ತಾಜಾ - b'ಬಿಸಿ' ಸುದ್ದಿ

« »

: " ಸ್ಪರ್ಧಾರ್ಥಿ ತಾಣದಲ್ಲಿ ಹೊಸತು " ಉಚಿತ NewsLetterಗಾಗಿ ಇಲ್ಲಿ ನಿಮ್ಮ MAIL ID ನೀಡಿ :

ಈ ತಾಣದಲ್ಲಿನ ಯಾವುದೇ ಆಂಗ್ಲ ಶಬ್ದದ ಅರ್ಥ ತಿಳಿಯದಿದ್ದರೆ ಆ ಶಬ್ದದ ಮೇಲೆ Double Click ಮಾಡಿ

e-ಪತ್ರಿಕೆ ನಿಮ್ಮ ಸ್ವಂತದ್ದು. ಲೇಖನ ಬರೆದು ನಿಮ್ಮ ಜ್ಞಾನ ಹಂಚಿಕೊಳ್ಳಿ ..

ನಿಮ್ಮ (ಕೃತಿಚೌರ್ಯವಲ್ಲದ)ಲೇಖನಗಳನ್ನ ಇಲ್ಲಿಗೆ ಕಳಿಸಿ : spardharthi@gmail.com

ಗುಟುಕು ಜ್ಞಾನಕ್ಕಾಗಿ ...

Apr 1, 2012

ಬೆಂಗಳೂರು ಮೆಟ್ರೋನಲ್ಲಿ 108+11 ಹುದ್ದೆಗಳು

0 ಪ್ರತಿಕ್ರಿಯೆಗಳು


ಬೆಂಗಳೂರು ಮೆಟ್ರೋನಲ್ಲಿ 108+11 ಹುದ್ದೆಗಳು


 
ಕೊನೆ ದಿನಾಂಕ : 24 ಏಪ್ರಿಲ್ 2012
ಪರೀಕ್ಷಾ ದಿನಾಂಕ : 27 ಮೇ 2012 
ಒಟ್ಟು Vacancy : 108+11
ವಿದ್ಯಾರ್ಹತೆ : ಇಲಾಖೆಯ ಅಧಿಸೂಚನೆಗಾಗಿ  ಇಲ್ಲಿ ಕ್ಲಿಕ್ಕಿಸಿ 
        ನಿಗದಿಪಡಿಸಿರುವ ಪಠ್ಯ : ಇಲ್ಲಿ ಕ್ಲಿಕ್ಕಿಸಿ 
ವಯೋಮಿತಿ : ಅಧಿಸೂಚನೆಯಲ್ಲಿದ್ದಂತೆ
ಆಯ್ಕೆ ಪದ್ಧತಿ : ಲಿಖಿತ ಪರೀಕ್ಷೆ  + ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ : http://bmrc.co.in/careers.htm



 

:  ಪತ್ರೋದ್ಯೋಗಿ 


Sep 4, 2011

63 ರೇಂಜ್ ಫಾರೆಸ್ಟ್ ಆಫೀಸರ್(RFO) ಹುದ್ದೆಗಳು

0 ಪ್ರತಿಕ್ರಿಯೆಗಳು



63 ರೇಂಜ್ ಫಾರೆಸ್ಟ್ ಆಫೀಸರ್(RFO) ಹುದ್ದೆಗಳು


 
ಕೊನೆ ದಿನಾಂಕ : 30 ಸಪ್ಟೆಂಬರ್ 2011
ಪರೀಕ್ಷಾ ದಿನಾಂಕ : ಪ್ರಕಟಣೆ ಆಗಿಲ್ಲ 
ಒಟ್ಟು Vacancy : 32+31
ವಿದ್ಯಾರ್ಹತೆ : ಇಲಾಖೆಯ ಅಧಿಸೂಚನೆಗಾಗಿ  ಇಲ್ಲಿ ಕ್ಲಿಕ್ಕಿಸಿ 
        ನಿಗದಿಪಡಿಸಿರುವ ಪಠ್ಯ : ಇಲ್ಲಿ ಕ್ಲಿಕ್ಕಿಸಿ 
ವಯೋಮಿತಿ : 35 ವರ್ಷ ( ಸಾ.ಅ.)
ಆಯ್ಕೆ ಪದ್ಧತಿ : ಲಿಖಿತ ಪರೀಕ್ಷೆ  + ದೈಹಿಕ ದಾರ್ಢ್ಯತೆ ಪರೀಕ್ಷೆ + ಸಂದರ್ಶನ
ಅರ್ಜಿ ಸಲ್ಲಿಸುವುದು ಹೇಗೆ ? : Online ಅರ್ಜಿ ಮಾತ್ರ
ಸಂಪರ್ಕ ವಿಳಾಸ : http://karnatakaforest.gov.in/English/index.html



 

:  ಪತ್ರೋದ್ಯೋಗಿ 




Sep 3, 2011

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರೊಬೇಷನರಿ ಅಧಿಕಾರಿ ಹುದ್ದೆ ಪರೀಕ್ಷೆ - ಕಂಪ್ಯೂಟರ್ ಜ್ಞಾನ

0 ಪ್ರತಿಕ್ರಿಯೆಗಳು



ಯೂನಿಯನ್ ಬ್ಯಾಂಕ್  ಆಫ್ ಇಂಡಿಯಾ ಪ್ರೊಬೇಷನರಿ ಅಧಿಕಾರಿ ಹುದ್ದೆ  ಪರೀಕ್ಷೆ - ಕಂಪ್ಯೂಟರ್ ಜ್ಞಾನ - 16/01/ 2011

{ ಅತ್ಯಮೂಲ್ಯ ಉತ್ತರ ಪತ್ರಿಕೆ : 06 }

( ಪಿ.ಡಿ.ಓ. ಪರೀಕ್ಷೆ ಕಂಪ್ಯೂಟರ್ ಜ್ಞಾನ ಕ್ಕೆ ಅನುಕೂಲ )


  • You can keep your personal files/folders in — My Documents
  • The primary purpose of software is to turn data into — Information
  • A directory within a directory is called — Sub Directory
  • A compiler translates a program written in a high-level language into — Machine language
  • When you turn on the computer, the boot routine will perform this test — Disk drive test
  • A ……is a unique name that you give to a file of information — filename extension
  • Hardware includes — all devices involved in processing information including the central processing unit, memory and storage
  • A ……… contains specific rules and words that express the logical steps of an algorithm — programming language
  • All the deleted files go to — Recycle Bin
  • The simultaneous processing of two or more programs by multiple processors is — Multiprocessing
  • The secret code that restricts entry to some programs — Password
  • Computers use the ……… number system to store data and perform calculations — binary
  • The main function of the ALU is to — Perform arithmetic and logical operations
  • ……is the process of carrying out commands — Executing
  • Softcopy is the intangible output, so then what is hardcopy ? — The printed output
  • A(n) ……… is a program that makes the computer easier to use — utility
  • A complete electronic circuit with transistors and other electronic components on a small silicon chip is called a(n) — Integrated circuit
  • Computer systems are comprised of — Hardware, software, procedures, networks and people
  • An error in a computer program — Bug
  • What is output ? — What the processor gives to the user
  • The person who writes and tests computer programs is called a — programmer
  • A set of instructions telling the computer what to do is called — program
  • What menu is selected to print ? — File
  • What is backup ? — Protecting data by copying it from the original source to a different destination
  • The term bit is short for — Binary digit

( ... ಮುಂದುವರಿಯುವುದು )



: ಉತ್ತರಚೋರ

Sep 2, 2011

ಇಂಡಿಯನ್ ಬ್ಯಾಂಕ್ ಪ್ರೊಬೇಷನರಿ ಅಧಿಕಾರಿ ಹುದ್ದೆ ಪರೀಕ್ಷೆ - ಸಾಮಾನ್ಯ ಜ್ಞಾನ

0 ಪ್ರತಿಕ್ರಿಯೆಗಳು



ಇಂಡಿಯನ್ ಬ್ಯಾಂಕ್ ಪ್ರೊಬೇಷನರಿ ಅಧಿಕಾರಿ ಹುದ್ದೆ  ಪರೀಕ್ಷೆ - ಸಾಮಾನ್ಯ ಜ್ಞಾನ - 02/01/ 2011

{ ಅತ್ಯಮೂಲ್ಯ ಉತ್ತರ ಪತ್ರಿಕೆ : 05 }


  • ಸರ್ಕಾರದ ಬೊಕ್ಕಸಕ್ಕೆ ಸಂಬಂಧಿಸಿದಂತೆ 'Account Head' ಎನ್ನುವುದು ಸಾಮಾನ್ಯ ಪದ. ಈ ರೀತಿ ಖರ್ಚಿನ ಬಾಬ್ತು & ಆದಾಯದ ಬಾಬ್ತು ಬೇರೆ ಬೇರೆ Account Head ಗಳಿರುತ್ತವೆ. ಆ ರೀತಿಯಾಗಿ ಇರುವ ಭಾರತ ಸರ್ಕಾರದ ಖರ್ಚಿನ ಬಾಬ್ತಿನ Account Head ಗಳಲ್ಲಿ ಸಬ್ಸಿಡಿ ಗಳಿಗಾಗಿ ಇರುವ Account Head ದೇ ಅತಿ ಹೆಚ್ಚಿನ ಪಾಲು. ಅಂದ್ರೆ ನಮ್ಮ ಸರ್ಕಾರ ಸಬ್ಸಿಡಿಗಾಗಿ ಸಿಕ್ಕಾಪಟ್ಟೆ ಹಣ ವ್ಯಯ ಮಾಡುತ್ತದೆ.
  • Banking Regulation Act ಮುಖಾಂತರ RBI ಉಳಿದ ಬ್ಯಾಂಕುಗಳಿಗೆ ನಿರ್ದೇಶನ ನೀಡುತ್ತದೆ.
  • ಭಾರತದ ಮೊಟ್ಟಮೊದಲ ಸ್ವದೇಶಿ ನಿರ್ಮಿತ ವಿಮಾನ ಎಂಜಿನ್ ಗೆ 'ಕಾವೇರಿ' ಎಂಬ ಹೆಸರಿಡಲಾಗಿದೆ.
  • ಸರಿಸ್ಕಾ ಹುಲಿ ಅಭಯಾರಣ್ಯ ಇರುವುದು ರಾಜಸ್ಥಾನದಲ್ಲಿ.
  • TRAI ಇದರ ವಿಸ್ತೃತ ರೂಪ - Telecom Regulatory Authority of India
  • CDMA ಇದರ ವಿಸ್ತೃತ ರೂಪ - Code Division Multiple Access
  • Credit Rating is used to rate the borrowers while giving advances.
  • Bank of Rajasthan ಈಗ ICICI Bankನೊಂದಿಗೆ ವಿಲೀನಗೊಂಡಿದೆ.



: ಉತ್ತರಚೋರ

Sep 1, 2011

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ - ಗ್ರೇಡ್ ಬಿ ಅಧಿಕಾರಿ ಹುದ್ದೆಯ ಪರೀಕ್ಷೆ - ಫೆಬ್ರುವರಿ 2011

0 ಪ್ರತಿಕ್ರಿಯೆಗಳು



ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ - ಗ್ರೇಡ್ ಬಿ ಅಧಿಕಾರಿ ಹುದ್ದೆಯ ಪರೀಕ್ಷೆ - ಫೆಬ್ರುವರಿ 2011
{ ಅತ್ಯಮೂಲ್ಯ ಉತ್ತರ ಪತ್ರಿಕೆ : 04 }


  • ನಮ್ಮ ದೇಶದ ಗ್ರಾಮೀಣ ಜನರಿಗೆ ಕುಟುಂಬವೊಂದಕ್ಕೆ ವಾರ್ಷಿಕ ಗರಿಷ್ಠ 100 ದಿನದ ಉದ್ಯೋಗ ಭರವಸೆಯನ್ನು ನೀಡುತ್ತಿರುವ ಯೋಜನೆ - ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ.
  • 2007ರ ಸಾರ್ಕ್ ಶೃಂಗಸಭೆಯಲ್ಲಿ South Asian Free Trade Agreement (SAFTA) ಎಂಬ ಒಪ್ಪಂದ ಮಾಡಿಕೊಂಡು ಸಾರ್ಕ್ ದೇಶಗಳ ನಡೆವೆ ನಡೆಯುವ ಆಮದು-ರಫ್ತು ವ್ಯವಹಾರಕ್ಕೆ Customs ಶುಲ್ಕವನ್ನು ರದ್ದುಪಡಿಸಲಾಯಿತು.
  • ಭಾರತದ ಎಲ್ಲ ಜಿಲ್ಲೆಗಳ ಎಲ್ಲ ಗ್ರಾಮೀಣ ಬ್ಯಾಂಕುಗಳಿಗೆ ಬಡ್ಡಿಯ ದರವನ್ನು ನಿಗದಿ ಮಾಡುವ ಸಂಸ್ಥೆ - NABARD
  • ಪ್ರತಿ ವರ್ಷ ಜಾಗತಿಕ ಜನಸಂಖ್ಯೆಗೆ ಅತಿ ಹೆಚ್ಚಿನ ಪಾಲು ನೀಡುತ್ತಿರುವುದು - ಭಾರತದ ಜನಸಂಖ್ಯೆ
  • ಈಗ ಜಗತ್ತಿನ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ಭಾರತ ದೇಶ ಮುಂದೊಮ್ಮೆ ಅತಿ ಹೆಚ್ಚು ಮುದುಕರನ್ನು ಹೊಂದಲಿದೆ. ಕಾರಣ ನಮ್ಮ ಜೀವನಶೈಲಿಯಿಂದಾಗಿ Fertility ಯಲ್ಲಿ ಇಳಿಮುಖವಾಗಲಿದೆ.
  • ಭಾರತದ ಮೊದಲ ಯೋಜನಾ ಆಯೋಗದ ಅವಧಿ - 1951-1956
  • ಭಾರತದ ವಿದೇಶಾಂಗ ನೀತಿಗೆ ಪಂಚಶೀಲ ತತ್ವದ ಪ್ರಭಾವ ಜಾಸ್ತಿ ಇದೆ.
  • Development As Freedom ಕೃತಿಯ ಕರ್ತೃ - ಅಮರ್ತ್ಯ ಸೇನ್
  • ವಿಶ್ವ ಬ್ಯಾಂಕ್ ನ 'ಆಣೆಕಟ್ಟು ಪುನಶ್ಚೇತನ ಯೋಜನೆ'ಯಡಿ ತನ್ನ ರಾಜ್ಯದ ಆಣೆಕಟ್ಟುಗಳ ಸುಧಾರಣೆಗೆ ಕೈ ಹಾಕಿರುವ ರಾಜ್ಯ - ಕೇರಳ
  • ಭಾರತದ ಅಣು ವಿದ್ಯುತ್ ಸ್ಥಾವರಗಳಲ್ಲಿ ಬಳಕೆಯಾಗುತ್ತಿರುವ ಇಂಧನ - ಥೋರಿಯಂ
  • ಹಾಲಿನ ಉತ್ಪಾದನೆಯಲ್ಲಿ ಭಾರತ ಸ್ವಯಂಪೂರ್ಣತೆಯನ್ನು ಸಾಧಿಸಿದೆ.
  • 2010ರ ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಕಾರ ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ -119
  • ಲೂಯಿಸ್ ಇನಾಸಿಯೋ ಲು ಲಾ ಡ ಸಿಲ್ವಾ - ಇವರು 2010ರ ಇಂದಿರಾಗಾಂಧಿ ಶಾಂತಿ ಪ್ರಶಸ್ತಿ ಪಡೆದರು.
  • ಚಾಲ್ತಿ ಕಾನೂನಿನ ಪ್ರಕಾರ ಭಾರತದಲ್ಲಿ ದಿನದ ಕನಿಷ್ಟ ಕೂಲಿ - ರೂ.125/-
  • United Nations Conference on Trade and Development (UNCTAD) ಸಂಸ್ಥೆಯ ಪ್ರಕಾರ 2010 ರಿಂದ 2012ರ ಅವಧಿಯಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ವಿದೇಶೀ ಬಂಡವಾಳ ಹೂಡಿಕೆ ಪಡೆಯುವ ದೇಶ - ಭಾರತ
  • ಭಾರತದಲ್ಲಿ ಬ್ಯಾಂಕುಗಳಿಲ್ಲದ ಪ್ರದೇಶಗಳಲ್ಲಿ Microfinance ಸೇವೆಗಳನ್ನು ಉತ್ತಮಪಡಿಸುವ ಸಲುವಾಗಿ $407 ಬಿಲಿಯನ್ ಮೊತ್ತದ ಸಾಲವನ್ನು ಭಾರತಕ್ಕೆ ನೀಡಿರುವ ಸಂಸ್ಥೆ - ವಿಶ್ವಬ್ಯಾಂಕ್
  • 2010ರಲ್ಲಿ ಸಂಸತ್ತಿನಲ್ಲಿ ಪಾಸಾದ ಒಂದು ಮಸೂದೆ - RTE - Right to Education
  • ನವೆಂಬರ್ 2010ರಲ್ಲಿ ಭಾರತ ಸರ್ಕಾರ SABALA ‘Sabla’ or the ‘Rajiv Gandhi Scheme for Adolescent Girls’ ) ಎಂಬ ಯೋಜನೆ ಜಾರಿ ಮಾಡಿತು. ಇದರ ಪ್ರಕಾರ Integrated Child Development Services ವತಿಯಿಂದ 11ರಿಂದ 18 ವಯಸ್ಸಿನ ಒಳಗಿನ ಹೆಣ್ಣು ಹುಡುಗಿಯರಿಗೆ ಪೌಷ್ಠಿಕ ಆಹಾರ ಮತ್ತು ವಿಶೇಷ ತರಬೇತಿ ನೀಡಲಾಗುವುದು.
  • ನೇಪಾಳ ದೇಶಕ್ಕೆ ಕೊಳವೆ ಬಾವಿ ಕೊರೆಯುವ ಸಲುವಾಗಿ 26ದಶಲಕ್ಷ ಸಹಾಯಧನವನ್ನು ಭಾರತ ನೀಡಿದೆ.
  • ಜಾಗತಿಕ ಮಟ್ಟದಲ್ಲಿ RIC ಗುಂಪು ಎಂದರೆ - Russia - India - China
  • ವಿಶ್ವಬ್ಯಾಂಕಿನ ಅಂದಾಜಿನ ಪ್ರಕಾರ ಭಾರತದ 40% ಜನತೆ ಅಂತರರಾಷ್ಟ್ರೀಯ ಬಡತನ ರೇಖೆ(IPL) (ದಿನವೊಂದಕ್ಗಿಂಕೆ 1.25 ಅಮೆರಿಕನ್ತ ಡಾಲರ್ ಗಿಂತ ಕಡಿಮೆ ಸಂಪಾದನೆ ) ಕೆಳಗೆ ವಾಸಿಸುತ್ತಿದ್ದಾರೆ.




: ಉತ್ತರಚೋರ

Jan 7, 2011

ಕ್ಷಮೆ ಮತ್ತು ಕಾರಣ ಮತ್ತು ಮತ್ತೊಂದು ....

2 ಪ್ರತಿಕ್ರಿಯೆಗಳು
ಸ್ಪರ್ಧಾರ್ಥಿಯ ಓದುಗರಿಗೆ ಕ್ಷಮೆ ಕೇಳಿ ; ಕ್ಷೇಮ ಸಮಾಚಾರ ಕೇಳುತ್ತಾ ...

ಕೆಲವು ದಿನಗಳಿಂದ ನಿಮ್ಮೊಂದಿಗೆ ಜ್ಞಾನವನ್ನ ಹಂಚಿಕೊಳ್ಳದೇ ಇರಲು ಕಾರಣವನ್ನರಹುತ್ತಿದ್ದೇನೆ.

ಕಾರಣ : ಪ್ರತಿ ದಿನ ಸಂಜೆ ಮನೆ ತಲುಪಿದ ನಂತರ ನನ್ನ ಸಂಗಾತಿಯಾಗಿದ್ದ ಕಂಪ್ಯೂಟರ್ ನನ್ನ ಮೇಲೆ ಮುನಿಸಿಕೊಂಡಿದ್ದು ON ಆಗಲು ನಿರಾಕರಿಸುತ್ತಿದೆ. ಕಂಪ್ಯೂಟರ್ ON ಆದ ಕೂಡಲೇ ನಿಮಗೆ ಜ್ಞಾನ ಹಂಚುವ ಕೆಲಸ ಪ್ರಾರಂಭ ಮಾಡುವ ಹುಮ್ಮಸ್ಸಿನಲ್ಲಿದ್ದೇನೆ.

ಈಗ ಮತ್ತೊಂದು ಸಮಾಚಾರ ಹೇಳುತ್ತೇನೆ. 

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗೆ ಸ್ಪರ್ಧಾರ್ಥಿಯ ಹುಡುಗ ಆಯ್ಕೆಯಾಗಿದ್ದು, ಜನವರಿ 15ರಿಂದ ಹಳ್ಳಿವಾಸ ಆರಂಭವಾಗಲಿದೆ. Always Connected ಸ್ಥಿತಿಯಿಂದ Never Connected ಸ್ಥಿತಿಗೆ ತೆರಳುತ್ತಿದ್ದಾನೆ. ಹೀಗಾಗಿ ಸ್ವಲ್ಪ ದಿನ ಅಲ್ಲಿನ ಪರಿಸರಕ್ಕೆ ಹೊಂದಾಣಿಕೆ ಆಗುವ ತನಕ ಸ್ಪರ್ಧಾರ್ಥಿ ತಾಣದಲ್ಲಿ ಹೊಸ ಬರಹಗಳು ಬರದೇ ಇರಬಹುದು. ಆ ಸ್ವಲ್ಪ ದಿನ ಸ್ಪರ್ಧಾರ್ಥಿಗಳು ಸಹಕರಿಸಬೇಕೆಂದು ಮನವಿ ಕೂಡ ಮಾಡಿದ್ದಾನೆ.

ಪಂಚಾಯತ್ ಅಭಿವೃದ್ಧಿ ಅದಿಕಾರಿ ಹುದ್ದೆಯಲ್ಲಿ ನೂರಾ ಎಂಟು ತಲೆನೋವುಗಳಿದ್ದರೂ ಧೈರ್ಯ ಮಾಡಿ ಹೋಗ್ತಿದಾನೆ, ಸ್ಪರ್ಧಾರ್ಥಿ ಓದುಗರೆಲ್ಲರ ಶುಭೇಚ್ಛೆ ಇರಲಿ.

ಮತ್ತೆ ಶೀಘ್ರದಲ್ಲೇ ನಿಮ್ಮ ಜೊತೆ ಜ್ಞಾನ ಹಂಚಿಕೊಳ್ಳುವ ಉತ್ಸುಕತೆಯಲ್ಲಿ,

 
:   ಸ್ಪರ್ಧಾರ್ಥಿ

Jan 2, 2011

ಗಣಕ ಪದಕೋಶ - 22 : ಟ್ವಿಟರೇಚರ್(Twitterature)

2 ಪ್ರತಿಕ್ರಿಯೆಗಳು



ಟ್ವಿಟರೇಚರ್ ( twitterature ) : ಏನಿದು ಹೊಸ ಸಂಧಿವಾಕ್ಯ ಅಂತ ಹುಬ್ಬೇರಿಸಬೇಡಿ. ಇದು Twitter ಮತ್ತು Literature ಎರಡು ಶಬ್ದಗಳು ಸಂಕರಗೊಂಡಾಗ ಹುಟ್ಟಿದ ಶಬ್ದ. ಬರೀ ಶಬ್ದಗಳು ಮಾತ್ರವಲ್ಲ ಎರಡೂ ಶಬ್ದಗಳ ನಿಜೋದ್ದೇಶ ಈಡೇರುವ ಸಲುವಾಗಿ ಸೃಷ್ಟಿಯಾಗಿರುವ Tool, ತನ್ಮೂಲಕ ಶಬ್ದ.
ಟ್ವಿಟರ್ ಟೂಲ್ ನ ಧ್ಯೇಯ : 140 ಅಕ್ಷರಗಳಲ್ಲಿ  ನಿಮ್ಮ ಮನದ ಮಾತುಗಳನ್ನ ಪ್ರಸಾರ ಮಾಡುವುದು.  
ಸಾಹಿತ್ಯದ ಧ್ಯೇಯ : ಸಾಹಿತಿಯ ಮನದಲ್ಲಿ ಉದಿಸಿದ ಕಲ್ಪನಾ ವಿಲಾಸವನ್ನ ಬರವಣಿಗೆಯ ಮೂಲಕ ಓದುಗನಿಗೂ ತಲುಪುವ ಹಾಗೆ ಮಾಡುವ ಮೂಲಕ ಅವನಲ್ಲೂ ಅದೇ ವಿಲಾಸ ಲೋಕಕ್ಕೆ ಕರೆದೊಯ್ಯುವುದು.

    ಈ ಎರಡು ಧ್ಯೇಯಗಳನ್ನ ಸಂಕರಿಸಿ Twitterature ಅನ್ನ ಸೃಷ್ಟಿಸಲಾಗಿದೆ. ಒಂದು Advantage & ಒಂದು Disadvantage ಬಳಸಿಕೊಂಡು ಈ Tool ಸೃಷ್ಟಿಯಾಗಿದೆ.

    ಸಾಹಿತ್ಯ ಓದುಗರ ಸಂಖ್ಯೆ ಕ್ಷೀಣಗೊಳ್ಳುತ್ತಿರುವುದು ಈ ದಿನದ Disadvantage
    ಆಗಿದ್ದರೆ,
    ಹೆಚ್ಚೆಚ್ಚು ಜನ Twitter ನಂತಹ Social Network ತಾಣಗಳಿಗೆ ದಿನದ 24 ಗಂಟೆಯೂ ಅಂಟಿಕೊಂಡಿರುವುದು Advantage.

      ಹೀಗಾಗಿ ಸಾಹಿತ್ಯ ಲೋಕದ ಮಹಾನ್ ಕೃತಿಗಳನ್ನ Twitter ಮೂಲಕ ಜನರಿಗೆ ತಲುಪಿಸುವ ಯೋಜನೆಯೇ ಈ Twitterarure.

      " 
      Perhaps you once asked yourself, ‘What exactly is Hamlet trying to tell me? Why must he mince his words, muse in lyricism and, in short, whack about the shrub?’ No doubt such troubling questions would have been swiftly resolved were the Prince of Denmark a registered user on Twitter.com.
      This, in essence, is Twitterature.
      Here you will find over sixty of the greatest works of western literature – from Beowulf to Bronte, from Kafka to Kerouac, and from Dostoevsky to Dickens– each distilled through the voice of Twitter to its purest, pithiest essence. Including a full glossary of online acronyms and Twitterary terms to aid the amateur, Twitterature provides everything you need to master the literature of the civilised world, while relieving you of the burdensome task of reading it.
      ***
      ಹ್ಯಾಮ್ಲೆಟ್ ಓದುವಾಗ ನಿಮಗನಿಸಿರಬಹದು : " ಇಂಥ ಕಠಿಣ ಪದಗಳನ್ನ ಬಳಸಿ ಈ ಸಾಹಿತಿ ಏನೂ ಹೇಳೋಕೆ ಹೊರಟಿದಾನೆ ? ಹೇಳೋದನ್ನ ಸಾಮಾನ್ಯರಿಗೂ ತಿಳೀಯೋಹಾಗೆ ಸರಳ ಭಾಷೆಯಲ್ಲಿ ಹೇಳಿದ್ದರೆ ಇವನ ಗಂಟೇನು ಹೋಗ್ತಿತ್ತು ? " ಅಂತ. ಆವಾಗ ನಿಮಗನಿಸಿರಬಹುದು ಆ ಪಾತ್ರಧಾರಿ ಡೆನ್ಮಾರ್ಕ್ ರಾಜ Twitter.Com ನಲ್ಲಿ Account ಹೊಂದಿದ್ರೆ ಭಾಳ ಸರಳವಾಗಿ ತನ್ನ ಕಥೆ ಹೇಳ್ತಾ ಇದ್ದ ಅಂತ. ಅಲ್ಲಾ ?
      ಈ ಟ್ವಿಟರೇಚರ್ ನ ತಿರುಳು ಇರೋದೇ ಅಷ್ಟೇ : ಇಂಗ್ಲೀಷ್ ಸಾಹಿತ್ಯದ ಸುಮಾರು ಸುಪ್ರಸಿದ್ಧ ಕೃತಿಗಳನ್ನ ಟ್ವಿಟರ್ ಭಾಷೆಗೆ ಭಟ್ಟಿ ಇಳಿಸಿ, ಮೂಲ ಕೃತಿಯ ಆಶಯಕ್ಕೆ ಹಾಗೂ ಪಾವಿತ್ರ್ಯತೆಗೆ ಧಕ್ಕೆ ಬಾರದ ಹಾಗೆ ಕೃತಿಯ ಬಗ್ಗೆ ಓದುಗರಿಗೆ ತಿಳಿಸಿಕೊಡುವುದು.

      "
      ------


      ಅಂದಹಾಗೆ ಈ Twitterature ಎಂಬುದು ಪುಸ್ತಕದ ಹೆಸರು ?!!!! ಅಂದರೆ ಮೇಲಿನ ಪ್ಯಾರಾದಲ್ಲಿ ಇದೊಂದು Tool ಎಂದು ಹೇಳಿದ್ದು ಸುಮ್ನೆ Joke ಗೆ. ಇದು Twitter Tool ಅಲ್ಲ. ಬದಲಿಗೆ ಒಂದು ಪ್ತಸಕದ ಹೆಸರು !!!!!!!!!!!!! ಆದರೆ ಒಂದು ಸತ್ಯ : ಆ ಪುಸ್ತಕದಲ್ಲಿನ ಸಾಹಿತ್ಯದ Tweet ರೂಪಾಂತರಗಳು Twitter ತಾಣದಲ್ಲಿ ಹರಿದಾಡಿದರೆ ಅದೇ Twitterature Tool ಅಲ್ಲವೇ ?!

      ಪುಸ್ತಕದ ಪೂರ್ತಿ ಹೆಸರು :
      Twitterature: The World’s Greatest Books, Retold Through Twitter (Now Presented in Twenty Tweets or Less.)

      ಪೆಂಗ್ವಿನ್ ಪ್ರಕಾಶನದವರು ಪ್ರಕಟಿಸಿರುವ ಈ ಪುಸ್ತಕದಲ್ಲಿ ಜಗತ್ತಿನ ಸುಮಾರು 60 ಮಹಾನ್ ಕೃತಿಗಳನ್ನ Twitter ಭಾಷೆಯಲ್ಲಿ ಬರೆಯಲಾಗಿದೆ. Alexander Aciman and Emmett Rensin ಎಂಬ ಇಬ್ಬರು ಶಿಕಾಗೋ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಈ ಸಾಹಸ ಮಾಡಿದ್ದಾರೆ.

      ಆದರೆ,

      ಈ ಪುಸ್ತಕದ ಮೂಲಕ ನಾವಿಂದು ಹೊಸದೊಂದು ಜಗತ್ತಿಗೆ ತರೆದುಕೊಳ್ಳುತ್ತೇವೆ. ಅದೇ Micro Fiction. ಅಂದರೆ Twitter ನ MicroBlogging ಬಳಸಿ ಸಾಹಿತ್ಯ ಕೃಷಿಗೆ ತೊಡಗುವುದು. ಇದು ಈಗಾಗಲೇ ಆರಂಭವಾಗಿದೆ ಕೂಡ. ಜೇಮ್ಸ್ ಬ್ರಿಡಲ್ ಎಂಬ ಪುಸ್ತಕ ಲೋಕದ ವ್ಯಕ್ತಿ ಹೊಸ ಪುಸ್ತಕ ಬರೆದಿದ್ದಾರೆ. ಅದರ ಹೆಸರು : My Life In Tweets. ಇದೊಂದು ಉದಾಹರಣೆ ಮಾತ್ರ ಇನ್ನೂ ಅನೇಕ ಕೃತಿಗಳು ಪ್ರಕಟವಾಗಿವೆ, ವಾಗುತ್ತಲಿವೆ.

      ಇಷ್ಟನ್ನ ತಿಳಿದುಕೊಂಡಾದ ನಂತರವೂ Twitterature ಬಗ್ಗೆ ನಿಮಗೆ ಏನೂ ತಿಳಿದಂತಾಗುವುದಿಲ್ಲ. ಕಾರಣ ಸಾಹಿತ್ಯದ ಭಾಷೆಯ ಅರಿವಿಲ್ಲದೆ ಸಾಹಿತ್ಯವನ್ನ ಅರಿಯುವುದು ಹೇಗೆ ? ಹೀಗಾಗಿ ಮೊದಲಿಗೆ ತಿಳಿಯಬೇಕಿರುವುದು ಟ್ವಿಟರ್ ಭಾಷಾ ಪ್ರಪಂಚವನ್ನ. ಅದನ್ನ ತಿಳಿದಾಗ ಮಾತ್ರ ಮೇಲಿನ ಸಾಹಿತ್ಯ ಸಾಹಸದ ನಿಜ ಕಷ್ಟ-ಸುಖ-ನೋವು-ನಲಿವು ಅರ್ಥವಾದೀತು !!! ಟ್ವಿಟರ್ ಭಾಷಾ ಪ್ರಪಂಚಕ್ಕೆ ಭೇಟಿ ನೀಡಲು ನಮ್ಮ ಕಳೆದ ವಾರದ ಗಣಕ ಪದಕೋಶದಲ್ಲಿ ಮೂಡಿ ಬಂದ ವಿವರಣೆಗಾಗಿ ಇಲ್ಲಿ ಕ್ಲಿಕ್ಕಿಸಿ.


      : e-ಶ

      Jan 1, 2011

      ಈ ದಿನ ಹೊಸ ದಿನ

      0 ಪ್ರತಿಕ್ರಿಯೆಗಳು



      ಹೌದು. " ಭಾರತೀಯ ಸಂಸ್ಕೃತಿಯಲ್ಲಿ ಈ ದಿನಕ್ಕೆ ಅಂಥ ವಿಶೇಷ ಪ್ರಾಮುಖ್ಯತೆ ಇಲ್ಲ. ಕಾರಣವೂ ಇಲ್ಲದೇ ಇಲ್ಲ. ಎಲ್ಲ ಪ್ರಾಚೀನ ಸಂಸ್ಕೃತಿಗಳಂತೆ ನಮ್ಮ ಸಂಸ್ಕೃತಿಯೂ ಪ್ರಕೃತಿಯೊಂದಿಗೆ ಒಡನಾಡುತ್ತಾ ಬೆಳೆದ ಸಂಸ್ಕೃತಿ. ಪ್ರಕೃತಿಯ ಪ್ರತಿ ನಲಿವು-ನೋವು-ಸಿಟ್ಟು-ಸೆಡವು ಎಲ್ಲವನ್ನೂ ನೋಡಿ-ಅನುಭವಿಸಿ ಅದರ ಆಜ್ಞೆಗಳಿಗೆ ಪಕ್ಕಾಗುತ್ತಾ ನಮ್ಮ ಸಂಸ್ಕೃತಿಯೂ ಪಕ್ಕಾಯಿತು. "  ಹೌದು ತಾನೇ ? ಸುಮ್ನೆ ನಾನು ಹೇಳ್ತೀನಿ ಅಂತ " ಹೂಂ " ಅನ್ಬೇಡಿ. ಈಗ ನೋಡಿ ನಿನ್ನೆ ನಮ್ಮ ಸ್ನೇಹಿತರು ಮೂರಂಶದ ಮಾಹಿತಿಯೊಂದನ್ನ ಕಳುಹಿಸಿದಾರೆ. ಅದು ಮೇಲಿನ ಉದ್ಘೋಷಕ್ಕೆ ಪೂರಕವಾಗಿದೆ. ಅದನ್ನ ಓದಿ ಆದ ಮೇಲೆ ನಿಮ್ಮದೇ ಆದ ನಿರ್ಧಾರಕ್ಕೆ ಬನ್ನಿ.



      ಹಾಗೆ
      ಹೀಗೆ
      ದಿನ ಬದಲಾವಣೆ
      ರಾತ್ರಿ 12 ಗಂಟೆಗೆ ದಿನ ಹೇಗೆ ಬದಲಾಗುತ್ತೆ ಸ್ವಾಮಿ ? ಪ್ರಕೃತಿಯಲ್ಲಿ ಏನಾದರೂ ಬದಲಾವಣೆಯಾಗುತ್ತಾ ? ಇಲ್ಲ ತಾನೇ ? 11.59PM ಕ್ಕೂ ಕತ್ತಲೆ. 12.01AM ಕ್ಕೂ ಕತ್ತಲೆ !!!
      ದಿನದ ಬದಲಾವಣೆ ಆಗುವುದು ಕತ್ತಲು ಕಳೆದು ಬೆಳಕು ಮೂಡಿದಾಗ. ಸೂರ್ಯ 6 ಗಂಟೆಯ ಹೊತ್ತಿಗೆ ಮೂಡಿದರೆ ರಾತ್ರಿ 12 ಗಂಟೆಗೆ ಹೇಗೆ ದಿನ ಹೊಸತಾಯಿತು ?!
      ವರ್ಷ ಬದಲಾವಣೆ
      ಡಿಸೆಂಬರ್ 31 ಮತ್ತು ಜನವರಿ 1 : ಈ ಎರಡು ದಿನಗಳ ನಡುವೆ ಪ್ರಕೃತಿಗೆ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಬರೀ ಈ ಎರಡು ದಿನ ಬೇಡ. ಸುತ್ತಲಿನ ಈ ಕಡೆ ಒಂದು ವಾರ ಆ ಕಡೆ ಒಂದು ವಾರ ಗಮನಿಸಿದರೂ ಯಾವ ವ್ಯತ್ಯಾಸವೂ ಇಲ್ಲ. ಮತ್ತೇಕೆ  ಡಿಸೆಂಬರ್ 31ರ ರಾತ್ರಿ ಕಳೆದರೆ ನಮಗೆ ಹೊಸ ವರ್ಷ ಧುತ್ತೆಂದು ಎದುರಾಗಬೇಕು ???
      ಆದರೆ ನಮ್ಮ ಯುಗಾದಿಯ ದಿನದ ಸುತ್ತಲಿನ ಪ್ರಕೃತಿಯ ಬದಲಾವಣೆಗಳನ್ನ ಗಮನಿಸಿ. ಎಲ್ಲೆಡೆ ಹೊಸ ಚಿಗುರು. ಜೊತೆಗೆ ಆಕಾಶಕಾಯಗಳ ಚಲನೆಯ ದಿಕ್ಕೂ ಬದಲಾಗುವ ಸಂಕ್ರಮಣ ಕಾಲವದು. ಹೊಸ ವರುಷವೆಂದರೆ ಹೊಸ ಕ್ಯಾಲೆಂಡರ್ ಎನ್ನುವ ಬದಲು ನಮ್ಮನ್ನ ಪೊರೆಯುತ್ತಿರುವ ಪ್ರಕೃತಿಯ ನಿತ್ಯವ್ಯಾಪಾರಗಳ ಹೊಸಲೆಕ್ಕ ಎಂದು ಬಗೆದರೆ ನನ್ನ ವಾದ ನಿಮಗೆ ಮನದಟ್ಟಾದಿತು.. ಆ ಸಂಕ್ರಮಣ ಕಾಲವೇ ನಮಗೆ ಹೊಸ ವರುಷ ತಾನೇ ?!!
      ಕ್ಯಾಲೆಂಡರ್
      ನೀವೀಗ ಹೇಳಬಹುದು ನಾವು ಬಳಸುತ್ತಿರುವ ಕ್ಯಾಲೆಂಡರ್ ನ ದಿನಗಳು ಇಂದಿಗೆ 365 ದಿನ ಮುಗಿಸಿ ಮತ್ತೆ 1ನೇ ದಿನಕ್ಕೆ ಕಾಲಿಡುತ್ತಿವೆ ಅಂತ. ಇದು ಒಪ್ಪಿಕೊಳ್ಳತಕ್ಕ ವಾದವೇ ಆದರೂ, ಸದರಿ ಇಂಗ್ಲೀಷ್ ಕ್ಯಾಲೆಂಡರ್ ನಲ್ಲಿ ಕೇವಲ ದಿನ, ವಾರ, ತಿಂಗಳಿನ ಹೆಸರುಗಳು ಮಾತ್ರ ಕಾಣಸಿಗುತ್ತವೆ. ಆ ದಿನದ ಸೂರ್ಯ & ಚಂದ್ರರ ಚಲನೆಯ ಯಾವ ವಿವರಣೆಗಳೂ ಅಲ್ಲಿ ದೊರೆಯುವುದಿಲ್ಲ. ದಿನ ಅಂತ ಕರೆಯಬೇಕಾದರೆ ಸೂರ್ಯ ಮೇಲೇಳಲೇಬೇಕು ; ಚಂದ್ರನ ಬೆಳಕು ಮರೆಯಾಗಲೇಬೇಕು ತಾನೇ ?
      ಭಾರತೀಯ ಕ್ಯಾಲೆಂಡರ್ ನಲ್ಲಿ ನಮೂದಾಗಿರುವ ತಿಥಿ ನಕ್ಷತ್ರಗಳು ಸೂರ್ಯ ಚಂದ್ರರ ಚಲನೆ-ಸ್ಥಾನ ವನ್ನಾಧರಿಸಿವೆ. ಅವರಿಂದ ತಾನೇ ನಮಗೆ ಹಗಲು ರಾತ್ರಿ !!
      ಹೀಗಾಗಿ ವೈಜ್ಞಾನಿಕವಾಗಿ ಮತ್ತು ಪ್ರಾಕೃತಿಕವಾಗಿ 
      ಮನುಷ್ಯನ ದೈನಂದಿನ ಬೆಳವಣಿಗೆಯನ್ನೂ ಸೇರಿಸಿಕೊಂಡು 
      ಇಡೀ ಮನುಕುಲಕ್ಕೆ ಯುಗಾದಿಯ ದಿನವೇ 
      ಹಳತು ಕಳೆದು ಹೊಸತು ಬರುವ ಸಂಕ್ರಮಣ ಕಾಲ. 
      ಹೊಸ ಸಂಭ್ರಮದ ಕಾಲ !!



      ಈ ಮಾಹಿತಿ ಕಳಿಸಿದ ಸ್ನೇಹಿತ ಮಾಧವ ಹೆಬ್ಬಾರ್ ಅವರಿಗೆ ಧನ್ಯವಾದಗಳು.

      2010ರ ಕ್ಯಾಲೆಂಡರ್ ಹಳತಾಯಿತು. ಆದರೆ ಆ ಕ್ಯಾಲೆಂಡರ್ ವರ್ಷದಲ್ಲಿ ನಡೆದ ಘಟನೆಗಳು ಮರೆತರೂ ಮರೆಯಲಾರದಂಥವು.

      • ದೇಶದ ಬೊಕ್ಕಸಕ್ಕಿಂತ ತಮ್ಮ ಮನೆಯ ತಿಜೋರಿಯೇ ಸಂಪತ್ತಿನ ಶೇಖರಣೆಗೆ ಸೂಕ್ತವೆಂದೆನಿಸಿದ ಮುಖ್ಯಮಂತ್ರಿ-ಚಿಕ್ಕಮಂತ್ರಿಗಳು...
      • ಬಡವರ ಕಣ್ಣೀರೊರೆಸುವ ಧ್ಯೇಯದೊಂದಿಗೆ ಅಖಾಡಕ್ಕಿಳಿದು - ಸಮಾಜಘಾತುಕ ಶಕ್ತಿಯಾಗಿ ಪರಿಣಮಿಸಿರುವ ಮಾವೋವಾದಿಗಳು & ಅವರನ್ನ ಬೆಂಬಲಿಸಿದ ಬುದ್ಧಿ ಬಲಿತ ಜುಬ್ಬಾಧಾರಿಗಳು..
      • ತರಂಗಗಳನ್ನ ಬಾಚಿಕೊಳ್ಳಲು ಮಾಧ್ಯಮ ಮಿತ್ರರ ಸಹಾಯ ಹಸ್ತ ಪಡೆದ ನಿಷ್ಕಳಂಕ ಉದ್ಯಮಿಗಳು...
      • ಮಾಧ್ಯಮದಲ್ಲಿ ದಿನವೂ ಜನರಿಗೆ ಜಾತ್ಯಾತೀತತೆ ಶಂಖ ಊದಿ, ಒಳಗೊಳಗೇ ರಾಜಕೀಯ ಪಕ್ಷಗಳಿಗೆ ನಿಷ್ಠರಾಗಿ ಪದ್ಮಪತ್ರಗಳನ್ನ ಇನಾಮಾಗಿ ಪಡೆದ ಮಹಿಳೆಯರು & ಮಹನೀಯರು...
      • ರಾಜ್ಯದ ಪತ್ರಿಕೋದ್ಯಮಕ್ಕೇ ಕಪ್ಪು ಪುಟ ಎಂಬಂತೆ ಕಿರಿ ಪತ್ರಿಕೋದ್ಯಮಿಯೊಬ್ಬರ ಬಗ್ಗೆ ಸ್ವಘೋಷಿತ ಸಾಧುಸಂಪನ್ನ - ಸಮಾಜಮುಖಿ & ಅಚ್ಚರಿ ವ್ಯಕ್ತಿತ್ವದ ಹಿರಿ ಪತ್ರಿಕೋದ್ಯಮಯೊಬ್ಬರು ಕೀಳು ಭಾಷೆ ಎಂಬ ಶಬ್ದದ Superlative ರೂಪ ತಾಳಿ ಬರೆದದ್ದು....
      • ಜನರನ್ನ ಅನಕ್ಷರತೆಯ ಕೂಪದಲ್ಲಿ ತಳ್ಳಿ, ಅವರಿಂದು ಓಟು ಕದಿಯುವ ರಾಜಕಾರಣಿಗಳ ಮಧ್ಯೆಯೂ ; ಇಂದಿಗೂ ಅದೇ ಅನಕ್ಷರತೆ - ಹಿಂದುಳಿದಿರುವಿಕೆ ಇದ್ದರೂ ಜನಪರ & ಅಭಿವೃದ್ಧಿಪರ ಕಾರ್ಯಗಳಿಂದ ಬಿಹಾರ್ ರಾಜ್ಯದಲ್ಲಿ ನಿತೀಶ್ ಕುಮಾರ್ ದಿಗ್ವಿಜಯ ಸಾಧಿಸಿದ್ದು...
      • ನರೇಂದ್ರ ಮೋದಿ, ದೇಶದ ಆಡಳಿತ ಯಂತ್ರದಲ್ಲಿ ನಭೂತೋ ನಭವಿಷ್ಯತಿ ಎಂಬಂತೆ ಬದಲಾವಣೆ ತಂದದ್ದು...
      • ಕ್ರಿಕೆಟ್ ದಿಗ್ಗಜ ಸಚಿನ್ ದಿನಗಳೆದಂತೆ ಹಳೆ ಚಿನ್ನಕ್ಕಿರುವ ಬೆಲೆಯಷ್ಟೇ ಮಾಗುತ್ತಿರುವುದು ...
      • ಆಪದ್ಭಾಂಧವ ಲಕ್ಷ್ಮಣ ನಿಜಕ್ಕೂ Very Very Special ಅನಿಸಿಕೊಂಡದ್ದು...
      • ಭಾರತದಲ್ಲಿ ಕ್ರಿಕೆಟ್ ಮಾತ್ರ ಕ್ರೀಡೆ ಎಂಬ ಭಾವನೆ ಅಳಿಸಲು ನಿಜ ಪ್ರಯತ್ನ ಮಾಡಿದ ಸೈನಾ ನೆಹವಾಲ್..
      • ಎ.ಆರ್.ರೆಹಮಾನ್ ಯುಗದ ನಂತರ EkDum Fressshhh Music ನೀಡಲು ಸಜ್ಜಾಗುತ್ತಿರುವ ಅಮಿತ್ ತ್ರಿವೇದಿ...

      ಹೀಗೆ ಅವರವರ ಭಾವಕ್ಕೆ ಅವರವರ ಭಕುತಿಗೆ ಎಂಬಂತೆ ಸ್ವಾರಸ್ಯಕರ ಸಂಗತಿಗಳನ್ನ ಹೆಕ್ಕಬಹುದು.





      ಸಂದು ಹೋದ ಘಟನೆ ಎಷ್ಟೇ ಕೆಟ್ಟದಾಗಿರಲಿ- ಎಷ್ಟೇ ಒಳ್ಳೆಯದಾಗಿರಲಿ ಅದರಿಂದ ಪಾಠ ಕಲಿಯದ ಹೊರತು ಆ ಘಟನೆಗೆ ನ್ಯಾಯ ದೊರೆತಂತಾಗುವುದಿಲ್ಲ... ಎಂಬ ಆಶಯದೊಂದಿಗೆ

      &

      ಹೊಸ ದಿನಕ್ಕೆ ಹಾಕಿಕೊಂಡ Resolution ಗಳು ದಿನಗಳದಂತೆ ಹೊಳಪು ಕಳೆದುಕೊಳ್ಳುವುದು ಸಾಮಾನ್ಯ. ಅದನ್ನ ಹೋಗಲಾಡಿಸಲು ಇಂದಿನಿಂದ ಪ್ರತಿದಿನ : " ಈ ದಿನವೇ ಹೊಸ ದಿನ  " ಎನ್ನೋಣ.  






       
       : ಸ್ಪರ್ಧಾರ್ಥಿ

      Dec 31, 2010

      ಹೊಸ ವರುಷ ಬರಲಿ, ಹೊಸ ಹರುಷ ತರಲಿ ಪ್ರತಿ ನಿಮಿಷ

      1 ಪ್ರತಿಕ್ರಿಯೆಗಳು

      " ಹೊಸ ವರುಷ ಬರಲಿ, ಹೊಸ ಹರುಷ ತರಲಿ ಪ್ರತಿ ನಿಮಿಷ "
      - ಎಸ್.ಎಸ್.ಪಾಟೀಲ,
      ಹವ್ಯಾಸಿ ಬರಹಗಾರರು

      " ಹೊಸ ವರುಷವೆಂದರೆ ಅದೇನೋ ಸಂಭ್ರಮ. ಅದೇನೋ ಸಡಗರ. ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿ, ಹೊಸ ಜೀವನದ ಪಯಣಕ್ಕೆ ಅದೇನೋ ಕಾತುರ, ಅದೇನೋ ಆತುರ. "

      ಹೊಸ ವರುಷ ಬಂದಿದೆ. ಹೊಸ ಹರುಷ ತಂದಿದೆ. ಹೊಸ ವರುಷವನ್ನ ಸ್ವಾಗತಿಸಲು ಹೊಸ್ತಿಲಲ್ಲಿ ನಿಂತಿರುವ ಈ ಶುಭ ಘಳಿಗೆಯಲ್ಲಿ ಕಳೆದು ಹೋದಂತಹ ವರುಷವನ್ನೊಮ್ಮೆ ಮೆಲುಕು ಹಾಕಿದರೆ ನಮ್ಮ ಜೀವನದಲ್ಲಿನ ಸಿಹಿ-ಕಹಿ ನೆನಪುಗಳ ತೆರೆದ ಪುಟಗಳು ಮನಸ್ಸಿನಲ್ಲಿ ಹಾದು ಹೋಗುತ್ತವೆ. " ಅಬ್ಬಾ ! ಈ ವರುಷ ಇಷ್ಟು ಬೇಗನೆ ಮುಗಿದು ಹೋಯಿತಲ್ಲಾ ?! " ಎಂದು ನಿಟ್ಟುಸಿರು ಬಿಡುವಾಗ ಸಂದ ವರುಷದಲ್ಲಿ ನಾನೇನು ಮಾಡಿದೆ? ಏನು ಗಳಿಸಿದೆ? ಏನು ಅನುಭವಿಸಿದೆ? ... ಹೀಗೆ ಅನೇಕ ಪ್ರಶ್ನೆಗಳೊಂದಿಗೆ ನಮ್ಮ ಏಳುಬೀಳುಗಳ ನೆನಪುಗಳು ನಮ್ಮ ಮನಃಪಟಲದಲ್ಲಿ ಚಿತ್ತಾರವನ್ನ ಬಿಡಿಸುತ್ತವೆ.

      ಹೊಸ ವರುಷ ಎಂದರೆ ಹೀಗೇನೇ. ಬರುವಾಗ ಏನೋ ಖುಷಿ, ಏನೋ ಸಂಭ್ರಮ ಹೊತ್ತು ತರುತ್ತದೆ. ಬರುವ ವರ್ಷಕ್ಕೆ ಮೊದಲೇ ಅದಕ್ಕಾಗಿ ಪೂರ್ವ ತಯಾರಿ... ಹೊಸ ವರ್ಷಕ್ಕಾಗಿ ಹೊಸ ಹೊಸ ಆಸೆಗಳು... ಜೀವ ತುಂಬಲಿಟ್ಟಂತಹ ಕನಸುಗಳು... ಇನ್ನೇನೋ... ಇನ್ನೇನೋ... ಇದನೆಲ್ಲವನ್ನ ಕಾರ್ಯರೂಪಕ್ಕೆ ತರಬೇಕೆಂದು ಛಲತೊಟ್ಟು ಹೊಸ ಚೈತನ್ಯದಿಂದ ಕಾಯುವ ಜನಮಾನಸ.

      ಪ್ರಸ್ತುತ ವರ್ಷದಲ್ಲಿ ಏನೇನೋ ಘಟನೆಗಳು ನಡೆದಿರಬಹುದು. ನಡೆದಿರುವಂತಹುಗಳು ಕಹಿ ಘಟನೆಗಳಾಗಿದ್ದರೆ ಅಂತಹ ಜಾಗದಲ್ಲಿ ಸಿಹಿ ತುಂಬುವ ಕಾತರ ; ಸಂತಸಭರಿತ ಸಮಯಗಳೇ ತುಂಬಿದ್ದರೆ ಅದೇ ಹಾಯಿದೋಣಿಯನ್ನ ಮುನ್ನಡೆಸಬೇಕೆಂಬ ಆತುರ. ಹೊಸತನ್ನ ತುಂಬುವ ಹಳೆಯದನ್ನ ಮರೆಯುವ ಒಟ್ಟಾರೆ ಚೈತನ್ಯ ತುಂಬಿದ ಹೊಸ ಆಶಾಕಿರಣಗಳಿಂದ ಸ್ವಾಗತಿಸುವ ಹಂಬಲ ಎಲ್ಲರದ್ದೂ.

      ಜನವರಿ 1 ಭಾರತೀಯ ಸಂಸ್ಕೃತಿ ಪ್ರಕಾರ ಹೊಸ ವರ್ಷ ಅಲ್ಲದಿದ್ದರೂ, ಇಡೀ ಜಗತ್ತೇ ಹೊಸ ವರುಷ ಎಂದು ಬರಮಾಡಿಕೊಳ್ಳುವುದು ಈ ದಿನವನ್ನೇ. ಡಿಸೆಂಬರ್ 31ರ ರಾತ್ರಿ "ಟಾ..ಟಾ" "ಬೈ..ಬೈ" ಹೇಳುವ ತವಕ. ಮಧ್ಯರಾತ್ರಿ "ವೆಲ್ ಕಮ್" ಮಾಡುವ ಧಾವಂತ. ನಮ್ಮ ಹೊಸ ಹೊಸ ಉಪಾಯಗಳನ್ನ ಕಾರ್ಯರೂಪಕ್ಕೆ ತರುವ ಗಡಿಬಿಡಿ. ಒಟ್ಟಾಗಿ ಇದು ಬದಲಾವಣೆಯ ಹಂತ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಕುತೂಹಲದಿಂದ ತಾಳ್ಮೆಯಿಂದ ಕಾಯುವ ದಿನ.

      ಚಿಕ್ಕ ಮಕ್ಕಳನ್ನ ಕೇಳಿ :
      " ಹೊಸ ವರುಷಕ್ಕೆ ಚೆನ್ನಾಗಿ ಓದಬೇಕು "
      " ಪಿಕ್ ನಿಕ್ ಹೋಗಬೇಕು "
      " ಹೊಸ ಡ್ರೆಸ್ ಹಾಕಬೇಕು "
      ಇನ್ನೇನೋ... ಇನ್ನೇನೋ... ಕನಸುಗಳು. ಅದೇ ಮಧ್ಯವಯಸ್ಕರನ್ನ ಕೇಳಿದರೆ ಅವರಿಗೆ ಅವರದ್ದೇ ಕಲ್ಪನೆಯ ಕನಸುಗಳ ಬುತ್ತಿ...

      ಪ್ರತಿ ಬಾರಿ ಹೊಸ ವರ್ಷ ಬಂದಾಗಲೂ ಈ ವರ್ಷವಾದರೂ ತಾವು ಜೀವನದಲ್ಲಿ ಪ್ರಗತಿ ಹೊಂದಬೇಕು ಎನ್ನುವ ಆಕಾಂಕ್ಷೆ ಎಲ್ಲರಲ್ಲೂ ಇರುವುದು ಸಹಜ. ಆದರೆ ಜೀವನದಲ್ಲಿ ಏಳಿಗೆ ಸಾಧಿಸಬೇಕಾದರೆ ಏನಾದರೂ ಗುರಿ ಇಟ್ಟಕೊಂಡಿರಬೇಕಲ್ಲವೇ ? ಆ ಗುರಿಯತ್ತ ಏಕಮುಖವಾಗಿ, ಏಕಾಗ್ರಚಿತ್ತರಾಗಿ ತನುಮನವನ್ನ ಅರ್ಪಿಸಿ ಹೆಜ್ಜೆ ಇಟ್ಟಾಗಲೇ ಈಡೇರಬಹುದು.



      ಹೊಸ ವರುಷಕ್ಕೆ ಕೆಲವರು ಜೀವನದಲ್ಲಿ ಪ್ರಗತಿ ಪಥದಲ್ಲಿ ಸಾಗಿದ್ದರೆ, ಇನ್ನು ಕೆಲವರು ಜೀವನ ರಾತ್ರಿಯಲ್ಲಿ ಸೋಲನ್ನು ಅನುಭವಿಸಲು ಕಾರಣವೇನು ? ಎಂದು ತಿಳಿಯ ಹೊರಡುತ್ತಾರೆ. ಹಾಗೆ ಹೊರಟಾಗ ಯಾವುದೇ ಗೊತ್ತು ಗುರಿ ಇಲ್ಲದೇ, ಲಂಗುಲಗಾಮಿಲ್ಲದೇ ಜೀವನ ಸಾಗಿಸುತ್ತಿರುವ ಕಾರಣ ಎದುರಾಗುತ್ತದೆ. " ಛೇ ! ಹಾಗೆ ಮಾಡಿದ್ದರೆ ಚೆನ್ನಾಗಿತ್ತು. ಹೀಗೆ ಮಾಡಿದರೆ ಚೆನ್ನಾಗಿತ್ತು " ಎಂದು ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದು, ಭೂತಕಾಲದ ಸಿಹಿಕಹಿ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ಚಿಂತೆಯ ಚಿತೆಯಲ್ಲಿ ಬೇಯುತ್ತಾ, ಭವಿಷ್ಯವನ್ನೇ ಹಾಳು ಮಾಡಿಕೊಳ್ಳುವ ಜನರು ನಮ್ಮನಡುವೆ ಇರುತ್ತಾರೆ. ನಿನ್ನೆ ಮೊನ್ನೆಗಳ ಕಹಿಗಳನ್ನು ಮರೆತು ನಾಳೆಗಳ ಸಿಹಿಯನ್ನ ಕಲ್ಪಿಸಿಕೊಳ್ಳುವ ಮನಃ ಸ್ಥಿತಿಯನ್ನು ಬೆಳೆಸಿಕೊಂಡರೆ ಭವಿಷ್ಯ ಹಸನಾಗುವುದರಲ್ಲಿ ಸಂಶಯವಿಲ್ಲ. ನಕಾರಾತ್ಮಕ ಚಿಂತನೆಗಳನ್ನ ಬಿತ್ತುವ ನಿರಾಶಾವಾದಿ ಜನರ ಮಾತುಗಳಿಗೆ ಕಿವಿಗೊಡದೇ ಸಕಾರಾತ್ಮಕ ಚಿಂತನೆ ಬೆಳೆಸಿಕೊಂಡು, ಹೊಸ ವರ್ಷದಲ್ಲಿ ಏನಾದರೂ ಸಾಧನೆ ಮಾಡುತ್ತೇನೆಂಬ ಆತ್ಮವಿಶ್ವಾಸದೊಂದಿಗೆ ಆಶಾವಾದಿಯಾಗಿ ಮುಂದೆ ಹೆಜ್ಜೆ ಇಟ್ಟರೆ ಬೆಳಕಿನ ಆಶಾಕಿರಣ ಮೂಡಬಹುದು.

      ಕನಸುಗಳನ್ನ ಕಾಣಬೇಕು. ಕನಸು ಕಂಡರೆ ಮಾತ್ರ ಅದನ್ನ ಸಾಕಾರಗೊಳಿಸಬಹುದು. ಆಸೆಗಳನ್ನು ಇಟ್ಟುಕೊಳ್ಳಲೇಬೇಕು. ಆದರೆ ಅತಿ ಆಸೆ ಇರಬಾರದು. ಯಾರು ಕನಸುಗಳನ್ನು ಹೊಂದಿರುತ್ತಾರೋ, ಆಸೆಗಳನ್ನ ಇಟ್ಟುಕೊಂಡಿರುತ್ತಾರೋ, ದೃಢ ನಿರ್ಧಾರಗಳನ್ನ ಬೆಳೆಸಿಕೊಂಡಿರುತ್ತಾರೋ ಅವರು ಮಾತ್ರ ಜೀವನದಲ್ಲಿ ಮುನ್ನಡೆಯಲು ಸಾಧ್ಯ. ಹೊತ್ತಿರುವ ಕನಸುಗಳನ್ನೆಲ್ಲ ಸಂಪೂರ್ಣಗೊಳಿಸಬೇಕೆಂದಿಲ್ಲ. ಎಲ್ಲವನ್ನ ಸಂಪೂರ್ಣಗೊಳಿಸಬೇಕೆಂಬ ಭಾರವನ್ನ ಹೊರಬಾರದು ಕೂಡ. ಆದರೆ ಯಶಸ್ವಿಗೊಳಿಸಬೇಕು ಎಂಬ ಇಚ್ಛೆ ಬೇಕು. ಒಂದು ವೇಳೆ ಸೋಲು ಬಂದಲ್ಲಿ ಅದನ್ನು ಎದುರಿಸುವ ಧೈರ್ಯ ಕೂಡ ಬೇಕು. ಯಾಕೆಂದರೆ ಸೋಲೇ ಗೆಲುವಿನ ಸೋಪಾನ. ಆ ಸೋಲನ್ನ ಮುಂದಿನ ವರ್ಷಕ್ಕಾಗಿ ಕಾದಿಡಬಹುದು.

      ಇನ್ನು ಕೆಲವರು ಹೊಸ ವರ್ಷಕ್ಕೆ ಗುರಿಗಳನ್ನ ಇಟ್ಟುಕೊಂಡು ಕಾರ್ಯೋನ್ಮುಖರಾಗಿ ಆರಂಭಶೂರರರಾಗಿ ಕೆಲಕಾಲದ ಬಳಿಕ ಗುರಿಗಳನ್ನೇ ಮರೆತು, ಮತ್ತೊಂದು ವರ್ಷ ಕಾಲಿರಿಸಿದಾಗ ತಮ್ಮ ಸಾಧನೆಯ ಕಡೆ ಹಿನ್ನೋಟ ಹರಿಸಿ ಸಾಧನೆ ಶೂನ್ಯವೆಂದು ಕಂಡು ಬಂದಾಗ ನಿರಾಶಾವಾದಿಯಾಗಿಬಿಡುತ್ತಾರೆ. ಹಾಗೆ ನಿರಾಶಾವಾದಿಯಾಗುವ ಬದಲು, ಗುರಿಯತ್ತ ತನ್ಮಯತೆಯಿಂದ-ದೃಢಚಿತ್ತದಿಂದ ಹೆಜ್ಜೆ ಇರಿಸಿದರೆ ಅವುಗಳ ಅನುಷ್ಠಾನಕ್ಕೆ ಅವಿರತ ಶ್ರಮವಹಿಸಿದರೆ ಮುಳ್ಳಿನ ಹಾದಿ ಕಳೆದು ಸಾಧನೆಯ ಶೃಂಗ ಮುಟ್ಟುವುದರಲ್ಲಿ ಸಂಶಯವಿಲ್ಲ. ನಿನ್ನೆಗಳನ್ನು ಮರೆತು - ನಾಳೆಗಳನ್ನ ನೆನೆನೆನೆದು - ಕಲ್ಪನೆಯ ಕನಸುಗಳನ್ನು ಹೊಸೆದು - ಅವುಗಳ ಸಾಕಾರದತ್ತ ಸಾಗಿದರೆ, ಜೀವನ ಆಗುವುದು ಸಾರ್ಥಕ.


      ಮರೆಯಲಾಗದ ವರ್ಷಕ್ಕೆ ವಂದನೆಗಳೊಂದಿಗೆ,

      ಹೊಸ ಋತುಮಾನವು ನಿಮ್ಮಲ್ಲಿ ಚೈತನ್ಯ ತುಂಬಲಿ - ಹೃದಯಿಸಲಿ ಎಂಬ ಆಶಯದೊಂದಿಗೆ,

      ಸಂಪದ್ಭರಿತವಾದ ನಿಮ್ಮೆಲ್ಲಾ ಕನಸುಗಳನ್ನ ನನಸಾಗಿಸುವ ಮರೆಯಲಾಗದ ವರ್ಷ ಬರಲೆಂದು ಹಾರೈಕೆಯೊಂದಿಗೆ,

      'ಸ್ಪರ್ಧಾರ್ಥಿ' ಗಳೆಲ್ಲರಿಗೂ ಹೊಸ ವರುಷದ ಶುಭಾಷಯಗಳು.


      - ಎಸ್.ಎಸ್.ಪಾಟೀಲ, 
      ಹವ್ಯಾಸಿ ಬರಹಗಾರರು


      Dec 24, 2010

      ಜಪಾನ್ - ಸುದ್ದಿಯಲ್ಲಿರುವ ಸ್ಥಳ ನಕ್ಷೆ - 19

      0 ಪ್ರತಿಕ್ರಿಯೆಗಳು
      ಸುದ್ದಿ : 92.4 ಟ್ರಿಲಿಯನ್ ಯೆನ್ ಮೊತ್ತದ ಬಜೆಟ್ ಮಂಡಿಸಿದ ಜಪಾನ್ ಸರ್ಕಾರ


      ಸುದ್ದಿಯಲ್ಲಿರುವ ಸ್ಥಳ ನಕ್ಷೆ :

      ಜಾಗತಿಕ ನಕ್ಷೆಯಲ್ಲಿ ಜಪಾನ್

      ಜಪಾನ್ ಸ್ವಾಭಾವಿಕ

      ನೆರೆ-ಹೊರೆ




      • ಸೂರ್ಯೋದಯದ ನಾಡು ಎಂದೇ ಪ್ರಸಿದ್ಧವಾಗಿರುವ ಜಪಾನ್ ಗೆ, (ಆ ಹೆಸರಿನ ಅರ್ಥ ಕೂಡ ಅದೇ !!) ಅಧಿಕೃತ ಭಾಷೆಯಲ್ಲಿ ಸ್ಟೇಟ್ ಆಫ್ ಜಪಾನ್ ಎಂದು ಹೆಸರಿದೆ.
      • ಜಪಾನ್ ದೇಶ ದ್ವೀಪಗಳ ಸಮೂಹ. ಇಂತಹ ಭೂಪ್ರದೇಶಗಳನ್ನ Archipelago ಅಂತ ಕರೆಯುತ್ತಾರೆ ಅನ್ನೋದನ್ನ ಸ್ಪರ್ಧಾರ್ಥಿಗಳು ನೆನಪಿಡಬೇಕು. ( Archipelago = Island Group = is a chain or cluster of islands that are formed tectonically ) ಜಪಾನ್ ತನ್ನ ಸುಪರ್ದಿಯಲ್ಲಿ 3000+ ದ್ವೀಪಗಳನ್ನ ಹೊಂದಿದೆ.
      • ಜಪಾನ್ ದೇಶ ಪರ್ವತಮಯವಾಗಿದ್ದು ಬಹಳ ಪರ್ವತಗಳು ತಮ್ಮ ಉದರದಲ್ಲಿ ಜ್ವಾಲಾಮುಖಿಗಳನ್ನ ಹೊಂದಿವೆ.
      • ಚೀನಾ ದೇಶವನ್ನ ಆರ್ಥಿಕತೆಯಲ್ಲಿ ಹಿಂದಿಕ್ಕಲು ಪ್ರಯತ್ನಿಸುತ್ತಿರುವ ಜಪಾನ್, ಜನಸಂಖ್ಯೆಯಲ್ಲೂ ತೀರ ಹಿಂದೇನಿಲ್ಲ. ಜಗತ್ತಿನ ಜನಸಂಖ್ಯೆಯಲ್ಲಿ 10ನೇ ಸ್ಥಾನ ಹೊಂದಿದೆ. ದೇಶದ ವಿಸ್ತೀರ್ಣ ಚಿಕ್ಕದಿದ್ದರೇನಾಯಿತು !! ನಾವು ಎಲ್ಲದರಲ್ಲೂ ಮುಂದಿರಬೇಕು ಎನ್ನುವ ಹಂಬಲ !!! ನಮ್ಮ ದೇಶದಲ್ಲಿ ಜಾಗ ಇಲ್ಲದಿದ್ದರೇನಾಯಿತು, ಬೇರೆ ದೇಶದಲ್ಲಿ ಹೋಗಿ ನೆಲೆಸಿದರಾಯಿತು ಎನ್ನುವ Idea ಇರಬೇಕು !!!!
      • ದೇಶದಲ್ಲಿ Emperor ಇವತ್ತಿಗೂ ಅತ್ಯುಚ್ಛ ಸ್ಥಾನವನ್ನಲಂಕಿರಿಸಿರುವ ವ್ಯಕ್ತಿ. Diet ಎಂಬ ಹೆಸರಿನ ಜನಪ್ರತಿನಿಧಿಗಳ ಸಭೆ ಕೂಡ ಇದೆ. ನಮ್ಮ ದೇಶದ್ದು ಸಂಸತ್ತು (Parliament) ಅನ್ನೋದು ನಿಮಗೆ ಗೊತ್ತಿದೆ.
      • 1945ರಲ್ಲಿ ಅಣು ಬಾಂಬ್ ಎಂಬ ವಿಕೃತ ಪ್ರತೀಕಾರಕ್ಕೆ ತುತ್ತಾದ ಜಪಾನ್ ಇಂದು ಜಗತ್ತಿನಲ್ಲಿ ಅಮೆರಿಕಾ & ಚೀನಾ ನಂತರ ಮೂರನೇ ಆರ್ಥಿಕ ಶಕ್ತಿಯಾಗಿ ಬದಲಾಗಿದೆ. ಅಂದು ಜಪಾನ್ ದೇಶದಲ್ಲಿ ಇದ್ದ ಅಭದ್ರತೆ ಒಂದು ಕಡೆಯಾದರೆ, ಅದೇ ಹೊತ್ತಿನಲ್ಲಿ ಸ್ವಾತಂತ್ರ್ಯ ಪಡೆದ ಭಾರತ ದೇಶ ಬ್ರಿಟಿಷರ ದೋಚುವಿಕೆಯಿಂದ ಬಡ ದೇಶವಾಗಿದ್ದುದು ನಿಜ. ಆದರೆ ಇವರ ಅಧೀನದ ಚಿಕ್ಕ ಭೂಪ್ರದೇಶದಲ್ಲಿ ಇವರು ತೋರಿರುವ ಅದಮ್ಯ ಸಾಹಸ ಖಂಡಿತ ಇಡೀ ಜಗತ್ತಿಗೆ ಮಾದರಿ. ಹೀಗಿರುವಾಗ ಭಾರತ & ಜಪಾನ್ ಎರಡೂ ದೇಶಗಳು ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾನ ಗಿಟ್ಟಿಸಲು ತವಕಿಸುತ್ತಿವೆ. ಆ ಸ್ಥಾನಕ್ಕೆ ಪೈಪೋಟಿ ನಡೆಸಲು ಅವರಿಬ್ಬರೂ ತಂತಮ್ಮ ಅರ್ಹತಾ ಪಟ್ಟಿಯನ್ನೂ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಈ ಕೆಳಕಂಡ ಪಟ್ಟಿ ನೋಡಿದ ಮೇಲೆ ಎದೆ ಮೇಲೆ ಕೈ ಇಟ್ಟುಕೊಂಡು ಅರ್ಹತೆಯ ಬಗ್ಗೆ ಮಾತಾಡಲು ಯಾರಿಗೆ 'ಅರ್ಹತೆ' ಇದೆಯೆಂದು ನೀವು ಸ್ಪರ್ಧಾರ್ಥಿಗಳೂ ತೀರ್ಮಾನಿಸಿ :
       

      ಭಾರತ
      ಜಪಾನ್
      ವಿಸ್ತೀರ್ಣ
      7ನೇ ಸ್ಥಾನ
      61ನೇ ಸ್ಥಾನ
      ಜನಸಂಖ್ಯೆ
      2ನೇ ಸ್ಥಾನ
      10ನೇ ಸ್ಥಾನ
      ಸ್ವಂತ ಸಂವಿಧಾನ ಅಂಗೀಕರಿಸಿದ್ದು
      1950
      1947
      GDP (PPP)
      $1.367 ಟ್ರಿಲಿಯನ್
      $4.267 ಟ್ರಿಲಿಯನ್
      HDI
      119ನೇ ಸ್ಥಾನ
      11ನೇ ಸ್ಥಾನ
      ಕರೆನ್ಸಿ
      1 ಜಪಾನ್ ಯೆನ್
      = 0.5508 ಭಾರತ ರೂಪಾಯಿ
      ------
      81.3 ಜಪಾನ್ ಯೆನ್ = 1 US $
      1 ರೂಪಾಯಿ
      = 1.8063 ಜಪಾನ್ ಯೆನ್
      ------
      45.02 ರೂಪಾಯಿ = 1 US $
      ಅಂದ್ರೆ ಎಂಟಾಣೆ ಕೊಟ್ರೆ ಒಂದು ಜಪಾನಿ ಯೆನ್ ಪಡೆಯಬಹುದು. ಅದೇ ರೀತಿ 45 ರೂಪಾಯಿಗೆ ಒಂದು ಯು,ಎಸ್.ಡಾಲರ್ ಪಡೆದರೆ 81 ಜಪಾನಿ ಯೆನ್ ಗೆ ಒಂದು ಯು,ಎಸ್.ಡಾಲರ್ ಪಡೆಯಬಹುದು.
      ಸಾಕ್ಷರತೆ (clik here)
      168ನೇ ಸ್ಥಾನ
      32ನೇ ಸ್ಥಾನ
      ರಫ್ತು ಶಕ್ತಿ
      18ನೇ ಸ್ಥಾನ
      4ನೇ ಸ್ಥಾನ
      ಆಮದು ಶಕ್ತಿ
      15ನೇ ಸ್ಥಾನ
      5ನೇ ಸ್ಥಾನ
      Purchasing Power Parity(PPP)
      4ನೇ ಸ್ಥಾನ
      3ನೇ ಸ್ಥಾನ
      Life Expectency (ಆರೋಗ್ಯ ಸೌಲಭ್ಯಗಳನ್ನಾಧರಿಸಿದೆ)
      139ನೇ ಸ್ಥಾನ
      (64.7ವರ್ಷಗಳು)
      1ನೇ ಸ್ಥಾನ
      (82.6 ವರ್ಷಗಳು)
      Hunger Index
      18ಸ್ಥಾನ
      ಪಟ್ಟಿಯಲ್ಲಿ ಬರುವುದೇ ಇಲ್ಲ !!
      Poverty Index
      HDI ನಲ್ಲಿ 100+ ಸ್ಥಾನ ಹೊಂದಿರುವ ಭಾರತ ಇನ್ನು ಬಹಳ ಪ್ರಯತ್ನ ಪಡಬೇಕು.
      HDI ನಲ್ಲಿ 11ನೇ ಸ್ಥಾನ ಪಡೆದಿರುವ ಜಪಾನ್ ಜಗತ್ತಿನಲ್ಲಿ ಬಡತನದ ಪ್ರಮಾಣ ಅತಿ ಕಡಿಮೆ ಇರುವ ದೇಶಗಳ ಪಟ್ಟಿಯಲ್ಲಿ 12ನೇ ಸ್ಥಾನ ಹೊಂದಿದೆ.
      ಇಷ್ಟೆಲ್ಲಾ ಬೆಚ್ಚಿ ಬೀಳಿಸುವ ಅಂಕಿಸಂಖ್ಯೆಗಳನ್ನ ಇಟ್ಟುಕೊಂಡಿರುವ ಭಾರತ ತನ್ನ ದೇಶದಲ್ಲಿ ತಾಂಡವವಾಡುತ್ತಿರುವ ಅನಕ್ಷರತೆ-ಭೃಷ್ಟಾಚಾರ-ಹದಗೆಟ್ಟಿರುವ ಆರೋಗ್ಯ ಸೇವೆ ... ಇವನ್ನೆಲ್ಲಾ ಮರೆತು VETO POWER ಗಾಗಿ ಬಡಿದಾಡುವುದು ಎಷ್ಟು ಸಮಂಜಸ !! 

      ಪಾಕಿಸ್ತಾನದಂಥ ಪಾಪಿಯ ಜೊತೆಗೂ ನ್ಯಾಯವನ್ನೇ ಮಾತಾಡುವ ಭಾರತ, ಈ ಸ್ಥಾನ ಪಡೆಯಲು ನ್ಯಾಯಯುತವಾಗಿಯೂ ಅರ್ಹವೇ ?!! 

      ನಾವು ಭಾರತೀಯರು ಕೂಡ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವುದು ನಿಜವೇ ಇದ್ದರೂ Sustained Development ಮತ್ತು ಬರೀ Development ಗೆ ವ್ಯತ್ಯಾಸವಿದೆ. 

      ನಮ್ಮ ದೇಶದಲ್ಲಿ ನೆಲೆಸಿರುವ ಅನಕ್ಷರತೆ ಹೀಗೇ ಮುಂದುವರೆದು ನಾವಲ್ಲಿ ವೀಟೋ ಚಲಾಯಿಸಿದರೆ ನಗುವುದಿಲ್ಲವೇ ಜಗತ್ತಿನ ಜನ ?? 

      ಒಬ್ಬ ವಿದ್ಯಾರ್ಥಿ ತನ್ನ ಜಾತಿ ಇದೇ ಎಂದು ದೃಢೀಕರಿಸಿಕೊಳ್ಳುವ ಪ್ರಮಾಣಪತ್ರ ಪಡೆಯಲು ಸಾವಿರ ರೂಪಾಯಿ ಚೆಲ್ಲಲೇ ಬೇಕಿರುವುದನ್ನ ನೋಡಿ ನಗೊಲ್ವಾ ಅವರು?? 

      ಅಷ್ಟಕ್ಕೂ ಮಿಗಿಲಾಗಿ ತನ್ನ ತಲೆದೂಗಲೇಬೇಕಾದ ಸಾಮರ್ಥ್ಯಗಳನ್ನ ಮಾತ್ರ ಮುಂದಿಟ್ಟುಕೊಂಡು VETO ಪಡೆಯಲು ಹಂಬಲಿಸುತ್ತಿರುವ ಭಾರತದಲ್ಲಿ ಒಬ್ಬ ವಿದ್ಯಾರ್ಥಿಯ ವೈಯಕ್ತಿಕ ಸಾಮರ್ಥ್ಯ ಮಾತ್ರ ಮಾನದಂಡವಲ್ಲ ; ಅವನ ಜಾತಿ ಕೂಡ ಅವನಿಗೆ ಮಾನದಂಡವಾಗುತ್ತದೆ ಎಂದರೆ ಹಾಸ್ಯಾಸ್ಪದವಲ್ಲವೇ ??



      • ಜಪಾನ್ ದೇಶದ 80 ಪ್ರತಿಶತ ಭೂಭಾಗ ಯಾವುದೇ ಕೃಷಿ, ಕೈಗಾರಿಕಾ ಚಟುವಟಿಕೆಗಳಿಗೆ ಯೋಗ್ಯವಲ್ಲ !!
      • ಇದು ಸಾಲದು ಎಂಬಂತೆ ಮೆದು ನೆಲ & ಭೂಕಂಪದ ಅಭದ್ರತೆ ಸದಾ ಅಲ್ಲಿನ ಜನರಿಗೆ ದುಸ್ವಪ್ನವಾಗಿದೆ.
      • ಇಷ್ಟಿದ್ದರೂ ಅತಿ ಹೆಚ್ಚು ಜನಸಾಂದ್ರತೆ ಇರುವ ದೇಶಗಳ ಪಟ್ಟಿಯಲ್ಲಿ ಜಪಾನ್ ಗೆ 36ನೇ ಸ್ಥಾನವಿದೆ. (ಭಾರತಕ್ಕೆ 32ನೇ ಸ್ಥಾನವಿದೆ.)

      : ರವಿ

      ಸ್ಪರ್ಧಾರ್ಥಿ ತಂಡದ ಇತರೆ ಉಪಯುಕ್ತ Blog ಗಳು

      ಸಂದರ್ಶಿ ಅಭಿಪ್ರಾಯ ಪೆಟ್ಟಿಗೆ