆ.
  • ಹಿನ್ನೆಲೆ :
    ಹಿಂದೆ ಇಂಗ್ಲೀಷರು ಈ ಊರನ್ನು  Hay-on-Wye ಎಂದು ಕರೆದರೆ ವೇಲ್ಸ್ ದವರು Y Gelli ಎಂದು ಕರೆಯುತ್ತಿದ್ದರಂತೆ. ಇಂಗ್ಲೀಷ ಹಾಗೂ ವೇಲ್ಸ್ ರಾಜರುಗಳಿಗೆ ಈ ಪ್ರದೇಶ ಕಲಹ ಕೇಂದ್ರವಾಗಿತ್ತು. ವೇಲ್ಸ್ ನ ದಾಳಿಕೋರರನ್ನು ತಡೆಗಟ್ಟಲು ಇಂಗ್ಲೆಂಡಿನ ರಾಜ(King Offa) ದೊಡ್ಡ ಕಂದಕವನ್ನು ನಿರ್ಮಾಣ ಮಾಡಿದನು. ಮೇಲಿಂದ ಮೇಲೆ ಈ ಎರಡೂ ದೇಶಗಳ ನಡುವೆ ನಡೆದ ಯುದ್ಧಗಳಿಂದಾಗಿ ೧೨೧೬ ರಲ್ಲಿ ಅದರ ಕೋಟೆಯು ಒಡೆಯಿತು.  ನಂತರ ಉಳಿದ ಅವಶೇಷಗಳನ್ನು ವೇಲ್ಸ್ ನ ರಾಜಕುಮಾರ ಸುಡುತ್ತಾನೆ.

    ಇಂಗ್ಲೆಂಡ್ ಹಾಗೂ ವೇಲ್ಸ್ ನಡುವಣ ಕಲಹ ಮುಕ್ತಾಯವಾಯಿತು. ಆ ಊರಿನ ಮಹತ್ವ ಕಡಿಮೆಯಾಯಿತು; ಕ್ರಮೇಣ ಮರೆತೂ ಹೋಯಿತು. ಮುಂದೆ, ಅಲ್ಲಿ ಬಿದ್ದಂತಹ ಅವಶೇಷಗಳ ಸಹಾಯದಿಂದ  ೧೯೬೦ ರಲ್ಲಿ ಒಂದು ದೊಡ್ಡ ಭವನ  ನಿರ್ಮಾಣವಾಯಿತು. ಅದೇ ಸಮಯದಲ್ಲಿ ಆಕ್ಸಫರ್ಡ್ ನ ಪದವೀಧರ 'ರಿಚರ್ಡ ಬೂಥ್' ಎಂಬುವನು ಒಂದು ಪುಸ್ತಕ ಮಳಿಗೆಯನ್ನು ತೆರೆಯುತ್ತಾನೆ. ಗ್ಯಾರೇಜ್ ಕೆಲಸಗಾರನ ಮಗನಾದ ಈತನು ಕ್ರಮೇಣವಾಗಿ ತನ್ನ ಊರು ನಶಿಸುತ್ತಿರುವುದನ್ನು ಗಮನಿಸುತ್ತಾನೆ. ಪುಸ್ತಕ ಅಂಗಡಿಯನ್ನು ಬೆಳೆಸುವುದಕ್ಕಾಗಿ ಶ್ರಮಪಟ್ಟು ಕೆಲಸ ಮಾಡುತ್ತಾನೆ. ಹೊಸ ಅಂಗಡಿಗಳನ್ನು ತೆರೆಯಲು ಸಾರ್ವಜನಿಕರಿಗೆ ಆಹ್ವಾನವೀಯುತ್ತಾನೆ. 30 ಪುಸ್ತಕ ಅಂಗಡಿಗಳು ಎದ್ದು ನಿಲ್ಲುತ್ತವೆ. ಈ ಊರಿನ ಜನಸಂಖ್ಯೆ ೧೫೦೦ ಮಾತ್ರ.
ಕನಕಕುನ್ನು ಅರಮನೆ
  • ಮುಂದೆ 1988 ರಲ್ಲಿ ಮೊದಲಬಾರಿಗೆ ಪೀಟರ್ ಫ್ಲಾರೆನ್ಸ್ ಎಂಬ ವ್ಯಕ್ತಿ ಆ ಊರಿನಲ್ಲಿ ಪುಸ್ತಕ ಹಬ್ಬ( Hay Festival )ವನ್ನ ಆಯೋಜಿಸುತ್ತಾನೆ.
  • ಪುಸ್ತಕ ಮೇಳವಾಗಿ ಪ್ರಾರಂಭಗೊಂಡದ್ದು ನಂತರದ ದಿನಗಳಲ್ಲಿ ಸಾಹಿತ್ಯಿಕ ಚರ್ಚಾ ಗೋಷ್ಠಿಯ ರೂಪ ಪಡೆಯುತ್ತದೆ. ಹೀಗಾಗಿ ಒಂದು ರೀತಿಯ ಸಾಹಿತ್ಯ ಸಮ್ಮೇಳನ ಎನಿಸಿಕೊಂಡಿದೆ.
ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನಗಳು ಒಂದು ಭಾಷೆಗೆ ಸೀಮಿತವಾಗಿರುತ್ತವೆ. ಆದರೆ ಇಂಥ ವಿವಿಧ ಭಾಷೆಗಳ ಸಾಹಿತ್ಯಗಳನ್ನ ಮಿಳಿತಗೊಳಿಸುವ ಸಮ್ಮೇಳನಗಳು ನಮ್ಮಲ್ಲಿ, ಕರ್ನಾಟಕದಲ್ಲಿ ಕೂಡ ನಡೆದರೆ ಹೇಗೆ ? ವಿಚಾರ ಮಾಡಬೇಕಾದ ವಿಷಯ. ಅಲ್ಲವೇ ? ಆಂಗ್ಲ ಭಾಷೆಯ ಲಾಲಿತ್ಯಕ್ಕೆ ಮರುಳಾಗಿರುವ ನಾವುಗಳು ಸದರಿ ಭಾಷೆಯ Coverage Area ಹೆಚ್ಚಿರುವುದನ್ನ ಮನಗಂಡು ನಮ್ಮ ಭಾಷೆಯ ಸಮಾನಾರ್ಥಕ ಪದಗಳನ್ನ ದಿನಕ್ಕೆ ಹತ್ತರಂತೆ ಪಕ್ಕಕ್ಕಿಟ್ಟು ಅದೇ ವೇಗದಲ್ಲಿ ದಿನಕ್ಕೆ ಹತ್ತರಷ್ಟು ಹೊಸ ಆಂಗ್ಲ ಪದಗಳನ್ನ ಎತ್ತಿಕೊಂಡು ನಮ್ಮ ಜನ - ಪದ - ಕೋಶ ( ಆಡುಭಾಷೆಯ ಪದಕೋಶ )ಕ್ಕೆ ಸೇರಿಸಿಕೊಳ್ತಾ ಇದೀವಿ. ಮುಂಬರುವ 77ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಗೌರವಾಧ್ಯಕ್ಷರಾಗಿರುವ ಜಿ.ವೆಂಕಟಸುಬ್ಬಯ್ಯನವರು ನಿಘಂಟು ತಜ್ಞರು. ಇವರು ಸಿದ್ಧಪಡಿಸಿರುವ ನಿಘಂಟುಗಳು ಕನ್ನಡ ಭಾಷೆಯ ಅಮೂಲ್ಯ ರತ್ನಗಳು. ಆದರೆ ಕರ್ನಾಟಕದ ಜನಸಾಮಾನ್ಯನಿಗೆ ಈ ರತ್ನಗಳು ದುಬಾರಿಯಾಗಿ ಪರಿಣಮಿಸಿವೆ. ಅವನಿಗೆ ಬಳಸಲು ಅಗ್ಗದ ಪದಗಳೇ ಕೈಗಟುಕೋದು. ಹೀಗಾಗಿ ವೆಂಕಟಸುಬ್ಬಯ್ಯನವರು ಕನ್ನಡದ ನಿಘಂಟುಗಳಲ್ಲಿ ದಿನಿತ್ಯದ ಬಳಕೆಯ ಆಂಗ್ಲಪದಗಳಿಗೆ ಸಮನಾಗುವ ಹಾಗೆ ಎಷ್ಟೇ ಸುಂದರ ಪದಗಳನ್ನ ಜೋಡಿಸಿ ಕೊಟ್ಟಿದ್ದರೂ ಕೂಡ ನಾವು ( ಜನಸಾಮಾನ್ಯರು ) ಮಾಡುವುದು ಆಂಗ್ಲ ಪದಗಳ ಬಳಕೆಯನ್ನೇ. ಕಾರಣ ಸರಳವಾಗಿದೆ : ಜಾಗತೀಕರಣದ ಈ ದಿನಗಳಲ್ಲಿ ನಮ್ಮ ಭಾಷೆಯೂ ನಮ್ಮನ್ನ ಮೇಲೆ ಕೊಂಡೊಯ್ಯಲು ಸಹಾಯ ಮಾಡುತ್ತದೆ. ಹೀಗಿರುವಾಗ ಈ Global Village ನಲ್ಲಿ ಅತಿ ಹೆಚ್ಚು ಜನರಿಗೆ ಅರ್ಥವಾಗುವ ಭಾಷೆಯ ಕಡೆ ಒಲವು ಮೂಡುವುದು ತಲೆ ನೆಟ್ಟಗಿರುವ ಎಲ್ಲ ಮನುಷ್ಯರ ಸಹಜ ಗುಣ. ಆದರೆ ಇದೆಲ್ಲವನ್ನೂ ಮೀರಿ Global Village ನಲ್ಲಿ ಕರ್ನಾಟಕವೆಂಬ ನಮ್ಮದೇ ಕೇರಿಯಿದೆ. ಅಲ್ಲಿ ಕನ್ನಡವೇ ಸಾರ್ವಭೌಮ. ಅಲ್ಲಿಯಾದರೂ ನಾವು ಕನ್ನಡ ಬಳಸದೇ ಇದ್ದರೆ, ಮುಂದೊಂದು ದಿನ ನಮ್ಮ ಕೇರಿಯ ಭಾಷೆಗೆ ಕನ್ನಡ(US)  ಅಂತಲೋ , ಕನ್ನಡ(UK) ಅಂತಲೋ .. ನಾಮಕರಣವಾಗುವ ದಿನ ದೂರವಿಲ್ಲ. ಅಲ್ಲವೇ ?!!
  • ತದನಂತರ ಸದರಿ ಪುಸ್ತಕ ಹಬ್ಬ ಕೇವಲ  ಹೇ ನಗರಕ್ಕೆ ಸೀಮಿತವಾಗಿರದೇ ಜಗತ್ತಿನ ವಿವಿಧ ನಗರಗಳಲ್ಲಿಯೂ ನಡೆಯುತ್ತಾ ಬಂದಿದೆ & ಆ ನಗರಗಳಲ್ಲಿಯೂ ನಿರಂತರವಾಗಿ ಸಾಗುತ್ತಾ ಇದೆ.
  • ಪ್ರತಿ ವರ್ಷ ನಡೆಯುವ ಈ ಹಬ್ಬಕ್ಕೆ ಒಂದು ಲಕ್ಷಕ್ಕೂ ಅಧಿಕ ಜನರು ಬರುತ್ತಾರೆ. ಇದರಿಂದಾಗಿ ಈ ನಗರವು "Town of Books"  ಎಂದು ಕರೆಸಿಕೊಂಡಿದೆ. 
  • ಗಾರ್ಡಿಯನ್, ಟೆಲೆಗ್ರಾಫ್,  ದಿ ಸಂಡೇ ಟೈಮ್ಸ್ .. ನಂತಹ ಸುಪ್ರಸಿದ್ಧ ಪತ್ರಿಕೆಗಳು ಸದರಿ ಪುಸ್ತಕ ಹಬ್ಬದ Sponsor ಗಳಾಗಲು ನಾಮುಂದು ತಾಮುಂದು ಎಂದಿವೆ. 
  • ಇದೀಗ ಪ್ರಪ್ರಥಮ ಬಾರಿಗೆ 'Hay Festival' ಭಾರತಕ್ಕೆ ಕಾಲಿಟ್ಟಿದ್ದು, ಕೇರಳದ ಕನಕಕುನ್ನು(kanakakunnu) ಅರಮನೆಯಲ್ಲಿ  ನವೆಂಬರ್ ೧೨ ರಿಂದ ೧೪ ರ ವರೆಗೆ ಜರುಗಿತು.
  • ಭಾರತದ ಅವತರಣಿಕೆಯನ್ನ The Week ನಿಯತಕಾಲಿಕ Sponsor ಮಾಡಿತ್ತು.
  • ಈ ಹಬ್ಬದಲ್ಲಿ 15 ಅಂತರರಾಷ್ತ್ರೀಯ,10 ಭಾರತೀಯ ಹಾಗೂ 15 ಸ್ಥಳೀಯ ಲೇಖಕರು ಪಾಲ್ಗೊಂಡಿದ್ದರು. ಚಿತ್ರ ನಿರ್ಮಾಪಕ ಹಾಗೂ ಲೇಖಕ ಆಡೂರ ಗೋಪಾಲಕೃಷ್ಣನ್, ಸಾಹಿತ್ಯ ಅಕ್ಯಾಡೆಮಿ ಪುರಸ್ಕೃತ ಒ.ಎನ್.ವಿ. ಕುರುಪ್, ಐರ್ಲ್ಯಾಂಡಿನ ಪ್ರಸಿದ್ಧ ಸಂಗೀತಗಾರ-ಲೇಖಕ ಬಾಬ್ ಗೆಲ್ಡಾಫ್, ವಿಕ್ರಂ ಸೇಠ್, ಶಶಿ ಥರೂರ್ .. ಇವರುಗಳು ಹಾಜರಿದ್ದ ಪ್ರಮುಖರು.  
  • ಏಶಿಯನ್ನರ ಹಾಗೂ ಪಾಶ್ಚಿಮಾತ್ಯರ ನಡುವೆ ಹೊಸ ವಿಚಾರಗಳ ಚರ್ಚೆಗೆ ವೇದಿಕೆ ನಿರ್ಮಾಣ ಮಾಡುವುದೇ ಭಾರತದಲ್ಲಿ ಆಯೋಜಿಸಲಾಗಿದ್ದ ಈ ಹಬ್ಬದ ಮುಖ್ಯ ಉದ್ದೇಶ.
  • ಕೇರಳ ಹೇ ಪುಸ್ತಕ ಮೇಳ ದ ಅಧಿಕೃತ ವೆಬ್ ವಿಳಾಸವನ್ನ ಒಮ್ಮೆ ಪರೀಕ್ಷಿಸಿ : ಇಲ್ಲಿ ಕ್ಲಿಕ್ಕಿಸಿ
  • ಕೇರಳದ ಜೊತೆಗೆ ನಡೆದ ಇತರೆ ಹೇ ಹಬ್ಬಗಳ ಪಟ್ಟಿ ಇಂತಿದೆ :
  1. Hay Festival Wales
  2. Hay Festival Zacatecas
  3. Brecon Jazz
  4. Hay Festival Segovia
  5. Storymoja Hay Festival Nairobi
  6. Hay Festival Maldives
  7. Hay Festival Cartagena
  8. Hay Festival Alhambra
  9. Hay Festival Belfast
  10. Hay Festival Winter Weekend
  • ಆದರೆ ಇದೇ ಸಮಯದಲ್ಲಿ ಆಯೋಜಿಸಲಾಗಿರುವ ಬೆಂಗಳೂರು ಪುಸ್ತಕ ಹಬ್ಬದಲ್ಲಿ ಇಂಥ ಚಟುವಟಿಕೆಗಳಿಗೆ ಆಸ್ಪದ ಇಲ್ಲದಿರುವುದನ್ನ ಸಂಘಟಕರು ಗಮನಿಸಿ ಅದಕ್ಕೂ ಅವಕಾಶ ಮಾಡಿಕೊಟ್ಟರೆ ಒಳಿತಲ್ಲವೇ ?!!  

 
 : ಪವನ್

Nov 10, 2010

ರಾಷ್ಟ್ರೀಯ ಸ್ವಯಂ ಸೇವಕ ಸಂಘ

0 ಪ್ರತಿಕ್ರಿಯೆಗಳು
ಚುಟುಕು ಸುದ್ದಿ : ಆರೆಸ್ಸೆಸ್ - ಕಾಂಗ್ರೆಸ್ ವಾಕ್ ಸಮರ


ಸುದ್ದಿಯ ಒಳನೋಟ :

  • ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್ ವಸಾಹತುಶಾಹಿ ವಿರುದ್ಧ ಮತ್ತು ಮುಸ್ಲಿಂ ನಾಯಕರು ಬಯಸಿದ್ದ ರಾಷ್ಟ್ರವನ್ನು ಒಡೆಯುವ ಹುನ್ನಾರದ ವಿರುದ್ಧ ಹಿಂದೂಗಳಲ್ಲಿ ಐಕ್ಯತೆಯನ್ನು ಮೂಡಿಸಿ ಭಾರತೀಯ ಸಂಸ್ಕೃತಿ ಜಗದಗಲ ಹಬ್ಬಬೇಕೆನ್ನುವ ಸದುದ್ದೇಶದಿಂದ 1925ರ ವಿಜಯದಶಮಿಯಂದು ಡಾ. ಕೇಶವ ಬಲಿರಾಮ ಹೆಡಗೆವಾರರು ನಾಗಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸ್ಥಾಪಿಸಿದರು.
  • ಸಂಘ ಸ್ಥಾಪನೆಗೂ ಮುಂಚೆ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಕೊಡುವ ನಿಟ್ಟಿನಲ್ಲಿ & ರಾಷ್ಟ್ರಾಭಿಮಾನ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಂದೇ ಮಾತರಂ ಬರೆದ ಬಂಕಿಂ ಚಂದ್ರ ಚಟರ್ಜಿ ಅವರ ಉಪದೇಶಗಳನ್ನ ಪಾಲಿಸುವ ಉದ್ದೇಶದಿಂದ ( ಆನಂದ ಮಠ ಕಾದಂಬರಿ ಜ್ಞಾಪಿಸಿಕೊಳ್ಳಿ - ಮುಖ್ಯವಾಗಿ ಕಾದಂಬರಿಯಲ್ಲಿ  ತಿಳಿಸಲಾಗಿರುವ ಸ್ವಾತಂತ್ರ್ಯ ಸಾಧನೆಯ ಮಾರ್ಗವನ್ನ ಜ್ಞಾಪಿಸಿಕೊಳ್ಳಿ ) ಪ್ರಾರಂಭವಾದ ಅನುಶೀಲನ್ ಸಮಿತಿ & ಅದೇ ಆತ್ಮ ಹೊಂದಿದ್ದ ಜುಗಾಂತರ್ (ಯುಗಾಂತರ್) ಎಂಬೆರಡು ಸಂಸ್ಥೆಗಳಿಗಾಗಿ ಹೆಡಗೆವಾರ್ ಸದಸ್ಯರಾಗಿದ್ದರು.
  • ಕೆಲವರು ಈ ವಿಪರ್ಯಾಸವನ್ನ Quote ಮಾಡಬಹುದು. : 
ಕಾಂಗ್ರೆಸ್ ನ ಅಧೀಕ್ಷಕಿಯನ್ನ ಸಿ.ಐ.ಎ. ಏಜೆಂಟ್ ಎಂದು ನಿಂದಿಸಿದ್ದಾರೆ ಆರೆಸ್ಸೆಸ್ ಸುದರ್ಶನ್, ಆದರೆ ಹೆಡಗೆವಾರ್ ಅವರು ಸಂಘ ಸ್ಥಾಪಿಸುವ ಮುಂಚೆ ಕೆಲದಿನ ಕಾಂಗ್ರೆಸ್ ಸದಸ್ಯರಾಗಿದ್ದರು. 
ಆದರೆ  ಅಂದಿನ ಕಾಂಗ್ರೆಸ್ಸೇ ಬೇರೆ. ಇಂದಿನ ಕಾಂಗ್ರೆಸ್ಸೇ ಬೇರೆ. ಅಂದಿನ ಕಾಂಗ್ರೆಸ್ ಏಕೈಕ ಉದ್ದೇಶ ಹೊಂದಿದ್ದು, ಅದು ಸ್ವಾತಂತ್ರ್ಯ ಸಾಧನೆಯಾಗಿತ್ತು. ಇಂದಿನ ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದ ಕಾಂಗ್ರಸ್ ಪಕ್ಷದ ಮುಂದುವರೆದ ಭಾಗ ಅಂತ ಯಾರಾದರೂ ಅಂದುಕೊಂಡಿದ್ದಲ್ಲಿ ಅವನಂತಹ ಮೂರ್ಖನೇ ಯಾರೂ ಇಲ್ಲ. ಹಾಗೇನಾದರೂ ಯಾರಾದರೂ ಪ್ರತಿಪಾದಿಸ ಹೊರಟಲ್ಲಿ, ದೇಶಕ್ಕಾಗಿ ತಮ್ಮ ಪ್ರಾಣವನ್ನ ಬಲಿದಾನಗೈದ ಹುತಾತ್ಮರ ಆತ್ಮಕ್ಕೆ ದ್ರೋಹ ಬಗೆದ ಹಾಗಲ್ಲವೇ ?
  • ಅಂದು ದೇಶವನ್ನ ವಿದೇಶೀ ಶಕ್ತಿಯಿಂದ ವಿಮೋಚನೆಗಾಗಿ ಕಾರ್ಯನಿರ್ವಹಿಸಿದ ಸಂಘ, ಇಂದು ಕಾಲಕ್ಕೆ ತಕ್ಕಂತೆ ಬದಲಾಗಿದ್ದು ತನ್ನ ಕಾರ್ಯಚಟುವಟಿಕೆಗಳ ವಿಸ್ತಾರಗಳನ್ನ ವಿಸ್ತರಿಸಿದೆ.
  • ಮುಖ್ಯವಾಗಿ ಸಮಾಜ ಸೇವೆ, ಸಂತ್ರಸ್ತರ ಪುನರ್ವಸತಿ, ಶಿಸ್ತು ಬದ್ಧ ಸಂಘಟನೆ, ಹಿಂದೂ ಸಂಸ್ಕೃತಿ ಪುನರುತ್ಥಾನ ..  ವಲಯಗಳಲ್ಲಿ ಸಂಘ ವ್ಯಾಪಿಸಿದೆ.
  • ಶಿಸ್ತಿಗೆ ಹೆಸರುವಾಸಿಯಾದ ಆರ್.ಎಸ್.ಎಸ್. ನ ಸಾವಿರಾರು ಕಟಿಬದ್ಧ ಸ್ವಯಂ ಸೇವಕರು ದೇಶದ ಮೂಲೆ ಮೂಲೆಗಳಲ್ಲಿ ನಿಸ್ವಾರ್ಥ ಸೇವೆಯನ್ನು ನಡೆಸುತ್ತಿದ್ದಾರೆ. ಗುಜರಾತಿನಲ್ಲಿ 2002ರಲ್ಲಿ ಭೂಕಂಪ ಸಂಭವಿಸಿದಾಗ, 2004 ರಲ್ಲಿ ಸುನಾಮಿ ದಾಂಗುಡಿ ಇಟ್ಟಾಗ.... ಹೀಗೆ ದೇಶಕ್ಕೆ ಆಪತ್ತು ಎದುರಾದಾಗಲೆಲ್ಲಾ ಗಣವೇಶಧಾರಿಗಳು ಸೇವೆ ಸಲ್ಲಿಸಿದ್ದಾರೆ. ಕಳೆದ ವರ್ಷ ಕರ್ನಾಟಕದಲ್ಲಿ ಜಲಪ್ರಳಯವಾಗಿ ಸೂರು ಕಳೆದುಕೊಂಡವರಿಗೆ ಬಾಗಲಕೋಟ ಜಿಲ್ಲೆಯ ಗುಳೇದಗುಡ್ಡದ ಹತ್ತಿರ 77 ಮನೆಗಳನ್ನು ನಿರ್ಮಿಸಿ ಕಳೆದ ವಿಜಯದಶಮಿಯಂದು ಹಂಚಿದ್ದಾರೆ. (ಇನ್ನೂ ಹೆಚ್ಚಿನ ಮನೆಗಳನ್ನು ನಿರ್ಮಿಸುವ ಯೋಜನೆಯಿಟ್ಟುಕೊಂಡಿದ್ದಾರೆ.) ಸ್ವಲ್ಪ ಕೆಲಸ ಮಾಡಿ, ಜಾಸ್ತಿ ಪ್ರಚಾರ ಗಿಟ್ಟಿಸಿಕೊಳ್ಳುವ ಕೆಲವು NGO ಗಳು ಸಂಘವನ್ನ ನೋಡಿ ಕಲಿಯಬೇಕಿರುವುದು ಬಹಳವಿದೆ.
  • 85 ವರ್ಷಗಳ ಇತಿಹಾಸವಿರುವ ಆರ್.ಎಸ್.ಎಸ್. ಹಲವಾರು ಕ್ಷೇತ್ರಗಲ್ಲಿ ಅಂಗ ಸಂಸ್ಥೆಗಳನ್ನು ಹೊಂದಿದೆ. 
  1. ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾಭಾರತಿ
  2. ವಿದ್ಯಾರ್ಥಿಗಳ ಸಂಘಟನೆಗಾಗಿ ಎ.ಬಿ.ವಿ.ಪಿ.
  3. ರಾಜಕೀಯದಲ್ಲಿ ಜನಸಂಘ ( ಜನಸಂಘ ಈಗ ಅಸ್ತಿತ್ವದಲ್ಲಿಲ್ಲ. ಆದರೆ ಮುಂದುವರೆದು ಬಿ.ಜೆ.ಪಿ. ಹೆಸರಿಟ್ಟುಕೊಂಡ ಮೇಲೆ, ಜನಸಂಘದ ಅನೇಕ ತತ್ವಗಳನ್ನ ಮರೆತಿದೆ ಅನ್ನುವುದು ಎಲ್ಲರಿಗೂ ಮನವರಿಕೆಯಾಗಿ, ಬಿ.ಜೆ.ಪಿ. ಆರೆಸ್ಸೆಸ್ Ideology ಗಳನ್ನ ಬೆಂಬಲಿಸುವ ಪಕ್ಷ ಮಾತ್ರವಾಗಿ ಹೋಗಿದೆ )
  4. ವಿಚಾರವಂತರಿಗಾಗಿ ಭಾರತೀಯ ವಿಚಾರ ಕೇಂದ್ರ
  5. ಕಲಾ ರಂಗಕ್ಕಾಗಿ ಸಂಸ್ಕಾರ ಭಾರತಿ
  6. ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಪುಸ್ತಕಗಳ ಮುದ್ರಣಕ್ಕಾಗಿ ರಾಷ್ಟ್ರೋತ್ಥಾನ ಪರಿಷತ್
  7. ಸ್ವದೇಶಿ ವಸ್ತುಗಳ ಬಗ್ಗೆ ಜಾಗೃತಿಗಾಗಿ ಸ್ವದೇಶಿ ಜಾಗರಣ ಮಂಚ್
  8. ಐ.ಟಿ. ಟೆಕ್ಕಿಗಳಲ್ಲಿ ರಾಷ್ಟ್ರಜಾಗೃತಿ ಮೂಡಿಸಿ ಅವರ ಸಹಾಯವನ್ನೂ ಸಂಘಟನೆಗೆ ಪಡೆಯುವ ನಿಟ್ಟಿನಲ್ಲಿ ರಚಿತವಾಗಿರುವ IT ಮಿಲನ್... 
ಈ ರೀತಿಯಾದಂತಹ ಹಲವಾರು ಸಂಘ ಪರಿವಾರಗಳಿಂದ ಕೂಡಿಕೊಂಡು ತಾಯಿ ಭಾರತಿಗೆ ನಿಷ್ಕಲ್ಮಶ ಸೇವೆಯನ್ನ ಆರ್.ಎಸ್.ಎಸ್. ಮಾಡುತ್ತಿರುವುದನ್ನ ನಾವೆಲ್ಲ ಒಪ್ಪಿಕೊಳ್ಳಬೇಕು.

    • ಹೆಮ್ಮರವಾಗಿ ಬೆಳೆದುನಿಂತ ಆರ್.ಎಸ್.ಎಸ್. ಮೇಲಿಂದ ಮೇಲೆ ಸಂಘ ವಿರೋಧಿಗಳಿಂದ ಸಂಘರ್ಷಗಳನ್ನೂ ಎದುರಿಸಿದೆ.೧೯೪೮ ರಲ್ಲಿ ಗಾಂಧಿ ಹತ್ಯೆ ಮಾಡಿದೆ ಎಂದು ಸಂಘವನ್ನು ಅಂದಿನ ಕೇಂದ್ರ ಸರ್ಕಾರ ನಿಷೇಧಿಸಿತ್ತು. ಗಾಂಧಿ ಹತ್ಯೆಗೂ ಸಂಘಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದಾಗ ಸರ್ಕಾರ ತಲೆ ತಗ್ಗಿಸುವಂತಾಯಿತು.
    • ಇಲ್ಲಿಯವೆರೆಗೆ ಬ್ರಿಟಿಷ್ ರಾಜ್ 01 ಸಾರಿ & ಭಾರತ ಸರ್ಕಾರ 02 ಬಾರಿ ಸಂಘಟನೆಯನ್ನ ನಿಷೇಧಿಸಿತ್ತು. 
    • ೧೯೯೮ ರಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿನ ನಿರೀಕ್ಷಿತ  ವಿರೋಧಗಳನ್ನು ಲೆಕ್ಕಿಸದೆ ಎರಡನೆಯ ಬಾರಿಗೆ ಪೋಖ್ರಾನ್ ಅಣು ಪರೀಕ್ಷೆಯನ್ನು ನಡೆಸಿದ್ದು, ೧೯೯೯ ರಲ್ಲಿ ಪಾಕಿಸ್ತನ ಕದನಕ್ಕೆ ಇಳಿದಾಗ ಅದನ್ನು ಹೊಡೆದೋಡಿಸಿದ್ದು, ಮುಂದೆ ಅದೇ ಪಾಕಿಸ್ತಾನದೊಂದಿಗೆ ಸ್ನೇಹ ಬಯಸಿ 'ಸ್ನೇಹಕೂ ಭದ್ಧ ಸಮರಕೂ ಸಿದ್ಧ' ಎಂದು ಹೇಳಿದ್ದು, ನಮ್ಮ ದೇಶದೊಂದಿಗೆ ಕಾಲುಕೆದರಿ ಜಗಳವಾಡಿ ಮಾತು ಬಿಟ್ಟಿದ್ದ ಚೀನಾದೊಂದಿಗೆ ಸ್ನೇಹ ಹಸ್ತ ಚಾಚಿದ್ದು, ಅಟಲ್ ಬಿಹಾರಿ ವಾಜಪೇಯಿಯವರು. ಇಂತಹ ಅಪ್ರತಿಮ ರಾಜಕಾರಣಿಯ ಹಿನ್ನೆಲೆ ಆರ್.ಎಸ್.ಎಸ್. ಸಂಘಟನೆಯ ಶಿಸ್ತಿನಲ್ಲಿ ಮಿಳಿತವಾಗಿರುವುದು ಸುಳ್ಳಲ್ಲ.
    • ಗುಜರಾತ್ ರಾಜ್ಯವನ್ನ ಅಭಿವೃದ್ಧಿಯ ಪಥಕ್ಕೆ ಕೊಂಡೊಯ್ದು ರಾಜ್ಯವನ್ನ ಭಾರತದ ನಂ.1 ರಾಜ್ಯವನ್ನಾಗಿಸಿರುವ ನರೇಂದ್ರ ಮೋದಿ ಕೂಡ ಆರೆಸ್ಸೆಸ್ ಅಂಗಳದಲ್ಲಿ ಆಡಿ ಬೆಳೆದವರು.
    • ಪ್ರತಿ ಧರ್ಮದವರೂ ತಮ್ಮ ಧರ್ಮದ ಏಳಿಗೆಗೆ, ಪುಸರುತ್ಥಾನಕ್ಕೆ .. ರಕ್ಷಿಸುವ ಒಂದು ಶಾಖೆಯನ್ನ ಹೊಂದಿರುವ ಹಾಗೆ ಹಿಂದೂ ಧರ್ಮದ ಶಾಖೆಯಾಗಿ ಆರೆಸ್ಸೆಸ್ ಇದೆ. ಮುಸ್ಲಿಂರೂ ತಮ್ಮ ಧರ್ಮಕ್ಕಾಗಿ ಸಂಘಟಿತರಾಗಿದ್ದಾರೆ. ಅಂತೆಯೇ ಕ್ರಿಶ್ಚನ್ನರೂ ಕೂಡ. ಈ ವಾದವನ್ನ ಪುರಸ್ಕರಿಸದೇ ಅನೇಕ ಜನ ಆರೆಸ್ಸೆಸ್ ಅನ್ನ ದೇಶದಲ್ಲಿ ಶಾಂತಿ ಕದಡುವ ಸಂಸ್ಥೆ ಎಂಬಂತೆ ಬಿಂಬಿಸಿ ತಮ್ಮ ಬುದ್ದಿಮಟ್ಟದ ಆಳವನ್ನ (?) ತೋರಿಸಿಕೊಡುತ್ತಿದ್ದಾರೆ. ಬರೀ ಶಾಂತಿಯಲ್ಲ ದೇಶವನ್ನೇ ಕಲಕುವ ಕೆಲಸ ಮಾಡಿದವರ ಬಗ್ಗೆ ಇಂಥವರ ದಿವ್ಯಮೌನ ಪ್ರಶ್ನಾರ್ಹ.
    • ಅಜ್ಮೇರ್ ದರ್ಗಾದಲ್ಲಿ ನಡೆದ ಬಾಂಬ್ ದಾಳಿ ಹಿನ್ನೆಲೆಯಲ್ಲಿ ಆರೆಸ್ಸೆಸ್ ಈಗ ವಿವಾದದ ಕೇಂದ್ರಬಿಂದುವಾಗಿದೆ. ಸತ್ಯ ಏನೇ ಇರಲಿ : ಪ್ರಕರಣಕ್ಕೆ ಕಾಂಗ್ರೆಸ್ ನೀಡುತ್ತಿರುವ ಪ್ರಚಾರ ಮಾತ್ರ ರಾಜಕೀಯ ಪ್ರೇರಿತ ಅನ್ನುವುದನ್ನ ಹಿಂದೂ ಮಾತ್ರವಲ್ಲ ಭಾರತೀಯರೆಲ್ಲ ಒಪ್ಪಿಕೊಳ್ಳಲೇಬೇಕು.


    : ಸಂಘದ  ಬಗ್ಗೆ, ಜಾತಿ - ಧರ್ಮಗಳ ಭೇದವಿಲ್ಲದೇ ನಾವೆಲ್ಲ ಒಪ್ಪಿಕೊಳ್ಳುವ
    ಭಾರತದ ಇಬ್ಬರು ಅಪ್ರತಿಮ ನಾಯಕರ ಅಭಿಪ್ರಾಯಗಳಿವು :


    ಡಾ | ಬಿ.ಆರ್.ಅಂಬೇಡ್ಕರ್ - " This is the first time that I am visiting the camp of Sangh volunters. I am happy to find absolute equality between Savarniyas (Upper cast) and Harijans (Lower cast) without any one being aware of such difference existing." When he asked Dr Hedgewar whether there were any untouchables in the camp, he replied that there are neither "touchables" nor "untouchables" but only Hindus."

    ಮಹಾತ್ಮಾ ಗಾಂಧೀಜಿ - "When i visited the RSS Camp. I was very much surprised by your discipline and absence of untouchablity "




     
     : ಪವನ್








    .

    Sep 10, 2010

    ' ಹಿಂಜರಿಯುತ್ತಿರುವ ' ಅಮೆರಿಕ

    0 ಪ್ರತಿಕ್ರಿಯೆಗಳು
    ಆರ್ಥಿಕ ಹಿಂಜರಿತ ಅಮೇರಿಕಾವನ್ನು ಮತ್ತೆ ಕಾಡುತ್ತಿದೆ. ೨೦೦೮ ರಲ್ಲಿ ಆರ್ಥಿಕ ಹಿಂಜರಿತ ಸಂಭವಿಸಿದಾಗ ಆರ್ಥಿಕ ತಜ್ಞರು ಆರ್ಥಿಕ ಪರಿಸ್ಥಿತಿ ಸುಧಾರಿಸಲು ಮೂರು ವರ್ಷಗಳು ಬೇಕಾಗುತ್ತವೆ ಎಂದು ತಿಳಿಸಿದ್ದರು. ಆದರೆ ಅಮೇರಿಕ recession ಗೆ ಮತ್ತೆ ಜಾರುತ್ತಿದೆ. ದೇಶದ ಆರ್ಥಿಕ ವೃದ್ಧಿ ದರವು ನಿರೀಕ್ಷಿತ ಮಟ್ಟಕ್ಕಿಂತಲೂ ಕಡಿಮೆಯಾಗಿರುವುದು ಹಾಗೂ ಉದ್ಯೋಗಾವಕಾಶ ಕುಂಠಿತಗೊಳ್ಳುತ್ತಿರುವುದು ಆತಂಕ ಸೃಷ್ಟಿಸಿದೆ. ಆಗಸ್ಟ ತಿಂಗಳಲ್ಲಿ ನಿರುದ್ಯೋಗಿಗಳ ಪ್ರಮಾಣ ಶೇ.9.5 ರಿಂದ  ಶೇ.9.6 ಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳೊಂದರಲ್ಲೇ 54000 ಜನರು ನಿರುದ್ಯೋಗಿಗಳಾಗಿದ್ದರೆ. " ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಮತ್ತು ಅದಕ್ಕೆ ಬ್ಯಾಂಕ್ ಸೌಲಭ್ಯ ಹೆಚ್ಚಿಸಲು ಬೇಕಾದ ಕಾನೂನು ರೂಪಿಸಲು ಅನಗತ್ಯ ವಿಳಂಬ ಮಾಡಿದ್ದೇವೆ" ಎಂದು ಬರಾಕ್ ಒಬಾಮಾ ತಿಳಿಸಿದ್ದಾರೆ. ಸಣ್ಣ ಕೈಗಾರಿಕೆಗಳಿಗೆ ಸಾಲ ನೀಡಲು ಸಮುದಾಯ ಬ್ಯಾಂಕುಗಳ ಧನ ಸಹಾಯಕ್ಕಗಿ ೩೦ ಶತಕೋಟಿ ಡಾಲರ್ ನಿಧಿ ಸ್ಥಾಪಿಸಲು ಅಮೇರಿಕ ಸರ್ಕಾರ ಯೋಚಿಸುತ್ತಿದೆ.

    ಆರ್ಥಿಕ ಹಿಂಜರಿತದಿಂದ ರಕ್ಷಣೆಯನ್ನು ನೀಡುವುದರ ನಿಟ್ಟಿನಲ್ಲಿ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಸೆಪ್ಟೆಂಬರ್ 6 ರಂದು ಆರ್ಥಿಕ ಉತ್ತೇಜನ ಪ್ಯಾಕೇಜನ್ನು ಪ್ರಕಟಿಸಿದರು.ರಸ್ತೆಗಳು, ರೈಲುಗಳು, ವಿಮಾನ ನಿಲ್ದಾಣ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ನವೀಕರಣಕ್ಕಾಗಿ $50 ಬಿಲಿಯನ್ ನಷ್ಟು ಮೀಸಲಿಡಲು ಅಮೇರಿಕ ಸರಕಾರ ನಿರ್ಧರಿಸಿದೆ. ಕಾರ್ಯಕ್ರಮದ ಯೋಜನೆಯನ್ನು ರೂಪಿಸಲು ಹಾಗೂ ಒಕ್ಕೂಟ ವ್ಯವಸ್ಥೆಯಲ್ಲಿ ನಿಧಿ ಹಂಚಿಕೆಯ ಸಮನ್ವಯ ಸಾಧಿಸಲು "Infrastructure Bank"ನ್ನು ಸ್ಥಾಪಿಸಲಿದೆ.
    : ಪವನ್ 

    ಲೇಖಕರ ಸಂಪರ್ಕ ವಿಳಾಸ : mahapavan@gmail.com

    .

    Sep 8, 2010

    ಭಾರತ-ಮ್ಯಾನ್ಮಾರ್ ದ್ವಿಪಕ್ಷೀಯ ಸಂಬಂಧಗಳು

    2 ಪ್ರತಿಕ್ರಿಯೆಗಳು

                



    ದೇಶದ ಅಭಿವೃದ್ಧಿ ದೃಷ್ಟಿಯಿಂದ ನೆರೆಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಹೊಂದುವುದು ಅನಿವಾರ್ಯ. ಆದರೆ, ಭಾರತಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಪಾಕಿಸ್ತಾನದ ವಿಷಯಗಳಲ್ಲಿ ವಿರೋಧಾಭಾಸಗಳನ್ನು ಕಾಣುತ್ತೇವೆ. ಪ್ರಜಾತಂತ್ರ ವ್ಯವಸ್ಥೆಯನ್ನು ಬಲವಾಗಿ ನಂಬಿರುವ ಭಾರತ ತನ್ನ ನೆರೆಹೊರೆಯ ದೇಶಗಳಲ್ಲೂ ಅಂತಹ ವ್ಯವಸ್ಥೆಯಿರಬೇಕೆಂದು ಬಯಸುತ್ತದೆ. ತಾನು ನಂಬಿರುವ ಸಿದ್ಧಾಂತವನ್ನು ಬದಿಗಿಟ್ಟು ಪ್ರಜಾತಂತ್ರ ವ್ಯವಸ್ಥೆಗೆ ಕೊಳ್ಳೆಯಿಟ್ಟಿರುವ, ಮಿಲಿಟರಿ ಆಡಳಿತವಿರುವ ಮ್ಯಾನ್ಮಾರದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ಹವಣಿಸುತ್ತಿದೆ. ಏಕೆ?

    :: ಭಾರತ-ಮ್ಯಾನ್ಮಾರ ಒಪ್ಪಂದಗಳು ::

    ಜುಲೈ ಕೊನೆಯ ವಾರದಂದು ಮ್ಯಾನ್ಮಾರಿನ ಆಡಳಿತವನ್ನು ತನ್ನ ಹತೋಟೆಗೆ ತೆಗೆದುಕೊಂಡಿರುವ (ಕಳೆದ 18 ವರ್ಷಗಳಿಂದ) ಜನರಲ್ ಥಾನ್ ಶ್ವೇಯವರು ಭಾರತಕ್ಕೆ ಭೇಟಿಕೊಟ್ಟಿದ್ದರು. ಆ ಸಂದರ್ಭದಲ್ಲಿ ಎರೆಡೂ ದೇಶಗಳು ಮಾನವ ಹಕ್ಕು ಕಾರ್ಯಕರ್ತರ ವಿರೋಧದ ನಡುವೆ ಅನೇಕ ಒಪ್ಪಂದಗಳಿಗೆ ಸಹಿ ಹಾಕಿವೆ. ಆರ್ಥಿಕ, ಸಾಂಸ್ಕೄತಿಕ, ಶಕ್ತಿ ಹಾಗೂ ಭದ್ರತೆ ಈ ವಿಷಯಗಳಲ್ಲಿ ಒಪ್ಪಂದಗಳು ಏರ್ಪಟ್ಟಿವೆ. ಭಾರತದ ಪುರಾತತ್ವ ಇಲಾಖೆ ಮ್ಯನ್ಮಾರಿನ ಬಾಗನ್ (Bagan) ಎಂಬಲ್ಲಿನ ಆನಂದಾ(Ananda) ಎಂಬ ಐತಿಹಾಸಿಕ

      ಆನಂದಾ ದೇವಸ್ಥಾನ
    ದೇವಸ್ಥಾನವನ್ನು ನವೀಕರಿಸುವಲ್ಲಿ ಸಹಾಯಮಾಡಲಿದೆ. ರಸ್ತೆ, ರೈಲು, ( Telecom ) ದೂರಸಂಪರ್ಕ, ಬ್ಯಾಂಕಿಂಗ್ ಹಾಗೂ ಅರ್ಥಿಕಾಭಿವೃದ್ಧಿ ಈ ಎಲ್ಲ ರಂಗಗಳಲ್ಲಿ ಸಹಾಯ ಮಾಡಲು ಒಪ್ಪಂದಗಳಿಗೆ ಸಹಿ ಹಾಕಿದೆ. ಕೃಷಿ ಸಾಮಾಗ್ರಿಗಳನ್ನು ಕೊಂಡುಕೊಳ್ಳಲು $10 ಮಿಲಿಯನ್ ನಷ್ಟು ಆರ್ಥಿಕ ಸಹಾಯ ಮಾಡಲು ನವದೆಹಲಿ ಮಾತು ಕೊಟ್ಟಿದೆ. ಸಂಸದೀಯ ಸಂಸ್ಥೆಯನ್ನು ಸ್ಥಾಪಿಸಲು ಮ್ಯಾನ್ಮಾರನ ಅಧಿಕಾರಿಗಳಿಗೆ ತರಬೇತಿ ನೀಡುವುದಾಗಿ ಭಾರತ ಹೇಳಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಮ್ಯಾನ್ಮಾರ್ ಪ್ರವಾಸಕ್ಕೆ ಹೋದಾಗ (ಮಾರ್ಚ್ ತಿಂಗಳಿನಲ್ಲಿ) ಮೂಲಭೂತ ಸೌಕರ್ಯ, ತೈಲ ಮತ್ತು ನೈಸರ್ಗಿಕ ಅನಿಲ ಶೋಧಿಸುವಿಕೆಯಲ್ಲಿ ಬಂಡವಾಳ ಹೂಡುವುದಾಗಿ ತಿಳಿಸಿದ್ದಾರೆ.

    ಮ್ಯಾನ್ಮಾರದೊಂದಿಗೆ ಸಂಬಂಧ ಬೆಸೆಯಲು ಕಾರಣಗಳು :

    ಮ್ಯಾನ್ಮಾರದೊಂದಿಗೆ ಉತ್ತಮ ಸಂಬಂಧ ಹೊಂದಲು ಪ್ರಮುಖ ಕಾರಣ, ಅಲ್ಲಿ ಹೆಚ್ಚಿಗೆಯಾಗುತ್ತಿರುವ ಚೀನಾದ ಪ್ರಭಾವ. ಇದು ಭಾರತವನ್ನು ಚಿಂತೆಗೀಡುಮಾಡಿದೆ. ಅಲ್ಲಿ ಚೀನಾದ ಪ್ರಭಾವವನ್ನು ಮೆಟ್ಟಿ ನಿಲ್ಲಬೇಕಾಗಿದೆ. ಭಾರತದ 'ಪೂರ್ವದತ್ತ ನೋಡು ನೀತಿ' (India's Look East Policy) ಹಾಗೂ ನಮ್ಮ ದೇಶದ ಈಶಾನ್ಯ ಗಡಿಯಲ್ಲಿ ಸಂಭವಿಸುವಂತಹ ದಂಗೆಗಳನ್ನು ಹತ್ತಿಕ್ಕುವಲ್ಲಿ ಮ್ಯಾನ್ಮಾರನ ಜುಂಟಾ ( JUNTA ) ಆಡಳಿತ ಸಹಕರಿಸುತ್ತಿದೆ. ಅಷ್ಟೇ ಅಲ್ಲ, ಅಲ್ಲಿನ ದೊಡ್ಡ ಪ್ರಮಾಣದ ನೈಸರ್ಗಿಕ ಅನಿಲದ ಮೇಲೆ ಭಾರತ ಕಣ್ಣಿಟ್ಟಿದೆ. ಇದು ಆರ್ಥಿಕಾಭಿವೃದ್ಧಿಯಲ್ಲಿ ನೆರವಾಗಲಿದೆ. ಈ ಎಲ್ಲ ಕಾರಣಗಳಿಂದ ಭಾರತ ಮ್ಯಾನ್ಮಾರದೊಂದಿಗಿನ ದ್ವಿಪಕ್ಷೀಯ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡಿದೆ.

    : ಪವನ್


    ಲೇಖಕರ ಸಂಪರ್ಕ ವಿಳಾಸ : mahapavan@gmail.com
    .

    Sep 3, 2010

    'ವಿಳಂಬ' ನ್ಯಾಯ

    0 ಪ್ರತಿಕ್ರಿಯೆಗಳು

    ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ - ಇವು ಸರಕಾರದ ಮೂರು ಅಂಗಗಳು. ಶಾಸಕಾಂಗವು ದೇಶಕ್ಕೆ ಅನುಕೂಲವಾಗುವಂತಹ ಕಾನೂನುಗಳನ್ನು ರೂಪಿಸಿದರೆ, ಕಾರ್ಯಾಂಗವು ಅದರ ಅನುಷ್ಠಾನವನ್ನು ಮಾಡುತ್ತದೆ. ಶಾಸಕಾಂಗ ಹಾಗೂ ಕಾರ್ಯಾಂಗಗಳು ಅಡ್ಡ ಹಾದಿ ಹಿಡಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ನ್ಯಾಯಾಂಗದ್ದು. ಅಷ್ಟೇ ಅಲ್ಲ, ಶಾಸಕಾಂಗದಿಂದಾಗಲೀ, ಕಾರ್ಯಾಂಗದಿಂದಾಗಲೀ ಅಥವಾ ಇನ್ನಾವುದೋ ಸಂಘ-ಸಂಸ್ಥೆಗಳಿಂದಾಗಲೀ ತನ್ನ  ದೇಶದ ಪ್ರಜೆಗಳಿಗೆ ಅನ್ಯಾಯವಾದಾಗ ಅದನ್ನು ಸರಿಪಡಿಸುವುದು ನ್ಯಾಯಾಂಗ. ತನಗೆ ಅನ್ಯಾಯವಾದಾಗ ನ್ಯಾಯ ಕೋರಿ ನ್ಯಾಯಾಲಯದ ಮೊರೆ ಹೋಗುವುದು ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕು.

    ನಮ್ಮ ದೇಶದಲ್ಲಿ ಒಂದು ಸರ್ವೋಚ್ಚ ನ್ಯಾಯಾಲಯ, 21 ಉಚ್ಚ ನ್ಯಾಯಾಲಯಗಳು, ಹಾಗೂ ಅನೇಕ ಕೆಳ ನ್ಯಾಯಾಲಯಗಳಿವೆ. ನ್ಯಾಯಕೋರಿ ನ್ಯಾಯಾಲಗಳ ಮೊರೆ ಹೋದವರ ಸಂಖ್ಯೆ 3.14 ಕೋಟಿಗೂ ಅಧಿಕ. ಇಷ್ಟು ಅಪಾರ  ಸಂಖ್ಯೆಯಲ್ಲಿ ಮೊಕದ್ದಮೆಗಳು ನ್ಯಾಯಾಲಯಗಳ ಮುಂದಿರುವುದರಿಂದ ನ್ಯಾಯದಾನದಲ್ಲಿ ವಿಳಂಬವಾಗುತ್ತಿದೆ. ನ್ಯಾಯಾಲಯದಲ್ಲಿನ ನಿಧಾನಗತಿಯು ಸರಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ದೆಹಲಿ ಹೈಕೊರ್ಟನ ಮಾಜಿ  ನ್ಯಾಯಾಧೀಶ ಎ.ಪಿ.ಶಾಹ್ ಈ ರೀತಿ ಹೇಳುತ್ತಾರೆ- "ನ್ಯಾಯದಾನದಲ್ಲಿನ ಈಗಿರುವ ಮಂದಗತಿಯನ್ನು ಅನುಸರಿಸಿದರೆ, ದೆಹಲಿ ಹೈಕೊರ್ಟನ ಮುಂದೆ ಈಗ ಇರುವ ಎಲ್ಲಾ ಕ್ರಿಮಿನಲ್ ಕೇಸುಗಳು ಮುಕ್ತಾಯವಾಗಲು 466 ವರ್ಷಗಳು ಹಿಡಿಯತ್ತವೆ".


    ನ್ಯಾಯದಾನದಲ್ಲಿನ ನಿಧಾನಗತಿಗೆ ಕಾರಣಗಳು ಹಲವಾರು. ಮುಖ್ಯವಾದ ಕಾರಣ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು. ಅಪೆಕ್ಸ ಕೋರ್ಟನ ದಾಖಲೆಗಳ ( ರೆಜಿಸ್ಟರಿ )  ಪ್ರಕಾರ, ಸರ್ವೋಚ್ಚ ನ್ಯಾಯಾಲಯದ 31 ನ್ಯಾಯಾಧೀಶರ ಹುದ್ದೆಗಳ ಪೈಕಿ 2 ಹುದ್ದೆಗಳು ಖಾಲಿ ಇವೆ; ಉಚ್ಚ ನ್ಯಾಯಾಲಯಗಳಲ್ಲಿ 895 ಹುದ್ದೆಗಳ ಪೈಕಿ 267 ಹುದ್ದೆಗಳು ಖಾಲಿ ಇವೆ; ಕೆಳನ್ಯಾಯಾಲಗಳಲ್ಲಂತೂ 1/4 ನಷ್ಟು ಹುದ್ದೆಗಳನ್ನು ಭರ್ತಿ ಮಾಡಬೇಕಿದೆ.

    ನಮ್ಮ ದೇಶದಲ್ಲಿ ಸರಿಯಾದ ರೀತಿಯಲ್ಲಿನ "ನ್ಯಾಯಾಧೀಶ-ಜನಸಂಖ್ಯೆ" ಅನುಪಾತ ಇಲ್ಲದಿರುವುದು ನ್ಯಾಯದಾನದಲ್ಲಿನ ನಿಧಾನಗತಿಗೆ ಮತ್ತೊಂದು ಪ್ರಮುಖ ಕಾರಣ. ಭಾರತದ ಕಾನೂನು ಆಯೋಗವು " Manpower Planning in Judiciary" ಎಂಬ ವರದಿಯಲ್ಲಿ ಭಾರತದ "ನ್ಯಾಯಾಧೀಶ-ಜನಸಂಖ್ಯೆ"ಯ ಅನುಪಾತವನ್ನು ಇತರೆ ದೇಶಗಳೊಂದಿಗೆ ಹೋಲಿಸಿದೆ. ಭಾರತದಲ್ಲಿನ ಈ ಅನುಪಾತ 10.5 ಜಡ್ಜುಗಳು ಪ್ರತಿ 1 ಮಿಲಿಯನ್ ಜನರಿಗೆ ಇದ್ದರೆ (ಜಗತ್ತಿನಲ್ಲಿ ಅತೀ ಕಡಿಮೆ). ಆಸ್ಟ್ರೆಲಿಯದಲ್ಲಿ 41.6 ಜಡ್ಜುಗಳು/ಮಿಲಿಯನ್ ಜನರಿಗೆ, ಕೆನಡದಲ್ಲಿ 75.2 ನ್ಯಾಯಾಧೀಶರು/ಮಿಲಿಯನ್ ಜನರಿಗೆ ಇಂಗ್ಲೆಂಡಿನಲ್ಲಿ 50.9ನ್ಯಾಯಾಧೀಶರು/ಮಿಲಿಯನ್ ಜನರಿಗೆ, ಅಮೇರಿಕದಲ್ಲಿ 107 ನ್ಯಾಯಾಧೀಶರು/ಮಿಲಿಯನ್ ಜನರಿಗೆ ಇದೆ. ಹೀಗಾಗಿ ಪ್ರತಿ ಒಂದು ಮಿಲಿಯನ್ ಜನರಿಗೆ 107 ನ್ಯಾಯಾಧೀಶರನ್ನು ನೇಮಕ ಮಾಡಬೆಕು ಎಂದು ಕಾನೂನು ಆಯೋಗವು ಶಿಫಾರಸು ಮಾಡಿದೆ. ಅದರಂತೆ 5000 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಕೇಂದ್ರ ಕಾನೂನು ಸಚಿವ ಎಂ. ವೀರಪ್ಪ ಮೊಯಿಲಿ ತಿಳಿಸಿದ್ದರೆ. ಖಾಲಿಯಿರುವ ಹುದ್ದೆಗಳನ್ನು ಸಚಿವರು ಯಾವಾಗ ಭರ್ತಿ ಮಾಡುತ್ತಾರೊ ! ಭರ್ತಿಯಾದ ನ್ಯಾಯಾಧೀಶರು ಅದು ಯಾವಾಗ ಕೇಸುಗಳನ್ನು ಕೈಗೆತ್ತಿಕೊಂಡು ತೀರ್ಪು ನೀಡುತ್ತಾರೋ !! ಇದೆಲ್ಲ  ಕಾದುನೋಡಬೇಕು.



    : ಪವನ್


    ಲೇಖಕರ ಸಂಪರ್ಕ ವಿಳಾಸ : mahanpavan@gmail.com
    .

    Aug 28, 2010

    ಶೇಖರಣೆ ನೆಪದಲ್ಲಿ ಪೋಲಾದ ಧಾನ್ಯಸಂಗ್ರಹ

    0 ಪ್ರತಿಕ್ರಿಯೆಗಳು
    ಕೆಲವು ದಿನಗಳ ಹಿಂದೆ ಸರ್ವೋಚ್ಛ ನ್ಯಾಯಲಯ ಕೇಂದ್ರ ಸರ್ಕಾರಕ್ಕೆ ಆಹಾರವನ್ನು ಪೋಲುಮಾಡಬೇಡಿ, ಎಷ್ಟೋ ಜನರು ಆಹಾರದಿಂದ ವಂಚಿತರಾಗಿದ್ದಾರೆ, ಅಂತಹವರಿಗೆ ಹಂಚಿ, ಎಂದು ಮಾರ್ಗದರ್ಶನ ನೀಡಿತು. ಅದರ ಬಗ್ಗೆ ಅಂದರೆ, ಕೇಂದ್ರ ಸರ್ಕಾರ ಮಾಡುತ್ತಿರುವ ಆಹಾರ ನಾಶದ ಬಗ್ಗೆ ಕೆಲವು ಮಾಹಿತಿಯನ್ನು  ನೀಡುತ್ತೇನೆ...

    > ಕೇಂದ್ರ ಆಹಾರ ಸಚಿವ ಶರದ್ ಪವಾರ್ ಅವರು ಲೋಕಸಭೆಯಲ್ಲಿ ಕೊಟ್ಟ ಮಾಹಿತಿ ಪ್ರಕಾರ ಸರ್ಕಾರಿ ಗೋದಾಮುಗಳಲ್ಲಿ ವ್ಯರ್ಥವಾದ ಆಹಾರ ಧಾನ್ಯದ ಪ್ರಮಾಣ ಕೇವಲ ೧೧೭೦೦ ಟನ್. ಆದರೆ, RTI ಅಡಿಯಲ್ಲಿ ಸಲ್ಲಿಸಿದ ಅರ್ಜಿಗೆ ಉತ್ತರವಾಗಿ ಕಳೆದ ವರ್ಷವೊಂದರಲ್ಲೇ 10688 ಲಕ್ಷ ಟನ್ ಆಹಾರ ಧಾನ್ಯ ಸರಕಾರಿ ಗೋದಾಮುಗಳಲ್ಲಿ ಕೊಳೆತು ಹೋದ ವಿವರಣೆ ನೀಡಿದೆ. ಈ ಮಾಹಿತಿ ಪ್ರಕಾರವೇ,1997 ರಿಂದ 2007ರ ನಡುವೆ,  FCI ಗೋದಾಮಿನಲ್ಲಿ 1.83 ಲಕ್ಷ ಟನ್ ಗೋಧಿ, 6.33 ಲಕ್ಷ ಟನ್ ಅಕ್ಕಿ,  2.20  ಲಕ್ಷ ಟನ್ ಭತ್ತ ಮತ್ತು 1.11 ಲಕ್ಷ ಟನ್ ಮೆಕ್ಕೆಜೊಳ ಮಣ್ಣುಪಾಲಾಗಿದೆ. 

    > ಇಷ್ಟಕ್ಕೆಲ್ಲ ಕಾರಣ ನಮ್ಮಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಇಲ್ಲದಿರುವಿಕೆ. ನಮ್ಮ ರೈತರು ಬೆವರು ಸುರಿಸಿ ಬೆಳೆದ ಬೆಳೆಯಲ್ಲಿ ಅಬ್ಬಬ್ಬಾ ಎಂದರೆ 6 ಲಕ್ಷ ಟನ್ ಅಹಾರವನ್ನು ಸಂಗ್ರಹಿಸಬಹುದು. ಉಳಿದ ಆಹಾರ ಪದಾರ್ಥಗಳಿಗೆ ಆಕಾಶವೇ ನೆಲೆ. ಮಳೆ-ಬಿಸಿಲಿಗೆ ಸಿಕ್ಕು ಆಹಾರ ನಾಶವಾಗುತ್ತದೆ.  ಗೋದಾಮುಗಳಲ್ಲಿ ಸಂಗ್ರಹಿಸಿಟ್ಟ ಆಹಾರಗಳಿಗೆ ಇಲಿ, ಇನ್ನಿತರ ಕೀಟಗಳಿಂದ ಸರಿಯಾದ ರೀತಿಯಲ್ಲಿ ಸಂರಕ್ಷಣೆ ಸಿಗದೇ ಇರುವುದು. ಇಂತಹ ಸಮಸ್ಯೆಗಳಿಂದ ಹೊರಬರುವಂತೆ ನ್ಯಾಯಾಲಯ ಸಲಹೆ ನೀಡಿದೆ. ಆಹಾರ ಪದಾರ್ಥಗಳ ಸಂಗ್ರಹ ಕಾರ್ಯವನ್ನು ಖಾಸಗೀಕರಣ ಮಾಡಿದ್ರೆ ಸೂಕ್ತ ಅಂತ ಅನ್ಸುತ್ತೆ. ಹಣ್ಣು-ತರಕಾರಿಗಳು ಹೆಚ್ಚು ದಿನಗಳ ಕಾಲ ಕೆಡದಂತೆ ಇಡುವ ಸಂಸ್ಕರಣಾ ಘಟಕಗಳನ್ನು ಉನ್ನತೀಕರಿಸಬೇಕು. ನಮ್ಮ ದೇಶದಲ್ಲಿ ಸಂಸ್ಕರಣೆಗೊಂಡ ಆಹಾರಗಳು ಶೇ.2 ಕ್ಕಿಂತಲೂ ಕಡಿಮೆ. ನಮ್ಮ ದೇಶಕ್ಕೆ ಎಲ್ಲ ರಂಗಗಳಲ್ಲಿ ಸವಾಲೊಡ್ಡುವ ಚೀನಾ ದೇಶವು 15 ಕೋಟಿ ಟನ್ ನಷ್ಟು ಆಹಾರ ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ.

     : ಪವನ್


    ಲೇಖಕರ ಸಂಪರ್ಕ ವಿಳಾಸ : mahapavan@gmail.com


    ***************** 


    1 Y

    E

    L

    L

    O

    2 W



    P





       H




       U

    4 B

    G

    S
       I
      L
      V
      E
       R
       R

        R



      T



       P
    7 O
      R
       A
       N
    G
      E

    B

      L

       W


       Y

        R


    10  B
        L
       U
      E
       N


    11  R
        E

       E


        A







        E


       C




    12   P
       I
        N
       K

       K






    *****************

    ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

    ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ