ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Showing posts with label ಭರತವರ್ಷಕ್ಕೆ ನುಡಿನಮನ. Show all posts
Showing posts with label ಭರತವರ್ಷಕ್ಕೆ ನುಡಿನಮನ. Show all posts

Aug 23, 2012

ಶ್ರೀ ಜಿ.ವೆಂಕಟಸುಬ್ಬಯ್ಯನವರಿಗೆ 100 ವಸಂತ ತುಂಬಿದ ಸಂಭ್ರಮ !!

0 ಪ್ರತಿಕ್ರಿಯೆಗಳು
.

: ಶ್ರೀ ಜಿ.ವೆಂಸುಬ್ಬಯ್ಯನವರ ಕಿರು ಪರಿಚಯ :


 


.
ಜನನ : ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕೈಗೋನಹಳ್ಳಿಯಲ್ಲಿ 23ನೇ ಆಗಸ್ಟ್ 1913 ರಂದು

ತಂದೆ : ಶ್ರೀ ಗಂಜಾಂ ತಿಮ್ಮಣ್ಣಯ್ಯ


ತಾಯಿ : ಶ್ರೀಮತಿ ಸುಬ್ಬಮ್ಮ


ವಿದ್ಯಾಭ್ಯಾಸ :  ಮೈಸೂರು ವಿವಿಯಿಂದ ಎಂ.ಎ.


ನೌಕರಿ : ಮೈಸೂರು ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಸೇರಿ - ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಹುದ್ದೆಗೆ ಸೇರಿ ಪ್ರಾಂಶುಪಾಲರಾಗಿ ನಿವೃತ್ತಿ


ಕೃತಿಗಳು : 


  • ನಯನಸೇನ, 
  • ಅನುಕಲ್ಪನೆ, 
  • ನಳಚಂಪು,
  • ಅಕ್ರೂರ ಚರಿತ್ರೆ, 
  • ಲಿಂಡನ್ ಜಾನ್ಸನ್ ಕಥೆ, 
  • ಸಂಯುಕ್ತ ಸಂಸ್ಥಾನ ಪರಿಚಯ, 
  • ಶಂಕರಾಚಾರ್ಯ, 
  • ಕಬೀರ್, 
  • ಇದು ನಮ್ಮ ಭಾರತ, 
  • ಸರಳಾದಾಸ್, 
  • ರತ್ನಾಕರವರ್ಣಿ, 
  • ದಾಸಸಾಹಿತ್ಯ, 
  • ವಚನಸಾಹಿತ್ಯ, 
  • ಶಾಸನ ಸಾಹಿತ್ಯ, 
  • ಷಡಕ್ಷರ ದೇವ, 
  • ಸರ್ವಜ್ಞ, 
  • ಕನ್ನಡ-ಕನ್ನಡ ಇಂಗ್ಲೀಷ್ ನಿಘಂಟು, 
  • ಕನ್ನಡ-ಕನ್ನಡ ಕ್ಲಿಷ್ಟ ಪದಕೋಶ, 
  • ಇಂಗ್ಲೀಷ್-ಕನ್ನಡ ನಿಘಂಟು, 
  • ಹೊಯ್ಸಳ ಕರ್ನಾಟಕ ರಜತೋತ್ಸವ ಸಂಪುಟ, 
  • ಮುದ್ದಣ ಭಂಡಾರ ಭಾಗ-೧, 
  • ಮುದ್ದಣ ಭಂಡಾರ ಭಾಗ-೨, 
  • ಕಾವ್ಯಲಹರಿ, 
  • ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ, 
  • ಕನ್ನಡವನ್ನು ಉಳಿಸಿ ಬೆಳೆಸಿದವರು, 
  • ಪ್ರೊ|| ಟಿ.ಎಸ್. ವೆಂಕಣ್ಣಯ್ಯನವರು, 
  • ಕವಿ ಜನ್ನ, ಡಿ.ವಿ.ಗುಂಡಪ್ಪನವರು, 
  • ಕನ್ನಡದ ನಾಯಕಮಣಿಗಳು, 
  • ಕರ್ಣಕರ್ಣಾಮೃತ, 
  • ನಾಗರಸನ ಭಗವದ್ಗೀತೆ, 
  • ತಮಿಳು ಕತೆಗಳು, 
  • ಇಗೋ ಕನ್ನಡ-೧, 
  • ಇಗೋ ಕನ್ನಡ-೨, 
  • ಮುದ್ದಣ ಪದಪ್ರಯೋಗಕೋಶ, 
  • ಎರವಲು ಪದಕೋಶ, 
  • ಕುಮಾರವ್ಯಾಸನ ಅಂತರಂಗ


... ಮುಂತಾದವು

ಅಲಂಕರಿಸಿದ ಹುದ್ದೆಗಳು : 


  • ಕ.ಸಾ.ಪ. ಕಾರ್ಯದರ್ಶಿ
  • 1964 ರಿಂದ 1969 ರವರೆಗೆ ಕ.ಸಾ.ಪ. ಅಧ್ಯಕ್ಷ ಹುದ್ದೆ
  • ಕನ್ನಡ ಸುಡಿ ಪತ್ರಿಕೆಯ ಸಂಪಾದಕರಾಗಿ ಸೇವೆ
  • ಕನ್ನಡ-ಕನ್ನಡ ಕೋಶದ ಸಮಿತಿಯ ಅಧ್ಯಕ್ಷರು ಹಾಗೂ ಪ್ರಧಾನ ಸಂಪಾದಕರು
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು
  • ಅಖಿಲ ಭಾರತ ನಿಘಂಟುಕಾರರ ಸಂಘದ ಉಪಾಧ್ಯಕ್ಷರು
  • ಕೇಂದ್ರ ಸರ್ಕಾರದ ಭಾರತೀಯ ಭಾಷಾ ಸಮಿತಿಯ ಕನ್ನಡ ಪ್ರತಿನಿಧಿ
... ಮುಂತಾದವು

ಬಿರುದುಗಳು :

  • ನಿಘಂಟು ಸಾರ್ವಭೌಮ, 
  • ಸಂಚಾರಿಜೀವಂತಪದಕೋಶ, 
  • ಭಾಷಾವಿಜ್ಞಾನ ಪ್ರವೀಣ, 
  • ಪದಗಳಕಣಜ, 
  • ನಿಘಂಟು ನಿಸ್ಸೀಮ, 
  • ಶಬ್ಧರ್ಷಿ, 
  • ಪದಜೀವಿ, 
  • ಪದಗುರು, 
  • ನಡೆದಾಡುವ ನಿಘಂಟು, 
  • ಶಬ್ದಸಂಜೀವಿನಿ, 
  • ಶಬ್ದಬ್ರಹ್ಮ, 
  • ಶಬ್ದಸಾಗರ, 
  • ಶಬ್ದಸಹಾಯವಾಣಿ, 
  • ಶಬ್ದಗಾರುಡಿಗ, 
  • ಶಬ್ದಶಿಲ್ಪಿ, 
  • ಚಲಿಸುವ ಜ್ಞಾನಭಂಡಾರ,
  • ಕನ್ನಡದ ಕಿಟ್ಟಲ್

... ಮುಂತಾದವು

ಪ್ರಶಸ್ತಿಗಳು :


  •  ಮುದ್ದಣ ಭಂಡಾರ ಗ್ರಂಥಕ್ಕೆ ೧೯೮೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 
  • ಸಾಹಿತ್ಯ ಸಾಧನೆಗಾಗಿ ೧೯೯೧ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 
  • ೧೯೯೨ ರಲ್ಲಿ ಮಾಂಟ್ರಿಯಲ್ ಕೆನಡದಲ್ಲಿ ನಡೆದ ಕನ್ನಡ ಸಮ್ಮೇಳನದ ಗೌರವ ಆತಿಥ್ಯ, 
  • ೧೯೯೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 
  • ೧೯೯೮ ರಲ್ಲಿ ಶಂಬಾ ಪ್ರಶಸ್ತಿ, 
  • ೧೯೯೯ ರಲ್ಲಿ ಸೇಡಿಯಾಪು ಪ್ರಶಸ್ತಿ, 
  • ೧೯೯೯ ರಲ್ಲಿ ಶಿವರಾಮ ಕಾರಂತ ಪ್ರಶಸ್ತಿ, 
  • ೨೦೦೦ ದಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯ ವಿಶೇಷ ಪ್ರಶಸ್ತಿ, 
  • ೨೦೦೧ ರಲ್ಲಿ ವನಮಾಲಿ ಪ್ರಶಸ್ತಿ, 
  • ೨೦೦೩ ರಲ್ಲಿ ಮುದ್ದಣ ಪುರಸ್ಕಾರ, 
  • ೨೦೦೫ ರಲ್ಲಿ ಮಾಸ್ತಿ ಪ್ರಶಸ್ತಿ, 
  • ೨೦೦೫ ರಲ್ಲಿ  ನಾಡೋಜ ಪ್ರಶಸ್ತಿ, 
  • ೨೦೦೭ ರಲ್ಲಿ ಮೂಡುಬಿದರೆಯ ಪ್ರತಿಷ್ಠಿತ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯ ಗೌರವ, 
  • ೨೦೦೮ ರಲ್ಲಿ ಪ್ರತಿಷ್ಠಿತ ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿ, 
  • ೨೦೦೯ ರಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ತಿನ ರಜತೋತ್ಸವ ಪ್ರಶಸ್ತಿ, 
  • ೨೦೧೦ ರಲ್ಲಿ ಗೋಕಾಕ್ ವಾಙ್ಮಯ ಟ್ರಸ್ಟ್‌ನ ವಿ.ಕೃ. ಗೋಕಾಕ್ ಪ್ರಶಸ್ತಿ 

... ಮುಂತಾದವು

ಬೆಂಗಳೂರಿನಲ್ಲಿ ನಡೆದ ೭೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. 

Sep 18, 2010

ಪುಣ್ಯಾಶ್ರಮದ ಪುಣ್ಯಾತ್ಮನಿಗೆ ಶ್ರದ್ಧಾಂಜಲಿ

0 ಪ್ರತಿಕ್ರಿಯೆಗಳು
 .


ಸ್ಪರ್ಧಾರ್ಥಿ ಪತ್ರಿಕೆಗೆ ಇಂಥ ಮಹಾನುಭಾವರ ಜೀವನ ಆದರ್ಶ .. ಅಂತೆಯೇ ಪತ್ರಿಕೆಯ ಎಲ್ಲ ಓದುಗರಿಗೂ.

ಸಮಾಜಮುಖಿ ಜೀವನಕ್ಕೆ ಹೊಸ ಭಾಷ್ಯ ಬರೆದ ಪಂಡಿತ್ ಪುಟ್ಟರಾಜ ಗವಾಯಿಗಳು ನಮಗೆಲ್ಲ ದಾರಿದೀಪ.

ಮಹಾತ್ಮರೇ ಹಾಗೆ...
" ಅವರು ಎಂದಿಗೂ ನಮ್ಮನಗಲುವುದೇ ಇಲ್ಲ .. ಯಾಕಂದ್ರೆ ಅವರು ಜೀವ ಮುಖೇನ  ಬದುಕಿರುವುದಿಲ್ಲ. ಜೀವನದ ಮುಖೇನ ಬದುಕಿರುತ್ತಾರೆ. ಜೀವ ಹೋದರೇನಂತೆ ? ಅವರು ನಡೆದು - ನುಡಿದು ತೋರಿಸಿದ ಜೀವನ ಅಮರ. "

ಅಂಥ ಅಮರತ್ವ ಹೊಂದುವ ಹಾಗೆ ಜೀವನ ಸಾಗಿಸೋಣ .. ಗವಾಯಿಗಳಿಗೆ ನಮ್ಮ ಶ್ರದ್ಧಾಂಜಲಿ ಸಲ್ಲಿಸೋಣ


: ಸ್ಪರ್ಧಾರ್ಥಿ





.

Sep 7, 2010

ಗುರು-ಶಿಷ್ಯರ ಅಪೂರ್ವ ಸಂಬಂಧ

3 ಪ್ರತಿಕ್ರಿಯೆಗಳು



"ಗುರುಬ್ರಹ್ಮಾ ಗುರುರ್ವಿಷ್ಣು: ಗುರುರ್ದೇವೋ ಮಹೇಶ್ವರ:
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮ:"

ಯಾವುದೇ ವಿದ್ಯೆಯನ್ನು ಗುರುಮುಖೇನ ಕಲಿಯಬೇಕು. ಗುರುವಿಲ್ಲದೆ ಕಲಿಯುವ ಯಾವುದೇ ವಿದ್ಯೆಯೂ ನಿರರ್ಥಕ. (ಏಕಲವ್ಯ ಸಹ ಮಾನಸಿಕವಾಗಿ ದ್ರೋಣಾಚಾರ್ಯರನ್ನು ಗುರುವಾಗಿ ಸ್ವೀಕರಿಸಿದ್ದವನು). ಗುರುವೆಂದರೆ ಶಿಕ್ಷಣವನ್ನು ನೀಡುವವನು ಮಾತ್ರವಲ್ಲ. ಭವದ ಬಂಧನವನ್ನು ನೀಗುವವನು ಎಂದು ಕವಿ ಸರ್ವಜ್ಞ. ಹೇಳುತ್ತಾನೆ.   ಅಲ್ಲದೇ "ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ" ಎಂದು ಹೇಳಲಾಗುತ್ತದೆ.  ಪ್ರಪಂಚದಲ್ಲಿ ಶಿಷ್ಯನಾದವನು ಯೋಗ್ಯ ಗುರುವಿಗಾಗಿ ಆಶಿಸುವಂತೆ, ಗುರುವಾದವನೂ ಅರ್ಹ ಶಿಷ್ಯನನ್ನು ಪಡೆಯಲು ಹಂಬಲಿಸುತ್ತಾನೆ. ಗುರುವಿಗೆ ನಾವು ಬಾಗಬೇಕು. ಬಾಗಿ ಮಾಗಬೇಕು, ಮಾಗಿ ಗುರಿಯೆಡೆಗೆ ಸಾಗಬೇಕು.   ಈ ರೀತಿ ಅಪರೂಪದ ಗುರು-ಶಿಷ್ಯರ ಸಂಬಂಧಗಳನ್ನು ತಿಳಿಸುವ ಎಷ್ಟೋ ಕಥೆಗಳನ್ನು ಮಹಾಭಾರತದಲ್ಲಿ ಕಾಣಬಹುದು. ಇಂಥವುಗಳಲ್ಲಿ ನಾನೀಗ  ಗುರು ಧೌಮ್ಯ  ಹಾಗೂ ಶಿಷ್ಯ ಉದ್ದಾಲಕ ಇವರ ಕುರಿತಾಗಿರುವ ಒಂದು ಕತೆಯನ್ನ ಹೇಳಬಯಸುತ್ತೇನೆ.

ಉದ್ದಾಲಕ!  ಇದು ಅವನ ಹೆಸರಲ್ಲ. ಅವನ ಹೆಸರು ಆರುಣಿ. ದೇಶ ಪಾಂಚಾಲ.  ಇವನ ಗುರುಗಳೇ ಆಯೋಧ ಧೌಮ್ಯ. ಗುರುಗಳು ಕಾಲಲ್ಲಿ ತೋರಿಸಿದ್ದನ್ನು ಶಿಷ್ಯನು ತಲೆಯಲ್ಲಿ ಹೊತ್ತು ಮಾಡುತ್ತಿದ್ದ. ಆರುಣಿ ಜ್ಙಾನಕ್ಕಾಗಿ ಹಾತೊರೆದು, ಸುಖ-ದು:ಖಗಳನ್ನೇ ತೊರೆದು ಗುರುಗಳನ್ನು ಶರಣು ಹೊಂದಿದ್ದ. ಶಿಷ್ಯರಿಗೆ ಮೊದಲು ಕಾಲು ಮೂಡಬೇಕು. ತಲೆ ಮೂಡುವುದು ನಂತರ. ಗುರುವಿನಿಂದ ಪಡೆದ ಹುಟ್ಟಿನಲ್ಲಿ  ಮೊದಲು ಕಾಲು, ನಂತರ ತಲೆ ಮೊಳೆಯುತ್ತದೆ. "ಆಚಾರ್ಯ ಪೂರ್ವ ರೂಪಂ. ಅಂತೇವಾಸ್ಯುತ್ತರ ರೂಪಂ." ಎಂದು ಹೇಳಲಾಗುತ್ತದೆ.



ಹೀಗೆ ಧೌಮ್ಯ ಗುರುಗಳೊಮ್ಮೆ ಆರುಣಿಯನ್ನು ಕರೆದು ಹೀಗೆ ಹೇಳುತ್ತಾರೆ. " ಮಗು, ಗದ್ದೆಯಲ್ಲಿ ನೀರು ನಿಲ್ಲಬೇಕು. ನಿಂತು ಭೂಮಿಯಲ್ಲಿ ಇಂಗಬೇಕು. ಆದರೆ ಗದ್ದೆಯ ಅಡ್ಡಗಟ್ಟಿಯಂತಿರುವ ಬದು ಒಡೆದುಹೋಗಿ ನೀರು ಹೊರಬರುತ್ತಿದೆ. ಅದನ್ನು ತಡೆ" ಎಂದು. ಗುರುಗಳ ಮಾತನ್ನು ತಲೆಯಲ್ಲಿ ಹೊತ್ತ ಆರುಣಿ, ಸೋರುತ್ತಿದ್ದ ಬದುವನ್ನು ಅಡ್ಡಗಟ್ಟಲು ಮಣ್ಣು ಕಲ್ಲುಗಳನ್ನು ಜೋಡಿಸಿದರೂ ಕಡಿಮೆಯಾಗದಿದ್ದಾಗ ಸ್ವತ: ತಾನೇ ಅಡ್ಡ ಮಲಗಿ ರಾತ್ರಿಯಿಡೀ ಅಲ್ಲೇ ಮಲಗುತ್ತಾನೆ.  ನಂತರ ಮರುದಿನ ಧೌಮ್ಯ ಗುರುಗಳು  ಇದನ್ನು ಗಮನಿಸಿದಾಗ  ಅವರಿಗೆ ಪರಮಾಶ್ಚರ್ಯವಾಗುತ್ತದೆ. ಬದುವಿಗೆ ತನ್ನ ದೇಹವನ್ನೇ ಮಣ್ಣಾಗಿ ಭಾವಿಸಿದ ಆರುಣಿಯ ಗುರುಭಕ್ತಿಯನ್ನು ಮೆಚ್ಚಿ,  ಅವನಿಗೆ ಉದ್ದಾಲಕ ನಾಗು ಎಂದು ಆಶೀರ್ವದಿಸುತ್ತಾರೆ. [ಅಧ್ಯಾಯ 3, ಆದಿಪರ್ವ]


"ನಾತಪಸ್ಕಾಯ, ನ ಚ  ಅಶುಶ್ರೋಷವೇ ನಾಶ್ರದ್ದದಾನಾಯ ನಾಪ್ರವಕ್ತ್ರೇಭ್ಯೋ ಬ್ರೂಯಾತ್ "  ಅಂದರೆ ತಪಸ್ಸಿಲ್ಲದವನಿಗೆ, ಗುರುಗಳಿಗೆ ಸೇವೆ ಮಾಡದವನಿಗೆ, ಶ್ರದ್ದೆಯಿಲ್ಲದವನಿಗೆ ಹಾಗೂ ತಾನು ತಿಳಿದುದನ್ನು ಇನ್ನೊಬ್ಬರಿಗೆ ಹೇಳುವ ಶಕ್ತಿಯಿಲ್ಲದವನಿಗೆ ಗುರೂಪದೇಶವು ಸಲ್ಲದು ಎಂದು ಹೇಳಲಾಗುತ್ತದೆ.

ಇಂದು ಗುರು ಶಿಕ್ಷಕನಾಗಿದ್ದಾನೆ. ಶಿಷ್ಯ ವಿದ್ಯಾರ್ಥಿಯಾಗಿದ್ದಾನೆ.  ಶಿಕ್ಷಣವೆನ್ನುವುದು ವ್ಯಾಪಾರವಾಗಿದೆ. ಕೆಲವು ಶಿಕ್ಷಕರು ತಮ್ಮ ಸ್ಥಾನಕ್ಕೆ ತಕ್ಕಂತೆ ಗೌರವಯುತವಾಗಿ ನಡೆದುಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳ ಮೇಲೆ ದೌರ್ಜನ್ಯವೆಸಗುತ್ತಾರೆ. ಮುಂತಾದ ಹಲವು ಆರೋಪಗಳೊಂದಿಗೆ ಶಿಕ್ಷಕನೆನ್ನುವ ಶಿಷ್ಯೋದ್ಧಾರಕನನ್ನು ನಾವಿಂದು ಕಟಕಟೆಯಲ್ಲಿ ನಿಲ್ಲಿಸಿದ್ದೇವೆ. ಶಿಕ್ಷಕ ನ ಸ್ಥಾನದಲ್ಲಿರುವವನು ತನ್ನ ಶಿಷ್ಯರಿಗಷ್ಟೇ ಅಲ್ಲ, ತನ್ನ ಆದರ್ಶದ ನಡತೆಯಿಂದ ಇಡೀ ಸಮಾಜಕ್ಕೇ ಗುರುವಾಗುತ್ತಾನೆ. ಆಗಬೇಕು ಕೂಡ. ಒಬ್ಬ ಗುರುವಿನ ಕರ್ತವ್ಯ, ಬುದ್ದಿವಂತ ವಿದ್ಯಾರ್ಥಿಗಳನ್ನು ರೂಪಿಸುವುದಷ್ಟೇ ಅಲ್ಲ. ಅವರನ್ನು ಪ್ರಜ್ಞಾವಂತ, ಸುಸಂಸ್ಕೃತ ನಾಗರಿಕರನ್ನಾಗಿ ರೂಪುಗೊಳಿಸುವ ಮೂಲಕ ಉತ್ತಮ ಪ್ರಜೆಗಳನ್ನಾಗಿ ನಿರ್ಮಿಸುವ ಜವಾಬ್ದಾರಿ ಇದೆ. ಏಕೆಂದರೆ ಮುಂದೆ ಸಮೃದ್ದ ಸಮಾಜವೊಂದರ ನಿರ್ಮಾತೃಗಳಾಗಲಿರುವವರು ಈ ವಿದ್ಯಾರ್ಥಿಗಳೇ.  

ಹಾಗೆಯೇ ವಿನಮ್ರತೆಯನ್ನು ಝಾಡಿಸಿಕೊಂಡಿರುವ, ದುಡ್ಡು ಮತ್ತು ಹೆತ್ತವರ ಅಧಿಕಾರದ ಬಲದಿಂದ ವಿದ್ಯಾಕೇಂದ್ರಗಳಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತಿರುವ, ಶಿಕ್ಷಕರೆಂದರೆ ಕೇವಲ ಅಂಕಗಳು ಎಂದು ಭಾವಿಸಿರುವ ಶಿಷ್ಯವರ್ಗಕ್ಕೂ "ಶಿಷ್ಯನಾದವರು ಹೇಗಿರಬೇಕು?" ಎಂದು ತಮ್ಮನ್ನು ಕೇಳಿಕೊಳ್ಳುವ ಅಗತ್ಯವಿದೆ.  ಪೋಷಕರು, ಸಮಾಜ, ಸರ್ಕಾರ, ಕಾನೂನುಗಳು ಕೂಡ ತಮ್ಮ ಹೊಣೆಗಾರಿಕೆಯನ್ನು ಅರಿತು ನಡೆಯಬೇಕಿದೆ.



: ಸ್ಪಂದನಾ





.

Sep 2, 2010

ಜಗದೋದ್ಧಾರಕ ಶ್ರೀಕೃಷ್ಣ

2 ಪ್ರತಿಕ್ರಿಯೆಗಳು


ಇಂದಿನಿಂದ ನಿರ್ದಿಷ್ಟ ಕಾಲ ಸರಣಿಯಲ್ಲಿ ಭಾರತೀಯ ಸಂಸ್ಕೃತಿ - ಪುರಾಣ - ಮಹಾಭಾರತ - ರಾಮಾಯಣ ... ಹೀಗೆ Indian Mythology ಯಲ್ಲಿ ಬರುವ ಪಾತ್ರಗಳ ಪರಿಚಯ ..ಇತ್ಯಾದಿ ಮಾಹಿತಿಗಳನ್ನೊಳಗೊಂಡ ಲೇಖನ ಸರಣಿ ಪ್ರಾರಂಭವಾಗುತ್ತಿದೆ. ಖಂಡಿತ ಇದಕ್ಕೆ ನೀವೂ ನಿಮ್ಮ ಮಾಹಿತಿಯನ್ನ ನೀಡಬಹುದು Comments ಗಳ ಮೂಲಕ. 
***
ಈ ಲೇಖನ ಸರಣಿಯಲ್ಲಿ ನಿಮಗೆ  : ಪುರಾಣ ಕತೆಗಳಲ್ಲಿ ಬರುವ ಪಾತ್ರಗಳು - ಅವುಗಳ ನಡುವಿನ ಸಂಬಂಧಗಳು ; ದೇಶ - ರಾಜ - ರಾಜ್ಯ ಸಂಬಂಧಗಳು ; .. ಹೀಗೆ ಪರೀಕ್ಷಾ ದೃಷ್ಟಿಯಿಂದ ಅನುಕೂಲವಾಗುವ ಸಮಗ್ರ ಮಾಹಿತಿ ದೊರೆಯುತ್ತದೆ !!

.
:: ಜಗದೋದ್ಧಾರಕ ಶ್ರೀಕೃಷ್ಣ ::




ಇತಿಹಾಸ ಆಗಬೇಕಾದರೆ ಕಾಲಪುರುಷ ಓಡುತ್ತಲೇ ಇರಬೇಕು! ಆ ಕಾಲನಿಗೆ ದೈವನಿರ್ಮಿತ ಗತಿವೇಗವೂ ಒಂದು ಮಂಗಳಮಯ ದಿಕ್ಕೂ ಇರುವುದೆಂಬುದನ್ನು ವೇದಾಂತಿಗಳೂ ಯೋಗಿಗಳೂ ಭಗವದ್ ಭಕ್ತರೂ ಮಾತ್ರ ಬಲ್ಲರು. ಸಾಮಾನ್ಯ ಮುಗ್ದ ಜನರಿಗೆ ಕಾಲನ ಗತಿಯಲ್ಲಿ ಜನರೂ ಪಶುಪಕ್ಷಿ ಕೀಟಾದಿಗಳೂ ಏಕೆ ಹುಟ್ಟಿ ಸಾಯುವರೆಂಬುದೇ ತಿಳಿಯದೆ, ಇದೆಲ್ಲ ಅರ್ಥವಿಲ್ಲದ ವ್ಯಾಪಾರ ಎಂಬ ಭ್ರಮೆ! ಇದೊಂದು ಅಪಾಯಕಾರೀ ವೈಚಿತ್ರ್ಯವೆನಿಸಿದರೆ, ದುಷ್ಟರೂ ಮಹತ್ವ್ತಾಕಾಂಕ್ಷಿಗಳೂ ಪರರನ್ನು ಹಿಂಸೆಮಾಡುವವರೂ ತಾವೇ ದೇವರೆಂಬ ಸಲ್ಲದ  ಅಹಂಕಾರಭಾವದಲ್ಲಿ ಕಾಲನ ಹೆಗಲ ಮೇಲೇರಿ ಕುಳಿತು, ಅವನ ಗತಿಯ ವೇಗವನ್ನೂ ದಿಕ್ಕನ್ನೂ ತಮ್ಮ ಸ್ವಾರ್ಥ ಗುರಿಯತ್ತ ಆಗಾಗ ತಿರುಗಿಸಲು ಯತ್ನಿಸುವುದು ತೀರಾ ಅಪಾಯಕಾರಿ ವೈಚಿತ್ರ್ಯ!
 
ಕಾಲನಿಗೆ ಇದು ಒಗ್ಗದ ದಾಸ್ಯ. ದಾಸನಾದವನು ಹಣಕ್ಕಾಗಿ ಯಾವ ಯಜಮಾನನಿಗಾದರೂ ಮಾರಿಕೊಳ್ಳುವುದು ಸಹಜ ಎಂಬ ಈ ಲೋಕದ ಕೆಲವರ ನ್ಯಾಯ ಕಾಲನಿಗೆ ಅನ್ವಯವಾಗುವುದೇ ಇಲ್ಲ. ಏಕೆಂದರೆ ಅವನದು ಸ್ವಯಂಪ್ರಯೋಜನರೂಪದ ದಾಸ್ಯ. ಅದು ದೇವರ ಸಲುವಾಗಿ ಮಾತ್ರ ನಡೆಯುವುದು. ಧೂರ್ತ ಜನರ ಘೋರವ್ಯಾಪಾರಗಳಿಗೂ ಕಾಲ ಅಷ್ಟಿಷ್ಟು ಅವಕಾಶ ಕೊಟ್ಟು, ತಾನು ಸಹನೆ ತೋರಿಸುತ್ತಾನೆ. ಕೊನೆಗೆ ಅವರನ್ನು ತಾನೇ ಮುಗಿಸುವುದೂ ಉಂಟು!  ಇದಕ್ಕಾಗಿ ಕಾಲನ ಯಜಮಾನನಾದ ಭಗವಂತ, ಕಾಲಕಾಲಕ್ಕೆ ತಾನೇ ದೇಶಕಾಲಗಳ ಸಂಧಿಯಲ್ಲಿ ಕಾಣಿಸಿಕೊಂಡು, ಕಾಲನಿಗೆ ಧೂರ್ತರು ಕಟ್ಟಿದ ಕಟ್ಟೆಯನ್ನು ಒಡೆದುಹಾಕಿ, ಅವನ ಪ್ರವಾಹ ಮತ್ತೆ ಸುಗಮವಾಗುವಂತೆ ಮಾಡುತ್ತಾನೆ. ಕಾಲವಿರೋಧಿಗಳನ್ನು ಕಾಲವಶರಾಗಿಸುತ್ತಾನೆ.- ಅದೇ ಅವತಾರ ಎನ್ನುವುದು.

"ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ" 
ಅಭ್ಯುತ್ಥಾನಂ ಅಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ.
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕ್ರತಾಂ
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ"

ನಾನೀಗ ಹೇಳಲೊರಟಿರುವುದು " ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸಿ,  ಧರ್ಮವನ್ನು ಸಂಸ್ಥಾಪನೆ ಮಾಡಿ, ಲೋಕವನ್ನು ಉದ್ಧರಿಸಲು ದ್ವಾಪರಯುಗದಲ್ಲಿ ಭುವಿಯಲ್ಲಿ ಅವತರಿಸಿದ ಜಗದೋದ್ದಾರಕ ಶ್ರೀಕ್ಠಷ್ಣ ನ ಬಗ್ಗೆ ಎಂಬುದು ತಮಗೆಲ್ಲರಿಗೂ ತಿಳಿದೇ ಇದೆ. ಈ ಬಗ್ಗೆ ಸವಿವರವಾಗಿ ವಿವರಿಸದೇ ಸಂಕ್ಷಿಪ್ತವಾಗಿ ಹೇಳುವ ಪ್ರಯತ್ನ ಮಾಡಲಾಗಿದೆ. ಕಾರಣ ಶ್ರೀಕೃಷ್ಣನ ಬಗ್ಗೆ ಹೇಳುತ್ತಾ ಹೋದರೆ ಅದು ಮುಗಿಯುವುದೇ ಇಲ್ಲ ಎನ್ನುವಷ್ಟು ಹೇಳಬಹುದು.  ಶ್ರೀ ಕ್ಠಷ್ಣಾಷ್ಟಮಿಯ ಈ ಶುಭ ಸಂದರ್ಭದಲ್ಲಿ ಈ ಲೇಖನವನ್ನು ಪ್ರಸ್ತುತ ಪಡಿಸಲು ನನಗೆ ಅತೀವ ಸಂತೋಷವೆನಿಸುತ್ತಿದೆ.


ಮಥುರೆ ಮುಕ್ತಿ ಧಾಮಗಳಲ್ಲೇ ಎರಡನೇ ಸ್ಥಾನದಲ್ಲಿರುವಂಥದ್ದು. ಮೊದಲನೇ ಸ್ಥಾನ ಇರುವುದು ಅಯೋಧ್ಯೆಗೆ. ಮಥುರೆಯ ರಾಜ ಉಗ್ರಸೇನ. ಈತ ಬಹಳ ಸ್ವಾಭಿಮಾನಿ. ಈತನ ಮಗನೇ "ಕಂಸ"-   ಕಂಸನು ದುರಾಡಳಿತಕ್ಕೆ ಹೆಸರಾಗಿದ್ದವನು. ಇವನ ಕಾಲದಲ್ಲಿ ಕ್ರೌರ್ಯ ಎಡೆಬಿಡದೆ ಸಾಗಿತ್ತು. ಇವನ ಅಪ್ಪಣೆಗಳನ್ನು ಎದುರಿಸುವವರಿಲ್ಲದೇ, ತಡೆಯುವವರಿಲ್ಲದೇ ಇವನ ಸೆರೆಮನೆ ಶತ್ರುಗಳಿಂದ ತುಂಬಿತ್ತು. ಅಲ್ಲದೇ ಕಂಸ ಸಾಕಷ್ಟು ಯಾದವ ಯುವಕರನ್ನು ಕೊಲ್ಲಿಸಿ, ಅಲ್ಲಿನ ಯುವತಿಯರನ್ನು ವಿಷಕನ್ಯೆರನ್ನಾಗಿ ಮಾರ್ಪಡಿಸಿದ್ದ.  ಒಟ್ಟಾರೆ ಮಥುರಾ ನಗರಿ ಇವನ ಆಡಳಿತದಿಂದ ರೋಸಿಹೋಗಿತ್ತು. ಯಾದವರು ಕಂಸನನ್ನು ತೀವ್ರವಾಗಿ ದ್ವೇಷಿಸುತ್ತಿದ್ದ ಕಾಲ ಅದು.

ವಸುದೇವ :   ಈತ ಯಾದವರ ಮುಖಂಡ. ಈತನಿಗೆ ಇಬ್ಬರು ಹೆಂಡತಿಯರು. ಒಬ್ಬಳು ರೋಹಿಣೀದೇವಿ (ಬಲರಾಮನ ತಾಯಿ, ಬಲರಾಮನ ಹೆಂಡತಿಯ ಹೆಸರು ರೇವತಿ ಈಕೆ ರೈವತನ ಮಗಳು) ಹಾಗೂ ಇನ್ನೊಬ್ಬಳು ದೇವಕಿ (ಕಂಸನ ದೊಡ್ಡಪ್ಪ ದೇವಕನ ಮಗಳು - ಕ್ಠಷ್ಣನ ತಾಯಿ...- ಈ ವಿವಾಹದಲ್ಲಿ  ಯಾದವರನ್ನೆಲ್ಲಾ ತನ್ನೆಡೆಗೆ ಸೆಳೆಯಬೇಕೆಂಬ ಕಂಸನ ಸ್ವಾರ್ಥವೂ ಇರುತ್ತದೆ ).  ದೇವಕಿಯ ಮದುವೆ ಸಂದರ್ಭದಲ್ಲಿ ಕಂಸನನ್ನು ಕುರಿತು ಅಶರೀರ ವಾಣಿಯೊಂದು ಗೋಚರಿಸಿ, " ದೇವಕಿಯ ಗರ್ಭದಲ್ಲಿ ಜನಿಸುವ ಎಂಟನೇ ಶಿಶುವಿನಿಂದ ನಿನಗೇ ಮೃತ್ಯು" ಎಂದು ಹೇಳುತ್ತದೆ.  ಅಂದಿನಿಂದ ದೇವಕಿ-ವಸುದೇವರಿಗೆ ಕಂಸ ಸೆರೆವಾಸ ವಿಧಿಸುತ್ತಾನೆ. ದೇವಕಿಗೆ ಜನಿಸಿದ ಎಲ್ಲಾ 7 ಶಿಶುಗಳನ್ನು ಹತ್ಯೆ ಮಾಡುತ್ತಾನೆ.  ಎಂಟನೇ ಶಿಶುವೇ ಭುವಿಗವತರಿಸಿದ ಸಾಕ್ಷಾತ್  ಭಗವಂತ ಶ್ರೀಕೃಷ್ಣ.


ಅದು ಜಗತ್ತಿನ ಭಾಗ್ಯೋದಯದ ಅಮೃತ ಘಳಿಗೆ! ಆ ಕಾಲವೇ ದ್ವಾಪರ ಯುಗಾಂತ್ಯದ ಆ ಅದ್ಭುತ ಶ್ರೀಮುಖನಾಮ ಸಂವತ್ಸರದ ಶ್ರಾವಣ ಬಹುಳ(ಕೃಷ್ಣ) ಅಷ್ಟಮಿ ರಾತ್ರಿ ಹನ್ನೆರಡು ಗಂಟೆಯ ಸಮಯ. ಬಾರ್ಹಸ್ಪತ್ಯ ರೀತ್ಯಾ ಪಾರ್ಥಿವ ನಾಮ ಸಂವತ್ಸರ. ರೋಹಿಣಿ ನಕ್ಷತ್ರ, ಶುಕ್ರವಾರ. ಅಂದಿಗೆ ಜಗತ್ತು ಸೃಷ್ಟಿಯಾಗಿ 195,58,79,894 ವರ್ಷಗಳಾಗಿವೆ. ಇಂತಹ ಸುಮುಹೂರ್ತದಲ್ಲಿ ಕೃಷ್ಣನ ಜನನವಾಗಿದೆ. ನಂತರ ಕೃಷ್ಣನನ್ನು ವಸುದೇವ ಗೋಕುಲಕ್ಕೆ ದೈವಸಂಕಲ್ಪದಿಂದ ಕೊಂಡೊಯ್ಯುತ್ತಾನೆ. ಉಳಿದದ್ದೆಲ್ಲಾ ಇತಿಹಾಸ.





 
 "ಕ್ಠಷ್ಣ"  ಎಂದರೆ  ಆಕರ್ಷಿಸುವವ ಎಂದು ಅರ್ಥ.  ಈತ ಬಾಲ್ಯ ಕಳೆದದ್ದು ಗೋಕುಲದಲ್ಲಿ. ಸಾಕು ತಂದೆ ತಾಯಿಯರಾದ ನಂದಗೋಪ ಮತ್ತು ಯಶೋದೆಯ ಮಡಿಲಲ್ಲಿ. ಬಾಲಕೃಷ್ಣನ ಲೀಲೆಗಳು ಗೋಕುಲದಲ್ಲಿ ಒಂದೇ ಎರಡೇ. ನವನೀತ (ಬೆಣ್ಣೆ) ಪ್ರಿಯನ ಚೇಷ್ಟೆಗಳು ಗೋಕುಲ ಜನರನ್ನು ಸತಾಯಿಸುತ್ತಿದ್ದರೂ ಅವುಗಳಲ್ಲೇ ಜನ ಆನಂದದಿಂದ ಪುಲಕಿತರಾಗುತ್ತಿದ್ದುದ್ದು ಸುಳ್ಳೇನಲ್ಲ.






ತನ್ನನ್ನು ಕೊಲ್ಲಲಿರುವ ಮಗು ಗೋಕುಲದಲ್ಲಿ ಬೆಳೆಯುತ್ತಿರುವ ವಿಷಯ ತಿಳಿದು, ಆ ಶಿಶುವನ್ನು ಹತ್ಯೆಗೈಯಲು ಕಂಸ ನಾನಾ ಸಂಚು ರೂಪಿಸಿ  (ಈ ನಿಟ್ಟಿನಲ್ಲಿ ಬಂದವರೇ ಪೂತನಿ, ಶಕಟಾಸುರ, ಕಾಲಯವನ,  ತೃಣಾವರ್ತ, ಬಕ,ಅಘ, ಅರಿಷ್ಟ, ಕೇಶಿ ಮುರ, ಜರಾಸಂಧ, ಪೌಂಡ್ರಕ ) ಕೊನೆಗೇ ತಾನೇ ಹತನಾಗುತ್ತಾನೆ.
ಶ್ರೀಕೃಷ್ಣ ಮಥುರೆಯಿಂದ ಗೋಕುಲಕ್ಕೆ, ಗೋಕುಲದಿಂದ ಮಥುರೆಗೆ, ಮಥುರೆಯಿಂದ ದ್ವಾರಕೆಗೆ, ದ್ವಾರಕೆಯಿಂದ ಕೊನೆಗೆ ಹಸ್ತಿನಾವತಿ ಹೀಗೆ ತಾನು ಹೋದಡೆಯಲ್ಲೆಲ್ಲಾ ಜನರನ್ನಷ್ಟೇ ಅಲ್ಲಾ ಈ ಪುಣ್ಯ ಭೂಮಿಯನ್ನೇ ಪಾವನಗೊಳಿಸುತ್ತಾನೆ.





ಶ್ರೀಕೃಷ್ಣನ ವಿವಾಹ :  ಶ್ರೀ ಕೃಷ್ಣನಿಗೆ 16,000 ಗೋಪಿಕಾ ಸ್ರ್ತೀಯರು ಪ್ರಿಯತಮೆಯರಿದ್ದರು. ಆದರೆ ಅವನ ಹೆಂಡತಿಯರೆಂದರೆ :

1. ರುಕ್ಮಿಣಿ - ವಿದರ್ಭದ ದೊರೆ ಭೀಷ್ಮಕನ ಮಗಳು - ರುಕ್ಮಿಯ ತಂಗಿ.  ಈಕೆಗೆ ಶಿಶುಪಾಲನೊಂದಿಗೆ ವಿವಾಹ ನಿಶ್ಚಿತವಾದಾಗ ಅವನೊಡನೆ ಹೋರಾಡಿ ರುಕ್ಮಿಣಿಯನ್ನು ಕೃಷ್ಣ ವರಿಸುತ್ತಾನೆ. (ಕೃಷ್ಣನ ತಂದೆ ವಸುದೇವನಿಗೆ 3 ಜನ ತಂಗಿಯರು, ಅವರೇ ಕುಂತಿ, ಶ್ರುತಶ್ರವೆ, ಶ್ರುತಕೀರ್ತಿ. ಕುಂತಿಯನ್ನು ಪಾಂಡುವಿಗೂ, ಶ್ರುತಕೀರ್ತಿಯನ್ನು ಕೇಕಯ ದೇಶದ ರಾಜ ದೃಷ್ಟಕೇತುವಿಗೂ, ಶ್ರುತಶ್ರವೆಯನ್ನು ದಮಘೋಷನಿಗೂ ಮದುವೆ ಮಾಡಿ ಕೊಡಲಾಗುತ್ತದೆ. ಇವರ ಮಗನೇ ಶಿಶುಪಾಲ.) 

{ ಶಿಶುಪಾಲ : ಕೃಷ್ಣನ ಅತ್ತೆಯ ಮಗ.  ಈತ ಜನಿಸಿದಾಗ  ಇವನಿಗೆ ಅನೇಕ ತಲೆಗಳು, ಅನೇಕ ಬಾಹುಗಳು ವಿಕಾರ ಸ್ವರೂಪವೂ ಇರುತ್ತದೆ. ಈ ಬಗ್ಗೆ ಶಿಶುಪಾಲನ ತಾಯಿ ದೇವರಲ್ಲಿ ಮೊರೆ ಹೊಕ್ಕಾಗ ಯಾರ ಮಡಿಲಲ್ಲಿ ಮಲಗಿದಾಗ ಈ ಮಗುವಿಗೆ ಸುರೂಪ ಬರುತ್ತದೋ ಅವನೇ ಇದರ ಮೃತ್ಯು ಎಂದು ಹೇಳಲಾಗುತ್ತದೆ. ಅದರಂತೆ ಕೃಷ್ಣನ ಮಡಿಲಲ್ಲಿ ಮಲಗಿಸಿದಾಗ ಶಿಶುಪಾಲನಿಗೆ ಸುರೂಪ ಬರುತ್ತದೆ. ಈ ಮಗುವನ್ನು ಕೊಲ್ಲದಂತೆ ಶಿಶುಪಾಲನ ತಾಯಿ ಕೃಷ್ಣನನ್ನು ಬೇಡಿಕೊಂಡಾಗಾ ಶ್ರೀಕೃಷ್ಣ ಈತನ 100 ತಪ್ಪುಗಳನ್ನು ಮನ್ನಿಸುವುದಾಗಿಯೂ ತದನಂತರ ಕೊಲ್ಲುವುದಾಗಿಯೂ ತಿಳಿಸುತ್ತಾನೆ. ಅದರಂತೆ ಶಿಶುಪಾಲನೂ ಕೊನೆಯಲ್ಲಿ ಹತನಾಗುತ್ತಾನೆ. ಕೆಲವೊಮ್ಮೆ "ವರವೂ ವಿಕೃತವಾಗಬಹುದು, ಶಾಪವೂ ಅನುಗ್ರಹವಾಗಬಹುದು" ಅದು ವ್ಯಕ್ತಿಯ ನಡತೆಯನ್ನು ಅವಲಂಭಿಸಿದೆ ಎನ್ನುವುದಕ್ಕೆ ಶಿಶುಪಾಲ ಒಂದ ಒಳ್ಳೆಯ ಉದಾಹರಣೆ. }

2. ಜಾಂಬವತಿ - ಈಕೆ ಜಾಂಬವನ ಮಗಳು. "ಸ್ಯಮಂತಕ ಮಣಿ" ಅಪಹರಣವಾದಾಗ ಅದರ ಅಪವಾದ ಕೃಷ್ಣನ ಮೇಲೆ ಬರುತ್ತದೆ. ಇದನ್ನು ಹುಡುಕಿ ತರುವ ಸಂದರ್ಭದಲ್ಲಿ ಈ ವಿವಾಹ ನಡೆಯುತ್ತದೆ.

3. ಭಾಮೆ : ಈಕೆ ಕ್ಷತ್ರಿಯ ಪುರುಷ, ವೃಷ್ಣಿ ವಂಶಸ್ಥ ಮಹಾ ಜಿಪುಣ ಸತ್ರಾಜಿತನ ಒಬ್ಬಳೇ ಮಗಳು.

4. ಕಾಳಿಂದಿ : ಸೂರ್ಯ ಪುತ್ರಿ, ಜನ್ಮಾಂತರದಲ್ಲಿ ಆಕೆ ಯಮನ ಸೋದರಿ.

5. ಮಿತ್ರವಿಂದೆ : ಆವಂತೀ ರಾಜ ಜಯಸೇನನ ಮಗಳು.

6. ನಾಗನಜಿತೀ :

ಕೃಷ್ಣ ಬಳಸುತ್ತಿದ್ದ ಆಯುಧಗಳು :

1. ಸುದರ್ಶನ ಚಕ್ರ
2. ಗದೆ- ಕೌಮೋದಕಿ
3. ಧನಸ್ಸು-ಶಾಙ್ಞ
4. ಕತ್ತಿ- ನಂದಕ
( 5. ಶಂಖ - ಪಾಂಚಜನ್ಯ )

ಕೃಷ್ಣನ ಮಕ್ಕಳು :

1. ಪ್ರದ್ಯುಮ್ನ ಹಾಗೂ ಚಾರುಮತಿ(ರುಕ್ಮಿಣಿ ಮಕ್ಕಳು)
2. ಸಾಂಬ (ಜಾಂಬವತಿ ಮಗ) . ಇದಲ್ಲದೇ ಬೇರೆ ಹೆಂಡತಿಯರಿಂದಲೂ ಹೆಣ್ಣುಮಕ್ಕಳಿದ್ದರು.

ಕೃಷ್ಣನ ಗುರುಗಳು ಸಾಂದೀಪನಿ ಋಷಿಗಳು.
ಕೃಷ್ಣನ ಪರಮಾಪ್ತ ಸ್ನೇಹಿತ ಸುಧಾಮ.

ಮಹಾಭಾರತ ಕುರುಕ್ಷೇತ್ರ ಯುದ್ದ :



ಪಾಂಡವರ ಕಡೆ: ಅರ್ಜುನ, ಭೀಮ, ದೃಷ್ಟಧ್ಯುಮ್ನ, ಅಭಿಮನ್ಯು, ಘಟೋದ್ಗಜ, ಶಿಖಂಡಿ, ಸಾತ್ಯಕಿ ಮುಂತಾದವರು
ಕೌರವರ ಕಡೆ: ಭೀಷ್ಮ, ದ್ರೋಣ, ಕರ್ಣ, ಶಲ್ಯ, ಕೃಪಾಚಾರ್ಯ, ಅಶ್ವತ್ಥಾಮ, ದುರ್ಯೋಧನ  ಮುಂತಾದವರು

ಸೈನ್ಯದ ವಿವರಗಳು :

ಕೌರವ ಸೈನ್ಯ : 11 ಅಕ್ಷೋಹಿಣಿ
ಪಾಂಡವ ಸೈನ್ಯ : 7 ಅಕ್ಷೋಹಿಣಿ
[ 1 ಅಕ್ಷೋಹಿಣಿ = 218700 ರಥಗಳು, 21,870 ಆನೆಗಳು, 65,610 ಕುದುರೆಗಳು & 1,09,350 ಪದಾತಿ ದಳ ]

ಕೊನೆಗೆ ಮಹಾಭಾರತದ 18 ದಿನದ ಕುರುಕ್ಷೇತ್ರ ಯುದ್ದದಲ್ಲಿ ಪಾಂಡವರ ಪಕ್ಷವಹಿಸಿ ಕೌರವರನ್ನು , ಧರ್ಮದ್ರೋಹಿಗಳನ್ನೆಲ್ಲ ಸಂಹರಿಸಿ ಈ ಮಹಾವತಾರೀ ಶ್ರೀಕೃಷ್ಣ, ಭೂಮಿಗೆ ನೆಮ್ಮದಿ ತಂದು ತನ್ನ ಹೆಸರನ್ನು ಸಾರ್ಥಕ ಮಾಡಿದ!  ಶ್ರೀ ಕೃಷ್ಣ ನೊಂದ ಸ್ತ್ರೀಯರಿಗೆ ಮರುಗಿದಷ್ಟು, ಅವರ ಮಾನ ಸಂರಕ್ಷಣೆಗಾಗಿ ಶ್ರಮಿಸಿದಕ್ಕೆ ನಿದರ್ಶನ ದ್ರೌಪದಿಯ ವಸ್ತ್ರಾಪಹರಣದ ಸಂದರ್ಭದಲ್ಲಿ ಕಾಣಬಹುದು.ಶ್ರೀ ಕೃಷ್ಣ ಬುದ್ದಿವಂತರ ಬುದ್ದಿ, ಸೌಂದರ್ಯವಂತರ ಸೌಂದರ್ಯ,  ಜ್ಞಾನಿಗಳ ಜ್ಞಾನ. ಈ ಮುಗಿಯದ ಅನಂತ ವೈಭವದ ಈ ಅವತಾರಿಗೆ ಅನಂತ ಪ್ರಣಾಮಗಳು. 



: ಸ್ಪಂದನಾ



ಲೇಖಕರ ಸಂಪರ್ಕ ವಿಳಾಸ : spandanask@gmail.com
.

May 20, 2010

ಸಂವತ್ಸರಗಳು : ಮಾಸಗಳು : ತಿಥಿಗಳು : ನಕ್ಷತ್ರಗಳು

0 ಪ್ರತಿಕ್ರಿಯೆಗಳು

ನಮ್ಮ ಪೂರ್ವಿಕರು ನಾವಿಂದು ವರ್ಷದ ಕ್ಯಾಲೆಂಡರ್ ಮಾಡಿಕೊಂಡಿರುವಂತೆ ಅಂದು ಸಂವತ್ಸರಗಳನ್ನ ಮಾಡಿಕೊಂಡಿದ್ದರು. ಆದರೆ ಅವರ ವಿಂಗಡನೆಯಷ್ಟು ಶಿಸ್ತುಬದ್ಧ ನಮ್ಮದಾಗುವುದಿಲ್ಲ ಬಿಡಿ. ಅವರು ಕೊಟ್ಟಿರುವ ಹೆಸರುಗಳು ಮತ್ತವುಗಳ ಒಳಗೆಯೇ ವಿಂಗಡಿಸಿರುವ ಮಾಸ / ತಿಥಿ / ನಕ್ಷತ್ರಗಳ ಕಲ್ಪನೆ ಅವರ ಅಸೀಮ ಬುದ್ಧಿ ಶಕ್ತಿಯನ್ನ ತೋರಿಸುತ್ತದೆ. ಅವರ ಬುದ್ಧಿ ಶಕ್ತಿಯ ಕೂಸಾಗಿರುವ ಈ ಕಲ್ಪನೆಗಳ ಪಟ್ಟಿ ನಿಮ್ಮ ಮುಂದೆ , ಓದಿಕೊಳ್ಳಿ :


60 ಸಂವತ್ಸರಗಳು

ಸಂವತ್ಸರಗಳನ್ನ ಗುರು ಗ್ರಹ ಸೂರ್ಯನನ್ನ ಪ್ರದಕ್ಷಿಣೆ ಹಾಗಕಲು ತೆಗೆಕೊಳ್ಳುವ ಸಮಯವಾದ 12 ವರ್ಷಗಳಿಗೆ ಹೊಂದಿಸಿ ಲೆಕ್ಕ ಹಾಕಲಾಗುತ್ತದೆ. ಅಂಥ 5 ... ಸೇರಿ 60 ವರ್ಷಗಳಾಗುತ್ತದೆ. 
ಜೊತೆಗೆ ಮೊದಲ 20 ಸಂವತ್ಸರಗಳನ್ನ  ಬ್ರಹ್ಮನಿಗೂ ತದನಂತರದ 20ನ್ನ ವಿಷ್ಣುವಿಗೂ ಮತ್ತು ಕೊನೆಯ 20ನ್ನ ಶಿವನಿಗೂ ಆದ್ಯರ್ಪಿಸಲಾಗಿದೆ.
" 60 ಸಂವತ್ಸರಗಳು, ಶಾಪಗ್ರಸ್ತ ನಾರದನ ಮಕ್ಕಳು " - ಎಂದೂ ಹೇಳ್ತಾರೆ.

प्र्भवो विभव शुक्लः प्रमोदूत प्रजपतिः
आन्गिरः शीमुखो भावो युवो धातुस्तथेश्वरः
बहुधान्यः प्रमाथीचविक्रमो विशुवत्सरः
चित्रभनुः स्‍वाभानुस्चा तारणः पार्थिवो व्ययः
सर्वजित्सर्वधरीच विरोधी विक्रुतिः खरः
नन्दनो विजयश्चैवा जयो मन्मथ दूर्मुखौ
हे विलम्बी विलम्बिश्च विकारी शार्वरी प्लवः
शुभाकऋतु शोभक्रुतु क्रोधी विश्वावसु पराभवौ
प्मवन्गः कीलकः सौम्यः साधारण विरोधिक्रुतु
परीधावी प्रमादीचः आनन्दो राक्शसो नलः
पिन्गलः काल्युकिश्च सिद्धार्थि रौद्र दुर्मति
दुन्दुभिः रुधिरोद्गारी रक्ताक्शी क्रोधनोक्षयः
[ 60 ಸಂವತ್ಸರಗಳನ್ನ ತಿಳಿಸುವ ಸಂಸ್ಕೃತ ಶ್ಲೋಕ ]


  1. ಪ್ರಭವ
  2. ವಿಭವ
  3. ಶುಕ್ಲ
  4. ಪ್ರಮೋದ
  5. ಪ್ರಜೋತ್ಪತ್ತಿ
  6. ಆಂಗೀರಸ
  7. ಶ್ರೀಮುಖ
  8. ಭಾವ
  9. ಯುವ
10. ಧಾತ್ರಿ
11. ಈಶ್ವರ
12. ಬಹುಧಾನ್ಯ
13. ಪ್ರಮಾಧಿ
14. ವಿಕ್ರಮ
15. ವರುಷ/ವೃಷ
16. ಚಿತ್ರಭಾನು
17. ಸ್ವಭಾನು
18. ತಾರಣ
19. ಪಾರ್ಥಿವ
20. ವ್ಯಯ
21. ಸರ್ವಜಿತ್
22. ಸರ್ವಧಾರಿ
23. ವಿರೋಧಿ
24. ವಿಕೃತ
25. ಖರ
26. ನಂದನ
27. ವಿಜಯ
28. ಜಯ
29. ಮನ್ಮಥ
30. ದುರ್ಮುಖ
31. ಹೇವಿಳಂಬಿ
32. ವಿಳಂಬಿ
33. ವಿಕಾರಿ
34. ಶಾರ್ವರಿ
35. ಪ್ಲವ
36. ಶುಭಕೃತ
37. ಶೋಭಾಕೃತ
38. ಕ್ರೋಧಿ
39. ವಿಶ್ವಾವಸು
40. ಪರಾಭವ
41. ಪ್ಲವಂಗ
42. ಕೀಲಕ
43. ಸೌಮ್ಯ
44. ಸಾಧಾರಣ
45. ವಿರೋಧಿಕೃತ
46. ಪರಿಧಾವಿ
47. ಪ್ರಮಾಧಿ
48. ಆನಂದ
49. ರಾಕ್ಷಸ
50. ನಳ
51. ಪಿಂಗಳ
52. ಕಾಳಯುಕ್ತಿ
53. ಸಿದ್ಧಾರ್ಥಿ
54. ರುದ್ರ
55. ದುರ್ಮತಿ
56. ದುಂದುಭಿ
57. ರುದಿರೋದ್ಗಾರಿ
58. ರಕ್ತಾಕ್ಷಿ
59. ಕ್ರೋಧನ
60. ಅಕ್ಷಯ


ಮಾಸಗಳು







ನಕ್ಷತ್ರಗಳು






ತಿಥಿಗಳು







Nov 1, 2009

ರಾಷ್ಟ್ರಭಕ್ತಿ ಮೂಡಿಸಿ ಬೆಳೆಸಲು ಸಹಾಯವಾಗುವ ಕೆಲವು e-ತಾಣಗಳು

0 ಪ್ರತಿಕ್ರಿಯೆಗಳು




ಸಂಸ್ಕಾರ ಸೌರಭ

ಜನ್ಮಭೂಮಿಗೆ ನುಡಿ ನಮನ

0 ಪ್ರತಿಕ್ರಿಯೆಗಳು
ಭರತವರ್ಷ : ಇದು ಭರತಖಂಡದ ಮೊದಲ ಹೆಸರು.

ಹಿಂದೂ ಮಹಾಸಾಗರವನ್ನ ತನ್ನ ಪದತಲದಲ್ಲಿ ಹರಡಿಕೊಂಡು ಹಿಂದುಕುಶ್ ಒಳಗೊಂಡ ಹಿಮಾಲಯದ ಛಾವಣಿಯ ನಡುವೆ ತನ್ನ  ವಿಶಾಲ ಭೂಭಾಗವನ್ನ ಹರವಿಕೊಂಡು ನಿಂತಿದ್ದ ಆ ಅಖಂಡ ಭರತಖಂಡ ಕ್ಕೆ ಈ ಪುಟ ಸಮರ್ಪಿತ.



.

ಇಂದು ಆ ಭರತವರ್ಷದ ಭೂಭಾಗ ಹಂಚಿ ಹೋಗಿರಬಹುದು. ಆದರೆ ಆ ಭೂಭಾಗದಲ್ಲಿ ಅರಳಿ ನಿಂತ ಭಾರತೀಯ ಸಂಸ್ಕೃತಿಯನ್ನ ಬೆಳೆಸಿ ಆ ಸಂಸ್ಕೃತಿಯ ಅಡಿಪಾಯದ ಮೇಲೆ ಮತ್ತೆ ಭರತವರ್ಷವನ್ನ ಒಂದುಗೂಡಿಸುವಂತೆ ಹಗಲೂ ಕೂಡ ಕನಸು ಕಾಣ್ತೀನಿ.

ಆ ಕನಸನ್ನ ಸಾಕಾರಗೊಳಿಸುವ ನಿಟ್ಟಿನಲ್ಲಿ ಈ ಪುಟದ ಮೂಲಕ ಪುಟ್ಟ ಪ್ರಯತ್ನಕ್ಕೆ ಅಣಿಯಾಗ್ತಾ ಇದ್ದೀನಿ. 
  • ನಮ್ಮ ಆಚರಣೆಗಳು, ಹಬ್ಬಗಳು, ಅವುಗಳ ಮಹತ್ವಗಳು.
  • ನಮ್ಮ ಪೌರಾಣಿಕ ಕಥೆಗಳಲ್ಲಿ ಬರುವ ಪಾತ್ರಗಳು ಸಾರುವ ಜೀವನ ಮೌಲ್ಯಗಳು.
  • ನಮ್ಮ ರಾಜವಂಶಗಳು
  • ನಮ್ಮ ಇತಿಹಾಸ
....ಹೀಗೆ ಆ ಸಂಸ್ಕೃತಿಯ ಅಡಿಪಾಯವನ್ನ ಭದ್ರಗೊಳಿಸುವ ಕಾರ್ಯ ನಾ ಮಾಡಿದರಾಯ್ತು. ಮುಂಬರುವ ಇನ್ನೊಬ್ಬ ರವಿ ಆ ಭವ್ಯ ಸೌಧ ಕಟ್ಟುವ ಕೆಲಸ ಮಾಡಿಯಾನು ಎಂಬ ಆಶಯದೊಂದಿಗೆ...

ನಿಮ್ಮ,
ರವಿ





.

ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ